ಇರಾನ್-ಇಸ್ರೇಲ್ ಯುದ್ಧ ಯಾವಾಗ ಕೊನೆಗೊಳ್ಳುತ್ತೆ? ಟ್ರಂಪ್ ಹೇಳಿದ್ದೇನು?
ವಾಷಿಂಗ್ಟನ್, ಮಾರ್ಚ್ 09: ಇರಾನ್(Iran) ಜತೆಗಿನ ಯುದ್ಧವನ್ನು ಯಾವಾಗ ಕೊನೆಗೊಳಿಸಬೇಕೆಂಬ ನಿರ್ಧಾರವನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಜತೆ ಸೇರಿ ತೆಗೆದುಕೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ದಿ ಟೈಮ್ಸ್ ಆಫ್ ಇಸ್ರೇಲ್ಗೆ ನೀಡಿದ್ದ ಸಂದರ್ಶನದಲ್ಲಿ ಟ್ರಂಪ್ ಮಾತನಾಡಿ, ತಾನು ಮತ್ತು ನೆತನ್ಯಾಹು ಇಲ್ಲದೇ ಇದ್ದಿದ್ದರೆ ಇಸ್ಲಾಮಿಕ್ ಗಣರಾಜ್ಯ ಇಸ್ರೇಲ್ ಅನ್ನು ನಾಶಮಾಡುತ್ತಿತ್ತು ಎಂದು ಹೇಳಿದ್ದಾರೆ. ಇರಾನ್, ಇಸ್ರೇಲ್ ಮತ್ತು ಅದರ ಸುತ್ತಲಿನ ಎಲ್ಲವನ್ನೂ ನಾಶಮಾಡಲು ಹೊರಟಿತ್ತು. ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ, ಇಸ್ರೇಲ್…