ಇತ್ತೀಚೆಗೆ ಹಸೆಮಣೆ ಏರಿರುವ ನಟ ದುಷ್ಯಂತ್ ಮತ್ತು ರಚನಾ ಅವರು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದಾರೆ. ಸಿನಿಮಾ, ರಾಜಕೀಯ ಮುಂತಾದ ಕ್ಷೇತ್ರಗಳ ಅನೇಕ ಗಣ್ಯರು ಆಗಮಿಸಿದ್ದಾರೆ.
Your blog category
ಇತ್ತೀಚೆಗೆ ಹಸೆಮಣೆ ಏರಿರುವ ನಟ ದುಷ್ಯಂತ್ ಮತ್ತು ರಚನಾ ಅವರು ಬೆಂಗಳೂರಿನಲ್ಲಿ ಆರತಕ್ಷತೆ ಕಾರ್ಯಕ್ರಮ ಮಾಡಿದ್ದಾರೆ. ಸಿನಿಮಾ, ರಾಜಕೀಯ ಮುಂತಾದ ಕ್ಷೇತ್ರಗಳ ಅನೇಕ ಗಣ್ಯರು ಆಗಮಿಸಿದ್ದಾರೆ.
ಭಾರತ ಮಹಿಳಾ ತಂಡದ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಆಟಗಾರ್ತಿ ಅಲಿಸಾ ಹೀಲಿ ಭರ್ಜರಿ ಶತಕ ಸಿಡಿಸಿದ್ದಾರೆ. ವಿಶೇಷ ಎಂದರೆ ಇದು ಹೀಲಿ ಅವರ ಕೊನೆಯ ಅಂತಾರಾಷ್ಟ್ರೀಯ ಪಂದ್ಯ. ಅಂದರೆ ವಿದಾಯ ಪಂದ್ಯದಲ್ಲಿ ಮೂರಂಕಿ ಮೊತ್ತಗಳಿಸುವ ಮೂಲಕ ಅಲಿಸಾ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಹೋಬರ್ಟ್ನ ಓವಲ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಪರ ಆರಂಭಿಕಗಳಾಗಿ ಕಣಕ್ಕಿಳಿದ ಅಲಿಸಾ ಹೀಲಿ 98 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 27 ಫೋರ್ಗಳೊಂದಿಗೆ ಬರೋಬ್ಬರಿ 158 ರನ್ ಸಿಡಿಸಿದ್ದಾರೆ.
ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ವಿದಾಯ ಪಂದ್ಯದಲ್ಲಿ ಗರಿಷ್ಠ ಸ್ಕೋರ್ ಗಳಿಸಿದ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಅಲಿಸಾ ಹೀಲಿ ತಮ್ಮದಾಗಿಸಿಕೊಂಡಿದ್ದಾರೆ. ಇನ್ನು ಅಲಿಸಾ ಹೀಲಿ ಅವರ 158 ರನ್ಗಳ ಕೊಡುಗೆಯೊಂದಿಗೆ ಈ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು 50 ಓವರ್ಗಳಲ್ಲಿ ಬರೋಬ್ಬರಿ 407 ರನ್ ಕಲೆಹಾಕಿದೆ.
ವರ್ಷದ ಮೊದಲ ಚಂದ್ರಗ್ರಹಣ ಹೋಳಿ ಹುಣ್ಣಿಮೆಯ ದಿನದಂದು ಸಂಭವಿಸುತ್ತಿದೆ. ಇದನ್ನು ಬ್ಲಡ್ ಮೂನ್ ಎಂದೂ ಕರೆಯಲಾಗುತ್ತದೆ. ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕ ಸೋಮಸುಂದರ್ ದೀಕ್ಷಿತ್ ಅವರು ಈ ಚಂದ್ರಗ್ರಹಣದ ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವದ ಬಗ್ಗೆ ಮಾತನಾಡಿದ್ದಾರೆ.
ಗ್ರಹಣವು ಕೇವಲ 15-16 ನಿಮಿಷಗಳ ಕಾಲ ಗೋಚರಿಸಿದರೂ, ಅದರ ಪ್ರಭಾವವು ಇರುತ್ತದೆ. ಇದು ಸಿಂಹ ರಾಶಿಯ ಮೇಲೆ ನಿರ್ದಿಷ್ಟವಾಗಿ ಪ್ರಭಾವ ಬೀರಲಿದೆ, ಮತ್ತು ಎಲ್ಲ 12 ರಾಶಿಗಳು ಹಾಗೂ 27 ನಕ್ಷತ್ರಗಳ ಮೇಲೂ ಪರಿಣಾಮ ಬೀರುತ್ತದೆ. ಈ ದೋಷಗಳನ್ನು ನಿವಾರಿಸಲು ಬುಧವಾರ ಬೆಳಿಗ್ಗೆ ಈಶ್ವರನ ದೇವಾಲಯಕ್ಕೆ ಹೋಗಿ ಅಕ್ಕಿ, ಉದ್ದು ಮತ್ತು ಎಣ್ಣೆಯನ್ನು ಅರ್ಪಿಸಲು ದೀಕ್ಷಿತ್ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ?
