2026ನೇ ಸಾಲಿನ ಕರ್ನಾಟಕ ಬಜೆಟ್ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಅಭಿವೃದ್ಧಿಗೆ ಬಂಪರ್ ಕೊಡುಗೆಗಳನ್ನು ಘೋಷಿಸಿದ್ದಾರೆ. ಹಿಂದುಳಿದ ವರ್ಗಗಳ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಉನ್ನತ ಮಟ್ಟದ ಸಮಿತಿ ರಚಿಸಲಾಗುವುದು. ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ವ್ಯಾಸಂಗಕ್ಕೆ ಸೌಲಭ್ಯಗಳನ್ನು ವಿಸ್ತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣಕ್ಕಾಗಿ ಹೊಸ ವಿದ್ಯಾರ್ಥಿನಿಲಯಗಳು, ಸಂತ ಶಿಶುನಾಳ ಶರೀಫರ ಹೆಸರಿನಲ್ಲಿ 10 ಹೊಸ ವಸತಿ ಶಾಲೆಗಳು ಮತ್ತು ಮೌಲಾನಾ ಆಜಾದ್ ಮಾದರಿ ಶಾಲೆಗಳ ಉನ್ನತೀಕರಣಕ್ಕೆ ಒತ್ತು ನೀಡಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಕೆ-ಸಿಇಟಿ, ಜೆಇಇ, ನೀಟ್ ಪರೀಕ್ಷೆಗಳಿಗೆ ತರಬೇತಿ ನೀಡಲು ನಾಲ್ಕು ವಸತಿ ಶಾಲೆಗಳನ್ನು ಸೆಂಟರ್ ಆಫ್ ಎಕ್ಸಲೆನ್ಸ್‌ಗಳನ್ನಾಗಿ ಸ್ಥಾಪಿಸಲಾಗುವುದು. ಜೈನ್, ಬೌದ್ಧ, ಸಿಖ್ ಸಮುದಾಯಗಳ ಅಭಿವೃದ್ಧಿಗೆ 100 ಕೋಟಿ ರೂಪಾಯಿ ಮತ್ತು ಬೌದ್ಧ ಧರ್ಮಾಚಾರಿಗಳಿಗೆ ಮಾಸಿಕ 6,000 ರೂಪಾಯಿ ಗೌರವಧನ ನೀಡಲಾಗುವುದು. ನಿರುದ್ಯೋಗಿ ಯುವಕರಿಗೆ ಫಾಸ್ಟ್ ಫುಡ್ ಟ್ರಕ್, ಮೊಬೈಲ್ ಕಿಚನ್ ಸೌಲಭ್ಯಗಳಿಗೆ ಸಹಾಯಧನ ಹಾಗೂ ಮಹಿಳಾ ಸ್ವಸಹಾಯ ಗುಂಪುಗಳಿಗೆ ಉತ್ತೇಜನ ನೀಡಲಾಗುವುದು. 5,000 ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಖರೀದಿಗೆ ತಲಾ 50,000 ರೂಪಾಯಿ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾರ್ಚ್ 6: ಕಾಲೇಜುಗಳು ಹಾಗು ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ (Student Union elections) ನಡೆಸಲು ಸರ್ಕಾರ ನಿರ್ಧರಿಸಿದೆ. ವಿದ್ಯಾರ್ಥಿ ಹಂತದಲ್ಲೇ ಮಕ್ಕಳಲ್ಲಿ ನಾಯಕತ್ವದ ಮನೋಭವ ಮತ್ತು ಹೊಣೆಗಾರಿಕೆ ಪ್ರಜಾಪ್ರಭುತ್ವ ಮೌಲ್ಯಗಳನ್ನು ಬೆಳೆಸಲು ಸರ್ಕಾರ ಈ ನಿರ್ಧಾರ ತೆಗೆದುಕೊಂಡಿರುವುದು ತಿಳಿದುಬಂದಿದೆ. ಮೂರು ದಶಕಗಳ ನಂತರ ವಿದ್ಯಾರ್ಥಿ ಸಂಘಗಳಿಗೆ ಚುನಾವಣೆ ನಡೆಯುವ ಕಾಲ ಸನ್ನಿಹಿತವಾಗಿದೆ.
ರಾಜ್ಯ ಸರ್ಕಾರ ಕೆಲ ತಿಂಗಳಿಂದಲೇ ಈ ನಿರ್ಧಾರದ ಪರಿಶೀಲನೆಯಲ್ಲಿತ್ತು. 2025ರ ಡಿಸೆಂಬರ್ ತಿಂಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಈ ನಿರ್ಧಾರ ತೆಗೆದುಕೊಳ್ಳಲು ಒಂದು ಸಮಿತಿ ರಚಿಸಿದ್ದರು. ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ನೇತೃತ್ವದ ಒಂದು ಮಂದಿ ಹಿರಿಯ ನಾಯಕರು ಈ ಮಂಡಳಿಯಲ್ಲಿದ್ದರು. ಬಹುತೇಕ ರಾಜಕೀಯ ಪಕ್ಷಗಳು ಸರ್ಕಾರದ ಈ ಪ್ರಸ್ತಾಪಕ್ಕೆ ಬೆಂಬಲ ವ್ಯಕ್ತಪಡಿಸಿವೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಸೇರಿದಂತೆ ಇವತ್ತಿನ ಹೆಚ್ಚಿನ ಹಿರಿಯ ರಾಜಕಾರಣಿಗಳು ವಿದ್ಯಾರ್ಥಿ ಸಂಘಗಳ ಚುನಾವಣಾ ರಾಜಕೀಯದಿಂದ ಪಳಗಿ ಬಂದಿರುವವರೆ.
ಕರ್ನಾಟಕದಲ್ಲಿ 90ರ ದಶಕದವರೆಗೂ ಕಾಲೇಜು ಮತ್ತು ವಿವಿಗಳಲ್ಲಿ ವಿದ್ಯಾರ್ಥಿ ಸಂಘಗಳ ಚುನಾವಣೆ ಬಹಳ ತೀವ್ರತೆಯಿಂದ ನಡೆಯುತ್ತಿತ್ತು. ಸಾರ್ವತ್ರಿಕ ಚುನಾವಣೆಗಳನ್ನೂ ಮೀರಿಸುವ ರೀತಿಯಲ್ಲಿ ಚುನಾವಣೆಗಳಾಗುತ್ತಿದ್ದವು. 1989-90ರ ಶೈಕ್ಷಣಿಕ ವರ್ಷದಲ್ಲಿ ರಾಜ್ಯ ಸರ್ಕಾರ ಮೊದಲ ಬಾರಿಗೆ ವಿದ್ಯಾರ್ಥಿ ಚುನಾವಣೆಗಳಿಗೆ ನಿಷೇಧ ಹಾಕಿತು. ಬಳಿಕ ಅದನ್ನು ತೆರವುಗೊಳಿಸಲಾಯಿತು. 1997-98ರಿಂದ ಚುನಾವಣೆ ಪೂರ್ಣವಾಗಿ ನಿಂತು ಹೋಯಿತು.
