Headlines

ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಆಗುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ದೆಹಲಿ ಮಾ.7: ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಮತ್ತು ಯುದ್ಧದ ವಾತಾವರಣವಿದ್ದರೂ, ಭಾರತದ ಇಂಧನ ದಾಸ್ತಾನು ಸ್ಥಿತಿ ಸುಧಾರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಅಧಿಕೃತ ಮೂಲಗಳು ಪುನರುಚ್ಚರಿಸಿವೆ. ಈ ಬಗ್ಗೆ ಎಎನ್​​​ಐ ಎಕ್ಸ್​​​ನಲ್ಲಿ ಹೇಳಿಕೊಂಡಿದೆ. ಭಾರತದ ಇಂಧನ ಸಂಗ್ರಹಣಾ ಸಾಮರ್ಥ್ಯ ಮತ್ತು ಲಭ್ಯತೆ ಉತ್ತಮಗೊಳ್ಳುತ್ತಿದೆ. ಇದು ಸರ್ಕಾರಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದ್ದು, ಸದ್ಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡುವ ಅನಿವಾರ್ಯತೆ ಇಲ್ಲ ಎಂದು…

Read More

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?

2026ರ ಯುಗಾದಿ, ಪರಾಭವ ನಾಮ ಸಂವತ್ಸರದಲ್ಲಿ ಮಿಥುನ ರಾಶಿಯವರ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು ವಿಶ್ಲೇಷಿಸಿದ್ದಾರೆ. ಈ ವರ್ಷದಲ್ಲಿ ಮಿಥುನ ರಾಶಿಯವರಿಗೆ ಗುರು, ಶನಿ, ರಾಹು ಮತ್ತು ಕೇತು ಗ್ರಹಗಳ ಸಂಚಾರವು ವಿವಿಧ ಫಲಗಳನ್ನು ತರಲಿದೆ. ಆದಾಯ 8 ಮತ್ತು ವ್ಯಯ 10 ಆಗಿದ್ದು, ಖರ್ಚು ಸ್ವಲ್ಪ ಹೆಚ್ಚಾಗಬಹುದು. ಆರೋಗ್ಯ ಉತ್ತಮವಾಗಿದ್ದು, ಸುಖ-ದುಃಖದ ಪ್ರಮಾಣ 8:2 ಇರಲಿದೆ. ದೈವಾನುಕೂಲದಿಂದ ಕೆಲಸ ಕಾರ್ಯಗಳಲ್ಲಿ ಶುಭ ಫಲಗಳ ನಿರೀಕ್ಷೆಯಿದೆ. ಶನಿ ಗ್ರಹವು ಮಿಶ್ರಫಲ ನೀಡಲಿದ್ದು, ಉದ್ಯೋಗದಲ್ಲಿ ಬದಲಾವಣೆ,…

Read More

3 ದಿನದಿಂದ ಒಂದೇ ಸಾಂಬಾರು, ಗಂಡನ ಬೈಗುಳಕ್ಕೆ ದುರಂತ ಅಂತ್ಯಕಂಡ ಬೆಂಗಳೂರಿನ ಮಹಿಳೆ

ಬೆಂಗಳೂರು, (ಮಾರ್ಚ್ 07) : ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ನಡೆದ ಜಗಳವೊಂದು ಅಂತಿಮವಾಗಿ ಗೃಹಿಣಿಯೊಬ್ಬರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಮೂರು ದಿನದ ಹಳೇ ಸಾಂಬಾರ್ ಬಡಿಸಿದ ವಿಚಾರಕ್ಕೆ ಪತಿ ಕಿರಿಕ್ ತೆಗೆದಿದ್ದರಿಂದ ಮನನೊಂದ ಪತ್ನಿ ವಿಷ ಸೇವಿಸಿ ಪ್ರಾಣಬಿಟ್ಟಿದ್ದಾಳೆ. ಮೃತ ಮಹಿಳೆಯನ್ನು ಕಾವ್ಯ (27) ಎಂದು ಗುರುತಿಸಲಾಗಿದೆ. ಈಕೆ ಕಳೆದ ಐದು ವರ್ಷಗಳ ಹಿಂದೆ ರಂಗಸ್ವಾಮಿ ಎಂಬುವವರನ್ನು ಮದುವೆಯಾಗಿದ್ದು, ಇವರಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಆದ್ರೆ, ಇದೀಗ…

