Category Archives: Blog

Your blog category

karnataka budget 2026: ಈ ಬಾರಿ ಬಜೆಟ್‌ನಲ್ಲಿ ಘೋಷಣೆಯಾಗಿರುವ ಹೊಸ ಕಾರ್ಯಕ್ರಮಗಳು

karnataka budget 2026: ಈ ಬಾರಿ ಬಜೆಟ್‌ನಲ್ಲಿ ಘೋಷಣೆಯಾಗಿರುವ ಹೊಸ ಕಾರ್ಯಕ್ರಮಗಳು

ಬೆಂಗಳೂರು, (ಮಾರ್ಚ್ 06): ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ (ಮಾರ್ಚ್ 6) ವಿಧಾನಸಭೆಯಲ್ಲಿ ಕರ್ನಾಟಕ ಬಜೆಟ್ 2026-27  (Karnataka Budget 2026) ಮಂಡಿಸಿದರು. ಹಲವು ಜಿಲ್ಲೆಗಳ ಮೂಲಸೌಕರ್ಯ, ಆರೋಗ್ಯ, ನೀರಾವರಿ, ಸಾರಿಗೆ, ವಾಣಿಜ್ಯ ಕ್ಷೇತ್ರಗಳ ನಾನು ಯೋಜನೆಗೆ ಅನುದಾನ ನೀಡಿದ್ದಾರೆ. ಇನ್ನು ಈ ಬಜೆಟ್‌ನಲ್ಲಿ 7 ಹೊಸ ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದಾರೆ.

ಬಜೆಟ್‌ನಲ್ಲಿ ಘೋಷಿಸಲಾದ ಹೊಸ ಕಾರ್ಯಕ್ರಮಗಳು ಇಂತಿವೆ

1.ಮುಖ್ಯಮಂತ್ರಿ ಕೃಷಿ ವಿಸ್ತಾರ ಯೋಜನೆ: ಕೃಷಿ ಸಂಸ್ಕರಣೆ, ಕೃಷಿ ತ್ಯಾಜ್ಯಗಳ ಮರುಬಳಕೆ, ಮಾರುಕಟ್ಟೆ ಸಂಪರ್ಕ ಬಲಪಡಿಸಲು ಹೊಸ ಕಾರ್ಯಕ್ರಮ ಘೋಷಿಸಿದ್ದಾರೆ. ರೈತರ ಸ್ಥಿರ ಮತ್ತು ಹೆಚ್ಚುವರಿ ಆದಾಯ ಮೂಲ ರಚಿಸಲು ಈ ಯೋಜನೆ ಪೂರಕವಾಗಿದೆ. ಈ ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬರಲಿದೆ.

ಇದನ್ನೂ ಓದಿ: Karnataka Budget 2026 Highlights: ಸಿಎಂ ಸಿದ್ದರಾಮಯ್ಯ 3 ಗಂಟೆ 5 ನಿಮಿಷ ಮಂಡಿಸಿದ 2026-27ರ ಬಜೆಟ್​ ಮುಖ್ಯಾಂಶ ಇಲ್ಲಿದೆ

2.ವಸುಧಾಮೃತ ಕಾರ್ಯಕ್ರಮ: ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ಮುಂದಿನ ಮೂರು ವರ್ಷಗಳಲ್ಲಿ ಈ ಕಾರ್ಯಕ್ರಮ ಜಾರಿಯಾಗಲಿದೆ.

3.ಸಸ್ಯ ಸಂಜೀವಿನಿ ಯೋಜನೆ: ಪರಿಸರ ಸ್ನೇಹಿ ಜೈವಿಕ ಪೀಡನಾಶಕ, ಜೈವಿಕ ಕೀಟನಾಶಕಗಳ ಜೊತೆ ಇತರೆ ಸುರಕ್ಷಿತ ನಿರ್ವಹಣಾ ಕ್ರಮಗಳಿಗಾಗಿ ಈ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿ ಮಾಡುವ ಉದ್ದೇಶವಿದೆ.

4.ಫಲಧಾರೆ ಕಾರ್ಯಕ್ರಮ: ಜಾನುವಾರುಗಳ ಸಂತಾನೋತ್ಪತ್ತಿ ಸಮಸ್ಯೆ ನಿವಾರಣೆಗೆ ಈ ಕಾರ್ಯಕ್ರಮದಡಿ ಶಿಬಿರಗಳ ಆಯೋಜನೆ ಮಾಡಲಾಗುವುದು. 5 ಕೋಟಿ ರೂ. ವೆಚ್ಚದಲ್ಲಿ 1000 ಗ್ರಾಮ ಪಂಚಾಯತಿಗಳಲ್ಲಿ “ಫಲಧಾರೆ” ಎಂಬ ಹೆಸರಿನಲ್ಲಿ ಶಿಬಿರ ನಡೆಸಲಾಗುವುದು.

5.ಕರ್ನಾಟಕ ಉನ್ನತ ಶಿಕ್ಷಣ ಪರಿವರ್ತನೆ ಯೋಜನೆ: 40 ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 11 ಪಾಲಿಟೆಕ್ನಿಕ್ ಕಾಲೇಜುಗಳನ್ನು ಮಾದರಿ ಸಂಸ್ಥೆಗಳಾಗಿ ಅಭಿವೃದ್ಧಿ ಮಾಡುವ ಉದ್ದೇಶದಿಂದ 2,500 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.

6.ಕೇರಳ ಮಾದರಿಯ ಗಂಭೀರ ಕಾಯಿಲೆಗಳಿರುವ ರೋಗಿಗಳಿಗೆ ಗೃಹಾಧಾರಿತ ಉಪಶಮನ ಆರೈಕೆ:
ಮನೆಗಳಲ್ಲೇ ಚಿಕಿತ್ಸಾ ಸೇವೆ, ಗಂಭೀರ ದೀರ್ಘಕಾಲೀನ, ಮಾರಣಾಂತಿಕ ಕಾಯಿಲೆಗಳಿರುವ ರೋಗಿಗಳಿಗೆ ಈ ಯೋಜನೆಯಡಿ ಆರೈಕೆ ಮಾಡಲಾಗುವುದು. Palliym India ಸಂಸ್ಥೆಯ ಸಹಯೋಗದೊಂದಿಗೆ ಯೋಜನೆಯನ್ನು ಜಾರಿಗೊಳಿಸಲಾಗುವುದು.