ಈಗ ರಾಜ್ಯದಲ್ಲಿ ಮತ್ತೆ ವಿದ್ಯಾರ್ಥಿ ಸಂಘದ ಚುನಾವಣೆ ಶುರು ಮಾಡಲು ಕಿಡಿ ಹಚ್ಚಿದ್ದು ಡಿಕೆ ಶಿವಕುಮಾರ್. ಅವರಿಂದ ಪುನಾರಂಭವಾದ ಈ ಯೋಚನೆಗೆ ಎಲ್ಲಾ ಪಕ್ಷಗಳ ಮುಖಂಡರು ಬೆಂಬಲ ನೀಡಿರುವುದು ವಿಶೇಷ. ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳೂ ವಿದ್ಯಾರ್ಥಿ ಘಟಕ ಹೊಂದಿವೆ. ಬಿಜೆಪಿಯಲ್ಲಿ ಎಬಿವಿಪಿ, ಕಾಂಗ್ರೆಸ್ನಲ್ಲಿ ಎನ್ಎಸ್ಯುಐ, ಎಡಪಕ್ಷಗಳ ಎಸ್ಎಫ್ಐ, ಎಐಎಸ್ಎ, ಎಎಪಿಯ ಎಸ್ಎಸ್ಎಪಿ, ಅಂಬೇಡ್ಕರ್ ಸ್ಟುಡೆಂಟ್ಸ್ ಅಸೋಸಿಯೇಶನ್ ಇತ್ಯಾದಿ ಹಲವು ವಿದ್ಯಾರ್ಥಿಗಳ ಸಂಘಗಳು ದೇಶಾದ್ಯಂತ ಇವೆ. ಕರ್ನಾಟಕದಲ್ಲಿ ಎಬಿವಿಪಿ, ಎನ್ಎಸ್ಯುಐ ಹಿಂದಿನಿಂದಲೂ ಬಲಿಷ್ಠ ಎನಿಸಿವೆ.
ರಣ್ವೀರ್ ಸಿಂಗ್ (Ranveer Singh) ನಟನೆಯ ‘ಧುರಂಧರ್’ ಸಿನಿಮಾ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಬಿಡುಗಡೆ ಆಗಿತ್ತು. ಬಾಕ್ಸ್ ಆಫೀಸ್ನಲ್ಲಿ ಹಲವು ಹಳೆಯ ದಾಖಲೆಗಳನ್ನು ಪುಡಿಗಟ್ಟಿದ ‘ಧುರಂಧರ್’ ಹಲವು ಹೊಸ ದಾಖಲೆಗಳನ್ನು ಬರೆಯಿತು. ಕೇವಲ ಹಿಂದಿ ಭಾಷೆಯಲ್ಲಿ ಮಾತ್ರವೇ ಬಿಡುಗಡೆ ಆಗಿದ್ದರೂ ಸಹ ಭಾಷೆಯ ಹಂಗಿಲ್ಲದೆ ದಕ್ಷಿಣದ ರಾಜ್ಯಗಳ ಜನರೂ ಸಹ ನೋಡಿ ಸಂಭ್ರಮಿಸಿದ್ದರು. ಆದರೆ ಸಿನಿಮಾವನ್ನು ತಮ್ಮ ಸ್ಥಳೀಯ ಭಾಷೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಆಗಲೂ ಸಹ ಕೆಲ ಪ್ರೇಕ್ಷಕರು ಮನವಿ ಮಾಡಿದ್ದರು. ಸಿನಿಮಾವನ್ನು ಆಂಧ್ರ-ತೆಲಂಗಾಣದಲ್ಲಿ ಬಿಡುಗಡೆ ಮಾಡಿದ್ದ ಮೈತ್ರಿ ಮೂವಿ ಮೇಕರ್ಸ್ ಸಹ ಸಿನಿಮಾವನ್ನು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡುವಂತೆ ಒತ್ತಾಯಿಸಿತ್ತು. ಇದೀಗ ‘ಧುರಂಧರ್ 2’ ಸಿನಿಮಾ ಬಿಡುಗಡೆ ಆಗುತ್ತಿದ್ದು, ಈ ಬಾರಿ ಮುಂಚಿತವಾಗಿ ಸಜ್ಜಾಗಿರುವ ಚಿತ್ರತಂಡ, ಹಿಂದಿ ಸೇರಿದಂತೆ ಒಟ್ಟಿಗೆ ಐದು ಭಾಷೆಗಳಲ್ಲಿ ಸಿನಿಮಾವನ್ನು ತೆರೆಗೆ ತರುತ್ತಿದೆ.
‘ಧುರಂಧರ್’ ಸಿನಿಮಾಕ್ಕೆ ದಕ್ಷಿಣದ ರಾಜ್ಯಗಳಲ್ಲಿ ಅದರಲ್ಲೂ ಕರ್ನಾಟಕ ಮತ್ತು ತೆಲುಗು ರಾಜ್ಯಗಳಿಂದ ಒಳ್ಳೆಯ ಕಲೆಕ್ಷನ್ ಹರಿದು ಬಂದಿತ್ತು. ಹಾಗಾಗಿ ಸಿನಿಮಾವನ್ನು ಹಿಂದಿಯ ಜೊತೆಗೆ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಒಟ್ಟಿಗೆ ಬಿಡುಗಡೆ ಮಾಡುತ್ತಿದೆ. ನಾಳೆ (ಮಾರ್ಚ್ 07) ಬಿಡುಗಡೆ ಆಗುತ್ತಿರುವ ಸಿನಿಮಾದ ಟ್ರೈಲರ್ ಸಹ ಹಿಂದಿ ಸೇರಿದಂತೆ ಇತರೆ ದಕ್ಷಿಣ ಭಾಷೆಗಳಲ್ಲಿ ಯೂಟ್ಯೂಬ್ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾವನ್ನು ಕೇವಲ ಹಿಂದಿಯಲ್ಲಿ ಮಾತ್ರವೇ ಬಿಡುಗಡೆ ಮಾಡದೆ ಇತರೆ ಭಾಷಿಕ ಸಿನಿಮಾ ಪ್ರೇಮಿಗಳಿಗೂ ಗೌರವ ಕೊಡುವ ಕಾರ್ಯವನ್ನು ‘ಧುರಂಧರ್’ ಚಿತ್ರತಂಡ ಮಾಡಿದೆ.