Read More

ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ: ಓಂ ಬಿರ್ಲಾ ಬಗ್ಗೆ ಮೋದಿ ಹೇಳಿದ್ದಿಷ್ಟು

ದೆಹಲಿ, ಮಾ.7: ಲೋಕಸಭೆಯ ಸಭಾಪತಿ ಓಂ ಬಿರ್ಲಾ ಅವರ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ (Opposition sponsored motion) ಕುರಿತು ನಾಳೆ (ಮಾ.8) ಸದನದಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಓಂ ಬಿರ್ಲಾ ಅವರು ಎಷ್ಟು ಅದ್ಭುತ ಸಂಸದರೋ ಅಷ್ಟೇ ಸಮರ್ಥ ಸಭಾಪತಿಯೂ ಆಗಿದ್ದಾರೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಅವರು ದೇಶದ ಸಂವಿಧಾನಕ್ಕೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದಾರೆ ಮತ್ತು ಸಂಸದೀಯ ವ್ಯವಸ್ಥೆಗಳ…

Read More

ಹುಟ್ಟುಹಬ್ಬದಂದು ಅಭಿಮಾನಿಗಳ ಭೇಟಿ ಮಾಡಿದ ರಾಧಿಕಾ ಪಂಡಿತ್: ವಿಡಿಯೋ

ನಟಿ ರಾಧಿಕಾ ಪಂಡಿತ್ (Radhika Pandit) ಹುಟ್ಟುಹಬ್ಬ ಇಂದು (ಮಾರ್ಚ್ 07). ನಟನೆ ಬಿಟ್ಟು ಹಲವು ವರ್ಷಗಳಾಗಿದ್ದರೂ ಸಹ ಇಂದಿಗೂ ಕಡಿಮೆ ಆಗಿಲ್ಲ ರಾಧಿಕಾ ಪಂಡಿತ್ ಅವರ ಕ್ರೇಜ್. ಇಂದು ಸಹ ರಾಜ್ಯದ ನಾನಾ ಕಡೆಗಳಿಂದ ರಾಧಿಕಾ ಪಂಡಿತ್ ಅವರನ್ನು ಭೇಟಿ ಆಗಲು ಅಭಿಮಾನಿಗಳು ಆಗಮಿಸಿದ್ದರು. ರಾಧಿಕಾ ಪಂಡಿತ್ ಸಹ ತಮಗಾಗಿ ಬಂದ ಅಭಿಮಾನಿಗಳನ್ನು ಭೇಟಿ ಆದರು. ಅವರೊಟ್ಟಿಗೆ ಸೆಲ್ಫಿ ತೆಗೆಸಿಕೊಂಡರು. ಅವರು ಪ್ರೀತಿಯಿಂದ ತಂದಿದ್ದ ಕೇಕ್ ಕತ್ತರಿಸಿ ಖುಷಿ ಪಟ್ಟರು. ಅಭಿಮಾನಿಗಳೊಟ್ಟಿಗೆ ನಗು ಮುಖದೊಂದಿಗೆ ಸೆಲ್ಫಿ…

