Headlines

IND vs NZ: ಭಾರತ- ನ್ಯೂಜಿಲೆಂಡ್ ಫೈನಲ್ ಕಾಳಗ ಯಾವಾಗ ಎಲ್ಲಿ ಎಷ್ಟು ಗಂಟೆಗೆ ಆರಂಭ?

2026 ರ ಟಿ20 ವಿಶ್ವಕಪ್ ಫೈನಲ್ (T20 World Cup 2026 Final) ಪಂದ್ಯ ಭಾರತ ಮತ್ತು ನ್ಯೂಜಿಲೆಂಡ್ (India vs New Zealand) ನಡುವೆ ನಡೆಯಲಿದೆ. ಈ ಹೈವೋಲ್ಟೇಜ್ ಕದನವನ್ನು ವೀಕ್ಷಿಸಲುನ ಅಭಿಮಾನಿಗಳು ಕೂಡ ಕಾತುರದಿಂದ ಕಾದುಕುಳಿತಿದ್ದಾರೆ. ಆರಂಭದಿಂದಲೂ ಪ್ರಶಸ್ತಿ ಸ್ಪರ್ಧಿ ಎಂದು ಪರಿಗಣಿಸಲಾಗಿರುವ ಆತಿಥೇಯ ಟೀಂ ಇಂಡಿಯಾ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಸೋಲಿಸಿ ಸತತ ಎರಡನೇ ಬಾರಿಗೆ ಫೈನಲ್ ತಲುಪಿದರೆ, ಇತ್ತ ನ್ಯೂಜಿಲೆಂಡ್, ಮೊದಲ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಏಕಪಕ್ಷೀಯವಾಗಿ…

Read More

ವ್ಯಕ್ತಿ ಅನುಮಾಸ್ಪದ ಸಾವು: ಬಾರ್ ಮುಂದೆ ಪ್ರತಿಭಟನೆ ವೇಳೆ ಕಲ್ಲು ತೂರಾಟ, ಪೊಲೀಸರಿಗೆ ಗಾಯ

ಹಾಸನ, ಮಾರ್ಚ್​ 06: ಬಾರ್ ಎದುರು ಕಾರಿನೊಳಗೆ ವ್ಯಕ್ತಿ ಅನುಮಾನಾಸ್ಪದ ಸಾವನ್ನಪ್ಪಿರುವಂತಹ ಘಟನೆ ಹಾಸನ ತಾಲೂಕಿನ ರಾಯಪುರ ಬಳಿಯ ಲಕ್ಷ್ಮೀ ವೆಂಕಟೇಶ್ವರ ಬಾರ್​​​ ಬಳಿ ನಿನ್ನೆ ನಡೆದಿದೆ. ವೀರಾಪುರದ ದೊರೆಸ್ವಾಮಿ(42) ಶವ ಪತ್ತೆ ಆಗಿತ್ತು. ಬಾರ್ ಎದುರು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿರುವ ಸಂಬಂಧಿಕರು ಘಟನೆ ಖಂಡಿಸಿ ಬಾರ್ ಎದುರು ಶವವಿಟ್ಟು ಪ್ರತಿಭಟಿಸಿದ್ದಾರೆ. ರಸ್ತೆ ತಡೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕೆಲವರು ಕಲ್ಲು ತೂರಾಟ ಮಾಡಿದ್ದಾರೆ. ಹೀಗಾಗಿ ಲಘು ಲಾಠಿಪ್ರಹಾರ…

Read More

ಮತ್ತೆ ಕಿರಿಕ್ ಮಾಡಿಕೊಂಡ ರಜತ್ ಕಿಶನ್; ಎಫ್​ಐಆರ್​ ದಾಖಲು

ಮಾಜಿ ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್ (Rajath Kishan) ಅವರು ಪದೇಪದೇ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಈ ಬಾರಿ ಅವರು ಡಾಗ್ ಸತೀಶ್ (Dog Sathish) ವಿಷಯದಲ್ಲಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಸತೀಶ್ ಜೊತೆ ಸ್ನೇಹ ಮಾಡಿದವರಿಗೆ ಬೆದರಿಕೆ ಸಂದೇಶ ಕಳಿಸಿದ ಆರೋಪ ರಜತ್ ಮೇಲೆ ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಕೆ.ಆರ್.ಪುರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ (FIR) ದಾಖಲಾಗಿದೆ. ಬೆದರಿಕೆ ಮತ್ತು ನಿಂದನೆ ಆರೋಪದ ಮೇಲೆ ದೂರು ನೀಡಲಾಗಿದೆ. ಸಾಮಾಜಿಕ ಕಾರ್ಯಕರ್ತ ಗಿರೀಶ್ ಕುಮಾರ್ ಅವರು…

