Category Archives: Blog

Your blog category

ಮೋಸ ಮಾಡಿ ಇಸ್ರೇಲ್​​-ಅಮೆರಿಕಾದಿಂದ ಖಮೇನಿ ಹತ್ಯೆ: ಬಿ.ಕೆ. ಹರಿಪ್ರಸಾದ್ ಆರೋಪ – Kannada News | Congress Leader BK Hariprasad Condemns Alleged Deceitful Assassination of Iranian President

ಬೆಂಗಳೂರು, ಮಾರ್ಚ್​ 03: ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಇರಾನ್‌ನಲ್ಲಿ ನಡೆದ ಘಟನೆಯನ್ನು ಖಂಡಿಸಿದ್ದು, ಇರಾನ್​​ನ ಪರಮೋಚ್ಛ ನಾಯಕ ಖಮೇನಿಯನ್ನು ಮೋಸದಿಂದ ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದು ವಿಶ್ವಸಂಸ್ಥೆಯ ಚಾರ್ಟರ್‌ನ ಸಂಪೂರ್ಣ ಉಲ್ಲಂಘನೆಯಾಗಿದ್ದು, ಒಂದು ರಾಷ್ಟ್ರದ ಸಾರ್ವಭೌಮತೆ ಮತ್ತು ಸ್ವಾತಂತ್ರ್ಯವನ್ನು ನಾಶಪಡಿಸುವ ಕೆಲಸವನ್ನು ಯುಎಸ್‌ಎ ಮತ್ತು ಇಸ್ರೇಲ್ ಮಾಡಿವೆ ಎಂದು ಅವರು ಹೇಳಿದ್ದಾರೆ. ಭಾರತದ ವಿದೇಶಾಂಗ ನೀತಿಯು ಪಂಡಿತ್ ಜವಾಹರಲಾಲ್ ನೆಹರೂ ಅವರ ಕಾಲದಿಂದಲೂ ಅಲಿಪ್ತ ರಾಷ್ಟ್ರಕೂಟದ ತತ್ವಗಳನ್ನು ಅನುಸರಿಸುತ್ತಿದೆ ಎಂದು ಹರಿಪ್ರಸಾದ್ ನೆನಪಿಸಿದ್ದು, 1994ರಲ್ಲಿ ಕಾಶ್ಮೀರ ವಿಚಾರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಇಸ್ಲಾಮಿಕ್ ಸಹಕಾರ ಸಂಘಟನೆ (OIC) ನಿರ್ಣಯವನ್ನು ಮಂಡಿಸಿದಾಗ ಇರಾನ್ ಭಾರತಕ್ಕೆ ಪ್ರಬಲವಾಗಿ ಬೆಂಬಲ ನೀಡಿತ್ತು ಎಂಬುದನ್ನು ಅವರು ಉಲ್ಲೇಖಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ನೂತನ ದಂಪತಿಗಳಿಂದ ಜಗಮೆಚ್ಚುವ ಕಾರ್ಯ: ಸರ್ಕಾರಿ ಶಾಲೆಗಳಿಗೆ ರಶ್ಮಿಕಾ-ವಿಜಯ್ ದೇಣಿಗೆ – Kannada News | Rashmika and Vijay giving scholarships to students of 44 government schools

ವಿಜಯ್ ದೇವರಕೊಂಡ (Vijay Deverakonda) ಮತ್ತು ರಶ್ಮಿಕಾ ಮಂದಣ್ಣ ಇತ್ತೀಚೆಗಷ್ಟೆ ಮದುವೆ ಆಗಿದ್ದಾರೆ. ಇವರ ಮದುವೆ ಭಾರಿ ಅದ್ಧೂರಿಯಾಗಿ ನೆರವೇರಿದೆ. ಇವರ ಮದುವೆಗೆ ಸುಮಾರು ಕೋಟಿಗಳೇ ಖರ್ಚಾಗಿವೆ. ಇವರು ಮದುವೆಗೆ ಧರಿಸಿದ್ದ ಚಿನ್ನದ ಬೆಲೆಯೇ ಸುಮಾರು 6-7 ಕೋಟಿಗಳದ್ದಾಗಿತ್ತು ಎನ್ನಲಾಗುತ್ತಿದೆ. ಮದುವೆಗೆ ಭಾರಿ ಮೊತ್ತ ಖರ್ಚು ಮಾಡಿರುವ ಈ ದಂಪತಿ ಇದೀಗ ತಮ್ಮ ದುಡಿಮೆಯ ಕೆಲ ಭಾಗವನ್ನು ಸಮಾಜ ಸೇವೆಗೂ ಬಳಸುತ್ತಿದ್ದಾರೆ. ಈಗಾಗಲೇ ತಮ್ಮ ಅಭಿಮಾನಿಗಳಿಗೆ ಸಿಹಿ ಕಳಿಸುವ ಮೂಲಕ ಗಮನ ಸೆಳೆದಿರುವ ರಶ್ಮಿಕಾ ಮತ್ತು ವಿಜಯ್ ಇದೀಗ ಅದಕ್ಕೂ ಮಿಗಿಲಾದ ಸೇವೆಯೊಂದಕ್ಕೆ ಕೈ ಹಾಕಿದ್ದಾರೆ.

ವಿಜಯ್ ದೇವರಕೊಂಡ ಅವರು ತಮ್ಮ ಚಾರಿಟೇಬಲ್ ಟ್ರಸ್ಟ್ ಮೂಲಕ ಸುಮಾರು 44 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದ್ದಾರೆ. ತೆಲಂಗಾಣದ ನಾಗರ್ ಕರ್ನೂಲ್ ಜಿಲ್ಲೆಯ ಅಚ್ಚಂಪೇಟೆ ವಿಭಾಗದ ಸುಮಾರು 44 ಸರ್ಕಾರಿ ಶಾಲೆಗಳ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ‘ದೇವರಕೊಂಡ ಚಾರಿಟಬಲ್ ಟ್ರಸ್ಟ್’ ಮೂಲಕ ವಿದ್ಯಾರ್ಥಿವೇತನ ನೀಡಲು ವಿಜಯ್ ಮತ್ತು ರಶ್ಮಿಕಾ ನಿರ್ಧರಿಸಿದ್ದಾರೆ.

