Category Archives: Blog

Your blog category

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಮಾರ್ಚ್ 1ರ ದಿನಭವಿಷ್ಯ

ಈ ದಿನ ಮನ್ಯುಸೂಕ್ತ ಶ್ರವಣ ಅಥವಾ ಪಠಣ ಮಾಡುವುದರಿಂದ ನಿದ್ದೆಯಲ್ಲಿನ ಸಮಸ್ಯೆ, ಒತ್ತಡ, ಆತಂಕ ನಿವಾರಣೆ ಆಗುತ್ತದೆ. ಒಂದು ವೇಳೆ ಅನುಕೂಲ ಇದ್ದಲ್ಲಿ ಮನ್ಯುಸೂಕ್ತದ ಪಾರಾಯಣ ಮಾಡಿಸಿ, ಜೇನು ತುಪ್ಪದ ಅಭಿಷೇಕವನ್ನು ಮಾಡಿಸಬಹುದು.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):

ಮನೆಗೆ ಬೇಕಾದ ಕೆಲವು ಯಂತ್ರಗಳು, ಗ್ಯಾಜೆಟ್ ಗಳನ್ನು ಖರೀದಿ ಮಾಡುವುದಕ್ಕೆ ಹಣವನ್ನು ವೆಚ್ಚ ಮಾಡಲಿದ್ದೀರಿ. ಸೋದರ ಸಂಬಂಧಿಗಳು ನಿಮ್ಮ ಹಣಕಾಸು ಅಗತ್ಯಗಳನ್ನು ಪೂರೈಸುವುದಕ್ಕೆ ಮುಂದೆ ಬರಲಿದ್ದಾರೆ. ಹೆಚ್ಚಿನ ಬಡ್ಡಿಗೆ ಸಾಲವನ್ನು ಪಡೆದುಕೊಂಡಿದ್ದಲ್ಲಿ ನಿಮ್ಮ ಉಳಿತಾಯ ಅಥವಾ ಹೂಡಿಕೆ ಹಣವನ್ನು ಹಿಂತೆಗೆದುಕೊಂಡು, ಮರುಪಾವತಿ ಮಾಡುವುದಕ್ಕೆ ಪ್ರಯತ್ನಿಸಲಿದ್ದೀರಿ. ಸಾಕುಪ್ರಾಣಿಗಳ ಅನಾರೋಗ್ಯದ ಕಾರಣಕ್ಕೆ ಅವುಗಳಿಗೆ ವೈದ್ಯಕೀಯ ವೆಚ್ಚ ಆಗಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):

ಆನ್ ಲೈನ್ ವ್ಯವಹಾರಗಳನ್ನು ಮಾಡುವಾಗ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಎಚ್ಚರಿಕೆಯನ್ನು ವಹಿಸಬೇಕು. ಏಕೆಂದರೆ ಡಬಲ್ ಪೇಮೆಂಟ್ ಆಗಿ, ಆ ನಂತರ ಅದನ್ನು ವಾಪಸ್ ಪಡೆಯುವುದಕ್ಕೆ ಹರಸಾಹಸ ಪಡಬೇಕಾಗುತ್ತದೆ. ಉದ್ಯೋಗ ಸ್ಥಳದಲ್ಲಿ ಈ ಹಿಂದಿನ ಯಾವಾಗಿನದೋ ಪ್ರತೀಕಾರವನ್ನು ಈಗ ತೆಗೆದುಕೊಳ್ಳಲು ಅವಕಾಶ ಸಿಕ್ಕಿಬಿಡುತ್ತದೆ, ಆದರೆ ಆ ಭಾವನೆಯಿಂದ ಹೊರಬಂದು ಬಿಡುವುದರಿಂದ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತದೆ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):

ಬಡ್ಡಿಗೆ ಹಣ ನೀಡುವವರು, ಗಿರವಿ ಅಂಗಡಿ ನಡೆಸುತ್ತಾ ಇರುವವರು, ಸಿನಿಮಾ ಫೈನಾನ್ಷಿಯರ್ ಗಳಾಗಿ ಇರುವವರಿಗೆ ಈ ದಿನ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದೆ. ನಿಮ್ಮ ಪ್ರಭಾವ ವಿಸ್ತಾರ ಆಗುವಂಥ ಸಾಧ್ಯತೆ ಸಹ ಇದೆ. ಒಂದು ವೇಳೆ ಪಾರ್ಟನರ್ ಷಿಪ್ ನಲ್ಲಿ ವ್ಯವಹಾರ ಮಾಡುತ್ತಾ ಬಂದಿದ್ದೀರಿ ಅಂತಾದಲ್ಲಿ ಸ್ವತಂತ್ರವಾಗಿ ವ್ಯವಹಾರ ಆರಂಭಿಸುವ ನಿರ್ಧಾರಕ್ಕೆ ಬರುತ್ತೀರಿ.

ಲೇಖನ- ಸ್ವಾತಿ ಎನ್.ಕೆ.

Source link

IND vs WI: ಭಾರತ- ವಿಂಡೀಸ್ ಪಂದ್ಯಕ್ಕೆ ಮಳೆ ಅಡ್ಡಿ? ಹೇಗಿರಲಿದೆ ಕೋಲ್ಕತ್ತಾದ ಹವಾಮಾನ? – Kannada News | T20 WC Semifinal: India vs WI Qualification Scenarios and Rain Impact on March 1 Match

ಹಾಲಿ ಚಾಂಪಿಯನ್ ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್‌ನಲ್ಲಿ ಸೆಮಿಫೈನಲ್ ತಲುಪುತ್ತದೆಯೇ ಅಥವಾ ಇಲ್ಲವೇ? ಎಂಬುದು ಮಾರ್ಚ್ 1 ರ ಭಾನುವಾರದಂದು ನಿರ್ಧರವಾಗಲಿದೆ. ಮಾರ್ಚ್ 1 ರಂದು ಸೂಪರ್ 8 ಸುತ್ತಿನಲ್ಲಿ ಟೀಂ ಇಂಡಿಯಾ ತನ್ನ ಮೂರನೇ ಮತ್ತು ಅಂತಿಮ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ, ಎರಡು ಬಾರಿ ವಿಶ್ವಕಪ್ ವಿಜೇತ ವೆಸ್ಟ್ ಇಂಡೀಸ್ ತಂಡವನ್ನು ಟೀಂ ಇಂಡಿಯಾ ಎದುರಿಸಲಿದೆ. ಸೂಪರ್ 8 ಸುತ್ತಿನಲ್ಲಿ ವೆಸ್ಟ್ ಇಂಡೀಸ್‌ಗೂ ಇದು ಮೂರನೇ ಪಂದ್ಯವಾಗಿದೆ. ಹೀಗಾಗಿ ಎರಡೂ ತಂಡಗಳಿಗೆ ಸೆಮಿಫೈನಲ್​ಗೆ ಅರ್ಹತೆ ಪಡೆಯಲು ಈ ಪಂದ್ಯದ ಗೆಲುವು ಅತ್ಯವಶ್ಯಕವಾಗಿದೆ. ಅಂದರೆ ಈ ಪಂದ್ಯದಲ್ಲಿ ಗೆದ್ದ ತಂಡ ಸೆಮಿಫೈನಲ್​ಗೇರಿದರೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ.