Read More

ಮಗಳ ಮೇಲೆ ಅತ್ಯಾಚಾರವೆಸಗಿದ್ದ ತಂದೆಗೆ ಜೈಲಿನಲ್ಲೇ ಕೊಳೆಯುವ ಶಿಕ್ಷೆ ವಿಧಿಸಿದ ಕೋರ್ಟ್

ವಿಜಯಪುರ, ಮಾರ್ಚ್​ 06: ಐದು ವರ್ಷದ ಅಪ್ರಾಪ್ತ ವಯಸ್ಸಿನ ಸ್ವಂತ ಮಗಳ ಮೇಲೆ ಅತ್ಯಾಚಾರ ಎಸಗಿದ್ದ ಕಾಮುಕ ತಂದೆಗೆ (Father) ವಿಜಯಪುರದ ವಿಶೇಷ ನ್ಯಾಯಾಲಯ 20 ವರ್ಷ ಜೀವಾವಧಿ ಶಿಕ್ಷೆ ಹಾಗೂ 50 ಸಾವಿರ ರೂ ದಂಡ ವಿಧಿಸಿ ಆದೇಶಿಸಿದೆ. ತಂದೆಯೇ ಐದು ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ನಡೆಸಿದ್ದು, ಜಿಲ್ಲೆಯಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಇಂದು ತೀರ್ಪು ನೀಡಿದೆ. ನಡೆದಿದ್ದೇನು? ಹೆಂಡತಿ ಮೇಲಿನ ವೈಮನಸ್ಸಿನಿಂದಾಗಿ ತನ್ನ ಐದು…

Read More

ಸುಖೋಯ್ ಯುದ್ಧವಿಮಾನ ಅಪಘಾತ; ಆಪರೇಷನ್ ಸಿಂಧೂರ್​​ನಲ್ಲಿ ಭಾಗಿಯಾಗಿದ್ದ ಪೈಲಟ್ ಸೇರಿ ಇಬ್ಬರು ಸಾವು

ನವದೆಹಲಿ, ಮಾರ್ಚ್ 6: ಅಸ್ಸಾಂನ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಸುಖೋಯ್ (Su-30MKI) ಫೈಟರ್ ಜೆಟ್ ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಆ ಯುದ್ಧವಿಮಾನಕ್ಕಾಗಿ ಐಎಎಫ್​ ಸಿಬ್ಬಂದಿ ಶೋಧ ಕಾರ್ಯಾಚರಣೆ ನಡೆಸಿದ್ದರು. ಆ ಯುದ್ಧವಿಮಾನ ತರಬೇತಿ ಕಾರ್ಯಾಚರಣೆಯ ಸಮಯದಲ್ಲಿ ಅಪಘಾತಕ್ಕೀಡಾಗಿರುವುದು ದೃಢಪಟ್ಟಿದೆ. ಇಬ್ಬರು ಭಾರತೀಯ ವಾಯುಪಡೆಯ (IAF) ಪೈಲಟ್‌ಗಳಾದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಸಾವನ್ನಪ್ಪಿದ್ದಾರೆ. ಸುಖೋಯ್ ಯುದ್ಧವಿಮಾನದ ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದ ಸ್ಕ್ವಾಡ್ರನ್ ಲೀಡರ್ ಅನುಜ್ ಮತ್ತು ಫ್ಲೈಟ್ ಲೆಫ್ಟಿನೆಂಟ್ ಪೂರ್ವೇಶ್ ದುರಾಗ್ಕರ್ ಮೃತಪಟ್ಟಿರುವ…