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಚಿಕ್ಕಮಗಳೂರು, ಮಾರ್ಚ್ 1: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಭಾನುವಾರ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ರಂಭಾಪುರಿ ಪೀಠಕ್ಕೆ (Rambhapuri Peetha) ಭೇಟಿ ನೀಡಿ ಜಗದ್ಗುರು ರೇಣುಕಾಚಾರ್ಯ, ವೀರಭದ್ರೇಶ್ವರನ ದರ್ಶನ ಪಡೆದರು. ಇದೇ ವೇಳೆ, ಕರ್ನಾಟಕ ರಾಜಕೀಯ ಹಾಗೂ ಇರಾನ್, ಇಸ್ರೇಲ್ ಸಂಘರ್ಷದ ಬಗ್ಗೆಯೂ ಹಲವು ಮಹತ್ವದ ವಿಚಾರಗಳನ್ನು ಉಲ್ಲೇಖಿಸಿದರು. ನಾಯಕತ್ವ ಬದಲಾವಣೆ ಚರ್ಚೆ ಜೋರಾಗಿರುವ ಸಂದರ್ಭದಲ್ಲೇ, ರಂಭಾಪುರಿ ಪೀಠದ ಹೆಲಿಪ್ಯಾಡ್‌ನಲ್ಲಿ ಡಿಕೆ ಶಿವಕುಮಾರ್ ಆಗಮಿಸುತ್ತಿದ್ದಂತೆಯೇ ಕೆಲ ಬೆಂಬಲಿಗರು ‘‘ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿ’’ ಎಂದು ಘೋಷಣೆ ಕೂಗಿದರು.
ಈ ಸಂದರ್ಭದಲ್ಲಿ ಜನರನ್ನು ಹೆಲಿಕಾಪ್ಟರ್ ಸಮೀಪಕ್ಕೆ ಬಿಡಲಾಗಿದ್ದಕ್ಕೆ ಉಪ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿ, ಭದ್ರತಾ ಸಿಬ್ಬಂದಿ ಹಾಗೂ ಪೊಲೀಸರ ವಿರುದ್ಧ ಗರಂ ಆದರು. ಭದ್ರತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಸೂಚಿಸಿದರು.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಯಾವಾಗಲೂ ಶ್ರಮ ನಮ್ಮದು, ಫಲ ದೇವರದ್ದು’ ಎಂದು ಮಾರ್ಮಿಕವಾಗಿ ಉತ್ತರಿಸಿದರು. ನಿಮ್ಮ ಶ್ರಮಕ್ಕೆ ಫಲ ಸಿಗುತ್ತದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ, ‘ಇಲ್ಲಿಗೆ ಬಂದಿದ್ದೇನೆ ಅಲ್ವಾ, ಮಾತನಾಡೋಣ’ ಎಂದು ಹೇಳಿ ನಕ್ಕರು.
ಅಂತರರಾಷ್ಟ್ರೀಯ ಪರಿಸ್ಥಿತಿಯ ಕುರಿತು ಮಾತನಾಡಿದ ಅವರು, ಇಸ್ರೇಲ್ ಹಾಗೂ ಅಮೆರಿಕಾ ಜಂಟಿ ದಾಳಿಯಿಂದ ಇರಾನ್‌ನಲ್ಲಿ ಉದ್ಭವಿಸಿರುವ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದರು. ಮಾನವ ಧರ್ಮಕ್ಕೆ ಜಯವಾಗಲಿ. ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಸಿಗಬೇಕು ಎಂಬುದು ರಂಭಾಪುರಿ ಶ್ರೀಗಳ ಆಶಯ ಎಂದು ಉಲ್ಲೇಖಿಸಿದರು. ಯುದ್ಧದಿಂದ ನಿರಪರಾಧಿಗಳು ಬಲಿಯಾಗುತ್ತಿರುವುದು ದುಃಖಕರ. ಶಾಲಾ ಮಕ್ಕಳೂ ಸಾವನ್ನಪ್ಪಿರುವ ಘಟನೆಗಳು ನೋವು ತಂದಿವೆ ಎಂದು ಹೇಳಿದರು.
