Headlines

ಹೊಸ ಹುಡುಗನ ಜತೆ ಸೇರಿ ಹಳೇ ಪ್ರೇಮಿ ಹತ್ಯೆ ಮಾಡಿದ ಕನ್ನಡದ ನಟಿ; ಭೀಕರ ಕೊಲೆ – Kannada News | Kannada actress Bindu aka Urvashi arrested in boyfriend murder case in Bengaluru

ಬೆಳ್ಳಿತೆರೆಯ ಮೇಲೆ ಮಿಂಚುವ ಕನಸು ಕಂಡಿದ್ದ ನಟಿಯೊಬ್ಬಳು, ನಿಜ ಜೀವನದಲ್ಲಿ ಕ್ರೂರ ಕೊಲೆಗಾತಿಯಾಗಿ ಬದಲಾದ ಕಥೆಯಿದು. ಪ್ರೀತಿ, ವಂಚನೆ ಮತ್ತು ರಕ್ತಸಿಕ್ತ ಅಂತ್ಯದ ಈ ಟ್ರಯಾಂಗಲ್ ಲವ್ ಸ್ಟೋರಿ ಈಗ ಇಡೀ ಸ್ಯಾಂಡಲ್‌ವುಡ್ ಬೆಚ್ಚಿಬೀಳುವಂತೆ ಮಾಡಿದೆ. ಸಿನಿಮಾಗಳಲ್ಲಿ ಸಣ್ಣಪುಟ್ಟ ಪಾತ್ರಗಳ ಮೂಲಕ ಗುರುತಿಸಿಕೊಂಡಿದ್ದ ನಟಿ (Kannada Actress) ಬಿಂದು ಅಲಿಯಾಸ್ ಊರ್ವಶಿ, ಈಗ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ ಜೈಲು ಪಾಲಾಗಿದ್ದಾಳೆ. ‘ಭಜರಂಗಿ’, ‘ರಂಗೋಲಿ’, ‘ಪೊಲೀಸ್ ಕ್ವಾರ್ಟರ್ಸ್’, ‘ಕಾಲಭೈರವ’ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದ ಬಿಂಧು (Bindu), ಇತ್ತೀಚೆಗೆ ಬಿಡುಗಡೆಯಾದ…

Read More

ಪಶ್ಚಿಮ ಏಷ್ಯಾ ಉದ್ವಿಗ್ನತೆ: ಭಾರತದಿಂದ ಅಧಿಕೃತ ಹೇಳಿಕೆ ಬಿಡುಗಡೆ; ಗಲ್ಫ್​ನಲ್ಲಿ ಭಾರತೀಯರ ಸುರಕ್ಷತೆ ಕುರಿತು ಕಾಳಜಿ – Kannada News | India’s official statement on West Asia conflict, says safety of Indian citizen is its utmost priority

ನವದೆಹಲಿ, ಮಾರ್ಚ್ 3: ಇಸ್ರೇಲ್-ಅಮೆರಿಕ ಹಾಗೂ ಇರಾನ್ ನಡುವೆ ನಡೆಯುತ್ತಿರುವ ಯುದ್ಧದ (Iran war) ಕುರಿತು ಭಾರತ ಅಧಿಕೃತವಾಗಿ ಪ್ರತಿಕ್ರಿಯೆ ನೀಡಿದೆ. ಇರಾನ್ ಮತ್ತು ಗಲ್ಫ್​ನಲ್ಲಿ ಬಿಕ್ಕಟ್ಟು ಶುರುವಾಗಿರುವುದು ಹಾಗೂ ಅದರಿಂದ ಸಾವು ನೋವುಗಳಾಗಿ ಸಹಜ ಬದುಕು ಅಸ್ತವ್ಯಸ್ತಗೊಳ್ಳುತ್ತಿರುವುದಕ್ಕೆ ಭಾರತ ಆತಂಕ ವ್ಯಕ್ತಪಡಿಸಿದೆ. ಗಲ್ಫ್ ದೇಶಗಳಲ್ಲಿ ಕೆಲಸ ಮಾಡುತ್ತಿರುವ ಕೋಟಿ ಸಂಖ್ಯೆಯ ಭಾರತೀಯರ ಸುರಕ್ಷತೆ ಬಗ್ಗೆ ಚಿಂತೆ ವ್ಯಕ್ತಪಡಿಸಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ಹೇಳಿಕೆ ಬಿಡುಗಡೆ ಮಾಡಿದ್ದು, ಎಲ್ಲಾ ಕಡೆಗಳಿಂದ ಮಾತುಕತೆಗಳಾಗಿ, ಬಿಕ್ಕಟ್ಟು ಅಂತ್ಯಗೊಳ್ಳುವಂತಾಗಲಿ ಎಂದು…