ಪಂದ್ಯ ರದ್ದಾದರೆ, ಸೆಮಿಫೈನಲ್‌ ಟಿಕೆಟ್ ಯಾರಿಗೆ?

ಗ್ರೂಪ್ 1 ಅಂಕ ಪಟ್ಟಿಯಲ್ಲಿ ಭಾರತ ಮತ್ತು ವೆಸ್ಟ್ ಇಂಡೀಸ್ ತಂಡಗಳು ಪ್ರಸ್ತುತ ಸಮಾನ ಅಂಕಗಳನ್ನು ಹೊಂದಿವೆ. ವೆಸ್ಟ್ ಇಂಡೀಸ್ ಎರಡು ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಭಾರತ ಕೂಡ ಎರಡು ಅಂಕಗಳನ್ನು ಹೊಂದಿದೆ. ಆದರೆ ನೆಟ್ ರನ್ ರೇಟ್​ ವಿಚಾರದಲ್ಲಿ ವಿಂಡೀಸ್​ಗಿಂತ ಭಾರತ ಹಿಂದೆ ಇರುವುದರಿಂದ ಮೂರನೇ ಸ್ಥಾನದಲ್ಲಿದೆ. ಈ ಪಂದ್ಯವನ್ನು ಗೆದ್ದ ತಂಡವು ನಾಲ್ಕು ಅಂಕಗಳೊಂದಿಗೆ ನೇರವಾಗಿ ಸೆಮಿಫೈನಲ್‌ಗೆ ಮುನ್ನಡೆಯುತ್ತದೆ. ಆದಾಗ್ಯೂ, ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯವು ಮಳೆಯಿಂದ ರದ್ದಾದರೆ ಅಥವಾ ಫಲಿತಾಂಶವಿಲ್ಲದೆ ಕೊನೆಗೊಂಡರೆ, ಐಸಿಸಿ ನಿಯಮಗಳ ಪ್ರಕಾರ, ಎರಡೂ ತಂಡಗಳು ತಲಾ ಒಂದು ಅಂಕವನ್ನು ಪಡೆಯುತ್ತವೆ.

ವಿಂಡೀಸ್​ಗೆ ಸೆಮೀಸ್ ಟಿಕೆಟ್!

ಈ ಪರಿಸ್ಥಿತಿಯಲ್ಲಿ, ಎರಡೂ ತಂಡಗಳು ಒಟ್ಟು ತಲಾ 3 ಅಂಕಗಳನ್ನು ಪಡೆಯುತ್ತವೆ. ಹೀಗಾಗಿ ಸೆಮಿಫೈನಲ್‌ಗೆ ಮುನ್ನಡೆಯುವ ತಂಡವನ್ನು ನೆಟ್ ರನ್​ ರೇಟ್ ಮೂಲಕ ನಿರ್ಧರಿಸಲಾಗುತ್ತದೆ. ವೆಸ್ಟ್ ಇಂಡೀಸ್‌ನ ನೆಟ್ ರನ್​ ರೇಟ್ +1.791 ಆಗಿದ್ದು, ಭಾರತದ ನೆಟ್ ರನ್​ ರೇಟ್ -0.100 ಆಗಿದೆ. ಅಂದರೆ ನೆಟ್ ರನ್​ ರೇಟ್ ವಿಚಾರದಲ್ಲಿ ಭಾರತಕ್ಕಿಂತ ವೆಸ್ಟ್ ಇಂಡೀಸ್ ಮುಂದಿದೆ. ಆದ್ದರಿಂದ, ಮಳೆ ಅಥವಾ ಯಾವುದೇ ಇತರ ಕಾರಣದಿಂದಾಗಿ ಪಂದ್ಯ ರದ್ದಾದರೆ, ವೆಸ್ಟ್ ಇಂಡೀಸ್ ಸೆಮಿಫೈನಲ್‌ಗೆ ಮುನ್ನಡೆಯುತ್ತದೆ ಮತ್ತು ಭಾರತ ಪಂದ್ಯಾವಳಿಯಿಂದ ಹೊರಹೋಗುತ್ತದೆ.

ಕೋಲ್ಕತ್ತಾ ಹವಾಮಾನ ಹೇಗಿರುತ್ತದೆ?

ಭಾರತ-ವೆಸ್ಟ್ ಇಂಡೀಸ್ ಪಂದ್ಯದ ಸಮಯದಲ್ಲಿ ಮಳೆ ಬರುವ ಸಾಧ್ಯತೆ ಪ್ರಸ್ತುತ ಇಲ್ಲ. ಅಕ್ಯೂವೆದರ್ ಪ್ರಕಾರ, ಮಾರ್ಚ್ 1 ರಂದು ಕೋಲ್ಕತ್ತಾದಲ್ಲಿ ಮಳೆ ಇರುವುದಿಲ್ಲ. ಕೆಲವು ದಿನಗಳ ಹಿಂದೆ ಮಳೆ ಬಂದಿದ್ದರೂ, ಪಂದ್ಯದ ದಿನದಂದು ಮಳೆ ಬೀಳುವ ಸಾಧ್ಯತೆ ಕಡಿಮೆ. ಪಂದ್ಯದ ಸಮಯದಲ್ಲಿ ಆಕಾಶವು ಸ್ಪಷ್ಟವಾಗಿರಲಿದ್ದು, ಹಗಲಿನಲ್ಲಿ ತಾಪಮಾನವು 34 ಡಿಗ್ರಿ ಸೆಲ್ಸಿಯಸ್ ತಲುಪಬಹುದು, ಪಂದ್ಯದ ಸಮಯದಲ್ಲಿ 25-26 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯಬಹುದು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಯಾಣಿಕರಿದ್ದ ಕುವೈತ್ ವಿಮಾನ ನಿಲ್ದಾಣದ ಮೇಲೂ ಇರಾನ್ ದಾಳಿ – Kannada News | Iranian drone strike hit Kuwait International Airport flight Canceled Amid Iran Attacks

