Category Archives: Blog

Your blog category

Video: ಜಾರ್ಜಿಯಾದ ಜನನಿಬಿಡ ರಸ್ತೆಯಲ್ಲಿ ವಿಮಾನ ತುರ್ತು ಭೂಸ್ಪರ್ಶ, ಬಹು ವಾಹನಗಳಿಗೆ ಡಿಕ್ಕಿ – Kannada News | Small Plane Touches Down on Georgia Street, Crashes Into Parked Vehicles

ಜಾರ್ಜಿಯಾ, ಫೆಬ್ರವರಿ 10: ಜಾರ್ಜಿಯಾದ ಗೈನೆಸ್​​​ವಿಲ್ಲೆಯಲ್ಲಿ ಜನದಟ್ಟಣೆಯ ರಸ್ತೆಯಲ್ಲಿ ಸಣ್ಣ ವಿಮಾನವೊಂದನ್ನು ತುರ್ತು ಭೂಸ್ಪರ್ಶ ಮಾಡಲಾಗಿದ್ದು, ಇದರ ಪರಿಣಾಮ ವಿಮಾನವು ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿರುವ ವಿಡಿಯೋ ವೈರಲ್ ಆಗಿದೆ. ಒಂದೇ ಎಂಜಿನ್ ಹೊಂದಿರುವ ವಿಮಾನವು ಜನನಿಬಿಡ ರಸ್ತೆಯಲ್ಲಿ ಅಪಘಾತಕ್ಕೀಡಾಗಿ ಮೂರು ವಾಹನಗಳಿಗೆ ಡಿಕ್ಕಿ ಹೊಡೆದಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವಿಮಾನವು ಟೇಕ್ ಆಫ್ ಆದ ಸ್ವಲ್ಪ ಸಮಯದ ಬಳಿಕ ಎಂಜಿನ್​ನಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ನಂತರ ತುರ್ತು ಭೂಸ್ಪರ್ಶ ಮಾಡಲಾಯಿತು. ವಿಮಾನವು ನಿಲ್ದಾಣಕ್ಕೆ ಹಿಂದಿರುಗಲು ಸಾಕಷ್ಟು ಶಕ್ತಿಯನ್ನು ಹೊಂದಿರಲಿಲ್ಲ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ. ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಫೆಡರಲ್ ವಿಮಾನಯಾನ ಆಡಳಿತ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿಯು ಘಟನೆಯ ಬ್ಗಗೆ ತನಿಖೆ ನಡೆಸುತ್ತಿವೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಾಲಿವುಡ್​ನ ಸ್ಟಾರ್ ನಿರ್ದೇಶಕನ ಜೊತೆ ಅಲ್ಲು ಅರ್ಜುನ್ ಸಿನಿಮಾ? – Kannada News | Allu Arjun’s Bollywood Debut with Sanjay Leela Bhansali? Pan India Star’s Next Big Move

‘ಪುಷ್ಪ 2’ ಚಿತ್ರದ ಮೂಲಕ ಅಲ್ಲು ಅರ್ಜುನ್ (Allu Arjun) ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದಾರೆ. ಈ ಸಿನಿಮಾ ಭಾರತದ ಬಾಕ್ಸ್ ಆಫೀಸ್​ ಬಳಿಕ ಜಪಾನಿನ ಬಾಕ್ಸ್ ಆಫೀಸ್‌ನಲ್ಲಿ ಈಗಾಗಲೇ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದೆ. ಈಗ ಭಾರತೀಯ ಚಿತ್ರರಂಗವನ್ನು ಸ್ಟಾರ್ ನಿರ್ದೇಶಕರೊಂದಿಗೆ ಅವರು ಕೈಜೋಡಿಸಲಿದ್ದಾರೆ ಎಂದು ವರದಿ ಆಗಿದೆ.

ಅಲ್ಲು ಅರ್ಜುನ್ ಅವರು ತೆಲುಗು ನಿರ್ದೇಶಕರೊಂದಿಗೆ ಮಾತ್ರ ಕೆಲಸ ಮಾಡಿದ್ದಾರೆ. ಆದರೆ ಈಗ ಅವರು ನಿರ್ಧಾರಗಳನ್ನು ಬದಲಾಯಿಸುತ್ತಿದ್ದಾರೆ. ಈಗಾಗಲೇ ಅವರು ತಮಿಳು ನಿರ್ದೇಶಕ ಅಟ್ಲಿ ಜೊತೆ ಸಿನಿಮಾ ಮಾಡುತ್ತಿದ್ದಾರೆ. ಈಗ ಅವರು ಒಪ್ಪಿಕೊಳ್ಳಿರುವ ಸಿನಿಮಾ ಸಂಚಲನ ಸೃಷ್ಟಿಸಿದೆ.

‘ಪುಷ್ಪ’ ಚಿತ್ರದ ನಂತರ ಅಲ್ಲು ಅರ್ಜುನ್ ಪ್ಯಾನ್ ಇಂಡಿಯಾ ತಾರೆಯಾದರು. ಹಿಂದಿ ಬೆಲ್ಟ್‌ನಲ್ಲಿ ಅವರ ಕ್ರೇಜ್ ಹೆಚ್ಚಿದೆ. ಅವರು ಹಲವಾರು ದೊಡ್ಡ ಯೋಜನೆಗಳಲ್ಲಿ ನಿರತರಾಗಿದ್ದಾರೆ. ಆದಾಗ್ಯೂ, ಕಳೆದ ಕೆಲವು ದಿನಗಳಲ್ಲಿ, ಅಲ್ಲು ಅರ್ಜುನ್ ಬಾಲಿವುಡ್‌ಗೆ ನೇರವಾಗಿ ಪ್ರವೇಶ ಮಾಡುತ್ತಿದ್ದಾರೆ ಎಂಬ ವರದಿಗಳಿವೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ನಿರ್ದೇಶನದಲ್ಲಿ ಅಲ್ಲು ಅರ್ಜುನ್ ತಮ್ಮ ಮೊದಲ ಹಿಂದಿ ಚಿತ್ರವನ್ನು ಮಾಡಲಿದ್ದಾರೆ ಎಂಬ ಮಾಹಿತಿ ಹರಿದಾಡಿದೆ. ಈ ಪ್ರತಿಷ್ಠಿತ ಯೋಜನೆಯ ಸ್ಕ್ರಿಪ್ಟ್ ಈಗಾಗಲೇ ಲಾಕ್ ಆಗಿದೆ ಎಂದು ಹೇಳಲಾಗುತ್ತಾ ಇದೆ.

