Category Archives: Blog

Your blog category

ಮೋದಿ ಮೈದಾನದಲ್ಲಿ ಟೀಂ ಇಂಡಿಯಾ ದಾಖಲೆ ಉತ್ತಮವಾಗಿದ್ದರೂ ಫ್ಯಾನ್ಸ್ ಆತಂಕಪಡುತ್ತಿರುವುದ್ಯಾಕೆ?

ಮೋದಿ ಮೈದಾನದಲ್ಲಿ ಟೀಂ ಇಂಡಿಯಾ ದಾಖಲೆ ಉತ್ತಮವಾಗಿದ್ದರೂ ಫ್ಯಾನ್ಸ್ ಆತಂಕಪಡುತ್ತಿರುವುದ್ಯಾಕೆ?

ದಾಖಲೆಯ ಮೂರನೇ ಬಾರಿಗೆ ಟಿ20 ವಿಶ್ವಕಪ್ (T20 World Cup Final 2026) ಗೆದ್ದು ಅತಿ ಹೆಚ್ಚು ಬಾರಿ ಚಾಂಪಿಯನ್ ಆದ ತಂಡವೆಂಬ ದಾಖಲೆ ಬರೆಯಲು ಟೀಂ ಇಂಡಿಯಾಗೆ (Team India) ಇನ್ನೊಂದು ಗೆಲುವು ಬೇಕಾಗಿದೆ. 2026 ರ ಟಿ20 ವಿಶ್ವಕಪ್​ನಲ್ಲಿ ಫೈನಲ್​ಗೇರಿರುವ ಟೀಂ ಇಂಡಿಯಾ, ನ್ಯೂಜಿಲೆಂಡ್ ತಂಡವನ್ನು ಮಣಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಲು ಸಜ್ಜಾಗಿದೆ ನಿಂತಿದೆ. ಉಭಯ ತಂಡಗಳ ನಡುವಿನ ಈ ಫೈನಲ್ ಕಾಳಗ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣವಾದ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ (Narendra Modi Stadium) ನಡೆಯಲಿದೆ. ಟೀಂ ಇಂಡಿಯಾಕ್ಕೆ ತವರಿನ ಲಾಭ ಸಿಗುವ ಸಾಧ್ಯತೆಗಳು ಹೆಚ್ಚಿದ್ದರೂ ಅಭಿಮಾನಿಗಳಿಗೆ 2023 ರ ಆ ಫೈನಲ್ ಸೋಲು ಆತಂಕವನ್ನುಂಟು ಮಾಡಿದೆ. ಆದಾಗ್ಯೂ ಮೋದಿ ಮೈದಾನದಲ್ಲಿ ಭಾರತದ ದಾಖಲೆ ಉತ್ತಮವಾಗಿದ್ದು, ಟ್ರೋಫಿ ಗೆಲ್ಲುವ ಫೇವರೇಟ್ ಎನಿಸಿಕೊಂಡಿದೆ.

ಮೋದಿ ಮೈದಾನದಲ್ಲಿ ಭಾರತದ ದಾಖಲೆ ಹೇಗಿದೆ?

ಮೋದಿ ಮೈದಾನದಲ್ಲಿ ಭಾರತದ ಒಟ್ಟಾರೆ ಟಿ20 ದಾಖಲೆಯನ್ನು ನೋಡುವುದಾದರೆ.. ಈ ಮೈದಾನದಲ್ಲಿ ಭಾರತ ತಂಡವು ಇದುವರೆಗೆ ಒಟ್ಟು 10 ಟಿ20 ಪಂದ್ಯಗಳನ್ನು ಆಡಿದೆ. ಅವುಗಳಲ್ಲಿ ಏಳು ಪಂದ್ಯಗಳನ್ನು ಗೆದ್ದಿರುವ ಭಾರತ ತಂಡ ಮೂರು ಪಂದ್ಯಗಳಲ್ಲಿ ಸೋತಿದೆ. ಹಾಗೆಯೇ 2021 ರಿಂದ ಈ ಕ್ರೀಡಾಂಗಣದಲ್ಲಿ ಭಾರತ ತಂಡ ಕೇವಲ ಮೂರು ಪಂದ್ಯಗಳಲ್ಲಿ ಸೋತಿದೆ. ಇದರ ಜೊತೆಗೆ ಈ ಟಿ20 ವಿಶ್ವಕಪ್‌ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಲ್ಲಿಯವರೆಗೆ ಆರು ಪಂದ್ಯಗಳು ನಡೆದಿವೆ.

ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ತಂಡಗಳು ಮೂರು ಪಂದ್ಯಗಳನ್ನು ಗೆದ್ದಿದ್ದರೆ, ಬೆನ್ನಟ್ಟಿದ ತಂಡಗಳು ಎರಡರಲ್ಲಿ ಗೆದ್ದಿವೆ. ಉಳಿದಂತೆ ಒಂದು ಪಂದ್ಯ ಟೈ ಆಗಿತ್ತು. ಇನ್ನು ಈ ಮೈದಾನದಲ್ಲಿ ನ್ಯೂಜಿಲೆಂಡ್ ತಂಡದ ದಾಖಲೆಯನ್ನು ನೋಡುವುದಾದರೆ.. ಎರಡು ಪಂದ್ಯಗಳನ್ನು ಆಡಿರುವ ಕಿವೀಸ್ ಎರಡರಲ್ಲೂ ಸೋಲು ಕಂಡಿದೆ. ಹೀಗಾಗಿ ಮೋದಿ ಮೈದಾನದಲ್ಲಿ ಮೇಲುಗೈ ಸಾಧಿಸಿರುವ ಟೀಂ ಇಂಡಿಯಾಗೆ ಅಂಕಿ ಅಂಶಗಳು ಪೂರಕವಾಗಿವೆ.