7.ಮುಖ್ಯಮಂತ್ರಿ ಸೌರ ಕೃಷಿ ಯೋಜನೆ: ಈ ಯೋಜನೆಯಡಿ ಕೆಪಿಟಿಸಿಎಲ್ ಉಪಕೇಂದ್ರಗಳಲ್ಲಿ ಸೌರ ವಿದ್ಯುತ್ ಸ್ಥಾವರಗಳ ನಿರ್ಮಾಣ ಮಾಡಲಾಗುವುದು. ಅಂದಾಜು 10,500 ಕೋಟಿ ರೂ. ವೆಚ್ಚದಲ್ಲಿ 300 ಮೆಗಾವ್ಯಾಟ್ ಸಾಮರ್ಥ್ಯದ ಸೌರ ವಿದ್ಯುತ್ ಸ್ಥಾವರಗಳ ಆರಂಭಗೊಳಿಸಲು ನಿರ್ಧರಿಸಲಾಗಿದೆ.

ಹೀಗೆ ಸಿದ್ದರಾಮಯ್ಯನವರು ತಮ್ಮ 17ನೇ ಬಜೆಟ್​​ನಲ್ಲಿ ಹಲವು ಯೋಜನೆ, ಕಾರ್ಯಕ್ರಮಗಳನ್ನು ಘೋಷಣೆ ಮಾಡಿದ್ದು, ಇವುಗಳಲ್ಲಿ ಯಾವೆಲ್ಲಾ ಕಾರ್ಯಕ್ರಮಗಳು ಅನುಷ್ಠಾನಗೊಳ್ಳಲಿವೆ ಎನ್ನುವುದನ್ನು ಕಾದುನೋಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕುವೈತ್​​ನಲ್ಲಿರುವ ಯುಎಸ್​ ನೆಲೆಗಳ ಮೇಲೆ ಇರಾನ್​ನಿಂದ ಅರಾಶ್-2 ಡ್ರೋನ್ ದಾಳಿ

ಟೆಹ್ರಾನ್, ಮಾರ್ಚ್ 6: ಕುವೈತ್‌ನಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲಿನ ಇರಾನ್ ದಾಳಿ ಮುಂದುವರೆದಿದೆ. ಕುವೈತ್ ವಾಯುನೆಲೆಗಳ ಮೇಲಿನ ದಾಳಿಗೆ ಇರಾನ್ (Iran) ಶಹೀದ್-136 ಡ್ರೋನ್‌ಗಳ ಜೊತೆಗೆ ಅಡ್ವಾನ್ಸ್ಡ್ ಅರಾಶ್-2 ಡ್ರೋನ್‌ಗಳನ್ನು ಬಳಸಿದೆ. ಅರಾಶ್-2 150 ಕೆಜಿ ಸಿಡಿತಲೆಯನ್ನು ಹೊತ್ತೊಯ್ಯಬಲ್ಲದು. ಕಿಯಾನ್-2 ಡ್ರೋನ್‌ನ ನವೀಕರಿಸಿದ ಆವೃತ್ತಿಯಾದ ಇದು 2,000 ಕಿಮೀ ದಾಳಿಯ ವ್ಯಾಪ್ತಿಯನ್ನು ಹೊಂದಿದೆ. ಈ ಡ್ರೋನ್‌ಗಳು ನಿಖರವಾದ ದಾಳಿಗಳು ಮತ್ತು ಸಮೂಹ ಕಾರ್ಯಾಚರಣೆಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿವೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಟಿ20 ವಿಶ್ವಕಪ್ ಫೈನಲ್; ಅಹಮದಾಬಾದ್‌ನಲ್ಲಿ 10 ಸಾವಿರದಿಂದ ಮುಕ್ಕಾಲು ಲಕ್ಷಕ್ಕೇರಿದ ರೂಮ್​ ಬೆಲೆ

2023 ರ ಏಕದಿನ ವಿಶ್ವಕಪ್ ಫೈನಲ್ ಬಳಿಕ ಟೀಂ ಇಂಡಿಯಾ ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದಲ್ಲಿ ಮತ್ತೊಂದು ಐಸಿಸಿ ಈವೆಂಟ್​ನ ಫೈನಲ್ ಆಡಲು ಸಜ್ಜಾಗಿದೆ. ಎಲ್ಲರಿಗೂ ತಿಳಿದಿರುವಂತೆ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ 2026 ರ ಟಿ20 ವಿಶ್ವಕಪ್ ಫೈನಲ್ (T20 World Cup Final) ಪಂದ್ಯ ಅಹಮದಾಬಾದ್​ನಲ್ಲಿ ನಡೆಯಲಿದೆ. ವಿಶ್ವದ ಅತಿದೊಡ್ಡ ಕ್ರೀಡಾಂಗಣ ಫೈನಲ್ ಕಾಳಗಕ್ಕೆ ತಯಾರಾಗಿ ನಿಂತಿದೆ. ಅದರಲ್ಲೂ ಆತಿಥೇಯ ಭಾರತ ಫೈನಲ್​ ಪ್ರವೇಶಿಸಿರುವುದು ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಹಬ್ಬದಂತ್ತಾಗಿದೆ. ಹೀಗಾಗಿ ಕ್ರಿಕೆಟ್ ಅಭಿಮಾನಿಗಳ ದಂಡು ಅಹಮದಾಬಾದ್​ನ ಪ್ರಯಾಣ ಬೆಳೆಸಲು ಶುರುಮಾಡಿದೆ. ಇದರ ಲಾಭ ಪಡೆಯಲು ಮುಂದಾಗಿರುವ ಅಹಮದಾಬಾದ್​ನ ಹೋಟೆಲ್​ಗಳು ರೂಮ್ ಬಾಡಿಗೆಯನ್ನು ಐದು ಪಟ್ಟು ಹೆಚ್ಚಳ ಮಾಡಿವೆ.