Read More

Video: ಅಂಗನವಾಡಿಗೆ ಬಿಡೋಕೆ ಬಂದ ಅಮ್ಮನ ಬಳಿ ಮುದ್ದಾಗಿ ಮಾತನಾಡಿ ಕಳಿಸಿಕೊಟ್ಟ ಕಂದಮ್ಮ – Kannada News | A little boy who sent his mother off to school with a caring word

ಪುಟಾಣಿಗಳೇ (little kids) ಹಾಗೆ, ತುಂಟಾಟ ಮಾಡೋದರಲ್ಲಿ ಎತ್ತಿದ ಕೈ. ಅದಲ್ಲದೇ ಶಾಲೆಗೆ ಹೋಗಲು ವಿಷಯದಲ್ಲಿ ಸ್ವಲ್ಪ ಹಿಂದೇಟು ಹಾಕುತ್ತಾರೆ. ಆದರೆ ಈ ಹೆತ್ತವರು ಪುಲಾಯಿಸಿ ಶಾಲೆಗೆ ಕಳಿಸಿ ಕೊಡುತ್ತಾರೆ. ಆದರೆ ಈ ಪುಟಾಣಿ ಮಾತ್ರ ಶಾಲೆಗೆ (school) ಹೋಗಲ್ಲ ಎಂದು ಹಠ ಮಾಡಿಲ್ಲ. ಶಾಲೆಗೆ ಕಳಿಸಿಕೊಡಲು ಬಂದ ಅಮ್ಮನನ್ನು  ಪುಟಾಣಿಯೊಂದು ಮುದ್ದಾಗಿ ಕಳಿಸಿಕೊಟ್ಟಿದೆ. ಮನೆಗೆ ಹೋಗಿ ನೀನು ಟಿವಿ ನೋಡು ಎನ್ನುವ ಪುಟಾಣಿಯ ಮುದ್ದು ಮಾತು ನೆಟ್ಟಿಗರ ಗಮನ ಸೆಳೆದಿದೆ. ಈ ವಿಡಿಯೋ ಸದ್ಯ ಸೋಶಿಯಲ್…

Read More

ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣ: ಗ್ರಾಹಕರಿಲ್ಲದೇ ಹೋಟೆಲ್‌ಗಳು ಖಾಲಿ.. ಖಾಲಿ – Kannada News | Ketugrasta Lunar Eclipse Sparks Traditional Beliefs and Community Impact

ಕೇತುಗ್ರಸ್ತ ಚಂದ್ರಗ್ರಹಣ ಆರಂಭವಾಗಿದ್ದು, ನಭೋಮಂಡಲದಲ್ಲಿ ಚಂದ್ರಗ್ರಹಣದ ಅದ್ಭುತ ಕ್ಷಣಗಳನ್ನು ವೀಕ್ಷಿಸಬಹುದಾಗಿದೆ. ಲಾಸ್ ಏಂಜಲೀಸ್‌ನಲ್ಲಿ ಗೋಚರಿಸುತ್ತಿರುವ ಈ ಗ್ರಹಣ ಭಾರತದಲ್ಲಿ ಕೊನೆಯ 21 ನಿಮಿಷಗಳ ಕಾಲ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಈ ಸಂದರ್ಭದಲ್ಲಿ ಚಂದ್ರನ ಕಾಲು ಭಾಗ ಮಾತ್ರ ಗೋಚರಿಸುತ್ತದೆ, ಉಳಿದ ಭಾಗ ತಾತ್ಕಾಲಿಕವಾಗಿ ನೆರಳಿನಲ್ಲಿ ಆವೃತವಾಗಿರುತ್ತದೆ. ಚಂದ್ರಗ್ರಹಣದ ಬಗ್ಗೆ ವೈಜ್ಞಾನಿಕ ಹಾಗೂ ಧಾರ್ಮಿಕ ನಂಬಿಕೆಗಳು ಭಾರತದಲ್ಲಿ ಮಾತ್ರವಲ್ಲದೆ, ಜಪಾನ್, ಚೀನಾ, ಅಮೆರಿಕಾದಂತಹ ದೇಶಗಳಲ್ಲೂ ಇವೆ. ಈ ಗ್ರಹಣದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಜನಸಂಚಾರ ಕಡಿಮೆಯಾಗಿ, ಹೋಟೆಲ್‌ಗಳು ಖಾಲಿ ಹೊಡೆದಿವೆ. ಇದು…

