Category Archives: Blog

Your blog category

ಚಂದ್ರಗ್ರಹಣ ಮೋಕ್ಷ ಬಳಿಕ ದೇಗುಲಗಳಲ್ಲಿ ಶುದ್ಧೀಕರಣ, ವಿಶೇಷ ಪೂಜೆ! – Kannada News | Karnataka Temples Reopen with Rituals After Rare Lunar Eclipse

ಬೆಂಗಳೂರು, ಮಾರ್ಚ್​ 04: ನಭೋಮಂಡಲದಲ್ಲಿ ಅಪರೂಪದ ಖಗೋಳ ಕೌತುಕವಾಗಿ ರಕ್ತ ಚಂದ್ರಗ್ರಹಣ (Lunar Eclipse) ನಿನ್ನೆ ಸ್ಪಷ್ಟವಾಗಿ ಗೋಚರಿಸಿದೆ. ಭೂಮಿಯ ನೆರಳು ಚಂದ್ರನ ಮೇಲೆ ಸಂಪೂರ್ಣವಾಗಿ ಆವರಿಸಿದ ಪರಿಣಾಮ, ಬೆಳ್ಳಗೆ ಹೊಳೆಯುತ್ತಿದ್ದ ಚಂದ್ರನು ತಾಮ್ರದ ಕೆಂಪು ಬಣ್ಣದಲ್ಲಿ ಕಂಗೊಳಿಸಿದ್ದ. ಮಧ್ಯಾಹ್ನ 3 ಗಂಟೆ 13 ನಿಮಿಷಕ್ಕೆ ಆರಂಭವಾದ ವರ್ಷದ ಮೊದಲ ಕೇತುಗ್ರಸ್ತ ಚಂದ್ರಗ್ರಹಣ ಸಂಜೆ 6 ಗಂಟೆ 47 ನಿಮಿಷಕ್ಕೆ ಮೋಕ್ಷವಾಯಿತು. ಭಾರತಕ್ಕಿಂತ ಹೆಚ್ಚಾಗಿ ಅಮೆರಿಕದ ಕ್ಯಾಲಿಫೋರ್ನಿಯಾ, ಲಾಸ್ ಏಂಜೆಲಸ್ ಹಾಗೂ ಮೆಕ್ಸಿಕೋ ಸೇರಿದಂತೆ ಹಲವು ಪ್ರದೇಶಗಳಲ್ಲಿ ಬ್ಲಡ್ ಮೂನ್ ಸ್ಪಷ್ಟವಾಗಿ ಕಾಣಿಸಿಕೊಂಡಿತು.

ಗ್ರಹಣದ ಹಿನ್ನಲೆಯಲ್ಲಿ ರಾಜ್ಯದ ಅನೇಕ ದೇವಾಲಯಗಳು ತಾತ್ಕಾಲಿಕವಾಗಿ ಬಂದ್ ಆಗಿದ್ದವು. ಗ್ರಹಣ ಮೋಕ್ಷವಾಗುತ್ತಿದ್ದಂತೆ ದೇವಾಲಯಗಳಲ್ಲಿ ಶುದ್ಧೀಕರಣ ಹಾಗೂ ವಿಶೇಷ ಪೂಜಾ ಕೈಂಕರ್ಯಗಳು ಜರುಗಿವೆ. ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಾಲಯದಲ್ಲಿ ಶುಚಿತ್ವ ಕಾರ್ಯ ನಡೆಸಿ ಮಹಾಪೂಜೆ ನೆರವೇರಿಸಲಾಯಿತು. ಬೆಳಗಾವಿಯ ಕಪಿಲೇಶ್ವರ ದೇಗುಲದಲ್ಲಿ ಗಂಗಾಜಲ ಮತ್ತು ಗೋಮೂತ್ರದಿಂದ ಶುದ್ಧೀಕರಣ ಮಾಡಿ ಕ್ಷೀರಾಭಿಷೇಕ ಹಾಗೂ ಮಹಾಮಂಗಳಾರತಿ ನಡೆಯಿತು.

ಯಾವೆಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ?

ಕಲಬುರಗಿಯ ಶರಣ ಬಸವೇಶ್ವರ ದೇವಸ್ಥಾನದಲ್ಲೂ ಸ್ವಚ್ಛತಾ ಕಾರ್ಯದ ನಂತರ ಪೂಜಾ ವಿಧಿವಿಧಾನಗಳು ನಡೆದವು. ಶಿವಮೊಗ್ಗದ ಜೆಪಿಎನ್ ರಸ್ತೆಯಲ್ಲಿರುವ ಪಂಚಮುಖಿ ಆಂಜನೇಯ ದೇಗುಲದಲ್ಲಿ ಗ್ರಹಣಮೋಕ್ಷದ ಬಳಿಕ ಅಭಿಷೇಕ ಮತ್ತು ಗ್ರಹಣ ಶಾಂತಿ ಹೋಮ ನೆರವೇರಿಸಲಾಯಿತು. ದಾವಣಗೆರೆಯ ದುರ್ಗಾಂಬಿಕಾ ದೇವಾಲಯದಲ್ಲಿ ವಿಶೇಷ ಅಲಂಕಾರ ಮತ್ತು ಪೂಜೆಗಳು ಜರುಗಿದವು.

ಮೈಸೂರಿನ ದೇವರಾಜ ಮೊಹಲ್ಲಾದ ಅಮೃತೇಶ್ವರ ದೇವಾಲಯದಲ್ಲಿ ಶುದ್ಧೀಕರಣ ಮಾಡಿ ಗ್ರಹಣದೋಷ ಹೋಮ ನಡೆಸಲಾಯಿತು. ಹಾಸನದ ಪ್ರಸನ್ನ ಗಣಪತಿ ದೇವಾಲಯದಲ್ಲಿ ನವಗ್ರಹ ಶಾಂತಿ ಹಾಗೂ ಜಪತಪ ಹೋಮಗಳು ನೆರವೇರಿದವು. ಕೊಪ್ಪಳದ ಹುಲಿಗೆಮ್ಮ ದೇವಾಲಯದಲ್ಲೂ ವಿಶೇಷ ಅಲಂಕಾರ ಮತ್ತು ಪೂಜಾ ಕೈಂಕರ್ಯಗಳು ನಡೆದವು.