ಈ ವಿಶ್ವಕಪ್​ನಲ್ಲಿ ಭಾರತದ ದಾಖಲೆ

ಈ ವಿಶ್ವಕಪ್​ನಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾ ಎರಡು ಪಂದ್ಯಗಳನ್ನು ಆಡಿದೆ. ಇದರಲ್ಲಿ ಒಂದು ಪಂದ್ಯವನ್ನು ಗೆದ್ದಿದ್ದು, ಒಂದು ಪಂದ್ಯದಲ್ಲಿ ಸೋತಿದೆ. ಸೂಪರ್ 8 ಸುತ್ತಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇದೇ ಮೈದಾನದಲ್ಲಿ ಪಂದ್ಯವನ್ನಾಡಿದ್ದ ಭಾರತ, ಹೀನಾಯ ಸೋಲು ಕಂಡಿತ್ತು. ಇದು ಟೀಂ ಇಂಡಿಯಾ ಅಭಿಮಾನಿಗಳನ್ನು ಆತಂಕಕ್ಕೆ ದೂಡಿದೆ. ಆದ್ದರಿಂದ ಕಳೆದ ಸೋಲಿನ ಕಹಿಯನ್ನು ಮರೆತು ಟೀಂ ಇಂಡಿಯಾ ಈ ಪಂದ್ಯಕ್ಕೀಳಿಯಬೇಕಾಗಿದೆ.

T20 World Cup 2026: ಈ ನಾಲ್ಕು ಕಾಕತಾಳೀಯಗಳು ಭಾರತವೇ ಚಾಂಪಿಯನ್ ಎನ್ನುತ್ತಿವೆ

ಕಿವೀಸ್ ವಿರುದ್ಧ ಭಾರತದ ದಾಖಲೆ

ಇನ್ನು ಟಿ20 ವಿಶ್ವಕಪ್ ಇತಿಹಾಸದಲ್ಲಿ ಉಭಯ ತಂಡಗಳ ನಡುವಿನ ಮುಖಾಮುಖಿ ದಾಖಲೆಗಳ ಬಗ್ಗೆ ಹೇಳುವುದಾದರೆ.. ಈ ಎರಡು ತಂಡಗಳು ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರು ಬಾರಿ ಮುಖಾಮುಖಿಯಾಗಿವೆ. ದುರಾದೃಷ್ಟಕರ ಸಂಗತಿಯೆಂದರೆ ಈ ಮೂರು ಪಂದ್ಯಗಳಲ್ಲೂ ಭಾರತ ಸೋತಿದೆ. ಈ ಒಂದು ಅಂಕಿಅಂಶ ನ್ಯೂಜಿಲೆಂಡ್ ಪರವಾಗಿದ್ದರೂ, ಟೀಂ ಇಂಡಿಯಾ ಸೋಲಿನ ಸರಣಿಯನ್ನು ಮುರಿದು ಇತಿಹಾಸ ನಿರ್ಮಿಸುವ ತವಕದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಿಡುಗಡೆ ಆಯ್ತು ‘ಲವ್ ಮಾಕ್ಟೆಲ್ 3’ ಟ್ರೈಲರ್: ಇದು ಕೊನೆಯ ಕತೆ

ಡಾರ್ಲಿಂಗ್ ಕೃಷ್ಣ (Darling Krishna) ನಟಿಸಿ, ನಿರ್ದೇಶನ ಮಾಡಿರುವ ‘ಲವ್ ಮಾಕ್ಟೆಲ್ 3’ ಸಿನಿಮಾದ ಟ್ರೈಲರ್ ಇಂದು (ಮಾರ್ಚ್ 07) ಬಿಡುಗಡೆ ಆಗಿದೆ. 2020 ರಲ್ಲಿ ಬಿಡುಗಡೆ ಆದ ‘ಲವ್ ಮಾಕ್ಟೆಲ್’ ಸಿನಿಮಾದ ಕತೆಯನ್ನು ಎಳೆಯುತ್ತಾ, ಹಿಂಜುತ್ತಾ ಇದೀಗ ‘ಲವ್ ಮಾಕ್ಟೆಲ್ 3’ ವರೆಗೂ ಬಂದಿದ್ದು, ಟ್ರೇಲರ್​​ನಲ್ಲೇ ಡಾರ್ಲಿಂಗ್ ಕೃಷ್ಣ ಅವರು ಹೇಳಿರುವಂತೆ ಇದು ‘ಲವ್ ಮಾಕ್ಟೆಲ್ 3’ ಸಿನಿಮಾದ ಅಂತಿಮ ಕತೆ ಆಗಿರಲಿದೆ. ‘ಲವ್ ಮಾಕ್ಟೆಲ್ 3’ ಸಿನಿಮಾ ಮೂಲಕ ‘ಲವ್ ಮಾಕ್ಟೆಲ್’ ಸರಣಿಗೆ ಸಮಾಪ್ತಿ ಹಾಡುತ್ತಿದ್ದಾರೆ ಡಾರ್ಲಿಂಗ್ ಕೃಷ್ಣ.

ಇದೀಗ ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ‘ಲವ್ ಮಾಕ್ಟೆಲ್’ ಸರಣಿಯ ಮೊದಲೆರಡು ಸಿನಿಮಾಗಳ ಹಲವು ದೃಶ್ಯಗಳಿಗೆ ಮೊದಲು ತೋರಿಸಲಾಗಿದ್ದು, ಪ್ರೇಕ್ಷಕರಿಗೆ ಕತೆಯನ್ನು ರೀಕಾಲ್ ಮಾಡಲಾಗಿದೆ. ಚಿತ್ರಮಂದಿರಕ್ಕೆ ಹೋಗುವ ಮುಂಚೆಯೇ ಪ್ರೇಕ್ಷಕರನ್ನು ಟ್ರೈಲರ್ ಮೂಲಕ ಸಜ್ಜುಗೊಳಿಸಿದ್ದಾರೆ ಡಾರ್ಲಿಂಗ್ ಕೃಷ್ಣ. ‘ಲವ್ ಮಾಕ್ಟೆಲ್ 2’ ಸಿನಿಮಾನಲ್ಲಿ ಸಣ್ಣ ಮಗುವೊಂದನ್ನು ನಾಯಕ ದತ್ತು ಪಡೆವ ಮೂಲಕ ಸಿನಿಮಾ ಅಂತ್ಯವಾಗಿತ್ತು.