ನವದೆಹಲಿ, ಫೆಬ್ರವರಿ 28: ಅಮೆರಿಕ ಮತ್ತು ಇಸ್ರೇಲ್ ಸೇರಿ ತಮ್ಮ ದೇಶದ ಮೇಲೆ ದಾಳಿ ನಡೆಸಿದೆ ಎಂಬ ಕಾರಣಕ್ಕೆ ಇರಾನ್ (Iran War) ಕಂಡ-ಕಂಡ ದೇಶಗಳ ಮೇಲೆಲ್ಲ ವೈಮಾನಿಕ ದಾಳಿ ನಡೆಸುತ್ತಿದೆ. ದುಬೈ, ಬಹ್ರೇನ್, ಅಬುಧಾಬಿಯಲ್ಲಿ ಅಮೆರಿಕದ ವಾಯುನೆಲೆಯ ಮೇಲೆ ದಾಳಿ ನಡೆಸಲಾಗಿದೆ. ದುಬೈನಲ್ಲಿ ಜನಪ್ರಿಯ ಕಟ್ಟಡಗಳ ಮೇಲೂ ದಾಳಿ ನಡೆಸಲಾಗಿದೆ. ಇದೀಗ ಕುವೈತ್​​ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ದಾಳಿ ನಡೆಸಿರುವ ಇರಾನ್ ಅಮಾಯಕ ಜನರಿರುವ ಸ್ಥಳಗಳನ್ನು ಕೂಡ ಗುರಿಯಾಗಿಸಿಕೊಂಡಿದೆ.

ಇರಾನ್‌ನಿಂದ ಹಾರಿಸಲಾದ ಡ್ರೋನ್ ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಪ್ಪಳಿಸಿದ್ದು, ಹಲವಾರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಘಟನೆಯಿಂದ ತುರ್ತು ಪ್ರೋಟೋಕಾಲ್‌ಗಳನ್ನು ಘೋಷಿಸಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

March 2026 Horoscope: ಈ ನಾಲ್ಕು ರಾಶಿಯವರಿಗೆ ಮಾರ್ಚ್​​ ತಿಂಗಳಿನಲ್ಲಿ ಲಕ್ಕೋ ಲಕ್ಕು – Kannada News | March 2026 Horoscope: Venus Transit Brings Prosperity and Love for All Rashis

ಮಾರ್ಚ್- 2026 ರಲ್ಲಿ ಶುಕ್ರನು ತನ್ನ ಉಚ್ಚಸ್ಥಾನಕ್ಕೆ ಹೋಗಿ ತಿಂಗಳ ಕೊನೆಯಲ್ಲಿ ಸ್ಥಾನವನ್ನು ಬದಲಿಸುವನು. ಶುಕ್ರ ದಶೆಯವರಿಗೆ ಇದು ಅತ್ಯಂತ ಶುಭ ಕಾಲ‌. ಹಣಕಾಸು ಕೈಸೇರುವುದಲ್ಲದೇ ಅನೇಕ ಭೋಗಗಳು, ಭೋಜನ, ಸಂಚಾರ, ವಿಶ್ರಾಂತಿ, ಸಂಗಾತಿಯ ಜೊತೆ ಆಪ್ತತೆ ಇವೆಲ್ಲ ಇರಲಿದೆ.

ಮೇಷ ರಾಶಿ

​ಈ ತಿಂಗಳು ನಿಮಗೆ ಮಿಶ್ರಫಲ ದೊರೆಯಲಿದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಆರ್ಥಿಕವಾಗಿ ಖರ್ಚುಗಳು ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಹೂಡಿಕೆಯಲ್ಲಿ ಎಚ್ಚರವಿರಲಿ. ಕುಟುಂಬದವರೊಂದಿಗೆ ಸಮಯ ಕಳೆಯಲು ಪ್ರಯತ್ನಿಸಿ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸುವುದು ಉತ್ತಮ.

ವೃಷಭ ರಾಶಿ

​ಆರ್ಥಿಕ ಪ್ರಗತಿಗೆ ಈ ತಿಂಗಳು ಪೂರಕವಾಗಿದೆ. ಸ್ಥಗಿತಗೊಂಡಿದ್ದ ಕೆಲಸಗಳು ಪುನರಾರಂಭಗೊಳ್ಳಲಿವೆ. ಉದ್ಯೋಗದಲ್ಲಿ ಬಡ್ತಿ ಅಥವಾ ಗೌರವ ಸಿಗುವ ಯೋಗವಿದೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದ್ದು, ಹಳೆಯ ಮಿತ್ರರ ಭೇಟಿ ಮನಸ್ಸಿಗೆ ಸಂತೋಷ ನೀಡಲಿದೆ. ಆರೋಗ್ಯ ಉತ್ತಮವಾಗಿರುತ್ತದೆ.

ಮಿಥುನ ರಾಶಿ

​ನಿಮ್ಮ ಮಾತು ಮತ್ತು ಸಂಯಮ ಈ ತಿಂಗಳು ಬಹಳ ಮುಖ್ಯ. ವೃತ್ತಿಯಲ್ಲಿ ಸಣ್ಣಪುಟ್ಟ ಸವಾಲುಗಳು ಎದುರಾಗಬಹುದು, ಆದರೆ ಧೃತಿಗೆಡಬೇಡಿ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ದೂರದ ಪ್ರಯಾಣವು ಲಾಭದಾಯಕವಾಗಿರಲಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶಗಳು ಹುಡುಕಿಕೊಂಡು ಬರಲಿವೆ.

​ಕರ್ಕಾಟಕ ರಾಶಿ

​ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾದ ಸಮಯವಿದು. ಹಣಕಾಸಿನ ವಿಚಾರದಲ್ಲಿ ಯಾರನ್ನೂ ಅಂಧವಾಗಿ ನಂಬಬೇಡಿ. ವ್ಯಾಪಾರಸ್ಥರಿಗೆ ಮಧ್ಯಮ ಲಾಭ ದೊರೆಯಲಿದೆ. ಮನೆ ಬದಲಾವಣೆ ಅಥವಾ ನವೀಕರಣದ ಆಲೋಚನೆ ಇದ್ದರೆ ಈ ತಿಂಗಳು ಶುಭವಾಗಿದೆ. ಆಧ್ಯಾತ್ಮದ ಕಡೆಗೆ ನಿಮ್ಮ ಒಲವು ಹೆಚ್ಚಾಗಲಿದೆ.