ಮದುವೆಯ ನಂತರ ವಿಜಯ್ ಅವರ ಪೂರ್ವಜರ ಗ್ರಾಮವಾದ ತುಮ್ಮನಪೇಟೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘೋಷಣೆ ಮಾಡಲಾಗಿದೆ. ಈ ವೇಳೆ ವಿಜಯ್ ಅವರ ತಾಯಿ ಮಾಧವಿ ದೇವರಕೊಂಡ ಕೂಡ ಉಪಸ್ಥಿತರಿದ್ದರು. ಈಗಾಗಲೇ ಈ ಜೋಡಿ ದೇಶದ ವಿವಿಧೆಡೆ ದೇವಸ್ಥಾನಗಳಲ್ಲಿ ಅನ್ನದಾನ ಮಾಡಿದೆ ಮತ್ತು ಅಭಿಮಾನಿಗಳಿಗಾಗಿ ಸಿಹಿಯನ್ನು ವಿತರಿಸಿದೆ. ಇದೀಗ ಸರ್ಕಾರಿ ಶಾಲೆ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಮೂಲಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಇದನ್ನೂ ಓದಿ:ಮದುವೆ ಬಳಿಕ ಊರಿಗೆ ಬಂದ ವಿಜಯ್ ದೇವರಕೊಂಡ, ರಶ್ಮಿಕಾಗೆ ಭರ್ಜರಿ ಸ್ವಾಗತ

ವಿಜಯ್ ಮತ್ತು ರಶ್ಮಿಕಾ ಫೆಬ್ರವರಿ 26, 2024 ರಂದು ರಾಜಸ್ಥಾನದ ಉದಯಪುರದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ರಶ್ಮಿಕಾ ಮತ್ತು ವಿಜಯ್ ಕಾಲಿಟ್ಟಿದ್ದಾರೆ. ಇಬ್ಬರೂ ಕಳೆದ ಕೆಲವಾರು ವರ್ಷಗಳಿಂದ ಪರಸ್ಪರ ಪ್ರೀತಿಯಲ್ಲಿದ್ದರು, ಇದೀಗ ಕೊನೆಗೂ ತಮ್ಮ ಪ್ರೀತಿಗೆ ದಾಂಪತ್ಯದ ಮುದ್ರೆ ಒತ್ತಿದ್ದಾರೆ. ವಿವಾಹದ ನಂತರ ತೆಲಂಗಾಣದ ತಮ್ಮ ಹಳ್ಳಿಯ ಮನೆಯಲ್ಲಿ ಗೃಹಪ್ರವೇಶ ಮತ್ತು ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಈ ದಂಪತಿ ನೆರವೇರಿಸಿದ್ದಾರೆ.

ಮಾರ್ಚ್ 4 ರಂದು ಹೈದರಾಬಾದ್‌ನಲ್ಲಿ ಅದ್ಧೂರಿ ವಿವಾಹ ಆರತಕ್ಷತೆಯನ್ನು ಈ ಜೋಡಿ ಹಮ್ಮಿಕೊಂಡಿದೆ. ಈ ಸಮಾರಂಭಕ್ಕೆ ದಕ್ಷಿಣ ಭಾರತದ ಚಿತ್ರರಂಗದ ಗಣ್ಯರು, ಬಾಲಿವುಡ್ ತಾರೆಯರು ಹಾಗೂ ರಾಜಕೀಯ ಮುಖಂಡರು ಆಗಮಿಸುವ ನಿರೀಕ್ಷೆಯಿದೆ. ಹೈದರಾಬಾದ್​​ನ ತಾಜ್ ಕೃಷ್ಣನಲ್ಲಿ ಈ ಜೋಡಿ ಅದ್ಧೂರಿ ಆರತಕ್ಷತೆ ನಡೆಯಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

OTD: ಭಯೋತ್ಪಾದಕರ ದಾಳಿ: ಕ್ರಿಕೆಟ್ ಇತಿಹಾಸದ ಕರಾಳ ದಿನ – Kannada News | OTD: Sri Lanka’s cricket team attacked in Pakista

ಮಾರ್ಚ್ 3 ಅನ್ನು ಕ್ರಿಕೆಟ್ ಇತಿಹಾಸದ ಅತ್ಯಂತ ಕರಾಳ ದಿನ ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ 2009 ರಲ್ಲಿ ಕ್ರಿಕೆಟಿಗರ ಮೇಲೆ ನಡೆದ ಭಯೋತ್ಪಾದಕರ ದಾಳಿ.  ಮಾರ್ಚ್ 3, 2009 ರಂದು ಪಾಕಿಸ್ತಾನದ ಲಾಹೋರ್‌ನಲ್ಲಿ ಶ್ರೀಲಂಕಾ ತಂಡದ ಮೇಲೆ ಉಗ್ರರು ದಾಳಿ ನಡೆಸಿದ್ದರು. ಈ ಭೀಕರ ದಾಳಿ ನಡೆದು ಇಂದಿಗೆ ಬರೋಬ್ಬರಿ 17 ವರ್ಷಗಳಾಗಿವೆ.

ಲಾಹೋರ್​ನಲ್ಲಿ ನಡೆಯುತ್ತಿದ್ದ ಎರಡನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟಕ್ಕಾಗಿ ಗಡಾಫಿ ಕ್ರೀಡಾಂಗಣಕ್ಕೆ ಬಸ್‌ನಲ್ಲಿ ತೆರಳುತ್ತಿದ್ದಾಗ ಲಿಬರ್ಟಿ ಚೌಕದ ಬಳಿಕ ಸುಮಾರು 12 ಶಸ್ತ್ರಸಜ್ಜಿತ ಭಯೋತ್ಪಾದಕರು ರಾಕೆಟ್ ಲಾಂಚರ್ ಬಳಸಿ ದಾಳಿ ನಡೆಸಿದರು. ಈ ದಾಳಿಯಲ್ಲಿ 6 ಪಾಕಿಸ್ತಾನಿ ಪೊಲೀಸ್ ಅಧಿಕಾರಿಗಳು ಮತ್ತು ಇಬ್ಬರು ನಾಗರಿಕರು ಮೃತಪಟ್ಟಿದ್ದರು.