2025 ರಲ್ಲಿ ಬಿಡುಗಡೆ ಆಗಿದ್ದ ‘ಧುರಂಧರ್’ ಸಿನಿಮಾ ದಕ್ಷಿಣದ ರಾಜ್ಯಗಳಲ್ಲಿ ಒಳ್ಳೆಯ ಗಳಿಕೆ ಮಾಡಿತ್ತು. ಭಾರತದಲ್ಲಿ ‘ಧುರಂಧರ್’ ಸಿನಿಮಾ ಸುಮಾರು 900 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಇದರಲ್ಲಿ ಸುಮಾರು 250 ರಿಂದ 300 ಕೋಟಿ ಹಣ ದಕ್ಷಿಣ ಭಾರತದ ರಾಜ್ಯಗಳಿಂದಲೇ ಬಂದಿತ್ತು ಎನ್ನಲಾಗಿದೆ. ಕರ್ನಾಟಕ ಒಂದರಲ್ಲೇ ಈ ಸಿನಿಮಾಕ್ಕೆ 70 ರಿಂದ 90 ಕೋಟಿ ಗಳಿಕೆ ಆಗಿತ್ತು. ಅದೂ ಕೇವಲ ಹಿಂದಿ ವರ್ಷನ್ಗೆ. ಈ ಬಾರಿ ‘ಧುರಂಧರ್ 2’ ಸಿನಿಮಾಕ್ಕೂ ಇನ್ನೂ ಹೆಚ್ಚಿನ ಗಳಿಕೆ ಆಗಬಹುದು ಎನ್ನಲಾಗುತ್ತಿದೆ.
‘ಧುರಂಧರ್ 2’ ಸಿನಿಮಾವು ‘ಧುರಂಧರ್’ ಸಿನಿಮಾದ ಮುಂದಿನ ಭಾಗವಾಗಿದ್ದು, ‘ಧುರಂಧರ್’ ಸಿನಿಮಾನಲ್ಲಿದ್ದ ರಣ್ವೀರ್ ಸಿಂಗ್, ಅಕ್ಷಯ್ ಖನ್ನಾ, ಸಂಜಯ್ ದತ್ ಜೊತೆಗೆ ಇನ್ನೂ ಕೆಲವು ಪಾತ್ರಗಳು ಈ ಸಿನಿಮಾಕ್ಕೆ ಸೇರಿಕೊಂಡಿವೆ. ಸಿನಿಮಾವನ್ನು ಆದಿತ್ಯ ಧರ್ ನಿರ್ದೇಶನ ಮಾಡಿದ್ದಾರೆ. ಸಿನಿಮಾವನ್ನು ಜಿಯೋ ಸ್ಟುಡಿಯೋಸ್ ಮತ್ತು ಬಿ62 ನಿರ್ಮಾಣ ಸಂಸ್ಥೆಗಳು ಜಂಟಿಯಾಗಿ ಸಿನಿಮಾವನ್ನು ನಿರ್ಮಾಣ ಮಾಡಿವೆ. ಸಿನಿಮಾ ಮಾರ್ಚ್ 19ರಂದು ತೆರೆಗೆ ಬರಲಿದೆ.
ಬೆಂಗಳೂರು, ಮಾರ್ಚ್ 06: ಮನ್‌ರೇಗಾ (MNREGA) ಯೋಜನೆ ಮರುಸ್ಥಾಪನೆಗೆ ಆಗ್ರಹಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಕಾಂಗ್ರೆಸ್ ಬೃಹತ್ ಪ್ರತಿಭಟನೆಯಲ್ಲಿ ಮಹಾತ್ಮ ಗಾಂಧೀಜಿ ಹೆಸರನ್ನು ಶಾಶ್ವತಗೊಳಿಸುವ ಉದ್ದೇಶದಿಂದ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ನಾಮಕರಣ ಮಾಡುವುದಾಗಿ ಡಿಕೆ ಶಿವಕುಮಾರ್ ಹೇಳಿದ್ದರು. ಅದರಂತೆಯೇ ಇಂದಿನ ಕರ್ನಾಟಕ ಸರ್ಕಾರವು 2026ರ ಬಜೆಟ್‌ನಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯಿತಿಗಳನ್ನು ಮಹಾತ್ಮ ಗಾಂಧಿ ಗ್ರಾಮ ಪಂಚಾಯತಿ ಎಂದು ನಾಮಕರಣ ಮಾಡುವ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಗ್ರಾಮ ಪಂಚಾಯಿತಿಗಳ ಸ್ವಾವಲಂಬನೆಗಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸೋಲಾರ್ ಮೈಕ್ರೋ ಗ್ರಿಡ್‌ಗಳನ್ನು ಸ್ಥಾಪಿಸುವ ಅನಂತ ಯೋಜನೆಯನ್ನು ಜಾರಿಗೊಳಿಸಲಾಗುವುದು.
ಕೇಂದ್ರ ಸರ್ಕಾರದ ನರೇಗಾ ಯೋಜನೆಯ ಬದಲಾವಣೆಯ ಕುರಿತು ರಾಜ್ಯ ಸರ್ಕಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಬದಲಾವಣೆಯು ಯೋಜನೆಯ ಮೂಲ ಉದ್ದೇಶ ಮತ್ತು ಗ್ರಾಮ ಸ್ವರಾಜ್ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ವಾದಿಸಿದೆ. ರಾಜ್ಯದ ರೈತ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ತರಬೇತಿ, ಜಲಜೀವನ್ ಮಿಷನ್ ಅನುಷ್ಠಾನ, ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಅಭಿವೃದ್ಧಿಗಾಗಿ ಕಲ್ಯಾಣ ಪಥ ಯೋಜನೆಯಡಿ 1,000 ಕೋಟಿ ರೂ.ಗಳ ಅನುದಾನ ಸೇರಿದಂತೆ ಹಲವು ಪ್ರಮುಖ ಯೋಜನೆಗಳಿಗೆ ಒತ್ತು ನೀಡಲಾಗಿದೆ.
ಕರ್ನಾಟಕ ಬಜೆಟ್ ಕುರಿತ ಕ್ಷಣಕ್ಷಣದ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ದಳಪತಿ ವಿಜಯ್ ಹಾಗೂ ತ್ರಿಷಾ (Trisha) ನಡುವೆ ಸಂಬಂಧ ಇದೆ, ಈ ಕಾರಣದಿಂದ ವಿಜಯ್ ಅವರು ಪತ್ನಿಯಿಂದ ದೂರ ಆಗುತ್ತಿದ್ದಾರೆ ಎಂಬ ಮಾತು ಜೋರಾಗಿದೆ. ವಿಜಯ್ ಪತ್ನಿ ಸಂಗೀತಾ ಅವರು ಖುದ್ದು, ‘ವಿಜಯ್ಗೆ ನಟಿಯ ಜೊತೆ ಸಂಬಂಧ ಇದೆ’ ಎಂದು ಆರೋಪಿಸಿದ್ದಾರೆ. ಈ ಬೆನ್ನಲ್ಲೇ ವಿಜಯ್ ಹಾಗೂ ತ್ರಿಷಾ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ವಿವಾಹ ಕಾರ್ಯಕ್ರಮ ಒಂದಕ್ಕೆ, ಒಂದೇ ಕಾರಲ್ಲಿ ಇವರು ಆಗಮಿಸಿದರು. ಈ ಬೆನ್ನಲ್ಲೇ ವ್ಯಕ್ತಿಯೋರ್ವ ನೀಡಿದ ಹೇಳಿಕೆ ಚರ್ಚೆಗೆ ಕಾರಣ ಆಗಿದೆ.