ಸಿಂಹ ರಾಶಿ

​ಆತ್ಮವಿಶ್ವಾಸದಿಂದ ಕೆಲಸ ಮಾಡಿ, ಯಶಸ್ಸು ಖಚಿತ. ಸಾಮಾಜಿಕವಾಗಿ ನಿಮ್ಮ ಗೌರವ ಹೆಚ್ಚಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗಲಿವೆ. ಸಂಗಾತಿಯ ಬೆಂಬಲ ನಿಮ್ಮ ಆತ್ಮಬಲವನ್ನು ಹೆಚ್ಚಿಸುತ್ತದೆ. ಹೂಡಿಕೆಯಿಂದ ಲಾಭ ನಿರೀಕ್ಷಿಸಬಹುದು. ಆಹಾರ ಕ್ರಮದ ಬಗ್ಗೆ ಎಚ್ಚರವಿರಲಿ.

​ಕನ್ಯಾ ರಾಶಿ

​ಕೆಲಸದ ಒತ್ತಡ ಹೆಚ್ಚಾಗಿ ಮಾನಸಿಕ ಕಿರಿಕಿರಿ ಉಂಟಾಗಬಹುದು. ತಾಳ್ಮೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವ ಸಾಧ್ಯತೆಯಿದೆ. ವಿನಾಕಾರಣ ವಾದವಿವಾದಗಳಲ್ಲಿ ಭಾಗಿಯಾಗಬೇಡಿ. ಹಿರಿಯರ ಆರೋಗ್ಯದ ಬಗ್ಗೆ ಗಮನವಿರಲಿ.

​ತುಲಾ ರಾಶಿ

​ಸೃಜನಶೀಲ ಕೆಲಸಗಳಿಗೆ ಈ ತಿಂಗಳು ಹೇಳಿಮಾಡಿಸಿದಂತಿದೆ. ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿವೆ. ಹಿರಿಯ ಅಧಿಕಾರಿಗಳ ಪ್ರಶಂಸೆಗೆ ಪಾತ್ರರಾಗುವಿರಿ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ಇರಲಿದೆ. ವಿದೇಶಿ ವ್ಯಾಪಾರ ಮಾಡುವವರಿಗೆ ಹೆಚ್ಚಿನ ಲಾಭ ಸಿಗಲಿದೆ. ಮನಸ್ಸು ಪ್ರಸನ್ನವಾಗಿರಲಿದೆ.

​ವೃಶ್ಚಿಕ ರಾಶಿ

​ಶತ್ರುಗಳ ಕಾಟವಿದ್ದರೂ ನಿಮ್ಮ ಬುದ್ಧಿವಂತಿಕೆಯಿಂದ ಜಯಿಸುವಿರಿ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭವಿದೆ. ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ. ಮಕ್ಕಳ ಶಿಕ್ಷಣದ ಬಗ್ಗೆ ಶುಭ ಸುದ್ಧಿ ಕೇಳುವಿರಿ. ಚಾಲನೆ ಮಾಡುವಾಗ ಜಾಗರೂಕರಾಗಿರಿ. ಗೆಳೆಯರೊಂದಿಗೆ ಸಣ್ಣಪುಟ್ಟ ಮನಸ್ತಾಪವಾಗುವ ಸಾಧ್ಯತೆಯಿದೆ.

ಧನು ರಾಶಿ

​ಭಾಗ್ಯೋದಯದ ಕಾಲವಿದು. ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಧಾರ್ಮಿಕ ಕಾರ್ಯಗಳಲ್ಲಿ ಭಾಗಿಗಳಾಗುವಿರಿ. ಹೊಸ ವಾಹನ ಅಥವಾ ಆಸ್ತಿ ಖರೀದಿಸುವ ಯೋಗವಿದೆ. ವೃತ್ತಿ ಜೀವನದಲ್ಲಿ ದೊಡ್ಡ ಬದಲಾವಣೆಗಳು ಕಂಡುಬರಲಿವೆ. ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ತಿಂಗಳು.

​ಮಕರ ರಾಶಿ

​ಕೆಲಸದ ಸ್ಥಳದಲ್ಲಿ ರಾಜಕೀಯದಿಂದ ದೂರವಿರಿ. ಆತುರದ ನಿರ್ಧಾರಗಳು ನಷ್ಟಕ್ಕೆ ಕಾರಣವಾಗಬಹುದು. ಸಾಲದ ಹೊರೆ ಇಳಿಸಲು ಯೋಜನೆ ರೂಪಿಸುವಿರಿ. ಕುಟುಂಬದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು. ಯೋಗ ಮತ್ತು ಧ್ಯಾನದಿಂದ ಮಾನಸಿಕ ಶಾಂತಿ ಪಡೆಯಬಹುದು. ತಾಳ್ಮೆಯೇ ಈ ತಿಂಗಳ ಮಂತ್ರ.

​ಕುಂಭ ರಾಶಿ

​ಹೊಸ ಯೋಜನೆಗಳನ್ನು ಆರಂಭಿಸಲು ಈ ತಿಂಗಳು ಪ್ರಶಸ್ತವಾಗಿದೆ. ಸಮಾಜದಲ್ಲಿ ಹೊಸ ಪರಿಚಯಗಳು ಉಂಟಾಗಲಿವೆ. ಪ್ರೇಮಿಗಳಿಗೆ ವಿವಾಹ ಯೋಗವಿದೆ. ಕಲಾ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ವೇದಿಕೆ ಸಿಗಲಿದೆ. ಆದಾಯದ ಹರಿವು ಉತ್ತಮವಾಗಿದ್ದರೂ ಉಳಿತಾಯದ ಕಡೆಗೆ ಗಮನ ನೀಡಿ.