Read More

ತಪ್ಪಿದ ದೊಡ್ಡ ಅನಾಹುತ: ಡಿಸಿಎಂ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ

ಲಖನೌ, ಮಾ.7: ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಇಂದು (ಮಾ.7) ಭಾರೀ ಅಪಾಯದಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಲಖನೌನಿಂದ ಕೌಶಂಬಿಗೆ ಹೊರಟಿದ್ದ ಅವರ ಹೆಲಿಕಾಪ್ಟರ್‌ನಲ್ಲಿ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ದಟ್ಟವಾದ ಹೊಗೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅಮೌಸಿ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಡಿಸಿಎಂ ಕೇಶವ್ ಪ್ರಸಾದ್ ಮೌರ್ಯ ಅವರು ಲಖನೌನ ಲಾ ಮಾರ್ಟಿನಿಯರ್ ಕಾಲೇಜು ಮೈದಾನದಿಂದ ಕೌಶಂಬಿಯಲ್ಲಿ ನಡೆಯಬೇಕಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆಲಿಕಾಪ್ಟರ್ ಮೂಲಕ ಹೊರಟಿದ್ದರು. ಹೆಲಿಕಾಪ್ಟರ್ ಗಾಳಿಯಲ್ಲಿರುವಾಗಲೇ…

Read More

IND vs NZ: ‘ಭಾರತೀಯರ ಹೃದಯ ಒಡೆದು ಟ್ರೋಫಿ ಗೆಲ್ಲುತ್ತೇವೆ’; ಫೈನಲ್​ಗೂ ಮುನ್ನ ಕಿವೀಸ್ ನಾಯಕನ ಹೇಳಿಕೆ

2026 ರ ಟಿ20 ವಿಶ್ವಕಪ್ ಫೈನಲ್ ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮಾರ್ಚ್ 8 ರಂದು ನಡೆಯುವ ಫೈನಲ್ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ ಪರ್ತಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ನ್ಯೂಜಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್, ಟ್ರೋಫಿಗಾಗಿ ಕೆಲವು ಹೃದಯಗಳನ್ನು ಒಡೆಯುವುದಕ್ಕೆ ನನಗೆ ಯಾವುದೇ ಅಭ್ಯಂತರವಿಲ್ಲ ಎಂದಿದ್ದಾರೆ. ಅಂದರೆ ಟಿ20 ವಿಶ್ವಕಪ್ ಗೆದ್ದು ಟೀಂ ಇಂಡಿಯಾ ಅಭಿಮಾನಿಗಳ ಹೃದಯ ಒಡೆಯುವುದಕ್ಕೆ ನಾವು ಸಿದ್ಧ ಎಂಬುದು ಕಿವೀಸ್ ನಾಯಕನ ಹೇಳಿಕೆಯಾಗಿದೆ. ಪತ್ರಿಕಾಗೋಷ್ಠಿಯಲ್ಲಿ…

Read More

ಹುಟ್ಟುಹಬ್ಬಕ್ಕೆ ಯಶ್ ಕೊಟ್ಟ ಉಡುಗೊರೆಯೇನು? ರಾಧಿಕಾ ಪಂಡಿತ್ ಉತ್ತರ ಕೇಳಿ

ಇಂದು (ಮಾರ್ಚ್ 07) ರಾಧಿಕಾ ಪಂಡಿತ್ (Radhika Pandit) ಹುಟ್ಟುಹಬ್ಬ. ಕನ್ನಡದ ಸ್ಟಾರ್ ನಟಿಯಾಗಿ ಮೆರೆದ ರಾಧಿಕಾ ಪಂಡಿತ್, ಯಶ್ ಅವರನ್ನು ಮದುವೆ ಆದ ಬಳಿಕ ನಟನೆಯಿಂದ ಅಂತರ ಕಾಯ್ದುಕೊಂಡರು. ಅದರಲ್ಲೂ ಮಕ್ಕಳಾದ ಬಳಿಕ ನಟನೆಗೆ ಸಂಪೂರ್ಣ ವಿದಾಯವನ್ನೇ ಹೇಳಿಬಿಟ್ಟರು. ನಟನೆ ಬಿಟ್ಟು ಸಾಕಷ್ಟು ವರ್ಷಗಳಾಗಿದ್ದರೂ ಸಹ ರಾಧಿಕಾ ಪಂಡಿತ್ ಅವರ ಕ್ರೇಜ್ ಅಭಿಮಾನಿಗಳಲ್ಲಿ ಇನ್ನೂ ಕಡಿಮೆ ಆಗಿಲ್ಲ. ಇಂದು ರಾಧಿಕಾ ಪಂಡಿತ್ ಹುಟ್ಟುಹಬ್ಬಕ್ಕೆ ರಾಜ್ಯದ ಹಲವು ಮೂಲೆಗಳಿಂದ ಅಭಿಮಾನಿಗಳು ಬಂದು ತಮ್ಮ ಮೆಚ್ಚಿನ ನಟಿಗೆ ಶುಭಾಶಯಗಳನ್ನು…