ಇರಾನ್, ದುಬೈ ಸೇರಿದಂತೆ ಹಲವು ಕಡೆ ಕನ್ನಡಿಗರು ಸಿಲುಕಿರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ಸಿಲುಕಿರುವವರನ್ನು ಕಾಪಾಡುವುದು ನಮ್ಮ ಜವಾಬ್ದಾರಿ. ಭೋಜೇಗೌಡ ಹಾಗೂ ಎ.ಸಿ. ಶ್ರೀನಿವಾಸ ಸೇರಿದಂತೆ ಅನೇಕರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸುತ್ತಿದ್ದೇನೆ. ಕನ್ನಡಿಗರು ಆತಂಕಪಡಬೇಕಿಲ್ಲ. ನಾನು ಹಾಗೂ ಮುಖ್ಯಮಂತ್ರಿ ಸಂಪರ್ಕದಲ್ಲಿದ್ದೇವೆ ಎಂದು ಭರವಸೆ ನೀಡಿದರು.
ವಿದೇಶಾಂಗ ಇಲಾಖೆಯಿಂದ ಅಧಿಕೃತ ಮಾಹಿತಿ ಬಂದ ನಂತರವೇ ಕ್ರಮ ಕೈಗೊಳ್ಳಲು ಸಾಧ್ಯ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪ್ರತ್ಯೇಕವಾಗಿ ಹೆಲ್ಪ್‌ಲೈನ್ ಆರಂಭಿಸುವುದಕ್ಕೆ ನಿಯಮಾತ್ಮಕ ಅಡಚಣೆಗಳಿವೆ. ಆದರೂ ರಾಜ್ಯ ಸರ್ಕಾರದಿಂದ ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ: ಡಿಸಿಎಂ ಡಿಕೆ ಶಿವಕುಮಾರ್ ಮನೆಗೆ ಬಂದವು 3 ಹೊಸ ಎಲೆಕ್ಟ್ರಿಕ್ ಕಾರು!
ಕನ್ನಡ ಸಂಘಟನೆಗಳು ಕೂಡ ವಿದೇಶದಲ್ಲಿರುವವರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಎಲ್ಲರೂ ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಡಿಕೆ ಶಿವಕುಮಾರ್ ಮನವಿ ಮಾಡಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On – 1:04 pm, Sun, 1 March 26
ದರ್ಶನ್ ಜೊತೆ ಆಪ್ತವಾಗಿರುವ ನಟ ಧನ್ವೀರ್ ಗೌಡ ಅಭಿನಯದ ‘ಹಯಗ್ರೀವ’ (Hayagrriva) ಸಿನಿಮಾದ ಬಿಡುಗಡೆ ವೇಳೆ ತೊಂದರೆ ಉಂಟಾಯಿತು. ಆ ಬಗ್ಗೆ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಫೆಬ್ರವರಿ 27ರಂದು ರಿಲೀಸ್ ಆಗಬೇಕಿದ್ದ ಸಿನಿಮಾ ಸಂಜೆ ತನಕ ರಿಲೀಸ್ ಆಗಲೇ ಇಲ್ಲ. ಸಂಜೆ ಬಳಿಕ ಬಿಡುಗಡೆಗೆ ಅವಕಾಶ ಸಿಕ್ಕಿತು. ಆ ಬಗ್ಗೆ ಧನ್ವೀರ್ ಗೌಡ ಮಾತನಾಡಿದ್ದಾರೆ. ‘ಅಂಥವರನ್ನು ವಿರೋಧಿಗಳು ಅಂತ ಹೇಳಬಾರದು. ನಮಗೆ ಸಿಕ್ಕಾಪಟ್ಟೆ ಪ್ರೀತಿ ತೋರಿಸುವವರು. ನನ್ನ ಮೇಲೆ ಅವರಿಗೆ ಬಹಳ ಲವ್ ಆಗಿದೆ. ಅವರ ರೀತಿಯೇ ನಾವು ಕೂಡ ಪ್ರೀತಿ ತೋರಿಸುವ ಕಾಲ ಬಂದಾಗ ಆ ಭಗವಂತ ತೋರಿಸುತ್ತಾನೆ ಅಂತ ಕಾಯುತ್ತಿದ್ದೇವೆ’ ಎಂದು ಧನ್ವೀರ್ ಗೌಡ (Dhanveer Gowda) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬೆಂಗಳೂರು, ಮಾರ್ಚ್ 1: ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕುಟುಂಬ ಎಲೆಕ್ಟ್ರಿಕ್ ಕಾರು ಖರೀದಿಗೆ ಮುಂದಾಗಿದ್ದು, ಮಹೀಂದ್ರಾ ಕಂಪನಿಯ 3 ಕಾರುಗಳನ್ನು ಕಂಪನಿಯವರು ಬೆಂಗಳೂರಿನ ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿಸಿಎಂ ನಿವಾಸಕ್ಕೆ ಕಳುಹಿಸಿಕೊಟ್ಟಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಅವರ ಪತ್ನಿ ಉಷಾ ಕಾರುಗಳ ವೀಕ್ಷಣೆ ಮಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಡಿಕೆ ಶಿವಕುಮಾರ್ 2 ಕೋಟಿ ರೂಪಾಯಿಯ ಹೊಸ Lexus LM 350h 7 ಸೀಟರ್ ಕಾರು ಖರೀದಿಸಿದ್ದರು.
