Headlines

ಬ್ಯಾರಲ್​ಗೆ 120 ಡಾಲರ್ ಮುಟ್ಟಿದ ಕಚ್ಚಾ ತೈಲ ಬೆಲೆ; ಇತಿಹಾಸದಲ್ಲಿ ತೈಲ ಅತಿ ದುಬಾರಿ ಎನಿಸಿದ್ದು ಯಾವಾಗ ಗೊತ್ತಾ?

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ರೌದ್ರಾವತಾರ ಕಡಿಮೆಗೊಳ್ಳುತ್ತಿಲ್ಲ. ಯುದ್ಧ ದಾಳಿಗೆ ತೈಲ ಸಂಗ್ರಹಗಾರಗಳೇ (Oil tanks) ಪ್ರಮುಖ ಟಾರ್ಗೆಟ್ ಆಗಿವೆ. ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ತೈಲ ಸಾಗಣೆಗೆ ತಡೆಯಾಗಿರುವುದರಿಂದ ಕಚ್ಚಾ ತೈಲ ಬೆಲೆ ಸಿಕ್ಕಾಪಟ್ಟೆ ಏರುತ್ತಿದೆ. ಕೆಲ ಕಚ್ಚಾ ತೈಲಗಳು (Crude Oils) ಬ್ಯಾರಲ್​ಗೆ 120 ಡಾಲರ್​ವರೆಗೂ ಬೆಲೆ ಏರಿಕೆ ಕಂಡಿವೆ. ಮರ್ಬನ್ ಕ್ರೂಡ್ 120 ಡಾಲರ್​ಗೆ ಏರಿದೆ. ಡಬ್ಲ್ಯುಟಿಐ ಕ್ರೂಡ್ 102 ಡಾಲರ್ ದಾಟಿದೆ. ಬ್ರೆಂಟ್ ಕ್ರೂಡ್ 107 ಡಾಲರ್ ಮುಟ್ಟಿದೆ. ಆದರೆ, ಡಬ್ಲ್ಯುಟಿಐ…

Read More

ಸದ್ದಡಗಿಸಲು ಬಂದು ಸದ್ದಿಲ್ಲದೇ ನಿಂತ ಮಿಚೆಲ್ ಸ್ಯಾಂಟ್ನರ್..!

T20 World Cup 2026: ಟಿ20 ವಿಶ್ವಕಪ್ ಫೈನಲ್ ಪಂದ್ಯದ ಆರಂಭಕ್ಕೂ ಮುನ್ನ ಅಹದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತೀಯ ಪ್ರೇಕ್ಷಕರ ಸದ್ದಗಿಸುವುದೇ ನಮ್ಮ ಗುರಿ ಎಂದಿದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಪಂದ್ಯದ ಬಳಿಕ ಸ್ತಬ್ಧರಾಗಿ ನಿಂತಿರುವುದು ಕಂಡು ಬಂದಿದೆ. ಈ ಪಂದ್ಯಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದ ಮಿಚೆಲ್ ಸ್ಯಾಂಟ್ನರ್, 2023ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಪ್ಯಾಟ್ ಕಮ್ಮಿನ್ಸ್ ಹೇಳಿದಂತೆಯೇ, ಲಕ್ಷಾಂತರ ಭಾರತೀಯ ಅಭಿಮಾನಿಗಳ ಮುಂದೆ ಆಡುವಾಗ “ಸ್ಟೇಡಿಯಂನಲ್ಲಿರುವ ಅಭಿಮಾನಿಗಳನ್ನು ಮೌನಗೊಳಿಸುವುದೇ ನಮ್ಮ ಗುರಿ” ಎಂದಿದ್ದರು….