ಹಾಗೆಯೇ ಶ್ರೀಲಂಕಾ ತಂಡದ ನಾಯಕ ಮಹೇಲ ಜಯವರ್ಧನೆ, ಕುಮಾರ್ ಸಂಗಕ್ಕಾರ, ತಿಲಾನ್ ಸಮರವೀರ, ತರಂಗ ಪರನವಿತಾನ, ಅಜಂತ ಮೆಂಡಿಸ್, ಚಾಮಿಂದ ವಾಸ್ ಮತ್ತು ಸುರಂಗ ಲಕ್ಮಲ್ ಸೇರಿದಂತೆ ಒಟ್ಟು 6-7 ಆಟಗಾರರು ಗಾಯಗೊಂಡಿದ್ದರು.

ಈ ಘಟನೆಯ ನಂತರ ಅಂತರರಾಷ್ಟ್ರೀಯ ತಂಡಗಳು ಪಾಕಿಸ್ತಾನಕ್ಕೆ ಭೇಟಿ ನೀಡಲು ನಿರಾಕರಿಸಿದವು. ಇದರಿಂದಾಗಿ ಸುಮಾರು 10 ವರ್ಷಗಳ ಕಾಲ ಪಾಕಿಸ್ತಾನದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಥಗಿತಗೊಂಡಿತು. ಇದಾದ 6 ವರ್ಷಗಳ ಬಳಿಕ, ಅಂದರೆ 2015 ರಲ್ಲಿ ಝಿಂಬಾಬ್ವೆ ತಂಡವು ಪಾಕ್​ಗೆ ಭೇಟಿ ನೀಡಿತು.

ಆ ಬಳಿಕ 2017 ರಲ್ಲಿ ಶ್ರೀಲಂಕಾ ತಂಡವು ಪಾಕಿಸ್ತಾನಕ್ಕೆ ಭೇಟಿ ನೀಡುವುದರೊಂದಿಗೆ ಪಾಕ್​ನಲ್ಲಿ ಮತ್ತೆ ಅಂತಾರಾಷ್ಟ್ರೀಯ ಸರಣಿಗಳು ಶುರುವಾದವು.

 

Source link

ಇಬ್ಬರು ಹೀರೋಯಿನ್​​​ಗಳ ಜೊತೆ ‘ಪ್ರೇಮದ ಊರಲಿ’ ಶ್ರೀರಾಮ್ ಪಯಣ – Kannada News | Sriram’s ‘Premada Oorali’ Teaser: Village Love Story with Rangayana Raghu Shines

ನಟ ಶ್ರೀರಾಮ್ ಅವರು ಕಿರುತೆರೆ ಮೂಲಕ ಗುರುತಿಸಿಕೊಂಡವರು. ‘ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮೂಲಕ ಗಮನ ಸೆಳೆದರು. ಈಗ ಅವರು ಹಿರಿತೆರೆಯಲ್ಲಿ ಬ್ಯುಸಿ ಆಗಿದ್ದಾರೆ. ‘ಪ್ರೇಮದ ಊರಲಿ’ ಹೆಸರಿನ ಸಿನಿಮಾದಲ್ಲಿ ನಟಿಸಿದ್ದು, ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆದಿದೆ. ಈ ಟೀಸರ್ ಎಲ್ಲ ಕಡೆಗಳಿಂದ ಮೆಚ್ಚುಗೆ ಪಡೆಯುತ್ತಿದೆ. ಒಂದು ಸುಂದರ ಪ್ರೇಮಕಥೆ ಜೊತೆಗೆ ಹಳ್ಳಿ ಜೀವನವನ್ನು ಸುಂದರವಾಗಿ ಕಟ್ಟಿಕೊಡುವ ಪ್ರಯತ್ನ ನಡೆದಿದೆ.

ಈ ಮೊದಲು ‘ಅಕ್ಷಿ’ ಹೆಸರಿನ ಮಾಡಿ ನ್ಯಾಷನಲ್ ಅವಾರ್ಡ್ ಗೆದ್ದ ಮನೋಜ್ ಕುಮಾರ್ ಅವರು, ‘ಪ್ರೇಮದ ಊರಲಿ’ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಚಿತ್ರಕ್ಕೆ ಶ್ರೀರಾಮ್ ಹೀರೋ ಆದರೆ, ತಪಸ್ವಿನಿ ಪೂಣಚ್ಚ ಹಾಗೂ ರಮಿಕಾ ಶಿವು ನಾಯಕಿ ಆಗಿದ್ದಾರೆ. ಈ ಚಿತ್ರದಲ್ಲಿ ಶ್ರೀರಾಮ್ ತಂದೆ ಪಾತ್ರದಲ್ಲಿ ರಂಗಾಯಣ ರಘು ನಟಿಸಿದ್ದಾರೆ. ಸಿನಿಮಾದ ಟೀಸರ್ ಅಲ್ಲಿ ಹಳ್ಳಿ ಜೀವನ, ಹಳ್ಳಿಯಲ್ಲಿ ಸಂಬಂಧಗಳಿಗೆ ಕೊಡೋ ಪ್ರಾಮುಖ್ಯತೆ ಬಗ್ಗೆ ಹೇಳಲಾಗಿದೆ. ಒಂದು ಸೊಗಸಾದ ಪ್ರೇಮ ಕಥೆಯನ್ನು ಕೂಡ ಹೇಳಲಾಗುತ್ತಿದೆ.