10 ರಿಂದ 75 ಸಾವಿರಕ್ಕೆ ಏರಿಕೆ

ಟಿ20 ವಿಶ್ವಕಪ್​ನ ಫೈನಲ್ ಪಂದ್ಯ ಮಾರ್ಚ್ 8 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಹೆಚ್ಚಿನ ಅಭಿಮಾನಿಗಳು ಅಹಮದಾಬಾದ್​ನತ್ತ ಬರುವುದನ್ನು ಖಚಿತವಾಗಿರುವುದರಿಂದ ಅಹಮದಾಬಾದ್‌ನಲ್ಲಿ ಹೋಟೆಲ್ ಬೆಲೆಗಳು ಕೂಡ ಹೆಚ್ಚಾಗಿದೆ. ಮಾರ್ಚ್ 7 ಮತ್ತು 8 ರಂದು ಹೋಟೆಲ್​ನ ರೂಮ್​ನ ಬಾಡಿಗೆಗಳು ರೂ. 75 ಸಾವಿರ ತಲುಪಿವೆ. ಈ ಮೊದಲು 10 ಸಾವಿರಕ್ಕೆ ಲಭ್ಯವಿರುವ ಕೋಣೆಯ ಬಾಡಿಗೆ 40 ಸಾವಿರದಿಂದ 75 ಸಾವಿರಕ್ಕೆ ಏರಿಕೆಯಾಗಿದೆ. ಹಯಾತ್ ರೀಜೆನ್ಸಿ ಮತ್ತು ಹೋಟೆಲ್ ಸೇರಿದಂತೆ ಹಲವು ಹೋಟೆಲ್‌ಗಳ ಬಾಡಿಗೆ ಹೆಚ್ಚಾಗಿದೆ. ಮ್ಯಾರಿಯಟ್, ಐಟಿಸಿ ಮತ್ತು ಫಾರ್ಚೂನ್ ಹೋಟೆಲ್‌ಗಳ ಬಾಡಿಗೆಯೂ ಹೆಚ್ಚಾಗಿದೆ.

2026 T20 WC Final Prize Money: ಗೆದ್ದ ತಂಡದ ಮೇಲೆ ಹಣದ ಮಳೆ; ಸೋತ ತಂಡಕ್ಕೂ ಸಿಗಲಿದೆ ಕೋಟಿ

ಐದು ಪಟ್ಟು ಹೆಚ್ಚಳ

ಟಿ20 ವಿಶ್ವಕಪ್ ಫೈನಲ್ ಪಂದ್ಯ ಅಹಮದಾಬಾದ್‌ನಲ್ಲಿ ನಡೆಯುವುದರಿಂದ ಹೋಟೆಲ್ ರೂಮ್ ಬೆಲೆ ಹೆಚ್ಚಾಗುವ ನಿರೀಕ್ಷೆ ಮುಂಚೆಯೇ ಇತ್ತು. ಅದರಲ್ಲೂ ಸೆಮಿಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿ ಸತತ ಎರಡನೇ ಬಾರಿಗೆ ಟೀಂ ಇಂಡಿಯಾ ಫೈನಲ್​ಗೇರಿದ ಬಳಿಕ ಅಹಮದಾಬಾದ್‌ಗೆ ಬರುವ ಅಭಿಮಾನಿಗಳ ಸಂಖ್ಯೆಯಲ್ಲಿ ಹೆಚ್ಚಾಳವಾಗಿದೆ. ಹೀಗಾಗಿ ಕೊಠಡಿ ದರಗಳು ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಇದಕ್ಕೂ ಮೊದಲು, 2023 ರ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದ ಸಮಯದಲ್ಲಿ ಹೋಟೆಲ್ ಬೆಲೆಗಳು ಗಗನಕ್ಕೇರಿದ್ದವು. ಹೋಟೆಲ್​ ರೂಮ್​ ಬೆಲೆಗಳು ಹೆಚ್ಚಾಗುವುದರ ಜೊತೆಗೆ ದೇಶದ ವಿವಿಧ ಭಾಗಗಳಿಂದ ಅಹಮದಾಬಾದ್​ಗೆ ತೆರಳುವ ವಿಮಾನಗಳ ದರಗಳು ಸಹ ಹೆಚ್ಚಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿನ ನಂತರ ಎರಡನೇ ಐಟಿ ಹಬ್ ಆಗಿ ಮೈಸೂರು? ತಮ್ಮೂರಿಗೆ ಉಡುಗೊರೆ ಕೊಟ್ಟ ಸಿದ್ದು

ಬೆಂಗಳೂರು, ಮಾರ್ಚ್ 6: ಸಿದ್ದರಾಮಯ್ಯ ಅವರ ದಾಖಲೆಯ 2026ರ ಬಜೆಟ್​ನಲ್ಲಿ ಪ್ರಮುಖಾಂಶಗಳಲ್ಲಿ ಮೈಸೂರನ್ನು ಐಟಿ ಹಬ್ ಆಗಿ ರೂಪಿಸಲು ಯೋಜನೆಯೂ ಒಂದು. ಬೆಂಗಳೂರಿನಲ್ಲಿ ವಾಹನಗಳ ದಟ್ಟಣೆ ಕಡಿಮೆ ಮಾಡಲು ಮತ್ತು ವಿಕೇಂದ್ರೀಕೃತ ಆರ್ಥಿಕತೆಗೆ ಉತ್ತೇಜನ ನೀಡಲು ಮೈಸೂರನ್ನು ರಾಜ್ಯದ ಎರಡನೇ ಐಟಿ ಹಬ್ ಆಗಿ ರೂಪಿಸಲಾಗುವುದು ಎಂದು ಬಜೆಟ್​ನಲ್ಲಿ ಘೋಷಿಸಲಾಗಿದೆ. ಬೆಂಗಳೂರಿನಿಂದ ದಕ್ಷಿಣಕ್ಕೆ ಮೈಸೂರು 140 ಕಿಮೀ ದೂರದಲ್ಲಿದೆ. ಈಗಾಗಲೇ ಮೈಸೂರಿನಲ್ಲಿ ಸಾಕಷ್ಟು ಕೈಗಾರಿಕೆಗಳು ನೆಲಸಿವೆ. ಐಟಿ ಕಂಪನಿಗಳೂ ಬಹಳಷ್ಟಿವೆ. ಕಾಗ್ನೈಜೆಂಟ್ ಟೆಕ್ನಾಲಜೀಸ್, ಇನ್ಫೋಸಿಸ್ ಇತ್ಯಾದಿ 180-200 ಟೆಕ್ ಕಂಪನಿಗಳಿದ್ದು 30,000 ಜನರು ಕೆಲಸ ಮಾಡುತ್ತಿದ್ದಾರೆ.

ಈಗ ಮೈಸೂರಿಗೆ ಮತ್ತಷ್ಟು ಟೆಕ್ ಸ್ಪರ್ಶ ನೀಡಲು ವಿವಿಧ ಯೋಜನೆಗಳನ್ನು ಹಾಕಲಾಗಿದೆ. ಅರಮನೆನಗರಿಯಲ್ಲಿ ಎಐ ಲ್ಯಾಬ್​ಗಳು, ಸ್ಟಾರ್ಟಪ್ ಸ್ಪೇಸ್​ಗಳು ಮತ್ತಿತರೆಯನ್ನು ಘೋಷಿಸಲಾಗಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ತವರು ಜಿಲ್ಲೆಗೆ ಭರ್ಜರಿ ಕಾಣಿಕೆ ಕೊಟ್ಟಿದ್ದಾರೆ.