ಸಂಜಯ್ ಲೀಲಾ ಬನ್ಸಾಲಿ ಭವ್ಯ ದೃಶ್ಯಗಳನ್ನು ಕಟ್ಟಲ್ಲು ಹೆಸರುವಾಸಿ. ಅವರು ಐತಿಹಾಸಿಕ ಸಿನಿಮಾ ನಿರ್ಮಿಸುವಲ್ಲಿ ನಿಪುಣರು. ಅಂತಹ ನಿರ್ದೇಶಕರು ಅಲ್ಲು ಅರ್ಜುನ್ ಜೊತೆ ಸಿನಿಮಾ ಮಾಡುತ್ತಿರುವುದು ವಿಶೇಷ. ಈಗ ನೇರ ಹಿಂದಿ ಚಿತ್ರದೊಂದಿಗೆ ಅಲ್ಲಿ ತಮ್ಮ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸಲು ಯೋಜಿಸುತ್ತಿದ್ದಾರೆ. ಈ ಯೋಜನೆಯ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆಯಿದೆ ಎಂದು ಚಲನಚಿತ್ರ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ದುಬೈನಲ್ಲಿ ಸಹೋದರನ ಜೊತೆ ಅದ್ಧೂರಿ ಪಾರ್ಟಿ ಮಾಡಿದ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಅವರು ‘ಪುಷ್ಪ 2’ ಬಳಿಕ ಹೆಚ್ಚು ಎಚ್ಚರಿಕೆಯಿಂದ ಸಿನಿಮಾ ಮಾಡುತ್ತಿದ್ದಾರೆ. ಹಲವು ಸ್ಟಾರ್​​ಗಳ ಜೊತೆ ಅವರು ಕೈ ಜೋಡಿಸುತ್ತಾ ಇದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:17 am, Tue, 10 February 26

Source link

ಮಂಗಗಳ ದಾಳಿಯಿಂದ ತಪ್ಪಿಸಿಕೊಳ್ಳುವಾಗ ತಾರಸಿಯಿಂದ ಕೆಳಗೆ ಬಿದ್ದು ವೃದ್ಧೆ ಸಾವು – Kannada News | Elderly Woman Dies After Falling From Terrace While Fleeing Monkey Attack in Uttar Pradesh

ಅಮ್ರೋಹಾ, ಫೆಬ್ರವರಿ 10: ಮಂಗ(Monkey)ಗಳ ದಾಳಿಯಿಂದ ತಪ್ಪಿಸಿಕೊಳ್ಳಲು ವೃದ್ಧೆಯೊಬ್ಬರು ಛಾವಣಿಯಿಂದ ಹಾರಿ ಪ್ರಾಣಬಿಟ್ಟಿರುವ ಘಟನೆ ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ. ಈ ದುರಂತ ಘಟನೆ ಆದಂಪುರ ಪೊಲೀಸ್ ಠಾಣಾ ವ್ಯಾಪ್ತಿಯ ಪಾಪ್ಸರಾ ಗ್ರಾಮದಲ್ಲಿ ಸಂಭವಿಸಿದೆ.  ವರದಿಗಳ ಪ್ರಕಾರ, ಪಪ್ಸರಾ ಗ್ರಾಮದ ನಿವಾಸಿ ಮುನ್ನಾ ಎಂಬುವವರು ತಮ್ಮ ಮನೆಯ ಛಾವಣಿಯ ಮೇಲೆ ಕುಳಿತಿದ್ದರು. ಮಧ್ಯಾಹ್ನ 2 ಗಂಟೆ ಸುಮಾರಿಗೆ ಪರಸ್ಪರ ಜಗಳವಾಡುತ್ತಿದ್ದ ಕೋತಿಗಳ ಗುಂಪು ಇದ್ದಕ್ಕಿದ್ದಂತೆ ಛಾವಣಿಯ ಮೇಲೆ ಓಡಿ ಬಂದಿದ್ದವು, ಆಗ ಮಹಿಳೆ ಭಯಭೀತರಾಗಿ ಎದ್ದು ನಿಂತಿದ್ದರು.

ಅಷ್ಟರಲ್ಲಿ ಕೋತಿಗಳು ಅವರ ಮೇಲೆ ದಾಳಿ ಮಾಡಿದ್ದವು, ಗಾಬರಿಗೊಂಡ ಮಹಿಳೆ ಚಮೇಲಿ ಓಡಲು ಪ್ರಯತ್ನಿಸಿದ್ದಾರೆ, ಸಮತೋಲನ ಕಳೆದುಕೊಂಡು ನೇರವಾಗಿ ಕೆಳಗೆ ಬಿದ್ದಿದ್ದಾರೆ. ಬಿದ್ದ ಪರಿಣಾಮ ಅವರ ದೇಹದ ಹಲವು ಭಾಗಗಳು ಮತ್ತು ತಲೆಗೆ ಗಂಭೀರ ಗಾಯಗಳಾಗಿದ್ದವು. ಅವರ ಕುಟುಂಬವು ಕೂಡಲೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿತ್ತು, ಆದರೆ ಮಾರ್ಗಮಧ್ಯದಲ್ಲೇ ಅವರು ಮೃತಪಟ್ಟಿದ್ದರು.

ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ವಿಷಯದ ಬಗ್ಗೆ ಮಾಹಿತಿ ಪಡೆದರು. ಆದರೆ ಕುಟುಂಬವು ಯಾವುದೇ ಕಾನೂನು ಕ್ರಮ ಕೈಗೊಳ್ಳಲು ನಿರಾಕರಿಸಿತು. ಅಗತ್ಯ ವಿಧಿವಿಧಾನಗಳನ್ನು ಪೂರ್ಣಗೊಳಿಸಿದ ನಂತರ, ಪೊಲೀಸರು ಹಿಂತಿರುಗಿದರು.