Read More

IND vs NZ: ಸಂಜು ಸ್ಯಾಮ್ಸನ್​ 26 ರನ್​ ಬಾರಿಸಿದರೆ ಭಾರತಕ್ಕೆ ಗೆಲುವು ಖಚಿತ

2026 ರ ಮಾರ್ಚ್ 8 ರಂದು ಭಾರತ ಮತ್ತು ನ್ಯೂಜಿಲೆಂಡ್ ನಡುವೆ ಟಿ20 ವಿಶ್ವಕಪ್ ಫೈನಲ್ ಪಂದ್ಯ ನಡೆಯಲಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪ್ರಶಸ್ತಿ ಹಣಾಹಣಿಗೆ ಇಡೀ ವಿಶ್ವವೇ ಕಾದುಕುಳಿತಿದೆ. ಹಾಲಿ ಚಾಂಪಿಯನ್ ಭಾರತವೇ ಗೆಲುವಿನ ಫೇವರೇಟ್ ಎನಿಸಿಕೊಂಡಿದ್ದರೂ ನ್ಯೂಜಿಲೆಂಡ್ ಕೂಡ ತನ್ನ ಚೊಚ್ಚಲ ಟಿ20 ವಿಶ್ವಕಪ್​ಗಾಗಿ ಎದುರು ನೋಡುತ್ತಿದೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲಬೇಕೆಂದರೆ ಸಾಂಘಿಕ ಪ್ರದರ್ಶನ ನೀಡಬೇಕಾಗುತ್ತದೆ. ಅದರಲ್ಲೂ ಟೀಂ ಇಂಡಿಯಾ ಪರ ಕಳೆದೆರಡು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿ…

Read More

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ವೃಷಭ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ತಜ್ಞರಾದ ಡಾ. ಬಸವರಾಜ ಗುರೂಜಿಯವರು 2026ರ ಪರಾಭವನಾಮ ಸಂವತ್ಸರದ ವೃಷಭ ರಾಶಿಯ ವಾರ್ಷಿಕ ಭವಿಷ್ಯವನ್ನು ಇಲ್ಲಿ ವಿವರಿಸಿದ್ದಾರೆ. ಈ ವರ್ಷದಲ್ಲಿ ಗುರು ಗ್ರಹವು ಎರಡರಿಂದ ಮೂರನೇ ಮನೆಗೆ, ಶನಿ ಹನ್ನೊಂದರಲ್ಲಿ, ರಾಹು ಹತ್ತರಿಂದ ಒಂಬತ್ತಕ್ಕೆ ಮತ್ತು ಕೇತು ನಾಲ್ಕರಿಂದ ಮೂರನೇ ಮನೆಗೆ ಸಂಚರಿಸಲಿದೆ. ವೃಷಭ ರಾಶಿಯವರಿಗೆ ಈ ವರ್ಷ ಆದಾಯದಲ್ಲಿ ಏರಿಕೆ ಕಂಡುಬರಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಹೊಸ ಯೋಜನೆಗಳಿಗೆ ಮನ್ನಣೆ ಸಿಗುತ್ತದೆ ಹಾಗೂ ಗುತ್ತಿಗೆದಾರರು, ಸಂಗೀತಗಾರರು, ಶಿಕ್ಷಕರು, ಎಂಜಿನಿಯರ್‌ಗಳು, ರಿಯಲ್…

Read More