ರಾಜಕೀಯ ವಿಮರ್ಶಕ ತಿರುಚಿ ಸೂರ್ಯ ಅವರು ಸಂದರ್ಶನ ಒಂದರಲ್ಲಿ ಮಾತನಾಡಿದ್ದರು. ಅವರು ಹೋಟೆಲ್ ಒಂದರಲ್ಲಿ ತ್ರಿಷಾ ಅವರನ್ನು ನೋಡಿದ್ದಾರಂತೆ. ಅವರ ಹೇಳಿಕೆಯನ್ನು ಚರ್ಚೆಯನ್ನು ಹುಟ್ಟುಹಾಕಿದೆ. ಹೋಟೆಲ್ನಲ್ಲಿ ನೋಡಿದ ಬಳಿಕ ಅವರು ಸುಮ್ಮನೆ ಇರಲಿಲ್ಲ. ಅದನ್ನು ಮಾಧ್ಯಮಗಳ ಮುಂದೆ ಹೇಳಿದ್ದಾರೆ. ಅಲ್ಲದೆ, ಚಾಲೆಂಜ್ ಕೂಡ ಮಾಡಿದ್ದಾರೆ.
‘ನಾನು ವಿಜಯ್ ಹಾಗೂ ತ್ರಿಷಾ ಅವರನ್ನು ಒಂದೇ ಹೋಟೆಲ್ನಲ್ಲಿ ನೋಡಿದ್ದೇನೆ. ಈ ಹೇಳಿಕೆ ಬಳಿಕ ವಿಜಯ್ ಹಾಗೂ ತ್ರಿಷಾ ಅವರು ನನ್ನ ವಿರುದ್ಧ ಮಾನ ನಷ್ಟ ಮೊಕದ್ದಮೆ ಹೂಡಬಹುದು. ನಾನು ಅವರನ್ನು ಎಲ್ಲಿ ನೋಡಿದ್ದೇನೆ ಎಂಬುದಕ್ಕೆ ನನ್ನ ಬಳಿ ಸಾಕ್ಷಿ ಇದೆ. ನಾನು ಅದನ್ನು ಕೋರ್ಟ್ಗೆ ನೀಡುತ್ತೇನೆ’ ಎಂದು ಚಾಲೆಂಜ್ ಮಾಡಿದ್ದಾರೆ.
ಸಾಮಾನ್ಯವಾಗಿ ಈ ರೀತಿಯ ಅಫೇರ್ ವಿಷಯ ಪ್ರಸ್ತಾಪ ಆದಾಗ ಆ ನಟ-ನಟಿ ದೂರ ಇರಲು ಪ್ರಯತ್ನಿಸುತ್ತಾರೆ. ಸಾರ್ವಜನಿಕವಾಗಿ ಒಟ್ಟಿಗೆ ಕಾಣಿಸಿಕೊಳ್ಳುವುದನ್ನು ತಪ್ಪಿಸಿಕೊಳ್ಳುತ್ತಾರೆ. ಆದರೆ, ವಿಜಯ್ ಹಾಗೂ ತ್ರಿಷಾ ಆ ರೀತಿ ಮಾಡಿಲ್ಲ. ಇವರು ಒಟ್ಟಿಗೆ ಕಾಣಿಸಿಕೊಳ್ಳುವುದರ ಮೂಲಕ ಚರ್ಚೆ ಹುಟ್ಟುಹಾಕಿದೆ.
ಯಶ್ ನಟನೆಯ ‘ಟಾಕ್ಸಿಕ್’ (Toxic) ಸಿನಿಮಾದ ಬಿಡುಗಡೆ ಮುಂದೂಡಲಾಗಿದ್ದು, ಇದೀಗ ಅದೇ ದಿನಾಂಕಕ್ಕೆ ಪವನ್ ಕಲ್ಯಾಣ್ ನಟನೆಯ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಆಗಲಿದೆ. ಈ ಮೊದಲು ಮಾರ್ಚ್ 26ಕ್ಕೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿತ್ತು. ಆದರೆ ‘ಟಾಕ್ಸಿಕ್’ ಹಿಂದೆ ಸರಿದಿದ್ದರಿಂದ ಆ ದಿನಾಂಕದಂದು ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಬಿಡುಗಡೆ ಆಗಲಿದೆ. ಇದು ಪವನ್ ಕಲ್ಯಾಣ್ ಅವರ ‘ತಾತ್ಕಾಲಿಕ ಕೊನೆಯ ಸಿನಿಮಾ’ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಇದೇ ಕಾರಣಕ್ಕೆ ಬಲು ಅದ್ಧೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಪವನ್ ಕಲ್ಯಾಣ್ ಇದೀಗ ಆಂಧ್ರದ ಡಿಸಿಎಂ ಆಗಿದ್ದು, ಅವರು ಆಂಧ್ರ ಪ್ರದೇಶ ಚುನಾವಣೆ ಘೋಷಣೆಗೆ ಮುಂಚೆ ಒಪ್ಪಿಕೊಂಡಿದ್ದ ಮೂರು ಸಿನಿಮಾಗಳಲ್ಲಿ ಕೊನೆಯ ಸಿನಿಮಾ ‘ಉಸ್ತಾದ್ ಭಗತ್ ಸಿಂಗ್’ ಆಗಿದೆ. ಈ ಸಿನಿಮಾದ ಬಳಿಕ ಅಧಿಕಾರದಲ್ಲಿದ್ದಷ್ಟು ವರ್ಷ ಅವರು ಸಿನಿಮಾಗಳಲ್ಲಿ ನಟಿಸುವುದಿಲ್ಲ ಎನ್ನಲಾಗುತ್ತಿದೆ. ಹಾಗಾಗಿ ತಾತ್ಕಾಲಿಕವಾಗಿ ಇದು ಅವರ ಕೊನೆಯ ಸಿನಿಮಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದೇ ಕಾರಣಕ್ಕೆ ಸಿನಿಮಾವನ್ನು ಭಾರಿ ಅದ್ಧೂರಿಯಾಗಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಮಾರ್ಚ್ 