ಮತ್ತಷ್ಟು ಓದಿ: ಕ್ರಿಕೆಟ್ ಆಡುತ್ತಿದ್ದವರಿಗೆ ಕ್ವಾಟ್ಲೆ ಕೊಟ್ಟ ಮಂಗ: ದಿಕ್ಕಾಪಾಲಾಗಿ ಓಡಿದ ಯುವಕರು

ಮತ್ತೊಂದು ಘಟನೆ
ಮುಂಬೈನ ವಿಲೇ ಪಾರ್ಲೆ (ಪೂರ್ವ) ಪ್ರದೇಶದ ಬಹುಮಹಡಿ ಕಟ್ಟಡದಲ್ಲಿ ಸೋಮವಾರ ಬೆಳಗ್ಗೆ ಬೆಂಕಿ ಕಾಣಿಸಿಕೊಂಡಿತ್ತು. ಈ ದುರಂತ ಘಟನೆಯಲ್ಲಿ 63 ವರ್ಷದ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಮತ್ತೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ವಿಲೇ ಪಾರ್ಲೆಯ ಸುವಿಧಾ ಪರ್ಲ್ ಕಟ್ಟಡದಲ್ಲಿ ಈ ಘಟನೆ ಸಂಭವಿಸಿದೆ.

ಅಧಿಕಾರಿಗಳ ಪ್ರಕಾರ, ಬೆಳಗ್ಗೆ 9.51 ರ ಸುಮಾರಿಗೆ ಕಟ್ಟಡದ 13 ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೊಗೆ ಮತ್ತು ಜ್ವಾಲೆಯ ದಟ್ಟಣೆ ವೇಗವಾಗಿ ಹರಡಿತ್ತು, ಇದು ನಿವಾಸಿಗಳಲ್ಲಿ ಭಯಭೀತಿಯನ್ನುಂಟುಮಾಡಿತು. ಬೆಂಕಿಯ ಬಗ್ಗೆ ಮಾಹಿತಿ ಪಡೆದ ತಕ್ಷಣ, ಕನಿಷ್ಠ ಐದು ಅಗ್ನಿಶಾಮಕ ದಳದ ವಾಹನಗಳು ತಕ್ಷಣ ಸ್ಥಳಕ್ಕೆ ತಲುಪಿ ರಕ್ಷಣಾ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದವು. ಗಣನೀಯ ಪ್ರಯತ್ನದ ನಂತರ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 8:01 am, Tue, 10 February 26

Source link

ಪಾಕಿಸ್ತಾನದ 7 ಬೇಡಿಕೆಗಳಲ್ಲಿ ಮೂರನ್ನು ತಿರಸ್ಕರಿಸಿದ ಐಸಿಸಿ – Kannada News | ICC has rejected several major conditions set by the Pakistan Cricket Board

ಟಿ20 ವಿಶ್ವಕಪ್​ನಲ್ಲಿ ಭಾರತದ ವಿರುದ್ಧ ಪಂದ್ಯವಾಡಲು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಕೆಲ ಷರತ್ತುಗಳನ್ನು ಮುಂದಿಟ್ಟಿದ್ದರು. ಈ ಬೇಡಿಕೆಗಳಲ್ಲಿ ಕೆಲವೊಂದನ್ನು ಐಸಿಸಿ ತಿರಸ್ಕರಿಸಿದೆ. ಅಂದರೆ ಐಸಿಸಿ ಅಡಿಯಲ್ಲಿ ಬರದ ವಿಷಯಗಳ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ತಿಳಿಸಿದೆ. ಇದಾಗ್ಯೂ ಕೆಲ ಬೇಡಿಕೆಗಳಿಗೆ ಒಪ್ಪಿಗೆ ಸೂಚಿಸಿರುವ ಸಾಧ್ಯತೆಯಿದೆ.

ಪಿಸಿಬಿಯ ಬೇಡಿಕೆಗಳೇನು?