Read More

ರಾಜ್ಯಸಭಾ ಚುನಾವಣೆಗೆ 9 ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ; ಬಿಹಾರದಿಂದ ಪಕ್ಷದ ಮುಖ್ಯಸ್ಥ ನಿತಿನ್ ನಬಿನ್ ಕಣಕ್ಕೆ – Kannada News | BJP announces 9 candidates List for Rajya Sabha elections fields BJP National President Nitin Nabin from Bihar

ನವದೆಹಲಿ, ಮಾರ್ಚ್ 3: ಬಿಜೆಪಿ ಇಂದು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nitin Nabin) ಅವರನ್ನು ಸಹ ನಾಮನಿರ್ದೇಶನ ಮಾಡಲಾಗಿದೆ. ಬಿಹಾರದಿಂದ ರಾಜ್ಯಸಭಾ ಚುನಾವಣೆಗೆ ನಿತಿನ್ ನಬಿನ್ ಮತ್ತು ಶಿವೇಶ್ ರಾಮ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 5. ಮಾರ್ಚ್ 16ರಂದು ಮತದಾನ ನಡೆಯಲಿದೆ. ಅದೇ ದಿನ ಫಲಿತಾಂಶಗಳನ್ನು ಪ್ರಕಟವಾಗಲಿದೆ. ಬಿಹಾರದಿಂದ ಬಿಜೆಪಿ ನಿತಿನ್ ನಬಿನ್ ಮತ್ತು ಶಿವೇಶ್ ಕುಮಾರ್ ಅವರನ್ನು…

Read More

ರಾಜ್ಯ ರಾಜಕಾರಣದಲ್ಲಿ ಫೋನ್​​ ಟ್ಯಾಪಿಂಗ್​​ ಬಿರುಗಾಳಿ: ವಿಪಕ್ಷಗಳ ಮೇಲೆ ಮುಗಿಬಿದ್ದ ಕಾಂಗ್ರೆಸ್​​ – Kannada News | Karnataka Phone Tapping Row: Congress Vs Opposition on Intelligence Misuse Claims

ರಾಜ್ಯ ರಾಜಕಾರಣದಲ್ಲಿ ಫೋನ್​​ ಟ್ಯಾಪಿಂಗ್​​ ಬಿರುಗಾಳಿImage Credit source: Google ಬೆಂಗಳೂರು, ಮಾರ್ಚ್​​ 03: ಕಳೆದ ಕೆಲ ತಿಂಗಳುಗಳಿಂದ ರಾಜ್ಯ ರಾಜಕಾರಣದಲ್ಲಿ ನಡೆಯುತ್ತಿದ್ದ ಕುರ್ಚಿ ಕಾಳಗದ ಮಧ್ಯೆ ಇದೀಗ ಫೋನ್​​ ಟ್ಯಾಪಿಂಗ್​​ ಆರೋಪ ವಿಚಾರ ಬಿರುಗಾಳಿ ಎಬ್ಬಿಸಿದೆ. ಗುಪ್ತಚರ ಇಲಾಖೆಯನ್ನು ಸರ್ಕಾರವು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ರಾಜ್ಯದಲ್ಲಿ ಬಹುಶಃ ಇದೇ ಮೊದಲ ಬಾರಿಗೆ ಇಲಾಖೆ ಮೂಲಕ ಪಕ್ಷದ ಶಾಸಕರುಗಳು ಮತ್ತು ನಾಯಕರ ಕುರಿತು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಡಿಸಿಎಂ ಪರವಾದ ಶಾಸಕರನ್ನು ಗಮನಿಸಲು ಸಿಎಂರಿಂದ ಗುಪ್ತಚರ ಇಲಾಖೆ ಬಳಕೆ ಆಗ್ತಿದೆ….