ಇದನ್ನೂ ಓದಿ Mahakali Temple: ಗ್ರಹಣ ಕಾಲದಲ್ಲಿ ಬೆಂಗಳೂರಿನ ಈ ಕಾಳಿ ದೇವಾಲಯದಲ್ಲಿ ನಡೆಯುತ್ತೆ ವಿಶೇಷ ಪೂಜೆ

ಬೆಂಗಳೂರಿನ ಐತಿಹಾಸಿಕ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ಗ್ರಹಣದ ವೇಳೆ ಯಜ್ಞಕಾರ್ಯಗಳು ನೆರವೇರಿದ್ದು, ಮೋಕ್ಷದ ಬಳಿಕ ಶಿವಲಿಂಗಕ್ಕೆ ವಿಶೇಷ ಅಭಿಷೇಕ ಮಾಡಲಾಯಿತು. ಗುಟ್ಟಹಳ್ಳಿಯ ಬಂಡೆ ಮಹಾಂಕಾಳಿ ದೇವಾಲಯದಲ್ಲಿ ಚಂದ್ರ ಹಾಗೂ ಕೇತು ಶಾಂತಿ ಹೋಮ, ಪೂರ್ಣಾಹುತಿ ಮತ್ತು ಕಳಸಾಭಿಷೇಕ ನೆರವೇರಿಸಲಾಯಿತು. ಸಾವಿರಾರು ಭಕ್ತರು ದರ್ಶನ ಪಡೆದರು. ಒಟ್ಟಾರೆ, ಗ್ರಹಣದ ನಂತರ ಎಲ್ಲಾ ಪ್ರಮುಖ ದೇವಾಲಯಗಳು ಪುನಃ ಭಕ್ತರಿಗೆ ತೆರೆಯಲ್ಪಟ್ಟಿದ್ದು, ಬೆಳಗ್ಗಿನಿಂದಲೇ ಶುದ್ಧೀಕರಣ ಮತ್ತು ಪೂಜಾ ಕಾರ್ಯಗಳು ಭಕ್ತಿಭಾವದಿಂದ ನಡೆಯುತ್ತಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ದುಬೈನಲ್ಲಿರುವ ಅಮೆರಿಕದ ರಾಯಭಾರಿ ಕಚೇರಿ ಮೇಲೆ ಇರಾನ್ ಡ್ರೋನ್ ದಾಳಿ – Kannada News | Drone Strike Reportedly Targets US Consulate in Dubai, Blast Captured on Video

ದುಬೈ, ಮಾರ್ಚ್​ 04: ದುಬೈನಲ್ಲಿರುವ ಅಮೆರಿಕ ರಾಯಭಾರಿ ಕಚೇರಿ ಮೇಲೆ ಇರಾನ್‌ನ ಡ್ರೋನ್ ದಾಳಿ ನಡೆಸಿದೆ. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಟೆಹ್ರಾನ್ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಪ್ರದೇಶದಾದ್ಯಂತದ ಇತರ ಇಸ್ರೇಲಿ ಸ್ವತ್ತುಗಳನ್ನು ಗುರಿಯಾಗಿಸಿಕೊಂಡು ಪ್ರತಿದಾಳಿ ನಡೆಸಿದೆ. ಅದಕ್ಕೂ ಮುನ್ನ ಇಸ್ರೇಲ್-ಅಮೆರಿಕ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಅಯತೊಲ್ಲಾ ಖಮೇನಿಯನ್ನು ಹತ್ಯೆ ಮಾಡಲಾಗಿತ್ತು, ಅದಾದ ಬಳಿಕ ಸಂಘರ್ಷ ಮತ್ತಷ್ಟು ಹೆಚ್ಚಿದೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಘಟನೆಯನ್ನು ದೃಢಪಡಿಸಿದರು. ಮಂಗಳವಾರ ಬೆಳಗಿನ ಜಾವ ರಿಯಾದ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಮೇಲೆ ಎರಡು ಡ್ರೋನ್‌ಗಳು ಡಿಕ್ಕಿ ಹೊಡೆದಿದ್ದು, ಸಣ್ಣ ಪ್ರಮಾಣದ ಬೆಂಕಿ ಹೊತ್ತಿಕೊಂಡಿತ್ತು. ಸೋಮವಾರ ಕುವೈತ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ಕಟ್ಟಡದಿಂದ ಹೊಗೆ ಕಂಡುಬಂದಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ವಿಶ್ವದ ನಂ.1 ಆಟಗಾರನಿಗೆ ಸೋಲುಣಿಸಿದ ಲಕ್ಷ್ಯ ಸೇನ್ – Kannada News | All England Open: Lakshya Sen stuns top seed Shi Yu Qi

ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ ಆಲ್ ಇಂಗ್ಲೆಂಡ್ ಓಪನ್ 2026 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಲಕ್ಷ್ಯ ಸೇನ್ ಅಮೋಘ ಪ್ರದರ್ಶನ ನೀಡಿದ್ದಾರೆ. ಮೊದಲ ಸುತ್ತಿನಲ್ಲೇ ವಿಶ್ವದ ನಂ.1 ಆಟಗಾರ ಮತ್ತು ಹಾಲಿ ಚಾಂಪಿಯನ್ ಚೀನಾದ ಶಿ ಯು ಕಿ ಅವರನ್ನು ಸೋಲಿಸಿ ದೊಡ್ಡ ಸಂಚಲನ ಮೂಡಿಸಿದ್ದಾರೆ.

ಜಿದ್ದಾಜಿದ್ದಿನ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದ ಮೊದಲ ಸೆಟ್​ ಅನ್ನು 23–21 ಅಂತರದಿಂದ ಗೆದ್ದುಕೊಂಡಿದ್ದರು. ಇದಾಗ್ಯೂ ದ್ವಿತೀಯ ಸೆಟ್​ನಲ್ಲಿ ಕಂಬ್ಯಾಕ್ ಮಾಡಿದ ಶಿ ಯು ಕಿ 19–21 ಅಂತರದಿಂದ ಗೆಲ್ಲುವಲ್ಲಿ ಯಶಸ್ವಿಯಾದರು.

ಇನ್ನು ನಿರ್ಣಾಯಕವಾಗಿದ್ದ ಮೂರನೇ ಸೆಟ್​ನಲ್ಲಿ ಮತ್ತೊಮ್ಮೆ ಲಯಕ್ಕೆ ಮರಳಿದ ಲಕ್ಷ್ಯ ಸೇನ್ 21–17 ಅಂತರದಿಂದ ಶಿ ಯು ಕಿಗೆ ಸೋಲುಣಿಸಿದರು. ಈ ಮೂಲಕ 78 ನಿಮಿಷಗಳ ಕಾಲ ನಡೆದ ಈ ಪಂದ್ಯವನ್ನು ಭಾರತೀಯ ತಾರೆ  23–21, 19–21, 21–17 ಸೆಟ್‌ಗಳಿಂದ ಗೆದ್ದುಕೊಂಡರು.

ವಿಶೇಷ ಎಂದರೆ ಬಿಡಬ್ಲ್ಯೂಎಫ್ (BWF) ವರ್ಲ್ಡ್ ಟೂರ್‌ನಲ್ಲಿ ವಿಶ್ವದ ನಂ.1 ಆಟಗಾರನ ವಿರುದ್ಧ ಲಕ್ಷ್ಯ ಸೇನ್ ಸಾಧಿಸಿದ ಮೊದಲ ವೈಯಕ್ತಿಕ ಜಯ ಇದಾಗಿದೆ. ಈ ಗೆಲುವಿನೊಂದಿಗೆ ಲಕ್ಷ್ಯ ಸೇನ್ ಪ್ರೀ-ಕ್ವಾರ್ಟರ್ ಫೈನಲ್ (ರೌಂಡ್ ಆಫ್ 16) ಪ್ರವೇಶಿಸಿದ್ದಾರೆ.