ಆಟೋದಿಂದ ಬಿದ್ದ ವಿದ್ಯಾರ್ಥಿ ಮೇಲೆ ಹರಿದ ಬಸ್; ಯುವಕ ಸ್ಥಳದಲ್ಲೇ ಸಾವು!
ರಾಯಚೂರು, ಮಾರ್ಚ್ 01: ರಾಯಚೂರು ನಗರದ ಸ್ಟೇಷನ್ ರಸ್ತೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Accident) ಬಡ ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದಾನೆ. ವೇಗದಲ್ಲಿದ್ದ ಆಟೋದಿಂದ ಕೆಳಕ್ಕೆ ಬಿದ್ದ ವಿದ್ಯಾರ್ಥಿ ಮೇಲೆ ಬಸ್ ಹರಿದಿದ್ದು, ಬಸವರಾಜ್ (21) ಎಂಬ ಬಿಎಸ್‌ಸಿ ಅಂತಿಮ ವರ್ಷದ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಭಯಾನಕ ಘಟನೆ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಬಸವರಾಜ್ ಆಶಾಪುರ ರಸ್ತೆಯಿಂದ ಬಸವೇಶ್ವರ ವೃತ್ತದ ಮಾರ್ಗವಾಗಿ ಸ್ನೇಹಿತರೊಂದಿಗೆ ಆಟೋದಲ್ಲಿ ಪ್ರಯಾಣಿಸುತ್ತಿದ್ದ. ಮುಖ್ಯರಸ್ತೆಯಲ್ಲಿ ನಿಂತಿದ್ದ ಮತ್ತೊಂದು ಆಟೋವನ್ನು ತಪ್ಪಿಸಲು ಚಾಲಕ ಏಕಾಏಕಿ ಕಟ್ ಹೊಡೆದ ವೇಳೆ ನಿಯಂತ್ರಣ ಕಳೆದುಕೊಂಡ ವಿದ್ಯಾರ್ಥಿ ಆಟೋದಿಂದ ಕೆಳಕ್ಕೆ ಬಿದ್ದಿದ್ದಾನೆ. ಇದೇ ಸಮಯದಲ್ಲಿ ಹಿಂಬದಿಯಿಂದ ಬರುತ್ತಿದ್ದ ಬಸ್ ಅವನ ಮೇಲೆ ಹರಿದಿದೆ. ಬಸ್ ಹರಿದ ರಭಸಕ್ಕೆ ತೀವ್ರವಾಗಿ ಗಾಯಗೊಂಡ ಬಸವರಾಜ್ ಕ್ಷಣಾರ್ಧದಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಪೂರ್ಣವಾಗಿ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸಾರಿಗೆ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಮೃತ ಬಸವರಾಜ್ ಎಸ್‌ಟಿ ಹಾಸ್ಟೆಲ್‌ನಲ್ಲಿ ವಾಸವಿದ್ದು, ಮನೆಯ ಕಡುಬಡತನದ ನಡುವೆಯೂ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದನು. ಖಾಲಿ ಸಮಯದಲ್ಲಿ ಕೇಟರಿಂಗ್ ಕೆಲಸ ಮಾಡಿ ದಿನಗೂಲಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ. ಕೇಟರಿಂಗ್ ಕೆಲಸಕ್ಕೆ ತೆರಳುವಾಗ ಈ ದುರಂತ ಸಂಭವಿಸಿದೆ. ಪರಿಹಾರ ನೀಡುವಂತೆ ಕುಟುಂಬಸ್ಥರು ಆಗ್ರಹಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಟೆಹ್ರಾನ್, ಮಾರ್ಚ್ 01: ಇಸ್ರೇಲ್(Israel) ಹಾಗೂ ಅಮೆರಿಕವು ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿ, ಅದರ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿಯನ್ನು ಕೊಂದಿವೆ. ಇಷ್ಟೆಲ್ಲಾ ಬೆಳವಣಿಗೆಗಳು ನಡೆದ ಬಳಿಕ ಒಮಾನ್ನ ಸುಲ್ತಾನೇಟ್ನ ವಿದೇಶಾಂಗ ಸಚಿವಾಲಯದ ರಾಜತಾಂತ್ರಿಕ ಸಹಾಯಕರಾಗಿರುವ ಪೀಟರ್ ಎಕ್ಸ್ ಖಾತೆಯಲ್ಲಿ ದಾಳಿಯ ಬಗ್ಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆ ಕುರಿತು ಮಾಹಿತಿ ಇಲ್ಲಿದೆ.