19ರಂದು ಅಧಿಕೃತವಾಗಿ ಬಿಡುಗಡೆ ಆಗಲಿದ್ದು, ಹಿಂದಿನ ದಿನದಿಂದಲೇ ಆಂಧ್ರ, ತೆಲಂಗಾಣ, ಕರ್ನಾಟಕ ರಾಜ್ಯಗಳಲ್ಲಿ ಪ್ರೀಮಿಯರ್ ಶೋಗಳನ್ನು ಆಯೋಜಿಸಲು ಸಿದ್ಧತೆ ಆರಂಭವಾಗಿದೆ. ಅಲ್ಲದೆ, ಸಿನಿಮಾದ ಪ್ರೀಮಿಯರ್ ಶೋ ಟಿಕೆಟ್ಗೆ ಬೆಲೆ ಸಹ ಬಲು ದುಬಾರಿಯೇ ಇರಲಿದೆ. ತೆಲಂಗಾಣ ಮತ್ತು ಆಂಧ್ರ ಎರಡೂ ರಾಜ್ಯಗಳಲ್ಲಿ ಟಿಕೆಟ್ ಬೆಲೆ ಏರಿಸಲು ಸುಲಭವಾಗಿ ಅವಕಾಶ ಸಿಗಲಿದೆ. ಇನ್ನು ಕರ್ನಾಟಕದಲ್ಲಿ ಯಾವ ಅನುಮತಿಯೂ ಬೇಕಾಗಿಲ್ಲ. ಹಾಗಾಗಿ ಸಹಜವಾಗಿಯೇ ನೆರೆಯ ರಾಜ್ಯಗಳಿಗಿಂತಲೂ ಕರ್ನಾಟಕದಲ್ಲೇ ‘ಉಸ್ತಾದ್ ಭಗತ್ ಸಿಂಗ್’ ಸಿನಿಮಾ ಟಿಕೆಟ್ ಬೆಲೆ ಹೆಚ್ಚಿರಲಿದೆ.
‘ಉಸ್ತಾದ್ ಭಗತ್ ಸಿಂಗ್’ ಸಿನಿಮಾನಲ್ಲಿ ಪವನ್ ಕಲ್ಯಾಣ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಕನ್ನಡತಿ ಶ್ರೀಲೀಲಾ ನಾಯಕಿ. ಸಿನಿಮಾ ನಿರ್ದೇಶನ ಮಾಡಿರುವುದು ಪವನ್ ಅವರ ಆಪ್ತ ಹರೀಶ್ ಶಂಕರ್. ಸಿನಿಮಾಕ್ಕೆ ದೇವಿಶ್ರೀ ಪ್ರಸಾದ್ ಮತ್ತು ತಮನ್ ಇಬ್ಬರೂ ಸಂಗೀತ ನೀಡಿದ್ದಾರೆ. ಸಿನಿಮಾ ಇದೇ ಮಾರ್ಚ್ 19ರಂದು ತೆರೆಗೆ ಬರಲಿದೆ.
ರಣವೀರ್ ಸಿಂಗ್ (Ranveer Singh) ನಟಿಸಿ ಆದಿತ್ಯ ಧರ್ ನಿರ್ದೇಶನ ಮಾಡಿದ್ದ ‘ಧುರಂಧರ್’ ಮೊದಲ ಭಾಗ ದಾಖಲೆಯ ಗೆಲುವು ಕಂಡಿದೆ. ಇದೀಗ ಸಿನಿಮಾದ ಎರಡನೇ ಭಾಗ ‘ಧುರಂಧರ್ 2’ ಬಿಡುಗಡೆ ಆಗುತ್ತಿದ್ದು, ಭಾರತದ ಬಹು ನಿರೀಕ್ಷಿತ ಸಿನಿಮಾಗಳಲ್ಲಿ ಒಂದೆನಿಸಿಕೊಂಡಿದೆ. ಸಿನಿಮಾ ಮಾರ್ಚ್ 19ರಂದು ಬಿಡುಗಡೆ ಆಗುತ್ತಿದ್ದು, ಸಿನಿಮಾದ ಟ್ರೈಲರ್ಗಾಗಿ ಪ್ರೇಕ್ಷಕರು ಕೆಲ ಸಮಯದಿಂದ ಕಾಯುತ್ತಲೇ ಇದ್ದಾರೆ. ಮಾರ್ಚ್ 03ರಂದು ಟ್ರೈಲರ್ ಬಿಡುಗಡೆ ಆಗಲಿದೆ ಎಂಬ ಸುದ್ದಿ ಹರಡಿತ್ತು ಆದರೆ ಅಂದು ಟ್ರೈಲರ್ ಬಿಡುಗಡೆ ಆಗಿರಲಿಲ್ಲ. ಆದರೆ ಇದೀಗ ಸಿನಿಮಾದ ಟ್ರೈಲರ್ ಬಿಡುಗಡೆ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಮಾಹಿತಿ ನೀಡಿದೆ.
ನಾಳೆ ಅಂದರೆ ಮಾರ್ಚ್ 7 ರ ಶನಿವಾರದಂದು ಬೆಳಿಗ್ಗೆ 11:01 ಕ್ಕೆ ಸಿನಿಮಾದ ಟ್ರೈಲರ್ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ರಣವೀರ್ ಸಿಂಗ್ ಸೇರಿದಂತೆ ಸಿನಿಮಾಕ್ಕೆ ಸಂಬಂಧಿಸಿದ ಇತರೆ ಕೆಲವರು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ರಣ್ವೀರ್ ಸಿಂಗ್, ‘ನಿಮ್ಮನ್ನು ನೀವು ಸಜ್ಜುಗೊಳಿಸಿಕೊಳ್ಳಿ’ ಎಂದಿದ್ದಾರೆ. ಅವರ ಜೊತೆಗೆ ಸಂಜಯ್ ದತ್, ಅರ್ಜುನ್ ರಾಂಪಾಲ್, ಮಾಧವನ್ ಹಾಗೂ ಅಕ್ಷಯ್ ಖನ್ನಾ ಅಂತಹ ಸ್ಟಾರ್ ಕಲಾವಿದರು ಈ ಚಿತ್ರದಲ್ಲಿದ್ದಾರೆ. ಈ ಚಿತ್ರವು ಕನ್ನಡ ಸೇರಿದಂತೆ ಪಂಚಭಾಷೆಗಳಲ್ಲಿ ಮಾರ್ಚ್ 19 ರಂದು ತೆರೆಕಾಣಲಿದೆ.