ಇದನ್ನೂ ಓದಿ: ‘ಸನ್ ಆಫ್ ಮುತ್ತಣ್ಣ’ ಸಿನಿಮಾದ ಬಗ್ಗೆ ನಟ ರಂಗಾಯಣ ರಘು ಮಾತು 

ಈ ಚಿತ್ರದ ಬಹುತೇಕ ಶೂಟ್ ನಡೆದಿದ್ದು ಹಾಸನದ ಭಾಗದಲ್ಲಂತೆ. ಅಲ್ಲಿನ ಮಳೆಗಾಲದ ಸುಂದರ ಪರಿಸವರನ್ನು ಸೆರೆಹಿಡಿಯಲಾಗಿದೆ. ರಂಗಾಯಣ ರಘು ಅವರಿಗೆ ಹಳ್ಳಿ ಜೀವನ ಎಂದರೆ ಸಖತ್ ಇಷ್ಟ. ಈ ಸಿನಿಮಾ ಸಿಕ್ಕಾಗ ಅವರು ಖುಷಿಯಿಂದ ಒಪ್ಪಿಕೊಂಡರು. ಇನ್ನು, ಶ್ರೀರಾಮ್ ಅವರು, ಈ ಚಿತ್ರಕ್ಕಾಗಿ ಒಂದು ತಿಂಗಳು ಆಳಾಗಿ ಕೆಲಸ ಮಾಡಿದರು. ಹೀಗೆ ಕೆಲಸ ಕಲಿತರು.

‘ಪ್ರೇಮದ ಊರಲಿ’ ಚಿತ್ರವನ್ನು ಮಮತಾ ದೇವೇಂದ್ರ, ಪ್ರಶಾಂತ್ ಹಾಗೂ ರಮೇಶ್ ಅವರು ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದ ಶೂಟಿಂಗ್ ಪೂರ್ಣಗೊಂಡಿದ್ದು, ರಿಲೀಸ್​​​ಗಾಗಿ ಪ್ಲ್ಯಾನಿಂಗ್ ನಡೆಯುತ್ತಿದೆ. ಒಳ್ಳೆಯ ಸಂದರ್ಭದ ನೋಡಿ ಚಿತ್ರವನ್ನು ತೆರೆಗೆ ತರುವ ಆಲೋಚನೆ ನಿರ್ಮಾಪಕರಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:04 pm, Tue, 3 March 26

Source link

ಸಿಸಿಬಿ ಪೊಲೀಸರ ಮೆಗಾ ರೇಡ್​​: ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ 10 ಕೋಟಿ ರೂ. ಮೌಲ್ಯದ ಡ್ರಗ್ಸ್​​ ಸೀಜ್​ – Kannada News | Bengaluru CCB Mega Raid: Rs 10 Cr Drugs Seized, Peddlers Arrested

ಬೆಂಗಳೂರು, ಮಾರ್ಚ್​​ 03: ಡ್ರಗ್ಸ್​​ ದಂಧೆಕೋರರಿಗೆ ಬೆಂಗಳೂರು ಪೊಲೀಸರು ಭರ್ಜರಿ ಶಾಕ್​​ ಕೊಟ್ಟಿದ್ದಾರೆ. ನಗರದ ಪ್ರತಿಷ್ಠಿತ ಅಪಾರ್ಟ್​ಮೆಂಟ್​ನಲ್ಲಿ ಡ್ರಗ್ಸ್ ಪತ್ತೆ ಮಾಡಲಾಗಿದ್ದು, ಬರೋಬ್ಬರಿ 10 ಕೋಟಿ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಸಿಸಿಬಿ ವಶಕ್ಕೆ ಪಡೆದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಕೇರಳ ಮೂಲದ ಅಶ್ವಿನ್(27), ಮೊಬಿನಾ(25) ಬಂಧಿತ ಆರೋಪಿಗಳಾಗಿದ್ದು, LSD, ಹೈಡ್ರೋ ಗಾಂಜಾ ಮತ್ತು ಚರಸ್​​ನ ಆರೋಪಿಗಳಿಂದ ಸೀಜ್​​ ಮಾಡಲಾಗಿದೆ. LSD ಸ್ಟ್ರಿಪ್ಸ್​​ಗಳನ್ನು ಕರ್ನಾಟಕದಲ್ಲಿ ವಶಪಡಿಸಿಕೊಂಡಿರೋದು ಇದೇ ಮೊದಲು ಎನ್ನಲಾಗಿದೆ.

ಡ್ರಗ್ಸ್​​ ಮಾರಾಟಕ್ಕೆ ಖತರ್ನಾಕ್​​ ಪ್ಲ್ಯಾನ್​​

ಸೀಜ್​​ ಮಾಡಲಾದ ಡ್ರಗ್ಸ್​

ಆರೋಪಿಗಳು ದೇವರ ಚಿತ್ರ ಸೇರಿ ವಿವಿಧ ಚಿತ್ರಕಲಾ ರೂಪದಲ್ಲಿ LSD ಸ್ಟ್ರಿಪ್ಟ್ ಮಾರಾಟ ಮಾಡುತ್ತಿದ್ದರು ಎಂಬುದು ಬೆಂಗಳೂರು ಸಿಸಿಬಿ ನಾರ್ಕೊಟಿಕ್ಸ್ ವಿಭಾಗದ ಕಾರ್ಯಾಚರಣೆಯ ವೇಳೆ ಬಯಲಾಗಿದೆ. ಬಂಧಿತ ಇಬ್ಬರೂ ಆರೋಪಿಗಳು ಡ್ರಗ್ಸ್ ಪೆಡ್ಲಿಂಗ್ ಅನ್ನೇ ವೃತ್ತಿ ಮಾಡಿಕೊಂಡಿದ್ದರು. ಇವರಿಗೆ ವಿನ್ಸೆಂಟ್​ ಎಂಬಾತ ಥಾಯ್​ಲ್ಯಾಂಡ್​​ನಿಂದ ಡ್ರಗ್ಸ್​ ಕಳಿಸುತ್ತಿದ್ದ. ವಿಮಾನದ ಮೂಲಕ ಆಗಾಗ ಅಲ್ಪ ಪ್ರಮಾಣದಲ್ಲಿ ಡ್ರಗ್ಸ್ ಪೂರೈಕೆ ಆಗುತ್ತಿತ್ತು. ವಿನ್ಸೆಂಟ್ ಸೂಚಿಸಿದ ಜಾಗದಲ್ಲಿ ಅಶ್ವಿನ್ ಮತ್ತು ಮೊಬಿನಾ ಡ್ರಗ್ಸ್ ಇಡುತ್ತಿದ್ದರು ಎಂಬುದು ಗೊತ್ತಾಗಿದೆ. ಇನ್ನು ಪ್ರಕರಣ ಸಂಬಂಧ ಫ್ಲ್ಯಾಟ್​​​​ ಮಾಲೀಕನ ಪಾತ್ರದ ಬಗ್ಗೆಯೂ ಸಿಸಿಬಿಯಿಂದ ಪರಿಶೀಲನೆ ಮುಂದುವರಿದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೇರಳ ಪೊಲೀಸರ ಭರ್ಜರಿ ಕಾರ್ಯಾಚರಣೆ; 1 ಕೋಟಿ ರೂ ಮೌಲ್ಯದ ಡ್ರಗ್ಸ್ ಸೀಜ್, ಪೆಡ್ಲರ್ ಅರೆಸ್ಟ್