Read More

ಸಾಕು ನಾಯಿಗೆ ಅದ್ದೂರಿಯಾಗಿ ಸೀಮಂತ: ಆರತಿ ಎತ್ತಿ, ಉಡಿ ತುಂಬಿದ ಮಹಿಳೆಯರು

ಧಾರವಾಡ, ಮಾರ್ಚ್​​ 09: ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಮುದ್ದಿನ ಸಾಕು ನಾಯಿಗೆ ಕುಟುಂಬಸ್ಥರು ಅದ್ದೂರಿಯಾಗಿ ಸೀಮಂತ ಕಾರ್ಯಕ್ರಮ ಮಾಡಿದ್ದಾರೆ. ಮಹದೇವಿ ನಾಯ್ಕರ್ ಅವರ ಮನೆಯವರು ಗರ್ಭಿಣಿಯಾಗಿದ್ದ ಡಾಬರಮನ್ ತಳಿಯ ಶ್ವಾನಕ್ಕೆ ಮುತ್ತೈದೆಯರನ್ನು ಕರೆಯಿಸಿ ಉಡಿ ತುಂಬಿಸಿದ್ದಾರೆ. ಅನೇಕ ಧಾರ್ಮಿಕ ವಿಧಿ ವಿಧಾನದಂತೆ ಸೀಮಂತ ಕಾರ್ಯಕ್ರಮ ನಡೆದಿದ್ದು, ಈ ವೇಳೆ ಗ್ರಾಮದ ಜನರು ಉಪಸ್ಥಿತರಿದ್ದರು. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ. Source link

Read More

ಪ್ರಾದೇಶಿಕ ಪಕ್ಷ ಕಟ್ಟುವ ಬಗ್ಗೆ ಬಸನಗೌಡ ಪಾಟೀಲ್ ಯತ್ನಾಳ್ ಮಹತ್ವದ ಘೋಷಣೆ

ನವದೆಹಲಿ, ಮಾರ್ಚ್ 9: ಬಿಜೆಪಿಯಿಂದ ಉಚ್ಚಾಟನೆಯಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಾದೇಶಿಕ ಪಕ್ಷವನ್ನು ಸ್ಥಾಪಿಸುವ ಬಗ್ಗೆ ಸಮವಾರ ಮಹತ್ವದ ಘೋಷಣೆ ಮಾಡಿದ್ದಾರೆ. ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಬಿಜೆಪಿಯ ಹೈಕಮಾಂಡ್ ನಾಯಕರನ್ನು ಭೇಟಿಯಾಗಲು ಬಂದಿಲ್ಲ. ಪುತ್ರನ ಮದುವೆಯ ಆಹ್ವಾನ ನೀಡಲು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ. ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯ್ಷ ಬಿವೈ ವಿಜಯೇಂದ್ರ, ಸಂಸದ ಬಿವೈ ರಾಘವೇಂದ್ರ ಅವರಂತಹ ಕಡು ಭ್ರಷ್ಟ ಕುಟುಂಬ ಬಿಜೆಪಿಯಲ್ಲಿ ಇರುವವರೆಗೂ ಪಕ್ಷ ಸೇರಲು…

Read More

ಸ್ಪೀಕರ್ ಅವಿಶ್ವಾಸ ನಿರ್ಣಯದ ನಡುವೆಯೇ ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಕುರಿತು ರಾಜ್ಯಸಭೆಗೆ ವಿವರ ಕೊಟ್ಟ ಜೈಶಂಕರ್

ನವದೆಹಲಿ, ಮಾರ್ಚ್​ 09: ಸ್ಪೀಕರ್(Speaker) ಮೇಲಿನ ಅವಿಶ್ವಾಸ ನಿರ್ಣಯದ ನಡುವೆಯೇ ಪಶ್ಚಿಮ ಏಷ್ಯಾದ ಬಿಕ್ಕಟ್ಟಿನ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ರಾಜ್ಯಸಭೆಗೆ ವಿವರಣೆ ನೀಡಿದ್ದಾರೆ. ಪ್ರಧಾನಿ ಮೋದಿ ಈ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಎಲ್ಲಾ ಕಡೆಯವರು ಉದ್ವಿಗ್ನತೆಯನ್ನು ಶಮನಗೊಳಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯೇ ಮುಂದಿನ ಮಾರ್ಗ ಎಂಬ ಸರ್ಕಾರದ ನಿಲುವನ್ನು ಪುನರುಚ್ಚರಿಸಿದರು. ಕೇಂದ್ರದ ವಿದೇಶಾಂಗ ನೀತಿ ನಿಲುವು ಮತ್ತು ಪ್ರಕ್ಷುಬ್ಧತೆಗೆ ಭಾರತದ ಪ್ರತಿಕ್ರಿಯೆಯ ಕುರಿತು ಕೇಂದ್ರವನ್ನು ಪ್ರಶ್ನಿಸಲು ಪೂರ್ಣ ಪ್ರಮಾಣದ ಚರ್ಚೆಗೆ ವಿರೋಧ ಪಕ್ಷದ ಸಂಸದರು…