ಮಾರ್ಚ್ 5 ರಂದು ನಡೆಯಲಿರುವ ಮುಂದಿನ ಪಂದ್ಯದಲ್ಲಿ ಅವರು ಹಾಂಗ್ ಕಾಂಗ್‌ನ ಎನ್ಜಿ ಕಾ ಲಾಂಗ್ ಆಂಗಸ್ ಅವರನ್ನು ಎದುರಿಸಲಿದ್ದಾರೆ.

Source link

ತೆಲಂಗಾಣ ಆಸ್ಪತ್ರೆಯ ಶವಾಗಾರದಲ್ಲಿ ವ್ಯಕ್ತಿಯ ಶವವನ್ನು ಕಚ್ಚಿ ವಿರೂಪಗೊಳಿಸಿದ ಬೀದಿ ನಾಯಿ – Kannada News | Telangana Mortuary Dog Attack, Body Mutilated, Security Lapses Lead to Suspensions

ನಾಯಿ-ಸಾಂದರ್ಭಿಕ ಚಿತ್ರImage Credit source: Free Press Journal

ತೆಲಂಗಾಣ, ಮಾರ್ಚ್ 04: ತೆಲಂಗಾಣದ ಮೆಹಬೂಬ್‌ನಗರದಲ್ಲಿರುವ ಸರ್ಕಾರಿ ಆಸ್ಪತ್ರೆ(Hospital)ಯ ಶವಾಗಾರದೊಳಗೆ ಬೀದಿ ನಾಯಿಯೊಂದು ವ್ಯಕ್ತಿಯೊಬ್ಬರ ಶವವನ್ನು ಕಚ್ಚಿ ವಿರೂಪಗೊಳಿಸಿರುವ ಘಟನೆ ನಡೆದಿದೆ. ಜಡ್ಚೆರ್ಲಾ ಪಟ್ಟಣದ ಏರಿಯಾ ಆಸ್ಪತ್ರೆಯಲ್ಲಿ ವರದಿಯಾದ ಈ ಘಟನೆಯು ಸಾರ್ವಜನಿಕ ಆರೋಗ್ಯ ಸೌಲಭ್ಯಗಳಲ್ಲಿನ ಭದ್ರತಾ ಲೋಪಗಳು ಮತ್ತು ಮೂಲಸೌಕರ್ಯ ಕೊರತೆಯ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕಿದೆ.

ಮೃತರನ್ನು ಜಡ್ಚೆರ್ಲಾ ಪಟ್ಟಣದ ನಿವಾಸಿ 32 ವರ್ಷದ ಪೋಲ್ ಭೀಮೇಶ್ವರ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಅವರು ಕೊಳದಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದರು. ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ಸ್ಥಳಾಂತರಿಸಲಾಗಿತ್ತು.
ಫ್ರೀಜರ್ ಕೆಟ್ಟು ಹೋಗಿದ್ದ ಕಾರಣ ಶವವನ್ನು ಶವಾಗಾರದ ಮಹಡಿಯಲ್ಲಿ ಇರಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶವವು ಊದಿಕೊಂಡಿದ್ದು, ಲಭ್ಯವಿರುವ ಶೇಖರಣಾ ಘಟಕದೊಳಗೆ ಇಡಲು ಸಾಧ್ಯವಿಲ್ಲ ಎಂದು ಪೊಲೀಸರು ಸೂಚಿಸಿದರು.ಶವಾಗಾರವನ್ನು ವಾರ್ಡ್ ಬಾಯ್ ಲಾಕ್ ಮಾಡಿದ್ದಾನೆ, ಆದರೆ ಬೀದಿ ನಾಯಿ ಹೇಗೋ ಕೋಣೆಗೆ ಪ್ರವೇಶ ಪಡೆದಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾರೆ. ಸ್ವಲ್ಪ ಸಮಯದ ನಂತರ, ವಾರ್ಡ್ ಬಾಯ್ ಒಳಗೆ ನಾಯಿ ಇರುವುದನ್ನು ಗಮನಿಸಿ ಅದನ್ನು ಓಡಿಸಿದ್ದಾನೆ.

ಮತ್ತಷ್ಟು ಓದಿ:ಮೂತ್ರ ವಿಸರ್ಜನೆಗೆಂದು ಹೋದ ವ್ಯಕ್ತಿಗೆ ಕಂಡದ್ದು ಮಹಿಳೆಯ ಶವ: ಡಿಸಿಪಿ ಹೇಳಿದ್ದೇನು?

ಆದರೆ, ಆ ಹೊತ್ತಿಗೆ ನಾಯಿ ದೇಹದ ಒಂದು ಭಾಗವನ್ನು ವಿರೂಪಗೊಳಿಸಿತ್ತು ಎನ್ನಲಾಗಿದೆ. ಘಟನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ತೆಲಂಗಾಣ ಆರೋಗ್ಯ ಸಚಿವ ಸಿ ದಾಮೋದರ್ ರಾಜನರಸಿಂಹ, ತನಿಖೆ ನಡೆಸುವಂತೆ ರಾಜ್ಯ ವೈದ್ಯ ವಿಧಾನ ಪರಿಷತ್ ಆಯುಕ್ತ ಅಜಯ್ ಕುಮಾರ್ ಅವರಿಗೆ ನಿರ್ದೇಶನ ನೀಡಿದ್ದಾರೆ.ಹಿರಿಯ ಅಧಿಕಾರಿ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ, ದುಃಖಿತ ಕುಟುಂಬ, ಪೊಲೀಸ್ ಸಿಬ್ಬಂದಿ, ವೈದ್ಯರು, ಆಸ್ಪತ್ರೆ ಸಿಬ್ಬಂದಿಯೊಂದಿಗೆ ಮಾತುಕತೆ ನಡೆಸಿದ್ದಾರೆ.

ಅಮಾನತುಗೊಂಡವರಲ್ಲಿ ಆಸ್ಪತ್ರೆಯ ಸೂಪರಿಂಟೆಂಡೆಂಟ್, ಕರ್ತವ್ಯದಲ್ಲಿರುವ ವೈದ್ಯಕೀಯ ಅಧಿಕಾರಿ, ಶವಾಗಾರದ ಸಹಾಯಕ ಸಿಬ್ಬಂದಿ ಸೇರಿದ್ದಾರೆ.ಭವಿಷ್ಯದಲ್ಲಿ ಇಂತಹ ಘಟನೆಗಳು ನಡೆಯದಂತೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಭದ್ರತೆಯನ್ನು ಬಲಪಡಿಸಲು ಮತ್ತು ಶವಾಗಾರದ ಮೂಲಸೌಕರ್ಯವನ್ನು ಸುಧಾರಿಸಲು ಸರಿಪಡಿಸುವ ಕ್ರಮಗಳನ್ನು ಜಾರಿಗೆ ತರಲಾಗುವುದು ಎಂದು ಅಜಯ್ ಕುಮಾರ್ ಭರವಸೆ ನೀಡಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾ ಅಭ್ಯಾಸಕ್ಕೆ ‘ಗ್ರಹಣ’ – Kannada News | IND vs ENG: Team India’s practice delayed due to the lunar eclipse

T20 World Cup 2026: ಟಿ20 ವಿಶ್ವಕಪ್​ನ ಸೆಮಿಫೈನಲ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಭರ್ಜರಿ ಸಿದ್ಧತೆಯಲ್ಲಿದೆ. ಮಾರ್ಚ್ 5 ರಂದು ನಡೆಯಲಿರುವ ಇಂಗ್ಲೆಂಡ್ ವಿರುದ್ಧ ಈ ಪಂದ್ಯಕ್ಕಾಗಿ ಭಾರತೀಯ ಆಟಗಾರರು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸುತ್ತಿದ್ದಾರೆ. ಆದರೆ, ಮಾರ್ಚ್ 3 ರಂದು ಸಂಭವಿಸಿದ ಪೂರ್ಣ ಚಂದ್ರಗ್ರಹಣದ ಕಾರಣದಿಂದಾಗಿ ಅಭ್ಯಾಸದ ಸಮಯವನ್ನು ಸುಮಾರು ಒಂದು ಗಂಟೆ ಕಾಲ ಮುಂದೂಡಲಾಗಿತ್ತು.

