ದಿನ ಭವಿಷ್ಯ: ಇಂದು ಈ ರಾಶಿಯವರ ವಿಶ್ವಾಸ ಅನ್ಯರಿಂದ ತಗ್ಗಲಿದೆ
ಮೇಷ ರಾಶಿ: ಅಧಿಕ ವಿಶ್ವಾಸದಿಂದ ಕಾರ್ಯದ ಹಾನಿಯಾಗಬಹುದು. ಆಪ್ತರನ್ನು ಅಸೂಯೆಯಿಂದ ಕಾಣುವುದು ನಿಮಗೆ ಶೋಭೆ ತರದು. ಕರ್ತವ್ಯಕ್ಕೆ ನಿಮ್ಮ ಮನಸ್ಸನ್ನು ಕೊಟ್ಟುಕೊಳ್ಳುವಿರಿ. ಸಂಗಾತಿಯ ಬಗ್ಗೆ ಸಂಶಯವನ್ನು ಅನ್ಯರ ಬಳಿ ವ್ಯಕ್ತಪಡಿಸಬಹುದು. ಆಲಸ್ಯದ ಪಟ್ಟದಿಂದ ಕೆಳಗಿಳಿಯುವುದು ಅಸಾಧ್ಯ. ಮಕ್ಕಳಿಂದ ನಿಮಗೆ ಧನಪ್ರಾಪ್ತಿಯ ಸಂಭವವಿದೆ. ನಿಮಗೆ ಗೊತ್ತಿರುವುದಷ್ಟೇ ಸತ್ಯವಾಗಿ ಇರದು. ಎಲ್ಲವನ್ನೂ ತಿಳಿದು ಸುಮ್ಮನಿರುವುದೇ ಲೇಸು ಎಂದೆನಿಸುವುದು. ವೃಷಭ ರಾಶಿ: ಉದ್ಯೋಗದ ಕಾರಣಕ್ಕೆ ಇಂದು ನೀವು ಪ್ರಯಾಣವನ್ನು ಮಾಡಬೇಕಾಗುವುದು. ಮಕ್ಕಳಿಂದ ಇಂದು ಹೆಚ್ಚು ನಿರೀಕ್ಷಿಸುವಿರಿ. ನಿಮ್ಮ ಸಂಯಮ ಕೆಡಬಹುದು. ವೃತ್ತಿಯಲ್ಲಿ…