ಮನೆಯ ಮುಂದಿದ್ದ ಮುದ್ದಾದ ನಾಯಿಮರಿಗಳನ್ನು ಎತ್ತಿ ಗೋಡೆಗೆ ಬಡಿದ ಯುವತಿ; ಶಾಕಿಂಗ್ ವಿಡಿಯೋ ನೋಡಿ
ಚೆನ್ನೈ, ಮಾರ್ಚ್ 6: ತಮಿಳುನಾಡಿನಲ್ಲಿ ಪ್ರಾಣಿ ಪ್ರಿಯರನ್ನು ಆಘಾತಕ್ಕೀಡು ಮಾಡಿರುವ ಭಯಾನಕ ಘಟನೆ ಬೆಳಕಿಗೆ ಬಂದಿದೆ. ಯುವತಿಯೊಬ್ಬಳು ನಾಯಿಗಳ (Dog Video) ಮೇಲೆ ತನ್ನ ಕೋಪವನ್ನು ಹೊರಹಾಕುವ ಭರದಲ್ಲಿ ಅವುಗಳ ಜೀವದ ಜೊತೆ ಆಟವಾಡಿದ್ದಾಳೆ. ತನ್ನ ಮನೆಯ ಮುಂದೆ ನಿಂತಿದ್ದ ಆಟೋದ ಕೆಳಗೆ ಹೋಗಿದ್ದ ಪುಟ್ಟ ನಾಯಿಮರಿಗಳನ್ನು ಎತ್ತಿ ಆಕೆ ಕಾಂಪೌಂಡ್ ಗೋಡೆಗೆ ಬಡಿದಿದ್ದಾಳೆ. ಇದರಿಂದ ಚೀರಾಡುತ್ತಾ ಆ ನಾಯಿಮರಿಗಳು ಕೆಳಗೆ ಬಿದ್ದಿವೆ. ಇನ್ನೆರಡು ನಾಯಿಗಳನ್ನು ಕುತ್ತಿಗೆಗೆ ಹಗ್ಗ ಹಾಕಿ ನೇತು ಹಾಕಿದ್ದಾಳೆ. ಅವುಗಳಲ್ಲಿ ಎರಡು ಮರಿಗಳು…