‘ಧುರಂಧರ್ 2’ ಸಿನಿಮಾದ ಟೀಸರ್ ಒಂದು ಈ ಮುಂಚೆಯೇ ಬಿಡುಗಡೆ ಆಗಿತ್ತು. ರಣ್ವೀರ್ ಸಿಂಗ್ ಯಂಗ್ ಲುಕ್ನಲ್ಲಿ ಟೀಸರ್ನಲ್ಲಿ ಕಾಣಿಸಿಕೊಂಡಿದ್ದರು. ‘ಧುರಂಧರ್ 2’ ಸಿನಿಮಾ ರಣ್ವೀರ್ ಸಿಂಗ್ ಪಾತ್ರ ಪಾಕಿಸ್ತಾನಕ್ಕೆ ಹೋಗುವ ಮುಂಚಿನ ಕತೆಯನ್ನು ಒಳಗೊಂಡಿರಲಿದೆ ಎಂಬ ಸುದ್ದಿ ಹರಡಿತ್ತು. ಇದೀಗ ಟ್ರೈಲರ್ ಬಿಡುಗಡೆ ಆಗುತ್ತಿದ್ದು, ‘ಧುರಂಧರ್ 2’ ಸಿನಿಮಾದ ಸಾಕಷ್ಟು ಮಾಹಿತಿಯನ್ನು ಬಿಟ್ಟುಕೊಡಲಿದೆ. ಅಲ್ಲದೆ, ಸಿನಿಮಾದ ಕತೆ ಏನಾಗಿರಬಹುದು ಎಂಬ ಸುಳಿವನ್ನು ಸಹ ನೀಡಲಿದೆ.
‘ಧುರಂಧರ್’ ಸಿನಿಮಾ ಭಾರತೀಯ ಗೂಢಚಾರಿಯೊಬ್ಬ ಪಾಕಿಸ್ತಾನಕ್ಕೆ ಹೋಗಿ ಅಲ್ಲಿನ ಭಯೋತ್ಪಾದಕರ ಸಿಂಡಿಕೇಟ್ ಅನ್ನು ಮಣ್ಣು ಮಾಡುವ ಕತೆಯನ್ನು ಒಳಗೊಂಡಿದೆ. ಸಿನಿಮಾನಲ್ಲಿ ರಣ್ವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್ ಸೇರಿದಂತೆ ಇನ್ನೂ ಕೆಲವು ಪ್ರಮುಖ ನಟ-ನಟಿಯರು ನಟಿಸಿದ್ದಾರೆ.
ಬೆಂಗಳೂರು, ಮಾರ್ಚ್ 6: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಂಡಿಸಿದ 2026-27ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ (Karnataka Budget 2026) ಅಡಿಕೆ ಬೆಳೆಗಾರರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಮಹತ್ವದ ಘೋಷಣೆ ಮಾಡಲಾಗಿದೆ. ಅಡಿಕೆ ಬೆಳೆಗೆ ತೀವ್ರ ಹಾನಿ ಉಂಟುಮಾಡುತ್ತಿರುವ ಎಲೆ ಚುಕ್ಕಿ, ಹಳದಿ ಎಲೆ ಹಾಗೂ ಕೊಳೆ ರೋಗಗಳನ್ನು ನಿಯಂತ್ರಿಸುವ ಸಲುವಾಗಿ ಅಧ್ಯಯನ ಚಟುವಟಿಕೆಗಳಿಗೆ 10 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಸರ್ಕಾರ ಬಜೆಟ್‌ನಲ್ಲಿ ಘೋಷಿಸಿದೆ.
ಬಜೆಟ್ ಭಾಷಣದಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಅಡಿಕೆ ಬೆಳೆಯ ವಿವಿಧ ರೋಗಗಳು ಹಾಗೂ ತೆಂಗು ಬೆಳೆಗೆ ಕಾಣಿಸಿಕೊಳ್ಳುವ ಕಪ್ಪು ತಲೆ ಹುಳು ಮತ್ತು ಬಿಳಿ ನೊಣಗಳ ನಿಯಂತ್ರಣಕ್ಕಾಗಿ ಸಮುದಾಯ ಆಧಾರಿತ ರೋಗ–ಕೀಟ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಯೋಜನೆಯನ್ನು ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ವಿಜ್ಞಾನ ಕೇಂದ್ರಗಳ ಸಹಯೋಗದೊಂದಿಗೆ ಜಾರಿಗೊಳಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗೆ ಉತ್ತೇಜನ ನೀಡಲು 64 ಕೋಟಿ ರೂ.
ತೋಟಗಾರಿಕೆ ಉತ್ಪನ್ನಗಳ ಸಂಸ್ಕರಣೆಗೆ ಉತ್ತೇಜನ ನೀಡಲು ಸರ್ಕಾರ ಮತ್ತೊಂದು ಮಹತ್ವದ ನಿರ್ಧಾರ ಕೈಗೊಂಡಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕು ಹಾಗೂ ವಿಜಯಪುರ ಜಿಲ್ಲೆಯ ತೊರವಿಯಲ್ಲಿ ಒಟ್ಟು 12,000 ಮೆಟ್ರಿಕ್ ಟನ್ ಸಾಮರ್ಥ್ಯದ ಎರಡು ಶೀತಲಗೃಹಗಳನ್ನು 64 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುವುದು ಎಂದು ಘೋಷಿಸಲಾಗಿದೆ. ಜೊತೆಗೆ, ರಾಜ್ಯದ ಎಲ್ಲಾ ಕೃಷಿ ಮಾರುಕಟ್ಟೆಗಳಲ್ಲಿ ಹಂತ ಹಂತವಾಗಿ ಶೀತಲಗೃಹಗಳನ್ನು ನಿರ್ಮಿಸುವ ಯೋಜನೆಯೂ ಸರ್ಕಾರದ ಮುಂದಿದೆ.