ವಿದ್ಯಾರ್ಥಿಗಳು, ಉದ್ಯೋಗಿಗಳಿಗೆ ಡ್ರಗ್ಸ್​ ಮಾರಾಟ: ಆರೋಪಿ ಅರೆಸ್ಟ್​​

ವಿದ್ಯಾರ್ಥಿಗಳು, ಐಟಿಬಿಟಿ ಉದ್ಯೋಗಿಗಳಿಗೆ ಡ್ರಗ್ಸ್​ ಮಾರಾಟ ಮಾಡುತ್ತಿದ್ದ ಒಡಿಶಾ ಮೂಲದ ಡ್ರಗ್ ಪೆಡ್ಲರ್​​ ಓವರ್ನನ್ನು ಬೆಂಗಳೂರಿನ ವೈಟ್​ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ. ಲಿಂಗರಾಜ್ ದಾಸ್​​ ಬಂಧಿತ ಆರೋಪಿಯಾಗಿದ್ದು, ಈತನಿಂದ 55 ಲಕ್ಷ ಮೌಲ್ಯದ 27 ಕೆಜಿ ಗಾಂಜಾ, 3 ಕೆಜಿ 200 ಗ್ರಾಂ ಆ್ಯಶಿಸ್ ಆಯಿಲ್ ಜಪ್ತಿ ಮಾಡಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಮೆರಿಕದ ಟ್ರಂಪ್ ಟವರ್​​ನಲ್ಲಿ ಅನುಮಾನಾಸ್ಪದ ಬಾಕ್ಸ್​ ಪತ್ತೆ – Kannada News | Security Scare at Trump Tower After Suspicious Package Alert

ವಾಷಿಂಗ್ಟನ್, ಮಾರ್ಚ್​ 03: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ವಿರುದ್ಧ ಯುದ್ಧ ಘೋಷಿಸಿದ್ದಾರೆ. ಅಮೆರಿಕ ಸೇನೆಯು ಹಲವಾರು ದಿನಗಳಿಂದ ಇರಾನ್ ಮೇಲೆ ಭಾರೀ ಬಾಂಬ್ ದಾಳಿ ನಡೆಸುತ್ತಿದೆ. ಆದಾಗ್ಯೂ, ಈ ಯುದ್ಧದ ಮಧ್ಯೆ, ಟ್ರಂಪ್‌ಗೆ ಸಂಬಂಧಿಸಿದ ಆಘಾತಕಾರಿ ಮಾಹಿತಿಗಳು ಹೊರಬಿದ್ದಿವೆ.ಮಾಹಿತಿಯ ಪ್ರಕಾರ, ಅಮೆರಿಕದ ಮ್ಯಾನ್‌ಹ್ಯಾಟನ್‌ನಲ್ಲಿರುವ ಟ್ರಂಪ್ ಟವರ್‌ನಲ್ಲಿ ಅನುಮಾನಾಸ್ಪದ ಬಾಕ್ಸ್​​ ಪತ್ತೆಯಾಗಿದೆ. ಟ್ರಂಪ್ ಟವರ್‌ನಿಂದ ಸೀಕ್ರೆಟ್ ಸರ್ವಿಸ್ ಈ ಪ್ಯಾಕ್ ಅನ್ನು ವಶಪಡಿಸಿಕೊಂಡಿದೆ.

ಸೋಮವಾರ ಮಧ್ಯಾಹ್ನ ಮ್ಯಾನ್‌ಹ್ಯಾಟನ್‌ನಲ್ಲಿರುವ ಪ್ರಸಿದ್ಧ ಟ್ರಂಪ್ ಟವರ್‌ನ ಮೇಲ್ ಕೋಣೆಯಲ್ಲಿ ಅನುಮಾನಾಸ್ಪದ ಪ್ಯಾಕ್ ಕಂಡುಬಂದಿದೆ.ನ್ಯೂಯಾರ್ಕ್ ನಗರ ಪೊಲೀಸ್ ಇಲಾಖೆ (NYPD) ಬಾಂಬ್ ಸ್ಕ್ವಾಡ್ ಕೂಡಲೇ ಅದನ್ನು ವಶಪಡಿಸಿಕೊಂಡಿದೆ. 725 ಫಿಫ್ತ್ ಅವೆನ್ಯೂದಲ್ಲಿರುವ ಕಟ್ಟಡದೊಳಗೆ ಬಾಕ್ಸ್​ ಪತ್ತೆಯಾದ ನಂತರ ಸೀಕ್ರೆಟ್ ಸರ್ವಿಸ್ 911 ಗೆ ಕರೆ ಮಾಡಲಾಗಿತ್ತು. ತನಿಖೆಯ ಸಮಯದಲ್ಲಿ ಯಾರನ್ನೂ ಕಟ್ಟಡದಿಂದ ಸ್ಥಳಾಂತರಿಸಲಾಗಿಲ್ಲ, ಅಥವಾ ಯಾವುದೇ ಗಾಯಗಳೂ ಆಗಿಲ್ಲ, ಯಾರನ್ನೂ ಬಂಧಿಸಲಾಗಿಲ್ಲ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಹೋಳಿ ಹುಣ್ಣಿಮೆಯಂದೇ ಗ್ರಹಣ: ಜಲಕಂಟಕ, ಅಗ್ನಿ ಅನಾಹುತ!, ಸಾಲು ಸಾಲು ಅವಘಡಗಳು ಫಿಕ್ಸ್​​? – Kannada News | Eclipse on Holi Full Moon: Water Crisis, Fire Accidents; Series of Mishaps Ahead?