Read More

ನಾಯಿ ವಾಕಿಂಗ್ ವಿಚಾರಕ್ಕೆ ಹೊಡೆದಾಟ: ಪೊಲೀಸ್ ಠಾಣೆ ಮೆಟ್ಟಿಲೇರಿದ ಶ್ವಾನ ಜಗಳ

ಬೆಂಗಳೂರು, (ಮಾರ್ಚ್ 06): ಕ್ಷುಲ್ಲಕ ವಿಚಾರಕ್ಕೆ ನಡೆದ ಮಾತಿನ ಚಕಮಕಿ, ನೋಡ-ನೋಡ್ತಿದ್ದಂತೆ ಬಡಿದಾಡುವ ಹಂತಕ್ಕೆ ಹೋಗಿದೆ. ವ್ಯಾಯಾಮ ಮಾಡ್ತಿದ್ದ ಏಳೆಂಟು ಜನ ಹಿರಿಯ ನಾಗರೀಕರು(senior citizen)  ಏಕಾಏಕಿ ನಾಯಿಯನ್ನು ವಾಕಿಂಗ್ ಮಾಡಿಸುತ್ತಿದ್ದ ವ್ಯಕ್ತಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಾರೆ. ಕೆಳಕ್ಕೆ ಉರುಳಿ ಬಿದ್ದರೂ ಸಹ ಬಿಡದೆ ಕಾಲಿನಿಂದ ಒದ್ದು ದೌರ್ಜನ್ಯ ನಡೆಸಿದ್ದಾರೆ. ಈ ಘಟನೆ ಬೆಂಗಳೂರಿನ (Bengaluru)  ವರ್ತೂರಿನ ಬ್ರಿಗೇಡ್ ಈಥೋಪಿಯ ಈಸ್ಟ್ ಆಂಟೊಪಿಯ ಅಪಾರ್ಟ್ಮೆಂಟ್ ನಲ್ಲಿ ನಡೆದಿದ್ದು, ಗಲಾಟೆ ವೇಳೆ ಹಲ್ಲೆಗೊಳಗಾಗಿ ನೊಂದ ತರಣ್ ಎನ್ನುವರು…

Read More

IND vs NZ: ಟಿ20 ವಿಶ್ವಕಪ್ ಫೈನಲ್​ಗೆ ಮೋದಿ ಮೈದಾನದಲ್ಲಿ ಏನೆಲ್ಲ ಸಿದ್ಧತೆಗಳನ್ನು ಮಾಡಲಾಗಿದೆ ಗೊತ್ತಾ?

ಮಾರ್ಚ್ 8 ರಂದು 2026 ರ ಟಿ20 ವಿಶ್ವಕಪ್​ನ ಫೈನಲ್ (T20 World Cup 2026 Final) ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಆತಿಥೇಯ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ಮುಖಾಮುಖಿಯಾಗುತ್ತಿವೆ. ಭಾರತ ತಂಡ ಫೈನಲ್​ಗೇರಿರುವುದರಿಂದ ಕ್ರೀಡಾಂಗಣ ಅಭಿಮಾನಿಗಳಿಂದ ತುಂಬಿತುಳುಕುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗಾಗಿ ಬರುವ ಅಭಿಮಾನಿಗಳಿಗೆ ಯಾವುದೇ ತೊಂದರೆಯಾಗದಂತೆ ಮತ್ತು ಪಂದ್ಯ ಆರಂಭಕ್ಕೂ ಮುನ್ನ ಅವರಿಗೆ ವಿವಿದ ಕಾರ್ಯಕ್ರಮಗಳ ಮೂಲಕ ರಂಜಿಸುವ ಸಲುವಾಗಿ…

Read More

IND vs ENG: 65 ಕೋಟಿಗೂ ಅಧಿಕ; ವಿಶ್ವ ದಾಖಲೆ ಬರೆದ ಭಾರತ- ಇಂಗ್ಲೆಂಡ್ ಪಂದ್ಯ

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ 2026 ರ ಟಿ20 ವಿಶ್ವಕಪ್‌ನ ಎರಡನೇ ಸೆಮಿಫೈನಲ್ (T20 World Cup Semi-Final) ಪಂದ್ಯ ಕ್ರಿಕೆಟ್ ಇತಿಹಾಸದಲ್ಲಿ ಹಲವು ದಾಖಲೆಗಳಿಗೆ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಎರಡೂ ತಂಡಗಳು ಒಟ್ಟಾರೆಯಾಗಿ ಬರೋಬ್ಬರಿ 499 ರನ್ ಕಲೆಹಾಕಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 253 ರನ್ ಗಳಿಸಿತು. ಈ ಮೂಲಕ ಟೀಂ ಇಂಡಿಯಾ ಟಿ20 ವಿಶ್ವಕಪ್ ಇತಿಹಾಸದಲ್ಲಿ ನಾಕೌಟ್ ಸುತ್ತಿನಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ…