Read More

ಗೋಕರ್ಣ ಸಮೀಪದ 44 ರೆಸಾರ್ಟ್​​ಗಳ ತೆರವಿಗೆ ಆದೇಶ! ಕಾರಣ ಇಲ್ಲಿದೆ

ಕಾರವಾರ, ಮಾರ್ಚ್ 9: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಸಮೀಪದ ದುಬ್ಬನಸಶಿ ಗ್ರಾಮದಲ್ಲಿ ಕರಾವಳಿ ನಿಯಂತ್ರಣ ವಲಯ (Coastal Regulation Zone/CRZ) ನಿಯಮ ಉಲ್ಲಂಘಿಸಿ ಅನಧಿಕೃತವಾಗಿ ನಿರ್ಮಿಸಲಾದ ರೆಸಾರ್ಟ್‌ಗಳ ವಿರುದ್ಧ ತಾಲೂಕು ಆಡಳಿತ ಕಠಿಣ ಕ್ರಮ ಕೈಗೊಂಡಿದೆ. ಕುಮಟಾ ತಹಶೀಲ್ದಾರ್ ಶ್ರೀಕೃಷ್ಣ ಅವರು ಒಟ್ಟು 44 ಅನಧಿಕೃತ ರೆಸಾರ್ಟ್‌ಗಳನ್ನು ತೆರವುಗೊಳಿಸಲು ಆದೇಶ ನೀಡಿದ್ದಾರೆ. ಈ ರೆಸಾರ್ಟ್‌ಗಳು ದುಬ್ಬನಸಶಿ, ನಡುಮಸ್ಕೇರಿ ಸೇರಿದಂತೆ ಅರಬ್ಬಿ ಸಮುದ್ರ ತೀರದ ಭಾಗಗಳಲ್ಲಿ ನಿರ್ಮಾಣಗೊಂಡಿವೆ. ಆದರೆ 44 ರೆಸಾರ್ಟ್‌ಗಳ…

Read More

ಗಂಡ-ಹೆಂಡತಿ ಜಗಳ ಸಾವಿನಲ್ಲಿ ಅಂತ್ಯ; ಅಳಿಯನೇ ಮಗಳನ್ನು ಸಾಯಿಸಿದ್ದಾನೆಂದ ಕುಟುಂಬಸ್ಥರು!

ಚಿಕ್ಕಬಳ್ಳಾಪುರ, ಮಾರ್ಚ್​ 09: ಜಿಲ್ಲೆಯ ಆರ್. ಚೊಕ್ಕನಹಳ್ಳಿ ಗ್ರಾಮದಲ್ಲಿ ವರಲಕ್ಷ್ಮಿ (25) ಎಂಬ ಯುವತಿಯ ಅನುಮಾನಾಸ್ಪದ ಸಾವು ಪ್ರಕರಣ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಪ್ರೇಮಿಗಳ ನಡುವೆ ಮಧ್ಯಸ್ಥಿಕೆ ವಹಿಸಬೇಡಿ ಎಂದು ಗಂಡ ಗಂಗರಾಜು ಬುದ್ದಿವಾದ ಹೇಳಿದ ಹಿನ್ನೆಲೆ ಗಂಡ-ಹೆಂಡತಿಯ ನಡುವೆ ಗಲಾಟೆ ನಡೆದಿದ್ದಾಗಿ ತಿಳಿದುಬಂದಿದೆ. ವರಲಕ್ಷ್ಮಿ ಸ್ನೇಹಿತೆ ಶ್ರಾವಣಿಯ ಪ್ರಿಯಕರ ವರಲಕ್ಷ್ಮಿಗೆ ಕರೆ ಮಾಡಿದ್ದು, ಅದನ್ನು ಗಂಗರಾಜು ಸ್ವೀಕರಿಸಿದ್ದರಿಂದ ಜಗಳ ಉಂಟಾಗಿತ್ತು ಎನ್ನಲಾಗಿದೆ. ನಂತರ ವರಲಕ್ಷ್ಮಿ ಗಂಡನ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪತ್ನಿಯನ್ನು ಹೊಡೆದು ಬಳಿಕ ನೇಣು…