ಬೆಂಗಳೂರು, ಮಾರ್ಚ್​​ 03: ಹೋಳಿ ಹುಣ್ಣಿಮೆಯಂದು ಗ್ರಹಣ ಹಿನ್ನೆಲೆ ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಜಲಕಂಟಕ ಮತ್ತು ಅಗ್ನಿ ಅವಘಡಗಳು ಸಂಭವಿಸುವ ಸಾಧ್ಯತೆಯಿದೆ. ಏಕೆಂದರೆ ಚಂದ್ರನು ಜಲಕಾರಕನಾಗಿದ್ದಾನೆ ಮತ್ತು ಹೋಳಿ ಹುಣ್ಣಿಮೆಯು ಅಗ್ನಿಗೆ ಸಂಬಂಧಿಸಿದೆ. ಈ ಅವಘಡಗಳು ಸಂಭವಿಸದಂತೆ ಪರಮೇಶ್ವರನಲ್ಲಿ ಪ್ರಾರ್ಥಿಸುವುದರಿಂದ ಎಲ್ಲವೂ ನಿವೃತ್ತಿಯಾಗುತ್ತವೆ ಎಂದು ಗವಿ ಗಂಗಾಧರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ತಿಳಿಸಿದ್ದಾರೆ. ಭಾರತದಲ್ಲಿ ಕೇವಲ 16 ನಿಮಿಷಗಳ ಕಾಲ ಗ್ರಹಣ ಕಾಣಿಸಿಕೊಂಡಿದ್ದರೂ, ಸಣ್ಣ ಪ್ರಮಾಣದಲ್ಲಿ ತೊಂದರೆಗಳು ಬರಬಹುದು. ಆದರೆ, ಈ ತೊಂದರೆಗಳಿಂದ ಮುಕ್ತಿಯಾಗಲು ಪರಮೇಶ್ವರನ ಪ್ರಾರ್ಥನೆ ಅಗತ್ಯ. ಪ್ರಸ್ತುತ ನಡೆಯುತ್ತಿರುವ ಇರಾನ್-ಇಸ್ರೇಲ್ ಯುದ್ಧಕ್ಕೂ ಮತ್ತು ಗ್ರಹಣಕ್ಕೂ ಯಾವುದೇ ಸಂಬಂಧವಿಲ್ಲ.  ಭಾರತ ದೇಶವು ಕರ್ಮಭೂಮಿ, ಜಪಭೂಮಿ, ತಪೋಭೂಮಿ ಮತ್ತು ಯಜ್ಞಭೂಮಿ ಆಗಿರುವುದರಿಂದ ಯಾವುದೇ ತೊಂದರೆಗಳು ಬರದಂತೆ ಪರಮೇಶ್ವರನನ್ನು ಪ್ರಾರ್ಥಿಸುವುದು ಮುಖ್ಯ. ಒಂದು ಕೊಳಗ ಹಾಲಿಗೆ ಒಂದು ಚಮಚ ಮೊಸರು ಹಾಕಿದರೆ ಹಾಲು ಕೆಡುವಂತೆ, ಗ್ರಹಣವು ಸಣ್ಣ ಪ್ರಮಾಣದಲ್ಲಿ ಕಂಡರೂ ಅದರ ದೋಷ ಇದ್ದೇ ಇರುತ್ತದೆ. ಈ ದೋಷ ದೇಶಕ್ಕೆ ತೊಂದರೆ ನೀಡದಿರಲಿ ಎಂದು ಪ್ರಾರ್ಥಿಸುವುದು ಈ ದಿನದ ವಿಶೇಷ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚಂದ್ರ ಗ್ರಹಣ ದಿನವೇ ವೈಭವದಿಂದ ನೆರವೇರಿದ ಹೊಳೆನರಸೀಪುರ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ – Kannada News | Lakshmi Narasimha Swamy Rathotsava Held Grandly in Holenarasipura on Lunar Eclipse Day, Watch video

ಹಾಸನ, ಮಾರ್ಚ್​ 3: ಕೇತುಗ್ರಸ್ತ ಚಂದ್ರ ಗ್ರಹಣ ದಿನವೇ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ರಥೋತ್ಸವ ಶ್ರದ್ಧಾ ಭಕ್ತಿಯಿಂದ ನೆರವೇರಿತು. ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಕ್ತರು ರಥಬೀದಿಯಲ್ಲಿ ತೇರನ್ನು ಎಳೆದು ಭಕ್ತಿ ಸಮರ್ಪಿಸಿದರು. ರಥೋತ್ಸವದಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕ ಎಚ್.ಡಿ. ರೇವಣ್ಣ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಭಾಗವಹಿಸಿದರು. ದೇವರಿಗೆ ಪೂಜೆ ಸಲ್ಲಿಸಿ ತೇರನ್ನೆಳೆದು ಪುನೀತರಾದರು. ಗ್ರಹಣ ದಿನವಾದರೂ ಭಕ್ತರ ಸಂಭ್ರಮ ಜೋರಾಗಿತ್ತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Chandra Grahan 2026: ಗ್ರಹಣ ಕಾಲದಲ್ಲಿ ಮಾಂಸಾಹಾರ ಸೇವಿಸಬಹುದೇ? ಜ್ಯೋತಿಷ್ಯ ಮತ್ತು ವಿಜ್ಞಾನ ಹೇಳುವುದೇನು? – Kannada News | Lunar Eclipse and Non Veg: Astrology vs Science on Grahan Food Rules and Health Impact