ತೋಟಗಾರಿಕೆಯನ್ನು ರೈತರ ಆದಾಯ ಹೆಚ್ಚಿಸುವ ಪ್ರಮುಖ ಕ್ಷೇತ್ರವಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಸರ್ಕಾರ ಹೊಂದಿದೆ. ಉತ್ತಮ ಗುಣಮಟ್ಟದ, ಅಧಿಕ ಮೌಲ್ಯದ ಮತ್ತು ಮಾರುಕಟ್ಟೆ ಆಧಾರಿತ ತೋಟಗಾರಿಕೆ ಬೆಳೆಗಳಿಗೆ ಆದ್ಯತೆ ನೀಡಲಾಗುತ್ತಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯದಲ್ಲಿ ಸುಮಾರು 89,000 ಹೆಕ್ಟೇರ್ ಪ್ರದೇಶದಲ್ಲಿ ಹೊಸ ತೋಟಗಾರಿಕೆ ಬೆಳೆಗಳನ್ನು ಅಳವಡಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಇದೇ ಅವಧಿಯಲ್ಲಿ 2.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹನಿ ನೀರಾವರಿ ವ್ಯವಸ್ಥೆ ಅಳವಡಿಕೆಯಾಗಿದ್ದು, 2.36 ಲಕ್ಷ ರೈತರಿಗೆ ಇದರ ಪ್ರಯೋಜನ ದೊರೆತಿದೆ. ಬೆಳೆ ವಿಮೆ ಯೋಜನೆಯಡಿ 11 ಲಕ್ಷ ರೈತರಿಗೆ ಒಟ್ಟು 2,378 ಕೋಟಿ ರೂಪಾಯಿ ಪರಿಹಾರ ನೀಡಲಾಗಿದೆ. ಜೊತೆಗೆ 21,360 ಫಲಾನುಭವಿಗಳಿಗೆ 9,800 ಕೊಯ್ಲೋತ್ತರ ಘಟಕಗಳನ್ನು ನಿರ್ಮಿಸಲು ಸಹಾಯ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಇದರ ಜೊತೆಗೆ ತೋಟಗಾರಿಕೆ ಇಲಾಖೆಯ ಕ್ಷೇತ್ರಗಳು ಮತ್ತು ನರ್ಸರಿಗಳಲ್ಲಿರುವ ಲಭ್ಯ ಜಮೀನನ್ನು ಬಳಸಿಕೊಂಡು ಉತ್ಕೃಷ್ಟ ಮೌಲ್ಯದ ತೋಟಗಳ ಅಭಿವೃದ್ಧಿ, ಕೊಯ್ಲೋತ್ತರ ಸೌಲಭ್ಯಗಳು ಹಾಗೂ ತೋಟಗಾರಿಕೆ ಆಧಾರಿತ ಕೈಗಾರಿಕೆಗಳನ್ನು ಪಿಪಿಪಿ (PPP) ಮಾದರಿಯಲ್ಲಿ ಸ್ಥಾಪಿಸಲು ಸರ್ಕಾರ ಯೋಜನೆ ರೂಪಿಸಿದೆ.
ಕರ್ನಾಟಕ ಬಜೆಟ್ ಕುರಿತ ಕ್ಷಣಕ್ಷಣದ ಅಪ್ಡೇಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, ಮಾ.6: ಇಂದು (ಮಾ.6) ಮಂಡನೆಯಾದ 2026-27ನೇ ಸಾಲಿನ ರಾಜ್ಯ ಬಜೆಟ್‌ನ ಒಟ್ಟು ಗಾತ್ರ ಸರಿಸುಮಾರು 4.48 ಲಕ್ಷ ಕೋಟಿ ರೂ. ಇದರಲ್ಲಿ ಹಲವು ಇಲಾಖೆಗಳಿಗೆ ಹಂಚಿಕೆಗಳನ್ನು ಮಾಡಲಾಗಿದೆ. ಅದರಲ್ಲಿ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳ ನಡುವೆ ಸಮತೋಲನ ಕಾಯ್ದುಕೊಳ್ಳಲು ಸರ್ಕಾರವು ವಿವಿಧ ಇಲಾಖೆಗಳಿಗೆ ಹಣವನ್ನು ನೀಡಿದೆ. ಯಾವೆಲ್ಲ ಇಲಾಖೆಗಳಿಗೆ ಎಷ್ಟು ಅನುದಾನವನ್ನು ನೀಡಿದೆ ಎಂಬುದನ್ನು ಇಲ್ಲಿ ಹೇಳಲಾಗಿದೆ.
ಇನ್ನು ಈ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಪ್ರಥಮ ಆದ್ಯತೆ ನೀಡಿಲಾಗಿದೆ. ರಾಜ್ಯದ ಇತಿಹಾಸದಲ್ಲೇ ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿ ಗರಿಷ್ಠ ಮೊತ್ತವನ್ನು ಮೀಸಲಿಡಲಾಗಿದೆ. 800 ಕೆಪಿಎಸ್ (KPS) ಶಾಲೆಗಳ ಸ್ಥಾಪನೆ ಮತ್ತು 15,000 ಶಿಕ್ಷಕರ ನೇಮಕಾತಿಗೆ ಒತ್ತು ನೀಡಲಾಗಿದೆ. ಇದರ ಜತೆಗೆ ಗ್ಯಾರಂಟಿಗೂ ಬಲ ನೀಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ನೀಡಲಾದ ದೊಡ್ಡ ಮೊತ್ತವು ‘ಗೃಹಲಕ್ಷ್ಮಿ’ ಅಂತಹ ಗ್ಯಾರಂಟಿ ಯೋಜನೆಗಳ ಮುಂದುವರಿಕೆಯನ್ನು ಖಚಿತಪಡಿಸಿದೆ.
ನೀರಾವರಿ ಮತ್ತು ಗ್ರಾಮೀಣಾಭಿವೃದ್ಧಿಗೂ ಹೆಚ್ಚು ಅನುದಾನಗಳನ್ನು ನೀಡಲಾಗಿದೆ. ಕೃಷಿ ಮತ್ತು ಗ್ರಾಮೀಣ ಭಾಗದ ಮೂಲಸೌಕರ್ಯಕ್ಕೆ ಸರಿಸುಮಾರು 50,000 ಕೋಟಿಗೂ ಅಧಿಕ ಹಣವನ್ನು ವಿವಿಧ ಇಲಾಖೆಗಳ ಮೂಲಕ ಹಂಚಲಾಗಿದೆ.