  1. ಆದಾಯ ಹೆಚ್ಚಳ: ಐಸಿಸಿಯಿಂದ ಪಾಕಿಸ್ತಾನ್ ಕ್ರಿಕೆಟ್ ಮಂಡಳಿಯ ಆದಾಯವನ್ನು ಹೆಚ್ಚಿಸಬೇಕೆಂದು ಪಿಸಿಬಿ ಬೇಡಿಕೆಯಿಟ್ಟಿದೆ. ಈ ಬೇಡಿಕೆಗೆ ಸಮ್ಮತಿಸುವುದಾದರೆ ಮಾತ್ರ ಭಾರತದ ವಿರುದ್ಧ ಕಣಕ್ಕಿಳಿಯುವುದಾಗಿ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ತಿಳಿಸಿದೆ.
  2. ದ್ವಿಪಕ್ಷೀಯ ಸರಣಿ: ಭಾರತ ಮತ್ತು ಪಾಕಿಸ್ತಾನ್ ನಡುವಣ ದ್ವಿಪಕ್ಷೀಯ ಸರಣಿಯನ್ನು ಮತ್ತೆ ಆರಂಭಿಸಬೇಕೆಂದು ಪಿಸಿಬಿ ಆಗ್ರಹಿಸಿದೆ. ಇದಕ್ಕಾಗಿ ಐಸಿಸಿ ಮುಖ್ಯ ಪಾತ್ರವಹಿಸಬೇಕು. ಈ ಮೂಲಕ ಭಾರತ ಮತ್ತು ಪಾಕಿಸ್ತಾನ್ ನಡುವಣ ಸರಣಿಯನ್ನು ಪುನಃಸ್ಥಾಪಿಸುವ ಭರವಸೆ ನೀಡಬೇಕೆಂದು ಪಿಸಿಬಿ ಆಗ್ರಹಿಸಿದೆ.
  3. ಹ್ಯಾಂಡ್​ಶೇಕ್: ಕ್ರೀಡಾ ಕ್ಷೇತ್ರದಲ್ಲಿ ರಾಜಕೀಯ ಮಾಡಬಾರದು. ಪಂದ್ಯಗಳ ವೇಳೆ ಹ್ಯಾಂಡ್​ಶೇಕ್ ಪ್ರೋಟೋಕಾಲ್​ ಜಾರಿ ಮಾಡಬೇಕು. ಈ ಪ್ರೊಟೋಕಾಲ್​ ಪ್ರಕಾರ ಭಾರತ ಮತ್ತು ಪಾಕಿಸ್ತಾನ್ ಆಟಗಾರರು ಹ್ಯಾಂಡ್​ಶೇಕ್ ಮಾಡುವುದನ್ನು ಕಡ್ಡಾಯ ಮಾಡಬೇಕೆಂದು ಪಿಸಿಬಿ ಬೇಡಿಕೆಯಿಟ್ಟಿದೆ.
  4. ತ್ರಿಕೋನ ಸರಣಿ: ಭಾರತ, ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ಒಳಗೊಂಡಂತೆ ತ್ರಿಕೋನ ಸರಣಿಯನ್ನು ಆಯೋಜಿಸಲು ಅನುವು ಮಾಡಿಕೊಡಬೇಕೆಂದು ಪಿಸಿಬಿ ಆಗ್ರಹಿಸಿದೆ.
  5. ಬಾಂಗ್ಲಾದೇಶ್ ಪ್ರವಾಸ: ಭಾರತ ತಂಡವು 2026 ರ ನಂತರ ಬಾಂಗ್ಲಾದೇಶ್ ಪ್ರವಾಸ ಮಾಡಬೇಕೆಂದು ಪಿಸಿಬಿ ಹಾಗೂ ಬಿಸಿಬಿ ಆಗ್ರಹಿಸಿದೆ.
  6. ಬಾಂಗ್ಲಾದೇಶ್​ಗೆ ದಂಡ ವಿಧಿಸಬಾರದು: ಟಿ20 ವಿಶ್ವಕಪ್​ನಿಂದ ಹಿಂದೆ ಸರಿದಿರುವ ಬಾಂಗ್ಲಾದೇಶ್ ಮೇಲೆ ಯಾವುದೇ ನಿರ್ಬಂಧ ಹೇರಬಾರದು. ಹಾಗೆಯೇ ಯಾವುದೇ ದಂಡ ವಿಧಿಸಬಾರದು ಎಂದು ಪಿಸಿಬಿ ಐಸಿಸಿಯನ್ನು ಆಗ್ರಹಿಸಿದೆ.
  7. ಐಸಿಸಿ ಟೂರ್ನಿ ಆತಿಥ್ಯದ ಹಕ್ಕು: ಕಳೆದ ವರ್ಷದ ಮಹಿಳಾ ಟಿ 20 ವಿಶ್ವಕಪ್ ಅನ್ನು ಬಾಂಗ್ಲಾದೇಶದಿಂದ ದುಬೈಗೆ ಸ್ಥಳಾಂತರಿಸಲಾಗಿತ್ತು. ಹೀಗಾಗಿ ಐಸಿಸಿ ಬಾಂಗ್ಲಾದೇಶಕ್ಕೆ ಪರಿಹಾರವಾಗಿ ಬೇರೊಂದು ಪಂದ್ಯಾವಳಿಯ ಆತಿಥ್ಯ ನೀಡಬೇಕು ಎಂದು ಪಿಸಿಬಿ-ಬಿಸಿಬಿ ಆಗ್ರಹಿಸಿದೆ.

ಮೂರು ಬೇಡಿಕೆಗಳು ರಿಜೆಕ್ಟ್​:

ಪ್ರಸ್ತುತ ಮಾಹಿತಿ ಪ್ರಕಾರ ಇಂಟರ್​ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಮುಂದಿಟ್ಟ ಬೇಡಿಕೆಗಳಲ್ಲಿ ಮೂರನ್ನು ತ್ರಿಪಕ್ಷೀಯ ಸಭೆಯಲ್ಲೇ ತಿರಸ್ಕರಿಸಿದೆ. ಇಲ್ಲಿ ರಿಜೆಕ್ಟ್ ಆದ ಬೇಡಿಕೆಗಳಾವುವು ಎಂದು ನೋಡುವುದಾದರೆ…

  1. ದ್ವಿಪಕ್ಷೀಯ ಸರಣಿ: ಭಾರತ ಮತ್ತು ಪಾಕಿಸ್ತಾನ್ ನಡುವಣ ದ್ವಿಪಕ್ಷೀಯ ಸರಣಿಯನ್ನು ಮತ್ತೆ ಆರಂಭಿಸಬೇಕೆಂಬ ಪಾಕ್ ಕ್ರಿಕೆಟ್ ಮಂಡಳಿಯ ಕೋರಿಕೆಯನ್ನು ಐಸಿಸಿ ತಿರಸ್ಕರಿಸಿದೆ. ಈ ಎರಡು ದೇಶಗಳ ವಿಚಾರ. ಉಭಯ ದೇಶಗಳ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕಿದ್ದು, ಇದರಲ್ಲಿ ಐಸಿಸಿಗೆ ಯಾವುದೇ ಅಧಿಕಾರವಿಲ್ಲ ಎಂದು ತಿಳಿಸಿದೆ.
  2. ಬಾಂಗ್ಲಾದೇಶ್ ಪ್ರವಾಸ: ಭಾರತ ತಂಡ ಯಾವ ದೇಶದ ವಿರುದ್ಧ ಸರಣಿ ಆಡಬೇಕೆಂದು ನಿರ್ಧರಿಸಲು ಐಸಿಸಿಗೆ ಯಾವುದೇ ಹಕ್ಕಿಲ್ಲ. ಹೀಗಾಗಿ ಇದನ್ನು ಸಹ ಎರಡು ಮಂಡಳಿಗಳು ಕೂತು ಚರ್ಚಿಸಬೇಕಾದ ವಿಷಯ. ಹೀಗಾಗಿ ಈ ವಿಷಯದಲ್ಲೂ ಐಸಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದಿಲ್ಲ ಎಂದು ತಿಳಿಸಿದೆ.
  3. ತ್ರಿಕೋನ ಸರಣಿ: ಭಾರತ, ಪಾಕಿಸ್ತಾನ್ ಮತ್ತು ಬಾಂಗ್ಲಾದೇಶ್ ಒಳಗೊಂಡಂತೆ ತ್ರಿಕೋನ ಸರಣಿಯನ್ನು ಆಯೋಜಿಸುವುದು ಮೂರು ಕ್ರಿಕೆಟ್ ಮಂಡಳಿಗೆ ಬಿಟ್ಟ ವಿಷಯ. ಇದರಲ್ಲೂ ನಮಗೆ ಯಾವುದೇ ತೀರ್ಮಾನ ಕೈಗೊಳ್ಳಲಾಗುವುದಿಲ್ಲ ಎಂದು ಐಸಿಸಿ ಹೇಳಿದೆ.