‘‘ ನನ್ನ ಕೆಲಸ ಲಾಜಿಸ್ಟಿಕ್ಸ್, ಪರಿಸ್ಪರ ಕುಳಿತು ಮಾತನಾಡಲು ಸಾಧ್ಯವಾಗದ ಎರಡು ದೇಶಗಳು ಮಾತನಾಡಬೇಕಾದರೆ, ಕೊಠಡಿಗಳನ್ನು ಬುಕ್ ಮಾಡುವುದು ನನ್ನ ಕೆಲಸ. ಬ್ರೀಫಿಂಗ್ ದಾಖಲೆಗಳನ್ನು ಸಿದ್ಧಪಡಿಸುವುದು, ನೀರಿನ ಲೋಟಗಳನ್ನು ಸರಿಯಾದ ಅಂತರದಲ್ಲಿ ಇರಿಸುವುದು ನನ್ನ ಕೆಲಸ’’ ಎಂದು ಮಾತು ಆರಂಭಿಸಿದ್ದಾರೆ.
ಜನವರಿಯಿಂದ ಇರಾನ್‌ನ ಅಣು ಕಾರ್ಯಕ್ರಮದ ಕುರಿತು ಅಮೆರಿಕ ಹಾಗೂ ಇರಾನ್ ನಡುವೆ ಪರೋಕ್ಷವಾದ ಮಾತುಕತೆಗೆ ಒಮಾನ್ ಮಧ್ಯವರ್ತಿಯಾಗಿತ್ತು. ಈ ಮಾತುಕತೆಗಳು ಮಸ್ಕಟ್ ಮತ್ತು ಜಿನೀವಾದಲ್ಲಿ ನಡೆದವು. ಅಮೆರಿಕನ್ನರು ಒಂದು ಕೊಠಡಿಯಲ್ಲಿ ಕುಳಿತಿದ್ದರು. ಇರಾನಿಯನ್ನರು ಇನ್ನೊಂದು ಕೊಠಡಿಯಲ್ಲಿ. ನಾನು ಅವರ ನಡುವೆ ನಡೆದು ಹೋಗುತ್ತಿದ್ದೆಮಾತುಕತೆ ದಿನಗಳಲ್ಲಿ ನಾನು ಸರಾಸರಿ ಹದಿನಾಲ್ಕು ಸಾವಿರ ಹೆಜ್ಜೆ ನಡೆದಿದ್ದೇನೆ ಎಂದು ನನ್ನ ಫಿಟ್‌ಬಿಟ್ ಹೇಳುತ್ತದೆ ಎಂದು ಪೀಟರ್ ಬರೆದಿದ್ದಾರೆ.
ರಾಯಲ್ ಓಪೆರಾ ಹೌಸ್ ಸಭಾಂಗಣದ ಎರಡು ಕೊಠಡಿಗಳ ನಡುವೆ ಇರುವ ಹಾಲ್‌ವೇ ನಲವತ್ತೇಳು ಮೀಟರ್ ಉದ್ದ, ಫೆಬ್ರವರಿಯಲ್ಲಿ ನಾನು ಅದನ್ನು ಎರಡು ನೂರು ಹನ್ನೆರಡು ಬಾರಿ ನಡೆದೆ. ಇದು ನನ್ನ ಹೃದಯ ಆರೋಗ್ಯಕ್ಕೆ ಒಳ್ಳೆಯದು. ಆದರೆ ನನ್ನ ಮೊಣಕಾಲುಗಳಿಗೆ ಕಡಿಮೆ ಅಷ್ಟು ಒಳ್ಳೆಯದಲ್ಲ, ಎರಡೂ ಕಡೆ ಶಾಂತಿ ಕಾಪಾಡಲು ಇದು ಅಗತ್ಯವಾಗಿತ್ತು ಎಂದಿದ್ದಾರೆ.
ಮತ್ತಷ್ಟು ಓದಿ: ಅಲಿ ಖಮೇನಿ ಕಥೆ ಮುಗಿತಾ?: ಇಸ್ರೇಲ್ ಮಾಧ್ಯಮಗಳ ಸಾವಿನ ವರದಿ ಬೆನ್ನಲ್ಲೇ ಇರಾನ್ ಸಚಿವರು ಹೇಳಿದ್ದೇನು?