Read More

ಕನ್ನಡ ಪ್ರೇಕ್ಷಕರ ನಿರ್ಲಕ್ಷ್ಯ, ತಮಿಳು ಪ್ರೇಕ್ಷಕರ ಅಪ್ಪುಗೆ ಪಡೆದ ಕನ್ನಡ ಸಿನಿಮಾ – Kannada News | Second case of Seetharam movie getting good response in Tamil Nadu

ಕನ್ನಡದ ದೊಡ್ಡ ಬಜೆಟ್ ಪ್ಯಾನ್ ಇಂಡಿಯಾ (Pan India) ಸಿನಿಮಾಗಳು ಅಥವಾ ಸುದೀಪ್, ಯಶ್, ದರ್ಶನ್ ಅಂಥಹಾ ದೊಡ್ಡ ನಟರ ಸಿನಿಮಾಗಳಷ್ಟೆ ರಾಜ್ಯದ ಗಡಿ ದಾಟಿ ಹೊರ ರಾಜ್ಯಗಳಲ್ಲಿ ಪ್ರದರ್ಶನ ಕಾಣುತ್ತವೆ. ಅದರಲ್ಲೂ ಸಿನಿಮಾ ಚೆನ್ನಾಗಿದ್ದರಷ್ಟೆ ಪರಭಾಷೆ ಪ್ರೇಕ್ಷಕರು ಮೆಚ್ಚಿಕೊಳ್ಳುತ್ತಾರೆ. ಕನ್ನಡದ ಕೆಲವು ಸ್ಟಾರ್ ನಟರ ಕನ್ನಡ ಸಿನಿಮಾಗಳು ಪರಭಾಷೆಯಲ್ಲಿ ಅಟ್ಟರ್ ಫ್ಲಾಪ್ ಆದ ಉದಾಹರಣೆಯೂ ಇದೆ. ಆದರೆ ಇದೀಗ ಕನ್ನಡದ ಸಿನಿಮಾ ಒಂದು ನೆರೆಯ ತಮಿಳುನಾಡಿನಲ್ಲಿ ಸದ್ದು ಮಾಡಲು ಆರಂಭಿಸಿದೆ. ಆದರೆ ಇದು ಸಂತೋಷ ಪಡಬೇಕಾದ…

Read More

ಸಿಎಂ ಸಿದ್ದರಾಮಯ್ಯ ಸಿಕ್ಕಾಪಟ್ಟೆ ಸಾಲ ಮಾಡಿ ಕನ್ನಡಿಗರ ಪಾಲಿಗೆ ಸಾಲರಾಮಯ್ಯ ಆಗಿದ್ದಾರೆ: ಜೆಡಿಎಸ್ ವ್ಯಂಗ್ಯ – Kannada News | Karnataka Debt Crisis: Siddaramaiah’s 2025 26 Budget Faces Opposition Over Rs7.6 Lakh Crore Loan

ಬೆಂಗಳೂರು, ಮಾ.3: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಲಿರುವ 2025-26ರ ಆಯವ್ಯಯದ ಮೇಲೆ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ರಾಜ್ಯದ ಸಾಲದ ಪ್ರಮಾಣವು ಅಪಾಯಕಾರಿ ಮಟ್ಟವನ್ನು ತಲುಪುತ್ತಿದ್ದು, ಮುಂದಿನ ವರ್ಷದ ಅಂತ್ಯಕ್ಕೆ ಕರ್ನಾಟಕದ ಒಟ್ಟು ಸಾಲ 7,64,655 ಕೋಟಿ ರೂಪಾಯಿ ದಾಟಲಿದೆ ಎಂಬ ಅಂಕಿಅಂಶಗಳು ಆತಂಕ ಮೂಡಿಸಿವೆ. 2025-26ರ ಅಂತ್ಯಕ್ಕೆ ಈ ಸಾಲದ ಪರಿಣಾಮ ಜನರ ಮೇಲೆ ಬೀಳಲಿದೆ. ಪ್ರಸಕ್ತ ಆರ್ಥಿಕ ವರ್ಷವೊಂದರಲ್ಲೇ ಸರ್ಕಾರ ಸುಮಾರು 1.16 ಲಕ್ಷ ಕೋಟಿ ರೂ. ಸಾಲ ಪಡೆದಿದೆ ಎಂದು ಜೆಡಿಎಸ್​​​…