ಇದಾಗ್ಯೂ ಪಂದ್ಯದ ವೇಳೆ ಹ್ಯಾಂಡ್​ ಶೇಕ್ ಮಾಡುವುದನ್ನು ಕಡ್ಡಾಯಗೊಳಿಸಲು ಐಸಿಸಿ ನಿರ್ಧರಿಸಿದೆ ಎಂದು ಕೆಲ ವರದಿಯಾಗಿದೆ. ಹಾಗೆಯೇ ಟಿ20 ವಿಶ್ವಕಪ್​ನಿಂದ ಹೊರಗುಳಿದಿರುವ ಬಾಂಗ್ಲಾದೇಶ್​ಗೆ ಯಾವುದೇ ದಂಡ ವಿಧಿಸುವ ಸಾಧ್ಯತೆಯಿಲ್ಲ.

ಇದನ್ನೂ ಓದಿ: ಸೌತ್ ಆಫ್ರಿಕಾ ದಾಂಡಿಗರ ಆರ್ಭಟ: ವಿಶ್ವಕಪ್‌ನಲ್ಲಿ ವಿಶ್ವ ದಾಖಲೆ

ಅದೇ ರೀತಿ ಐಸಿಸಿ ಟೂರ್ನಿಯ ಆತಿಥ್ಯ ಹಕ್ಕನ್ನು ಬೇಡಿಕೆಯಿಟ್ಟಿರುವ ಕಾರಣ ಮುಂಬರುವ ಅಂಡರ್-19 ವಿಶ್ವಕಪ್ ಬಾಂಗ್ಲಾದೇಶ್​ನಲ್ಲಿ ನಡೆಯುವ ಸಾಧ್ಯತೆಯಿದೆ.  ಇನ್ನು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್​ನ ಆದಾಯ ಹೆಚ್ಚಳ ಬಗ್ಗೆ ಐಸಿಸಿ ಮುಂದಿನ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಯಿದೆ.

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ ಹಲವೆಡೆ ಒಣ ಹವೆ, ರಾಜ್ಯದ ತಾಪಮಾನದಲ್ಲಿ ಸುಧಾರಣೆ – Kannada News | Bengaluru temperature: Dry weather all over Karnataka, Clear sky at Bengaluru

ಬೆಂಗಳೂರು ಸೇರಿ ಹಲವೆಡೆ ಒಣ ಹವೆ, ರಾಜ್ಯದ ತಾಪಮಾನದಲ್ಲಿ ಸುಧಾರಣೆ

ಬೆಂಗಳೂರು, ಫೆಬ್ರವರಿ 10: ಕಳೆದ ಹಲವು ದಿನಗಳಿಂದ ರಾಜ್ಯದಲ್ಲಿ ಒಣ ಹವೆ (Weather Forecast) ಆವರಿಸಿದೆ. ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನವಿರುವುದರಿಂದ ಬೆಚ್ಚಗಿನ ಉಡುಪು ಧರಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಎಲ್ಲೆಲ್ಲಿ ಒಣಹವೆ?

ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಚಳಿಯ ವಾತಾವರಣ

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 17°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ನಗರದಲ್ಲಿ ಎಂದಿನಂತೆ ಚಳಿಯ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಂಗಳೂರಿನಲ್ಲಿ ಹೆಚ್ಚಾಯ್ತು ಟ್ರೇಡಿಂಗ್ ಅಡಿಕ್ಷನ್: ಡ್ರಗ್ಸ್ ಅಡಿಕ್ಷನ್​ನಂತೆಯೇ ಸಿಟಿ ಜನರಿಗೆ ಈಗ ಟ್ರೇಡಿಂಗ್ ಖಯಾಲಿ – Kannada News | Trading Addiction Rising in Bengaluru Youth After Covid, Experts Compare It to Drug Dependency

ಬೆಂಗಳೂರು, ಫೆಬ್ರವರಿ 10: ಇತ್ತೀಚೆಗೆ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಲ್ಲೇ ಟ್ರೇಡಿಂಗ್ ಹುಚ್ಚು ಹೆಚ್ಚಾಗಿದೆ. ಮೊಬೈಲ್ ಆಧಾರಿತ ಆ್ಯಪ್​​ಗಳಿಂದ ಸಿಗುತ್ತಿರುವ ಸಾಲ ಸೌಲಭ್ಯದಿಂದ, ರಾತ್ರೋ ರಾತ್ರಿ ಹಣ ಸಂಪಾದಿಸುವ ಆಸೆಯಲ್ಲಿ ಟ್ರೇಡಿಂಗ್ ಚಟಕ್ಕೆ ಯುವ ಸಮೂಹದವರು ದಾಸರಾಗುತ್ತಿದ್ದಾರೆ. ಕುಳಿತಲ್ಲಿ ನಿಂತಲ್ಲಿ ಟ್ರೇಡಿಂಗ್ ಬಗ್ಗೆ ಆಲೋಚನೆ ಶುರು ಮಾಡಿದ್ದು, ಅದರಲ್ಲೂ ಬೆಂಗಳೂರಿನಲ್ಲಿ (Bangalore) ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಟ್ರೇಡಿಂಗ್ ಅಡಿಕ್ಷನ್ (Trading Addiction) ಕೇಸ್​​ಗಳು ಈಗ ನಿಮ್ಹಾನ್ಸ್ ಆಸ್ಪತ್ರೆಗೆ ಹೆಚ್ಚೆಚ್ಚು ಬರಲಾರಂಭಿಸಿವೆ.