ಅಭ್ಯಾಸದ ಮೂಲ ವೇಳಾಪಟ್ಟಿಯಂತೆ ಸಂಜೆ 6:00 ಗಂಟೆಗೆ ಆರಂಭವಾಗಬೇಕಿದ್ದ ತರಬೇತಿಯು, ಗ್ರಹಣದ ಹಿನ್ನೆಲೆಯಲ್ಲಿ ಸಂಜೆ 7:20ಕ್ಕೆ ಆರಂಭಿಸಲಾಯಿತು. ಹಿಂದೂ ಸಂಪ್ರದಾಯದಲ್ಲಿ, ಗ್ರಹಣದ ಸಮಯದಲ್ಲಿ ಯಾವುದರೂ ಪ್ರಮುಖ ಕಾರ್ಯದಲ್ಲಿ ನಿರತರಾಗುವುದು ಒಳಿತಲ್ಲ ಎಂದು ನಂಬಲಾಗುತ್ತದೆ.

ಇತ್ತ ಚಂದ್ರಗ್ರಹಣವು ಮಧ್ಯಾಹ್ನ 3:20 ರಿಂದ ಸಂಜೆ 6:47 ರವರೆಗೆ ಇದ್ದ ಆ ಅವಧಿಯನ್ನು ಅಶುಭ ಎಂದು ಪರಿಗಣಿಸಲಾಗಿದೆ. ಹೀಗಾಗಿ ಟೀಮ್ ಇಂಡಿಯಾ ಆಟಗಾರರು  ಗ್ರಹಣ ಮುಗಿದ ನಂತರವೇ ಮೈದಾನಕ್ಕಿಳಿಯಲು ನಿರ್ಧರಿಸಿತು.

ಅಲ್ಲದೆ ಗ್ರಹಣ ಮುಗಿಯುವವರೆಗೆ ಕ್ರೀಡಾಂಗಣದ ಫ್ಲಡ್‌ಲೈಟ್‌ಗಳನ್ನು ಕೂಡ ಆನ್ ಮಾಡಿರಲಿಲ್ಲ. ಇನ್ನು  ಗ್ರಹಣ ಮುಗಿದ ನಂತರ ಹಾರ್ದಿಕ್ ಪಾಂಡ್ಯ, ಜಸ್ಪ್ರೀತ್ ಬುಮ್ರಾ ಮತ್ತು ಅಭಿಷೇಕ್ ಶರ್ಮಾ ಸೇರಿದಂತೆ ಪ್ರಮುಖ ಆಟಗಾರರು ಕಠಿಣ ತರಬೇತಿಯಲ್ಲಿ ನಿರತರಾಗಿದ್ದರು. ಈ ಅಭ್ಯಾಸದೊಂದಿಗೆ ಟೀಮ್ ಇಂಡಿಯಾ ಇಂಗ್ಲೆಂಡ್ ತಂಡವನ್ನು ಎದುರಿಸಲು ಸಜ್ಜಾಗುತ್ತಿದೆ.

ಸೆಮಿಫೈನಲ್ ಪಂದ್ಯ ಯಾವಾಗ?

ಟಿ20 ವಿಶ್ವಕಪ್​ನ ಮೊದಲ ಸೆಮಿಫೈನಲ್ ಪಂದ್ಯವು ಇಂದು (ಮಾ.4) ನಡೆಯಲಿದೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಸೌತ್ ಆಫ್ರಿಕಾ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ಮ್ಯಾಚ್​ನಲ್ಲಿ ಗೆಲ್ಲುವ ತಂಡ ಫೈನಲ್​ಗೆ ಪ್ರವೇಶಿಸಲಿದೆ.

ಇನ್ನು ನಾಳೆ, ಮಾರ್ಚ್ 5 ರಂದು ನಡೆಯಲಿರುವ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದ್ದು, ಈ ಮ್ಯಾಚ್​ನಲ್ಲಿ ಜಯಗಳಿಸುವ ತಂಡ ಫೈನಲ್​ಗೆ ಅರ್ಹತೆ ಪಡೆಯಲಿದೆ.

ಅದರಂತೆ ಈ ನಾಲ್ಕು ತಂಡಗಳಲ್ಲಿ 2 ಟೀಮ್​ಗಳು ಮಾರ್ಚ್ 8 ರಂದು ಅಹಮದಾಬಾದ್​ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಲಿದೆ.

ಇದನ್ನೂ ಓದಿ: 50 ಲಕ್ಷ ರೂ. ದಂಡವಲ್ಲ… ಪಾಕ್ ಆಟಗಾರರನ್ನು ಬ್ಯಾನ್ ಮಾಡಿ!

ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಮೊಹಮ್ಮದ್ ಸಿರಾಜ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Source link

ವಿದೇಶ ಪ್ರವಾಸ ಮುಗಿಸಿ ಬೆಂಗಳೂರಿಗೆ ವಾಪಸ್​​ ಆದ ಕಾಂಗ್ರೆಸ್​ ಶಾಸಕರು – Kannada News | Congress MLA Returns to Bengaluru After Foreign Trip