ಇದನ್ನೂ ಓದಿ: Karnataka Budget 2026 Highlights: ಸಿಎಂ ಸಿದ್ದರಾಮಯ್ಯ 3 ಗಂಟೆ 5 ನಿಮಿಷ ಮಂಡಿಸಿದ 2026-27ರ ಬಜೆಟ್​ ಮುಖ್ಯಾಂಶ ಇಲ್ಲಿದೆ

ಬಜೆಟ್​ನಲ್ಲಿ ಮೈಸೂರಿಗೆ ಸಿಕ್ಕ ಕೊಡುಗೆಗಳಿವು…

  • ಮೈಸೂರಿನ ತಾಂಡವಪುರದಲ್ಲಿ ಸಿಲ್ಕ್ ಪಾರ್ಕ್ ಸ್ಥಾಪನೆ ಮಾಡಲಾಗುವುದು. ರಾಜ್ಯದ ಐದು ಹೊಸ ಸಿಲ್ಕ್ ಪಾರ್ಕ್​ಗಳಲ್ಲಿ ಇದೂ ಒಂದಾಗಿರುತ್ತದೆ.
  • ಮೈಸೂರು ಮತ್ತು ಕಲಬುರಗಿಯಲ್ಲಿ ತಲಾ 16 ಕೋಟಿ ರೂ. ವೆಚ್ಚದಲ್ಲಿ ಷ್ನೈಡರ್ ಎಲೆಕ್ಟ್ರಿಕ್ (Schneider Electric) ಯೂತ್ ಇಂಪ್ಯಾಕ್ಟ್ ಕೇಂದ್ರ ಸ್ಥಾಪಿಸಲು ಉದ್ದೇಶಿಸಿದೆ.
  • ಮೈಸೂರು ಏರ್ಪೋರ್ಟ್ ಸಮೀಪ ಕೆಐಎಡಿಬಿ ವತಿಯಿಂದ ಏರೋಸ್ಪೇಸ್ ಪಾರ್ಕ್ ಅಭಿವೃದ್ಧಿ
  • ಬೆಂಗಳೂರಿನ ದಟ್ಟಣೆಯನ್ನು ಕಡಿಮೆ ಮಾಡಲು ಹಾಗೂ ವಿಕೇಂದ್ರೀಕೃತ ಆರ್ಥಿಕತೆಯನ್ನು ಪ್ರೋತ್ಸಾಹಿಸಲು ಮೈಸೂರು ನಗರವನ್ನು ರಾಜ್ಯದ ಎರಡನೇ ಐಟಿ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲಾಗುವುದು.
  • ಮೈಸೂರು ಮೃಗಾಲಯ ಅಭಿವೃದ್ಧಿಗಾಗಿ ಪಿಪಿಪಿ ಮಾದರಿಯಲ್ಲಿ ಪ್ರಕೃತಿ ನಿರೂಪಣಾ ಕೇಂದ್ರದ ಸ್ಥಾಪನೆ
  • ಮೈಸೂರು ಫಿಲಂ ಸಿಟಿಯಲ್ಲಿ ಪ್ರವಾಸಿಗರಿಗೆ ಅನುಕೂಲವಾಗುವಂತೆ ಪಿಪಿಪಿ ಮಾದರಿಯಲ್ಲಿ ಥೀಮ್ ಪಾರ್ಕ್, ಸ್ಟಾರ್ ಹೋಟೆಲ್, ರೆಸ್ಟೋರೆಂಟ್​ಗಳ ನಿರ್ಮಾಣ.
  • ಮೈಸೂರು ನಗರದಲ್ಲಿ ಇ-ಕೋರ್ಟ್ ಅನ್ನು ಪ್ರಾಯೋಗಿಕವಾಗಿ ಸ್ಥಾಪಿಸಲಾಗುವುದು.
  • ಮೈಸೂರಿನ ಬಂಬೂ ಬಜಾರ್ ಕೇಂದ್ರದಲ್ಲಿ ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಾಣ.
  • ಮೈಸೂರಿನ ನರಸಿಂಹರಾಜ ಕ್ಷೇತ್ರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸ್ಥಾಪನೆ
  • ಮೈಸೂರಿನಲ್ಲಿ ಪ್ಯಾರಾ ಮೆಡಿಕಲ್ ಕೋರ್ಸ್ ನಡೆಸಲಾಗುವುದು.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ದಿ ಕೇರಳ ಸ್ಟೋರಿ 2’ ಉಚಿತ ಪ್ರದರ್ಶನಕ್ಕೆ ಬಂದವರಿಗೆ ಬೆದರಿಕೆ ಕರೆ: ವಿಡಿಯೋ ನೋಡಿ

ದಿ ಕೇರಳ ಸ್ಟೋರಿ 2’ (The Kerala Story) ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದ್ದು, ಸಿನಿಮಾ ಬಿಡುಗಡೆಗೆ ಮುಂಚೆ ಸಾಕಷ್ಟು ವಿವಾದಗಳಿಗೆ ಸಹ ಕಾರಣವಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಲವ್ ಜಿಹಾದ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶದಿಂದ ದಿ ಕೇರಳ ಸ್ಟೋರಿ 2 ಚಿತ್ರದ ಉಚಿತ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ವಿದ್ಯಾರ್ಥಿನಿಯರಿಗೆ ಸಿನಿಮಾವನ್ನು ಉಚಿತವಾಗಿ ತೋರಿಸಲಾಗುತ್ತಿದೆ. ಆದರೆ ಸಿನಿಮಾ ನೋಡಲು ಹೋದ ಕೆಲ ಯುವತಿಯರಿಗೆ ಬೆದರಿಕೆ ಕರೆಗಳು ಬಂದಿವೆ ಎಂದು ಆಯೋಕರು ಆರೋಪಿಸಿದ್ದಾರೆ. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮನೆಯೊಳಗೆ ಅಕ್ಕ-ತಂಗಿಯರ ನಿಗೂಢ ಸಾವು; ಹೆತ್ತಮ್ಮನೇ ಮುಖ್ಯ ಆರೋಪಿ!