ಬೆಂಗಳೂರಿನಲ್ಲಿ ಟ್ರೇಡಿಂಗ್ ಪ್ರಕರಣಗಳ ಹೆಚ್ಚಳದ ಬಗ್ಗೆ ಮನಃಶಾಸ್ತ್ರಜ್ಞರು ಕಳವಳ ವ್ಯಕ್ತಪಡಿಸಿದ್ದಾರೆ. ನಿಮ್ಹಾನ್ಸ್​ನ ಶಟ್ ಕ್ಲಿನಿಕ್​ಗೆ ದಿನನಿತ್ಯ ಬರುವ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಇಷ್ಟಕ್ಕೂ ಈ ಟ್ರೇಡಿಂಗ್ ಚಟಕ್ಕೆ ಮುಖ್ಯ ಕಾರಣಧೀಡಿರ್ ಹಣ ಸಂಪಾದನೆ ಮಾಡುವುದು ಎನ್ನಲಾಗಿದೆ. ಇದಕ್ಕೆ ಪೂರಕವಾಗಿ ಆನ್​ಲೈನ್​ನಲ್ಲಿ ಸುಲಭದಲ್ಲಿ ಸಿಗುವ ಲೋನ್ ಮತ್ತು ಹಣ, ಆಪ್ ಮೂಲಕ ಸಿಗುತ್ತಿರುವ ಸಾಲ ಸೌಲಭ್ಯ, ಯಾವುದೇ ಡಾಕ್ಯುಮೆಂಟ್ ಬೇಡ ಎಂದು ಇನ್​ಸ್ಟಂಟ್ ಆಗಿ ನೀಡುವ ಸಾಲ ಸೌಲಭ್ಯವೇ ಯುವಕರಲ್ಲಿ ಟ್ರೇಡಿಂಗ್ ಹುಚ್ಚು ಹೆಚ್ಚಳಕ್ಕೆ ಪೂರಕವಾಗುತ್ತಿವೆ.

ಡ್ರಗ್ಸ್, ಮದ್ಯಪಾನ, ಧೂಮಪಾನದಂತೆ ಟ್ರೇಡಿಂಗ್ ಕೂಟ ಚಟವಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್ ಗೇಮಿಂಗ್ ಚಟದ ಬಗ್ಗೆ ನಾವು ಕೇಳಿದ್ದೇವೆ. ಆದರೆ ರಾಜಧಾನಿಯ 29 ವರ್ಷದ ಯುವಕ ಟ್ರೇಡಿಂಗ್ ಚಟಕ್ಕೆ ಷೇರು ಮಾರುಕಟ್ಟೆಯಲ್ಲಿ ಬರೋಬ್ಬರಿ 80 ಲಕ್ಷ ರೂಪಾಯಿ ಕಳೆದುಕೊಂಡು, ತೀವ್ರ ಮಾನಸಿಕ ಖಿನ್ನತೆಗೆ ಜಾರಿದ್ದ. ಬಳಿಕ ಪೋಷಕರು ನಿಮ್ಹಾನ್ಸ್ ನಲ್ಲಿ ಚಿಕಿತ್ಸೆ ಕೊಡಿಸಿದ್ದು ಇದೀಗ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯರು ಈ ಯುವಕನಿಗೆ ಯಶಸ್ವಿ ಚಿಕಿತ್ಸೆ ನೀಡುವ ಮೂಲಕ, ಸ್ಟಾಕ್ ಟ್ರೇಡಿಂಗ್ ಅಡಿಕ್ಷನ್ ಗೀಳಿನಿಂದ ಗುಣಮುಖ ಮಾಡಿದ್ದಾರೆ.

ಏನಿದು ಟ್ರೇಡಿಂಗ್ ಅಡಿಕ್ಷನ್?

  • ಸದಾ ಹೂಡಿಗೆ ಬಗ್ಗೆ ಗಮನ ಕೊಡುವುದು
  • ಹೆಚ್ಚು ಹೆಚ್ಚು ಹಣವನ್ನ ಷೇರು ಮಾರುಕಟ್ಟೆಯಲ್ಲಿ ವಿನಿಯೋಗ ಮಾಡುವುದು
  • ತುರ್ತು ಹಣ ಸಂಪಾದನೆಗೆ ಸದಾ ಟ್ರೇಡಿಂಗ್ ಚಟ
  • ರಾತ್ರೋ ರಾತ್ರಿ ಹಣ ಸಂಪಾದಿಸುವ ಆಸೆಗೆ ಟ್ರೇಡಿಂಗ್ ಚಟಕ್ಕೆ ದಾಸರಾಗ್ತಿರೋ ಯುವ ಸಮೂಹ

ಟ್ರೇಡಿಂಗ್ ಅಡಿಕ್ಷನ್ ಗುಣಲಕ್ಷಣಗಳು ಏನು?

  • ಸದಾ ದುಡ್ಡುಮಾಡುವ ಹಂಬಲ
  • ಶ್ರಮವಿಲ್ಲದೆ ಧೀಡಿರ್ ಹಣಗಳಿಸುವ ಆಲೋಚನೆ
  • ಸದಾ ಭಯ, ಆತಂಕ
  • ಜೀವನದಲ್ಲಿ ಗುರಿ ಇಲ್ಲದೇ ಹೋಗೊದು
  • ಸಡನ್ ಮೂಡ್ ಸ್ವಿಂಗ್ಸ್
  • ಚಿಕ್ಕಪುಟ್ಟ ವಿಚಾರಕ್ಕೆ ಕೋಪ