ಬೆಂಗಳೂರು, ಮಾರ್ಚ್​ 04: ರಾಜ್ಯ ಕಾಂಗ್ರೆಸ್​ನಲ್ಲಿ ಕುರ್ಚಿಕಾದಾಟದ ನಡುವೆ ವಿದೇಶಕ್ಕೆ ಹಾರಿದ್ದ ಶಾಸಕರು ವಿದೇಶ ಪ್ರವಾಸ ಮುಗಿಸಿ ಇಂದು ಬೆಂಗಳೂರಿಗೆ ವಾಪಸ್​ ಆಗಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯಿರುವ ಕೆಂಪೇಗೌಡ ಏರ್​​​ಪೋರ್ಟ್​ಗೆ ಹೆಚ್​.ಡಿ.ತಮ್ಮಯ್ಯ, ದೇವೇಂದ್ರಪ್ಪ, ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಕಾಂಗ್ರೆಸ್​ ಶಾಸಕರು ಮಧ್ಯರಾತ್ರಿ ಆಗಮಿಸಿದ್ದಾರೆ. ಬಹುತೇಕ ಶಾಸಕರು ಮಾಧ್ಯಮಗಳ ಕ್ಯಾಮರಾ ಕಾಣುತ್ತಿದ್ದಂತೆ ತರಾತುರಿಯಲ್ಲಿ ಕಾರು ಹತ್ತಿ ತೆಳಿದ್ದಾರೆ. ಅಧ್ಯಯನ ಮಾಡಲು ಹೋಗಿದ್ದಾಗಿ ಶಾಸಕ ದೇವೇಂದ್ರಪ್ಪ ಹೇಳಿದರೆ, ಅದೆಲ್ಲಾ ಸುಳ್ಳು ಎಂದು ಸಿರುಗುಪ್ಪ ಶಾಸಕ ಬಿಎಂ‌ ನಾಗರಾಜ್ ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಮದುವೆ ಮಧ್ಯೆಯೂ ಅಭಿಮಾನಿಗಳನ್ನು ಮರೆತಿಲ್ಲ ರಶ್ಮಿಕಾ-ವಿಜಯ್; ಮಾದರಿ ಆದ ದಂಪತಿ – Kannada News | Rashmika Mandanna and Vijay Deverakonda’s Post Wedding Fan Meet: A Model Couple’s Heartwarming Gesture

ರಶ್ಮಿಕಾ ಮಂದಣ್ಣ (Rashmika Mandanna) ಹಾಗೂ ವಿಜಯ್ ದೇವರಕೊಂಡ ಫೆಬ್ರವರಿ 26ರಂದು ವಿವಾಹ ಆದರು. ಇವರು ಮದುವೆ ಆಗಿ ವಾರ ಕಳೆಯುತ್ತಾ ಬಂದರೂ ಅವರ ಸಂಭ್ರಮ ನಿಂತಿಲ್ಲ. ವಿಜಯ್ ಹಾಗೂ ರಶ್ಮಿಕಾ ವಿವಿಧ ಕಾರ್ಯಕ್ರಮದಲ್ಲಿ ಭಾಗಿ ಆಗುತ್ತಿದ್ದಾರೆ. ಸಾಮಾಜಿಕ ಕೆಲಸ ಆಗುತ್ತಿದೆ. ಈ ಬ್ಯುಸಿ ವೇಳಾಪಟ್ಟಿಯಲ್ಲೂ ಅವರು ಅಭಿಮಾನಿಗಳನ್ನು ಮರೆತಿಲ್ಲ. ಈ ಸಂದರ್ಭದ ವಿಡಿಯೋ ವೈರಲ್ ಆಗಿದೆ.

ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಉದಯಪುರದಲ್ಲಿ ವಿವಾಹ ಆದರು. ಆ ಬಳಿಕ ತಿರುಪತಿಗೆ ಭೇಟಿ ಕೊಟ್ಟರು. ಇಷ್ಟೇ ಅಲ್ಲ, ವಿಜಯ್ ಹುಟ್ಟೂರಿಗೆ ತೆರಳಿ ಸತ್ಯ ನಾರಾಯಣ ಪೂಜೆಯಲ್ಲಿ ಭಾಗಿ ಆದರು. ಇಂದು (ಮಾರ್ಚ್ 4) ಹೈದರಾಬಾದ್​​ನಲ್ಲಿ ಆರತಕ್ಷತೆ ನಡೆಯಲಿದೆ. ಅದಕ್ಕೂ ಮೊದಲು ಅಭಿಮಾನಿಗಳನ್ನು ರಶ್ಮಿಕಾ-ವಿಜಯ್ ಭೇಟಿ ಮಾಡಿದರು. ಮದುವೆಯಲ್ಲಿ ಕೇವಲ ಆಪ್ತರು ಮಾತ್ರ ಭಾಗಿ ಆಗಿದ್ದರು. ಹೀಗಾಗಿ, ಮದುವೆ ಬಳಿಕ ಅವರು ಅಭಿಮಾನಿಗಳನ್ನು ಭೇಟಿ ಆಗಿದ್ದಾರೆ.

ಮಂಗಳವಾರ ಹೈದರಾಬಾದ್​ನಲ್ಲಿ ಫ್ಯಾನ್ಸ್ ಮೀಟಪ್​ ನಡೆದಿದೆ. ಅಭಿಮಾನಿಗಳ ಜೊತೆ ವಿಜಯ್ ಹಾಗೂ ರಶ್ಮಿಕಾ ಮಾತನಾಡಿದರು. ರಶ್ಮಿಕಾ ಫ್ಯಾನ್​ ಪೇಜ್ ಅವರನ್ನು ಕರೆಯಲಾಗಿತ್ತು ಎನ್ನಲಾಗಿದೆ. ಬಂದ ಪ್ರತಿಯೊಬ್ಬರಿಗೂ ರಶ್ಮಿಕಾ ಹಾಗೂ ವಿಜಯ್ ಶೇಕ್ ಹ್ಯಾಂಡ್ ಮಾಡಿದರು. ಅಭಿಮಾನಿಗೆ ಪ್ರೀತಿಯಿಂದ ಅಪ್ಪುಗೆಯನ್ನೂ ನೀಡಿದರು. ಕೆಲವರಿಗೆ ಆಟೋಗ್ರಾಫ್ ನೀಡಿದರು.

ಇದನ್ನೂ ಓದಿ: ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಸಂಗೀತ್ ಕಾರ್ಯಕ್ರಮದ ಸುಂದರ ಫೋಟೋಸ್

ವಿಶೇಷ ಎಂದರೆ ರಶ್ಮಿಕಾ ಹಾಗೂ ವಿಜಯ್ ಖುದ್ದಾಗಿ ಅಭಿಮಾನಿಗಳಿಗೆ ಆಹಾರ ಬಡಿಸಿದ್ದಾರೆ. ರಶ್ಮಿಕಾ ಅವರು ಮಂಗಳಸೂತ್ರ ಹಾಗೂ ಸಿಂಧೂರ ಧರಿಸಿ ಗಮನ ಸೆಳೆದರು. ರಶ್ಮಿಕಾ ಅವರು ಕುರ್ತಾ ಧರಿಸಿದ್ದರು.
ರಶ್ಮಿಕಾ ಅವರು ಅಭಿಮಾನಿಗಳಿಗೆ ಇಷ್ಟು ಪ್ರೀತಿ ತೋರಿಸಿದ್ದು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ಅಭಿಮಾನಿಗಳನ್ನು ಮರೆತಿಲ್ಲ ಎಂಬ ವಿಷಯವೇ ಸೋಶಿಯಲ್ ಮೀಡಿಯಾದಲ್ಲಿ ಹೈಲೈಟ್ ಆಗುತ್ತಿದೆ. ರಶ್ಮಿಕಾ ಹಾಗೂ ವಿಜಯ್ ಇಬ್ಬರೂ ಸದ್ಯ ಒಂದು ಬ್ರೇಕ್​​ನಲ್ಲಿದ್ದಾರೆ. ಅವರು ಶೀಘ್ರವೇ ಸಿನಿಮಾ ಕೆಲಸಗಳಿಗೆ ಮರಳಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:03 am, Wed, 4 March 26