ನವದೆಹಲಿ, ಮಾರ್ಚ್ 6: ದಕ್ಷಿಣ ದೆಹಲಿಯಲ್ಲಿ 33 ಮತ್ತು 28 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ನಿಗೂಢವಾಗಿ ಮೃತಪಟ್ಟಿದ್ದಾರೆ. ಗುರುವಾರ ಸಂಜೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಪೊಲೀಸರು ಮಾಲ್ವಿಯಾ ನಗರದ ಅವರ ಮನೆಯ ಬಾಗಿಲು ಒಡೆದು ನೋಡಿದ ನಂತರ ಅವರ 55 ವರ್ಷದ ತಾಯಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಆತ್ಮಹತ್ಯೆಗೆ (Delhi Crime News) ಯತ್ನಿಸುವ ಮೊದಲು ತಾಯಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕೊಂದಿರಬಹುದು ಎಂಬುದು ಪೊಲೀಸರ ಅನುಮಾನ. ಆದರೆ ಆ ಮಹಿಳೆಗೆ ಪ್ರಜ್ಞೆ ಬಂದ ನಂತರವೇ ನಡೆದ ಘಟನೆಗಳು ಸ್ಪಷ್ಟವಾಗುವ ನಿರೀಕ್ಷೆಯಿದೆ.

ಗುರುವಾರ ಸಂಜೆ ಮೃತರ ಮನೆಗೆ ಹೋಗಿದ್ದ ಸಂಬಂಧಿಕರು ಎಷ್ಟೇ ಬಾಗಿಲು ಬಡಿದರೂ ಡೋರ್ ಓಪನ್ ಆಗಲಿಲ್ಲ. ಇದರಿಂದ ಅನುಮಾಗೊಂಡ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ದೆಹಲಿ ಪೊಲೀಸರ ತಂಡವು ಸ್ಥಳಕ್ಕೆ ತಲುಪಿ ಬಾಗಿಲು ಒಡೆದು ನೋಡಿದಾಗ, ಒಬ್ಬ ಮಹಿಳೆಯ ಶವ ಮುಖದ ಮೇಲೆ ದಿಂಬನ್ನು ಇಡಲಾಗಿತ್ತು. ಮತ್ತೊಬ್ಬಳ ಕುತ್ತಿಗೆಗೆ ಗಾಯವಾಗಿತ್ತು. ಇಬ್ಬರೂ ಬೇರೆ ಬೇರೆ ರೂಂನಲ್ಲಿ ಸತ್ತುಬಿದ್ದಿದ್ದರು. ಅವರಿಬ್ಬರೂ ಸುಮಾರು 33 ಮತ್ತು 28 ವರ್ಷ ವಯಸ್ಸಿನ ಸಹೋದರಿಯರು ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: 

ಅವರ 55 ವರ್ಷ ವಯಸ್ಸಿನ ತಾಯಿ ಮತ್ತೊಂದು ರೂಂನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯು ತಾಯಿ ತಾನು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸುವ ಮೊದಲು ಇಬ್ಬರೂ ಹೆಣ್ಣುಮಕ್ಕಳನ್ನು ಕೊಂದಿದ್ದಾರೆ ಎಂದು ಹೇಳಲಾಗಿದೆ.

ಅಕ್ಕ-ತಂಗಿಯರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪರಾಧ ಮತ್ತು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯ ತಂಡಗಳು ಘಟನಾ ಸ್ಥಳವನ್ನು ಪರಿಶೀಲಿಸಿವೆ ಮತ್ತು ಪುರಾವೆಗಳನ್ನು ಸಂಗ್ರಹಿಸಿವೆ. ಆ ಮಹಿಳೆಯ ಹೇಳಿಕೆಯನ್ನು ದಾಖಲಿಸಲು ಅವರು ಪ್ರಜ್ಞೆ ಮರಳುವವರೆಗೆ ಕಾಯುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಬಕಾರಿ ಇಲಾಖೆಗೆ ಕೋಟ್ಯಂತರ ರೂ ಟಾರ್ಗೆಟ್​​: ಸರ್ಕಾರದ ಹೊಸ ನೀತಿಗೆ ವ್ಯಾಪಾರಿಗಳ ವಿರೋಧ

ಬೆಂಗಳೂರು, ಮಾರ್ಚ್​​ 06: ಸಿಎಂ ಸಿದ್ದರಾಮಯ್ಯ ಇಂದು ತಮ್ಮ ದಾಖಲೆಯ 17ನೇ ಬಜೆಟ್ (Budget) ಮಂಡಿಸಿದ್ದಾರೆ. 3 ಗಂಟೆ 30 ನಿಮಿಷಗಳ ಕಾಲ ಭಾಷಣ ಮಾಡಿದ ಸಿಎಂ, ಮಕ್ಕಳಿಂದ ವೃದ್ಧರವರೆಗೂ ಎಲ್ಲರಿಗೂ ಒಂದೊಂದು ಕೊಡುಗೆ ನೀಡಿದ್ದಾರೆ. ಆದರೆ ಮದ್ಯಪ್ರಿಯರಿಗೆ ಶಾಕ್ ನೀಡಲಾಗಿದೆ. ಮದ್ಯದ ಅಂಶ ಆಧರಿಸಿ ತೆರಿಗೆ ವಿಧಿಸಲು ನಿರ್ಧಾರ ಮಾಡಿರೋದು ದರ ಹೆಚ್ಚಳದ ಸುಳಿವು ಕೊಟ್ಟಿದೆ. ಅಬಕಾರಿ ಇಲಾಖೆಯಿಂದ 45 ಸಾವಿರ ಕೋಟಿ ಸಂಗ್ರಹದ ಗುರಿ ನೀಡಿದೆ. ಸದ್ಯ ಸರ್ಕಾರ ನೀಡಿರುವ ಟಾರ್ಗೆಟ್​ ಬಗ್ಗೆ ಮದ್ಯ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಯಾವುದೇ ಮನ್ನಣೆಯನ್ನೇ ನೀಡಿಲ್ಲ: ಲೋಕೇಶ್ 

ಈ ಬಗ್ಗೆ ಬೆಂಗಳೂರು ಜಿಲ್ಲಾ ಮದ್ಯ ವ್ಯಾಪಾರಿಗಳ ಸಂಘದ ಅಧ್ಯಕ್ಷ ಲೋಕೇಶ್ ಪ್ರತಿಕ್ರಿಯಿಸಿದ್ದು, 2026-27ನೇ ಸಾಲಿನಲ್ಲಿ ಅಬಕಾರಿ ಇಲಾಖೆಗೆ 45,000 ಕೋಟಿ ರೂ ಟಾರ್ಗೆಟ್​​, ಯಾವ ಅಂಶ ಇಟ್ಟುಕೊಂಡು ಇಷ್ಟು ಆದಾಯ ನಿರೀಕ್ಷಿಸಿದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮದ್ಯ ಪ್ರಿಯರಿಗೆ ಬಿಗ್​​ ಶಾಕ್​​ ನೀಡಿದ ಸಿದ್ದರಾಮಯ್ಯ: ಬಜೆಟ್​​​ನಲ್ಲಿ ಮಹತ್ವದ ನಿರ್ಧಾರ