ಒಟ್ಟಿನಲ್ಲಿ ಇಷ್ಟು ದಿನ ಮೊಬೈಲ್ ಅಡಿಕ್ಷನ್, ಅತಿಯಾದ ಮೊಬೈಲ್ ಬಳಕೆಯಿಂದ ವಿದ್ಯಾರ್ಥಿಗಳು ಕಲಿಕೆಲ್ಲಿ ಹಿಂದೆ ಬೀಳುತ್ತಿರುವ ಬಗ್ಗೆ ಕೇಳಿಬರುತ್ತಿದ್ದವು. ಈಗ ಇನ್ವೆಸ್ಟ್​​ಮೆಂಟ್ ಮೂಲಕ ದುಡ್ಡು ಮಾಡುವ ಹುಚ್ಚಿನೊಂದಿಗೆ ಟ್ರೇಡಿಂಗ್ ಅಡಿಕ್ಷನ್​​ಗೆ ಬಲಿಯಾಗುವ ಪ್ರಕರಣಗಳು ಹೆಚ್ಚು ಕೇಳಿಬರಲು ಶುರುವಾಗಿವೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 10 February​: ಇಂದು ಈ ರಾಶಿಯವರಿಗೆ ಜವಾಬ್ದಾರಿ ಹೆಚ್ಚಾಗಬಹುದು!

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 10, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾಸುನಾಮ ಸಂವತ್ಸರದ ಉತ್ತರಾಯಣ, ಮಾಗ ಮಾಸ, ಶಿಶಿರ ಋತು, ಕೃಷ್ಣ ಪಕ್ಷ ಅಷ್ಟಮಿ, ವಿಶಾಖ ನಕ್ಷತ್ರ, ಧ್ರುವ ಯೋಗ, ಕೌಲವಕರಣ ಇರಲಿದೆ. ರಾಹು ಕಾಲವು ಮಧ್ಯಾಹ್ನ 3:29 ರಿಂದ 4:57 ರವರೆಗೆ ಇದ್ದರೆ, ಶುಭ ಕಾರ್ಯಗಳಿಗೆ ಸಂಕಲ್ಪ ಕಾಲವು ಬೆಳಗ್ಗೆ 11:06 ರಿಂದ ಮಧ್ಯಾಹ್ನ 12:34 ರವರೆಗೆ ಇರಲಿದೆ ಎಂದು ಗುರೂಜಿ ವಿವರಿಸಿದ್ದಾರೆ.

ಗ್ರಹಗಳ ಸ್ಥಾನವನ್ನು ನೋಡಿದಾಗ, ರವಿಯು ಮಕರ ರಾಶಿಯಲ್ಲೂ, ಚಂದ್ರನು ವೃಶ್ಚಿಕ ರಾಶಿಯಲ್ಲೂ ಸಂಚರಿಸಲಿದ್ದಾರೆ. ಬೆಳಗ್ಗೆ 7:55 ರವರೆಗೆ ವಿಶಾಖ ನಕ್ಷತ್ರದ ಪ್ರಭಾವ ಇರುತ್ತದೆ. ಈ ದಿನವನ್ನು ವಿಶ್ವ ದ್ವಿದಳ ಧಾನ್ಯಗಳ ದಿನ ಮತ್ತು ವರ್ಲ್ಡ್ ಅಂಬ್ರೆಲಾ ಡೇ ಎಂದೂ ಆಚರಿಸಲಾಗುತ್ತದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

Source link

Daily Devotional: ತಂದೆ ತಾಯಿ ಮಾಡಿದ ಪುಣ್ಯ ಮಕ್ಕಳಿಗೆ ಅನ್ವಯಿಸುತ್ತಾ? – Kannada News | Daily Devotional: Do Parents Karma Affect Their Children?

ಬೆಂಗಳೂರು, ಫೆಬ್ರವರಿ​ 10: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ತಂದೆ ತಾಯಿಗಳು ಮಾಡಿದಂತಹ ಪುಣ್ಯ ಅಥವಾ ಪಾಪಗಳು ಮಕ್ಕಳಿಗೆ ಅನ್ವಯಿಸುತ್ತವೆಯೇ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಹೇಗೆ ತಂದೆ ತಾಯಿಗಳ ಆಸ್ತಿ ಅಥವಾ ಸಾಲಗಳು ಮಕ್ಕಳಿಗೆ ವಾರಸುದಾರಿಕೆಯಿಂದ ಬರುತ್ತವೆಯೋ, ಹಾಗೆಯೇ ಅವರ ಪಾಪ ಮತ್ತು ಪುಣ್ಯದ ಫಲಗಳೂ ಸಹ ಮಕ್ಕಳ ಮೇಲೆ ಪ್ರಭಾವ ಬೀರುತ್ತವೆ.

ಹಿಂದಿನ ಜನ್ಮದ ಕರ್ಮಫಲಗಳ ಆಧಾರದ ಮೇಲೆ ನಾವು ನಿರ್ದಿಷ್ಟ ತಂದೆ ತಾಯಿಗಳ ಹೊಟ್ಟೆಯಲ್ಲಿ ಹುಟ್ಟುತ್ತೇವೆ. ಪೋಷಕರು ಧರ್ಮ ಮಾರ್ಗದಲ್ಲಿ ಸಂಪಾದಿಸಿದ ಆಸ್ತಿ ಮಕ್ಕಳಿಗೆ ಶುಭ ತಂದರೆ, ಅಧರ್ಮದಿಂದ ಗಳಿಸಿದ ಸಂಪತ್ತು ಮಕ್ಕಳಿಗೆ ಕಷ್ಟಗಳನ್ನು ತರಬಹುದು. ಆಸ್ತಿಯ ದಾಖಲಾತಿ ಸಮಸ್ಯೆಗಳು ಅಥವಾ ಆರ್ಥಿಕ ತೊಂದರೆಗಳು ಪೋಷಕರ ಪಾಪದ ಪರಿಣಾಮಗಳಾಗಿರಬಹುದು. ಅಸಹಾಯಕರ ಮೇಲೆ ದೌರ್ಜನ್ಯ, ಮೋಸ, ಅಧಿಕ ಬಡ್ಡಿ ವಸೂಲಿ, ಅಧರ್ಮದ ನಡವಳಿಕೆಗಳು ಮುಂದಿನ ಪೀಳಿಗೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತವೆ. ಆದ್ದರಿಂದ, ಕುಟುಂಬದ ಮತ್ತು ಮುಂದಿನ ಪೀಳಿಗೆಯ ಒಳಿತಿಗಾಗಿ ಧರ್ಮದ ಮಾರ್ಗದಲ್ಲಿ ನಡೆಯುವುದು ಅತಿ ಮುಖ್ಯ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