Read More

ಇರಾನ್​ ಮೇಲೆ ಇಸ್ರೇಲ್-ಯುಎಸ್​ ದಾಳಿ; ಸಾವಿನ ಸಂಖ್ಯೆ 787ಕ್ಕೆ ಏರಿಕೆ – Kannada News | Death Toll rises to 787 in Iran US Israel strikes Irans nuke facility

ಟೆಹ್ರಾನ್, ಮಾರ್ಚ್ 3: ಫೆಬ್ರವರಿ 28ರಂದು ಇರಾನ್​ನ ಮೇಲೆ ದಾಳಿ ಆರಂಭಿಸಿದ್ದ ಇಸ್ರೇಲ್ (Israel War) ಹಾಗೂ ಅಮೆರಿಕ ಇರಾನ್​ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿತ್ತು. ಇದಾದ ನಂತರ ಈ ಸಂಘರ್ಷ ಬೇರೆ ದೇಶಗಳಿಗೂ ಪಸರಿಸಿತು. ಗಲ್ಫ್ ರಾಷ್ಟ್ರಗಳಲ್ಲಿರುವ ಅಮೆರಿಕದ ವಾಯುನೆಲೆಗಳ ಮೇಲೆ ಇರಾನ್ ದಾಳಿ ನಡೆಸಲಾರಂಭಿಸಿದೆ. ಇದೀಗ ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ದಾಳಿಯ ಸಾವಿನ ಸಂಖ್ಯೆ 787ಕ್ಕೆ ಏರಿದೆ. ಸೋಮವಾರ, ಸಾವಿನ ಸಂಖ್ಯೆ 555 ಇತ್ತು. ಇಂದು ಇರಾನ್​ನ ಪರಮಾಣು ಸೌಲಭ್ಯದ…

Read More

IPL 2026: ಬೆಂಗಳೂರಿನಲ್ಲಿ ಆಡಲು ಒಪ್ಪಿದ ಆರ್​ಸಿಬಿ; ಚಿನ್ನಸ್ವಾಮಿಯಲ್ಲೇ ಉದ್ಘಾಟನಾ ಪಂದ್ಯ – Kannada News | RCB’s 2026 IPL Journey Starts in Bengaluru: Home Games and KKR Opening Clash!

2026 ರ ಐಪಿಎಲ್ ಸಮೀಪಿಸುತ್ತಿರುವ ಬೆನ್ನಲ್ಲೇ ಆರ್​ಸಿಬಿ ಅಭಿಮಾನಿಗಳಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಬೆಂಗಳೂರಿನಲ್ಲಿ ತನ್ನ ತವರು ಪಂದ್ಯಗಳನ್ನು (5 ಪಂದ್ಯಗಳು) ಆಡಲು ಒಪ್ಪಿಗೆ ಸೂಚಿಸಿದೆ. ಇದರ ಜೊತೆಗೆ ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯವು ಕೂಡ ಬೆಂಗಳೂರಿನಲ್ಲೇ ನಡೆಯಲಿದೆ. ವಾಸ್ತವವಾಗಿ ಕಳೆದ ಆವೃತ್ತಿಯ ಚಾಂಪಿಯನ್ ಹಾಗೂ ರನ್ನರ್ ಅಪ್ ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯುವುದು ವಾಡಿಕೆ. ಅದರಂತೆ ಆರ್​ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಉದ್ಘಾಟನಾ…

Read More