‘ಲವ್ ಮಾಕ್ಟೆಲ್ 3’ ಸಿನಿಮಾನಲ್ಲಿ ಆ ಪುಟ್ಟ ಹುಡುಗಿಯದ್ದೇ ಕತೆ ಇದೆ. ಬಿಡುಗಡೆ ಆಗಿರುವ ಟ್ರೈಲರ್​​ನಲ್ಲಿ ಹೊಸ ಸಿನಿಮಾದ ಗುಟ್ಟುಗಳನ್ನು ಹೆಚ್ಚಾಗಿ ಬಿಟ್ಟುಕೊಡಲಾಗಿಲ್ಲ, ಆದರೆ ಆ ಪುಟ್ಟ ಬಾಲಕಿಯನ್ನು ಹೆಚ್ಚು ಫೋಕಸ್ ಮಾಡಲಾಗಿದೆ. ಆದರೆ ಬಂದು ಹೋಗುವ ನಾಯಕಿಯರು, ಲವ್ ಸ್ಟೋರಿ ಇನ್ನಿತರೆಗಳ ಬಗ್ಗೆ ಹೆಚ್ಚು ಸುಳಿವು ಬಿಟ್ಟುಕೊಡಲಾಗಿಲ್ಲ. ಆದರೆ ಇದು ಸಹ ನವಿರಾದ, ಭಾವಕ ಕತೆಯನ್ನು ಹೊಂದಿರುವುದಂತೂ ಖಾತ್ರಿ.

ಇದನ್ನೂ ಓದಿ:ಈ ಬಾರಿ ನಾನು ಡಾರ್ಲಿಂಗ್ ಕೃಷ್ಣನ ಬಿಟ್ಟು ಹೋಗಲ್ಲ: ಅಮೃತಾ ಅಯ್ಯಂಗಾರ್

‘ಲವ್ ಮಾಕ್ಟೆಲ್ 3’ ಸಿನಿಮಾವನ್ನು ಡಾರ್ಲಿಂಗ್ ಕೃಷ್ಣ ನಿರ್ದೇಶನ ಮಾಡಿದ್ದು, ಡಾರ್ಲಿಂಗ್ ಕೃಷ್ಣ ಮತ್ತು ಅವರ ಪತ್ನಿ ಮಿಲನಾ ನಾಗರಾಜ್ ಅವರು ಒಟ್ಟಿಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಕ್ಯಾಮೆರಾ ಕೆಲಸ, ಎಡಿಟರ್ ಮಾಡಿರುವುದು ಶ್ರೀ ಕ್ರೇಜಿ ಮೈಂಡ್. ಸಿನಿಮಾನಲ್ಲಿ ಡಾರ್ಲಿಂಗ್ ಕೃಷ್ಣ, ಸಮೃತ್ಥ, ಮಿಲನಾ ನಾಗರಾಜ್, ದಿಲೀಪ್ ರಾಜ್, ಶ್ವೇತ ಪ್ರಸಾದ್ ಇನ್ನೂ ಹಲವರು ನಟಿಸಿದ್ದಾರೆ. ಸಿನಿಮಾಕ್ಕೆ ಸಂಗೀತ ನೀಡಿರುವುದು ನಕುಲ್ ಅಭಯಂಕರ್. ಸಿನಿಮಾ ಮಾರ್ಚ್ 19ಕ್ಕೆ ಬಿಡುಗಡೆ ಆಗುತ್ತಿದೆ. ‘ಟಾಕ್ಸಿಕ್’ ಮುಂದೂಡಲ್ಪಟ್ಟಿದ್ದರಿಂದ ದೊರೆತ ಅವಕಾಶವನ್ನು ಬಾಚಿಕೊಂಡಿದ್ದಾರೆ ಡಾರ್ಲಿಂಗ್ ಕೃಷ್ಣ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

“ಮಧ್ಯಪ್ರಾಚ್ಯದ ಸೋಲೊಪ್ಪಿದ ರಾಷ್ಟ್ರ”: ಇಂದೇ ಆಗುತ್ತ ಇರಾನ್​​​ನ ಸರ್ವನಾಶ? ಮಹತ್ವದ ಹೇಳಿಕೆ ನೀಡಿದ ಟ್ರಂಪ್

ವಾಷಿಂಗ್ಟನ್ ಮಾ.7: ಇಸ್ರೇಲ್ ಮತ್ತು ಅಮೆರಿಕದ ದಾಳಿಯಿಂದ ಜರ್ಜರಿತವಾಗಿರುವ ಇರಾನ್ ಅನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ “ಮಧ್ಯಪ್ರಾಚ್ಯದ ಸೋಲೊಪ್ಪಿದ ರಾಷ್ಟ್ರ” (Loser of the Middle East) ಎಂದು ಲೇವಡಿ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಇಂದು (ಮಾರ್ಚ್ 7) ಇರಾನ್ ಮೇಲೆ “ಅತ್ಯಂತ ಭೀಕರ ದಾಳಿ” ನಡೆಯಲಿದೆ ಎಂದು ಅವರು ಎಚ್ಚರಿಸಿದ್ದಾರೆ.

“ನರಕದಂತೆ ಹೊಡೆತ ತಿಂದಿರುವ ಇರಾನ್, ಈಗ ನೆರೆರಾಷ್ಟ್ರಗಳ ಕ್ಷಮೆಯಾಚಿಸಿ ಶರಣಾಗಿದೆ. ಅಮೆರಿಕ ಮತ್ತು ಇಸ್ರೇಲ್‌ನ ನಿರಂತರ ದಾಳಿಯಿಂದಾಗಿ ಮಾತ್ರ ಇರಾನ್ ಈ ಭರವಸೆ ನೀಡಿದೆ,” ಎಂದು ಟ್ರಂಪ್ ಬರೆದಿದ್ದಾರೆ. ಇರಾನ್ ಇನ್ನು ಮುಂದೆ ಮಧ್ಯಪ್ರಾಚ್ಯದ ದಬಾಯಿಸುವ ರಾಷ್ಟ್ರವಾಗಿ ಉಳಿದಿಲ್ಲ, ಅದು ಸಂಪೂರ್ಣವಾಗಿ ಕುಸಿಯುವವರೆಗೂ ‘ಲೂಸರ್’ ಆಗಿಯೇ ಇರಲಿದೆ ಎಂದು ಟ್ರಂಪ್ ಕಿಚಾಯಿಸಿದ್ದಾರೆ.