ಫೆಬ್ರವರಿಯಲ್ಲಿ ಏನೋ ಸಾಧಿಸಿದ ಖುಷಿ ಇತ್ತು
ಇರಾನ್ ಸಮೃದ್ಧ ಯುರೇನಿಯಂ ಸಂಗ್ರಹವನ್ನು ಶೂನ್ಯಕ್ಕೆ ಇಳಿಸಲು ಒಪ್ಪಿಗೆ ನೀಡಿತು, ಅದು ಕಡಿಮೆ ಸಂಗ್ರಹವಾಗಿರಲಿಲ್ಲ, ಶೂನ್ಯವೇ ಆಗಿತ್ತು. ಈಗಿರುವ ಸಂಗ್ರಹವನ್ನು ಕನಿಷ್ಠ ಮಟ್ಟಕ್ಕೆ ಮಿಶ್ರಣ ಮಾಡಿ, ಮರಳಿ ಬಳಸಲಾಗದ ಇಂಧನವಾಗಿ ಪರಿವರ್ತಿಸಲು ಒಪ್ಪಿತು.ಅಣುಬಾಂಬ್‌ಗಾಗಿ ಅಣುಪದಾರ್ಥವನ್ನು ಬಳಕೆ ಮಾಡುವುದಿಲ್ಲ ಎಂದೂ ಹೇಳಿತ್ತು.ನಾನು ಏಳು ವರ್ಷಗಳಿಂದ ರಾಜತಾಂತ್ರಿಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ. ಒಂದು ದೇಶ ಇಷ್ಟು ಬೇಗ ಇಷ್ಟು ವಿಷಯಗಳಿಗೆ ಒಪ್ಪಿದುದನ್ನು ನಾನು ನೋಡಿಲ್ಲ ಎಂದು ಪೀಟರ್ ಹೇಳಿಕೊಂಡಿದ್ದಾರೆ.
14 ಪುಟಗಳ ಕರಡು ಒಪ್ಪಂದವನ್ನು ಅಂತಿಮಗೊಳಿಸಲಾಯಿತು ಮತ್ತು ಜಿನೀವಾದಲ್ಲಿ ಸಹಿ ಸಮಾರಂಭಕ್ಕೆ ಸಿದ್ಧತೆಗಳು ನಡೆಯುತ್ತಿದ್ದವು. ಗಂಟೆಗಳ ನಂತರ, ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತುಕತೆಗಳ ವೇಗದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದರು.
ಎಕ್ಸ್ ಪೋಸ್ಟ್
I am a diplomatic aide in the Sultanate of Oman’s Ministry of Foreign Affairs.
My job is logistics. When two countries that cannot speak to each other need to speak to each other, I book the rooms. I prepare the briefing materials. I make sure the water glasses are the right…
— Peter Girnus 🦅 (@gothburz) February 28, 2026
ಫೆಬ್ರವರಿ 28 ರಂದು, ಪರಿಸ್ಥಿತಿ ನಾಟಕೀಯವಾಗಿ ಬದಲಾಯಿತು. ಇಸ್ರೇಲ್ ಜೊತೆ ಸಮನ್ವಯದೊಂದಿಗೆ ಇರಾನ್‌ನಲ್ಲಿ ಅಮೆರಿಕದ ಪ್ರಮುಖ ಯುದ್ಧ ಕಾರ್ಯಾಚರಣೆಗಳ ಆರಂಭವನ್ನು ಅಧ್ಯಕ್ಷ ಟ್ರಂಪ್ ಘೋಷಿಸಿದರು. ಅನೇಕ ನಗರಗಳಲ್ಲಿನ ಪರಮಾಣು ಸೌಲಭ್ಯಗಳು ಮತ್ತು ಮಿಲಿಟರಿ ತಾಣಗಳನ್ನು ಗುರಿಯಾಗಿಸಿಕೊಂಡು ವೈಮಾನಿಕ ದಾಳಿಗಳು ನಡೆದವು. ಮಾತುಕತೆಗಳ ಸಮಯದಲ್ಲಿ ರಿಯಾಯಿತಿಗಳನ್ನು ನೀಡಲಾಗಿತ್ತು ಎಂದು ವರದಿಯ ಹೊರತಾಗಿಯೂ, ಇರಾನ್ ತನ್ನ ಪರಮಾಣು ಶಸ್ತ್ರಾಸ್ತ್ರಗಳ ಕಾರ್ಯಕ್ರಮವನ್ನು ನಿಲ್ಲಿಸುವ ಕರೆಗಳನ್ನು ತಿರಸ್ಕರಿಸಿದೆ ಎಂದು ಅಮೆರಿಕ ಹೇಳಿದೆ.