​ಮೀನ ರಾಶಿ

​ಧನ ಲಾಭದ ಜೊತೆಗೆ ವೃತ್ತಿಯಲ್ಲಿ ಅಭಿವೃದ್ಧಿ ಕಾಣುವಿರಿ. ನಿಮ್ಮ ಕಾರ್ಯಕ್ಷಮತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಲಿದೆ. ಕುಟುಂಬದವರೊಂದಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆಯಿದೆ. ಹಳೆಯ ಅನಾರೋಗ್ಯದಿಂದ ಚೇತರಿಸಿಕೊಳ್ಳುವಿರಿ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಿಗಲಿದೆ.

– ಲೋಹಿತ ಹೆಬ್ಬಾರ್

Source link

ಇರಾನ್‌ನ ಶಾಲೆ ಮೇಲೆ ಇಸ್ರೇಲ್ ದಾಳಿ; 40 ವಿದ್ಯಾರ್ಥಿನಿಯರ ಸಾವು, ಪೋಷಕರ ಗೋಳಾಟ

ಟೆಹ್ರಾನ್, ಫೆಬ್ರವರಿ 28: ಇರಾನ್ ಮೇಲೆ ಇಸ್ರೇಲ್ (Israel Attack) ನಡೆಸಿದ ವೈಮಾನಿಕ ದಾಳಿಯ ವೇಳೆ ವಾಯುನೆಲೆಗಳು, ಅನೇಕ ಕಟ್ಟಡಗಳು ನೆಲಸಮವಾಗಿವೆ. ಇದರ ನಡುವೆ ಹೃದಯವಿದ್ರಾವಕ ಘಟನೆಯೊಂದು ನಡೆದಿದ್ದು, ದಕ್ಷಿಣ ಇರಾನ್‌ನ ಹಾರ್ಮೋಜ್ಗನ್ ಪ್ರಾಂತ್ಯದಲ್ಲಿರುವ ಮಿನಾಬ್‌ನಲ್ಲಿರುವ ಪ್ರಾಥಮಿಕ ಬಾಲಕಿಯರ ಶಾಲೆಯ ಮೇಲೆ ಇಸ್ರೇಲಿ ದಾಳಿ ನಡೆದಿದೆ. ಇದರಿಂದ ಆ ಶಾಲೆಯೊಳಗಿದ್ದ 40 ವಿದ್ಯಾರ್ಥಿನಿಯರ ದೇಹ ಛಿದ್ರವಾಗಿದೆ. ಆ ಶಾಲೆಯ ಅವಶೇಷಗಳಡಿ ತಮ್ಮ ಮಕ್ಕಳ ದೇಹಗಳನ್ನು ಹುಡುಕುತ್ತಾ ಪೋಷಕರು ಗೋಳಾಡುವ ದೃಶ್ಯ ಮನಕಲಕುವಂತಿತ್ತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಬೆಳಗಾವಿಯ ಪಿಯು ವಿದ್ಯಾರ್ಥಿನಿ ಹೃದಯಾಘಾತದಿಂದ ಸಾವು – Kannada News | Belagavi Student Heart Attack Death: 2nd PUC Exam Day Tragedy Shocks Chikkodi Village

ಬೆಳಗಾವಿ, ಫೆ.28: ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನವೇ ಜಿಲ್ಲೆಯಲ್ಲಿ ಕರುಳು ಹಿಂಡುವ ಘಟನೆಯೊಂದು ನಡೆದಿದೆ. ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ 17 ವರ್ಷದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ (Heart Attack) ಸಾವನ್ನಪ್ಪಿದ್ದಾಳೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭೂಮಿಕಾ ಮಾಳಂಗಿ (17) ಮೃತ ವಿದ್ಯಾರ್ಥಿನಿ ಎಂದು ಹೇಳಲಾಗಿದೆ. ಇಂದು ದ್ವಿತೀಯ ಪಿಯು ಪರೀಕ್ಷೆಯ ಮೊದಲ ದಿನ. ಭೂಮಿಕಾ ಅವರು ಉತ್ಸಾಹದಿಂದ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದರು. ಸ್ನಾನ ಮುಗಿಸಿ ಹೊರಬರುವಾಗ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ. ಗಾಬರಿಗೊಂಡ ಪೋಷಕರು ತಕ್ಷಣವೇ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲು ಮುಂದಾದರು. ಆದರೆ, ದುರದೃಷ್ಟವಶಾತ್ ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗಮಧ್ಯೆ ಭೂಮಿಕಾ ಮೃತಪಟ್ಟಿದ್ದಾಳೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಜೈಲಿನಲ್ಲಿ ಭೇಟಿಯಾದಾಗ ದರ್ಶನ್ ಹೇಳಿದ್ದೇನು? ಧನ್ವೀರ್ ಮಾತು – Kannada News | Dhanveer Gowda says what Darshan told him when he met in Jail

ಧನ್ವೀರ್ ಗೌಡ (Dhanveer Gowda) ನಟನೆಯ ‘ಹಯಗ್ರೀವ’ ಸಿನಿಮಾ ನಿನ್ನೆ (ಫೆಬ್ರವರಿ 27) ಬಿಡುಗಡೆ ಆಗಿದೆ. ಸಿನಿಮಾ ಬಿಡುಗಡೆಗೆ ಕೆಲವು ಸಂಕಷ್ಟಗಳು ಎದುರಾಗಿದ್ದವು, ಬಿಡುಗಡೆ ದಿನ ರಾಜ್ಯದಾದ್ಯಂತ ಎರಡು ಶೋಗಳು ಸಹ ರದ್ದಾದವು. ಕೊನೆಗೂ ಬಿಡುಗಡೆ ಆದ ಬಳಿಕ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಇದೀಗ ಟಿವಿ9 ಜೊತೆಗೆ ಮಾತನಾಡಿರುವ ನಟ ಧನ್ವೀರ್ ಗೌಡ, ಸಿನಿಮಾ ಸೇರಿದಂತೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅಲ್ಲದೆ, ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಆದಾಗ ಅವರು ಏನು ಹೇಳಿದರು ಎಂಬುದನ್ನೂ ಸಹ ಧನ್ವೀರ್ ಗೌಡ ಹೇಳಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

PAK vs SL: ಟಿ20 ವಿಶ್ವಕಪ್​ನಿಂದ ಹೊರಬಿದ್ದ ‘ಪ್ಯಾಕಿ’ಸ್ತಾನ; ಕಿವೀಸ್​ಗೆ ಸೆಮೀಸ್ ಟಿಕೆಟ್ – Kannada News | T20 World Cup 2026: Pakistan Eliminated in Super 8s; New Zealand Qualifies for Semis