Source link

50 ಲಕ್ಷ ರೂ. ದಂಡವಲ್ಲ… ಪಾಕ್ ಆಟಗಾರರನ್ನು ಬ್ಯಾನ್ ಮಾಡಿ! – Kannada News | Shahid Afridi Wants Ban Pakistan Players

T20 World Cup 2026: ಟಿ20 ವಿಶ್ವಕಪ್​ನಲ್ಲಿನ ಕಳಪೆ ಪ್ರದರ್ಶನಕ್ಕೆ ಪಾಕಿಸ್ತಾನ್ ಆಟಗಾರರಿಗೆ ಬಿಸಿ ಮುಟ್ಟಿಸಲು ಪಾಕ್ ಕ್ರಿಕೆಟ್ ಮಂಡಳಿ ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಪಾಕಿಸ್ತಾನ್ ಆಟಗಾರರಿಗೆ 50 ಲಕ್ಷ ರೂ. (PKR) ದಂಡ ವಿಧಿಸಲು ಮುಂದಾಗಿದೆ. ಈ ದಂಡದ ಸುದ್ದಿ ಬೆನ್ನಲ್ಲೇ ಮಾಜಿ ನಾಯಕ ಶಾಹಿದ್ ಅಫ್ರಿದಿ ಹಿರಿಯ ಆಟಗಾರರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಕಳಪೆ ಪ್ರದರ್ಶನ ನೀಡುತ್ತಿರುವ ಆಟಗಾರರನ್ನು ಕನಿಷ್ಠ ಎರಡು ವರ್ಷಗಳ ಕಾಲ ತಂಡದಿಂದ ಬ್ಯಾನ್ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಆಟಗಾರರ ಮೇಲೆ ಕಿಡಿ:

ಬಾಬರ್ ಆಝಂ, ಶಾಹೀನ್ ಅಫ್ರಿದಿ ಮತ್ತು ಶಾದಾಬ್ ಖಾನ್ ಅವರಂತಹ ಪ್ರಮುಖ ಆಟಗಾರರನ್ನು ತಂಡದಿಂದ ಕೈಬಿಟ್ಟು, ಅವರಿಗೆ “ರಿಯಾಲಿಟಿ ಚೆಕ್” ನೀಡಬೇಕು ಎಂದು ಅಫ್ರಿದಿ ಹೇಳಿದ್ದಾರೆ. ತಂಡದ ಹಿರಿಯ ಆಟಗಾರರು ಹಾಗೂ ಅನುಭವಿಗಳೆಂದು ಗುರುತಿಸಿಕೊಂಡಿರುವ ಇವರಿಂದ ಯಾವುದೇ ಪ್ರದರ್ಶನ ಮೂಡಿಬರುತ್ತಿಲ್ಲ. ಹೀಗಾಗಿ ಇವರೆಲ್ಲನ್ನೆಲ್ಲಾ ತಂಡದಿಂದ ಹೊರಗಿಡಬೇಕೆಂದು ಅಫ್ರಿದಿ ಆಗ್ರಹಿಸಿದ್ದಾರೆ.

ದೇಶೀಯ ಕ್ರಿಕೆಟ್‌ಗೆ ಕಳುಹಿಸಿ:

ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚದ ಆಟಗಾರರನ್ನು ತಂಡದಿಂದ ವಜಾಗೊಳಿಸಿ, ಅವರು ಮತ್ತೆ ದೇಶೀಯ ಕ್ರಿಕೆಟ್ ಆಡಿ ಫಾರ್ಮ್ ಕಂಡುಕೊಳ್ಳುವಂತೆ ಮಾಡಬೇಕು ಎಂದು ಅಫ್ರಿದಿ ಆಗ್ರಹಿಸಿದ್ದಾರೆ. ಕೆಲ ಆಟಗಾರರು ವರ್ಷದಿಂದ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಇದಾಗ್ಯೂ ಅವರನ್ನು ತಂಡದಿಂದ ಕೈ ಬಿಡುತ್ತಿಲ್ಲ. ಅಂತಹ ಆಟಗಾರರನ್ನು ಕೂಡ ತಂಡದಿಂದ ಕೈ ಬಿಟ್ಟು ಪ್ರಥಮ ದರ್ಜೆ ಕ್ರಿಕೆಟ್ ಆಡುವಂತೆ ಸೂಚಿಸಬೇಕು ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.

ಯುವ ಆಟಗಾರರಿಗೆ ಅವಕಾಶ:

ಹಿರಿಯರನ್ನು ಬೆಂಚ್ ಮೇಲೆ ಕೂರಿಸಿ, ದೇಶೀಯ ಕ್ರಿಕೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ನಿರ್ಭೀತ ಯುವ ಆಟಗಾರರಿಗೆ ಇನ್ಮುಂದೆ ಹೆಚ್ಚಿನ ಅವಕಾಶ ನೀಡಬೇಕು. ಈ ಮೂಲಕ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಹೊಸ ತಂಡವನ್ನು ಕಟ್ಟುವ ಕಾಯಕಕ್ಕೆ ಕೈ ಹಾಕಬೇಕೆಂದು ಅಫ್ರಿದಿ ಸಲಹೆ ನೀಡಿದ್ದಾರೆ.

ಅಷ್ಟೇ ಅಲ್ಲದೆ ಪಾಕ್ ತಂಡದಲ್ಲಿರುವ ಅನುಭವಿ ಹಾಗೂ ಆಕ್ರಮಣಕಾರಿ ಆಟಗಾರ ಫಖರ್ ಝಮಾನ್​ಗೆ ಟಿ20 ನಾಯಕತ್ವ ನೀಡಬೇಕು. ಈ ಮೂಲಕ ಹೊಸ ಪಡೆಯನ್ನು ರೂಪಿಸಲು ಇದು ಸಕಾಲ ಎಂದು ಅಫ್ರಿದಿ ಅಭಿಪ್ರಾಯಪಟ್ಟಿದ್ದಾರೆ.

ದಂಡದ ಬಗ್ಗೆ ಅಸಮಾಧಾನ:

ಆಟಗಾರರನ್ನು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ಎರಡು ವರ್ಷಗಳ ಕಾಲ ಬ್ಯಾನ್ ಮಾಡಬೇಕೆಂದು ಆಗ್ರಹಿಸಿರುವ ಶಾಹಿದ್ ಅಫ್ರಿದಿ, ಪಿಸಿಬಿ ಆಟಗಾರರಿಗೆ ವಿಧಿಸಿರುವ 50 ಲಕ್ಷ ರೂ.ಗಳ ದಂಡವು ಅತ್ಯಂತ “ಸಣ್ಣತನದ ನಿರ್ಧಾರ” ಎಂದು ಟೀಕಿಸಿದ್ದಾರೆ. ಅಲ್ಲದೆ ಹಣಕಾಸಿನ ದಂಡಕ್ಕಿಂತ ತಂಡದಲ್ಲಿ ಶಿಸ್ತು ಮತ್ತು ಬದಲಾವಣೆ ಮುಖ್ಯ ಎಂದಿದ್ದಾರೆ.

