ಕೇಂದ್ರದ ಈ ಪ್ರಮುಖ ಹಣಕಾಸು ಯೋಜನೆಗಳಲ್ಲಿ ಮಹಿಳೆಯರೇ ಹೆಚ್ಚು ಫಲಾನುಭವಿಗಳು
ಇವತ್ತು ಮಾರ್ಚ್ 18, ಅಂತರರಾಷ್ಟ್ರೀಯ ಮಹಿಳೆಯರ ದಿನ (International Women’s Day). ಕೇಂದ್ರ ಸರ್ಕಾರ ಮಹಿಳೆಯರ ಅಭ್ಯುದಯ ದೃಷ್ಟಿಯಲ್ಲಿಟ್ಟುಕೊಂಡು ಹಲವು ಯೋಜನೆಗಳನ್ನು ಹಾಕಿದೆ. ಮಹಿಳೆಯರಿಗೆಂದೇ ಸೀಮಿತವಾದ ಸುಕನ್ಯಾ ಸಮೃದ್ದಿ ಯೋಜನೆಯಂತಹ ಸ್ಕೀಮ್ಗಳಿವೆ. ಹಾಗೆಯೇ, ಸರ್ವರಿಗೂ ಅನ್ವಯವಾಗುವಂತೆ ಸರ್ಕಾರ ರೂಪಿಸಿದ ಕೆಲ ಉತ್ತಮ ಹಣಕಾಸು ಯೋಜನೆಗಳೂ ಕೂಡ ಮಹಿಳೆಯರಿಗೆ ವರದಾನವಾಗಿವೆ. ಅಸಂಘಟಿತ ವಲಯದಲ್ಲಿರುವ ಮಹಿಳೆಯರಿಗೆ ಬಹಳ ಉಪಯುಕ್ತವಾಗಿರುವ ಮೂರು ಪ್ರಮುಖ ಹಣಕಾಸು ಯೋಜನೆಗಳ ವಿವರ ಇಲ್ಲಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆ ಹತ್ತು ವರ್ಷದ ಹಿಂದೆ ಆರಂಭವಾದ ಪಿಎಂ ಮುದ್ರಾ…