Read More

Gold Rates: ಚಿನ್ನದ ಬೆಲೆ 10 ಗ್ರಾಮ್​ಗೆ 1,800 ರೂ ಇಳಿಕೆ; ಇಲ್ಲಿದೆ ದರಪಟ್ಟಿ

ಬೆಂಗಳೂರು, ಮಾರ್ಚ್ 9: ಚಿನ್ನದ ಬೆಲೆ ಭರ್ಜರಿ ಇಳಿಕೆ ಕಂಡಿದೆ. ವಾರಾಂತ್ಯದಲ್ಲಿ ಜಿಗಿದಿದ್ದ ಇದರ ಬೆಲೆ ಇವತ್ತು ಸೋಮವಾರ ಗ್ರಾಮ್​ಗೆ 180 ರೂಗಳಷ್ಟು ಕಡಿಮೆ ಆಗಿದೆ. ಆಭರಣ ಚಿನ್ನದ ಬೆಲೆ (Gold Rates) ಮತ್ತೊಮ್ಮೆ 15,000 ರೂ ಗಡಿಯೊಳಗೆ ಬಂದಿದೆ. ಕಳೆದ ವಾರ ಸತತ ನಾಲ್ಕೈದು ದಿನ ಬಂಗಾರದ ಬೆಲೆ ಇಳಿಕೆಯಾಗಿತ್ತು. ಅದೇ ಟ್ರೆಂಡ್ ಈ ವಾರವೂ ಮುಂದುವರಿಯುತ್ತದಾ ನೋಡಬೇಕು. ಇನ್ನು, ಬೆಳ್ಳಿ ಬೆಲೆಯೂ ಇವತ್ತು ಕಡಿಮೆಗೊಂಡಿದೆ. ಗ್ರಾಮ್​ಗೆ 5 ರೂನಷ್ಟು ತಗ್ಗಿದೆ. ಭಾರತದಲ್ಲಿ ಸದ್ಯ 10…

Read More

Shoaib Akhtar: ಭಾರತ ಕ್ರಿಕೆಟ್​ ಅನ್ನೇ ಕೊಂದು ಹಾಕಿದ್ದಾರೆ..!

T20 World Cup 2026: ಟಿ20 ವಿಶ್ವಕಪ್​ ಕ್ರಿಕೆಟ್ ಟೂರ್ನಿಗೆ ತೆರೆ ಬಿದ್ದಿದೆ. ಈ ಬಾರಿ ಕೂಡ ಭಾರತ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಕಳೆದ ಬಾರಿ ಸೌತ್ ಆಫ್ರಿಕಾ ತಂಡವನ್ನು ಬಗ್ಗು ಬಡಿದಿದ್ದ ಟೀಮ್ ಇಂಡಿಯಾ ಈ ಸಲ ನ್ಯೂಝಿಲೆಂಡ್ ತಂಡಕ್ಕೆ ಸೋಲುಣಿಸಿದೆ. ಅದು ಸಹ ಬರೋಬ್ಬರಿ 96 ರನ್​ಗಳ ಅಂತರದಿಂದ ಎಂಬುದು ವಿಶೇಷ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ತಂಡದ ನಾಯಕ ಮಿಚೆಲ್ ಸ್ಯಾಂಟ್ನರ್ ಬೌಲಿಂಗ್…

Read More

ದೆಹಲಿ-ಗೋವಾ ಆಕಾಶ ಏರ್​ ವಿಮಾನದ ವಾಶ್​ರೂಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದ ಪ್ರಯಾಣಿಕ

ನವದೆಹಲಿ, ಮಾರ್ಚ್​ 09: ದೆಹಲಿ-ಗೋವಾ ಆಕಾಶ ಏರ್​ ವಿಮಾನ(Plane)ದಲ್ಲಿ ಪ್ರಯಾಣಿಕರೊಬ್ಬರು ವಾಶ್​ರೂಂನಲ್ಲಿ ಧೂಮಪಾನ ಮಾಡಿ ಸಿಕ್ಕಿಬಿದ್ದಿದ್ದಾರೆ. ನಂತರ ಅವರನ್ನು  ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ದೆಹಲಿಯಿಂದ ಗೋವಾಕ್ಕೆ ಪ್ರಯಾಣಿಸುತ್ತಿದ್ದ QP1625 ವಿಮಾನದಲ್ಲಿ ಶನಿವಾರ ಈ ಘಟನೆ ನಡೆದಿದೆ. ದೆಹಲಿ ನಿವಾಸಿ ಆಶಿಶ್ ಎಂಬ ವ್ಯಕ್ತಿ ಪ್ರಯಾಣದ ಸಮಯದಲ್ಲಿ ವಿಮಾನದ ವಾಶ್ ರೂಂ ಒಳಗೆ ಧೂಮಪಾನ ಮಾಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ. ವಿಮಾನಯಾನ ಸಂಸ್ಥೆಯು ತನ್ನ ದೂರಿನಲ್ಲಿ, ಪ್ರಯಾಣಿಕ ಲೈಟರ್ ಅನ್ನು…

Read More