ಪ್ರಸ್ತುತ ಅಬಕಾರಿ ಆದಾಯ 2-3 ಸಾವಿರ ಕೋಟಿ ಖೋತಾ ಎಂಬ ಮಾಹಿತಿ. ಇರುವ ಸ್ಲ್ಯಾಬ್​ಗಳನ್ನು ಮತ್ತಷ್ಟು ಇಳಿಕೆ ಮಾಡುವ ಬಗ್ಗೆ ತೀರ್ಮಾನವಾಗಿದೆ. ಸರ್ಕಾರದ ಹೊಸ ಅಬಕಾರಿ ನೀತಿ ಬಗ್ಗೆ ನಮ್ಮ ಜೊತೆ ಮಾತುಕತೆ ನಡೆಸಿಲ್ಲ. ನಮ್ಮ ಬೇಡಿಕೆಗಳ ಬಗ್ಗೆ ಸರ್ಕಾರ ಯಾವುದೇ ಮನ್ನಣೆಯನ್ನೇ ನೀಡಿಲ್ಲ. CL2, CL7, CL5ಗಳಲ್ಲಿ ಸಾಕಷ್ಟು ಬದಲಾವಣೆ ಮತ್ತು ತಿದ್ದುಪಡಿ ಆಗಬೇಕಿದೆ ಎಂದು ಅವರು ಹೇಳಿದ್ದಾರೆ.

ಸರ್ಕಾರದ ಹೊಸ ಅಬಕಾರಿ ನೀತಿಗೆ ವ್ಯಾಪಾರಿಗಳ ವಿರೋಧ

ಇನ್ನು ರಾಜ್ಯ ಸರ್ಕಾರದ ಹೊಸ ಅಬಕಾರಿ ನೀತಿಗೆ ವ್ಯಾಪಾರಿಗಳ ವಿರೋಧ ವ್ಯಕ್ತವಾಗಿದೆ. ಅಬಕಾರಿ ನೀತಿ ಬದಲಾವಣೆ ವಿರುದ್ಧ ಮದ್ಯ ವ್ಯಾಪಾರಿಗಳು ಅಸಮಾಧಾನ ಹೊರಹಾಕಿದ್ದಾರೆ. ಈ ಬಗ್ಗೆ ಟಿವಿ9ಗೆ ಮದ್ಯ ವ್ಯಾಪಾರಿ ಮಹದೇವಗೌಡ ಹೇಳಿಕೆ ನೀಡಿದ್ದು, ಸದ್ಯ ಚಾಲ್ತಿಯಲ್ಲಿರುವ ಅಬಕಾರಿ ನೀತಿಯನ್ನೇ ಮುಂದುವರಿಸಬೇಕಿತ್ತು. ಹೊಸ ಅಬಕಾರಿ ನೀತಿಯಲ್ಲಿ ಆಗುವ ಬದಲಾವಣೆಯಿಂದ ಸಮಸ್ಯೆ ಹೆಚ್ಚುತ್ತೆ ಎಂದಿದ್ದಾರೆ.

ಇದನ್ನೂ ಓದಿ: ಕರ್ನಾಟಕದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬ್ಯಾನ್: ಸರ್ಕಾರದ ನಡೆಗೆ ಬಿಜೆಪಿ ರಾಜ್ಯಸಭೆ ಸದಸ್ಯ ಮೆಚ್ಚುಗೆ

ಮದ್ಯದ ಅಂಶದ ಮೇಲೆ ಸುಂಕ ನಿಗದಿ ಅಂದರೆ ದರದಲ್ಲಿ ವ್ಯತ್ಯಾಸವಾಗುತ್ತೆ. ತಮ್ಮ ಉತ್ಪನ್ನ ಇಂತಹ ಸ್ಲ್ಯಾಬ್​ಗಳಲ್ಲಿ ಬರಬೇಕೆಂದು ಉತ್ಪಾದಕರು ನಿಗದಿ ಮಾಡಿದರೆ ಸರಿಹೋಗಲ್ಲ. ಬೆಲೆ ನಿಗದಿಯಲ್ಲಿ ಅಬಕಾರಿ ಇಲಾಖೆ ಹಸ್ತಕ್ಷೇಪ ಇಲ್ಲವಾದರೆ ಸಮಸ್ಯೆ. ಅಂತಿಮವಾಗಿ ವರ್ತಕರು ಮತ್ತು ಗ್ರಾಹಕರ ಮೇಲೆ ಹೊಡೆತ ಬೀಳಲಿದೆ ಎಂದು ಅವರು ಹೇಳಿದ್ದಾರೆ.

ವರದಿ: ಲಕ್ಷ್ಮೀನರಸಿಂಹ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಿರುಪತಿಯಲ್ಲಿ ಜಾನ್ವಿ ಕಪೂರ್ ಹುಟ್ಟುಹಬ್ಬ: ಬರಿಗಾಲಲ್ಲಿ 3,550 ಮೆಟ್ಟಿಲು ಹತ್ತಿದ ನಟಿ

ಬಾಲಿವುಡ್ ನಟಿ ಜಾನ್ವಿ ಕಪೂರ್ (Janhvi Kapoor) ಇಂದು (ಮಾರ್ಚ್ 6) 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಪ್ರತಿ ವರ್ಷದಂತೆ ಈ ಬಾರಿಯೂ ತಮ್ಮ ಹುಟ್ಟುಹಬ್ಬದ ವಿಶೇಷ ದಿನದಂದು ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಜಾನ್ವಿ ಆಗಮಿಸಿದ್ದರು. ಆದರೆ ಈ ಬಾರಿ ಅವರು ಕೇವಲ ದರ್ಶನ ಪಡೆಯುವುದಲ್ಲದೆ, ಬರೋಬ್ಬರಿ 3,550 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತುವ ಮೂಲಕ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ತಿರುಪತಿ ಬೆಟ್ಟ ಹತ್ತುವಾಗ ಜಾನ್ವಿ ಅವರು ಬಿಳಿ ಬಣ್ಣದ ಫ್ಲೋರಲ್ ಕುರ್ತಾ ಧರಿಸಿದ್ದರು.