Source link

ಎರಡನೇ ಕೇಸ್ ಮೂಲಕ ಬಂದ ಸೀತಾರಾಮ್; ಮತ್ತೆ ಖಾಕಿ ತೊಟ್ಟ ವಿಜಯ್ ರಾಘವೇಂದ್ರ – Kannada News | Vijay Raghavendra’s ‘Second Case of Seetharam’: Suspense Thriller Trailer and Feb 20 Release

ವಿಜಯ್ ರಾಘವೇಂದ್ರ (Vijay Raghavendra) ನಟನೆಯ ‘ಸೀತಾರಾಮ್ ಬಿಣೋಯ್ ಕೇಸ್ ನಂಬರ್ 18’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರು ಪೊಲೀಸ್ ಪಾತ್ರದಲ್ಲಿ ನಟಿಸಿದ್ದರು. ಈ ಸಿನಿಮಾ ರಿಲೀಸ್ ಆಗಿದ್ದು 2021ರ ಆಗಸ್ಟ್ 15ರಂದು. ಈಗ ಐದು ವರ್ಷಗಳ ಬಳಿಕ ಈ ಚಿತ್ರಕ್ಕೆ ಸೀಕ್ವೆಲ್ ತರಲಾಗುತ್ತಿದೆ. ಆ ಚಿತ್ರದ ಹೆಸರು ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’. ಈ ಚಿತ್ರ ಕೂಡ ಸಸ್ಪೆನ್ಸ್​ ಶೈಲಿಯಲ್ಲಿ ಮೂಡಿ ಬಂದಿದೆ. ಫೆಬ್ರವರಿ 20ರಂದು ಸಿನಿಮಾ ರಿಲೀಸ್ ಆಗಲಿದೆ.

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಈ ಟ್ರೇಲರ್​ ಅಲ್ಲಿ ವಿಜಯ್ ರಾಘವೇಂದ್ರ ಅವರು ಖಾಕಿ ತೊಟ್ಟು ಮಿಂಚಿದ್ದಾರೆ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಒಂದು ವಾರದ ಒಳಗೆ ಎರಡು ಕೊಲೆ ನಡೆಯುತ್ತದೆ. ಮುಂದಾಗೋ ಕೊಲೆ ತಡೆಯೋದು ಮತ್ತು ಕೊಲೆಗಾರನ ಹಿಡಿಯೋ ಜವಾಬ್ದಾರಿ ಕಥಾ ನಾಯಕನ ಮೇಲಿದೆ.

‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’ ಚಿತ್ರದಲ್ಲಿ ವಿಜಯ್ ರಾಘವೇಂದ್ರ, ಗೋಪಾಲ್ ಕೃಷ್ಣ ದೇಶಪಾಂಡೆ ನಟಿಸಿದ್ದಾರೆ. ಪವನ್ ಒಡೆಯರ್ ಚಿತ್ರವನ್ನು ಪ್ರೆಸೆಂಟ್ ಮಾಡುತ್ತಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ‘ಫ್ಲೈಯಿಂಗ್ ಎಲಿಫಂಟ್ ಸ್ಟೋರಿ ಟೆಲ್ಲರ್ಸ್’ ಸಿನಿಮಾ ಮೂಲಕ ದೇವಿ ಪ್ರಸಾದ್ ಶೆಟ್ಟಿ ಹಾಗೂ ಸಾರ್ವಿಕ್ ಹೆಬ್ಬಾರ್ ಈ ಚಿತ್ರ ನಿರ್ಮಿಸಿದ್ದಾರೆ.

ಇದನ್ನೂ ಓದಿ: ಜೀ5ನಲ್ಲಿ ಬರ್ತಿದೆ ‘ರಾಕ್ಷಸ’ ವೆಬ್ ಸೀರಿಸ್; ಒಟಿಟಿ ಜಗತ್ತಿಗೆ ವಿಜಯ್ ರಾಘವೇಂದ್ರ ಎಂಟ್ರಿ

ಈಗ ಬರ್ತಿರೋದು ಎರಡನೇ ಕೇಸ್. ನಿರ್ದೇಶಕ ದೇವಿ ಪ್ರಸಾದ್ ಶೆಟ್ಟಿ ಬಳಿ ಇನ್ನೂ ಒಂದು ಕಥೆ ಇದೆಯಂತೆ. ಈ ಚಿತ್ರದ ಬಳಿಕ ವಿಜಯ್ ಅವರು ಆ ಸಿನಿಮಾದಲ್ಲಿ ಕಾಣಿಸಿಕೊಳ್ಳೋ ಸಾಧ್ಯತೆ ಇದೆ. ಸಿನಿಮಾ ರಿಲೀಸ್ ಬಳಿಕ ನಿರ್ದೇಶಕರು ಮುಂದಿನ ದಿನಗಳಲ್ಲಿ ಆಲೋಚನೆ ಮಾಡಲಿದ್ದಾರಂತೆ.

ಇತ್ತೀಚಿನ ದಿನಗಳಲ್ಲಿ ಸಿನಿಮಾ ಮಾಡೋದು ಒಂದು ದೊಡ್ಡ ಸವಾಲಿನ ಕೆಲಸ. ಸಿನಿಮಾ ಬಿಡುಗಡೆ ಮಾಡೋದು ಕೂಡ ಅಷ್ಟೇ ದೊಡ್ಡ ಚಾಲೆಂಜ್ ಎಂಬುದು ವಿಜಯ್ ರಾಘವೇಂದ್ರ ಅವರ ಅಭಿಪ್ರಾಯ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಸೌತ್ ಆಫ್ರಿಕಾ ದಾಂಡಿಗರ ಆರ್ಭಟ: ವಿಶ್ವಕಪ್‌ನಲ್ಲಿ ವಿಶ್ವ ದಾಖಲೆ

Source link