ಶುಕ್ರವಾರವಷ್ಟೇ ಇರಾನ್ ಮುಂದೆ ಕಠಿಣ ಷರತ್ತು ವಿಧಿಸಿದ್ದ ಟ್ರಂಪ್, “ಬೇಷರತ್ ಶರಣಾಗತಿ” ಮಾತ್ರ ಯುದ್ಧ ಅಂತ್ಯಕ್ಕೆ ಇರುವ ಏಕೈಕ ದಾರಿ ಎಂದಿದ್ದಾರೆ.ಇರಾನ್ ಶರಣಾಗಿ ಹೊಸ ನಾಯಕತ್ವವನ್ನು ಒಪ್ಪಿಕೊಂಡರೆ, ಆ ದೇಶದ ಆರ್ಥಿಕತೆಯನ್ನು ಮತ್ತೆ ಕಟ್ಟಲು ಅಮೆರಿಕ ಸಹಾಯ ಮಾಡಲಿದೆ ಎಂಬ ಆಮಿಷವನ್ನೂ ಒಡ್ಡಿದ್ದಾರೆ.ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ನೆರೆರಾಷ್ಟ್ರಗಳ ಕ್ಷಮೆ ಕೇಳಿದ್ದರೂ, “ಶರಣಾಗತಿಯ ಕನಸನ್ನು ಶತ್ರುಗಳು ತಮ್ಮ ಸಮಾಧಿಗೆ ತೆಗೆದುಕೊಂಡು ಹೋಗಲಿ” ಎಂದು ಹೇಳುವ ಮೂಲಕ ಶರಣಾಗತಿಯನ್ನು ನಿರಾಕರಿಸಿದ್ದಾರೆ.

ಇದನ್ನೂ ಓದಿ: ನಮ್ಮನ್ನು ಕ್ಷಮಿಸಿ: ಮುಂದೆ ಈ ತಪ್ಪು ನಡೆಯುವುದಿಲ್ಲ, ಆದರೆ ಈ ದೇಶಗಳನ್ನು ಬಿಡುವುದಿಲ್ಲ ಎಂದ ಇರಾನ್

ಶನಿವಾರ ಬೆಳಿಗ್ಗೆ ದುಬೈನಲ್ಲಿ ಭಾರಿ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ಯುಎಇ ವಾಯು ರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸಿದೆ. ವಿಶ್ವದ ಅತ್ಯಂತ ಜನನಿಬಿಡ ದುಬೈ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಸುರಕ್ಷಿತ ಸುರಂಗಗಳಿಗೆ ಸ್ಥಳಾಂತರಿಸಲಾಗಿದೆ.

ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

‘ಧುರಂಧರ್ 2’ ಅಡ್ವಾನ್ಸ್ ಬುಕಿಂಗ್: ಬೆಂಗಳೂರಿನಲ್ಲಿ ಗಗನಕ್ಕೇರಿದ ಟಿಕೆಟ್ ಬೆಲೆ

ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್ 2’ ಸಿನಿಮಾದ ಟ್ರೈಲರ್ ಇಂದಷ್ಟೆ ಬಿಡುಗಡೆ ಆಗಿದೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗಲಿದ್ದು, ಹಿಂದಿ ಮಾತ್ರವೇ ಅಲ್ಲದೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಬರಲಿದೆ. ಸಿನಿಮಾದ ಅಡ್ವಾನ್ಸ್ ಬುಕಿಂಗ್ ಇಂದಿನಿಂದಲೇ ಆರಂಭವಾಗಿದ್ದು, ದೇಶದ ನಾನಾ ನಗರಗಳಲ್ಲಿ ಮಲ್ಟಿಪ್ಲೆಕ್ಸ್​ ಮತ್ತು ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಸಹ ಅಡ್ವಾನ್ಸ್ ಬುಕಿಂಗ್ ಆರಂಭವಾಗಿದೆ. ಬೆಂಗಳೂರಿನಲ್ಲಂತೂ ಟಿಕೆಟ್ ಬೆಲೆ ಗಗನಕ್ಕೇರಿ ನಿಂತಿವೆ. ‘ಧುರಂಧರ್ 2’ ಸಿನಿಮಾಕ್ಕೆ ಇರುವ ಬೇಡಿಕೆಯನ್ನು ಲಾಭವನ್ನಾಗಿ ಬದಲಾವಣೆ ಮಾಡಿಕೊಳ್ಳಲು ಟೊಂಕ ಕಟ್ಟಿ ನಿಂತಿದ್ದಂತಿದೆ.

‘ಧುರಂಧರ್ 2’ ಸಿನಿಮಾ ಒಂದು ದಿನ ಮುಂಚಿತವಾಗಿ ಅಂದರೆ ಮಾರ್ಚ್ 18ರಂದು ಪ್ರೀಮಿಯರ್ ಶೋ ಆಯೋಜಿಸುತ್ತಿದ್ದು, ಬೆಂಗಳೂರಿನಲ್ಲಿ ಈ ಪ್ರೀಮಿಯರ್ ಶೋ ಟಿಕೆಟ್ ಬೆಲೆಗಳು ಬಲು ದುಬಾರಿಯಾಗಿದೆ. ಮಲ್ಟಿಪ್ಲೆಕ್ಸ್​​ಗಳಲ್ಲಿ ತೋಚಿದ ಬೆಲೆಯನ್ನು ಟಿಕೆಟ್​​ಗಳಿಗೆ ನಿಗದಿಪಡಿಸಲಾಗಿದೆ. 2500 ರೂಪಾಯಿ ಒಂದೆಡೆ ಇದ್ದರೆ, ಇನ್ನೊಂದೆಡೆ 1800 ರೂಪಾಯಿಗಳಿವೆ. 1500, 1200 ಹೀಗೆ ಒಂದೊಂದು ಮಲ್ಟಿಪ್ಲೆಕ್ಸ್​​ನಲ್ಲಿ ಒಂದೊಂದು ರೀತಿ ಬೆಲೆಗಳನ್ನು ನಿಗದಿ ಮಾಡಲಾಗಿದ್ದು, ಸಾಮಾನ್ಯ ಶೋಗಿಂತಲೂ ನಾಲ್ಕೈದು ಪಟ್ಟು ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗುತ್ತಿದೆ.