ಸುಮಾರು 9ರಿಂದ 12 ಕಿಲೋಮೀಟರ್ ದೂರದ ಈ ಹಾದಿಯನ್ನು ಕ್ರಮಿಸಲು ಅವರಿಗೆ 4ರಿಂದ 5 ಗಂಟೆಗಳು ಬೇಕಾಯಿತು. ಜಾನ್ವಿ ಅವರ ಈ ಭಕ್ತಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ‘ಸರಳತೆಯಲ್ಲಿ ನೀವು ನಿಮ್ಮ ತಾಯಿ ಶ್ರೀದೇವಿಯಂತೆಯೇ ಕಾಣುತ್ತಿದ್ದೀರಿ’ ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ಬಾರಿ ಜಾನ್ವಿ ಕಪೂರ್ ಅವರ ಆಪ್ತ ಗೆಳೆಯನ ಅನುಪಸ್ಥಿತಿ ಕಾಣಿಸಿದೆ. ಸಾಮಾನ್ಯವಾಗಿ ಜಾನ್ವಿ ತಿರುಪತಿಗೆ ಭೇಟಿ ನೀಡುವಾಗ ಅವರ ಗೆಳೆಯ ಶಿಖರ್ ಪಹರಿಯಾ ಜೊತೆಗಿರುತ್ತಿದ್ದರು. ಆದರೆ ಈ ಬಾರಿ ಶಿಖರ್ ಬದಲಿಗೆ ಜಾನ್ವಿ ಬೇರೆ ಸ್ನೇಹಿತರೊಂದಿಗೆ ಬೆಟ್ಟ ಹತ್ತಿರುವುದು ವಿಶೇಷವಾಗಿತ್ತು. ಪ್ರತಿ ವರ್ಷ ತಮ್ಮ ತಾಯಿ ಶ್ರೀದೇವಿಯವರ ಜನ್ಮದಿನದಂದೂ ಜಾನ್ವಿ ಮಿಸ್ ಮಾಡದೆ ತಿರುಪತಿಗೆ ಭೇಟಿ ನೀಡುತ್ತಾರೆ.

ತಮ್ಮ ಆಧ್ಯಾತ್ಮಿಕ ನಂಬಿಕೆಯ ಬಗ್ಗೆ ಈ ಹಿಂದೆ ಮಾತನಾಡಿದ್ದ ಜಾನ್ವಿ, ‘ಕಳೆದ 5-6 ವರ್ಷಗಳಿಂದ ನಾನು ಹೆಚ್ಚು ಆಧ್ಯಾತ್ಮದ ಕಡೆಗೆ ಒಲವು ಬೆಳೆಸಿಕೊಂಡಿದ್ದೇನೆ. ನನಗೆ ವೆಂಕಟೇಶ್ವರ ಸ್ವಾಮಿಯ ಮೇಲೆ ಅಪಾರ ನಂಬಿಕೆ. ಯಾವಾಗ ಒಳಗಿನಿಂದ ಕರೆ ಬರುತ್ತದೆಯೋ, ಆಗ ನಾನು ತಿರುಪತಿಗೆ ಬಂದು ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆಯುತ್ತೇನೆ’ ಎಂದು ಹೇಳಿಕೊಂಡಿದ್ದರು.

ಇದನ್ನೂ ಓದಿ: ಅರ್ಜುನ್ ಕಪೂರ್ ಟ್ರೋಲ್ ಮಾಡಿದವರಿಗೆ ತಂಗಿ ಜಾನ್ವಿಯ ಎಚ್ಚರಿಕೆ

ಸಿನಿಮಾಗಳ ಬಗ್ಗೆ ಹೇಳೋದಾದರೆ, 2025ರಲ್ಲಿ ಜಾನ್ವಿ ಕಪೂರ್ ನಟನೆಯ ‘ಹೋಮ್‌ಬೌಂಡ್’, ‘ಪರಮ್ ಸುಂದರಿ’ ಹಾಗೂ ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾಗಳು ಬಿಡುಗಡೆಯಾಗಿದ್ದವು. ಬಾಲಿವುಡ್ ಮಾತ್ರವಲ್ಲದೇ ದಕ್ಷಿಣ ಭಾರತದ ಕಡೆಗೂ ಅವರು ಮುಖ ಮಾಡಿದ್ದಾರೆ. ರಾಮ್ ಚರಣ್ ಜೊತೆಗೆ ‘ಪೆದ್ದಿ’ ಸಿನಿಮಾದಲ್ಲಿ ಅವರು ನಟಿಸಿದ್ದು, ಏಪ್ರಿಲ್ 30ರಂದು ಆ ಚಿತ್ರ ತೆರೆಕಾಣಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

CM Siddaramaiah Press Meet Live: ಬಜೆಟ್ ಮಂಡನೆ ಬಳಿಕ ಸಿಎಂ ಸುದ್ದಿಗೋಷ್ಠಿಯ ನೇರ ಪ್ರಸಾರ

ಬೆಂಗಳೂರು, (ಮಾರ್ಚ್ 06): ಸಿಎಂ ಸಿದ್ದರಾಮಯ್ಯ (Siddaramaiah) ಅವರು ಇಂದು (ಮಾರ್ಚ್ 06)ಕರ್ನಾಟಕದ 2026ನೇ ಸಾಲಿನ ಬಜೆಟ್  (Karnataka Budget 2026)  ಮಂಡನೆ ಮಾಡಿದ್ದಾರೆ. ಒಟ್ಟು 4.48 ಲಕ್ಷ ಕೋಟಿ ರೂಪಾಯಿಯ ತಮ್ಮ 17ನೇ ಬಜೆಟ್ ಮಂಡನೆ ಮಾಡುವ ಮೂಲಕ ಸಿದ್ದರಾಮಯ್ಯ ಮತ್ತೊಂದು ದಾಖಲೆ ಸೃಷ್ಟಿಸಿದ್ದಾರೆ. ಇನ್ನು ಸಿದ್ದರಾಮಯ್ಯ ಅವರ ಬಜೆಟ್ ಬಗ್ಗೆ ಪರ – ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ. ಇದು ಜನಪರವಾದ ಬಜೆಟ್ ಎಂದು ಆಡಳಿತ ಪಕ್ಷ ಮೆಚ್ಚುಗೆ ಸೂಚಿಸದರೆ, ಸರ್ವರಿಗೂ ತೆರಿಗೆ, ಸರ್ವರಿಗೂ ಸಾಲದ ಬಜೆಟ್ ಇದಾಗಿದೆ ಎಂದು ವಿಪಕ್ಷ ಟೀಕಿಸಿದೆ. ಇನ್ನ ಬಜೆಟ್ ಬಳಿಕ ಸಿಎಂ ಸಿದ್ದರಾಮ್ಯಯ ಸುದ್ದಿಗೋಷ್ಠಿ ನಡೆಸಿದ್ದು, ನೇರಪ್ರಸಾರ ಇಲ್ಲಿದೆ ನೋಡಿ.