ಇರಾನ್‌ನ ಇಂಟರ್ನೆಟ್ ಸಂಪರ್ಕವು ದೇಶಾದ್ಯಂತ ಶೇ.4 ಕ್ಕೆ ಇಳಿಯಿತು, ಇಸ್ರೇಲ್ ತನ್ನ ವಾಯುಪ್ರದೇಶ ಮತ್ತು ಶಾಲೆಗಳನ್ನು ಮುಚ್ಚಿತು,ಇರಾನ್ ಕೊಲ್ಲಿಯಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಪ್ರತೀಕಾರದ ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿತು.ಪ್ರಾದೇಶಿಕ ಉದ್ವಿಗ್ನತೆ ತೀವ್ರವಾಗಿ ಹೆಚ್ಚಾಯಿತು ಎಂದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪುತ್ತೂರು, ಮಾರ್ಚ್ 1: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಭಾನುವಾರ ಭೇಟಿ ನೀಡಿ ಹಲವು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು. ಭಾರತೀಯ ತೈಲಿಕ್ ಸಾಹು ರಾಥೋಡ್ ಮಹಾಸಭಾ ಮುಖ್ಯ ಸಲಹೆಗಾರರಾಗಿರುವ ಪ್ರಹ್ಲಾದ್ ದಾಮೋದರ್ ದಾಸ್ ಮೋದಿ ಮೊದಲಿಗೆ ಪುತ್ತೂರಿನ ಲಕ್ಷ್ಮೀ ದೇವಿ ಬೆಟ್ಟಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಹಾಲಕ್ಷ್ಮೀ ದೇವಿ ಅಮ್ಮನವರ ದರ್ಶನ ಪಡೆದು ಆಶೀರ್ವಾದ ಪಡೆದರು. ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಿ ಸಮುದಾಯದ ಕ್ಷೇಮಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.
ಇದಾದ ಬಳಿಕ ಪುತ್ತೂರಿನಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಗಾಣಿಗ ಸಂಗಮ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವರು ತೆರಳಿದರು. ಪುತ್ತೂರಿನ ಕೋಟೆಚಾ ಹಾಲ್‌ನಲ್ಲಿ ಆಯೋಜಿಸಲಾದ ಗಾಣಿಗ ಸಂಗಮದಲ್ಲಿ ವಿವಿಧ ಭಾಗಗಳಿಂದ ಸಮುದಾಯದ ಮುಖಂಡರು, ಕಾರ್ಯಕರ್ತರು ಹಾಗೂ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು.
ಕಾರ್ಯಕ್ರಮದಲ್ಲಿ ಸಮುದಾಯದ ಏಕತೆ, ಶೈಕ್ಷಣಿಕ ಅಭಿವೃದ್ಧಿ, ಆರ್ಥಿಕ ಸಬಲೀಕರಣ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚೆ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ. ಪ್ರಹ್ಲಾದ್ ಮೋದಿ ಅವರ ಆಗಮನದಿಂದ ಕಾರ್ಯಕ್ರಮಕ್ಕೆ ಹೆಚ್ಚುವರಿ ಮೆರುಗು ಬಂದಿದೆ.
ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಅವರ ಸಂಸಾರದ ಜಗಳ ಈಗ ಕೋರ್ಟ್ ಮೆಟ್ಟಿಲೇರಿದೆ. ವಿಚ್ಛೇದನಕ್ಕೆ ಮನವಿ ಮಾಡಿ ವಿಜಯ್ ಪತ್ನಿ ಸಂಗೀತಾ ಅವರು ಅರ್ಜಿ ಸಲ್ಲಿಸಿದ್ದಾರೆ. ಡಿವೋರ್ಸ್ (Divorce) ಪಡೆಯಲು ಜನವರಿ 27ರಂದು ಅವರು ಕೌಟುಂಬಿಕ ಕೋರ್ಟ್ನಲ್ಲಿ ಅರ್ಜಿ ಹಾಕಿರುವುದು ಖಚಿತವಾಗಿದೆ. ಈ ಬೆನ್ನಲ್ಲೇ ವಿಜಯ್ ಮತ್ತು ಸಂಗೀತಾ ದಂಪತಿಯ ಪುತ್ರ ಜೇಸನ್ ಸಂಜಯ್ (Jason Sanjay) ಬಗ್ಗೆ ಒಂದು ವಿಷಯ ಬಹಿರಂಗ ಆಗಿದೆ. ತಂದೆಯ ಇನ್ಸ್ಟಾಗ್ರಾಮ್ ಖಾತೆಯನ್ನು ಜೇಸನ್ ಸಂಜಯ್ ಅನ್ಫಾಲೋ ಮಾಡಿದ್ದಾರೆ.