2026 ರ ಟಿ20 ವಿಶ್ವಕಪ್​ನಲ್ಲಿ ಸಿಕ್ಕಿದ್ದ ಕೊನೆಯ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಪಾಕಿಸ್ತಾನ ತಂಡ ಸೂಪರ್ 8 ಸುತ್ತಿನಲ್ಲೇ ತನ್ನ ಪ್ರಯಾಣವನ್ನು ಅಂತ್ಯಗೊಳಿಸಿದೆ. ವಾಸ್ತವವಾಗಿ ಪಾಕಿಸ್ತಾನ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆಯಬೇಕೆಂದಿದ್ದರೆ, ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕಿತ್ತು. ಆದರೆ ಆ ಕೆಲಸ ಮಾಡುವಲ್ಲಿ ಪಾಕಿಸ್ತಾನ ತಂಡ ವಿಫಲವಾಯಿತು. ಇದರ ಪರಿಣಾಮವಾಗಿ ಪಾಕ್ ತಂಡಕ್ಕೆ ಸೆಮಿಫೈನಲ್‌ ಬಾಗಿಲು ಅಧಿಕೃತವಾಗಿ ಮುಚ್ಚಿದೆ. ಹೀಗಾಗಿ ನ್ಯೂಜಿಲೆಂಡ್ ತಂಡ ಗ್ರೂಪ್ 2 ರಿಂದ ಎರಡನೇ ತಂಡವಾಗಿ ಸೆಮಿಫೈನಲ್​ಗೆ ಅರ್ಹತೆ ಪಡೆದುಕೊಂಡಿದೆ. ಇದೀಗ ಸೆಮಿಫೈನಲ್​ನಲ್ಲಿ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿಯಾಗಲಿವೆ.

ಪಾಕಿಸ್ತಾನ ತಂಡ ಸೆಮಿಫೈನಲ್​ಗೆ ಅರ್ಹತೆ ಪಡೆಯಬೇಕಿದ್ದಿದ್ದರೆ ಶ್ರೀಲಂಕಾ ತಂಡವನ್ನು ಭಾರಿ ಅಂತರದಲ್ಲಿ ಸೋಲಿಸಬೇಕಿತ್ತು. ಅದರಂತೆ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡ 213 ರನ್ ಕಲೆಹಾಕಿತು. ಹೀಗಾಗಿ ಈ ಪಂದ್ಯದಲ್ಲಿ ಪಾಕಿಸ್ತಾನ, ಶ್ರೀಲಂಕಾ ತಂಡವನ್ನು 147 ರನ್​ಗಳಿಗೆ ಕಟ್ಟಿಹಾಕಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಶ್ರೀಲಂಕಾ ತಂಡ 16ನೇ ಓವರ್​ನಲ್ಲಿ 150 ರನ್​ಗಳ ಗಡಿ ದಾಟುವ ಮೂಲಕ ಪಾಕಿಸ್ತಾನದ ಕನಸನ್ನು ಭಗ್ನಗೊಳಿಸಿತು.

Published On – 10:33 pm, Sat, 28 February 26

Source link

ಈ ರಾಶಿಯವರಿಗೆ ಮಾರ್ಚ್ 01ರಿಂದ 07 ರವರೆಗೆ ಉದ್ಯೋಗದಲ್ಲಿ ದೊಡ್ಡ ಮನ್ನಣೆ – Kannada News | Career Forecast March 1 7: Promotions, Transfers & Opportunities by Zodiac Sign

ಮಾರ್ಚ್ 01ರಿಂದ 07 ರವರೆಗೆ ಮೊದಲ ವಾರವಾಗಿದ್ದು ಉದ್ಯೋಗದಲ್ಲಿ ಕೆಲವರಿಗೆ ಆತಂಕ, ಸಂತೋಷ, ಆಲಸ್ಯ, ಪ್ರಯತ್ನ ಎಲ್ಲವೂ ಮಿಶ್ರವಾಗಿರುವುದು. ಒಂದನ್ನೇ ನಂಬಿ ಇರುವುದು ಬೇಕಾಗಿಲ್ಲ, ಬೇರೆ ಕ್ಷೇತ್ರಗಳ ಜ್ಞಾನವೂ ಮುಖ್ಯ. ಎರಡು ದೋಣಿಯಲ್ಲಿ ಹೋಗುವುದು ಕಷ್ಟ.

ಮೇಷ

​ಈ ವಾರ ಸೃಜನಾತ್ಮಕ ಕೆಲಸಗಳಿಗೆ ಮನ್ನಣೆ ಸಿಗಲಿದೆ. ಉದ್ಯೋಗದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದ್ದು, ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುವಿರಿ. ಆದರೆ ಸಣ್ಣ ತಪ್ಪುಗಳು ಅವಮಾನಕ್ಕೆ ದಾರಿಯಾಗದಂತೆ ಎಚ್ಚರವಹಿಸಿ. ಭಡ್ತಿಯ ಮಾತುಕತೆಗಳು ಸಕಾರಾತ್ಮಕವಾಗಿ ನಡೆಯಲಿವೆ. ಹೊಸ ಜವಾಬ್ದಾರಿಗಳು ನಿಮ್ಮ ಸ್ಥಾನಮಾನವನ್ನು ಹೆಚ್ಚಿಸುತ್ತವೆ. ಸಹೋದ್ಯೋಗಿಗಳ ಸಹಕಾರವಿದ್ದರೆ ಗುರಿ ತಲುಪುವುದು ಸುಲಭವಾಗುತ್ತದೆ.

ವೃಷಭ

​ವೃತ್ತಿಜೀವನದಲ್ಲಿ ಅನಿರೀಕ್ಷಿತ ಬದಲಾವಣೆಗಳು ಎದುರಾಗಬಹುದು. ಹಠಾತ್ ವರ್ಗಾವಣೆಯ ಸಾಧ್ಯತೆಯಿದೆ, ಆದರೆ ಇದು ನಿಮ್ಮ ಭವಿಷ್ಯಕ್ಕೆ ಒಳಿತು ಮಾಡಲಿದೆ. ಕಚೇರಿಯಲ್ಲಿ ವಿನಾಕಾರಣ ವಾದ ಮಾಡಬೇಡಿ, ಇದರಿಂದ ಸ್ಥಾನಮಾನಕ್ಕೆ ಧಕ್ಕೆ ಬರಬಹುದು. ಹೊಸ ಐಡಿಯಾಗಳನ್ನು ಜಾರಿಗೆ ತರಲು ಇದು ಸೂಕ್ತ ಸಮಯ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಭಡ್ತಿಯ ರೂಪದಲ್ಲಿ ದೊರೆಯುವ ಮುನ್ಸೂಚನೆ ಇದೆ.