ಗ್ರಹಣ ಕಾಲದಲ್ಲಿ ಮಾಂಸಾಹಾರImage Credit source: Pinterest

2026ರ ಮೊದಲ ಸೂರ್ಯಗ್ರಹಣ ಫೆಬ್ರವರಿ 17ರಂದು ಸಂಭವಿಸಿದ್ದು, ಇದೀಗ ಕೆಲವೇ ದಿನಗಳ ಅಂತರದಲ್ಲಿ ಇಂದು ವರ್ಷದ ಮೊದಲ ಚಂದ್ರಗ್ರಹಣವು ಸಂಭವಿಸಲಿದೆ. ಮಧ್ಯಾಹ್ನ 3:20 ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ಸಂಜೆ 6:47 ಕ್ಕೆ ಕೊನೆಗೊಳ್ಳಲಿದೆ. ಭಾರತದಲ್ಲಿ ಚಂದ್ರೋದಯ ಸಂಜೆ 6:22 ಕ್ಕೆ ಸಂಭವಿಸುತ್ತದೆ. ಗ್ರಹಣವು ಸಂಜೆ 6:47 ಕ್ಕೆ ಕೊನೆಗೊಳ್ಳುತ್ತದೆ. ಗ್ರಹಣದ ಸಮಯದಲ್ಲಿ ಮಂತ್ರ ಪಠಣ, ದಾನ-ಧರ್ಮಗಳಿಗೆ ವಿಶೇಷ ಮಹತ್ವವಿದೆ. ಆದರೆ, ಅನೇಕರಲ್ಲಿ ಕಾಡುವ ಒಂದು ದೊಡ್ಡ ಪ್ರಶ್ನೆಯೆಂದರೆ ಗ್ರಹಣದ ದಿನ ಮಾಂಸಾಹಾರ ಸೇವಿಸಬಹುದೇ? ಈ ಬಗ್ಗೆ ಜ್ಯೋತಿಷ್ಯ ಶಾಸ್ತ್ರ ಮತ್ತು ಆಧುನಿಕ ವಿಜ್ಞಾನದ ಭಿನ್ನ ದೃಷ್ಟಿಕೋನಗಳು ಇಲ್ಲಿವೆ.

ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಕೋನ:

ಹಿಂದೂ ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ, ಗ್ರಹಣದ ಸಮಯವನ್ನು ‘ಅಶುಭ ಕಾಲ’ ಅಥವಾ ‘ಸೂತಕ ಕಾಲ’ ಎಂದು ಪರಿಗಣಿಸಲಾಗುತ್ತದೆ. ರಾಹು ಮತ್ತು ಕೇತುಗಳ ಪ್ರಭಾವದಿಂದ ಈ ಸಮಯದಲ್ಲಿ ಪರಿಸರದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಿರುತ್ತವೆ ಎಂಬ ನಂಬಿಕೆಯಿದೆ. ಮಾಂಸಾಹಾರವನ್ನು ‘ತಾಮಸಿಕ’ ಎಂದು ವರ್ಗೀಕರಿಸಲಾಗಿದೆ. ಇದು ಮನುಷ್ಯನಲ್ಲಿ ಆಲಸ್ಯ, ಅಶಾಂತಿ ಮತ್ತು ಕೋಪವನ್ನು ಪ್ರಚೋದಿಸುತ್ತದೆ. ಗ್ರಹಣದ ಅವಧಿಯಲ್ಲಿ ಮನಸ್ಸಿನ ಶಾಂತಿಗಾಗಿ ಹಣ್ಣು, ಹಾಲು ಅಥವಾ ಹಗುರವಾದ ಸಾತ್ವಿಕ ಆಹಾರ ಸೇವಿಸುವುದು ಅಥವಾ ಉಪವಾಸ ಇರುವುದು ಶ್ರೇಷ್ಠ ಎಂದು ಶಾಸ್ತ್ರಗಳು ಹೇಳುತ್ತವೆ.

ವೈಜ್ಞಾನಿಕ ಮತ್ತು ಆರೋಗ್ಯದ ಹಿನ್ನೆಲೆ:

ಗ್ರಹಣದ ಸಮಯದಲ್ಲಿ ಮಾಂಸಾಹಾರ ತ್ಯಜಿಸಲು ಕೆಲವು ತಾರ್ಕಿಕ ಕಾರಣಗಳನ್ನು ನೀಡಲಾಗುತ್ತದೆ. ಗ್ರಹಣದ ವೇಳೆ ಸೂರ್ಯನ ಕಿರಣಗಳ ಕೊರತೆ ಮತ್ತು ವಾತಾವರಣದ ಬದಲಾವಣೆಯಿಂದಾಗಿ ಮನುಷ್ಯನ ಜೀರ್ಣಾಂಗ ವ್ಯೂಹವು ಸ್ವಲ್ಪ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮಾಂಸಾಹಾರವು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದರಿಂದ, ಇದು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗಬಹುದು.

ಇದನ್ನೂ ಓದಿ: ಮಾ.03 ಕೇತುಗ್ರಸ್ತ ಚಂದ್ರಗ್ರಹಣ; ಈ ರಾಶಿಗೆ ಡಬಲ್ ಧಮಾಕ!

ಸೂರ್ಯನ ಅತಿನೇರಳೆ ಕಿರಣಗಳ ಅನುಪಸ್ಥಿತಿಯಲ್ಲಿ ಬ್ಯಾಕ್ಟೀರಿಯಾಗಳು ವೇಗವಾಗಿ ಹರಡಬಹುದು. ಮಾಂಸವು ಬೇಗನೆ ಕೆಟ್ಟು ಹೋಗುವ ಗುಣ ಹೊಂದಿರುವುದರಿಂದ, ಆರೋಗ್ಯದ ದೃಷ್ಟಿಯಿಂದ ಇದನ್ನು ತಪ್ಪಿಸುವುದು ಉತ್ತಮ ಎಂಬ ಅಭಿಪ್ರಾಯವಿದೆ.

ಆಧುನಿಕ ವಿಜ್ಞಾನದ ಪ್ರಕಾರ, ಗ್ರಹಣವು ಕೇವಲ ಸೂರ್ಯ, ಚಂದ್ರ ಮತ್ತು ಭೂಮಿಯ ನಡುವೆ ನಡೆಯುವ ಒಂದು ನೆರಳಿನ ಆಟ. ಗ್ರಹಣದ ದಿನ ಮಾಂಸಾಹಾರ ಸೇವಿಸುವುದರಿಂದ ನೇರವಾಗಿ ದೇಹಕ್ಕೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ಬಲವಾದ ವೈಜ್ಞಾನಿಕ ಸಾಕ್ಷ್ಯಗಳಿಲ್ಲ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನನ್ನ ಮಗ ಸುರಕ್ಷಿತವಾಗಿ ಬರಬೇಕು’: ಮೋದಿಗೆ ಮನವಿ ಮಾಡಿದ ಯುವಕನ ತಾಯಿ! – Kannada News | Tumakuru’s Manoj Stranded in Iran War: Family Urges Govt for Repatriation

‘ನನ್ನ ಮಗ ಸುರಕ್ಷಿತವಾಗಿ ಬರಬೇಕು’: ಮೋದಿಗೆ ಮನವಿ ಮಾಡಿದ ಇರಾನ್​ನಲ್ಲಿ ಸಿಲುಕಿರುವ ಯುವಕನ ತಾಯಿ!