ಸೆಲೆಬ್ರಿಟಿಗಳ ಕುಟುಂಬದ ವಿಷಯ ಈ ರೀತಿ ಬಹಿರಂಗ ಆದಾಗ ಅಭಿಮಾನಿಗಳು ನಿಗಾ ಇಡುತ್ತಾರೆ. ಸೋಶಿಯಲ್ ಮೀಡಿಯಾ ಖಾತೆಯ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಈಗ ಸೇಸನ್ ಸಂಜಯ್ ಅವರು ದಳಪತಿ ವಿಜಯ್ ಅವರನ್ನು ಅನ್ಫಾಲೋ ಮಾಡಿರುವುದು ಗೊತ್ತಾಗಿದೆ. ಆ ಮೂಲಕ ತಂದೆಯ ಬಗ್ಗೆ ಮಗನಿಗೆ ಅಸಮಾಧಾನ ತೀವ್ರವಾಗಿದೆ ಎಂಬುದು ತಿಳಿದುಬಂದಿದೆ.
ಇನ್ನೂ ಕೆಲವರು ಬೇರೆ ರೀತಿ ವಾದ ಮಾಡುತ್ತಿದ್ದಾರೆ. ದಳಪತಿ ವಿಜಯ್ ಅವರನ್ನು ಜೇಸನ್ ಸಂಜಯ್ ಎಂದಿಗೂ ಫಾಲೋ ಮಾಡುತ್ತಲೇ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಹಾಗಾಗಿ ಅಭಿಮಾನಿಗಳಲ್ಲಿ ಈ ವಿಷಯದ ಬಗ್ಗೆ ಗೊಂದಲ ಮೂಡಿದೆ. ಚಂಗಲ್ಪಟ್ಟು ಕೌಟುಂಬಿಕ ನ್ಯಾಯಾಲಯದಲ್ಲಿ ದಳಪತಿ ವಿಜಯ್ ಮತ್ತು ಸಂಗೀತಾ ಅವರ ವಿಚ್ಛೇದನದ ಅರ್ಜಿ ವಿಚಾರಣೆ ಆಗಬೇಕಿದೆ.
1999ರಲ್ಲಿ ದಳಪತಿ ವಿಜಯ್ ಮತ್ತು ಸಂಗೀತಾ ಅವರು ಮದುವೆ ಆಗಿದ್ದರು. ಸಂಗೀತಾ ಕುಟುಂಬದವರು ಶ್ರೀಲಂಕನ್ ತಮಿಳು ಮೂಲದವರು. ಮದುವೆಗೂ ಮುನ್ನ ಸಂಗೀತಾ ಅವರು ಬ್ರಿಟಿಷ್ ಪೌರತ್ವ ಹೊಂದಿದ್ದರು. 27 ವರ್ಷಗಳ ಕಾಲ ಸಂಸಾರ ಮಾಡಿದ ಈ ಜೋಡಿ ಈಗ ವಿಚ್ಛೇದನ ಪಡೆಯಲು ಮುಂದಾಗಿದೆ. ಈ ಕುರಿತು ವಿಜಯ್ ಇನ್ನೂ ಅಧಿಕೃತ ಹೇಳಿಕೆ ನೀಡುವುದು ಬಾಕಿ ಇದೆ.
ಇದನ್ನೂ ಓದಿ: ಕಟಕಟೆಯಲ್ಲಿ ದಳಪತಿ ವಿಜಯ್ ದಾಂಪತ್ಯ: ತ್ರಿಷಾ ಹಳೆ ವಿಡಿಯೋ ವೈರಲ್ ಆಗುತ್ತಿರೋದೇಕೆ?
ನಟನೆಯಿಂದ ದೂರ ಸರಿದಿರುವ ದಳಪತಿ ವಿಜಯ್ ಅವರ ಕೊನೇ ಸಿನಿಮಾ ‘ಜನ ನಾಯಗನ್’ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಈಗಾಗಲೇ ಅವರು ತಮಿಳುನಾಡು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ನಟಿಯೊಬ್ಬರ ಜೊತೆ ವಿಜಯ್ ಅವರಿಗೆ ಅನೈತಿಕ ಸಂಬಂಧ ಇದೆ ಎಂದು ಪತ್ನಿ ಸಂಗೀತಾ ಆರೋಪ ಮಾಡಿದ್ದಾರೆ. ಇದು ಅವರ ರಾಜಕೀಯ ಜೀವನಕ್ಕೆ ಕಪ್ಪು ಚುಕ್ಕಿ ಆಗುವ ಸಾಧ್ಯತೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.