ಸಿನೆಪೊಲೀಸ್, ಗೋಪಾಲನ್ ಸಿನಿಮಾಸ್, ಕಿನೊ ಸಿನಿಮಾಸ್ ಇನ್ನಿತರೆ ಸಾಮಾನ್ಯ ಮಲ್ಟಿಪ್ಲೆಕ್ಸ್​​ಗಳಲ್ಲಿ ಸಹ 700 ರೂಪಾಯಿ ಟಿಕೆಟ್ ಬೆಲೆ ಇದೆ. ಅತಿ ಹೆಚ್ಚು ಬೆಲೆ ಇರುವುದು ಫೋರಂನ ಪಿವಿಆರ್ ಡೈರೆಕ್ಟರ್ಸ್ ಕಟ್​​ನಲ್ಲಿ ಇಲ್ಲಿ ಒಂದು ‘ಧುರಂಧರ್ 2’ ಸಿನಿಮಾದ ಟಿಕೆಟ್ ಬೆಲೆ 2500 ರೂಪಾಯಿ. ಬೆಂಗಳೂರಿನಲ್ಲಿ, ಪ್ರೀಮಿಯರ್ ಶೋಗೆ ನಿಗದಿ ಪಡಿಸಲಾಗಿರುವ ಅತಿ ಹೆಚ್ಚು ಬೆಲೆ ಇದೇ ಎನ್ನಬಹುದೇನೊ. ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾದ ಪ್ರೀಮಿಯರ್ ಶೋಗೂ ಸಹ ಇಷ್ಟು ದುಬಾರಿ ಬೆಲೆ ಇರಿಸಲಾಗಿರಲಿಲ್ಲ.

ಹೋಲಿಕೆ ಮಾಡಿ ನೋಡಿದರೆ ಮುಂಬೈಗಿಂತಲೂ ಬೆಂಗಳೂರಿನಲ್ಲಿ ‘ಧುರಂಧರ್ 2’ ಸಿನಿಮಾಕ್ಕೆ ಟಿಕೆಟ್ ಬೆಲೆ ಹೆಚ್ಚು ಇರಿಸಲಾಗಿದೆ. ಮುಂಬೈನಲ್ಲಿಯೂ ಸಹ ಕೆಲ ಮಲ್ಟಿಪ್ಲೆಕ್ಸ್​​ಗಳಲ್ಲಿ ಹೆಚ್ಚಿನ ಬೆಲೆ ಇದೆಯಾದರೂ, ಕಡಿಮೆ ಬೆಲೆಯ ಹಲವಾರು ಮಲ್ಟಿಪ್ಲೆಕ್ಸ್​​ಗಳಿವೆ. ಸರಾಸರಿ ನೋಡಿದಲ್ಲಿ, ಮುಂಬೈಗಿಂತಲೂ ಬೆಂಗಳೂರಿನಲ್ಲಿ ‘ಧುರಂಧರ್ 2’ ಸಿನಿಮಾ ಪ್ರೀಮಿಯರ್ ಶೋನ ಟಿಕೆಟ್​ ಬೆಲೆಗಳು ಹೆಚ್ಚಿವೆ. ಅಲ್ಲದೆ, ‘ಧುರಂಧರ್ 2’ ಚಿತ್ರತಂಡ ಸಖತ್ ಪ್ಲ್ಯಾನ್ ಮಾಡಿದ್ದು, ಪ್ರಸ್ತುತ ‘ಧುರಂಧರ್ 2’ ಸಿನಿಮಾ 18ನೇ ಮಾರ್ಚ್​​ನ ಟಿಕೆಟ್​​ಗಳ ಮುಂಗಡ ಬುಕಿಂಗ್ ಮಾತ್ರವೇ ರಿಲೀಸ್ ಮಾಡಲಾಗಿದೆ. ಮಾರ್ಚ್ 19ರ ಶೋಗಳ ಮುಂಗಡ ಬುಕಿಂಗ್ ಓಪನ್ ಮಾಡಲಾಗಿಲ್ಲ.

ಇದನ್ನೂ ಓದಿ:‘ಧುರಂಧರ್’ ಬಳಿಕ ಹಾರರ್ ಸಿನಿಮಾಕ್ಕೆ ಕೈ ಹಾಕಿದ ರಣ್ವೀರ್ ಸಿಂಗ್

‘ಧುರಂಧರ್ 2’ ಸಿನಿಮಾನಲ್ಲಿ ರಣ್ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ ಇನ್ನೂ ಹಲವರು ನಟಿಸಿದ್ದು, ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ಕಳೆದ ವರ್ಷ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಇದೀಗ ಸಿನಿಮಾದ ಎರಡನೇ ಭಾಗ ಮಾರ್ಚ್ 19ರಂದು ಬಿಡುಗಡೆ ಆಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ಈ ನಾಲ್ಕು ಕಾಕತಾಳೀಯಗಳು ಭಾರತವೇ ಚಾಂಪಿಯನ್ ಎನ್ನುತ್ತಿವೆ

Source link

ರಿಫೈನರಿಯ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂಬ ವದಂತಿಗೆ ಬ್ರೇಕ್ ಹಾಕಿದ ಎಮ್​ಆರ್​ಪಿಎಲ್!

ಮಂಗಳೂರು, ಮಾರ್ಚ್​ 07: ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ತನ್ನ ರಿಫೈನರಿಯ ಕೆಲವು ಘಟಕಗಳನ್ನು ಕಚ್ಚಾ ತೈಲದ ಕೊರತೆಯಿಂದ ಸ್ಥಗಿತಗೊಳಿಸಲಾಗಿದೆ ಎಂಬ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಸಂಪೂರ್ಣವಾಗಿ ತಳ್ಳಿ ಹಾಕಿದೆ. ಕಂಪನಿಯ ಕಾರ್ಯಾಚರಣೆಗಳು ಸಾಮಾನ್ಯವಾಗಿ ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದೆ.