ತುಮಕೂರು, ಮಾರ್ಚ್​ 03: ಉದ್ಯೋಗ ಅರಸಿ ಇರಾನ್‌ಗೆ ತೆರಳಿದ್ದ ತುಮಕೂರಿನ (Tumkuru) ಯುವಕ ಯುದ್ಧ ಪರಿಸ್ಥಿತಿಯ ನಡುವೆ ಅಲ್ಲಿಯೇ ಸಿಲುಕಿರುವ ಘಟನೆ ಆತಂಕ ಮೂಡಿಸಿದ್ದು, ಆತನನ್ನು ಕರೆತರುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ. ಗುಬ್ಬಿ ತಾಲ್ಲೂಕಿನ ಡಿ. ರಾಂಪುರ ನಿವಾಸಿ ಮನೋಜ್ (25) ಇರಾನ್‌ನಲ್ಲಿ ಮರ್ಚೆಂಟ್ ನೇವಿ ಹಡಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇಸ್ರೇಲ್–ಇರಾನ್ ಯುದ್ಧ ಆರಂಭವಾದ ನಂತರ ಸಂಪರ್ಕ ಕಡಿತಗೊಂಡಿರುವುದು ಕುಟುಂಬದವರಲ್ಲಿ ಕಳವಳ ಉಂಟುಮಾಡಿದೆ.

ನಾನು ಸೇಫಾಗಿದ್ದೀನಿ ಎಂದಿರುವ ಯುವಕ

ಮನೋಜ್ ರೈತ ಶಿವಕುಮಾರ್ ಹಾಗೂ ಲೀಲಾವತಿ ದಂಪತಿಯ ಪುತ್ರ. ತುಮಕೂರಿನ ಸಿಐಟಿ ಕಾಲೇಜಿನಲ್ಲಿ ಡಿಪ್ಲೊಮಾ ಪೂರ್ಣಗೊಳಿಸಿದ ನಂತರ, ಆನ್‌ಲೈನ್ ಮೂಲಕ ಇರಾನ್‌ನ ಮರ್ಚೆಂಟ್ ನೇವಿಯಲ್ಲಿ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದ. ಉತ್ತರ ಪ್ರದೇಶದಲ್ಲಿ ತರಬೇತಿ ಪಡೆದು ಸುಮಾರು ಎಂಟು ತಿಂಗಳ ಹಿಂದೆ ಇರಾನ್‌ಗೆ ತೆರಳಿದ್ದಾನೆ.

ಅಲ್ಲಿ ಪೋರ್ಟ್‌ನಿಂದ ಕಾರ್ಮಿಕರನ್ನು ತೈಲ ನಿಕ್ಷೇಪ (ರಿಗ್) ಪ್ರದೇಶಗಳಿಗೆ ಕರೆದೊಯ್ಯುವುದು ಹಾಗೂ ವಾಪಸ್ ಕರೆತರುವ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ರಜೆ ಪಡೆದು ಊರಿಗೆ ಬರಲು ಸಿದ್ಧತೆ ನಡೆಸುತ್ತಿದ್ದ ವೇಳೆ ಯುದ್ಧ ಆರಂಭಗೊಂಡಿದೆ. ಯುದ್ಧ ಪ್ರಾರಂಭವಾದ ನಂತರ ಮನೋಜ್ ಒಮ್ಮೆ ಮಾತ್ರ ಕರೆ ಮಾಡಿ, ನಾನು ಸುರಕ್ಷಿತವಾಗಿದ್ದೇನೆ, ನಾನು ಇರುವ ಸ್ಥಳದಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಾಯಿಗೆ ಧೈರ್ಯ ತುಂಬಿದ್ದ. ಆದರೆ ಆ ಬಳಿಕ ಸಂಪರ್ಕ ಸಾಧ್ಯವಾಗಿಲ್ಲ ಎಂದು ಪೋಷಕರು ತಿಳಿಸಿದ್ದಾರೆ.

ಇದನ್ನೂ ಓದಿ ದುಬೈನಲ್ಲಿ ಎಂಜಾಯ್ ಮಾಡ್ತಿರುವಾಗ್ಲೇ ದಾಳಿ ಆಯ್ತು: ಯುದ್ಧದ ಭಯಾನಕತೆ ಬಿಚ್ಚಿಟ್ಟ ಕನ್ನಡಿಗ

ಟಿವಿ9 ಜೊತೆ ಮಾತನಾಡಿದ ಮನೋಜ್ ತಾಯಿ ಲೀಲಾವತಿ, ತಮ್ಮ ಮಗನನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲು ಪ್ರಧಾನಮಂತ್ರಿ ನರೇಂದ್ರ ಮೋದಿಗೂ ಮನವಿ ಮಾಡಿದ್ದಾರೆ. ನಮ್ಮ ಮಗ ಕ್ಷೇಮವಾಗಿ ಮನೆಗೆ ಬರಬೇಕು ಎಂದು ಕಣ್ಣೀರಿಟ್ಟಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರಿ ಅಧಿಕಾರಿಗಳು ಕುಟುಂಬದವರನ್ನು ಸಂಪರ್ಕಿಸಿ, ಮನೋಜ್ ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿ ನೀಡಿದ್ದಾರೆ. ಅವನನ್ನು ಶೀಘ್ರದಲ್ಲೇ ಭಾರತಕ್ಕೆ ಕರೆತರಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:24 pm, Tue, 3 March 26

Source link