Read More

ಕಾರ್ಖಾನೆಗಳಿಗೆ ಸಿಹಿ ಕೊಟ್ಟ ಅನ್ನದಾತರ ಬಾಯಿಗೆ ಕಹಿ: ಸಂಕಷ್ಟಕ್ಕೆ ಸಿಲುಕಿದ ಬೀದರ್ ಕಬ್ಬು ಬೆಳೆಗಾರರು

ಬೀದರ್​, ಮಾರ್ಚ್​ 06: ಕಬ್ಬು (Sugarcane) ಬೆಳೆದು ಖುಷಿಯಿಂದ ಸಕ್ಕರೆ ಕಾರ್ಖಾನೆಗೆ ರೈತರು (Farmers) ಕಬ್ಬು ಹಾಕುತ್ತಿದ್ದಾರೆ. ಆದರೆ ಸಕ್ಕರೆ ಕಾರ್ಖಾನೆಯಿಂದ ಬರಬೇಕಾದ ಹಣ ಮಾತ್ರ ರೈತರ ಕೈ ಸೇರುತ್ತಿಲ್ಲ. ವರ್ಷವಿಡೀ ಕಷ್ಟಪಟ್ಟು ಬೆಳೆದ ಕಬ್ಬನ್ನ ಕಾರ್ಖಾನೆಗೆ ಹಾಕಿದರೆ ಕಾರ್ಖಾನೆ ಮಾಲೀಕರು ಮಾತ್ರ ರೈತರಿಗೆ ಹಣ ಕೊಡದೆ ಸತಾಯಿಸುತ್ತಿದ್ದಾರೆ. ಕಬ್ಬು ಹಾಕಿದ ರೈತರಿಗೆ ಹಣ ಜಮೆ ಮಾಡಿ ಎಂದು ಜಿಲ್ಲಾಧಿಕಾರಿಗಳು ನೋಟಿಸ್​ ಕೊಟ್ಟರು ಸಕ್ಕರೆ ಕಾರ್ಖಾನೆಯವರು ಮಾತ್ರ ಹಣ ಹಾಕುತ್ತಿಲ್ಲ. ಹೀಗಾಗಿ ಅನ್ನದಾತರು ಹಣಕ್ಕಾಗಿ ಪರದಾಡುವಂತಾಗಿದೆ. ರೈತರ…

Read More

ಲೆಕ್ಕರಾಮಯ್ಯ ಅಲ್ಲ ಸಾಲರಾಮಯ್ಯ: ಸಿದ್ದರಾಮಯ್ಯ ಬಜೆಟ್​​ಗೆ ಪ್ರಹ್ಲಾದ ಜೋಶಿ ವ್ಯಂಗ್ಯ

ನವದೆಹಲಿ, (ಮಾರ್ಚ್ 06): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಡಿಸಿದ 17ನೇ ಬಜೆಟ್ 4.48 ಲಕ್ಷ ಕೋಟಿ ರೂಪಾಯಿ ಬೃಹತ್ ಗಾತ್ರದ ಹೆಗ್ಗಳಿಕೆಗಷ್ಟೇ ಸೀಮಿತ. ಅಂತೆಯೇ ರಾಜ್ಯದ ಸಾಲ ಹೆಚ್ಚಳ ಮತ್ತು ವಿತ್ತೀಯ ಕೊರತೆಯಲ್ಲಿ ಸಹ ದಾಖಲೆ ನಿರ್ಮಿಸಿದ್ದಲ್ಲದೆ, “ವೋಟ್ ಬ್ಯಾಂಕ್” ಪ್ರೇರಿತ ಎಂಬಂತಿದೆ. ಕರ್ನಾಟಕ ಸರ್ಕಾರದ 2026-27ನೇ ಸಾಲಿನ ಈ ಬಜೆಟ್ ನಲ್ಲಿ (Karnataka Budget) ರಾಜ್ಯವನ್ನು ಆರ್ಥಿಕ ಪ್ರಗತಿಯತ್ತ ಕೊಂಡೊಯ್ಯುವ ಬದಲು ಆರ್ಥಿಕ ಸಂಕಷ್ಟವನ್ನು ತೆರೆದಿಟ್ಟಿದೆ. ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ಕೆಲವೇ ಕೆಲವು ಸಮಾಜಗಳಿಗೆ…

Read More