ಸೋಶಿಯಲ್ ಮೀಡಿಯಾ ವದಂತಿ ಸುಳ್ಳು ಎಂದ ರಿಫೈನರಿ

ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ OilPrice.com ಪ್ರಕಟಿಸಿದ ಪೋಸ್ಟ್‌ನಲ್ಲಿ ಪರ್ಷಿಯನ್ ಗಲ್ಪ್ ಪ್ರದೇಶದ ಉದ್ವಿಗ್ನತೆಯಿಂದ ಕಚ್ಚಾ ತೈಲ ಸಾಗಣೆ ವಿಳಂಬವಾಗಿದ್ದು, ಮಂಗಳೂರಿನ 3 ಲಕ್ಷ ಬ್ಯಾರೆಲ್ ಸಾಮರ್ಥ್ಯದ ರಿಫೈನರಿಯ ಕೆಲವು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿತ್ತು. ಆದರೆ ಈ ಮಾಹಿತಿ ತಪ್ಪಾಗಿದೆ ಎಂದು MRPL ಸ್ಪಷ್ಟಪಡಿಸಿದೆ. ಈ ರೀತಿಯ ವದಂತಿಗಳು ವಾಸ್ತವಕ್ಕೆ ದೂರವಾಗಿದ್ದು, MRPL ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿದೆ. ರಿಫೈನರಿ ಕಾರ್ಯಾಚರಣೆ ಮುಂದುವರಿಸಲು ಬೇಕಾದಷ್ಟು ಕಚ್ಚಾ ತೈಲವನ್ನು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.

ಇನ್ನೂ ರಿಫೈನರಿಯಲ್ಲಿ ಯಾವುದೇ ಘಟಕವನ್ನು ಸ್ಥಗಿತಗೊಳಿಸಲಾಗಿಲ್ಲ ಹಾಗೂ ಸಾಮಾನ್ಯ ಸಾಮರ್ಥ್ಯದಲ್ಲೇ ಕಾರ್ಯನಿರ್ವಹಣೆ ಮುಂದುವರಿದಿದೆ ಎಂದು MRPL ಹೇಳಿದೆ. ತಪ್ಪು ಮಾಹಿತಿಗಳು ಹರಡದಂತೆ ಸಾರ್ವಜನಿಕರು ಈ ಸ್ಪಷ್ಟೀಕರಣವನ್ನು ಗಮನಿಸಬೇಕು ಎಂದು ಕಂಪನಿ ಮನವಿ ಮಾಡಿದೆ. ಇದರ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕೂಡ ತಳ್ಳಿ ಹಾಕಿದೆ.

ಇದನ್ನೂ ಓದಿ ಅಡಿಕೆ ಬೆಳೆಗಾರರಿಗೆ ಬಜೆಟ್​ನಲ್ಲಿ ಶುಭ ಸುದ್ದಿ: ಎಲೆ ಚುಕ್ಕಿ, ಹಳದಿ ಎಲೆ ರೋಗ ನಿಯಂತ್ರಣಕ್ಕೆ 10 ಕೋಟಿ ರೂ.

ದೇಶದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದ್ದು, ಪೂರೈಕೆ ಮತ್ತು ವಿತರಣೆ ವ್ಯವಸ್ಥೆ ಸಾಮಾನ್ಯವಾಗಿ ನಡೆಯುತ್ತಿದೆ ಎಂದು ಕಂಪನಿ ತಿಳಿಸಿದೆ. ಇದೇ ವೇಳೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ಡೀಪ್ ಸಿಂಗ್ ಪುರಿ ಕೂಡ ಜಾಗತಿಕ ಭೌಗೋಳಿಕ ರಾಜಕೀಯ ಸವಾಲುಗಳ ನಡುವೆಯೂ ಭಾರತದಲ್ಲಿ ಇಂಧನ ಸರಬರಾಜಿನಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಪೆಟ್ರೋಲ್ , ಡೀಸೆಲ್ ಬೆಲೆ ಏರಿಕೆ ಆಗುವುದಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

ದೆಹಲಿ ಮಾ.7: ಜಾಗತಿಕ ಮಟ್ಟದಲ್ಲಿ ತೈಲ ಬಿಕ್ಕಟ್ಟು ಮತ್ತು ಯುದ್ಧದ ವಾತಾವರಣವಿದ್ದರೂ, ಭಾರತದ ಇಂಧನ ದಾಸ್ತಾನು ಸ್ಥಿತಿ ಸುಧಾರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸುವ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ಅಧಿಕೃತ ಮೂಲಗಳು ಪುನರುಚ್ಚರಿಸಿವೆ. ಈ ಬಗ್ಗೆ ಎಎನ್​​​ಐ ಎಕ್ಸ್​​​ನಲ್ಲಿ ಹೇಳಿಕೊಂಡಿದೆ. ಭಾರತದ ಇಂಧನ ಸಂಗ್ರಹಣಾ ಸಾಮರ್ಥ್ಯ ಮತ್ತು ಲಭ್ಯತೆ ಉತ್ತಮಗೊಳ್ಳುತ್ತಿದೆ. ಇದು ಸರ್ಕಾರಕ್ಕೆ ಹೆಚ್ಚಿನ ಆತ್ಮವಿಶ್ವಾಸ ನೀಡಿದ್ದು, ಸದ್ಯಕ್ಕೆ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆ ಮಾಡುವ ಅನಿವಾರ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ.

ಪಶ್ಚಿಮ ಏಷ್ಯಾದ ಉದ್ವಿಗ್ನತೆಯಿಂದಾಗಿ ‘ಹಾರ್ಮುಜ್ ಜಲಸಂಧಿ’ (Strait of Hormuz) ಮೂಲಕ ನಡೆಯುತ್ತಿದ್ದ ಕಚ್ಚಾ ತೈಲ ಆಮದಿನ ಮೇಲೆ ಭಾರತ ತನ್ನ ಅವಲಂಬನೆಯನ್ನು ಕಡಿಮೆ ಮಾಡಿಕೊಂಡಿದೆ. ಹಾರ್ಮುಜ್ ಜಲಸಂಧಿಯ ಹೊರತಾದ ಇತರ ಮೂಲಗಳಿಂದ ಆಮದು ಮಾಡಿಕೊಳ್ಳುವ ಪ್ರಮಾಣವನ್ನು ಶೇ. 10ರಷ್ಟು ಹೆಚ್ಚಿಸಲಾಗಿದೆ. ಈ ಮೊದಲು ಶೇ. 60ರಷ್ಟಿದ್ದ ಈ ಪ್ರಮಾಣವು ಈಗ ಶೇ. 70ಕ್ಕೆ ಏರಿಕೆಯಾಗಿದೆ. ಇದು ಇಂಧನ ಪೂರೈಕೆಯಲ್ಲಿ ಸ್ಥಿರತೆ ಕಾಪಾಡಲು ಸಹಕಾರಿಯಾಗಿದೆ.