​ಮಿಥುನ

​ನಿಮ್ಮ ಕ್ರಿಯಾಶೀಲತೆ ಈ ವಾರ ಉತ್ತುಂಗದಲ್ಲಿರುತ್ತದೆ. ಕಲಾತ್ಮಕ ಮತ್ತು ಸೃಜನಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ. ಕೆಲಸದ ಸ್ಥಳದಲ್ಲಿ ಗೌರವ ವೃದ್ಧಿಯಾಗಲಿದೆ. ಆದರೆ ಗುಪ್ತ ಶತ್ರುಗಳ ಬಗ್ಗೆ ಎಚ್ಚರವಿರಲಿ, ಅವರು ನಿಮ್ಮ ಹೆಸರಿಗೆ ಕಳಂಕ ತರಲು ಯತ್ನಿಸಬಹುದು. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಉದ್ಯೋಗದಲ್ಲಿ ಮಹತ್ತರ ಬದಲಾವಣೆ ಕಂಡುಬರಲಿದೆ. ತಾಳ್ಮೆಯೇ ಈ ವಾರದ ನಿಮ್ಮ ಯಶಸ್ಸಿನ ಸೂತ್ರ.

ಕರ್ಕಾಟಕ

​ಉದ್ಯೋಗದಲ್ಲಿ ಹಿರಿಯರ ಬೆಂಬಲದಿಂದ ಸ್ಥಾನಮಾನ ಭದ್ರವಾಗಲಿದೆ. ನಿಗದಿತ ಸಮಯಕ್ಕೆ ಕೆಲಸ ಮುಗಿಸುವುದರಿಂದ ನಿಮ್ಮ ಮೌಲ್ಯ ಹೆಚ್ಚಾಗುತ್ತದೆ. ಹೊಸ ಉದ್ಯೋಗಕ್ಕೆ ಪ್ರಯತ್ನಿಸುತ್ತಿದ್ದರೆ ಉತ್ತಮ ಫಲಿತಾಂಶ ಸಿಗಲಿದೆ. ಸೃಜನಾತ್ಮಕ ಆಲೋಚನೆಗಳು ಯೋಜನೆಯ ಯಶಸ್ಸಿಗೆ ಕಾರಣವಾಗುತ್ತವೆ. ಅವಮಾನದ ಪ್ರಸಂಗಗಳು ಎದುರಾದರೆ ಮೌನವಾಗಿರುವುದು ಒಳಿತು. ಭಡ್ತಿಗಾಗಿ ನೀವು ಪಟ್ಟ ಶ್ರಮಕ್ಕೆ ಈಗ ಬೆಲೆ ಸಿಗುವ ಕಾಲ ಬಂದಿದೆ.

ಸಿಂಹ

​ಸಿಂಹ ರಾಶಿಯವರಿಗೆ ಈ ವಾರ ಅಧಿಕಾರ ಪ್ರಾಪ್ತಿಯ ಯೋಗವಿದೆ. ನಿಮ್ಮ ನಾಯಕತ್ವ ಗುಣಕ್ಕೆ ಮನ್ನಣೆ ಸಿಗಲಿದ್ದು, ಸ್ಥಾನಮಾನದಲ್ಲಿ ಏರಿಕೆಯಾಗಲಿದೆ. ಸೃಜನಾತ್ಮಕ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಸಹೋದ್ಯೋಗಿಗಳೊಂದಿಗೆ ಸೌಮ್ಯವಾಗಿ ವರ್ತಿಸಿ, ಇಲ್ಲದಿದ್ದರೆ ಭಿನ್ನಾಭಿಪ್ರಾಯ ಮೂಡಿ ಸ್ಥಾನಕ್ಕೆ ಅಡಚಣೆಯಾಗಬಹುದು. ಬದಲಾವಣೆಯನ್ನು ಧೈರ್ಯದಿಂದ ಸ್ವೀಕರಿಸಿ. ಉತ್ತಮ ಸಂಬಳದೊಂದಿಗೆ ಭಡ್ತಿ ಸಿಗುವ ಸಾಧ್ಯತೆಗಳು ಈ ವಾರ ದಟ್ಟವಾಗಿವೆ.

ಕನ್ಯಾ

​ಕೆಲಸದಲ್ಲಿ ಅತಿಯಾದ ಒತ್ತಡವಿದ್ದರೂ ನಿಮ್ಮ ಕೌಶಲದಿಂದ ಎಲ್ಲವನ್ನೂ ನಿಭಾಯಿಸುವಿರಿ. ಅನಗತ್ಯ ಟೀಕೆಗಳಿಂದಾಗಿ ಸ್ವಲ್ಪ ಅವಮಾನ ಅನುಭವಿಸಬೇಕಾಗಬಹುದು, ಆದರೆ ಅದನ್ನು ಸವಾಲಾಗಿ ಸ್ವೀಕರಿಸಿ. ಉದ್ಯೋಗದಲ್ಲಿ ಸ್ಥಾನ ಬದಲಾವಣೆಯ ಸೂಚನೆಗಳಿವೆ. ನಿಮ್ಮ ಸೃಜನಾತ್ಮಕ ಶಕ್ತಿ ಹೊಸ ಯೋಜನೆಗಳಿಗೆ ಜೀವ ತುಂಬಲಿದೆ. ಸದ್ಯಕ್ಕೆ ಭಡ್ತಿ ವಿಳಂಬವಾದರೂ, ನಿಮ್ಮ ಶ್ರದ್ಧೆ ಮುಂದಿನ ದಿನಗಳಲ್ಲಿ ದೊಡ್ಡ ಗೌರವ ತಂದುಕೊಡಲಿದೆ.