Source link

Samudrika Shastra: ಅಂಗೈಯ ಈ ಭಾಗದಲ್ಲಿ ಮಚ್ಚೆ ಇದ್ದರೆ, ನಿಮಗೆ ಎಂದಿಗೂ ಸಂಪತ್ತಿನ ಕೊರತೆ ಇರುವುದಿಲ್ಲ!

ಸಾಮುದ್ರಿಕ ಶಾಸ್ತ್ರದ ಪ್ರಕಾರ, ಕೈ ಮತ್ತು ಮುಖದ ಮೇಲಿನ ಮಚ್ಚೆಗಳು ವ್ಯಕ್ತಿಯ ಅದೃಷ್ಟ, ಸಂಪತ್ತು ಮತ್ತು ಜೀವನದ ಯಶಸ್ಸಿನ ಪಥವನ್ನು ಸೂಚಿಸುತ್ತವೆ. ವಿಶೇಷವಾಗಿ ಅಂಗೈಯಲ್ಲಿರುವ ಮಚ್ಚೆಗಳು ಅಪಾರ ಐಶ್ವರ್ಯದ ಸಂಕೇತವೆಂದು ನಂಬಲಾಗಿದೆ. ಹಾಗಾದರೆ, ಈ ಮಚ್ಚೆಗಳು ವ್ಯಕ್ತಿಯ ಜೀವನದ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಅಂಗೈಯ ಮಧ್ಯಭಾಗದ ಮಚ್ಚೆ: ಅದೃಷ್ಟದ ಲಕ್ಷಣ:

ಅಂಗೈಯ ಮಧ್ಯಭಾಗದಲ್ಲಿ ಮಚ್ಚೆ ಇರುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಇಂತಹ ವ್ಯಕ್ತಿಗಳು ಜೀವನದಲ್ಲಿ ಬಹಳ ಬೇಗನೆ ಆರ್ಥಿಕ ಸ್ಥಿರತೆಯನ್ನು ಮತ್ತು ಸಮೃದ್ಧಿಯನ್ನು ಕಂಡುಕೊಳ್ಳುತ್ತಾರೆ. ಕೇವಲ ಹಣವಷ್ಟೇ ಅಲ್ಲದೆ, ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆಯನ್ನು ಗಳಿಸುವ ಯೋಗ ಇವರಿಗಿರುತ್ತದೆ. ಒಂದು ಕುತೂಹಲಕಾರಿ ವಿಷಯವೆಂದರೆ, ಇವರು ತಮ್ಮ ಮುಷ್ಟಿಯನ್ನು ಮುಚ್ಚಿದಾಗ ಆ ಮಚ್ಚೆ ಅದೃಶ್ಯವಾಗುತ್ತದೆಯೋ, ಅಂತಹವರು ಅತೀ ಅದೃಷ್ಟಶಾಲಿಗಳು. ಸಾಮುದ್ರಿಕ ಶಾಸ್ತ್ರದಲ್ಲಿ ಇದನ್ನು ‘ಅಪರಿಮಿತ ಸಂಪತ್ತಿನ ಭಂಡಾರ’ ಎಂದೇ ಕರೆಯಲಾಗುತ್ತದೆ.

ಏಳು ತಲೆಮಾರುಗಳ ಸಂಪತ್ತು ಮತ್ತು ಲಕ್ಷ್ಮಿಯ ಕೃಪೆ:

ಬಲ ಅಂಗೈಯಲ್ಲಿ ಸ್ಪಷ್ಟ ಮತ್ತು ಆಳವಾದ ಮಚ್ಚೆಯನ್ನು ಹೊಂದಿರುವವರು ಬಹಳ ವಿರಳ ಮತ್ತು ವಿಶೇಷ. ನಂಬಿಕೆಯ ಪ್ರಕಾರ, ಇಂತಹವರ ಕುಟುಂಬವು ಏಳು ತಲೆಮಾರುಗಳವರೆಗೆ ಆರ್ಥಿಕ ಕೊರತೆಯನ್ನು ಕಾಣುವುದಿಲ್ಲ. ಇವರು ಸಂಪತ್ತನ್ನು ಕೇವಲ ಗಳಿಸುವುದಷ್ಟೇ ಅಲ್ಲ, ಅದನ್ನು ವೃದ್ಧಿಸುವ ಚಾಕಚಕ್ಯತೆಯನ್ನೂ ಹೊಂದಿರುತ್ತಾರೆ. ಮಾನಸಿಕವಾಗಿ ದೃಢವಾಗಿರುವ ಇವರು, ಲಕ್ಷ್ಮಿ ದೇವಿಯ ವಿಶೇಷ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ.

ಇದನ್ನೂ ಓದಿ: ಈ ಒಂದು ವಸ್ತುವನ್ನು ಎಂದಿಗೂ ಯಾರಿಗೂ ಉಡುಗೊರೆಯಾಗಿ ನೀಡಬೇಡಿ; ಅಪಾಯ ತಪ್ಪಿದ್ದಲ್ಲ!

ಉನ್ನತ ಸ್ಥಾನ ಮತ್ತು ಅಧಿಕಾರದ ಯೋಗ:

ಅಂಗೈಯಲ್ಲಿ ಮಚ್ಚೆ ಇರುವವರು ಜೀವನದಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ. ಇವರಲ್ಲಿರುವ ದೃಢ ನಿಶ್ಚಯ ಮತ್ತು ಅದೃಷ್ಟದ ಬಲದಿಂದ, ಇವರು ವಿಶೇಷವಾಗಿ ಸರ್ಕಾರಿ ಉದ್ಯೋಗಗಳಲ್ಲಿ ಅಥವಾ ಆಡಳಿತಾತ್ಮಕ ಹುದ್ದೆಗಳಲ್ಲಿ ಅತ್ಯಂತ ಯಶಸ್ಸನ್ನು ಸಾಧಿಸುತ್ತಾರೆ. ಇವರು ಎಲ್ಲಿಯೇ ಹೋದರೂ, ಅಲ್ಲಿನ ಪರಿಸರದಲ್ಲಿ ತಮ್ಮದೇ ಆದ ಪ್ರಭಾವವನ್ನು ಬೀರಬಲ್ಲ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ನಂಬಲಾಗಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link