ಇದನ್ನೂ ಓದಿ: ಎಲ್​ಪಿಜಿ ಸಿಲಿಂಡರ್ ದರ ದಿಢೀರ್ ಏರಿಕೆ, ಗ್ರಾಹಕರಿಗೆ ಬಿಗ್ ಶಾಕ್

ಇಲ್ಲಿದೆ ನೋಡಿ ಎಕ್ಸ್​​​ ಪೋಸ್ಟ್​​:

ಎಲ್‌ಪಿಜಿ (LPG) ಬೆಲೆ ಏರಿಕೆಯಾಗಲಿದೆ ಎಂಬ ಕಾಂಗ್ರೆಸ್ ಪಕ್ಷದ ಆರೋಪಗಳು ಸಂಪೂರ್ಣ ಆಧಾರರಹಿತ ಎಂದು ಸರ್ಕಾರಿ ಮೂಲಗಳು ಹೇಳಿವೆ.ಬೆಲೆ ಸ್ಥಿರತೆಯ ಭರವಸೆಯನ್ನು ಕೇವಲ ಪೆಟ್ರೋಲ್ ಮತ್ತು ಡೀಸೆಲ್ ದರಗಳಿಗೆ ಸಂಬಂಧಿಸಿದಂತೆ ನೀಡಲಾಗಿತ್ತು, ಅದನ್ನು ಎಲ್‌ಪಿಜಿಗೆ ತಳುಕು ಹಾಕುವುದು ತಪ್ಪು. ಇಂದಿಗೂ ನಾವು ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಸುವುದಿಲ್ಲ ಎಂದು ಮತ್ತೊಮ್ಮೆ ಭರವಸೆ ನೀಡುತ್ತಿದ್ದೇವೆ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಮಿಥುನ ರಾಶಿಗೆ ಈ ವರ್ಷ ಹೇಗಿರಲಿದೆ ಗೊತ್ತಾ?

2026ರ ಯುಗಾದಿ, ಪರಾಭವ ನಾಮ ಸಂವತ್ಸರದಲ್ಲಿ ಮಿಥುನ ರಾಶಿಯವರ ಭವಿಷ್ಯವನ್ನು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿಯವರು ವಿಶ್ಲೇಷಿಸಿದ್ದಾರೆ. ಈ ವರ್ಷದಲ್ಲಿ ಮಿಥುನ ರಾಶಿಯವರಿಗೆ ಗುರು, ಶನಿ, ರಾಹು ಮತ್ತು ಕೇತು ಗ್ರಹಗಳ ಸಂಚಾರವು ವಿವಿಧ ಫಲಗಳನ್ನು ತರಲಿದೆ. ಆದಾಯ 8 ಮತ್ತು ವ್ಯಯ 10 ಆಗಿದ್ದು, ಖರ್ಚು ಸ್ವಲ್ಪ ಹೆಚ್ಚಾಗಬಹುದು. ಆರೋಗ್ಯ ಉತ್ತಮವಾಗಿದ್ದು, ಸುಖ-ದುಃಖದ ಪ್ರಮಾಣ 8:2 ಇರಲಿದೆ.

ದೈವಾನುಕೂಲದಿಂದ ಕೆಲಸ ಕಾರ್ಯಗಳಲ್ಲಿ ಶುಭ ಫಲಗಳ ನಿರೀಕ್ಷೆಯಿದೆ. ಶನಿ ಗ್ರಹವು ಮಿಶ್ರಫಲ ನೀಡಲಿದ್ದು, ಉದ್ಯೋಗದಲ್ಲಿ ಬದಲಾವಣೆ, ಸ್ಥಾನಪಲ್ಲಟ ಮತ್ತು ಆರ್ಥಿಕ ಆದಾಯದ ಜೊತೆ ಖರ್ಚುಗಳು ಸಹ ಇರುತ್ತವೆ. ಮೇ ನಂತರ ಬಹಳಷ್ಟು ಶುಭ ಫಲಗಳು ಗೋಚರಿಸಲಿವೆ. ಮಕ್ಕಳ ಏಳಿಗೆ, ಮಡದಿಯ ಉದ್ಯೋಗದಲ್ಲಿ ಬದಲಾವಣೆ ಮತ್ತು ವಾಹನ ಯೋಗ ಉತ್ತಮವಾಗಿದೆ. ಹೊಸ ಹೂಡಿಕೆಗಳು, ರಾಜಕೀಯ ಪ್ರಗತಿ, ಮತ್ತು ದಾಂಪತ್ಯದಲ್ಲಿ ಅನ್ಯೋನ್ಯತೆ ಮೂಡಲಿದೆ. ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ದೊರೆಯಲಿದೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸುವುದು ಉತ್ತಮ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

3 ದಿನದಿಂದ ಒಂದೇ ಸಾಂಬಾರು, ಗಂಡನ ಬೈಗುಳಕ್ಕೆ ದುರಂತ ಅಂತ್ಯಕಂಡ ಬೆಂಗಳೂರಿನ ಮಹಿಳೆ

ಬೆಂಗಳೂರು, (ಮಾರ್ಚ್ 07) : ಕ್ಷುಲ್ಲಕ ಕಾರಣಕ್ಕೆ ದಂಪತಿ ನಡುವೆ ನಡೆದ ಜಗಳವೊಂದು ಅಂತಿಮವಾಗಿ ಗೃಹಿಣಿಯೊಬ್ಬರ ಸಾವಿನಲ್ಲಿ ಅಂತ್ಯವಾಗಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನಡೆದಿದೆ. ಮೂರು ದಿನದ ಹಳೇ ಸಾಂಬಾರ್ ಬಡಿಸಿದ ವಿಚಾರಕ್ಕೆ ಪತಿ ಕಿರಿಕ್ ತೆಗೆದಿದ್ದರಿಂದ ಮನನೊಂದ ಪತ್ನಿ ವಿಷ ಸೇವಿಸಿ ಪ್ರಾಣಬಿಟ್ಟಿದ್ದಾಳೆ. ಮೃತ ಮಹಿಳೆಯನ್ನು ಕಾವ್ಯ (27) ಎಂದು ಗುರುತಿಸಲಾಗಿದೆ. ಈಕೆ ಕಳೆದ ಐದು ವರ್ಷಗಳ ಹಿಂದೆ ರಂಗಸ್ವಾಮಿ ಎಂಬುವವರನ್ನು ಮದುವೆಯಾಗಿದ್ದು, ಇವರಿಗೆ ನಾಲ್ಕು ವರ್ಷದ ಒಂದು ಮಗುವಿದೆ. ಆದ್ರೆ, ಇದೀಗ ತಾಯಿಯನ್ನು ಕಳೆದುಕೊಂಡ ಮಗು ಅನಾಥವಾಗಿದೆ.