ಇಲಾಖಾವಾರು ಅನುದಾನ:
ಇಲಾಖೆಯ ಹೆಸರು
ಹಂಚಿಕೆಯಾದ ಅನುದಾನ (ಕೋಟಿ ರೂ.ಗಳಲ್ಲಿ)
ಶಿಕ್ಷಣ ಇಲಾಖೆ
47,224
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ
34,929
ಇಂಧನ ಇಲಾಖೆ
29,947
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
26,559
ಒಳಾಡಳಿತ ಮತ್ತು ಸಾರಿಗೆ ಇಲಾಖೆ
23,100
ಜಲಸಂಪನ್ಮೂಲ (ನೀರಾವರಿ)
22,436
ನಗರಾಭಿವೃದ್ಧಿ ಮತ್ತು ವಸತಿ ಇಲಾಖೆ
22,203
ಕಂದಾಯ ಇಲಾಖೆ
19,843
ಸಮಾಜ ಕಲ್ಯಾಣ ಇಲಾಖೆ
18,612
ಆರೋಗ್ಯ ಮತ್ತು ಕುಟುಂಬ ಕಲ್ಯಾಣ
17,817
ಲೋಕೋಪಯೋಗಿ ಇಲಾಖೆ (PWD)
11,424
ಕೃಷಿ ಇಲಾಖೆ
8,373
ಆಹಾರ ಮತ್ತು ನಾಗರಿಕ ಸರಬರಾಜು
7,942
ಪಶುಸಂಗೋಪನೆ ಮತ್ತು ಮೀನುಗಾರಿಕೆ
4,084
ಇತರ ಇಲಾಖೆಗಳು
1,72,757
ಬೆಂಗಳೂರು ನಗರಕ್ಕೆ ಬಂಪರ್ ಕೊಡುಗೆ
ಇದರ ಜತೆಗೆ ಬೆಂಗಳೂರನ್ನು ಅಂತರಾಷ್ಟ್ರೀಯ ಮಟ್ಟದ ನಗರವನ್ನಾಗಿ ರೂಪಿಸಲು ‘ನಮ್ಮ ಬೆಂಗಳೂರು’ ಮತ್ತು ‘ಬ್ರ್ಯಾಂಡ್ ಬೆಂಗಳೂರು’ ಯೋಜನೆಗಳ ಅಡಿಯಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ. ಬೆಂಗಳೂರಿನ ಪ್ರಮುಖ ಟ್ರಾಫಿಕ್ ಪಾಯಿಂಟ್‌ಗಳಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಟನಲ್ ರಸ್ತೆ (Tunnel Roads) ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಮೀಸಲಿಡಲಾಗಿದೆ. ಮೊದಲ ಹಂತದಲ್ಲಿ ಹೆಬ್ಬಾಳದಿಂದ ಸಿಲ್ಕ್ ಬೋರ್ಡ್‌ವರೆಗಿನ ಯೋಜನೆಯ ವೇಗಕ್ಕೆ ಒತ್ತು ನೀಡಲಾಗಿದೆ.
ಮೆಟ್ರೋ 3ನೇ ಹಂತದ ಕಾಮಗಾರಿಗಳಿಗೆ ಮತ್ತು ಹೊಸ ಮಾರ್ಗಗಳ ಸಮೀಕ್ಷೆಗಾಗಿ ಸುಮಾರು 5,000 ಕೋಟಿ ರೂ. ಗೂ ಅಧಿಕ ಹಣವನ್ನು ಮೀಸಲಿಡಲಾಗಿದೆ. ವಿಮಾನ ನಿಲ್ದಾಣದ ಮಾರ್ಗವನ್ನು ಶೀಘ್ರವಾಗಿ ಪೂರ್ಣಗೊಳಿಸಲು ಗಡುವು ನೀಡಲಾಗಿದೆ. ರಸ್ತೆ ಗುಂಡಿ ಮುಚ್ಚುವುದು, ಬಿಳಿ ರಸ್ತೆ ನಿರ್ಮಾಣ ಮತ್ತು ಮಳೆನೀರು ಕಾಲುವೆಗಳ ಅಭಿವೃದ್ಧಿಗೆ ಸುಮಾರು 3,000 ಕೋಟಿ ರೂ. ಅನುದಾನ ನೀಡಲಾಗಿದೆ. ಬಹುಕಾಲದ ಬೇಡಿಕೆಯಾದ ಪೆರಿಫೆರಲ್ ರಿಂಗ್ ರೋಡ್ (PRR) ಭೂಸ್ವಾಧೀನ ಪ್ರಕ್ರಿಯೆ ಚುರುಕುಗೊಳಿಸಲು ಹಣಕಾಸಿನ ನೆರವು ಘೋಷಿಸಲಾಗಿದೆ. ಬೆಂಗಳೂರಿನ 110 ಹಳ್ಳಿಗಳಿಗೆ ಕಾವೇರಿ ನೀರು ಪೂರೈಸುವ ಯೋಜನೆಯ ಅಂತಿಮ ಹಂತದ ಕಾಮಗಾರಿಗಳಿಗೆ ಅಗತ್ಯ ಅನುದಾನ ಒದಗಿಸಲಾಗಿದೆ.
ಆಶಿಕಾ ರಂಗನಾಥ್ ಅವರು ಥೇಟ್ ಯುವ ರಾಣಿಯಂತೆ ಕಂಗೊಳಿಸಿದ್ದಾರೆ. ಅವರ ಹೊಸ ಫೋಟೋಗಳು ಗಮನ ಸೆಳೆದಿವೆ. ಅವರ ಕ್ಲಾಸಿಕ್ ಗ್ಲಾಮ್ ಲುಕ್ ಅನ್ನು ಅಭಿಮಾನಿಗಳು ಬಹುವಾಗಿ ಇಷ್ಟಪಟ್ಟಿದ್ದಾರೆ.
ಆಶಿಕಾ ರಂಗನಾಥ್ ಅವರು ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಸಮಯ ಸಿಕ್ಕಾಗ ಫೋಟೋಶೂಟ್ ಕೂಡ ಮಾಡಿಸುತ್ತಾ ಇರುತ್ತಾರೆ. ಈಗ ಅವರ ಹೊಸ ಫೋಟೋದ ಥೀಮ್ ಗಮನ ಸೆಳೆದಿದೆ.
ಆಶಿಕಾ ಫೋಟೋಗಳು ರೆಟ್ರೋ ಥೀಮ್ನಲ್ಲಿ ಇವೆ. ಕೈಯಲ್ಲಿ ಹಿಡಿದ ಗುಲಾಬಿ ಹೂವು ಗಮನ ಸೆಳೆದಿದೆ. ಆಶಿಕಾ ಫೋಟೋ ಹಂಚಿಕೊಂಡ ಕೆಲವೇ ಸಮಯದಲ್ಲಿ ಲಕ್ಷಾಂತರ ವೀವ್ಸ್ ಪಡೆದುಕೊಂಡಿದೆ.
ಆಶಿಕಾ ಅವರು ಇತ್ತೀಚೆಗೆ ಬ್ಯಾಕ್ ಟು ಬ್ಯಾಕ್ ಮದುವೆಗೆ ಹಾಜರಿ ಹಾಕಿದ್ದರು. ರಶ್ಮಿಕಾ ಅವರ ಅರಿಶಿಣ ಶಾಸ್ತ್ರಕ್ಕೆ, ಆರತಕ್ಷತೆಗೆ ವಿಸಿಟ್ ಕೊಟ್ಟಿದ್ದರು. ದುಶ್ಯಂತ್ ವಿವಾಹಕ್ಕೆ ಅವರು ತೆರಳಿದ್ದರು.
ಆಶಿಕಾ ರಂಗನಾಥ್ ಅವರು ಹೊಸ ಹೊಸ ಸಿನಿಮಾಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಅವರಿಗೆ ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬೇಡಿಕೆ ಇದೆ. ಅವರು ಅಲ್ಲಿಯೂ ಸಿನಿಮಾ ಮಾಡುತ್ತಿದ್ದಾರೆ.