Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಕಟಕ ರಾಶಿಗೆ ಈ ವರ್ಷ ಹೇಗಿರಲಿದೆ?
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು 2026ರ ಪರಾಭವ ನಾಮ ಸಂವತ್ಸರದ ಕಟಕ ರಾಶಿ ಫಲಾಫಲಗಳನ್ನು ವಿವರಿಸಿದ್ದಾರೆ. ಈ ವರ್ಷ ಕಟಕ ರಾಶಿಯವರಿಗೆ ಮಿಶ್ರ ಫಲಗಳು ಕಂಡುಬರಲಿವೆ. ಗುರು ಒಂದರಿಂದ ಎರಡನೇ ಮನೆಗೆ ಸಾಗಿದರೆ, ಶನಿಗ್ರಹ ವರ್ಷವಿಡೀ ಒಂಬತ್ತನೇ ಮನೆಯಲ್ಲಿ ಸಂಚರಿಸಲಿದೆ. ರಾಹು ಎಂಟರಿಂದ ಏಳಕ್ಕೆ, ಕೇತು ಒಂದರಿಂದ ಎರಡನೇ ಮನೆಗೆ ಚಲಿಸಲಿದೆ. ವರ್ಷದ ಕಡೆಯ ಭಾಗದಲ್ಲಿ ಕೇತು ಗ್ರಹ ಜನ್ಮಕ್ಕೆ ಬರುವುದು ಹೋರಾಟದ ಬದುಕನ್ನು ಸೂಚಿಸುತ್ತದೆ. ಆದಾಯ ಎಂಟು ಪಾಲು ಮತ್ತು ವ್ಯಯ ಎರಡು ಪಾಲು…