ಪತಿಗೆ ಕಳೆದ ಮೂರು ದಿನಗಳಿಂದ ಒಂದೇ ಸಾಂಬಾರು ಬಡಿಸಿದ್ದಾಳೆ. ಫ್ರಿಡ್ಜ್‌ನಲ್ಲಿಟ್ಟು ತೆಗೆದು ಬಿಸಿ ಮಾಡಿ ಅದೇ ಸಾರನನ್ನು ಮೂರು ದಿನದಿಂದ ಬಡಿಸಿದ್ದಾಳೆ. ಎರಡು ದಿನ ಸಹಿಸಿಕೊಂಡ ಗಂಡ ಮೂರನೇ ದಿನ ಆಕ್ರೋಶಗೊಂಡಿದ್ದು, ಮೂರು ದಿನದ ಹಿಂದಿನ ಸಾರನ್ನು ಬಡಿಸುತ್ತಿದ್ದಿಯಾ ಎಂದು ಪತ್ನಿ ವಿರುದ್ದ ಜಗಳಕ್ಕೆ ನಿಂತಿದ್ದಾನೆ. ಅಲ್ಲದೇ ಪತ್ನಿಗೆ ಹಿಗ್ಗಾಮುಗ್ಗ ಬೈದಿದ್ದಾನೆ. ಪತಿಯ ಆಕ್ರೋಶಭರಿತ ಬೈಗುಳಕ್ಕೆ ನೊಂದ ಪತ್ನಿ ಬದುಕನ್ನೇ ಅಂತ್ಯಗೊಳಿಸಿದ್ದಾಳೆ.

ಇದನ್ನೂ ಓದಿ: 3ನೇ ಮದ್ವೆ ಆಸೆಗೆ 2ನೇ ಗಂಡನಿಗೆ ಪರಲೋಕದ ದಾರಿ: ತನಿಖೆಯಲ್ಲಿ ಬಯಲಾಯ್ತು ಖತರ್ನಾಕ್ ಸ್ಟೋರಿ

ಪತಿಯ ನಿಂದನೆ ಹಾಗೂ ಹಲ್ಲೆಯ ಯತ್ನದಿಂದ ತೀವ್ರವಾಗಿ ಮನನೊಂದ ಕಾವ್ಯ ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ. ಕಾವ್ಯ ವಾಂತಿ ಮಾಡಿಕೊಳ್ಳುತ್ತಿರುವುದನ್ನು ಗಮನಿಸಿದ ಕುಟುಂಬ ಸದಸ್ಯರು ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದ್ದಾರೆ. ಮಾರ್ಗಮಧ್ಯದಲ್ಲೇ ಕಾವ್ಯ ಕೊನೆಯುಸಿರೆಳೆದಿದ್ದಾರೆ.

ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ರಂಗಸ್ವಾಮಿ ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಲೋಕಸಭೆ ಸ್ಪೀಕರ್ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಿದ್ಧತೆ: ಓಂ ಬಿರ್ಲಾ ಬಗ್ಗೆ ಮೋದಿ ಹೇಳಿದ್ದಿಷ್ಟು

ದೆಹಲಿ, ಮಾ.7: ಲೋಕಸಭೆಯ ಸಭಾಪತಿ ಓಂ ಬಿರ್ಲಾ ಅವರ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯದ (Opposition sponsored motion) ಕುರಿತು ನಾಳೆ (ಮಾ.8) ಸದನದಲ್ಲಿ ಮಹತ್ವದ ಚರ್ಚೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಓಂ ಬಿರ್ಲಾ ಅವರ ಕಾರ್ಯವೈಖರಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಓಂ ಬಿರ್ಲಾ ಅವರು ಎಷ್ಟು ಅದ್ಭುತ ಸಂಸದರೋ ಅಷ್ಟೇ ಸಮರ್ಥ ಸಭಾಪತಿಯೂ ಆಗಿದ್ದಾರೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಅವರು ದೇಶದ ಸಂವಿಧಾನಕ್ಕೆ ಸಂಪೂರ್ಣವಾಗಿ ಸಮರ್ಪಿತರಾಗಿದ್ದಾರೆ ಮತ್ತು ಸಂಸದೀಯ ವ್ಯವಸ್ಥೆಗಳ ಬಗ್ಗೆ ಅಪಾರ ಗೌರವ ಹೊಂದಿದ್ದಾರೆ. ಓಂ ಬಿರ್ಲಾ ಅವರು ಯಾವುದೇ ಒಂದು ಪಕ್ಷಕ್ಕೆ ಸೀಮಿತರಾಗಿಲ್ಲ. ಅವರು ಪಕ್ಷ ಮತ್ತು ಪ್ರತಿಪಕ್ಷಗಳಿಗಿಂತಲೂ ಮಿಗಿಲಾದ ಜವಾಬ್ದಾರಿಯನ್ನು ಅತ್ಯಂತ ಪಾರದರ್ಶಕವಾಗಿ ನಿಭಾಯಿಸುತ್ತಿದ್ದಾರೆ. ಎಷ್ಟೇ ಕಠಿಣ ಮಾತುಗಳು ಕೇಳಿಬಂದರೂ ಓಂ ಬಿರ್ಲಾ ಅವರು ಯಾವಾಗಲೂ ಮುಗುಳ್ನಗುತ್ತಲೇ ಇರುತ್ತಾರೆ. ಇಂತಹ ಹಿರಿಯ ಮುಖಂಡನ ವರ್ತನೆಯು ಸದನದ ಘನತೆಯನ್ನು ಹೆಚ್ಚಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ. ಈ ಬಗ್ಗೆ ಪ್ರಧಾನಿ ಮೋದಿ ವಿಡಿಯೋವೊಂದು ಹಂಚಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link