ಇದನ್ನೂ ಓದಿ: RCB ತಂಡದ 2 ಪಂದ್ಯಗಳನ್ನು ಶಿಫ್ಟ್ ಮಾಡಲು ಇದುವೇ ಕಾರಣ..!

ಒಟ್ಟಿನಲ್ಲಿ ಟಿ20 ವಿಶ್ವಕಪ್​ನಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಪಾಕಿಸ್ತಾನ್ ತಂಡದಲ್ಲಿ ಮಹತ್ವದ ಬದಲಾವಣೆಯಾಗುವ ಮುನ್ಸೂಚನೆ ಸಿಗುತ್ತಿದೆ. ಹೀಗಾಗಿ ಮುಂಬರುವ ಸರಣಿ ವೇಳೆ ಹೊಸ ಪಾಕ್ ಪಡೆಯನ್ನು ನಿರೀಕ್ಷಿಸಬಹುದು.

Source link

ಯಶ್ ಅವರ ಈ ಆಲೋಚನೆಯೇ ಅವರನ್ನು ಇಲ್ಲಿಯವರೆಗೆ ಕರೆ ತಂದಿದೆ.. – Kannada News | Toxic Movie Why Yash Became super Star here is his strategy

ರಾಕಿಂಗ್ ಸ್ಟಾರ್ ಯಶ್ ಅವರು ‘ಟಾಕ್ಸಿಕ್’ ಚಿತ್ರದ (Toxic Movie) ಮೂಲಕ ಮಿಂಚಲು ರೆಡಿ ಆಗಿದ್ದಾರೆ. ಈ ಸಿನಿಮಾ ಮಾರ್ಚ್ 19ರಂದು ರಿಲೀಸ್ ಆಗುತ್ತಿದೆ. ಅದಕ್ಕೂ ಮೊದಲು ಅಂದರೆ ಮಾರ್ಚ್ 8ರಂದು ಸಿನಿಮಾದ ಟ್ರೇಲರ್ ರಿಲೀಸ್ ಆಗಲಿದೆ ಎಂಬ ಮಾಹತಿಯು ಲಭ್ಯವಾಗಿದೆ. ಯಶ್ ಅವರು ಇಷ್ಟು ಎತ್ತರಕ್ಕೆ ಬೆಳೆಯಲು ಅವರ ಆಲೋಚನೆಯೇ ಕಾರಣ ಎಂದರೂ ತಪ್ಪಾಗಲಾರದು. ಅವರು ಈ ಬಗ್ಗೆ ಈ ಮೊದಲು ಮಾಹಿತಿ ನೀಡಿದ್ದರು. ಈ ವಿಡಿಯೋನ ಈಗ ರೀಶೇರ್​​ ಮಾಡಲಾಗುತ್ತಿದೆ.

ಯಶ್ ಅವರು ಒಂದು ಸಿನಿಮಾಗಿಂತ ಒಂದು ಸಿನಿಮಾನ ಉತ್ತಮ ನೀಡುತ್ತಾ ಬಂದರು. ಪ್ರತಿ ಬಾರಿಯೂ ಇದೇ ತಂತ್ರವನ್ನು ಅವರು ಅಳವಡಿಸಿಕೊಳ್ಳುತ್ತಾ ಬರುತ್ತಿದ್ದಾರೆ. ಯಶ್ ಅವರು ಈ ಬಾರಿಯೂ ಅದೇ ತಂತ್ರವನ್ನು ಅನುಸರಿಸಿಕೊಂಡು ಹೋಗಿದ್ದಾರೆ. ಇದು ಅವರ ಜೀವನದ ಮುಖ್ಯ ಗುರಿ ಕೂಡ ಹೌದು.

ಈ ಮೊದಲು ಮಾತನಾಡಿದ್ದ ಯಶ್ ಅವರು, ‘ಒಂದು ಸಿನಿಮಾಗಿಂತ ಮತ್ತೊಂದು ಸಿನಿಮಾ ಉತ್ತಮವಾಗಿರಬೇಕು. ಹಳೆಯ ಸಿನಿಮಾಗಳನ್ನು ಅವು ಮರೆಸಬೇಕು’ ಎಂದು ಯಶ್ ಈ ಮೊದಲು ಮಾತನಾಡಿದ್ದರು. ‘ಕಿರಾತಕ’ ಚಿತ್ರವನ್ನು ಗೂಗ್ಲಿ, ರಾಜಾ ಹುಲಿ ಮರೆಸಿದವು’ ಎಂದೆಲ್ಲ ಅವರು ಹೇಳಿದ್ದರು. ‘ಕೆಜಿಎಫ್’ ಹಾಗೂ ‘ಕೆಜಿಎಫ್ 2’ ಚಿತ್ರ ಮರೆಸುವ ರೀತಿಯಲ್ಲಿ ಅವರು ಟಾಕ್ಸಿಕ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ರಿಲೀಸ್​​ಗೂ ಮೊದಲೇ ಸೇಫ್ ಆದ ‘ಟಾಕ್ಸಿಕ್’; ಇನ್ನು ಬರೋದೆಲ್ಲ ಲಾಭ

‘ಟಾಕ್ಸಿಕ್’ ಚಿತ್ರಕ್ಕೆ ಮಲಾಳಂ ನಿರ್ದೇಶಕಿ ಗಿತು ಮೋಹನ್​ ದಾಸ್ ಅವರ ನಿರ್ದೇಶನ ಇದೆ. ಈ ಚಿತ್ರ ಸೂಪರ್ ಹಿಟ್ ಆಗುವ ಸೂಚನೆ ಅಭಿಮಾನಿಗಳಿಗೆ ಸಿಕ್ಕಿದೆ. ಗೀತು ಮೋಹನ್​ ದಾಸ್ ಅವರು ಇನ್ನೂ ಕೆಲವೇ ಸಿನಿಮಾ ಮಾಡಿದ್ದಾರೆ. ಆದರೂ ಅವರನ್ನು ಯಶ್ ಏಕೆ ಆಯ್ಕೆ ಮಾಡಿದರು ಎಂಬುದು ಜನರ ಪ್ರಶ್ನೆ. ಕಿಯಾರಾ ಅಡ್ವಾಣಿ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕರು ಸಿನಿಮಾದಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಒಂದೇ ಮಂಟಪದಲ್ಲಿ ಇಬ್ಬರನ್ನು ಮದುವೆಯಾದ ಥೈಲ್ಯಾಂಡ್ ಮಹಿಳೆ, ವರರ ಕಡೆಯಿಂದ ಬಂದಿದ್ದು ಬರೋಬ್ಬರಿ 29 ಲಕ್ಷ ರೂ. ವಧುದಕ್ಷಿಣೆ – Kannada News | Thai Woman Weds Two Austrian Partners in Pattaya, Receives Rs 29 Lakh Dowry

ಥೈಲ್ಯಾಂಡ್, ಮಾರ್ಚ್​ 04: ಥೈಲ್ಯಾಂಡ್(Thailand)​​ನಲ್ಲಿ ನಡೆದ ಈ ವಿವಾಹವು ಕುತೂಹಲದ ಜತೆ ಪ್ರಶ್ನೆಗಳನ್ನೂ ಹುಟ್ಟುಹಾಕಿದೆ. ಥೈಲ್ಯಾಂಡ್​ನ ಮಹಿಳೆಯೊಬ್ಬರು ಆಸ್ಟ್ರೇಲಿಯಾದ ಇಬ್ಬರನ್ನು ಒಂದೇ ಮಂಟಪದಲ್ಲಿ ಮದುವೆಯಾಗಿದ್ದಾರೆ. ವಿವಾಹ ಕಾರ್ಯಕ್ರಮ ಸಾಧಾರಣವಾಗಿದ್ದರೂ ಆಕೆಗೆ ವರರ ಕಡೆಯಿಂದ 29 ಲಕ್ಷ ರೂ. ವಧುದಕ್ಷಿಣೆಯಾಗಿ ಬಂದಿದೆ. 37 ವರ್ಷ ವಯಸ್ಸಿನ ಥಾಯ್ ಮಹಿಳೆ ಡುವಾಂಗ್ಡುವಾನ್ ಕೆಟ್ಸಾರೊ ಎಂಬಾಕೆ ಇಬ್ಬರು ಆಸ್ಟ್ರಿಯನ್ ಪುರುಷರನ್ನು ಒಂದೇ ಮಂಪಟದಲ್ಲಿ ವಿವಾಹವಾಗಿದ್ದಾರೆ.

ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾದ ಕರಾವಳಿ ಥಾಯ್ ನಗರವಾದ ಪಟ್ಟಾಯದಲ್ಲಿ ಕೆಲಸ ಮಾಡುತ್ತಿದ್ದಾಗ ಡುವಾಂಗ್ಡುವಾನ್ ಆಸ್ಟ್ರಿಯಾದ ನಿವೃತ್ತ ಪೊಲೀಸ್ ಅಧಿಕಾರಿ ರೋಮನ್ ಅವರನ್ನು ಮೊದಲು ಭೇಟಿಯಾದರು.

ಕಾಲಾನಂತರದಲ್ಲಿ, ಅವರ ಸಂಬಂಧವು ಬಲವಾಯಿತು ಮತ್ತು ಇಬ್ಬರು ಸುಮಾರು ಐದು ವರ್ಷಗಳ ಕಾಲ ಒಟ್ಟಿಗೆ ವಾಸಿಸುತ್ತಿದ್ದರು. ನಂತರ ಆಕೆ ಆಸ್ಟ್ರಿಯಾದ ಮತ್ತೊಬ್ಬ ಪೊಲೀಸ್ ಅಧಿಕಾರಿ ಮ್ಯಾಕಿಯನ್ನು ಭೇಟಿಯಾಗಿದ್ದಳು, ಕ್ರಮೇಣವಾಗಿ ಈ ವಿಚಾರ ಮೊದಲು ಇಷ್ಟಪಟ್ಟಿದ್ದ ವ್ಯಕ್ತಿಗೆ ತಿಳಿಯಿತು ಆದರೆ ಯಾರೂ ಜಗಳವಾಡದೆ ಮೂವರು ಒಟ್ಟಿಗೆ ಇರಲು ನಿರ್ಧರಿಸಿದರು.

ಮದುವೆ ಬಗ್ಗೆ ಮಾತನಾಡುವ ಮೊದಲು ತನ್ನ ಕುಟುಂಬಕ್ಕೆ ಈ ಬಗ್​ಗೆ ತಿಳಿಸಿದ್ದಾಳೆ, ತನ್ನ ಪೋಷಕರು ಮತ್ತು ಮಕ್ಕಳೊಂದಿಗೆ ಈ ವಿಚಾರ ಕುರಿತು ಮಾತನಾಡಿದಳು. ಡುವಾಂಗ್ಡುವಾನ್ ಮೂರು ಹೆಣ್ಣುಮಕ್ಕಳ ತಾಯಿ ಮತ್ತು ವರ್ಷಗಳ ಹಿಂದೆ ಕೊನೆಗೊಂಡ ಹಿಂದಿನ ಮದುವೆಯಿಂದ ಇಬ್ಬರು ಮಕ್ಕಳಿದ್ದಾರೆ.

ಮತ್ತಷ್ಟು ಓದಿ: ಮದುವೆಗೆ ನಿರಾಕರಣೆ: ಮಾತನಾಡಲು ಕರೆದು ಜಿಮ್ ಟ್ರೈನರ್​ಗೆ ಚಾಕು ಹಾಕಿದ ಪ್ರೇಯಸಿ

ಮೊದಲ ಮದುವೆ ಮುರಿದುಬಿದ್ದ ಬಳಿಕ ಆಕೆ ತನ್ನ ಹೆತ್ತವರು ಮತ್ತು ಮಕ್ಕಳನ್ನು ಪೋಷಿಸಲು ಪಟ್ಟಾಯದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದಳು. ಈ ಸಮಯದಲ್ಲಿ ಅವಳು ರೋಮನ್ ಮತ್ತು ನಂತರ ಮ್ಯಾಕಿಯನ್ನು ಭೇಟಿಯಾದಳು. ವರ್ಷಗಳಲ್ಲಿ, ಇಬ್ಬರೂ ಪುರುಷರು ಅವಳ ಕುಟುಂಬವನ್ನು ನೋಡಿಕೊಳ್ಳಲು ಸಹಾಯ ಮಾಡುವಲ್ಲಿ ಸಹಾಯ ಮಾಡಿದ್ದಾರೆ.

ಇಬ್ಬರೂ ಸಂಗಾತಿಗಳು ತೋರಿಸಿದ ಬದ್ಧತೆ ಮತ್ತು ಬೆಂಬಲವನ್ನು ನೋಡಿದ ನಂತರ ಆಕೆಯ ಸಂಬಂಧಿಕರು ಅಂತಿಮವಾಗಿ ಸಂಬಂಧವನ್ನು ಒಪ್ಪಿಕೊಂಡರು.ಈ ವಿವಾಹವು ಸಣ್ಣ ಮತ್ತು ಆತ್ಮೀಯವಾಗಿ ನಡೆದಿದ್ದು, ಮುಖ್ಯವಾಗಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಹಾಜರಿದ್ದರು ಎಂದು ವರದಿಯಾಗಿದೆ. ವಿವಾಹದ ಅಸಾಮಾನ್ಯ ಸ್ವರೂಪದ ಹೊರತಾಗಿಯೂ, ಸಮಾರಂಭವು ಥಾಯ್ ವಿವಾಹಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಸಾಂಪ್ರದಾಯಿಕ ಅಂಶಗಳನ್ನು ಒಳಗೊಂಡಿತ್ತು.

ವರದಿಗಳ ಪ್ರಕಾರ, ಇಬ್ಬರು ವರರು ತಲಾ ಒಂದು ಮಿಲಿಯನ್ ಥಾಯ್ ಬಹ್ತ್ ವಧುದಕ್ಷಿಣೆಯಾಗಿ ನೀಡಿದ್ದಾರೆ, ಇದು ಸರಿಸುಮಾರು 29 ಲಕ್ಷ ರೂ.ಗೆ ಸಮಾನವಾಗಿರುತ್ತದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link