ತುಲಾ

​ಉದ್ಯೋಗ ಕ್ಷೇತ್ರದಲ್ಲಿ ನೆಮ್ಮದಿಯ ವಾತಾವರಣವಿರುತ್ತದೆ. ನಿಮ್ಮ ಸೃಜನಾತ್ಮಕ ಕೆಲಸಗಳಿಗೆ ಸಾರ್ವಜನಿಕವಾಗಿ ಗೌರವ ಸಿಗಬಹುದು. ಸಹೋದ್ಯೋಗಿಗಳ ನಡುವೆ ನಿಮ್ಮ ಸ್ಥಾನಮಾನ ಉನ್ನತ ಮಟ್ಟಕ್ಕೆ ಏರಲಿದೆ. ಹಳೆಯ ಬಾಕಿ ಉಳಿದ ಕೆಲಸಗಳನ್ನು ಪೂರ್ಣಗೊಳಿಸಲು ಇದು ಸರಿಯಾದ ಸಮಯ. ಹೊಸ ಉದ್ಯೋಗದ ಆಫರ್ ಬರಬಹುದು. ಯಾರನ್ನಾದರೂ ಅಂಧವಾಗಿ ನಂಬಬೇಡಿ, ಅದು ವೃತ್ತಿಜೀವನದಲ್ಲಿ ಹಿನ್ನಡೆಗೆ ಕಾರಣವಾಗಬಹುದು.

ವೃಶ್ಚಿಕ

​ಈ ವಾರ ಉದ್ಯೋಗದಲ್ಲಿ ಸ್ವಲ್ಪ ಏರಿಳಿತ ಇರುತ್ತದೆ. ಶ್ರಮಕ್ಕೆ ತಕ್ಕ ಪ್ರತಿಫಲ ತಡವಾಗಿ ಸಿಗಬಹುದು. ನಿಮ್ಮ ಕ್ರಿಯಾಶೀಲತೆಯನ್ನು ಪ್ರದರ್ಶಿಸಲು ವೇದಿಕೆ ಸಿದ್ಧವಾಗಲಿದೆ. ಅಧಿಕಾರ ಬದಲಾವಣೆಯಿಂದ ನಿಮಗೆ ಅನುಕೂಲವಾಗಲಿದೆ. ಸಣ್ಣ ಪುಟ್ಟ ಅವಮಾನಗಳನ್ನು ನಿರ್ಲಕ್ಷಿಸಿ ಗುರಿಯತ್ತ ಗಮನಹರಿಸಿ. ಭಡ್ತಿ ಪಡೆಯಲು ಹೆಚ್ಚಿನ ಪರಿಶ್ರಮದ ಅಗತ್ಯವಿದೆ. ದೂರದ ಊರಿಗೆ ವೃತ್ತಿ ಸಂಬಂಧಿ ಪ್ರಯಾಣ ಮಾಡಬೇಕಾಗಿ ಬರಬಹುದು.

ಧನುಸ್ಸು

​ಧನು ರಾಶಿಯವರಿಗೆ ವೃತ್ತಿಯಲ್ಲಿ ಭಾಗ್ಯೋದಯದ ವಾರವಿದು. ನಿಮ್ಮ ಕಲ್ಪನಾಶಕ್ತಿ ಮತ್ತು ಸೃಜನಾತ್ಮಕತೆ ಎಲ್ಲರ ಗಮನ ಸೆಳೆಯುತ್ತದೆ. ದೊಡ್ಡ ಸಂಸ್ಥೆಗಳಿಂದ ಕೆಲಸದ ಆಹ್ವಾನ ಬರಬಹುದು. ಸ್ಥಾನಮಾನ ಹೆಚ್ಚಾಗುವ ಜೊತೆಗೆ ಆದಾಯದಲ್ಲೂ ವೃದ್ಧಿಯಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿಗೆ ಹೆಚ್ಚಿನ ಬೆಲೆ ಸಿಗುತ್ತದೆ. ಭಡ್ತಿ ಹಾಗೂ ವರ್ಗಾವಣೆಯ ವಿಷಯದಲ್ಲಿ ಶುಭ ವಾರ್ತೆ ಕೇಳುವಿರಿ. ನಿಮ್ಮ ಶೌರ್ಯ ಮತ್ತು ಚಾತುರ್ಯ ಯಶಸ್ಸು ತರಲಿದೆ.

ಮಕರ

​ಕೆಲಸದ ಸ್ಥಳದಲ್ಲಿ ಹೆಚ್ಚಿನ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ಸೃಜನಾತ್ಮಕವಾಗಿ ಯೋಚಿಸಿ ಸಮಸ್ಯೆಗಳನ್ನು ಬಗೆಹರಿಸುವಿರಿ. ಸದ್ಯಕ್ಕೆ ಸ್ಥಾನ ಬದಲಾವಣೆಯ ನಿರ್ಧಾರ ಬೇಡ. ಹಿರಿಯ ಅಧಿಕಾರಿಗಳೊಂದಿಗೆ ಘರ್ಷಣೆ ಉಂಟಾಗದಂತೆ ನೋಡಿಕೊಳ್ಳಿ, ಇದರಿಂದ ಅವಮಾನವಾಗುವ ಸಾಧ್ಯತೆಯಿದೆ. ಪರಿಶ್ರಮ ಪಟ್ಟರೆ ಭಡ್ತಿಯ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ. ವೃತ್ತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು ಈ ವಾರದ ಮುಖ್ಯ ಗುರಿಯಾಗಿರಲಿ.

ಕುಂಭ

​ಹೊಸ ಪ್ರಯೋಗಗಳನ್ನು ಮಾಡಲು ಇದು ಸಕಾಲ. ನಿಮ್ಮ ಸೃಜನಾತ್ಮಕ ಕಲ್ಪನೆಗಳು ಉದ್ಯೋಗದಲ್ಲಿ ದೊಡ್ಡ ಬದಲಾವಣೆ ತರಲಿವೆ. ಗೌರವ, ಸ್ಥಾನಮಾನಗಳು ತಾವಾಗಿಯೇ ಒಲಿದು ಬರಲಿವೆ. ಸಾಮಾಜಿಕ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ವಿಶೇಷ ಮನ್ನಣೆ ಸಿಗಲಿದೆ. ಈ ವಾರ ಭಡ್ತಿಯ ಆಸೆ ಈಡೇರಬಹುದು. ಆದರೆ ಅಹಂಕಾರ ಪ್ರದರ್ಶಿಸಿದರೆ ಅವಮಾನ ಎದುರಿಸಬೇಕಾದೀತು, ಎಚ್ಚರ. ಕೆಲಸದಲ್ಲಿ ಹೊಸತನ ರೂಢಿಸಿಕೊಳ್ಳುವುದು ನಿಮ್ಮ ಯಶಸ್ಸಿನ ಗುಟ್ಟು.

ಮೀನ

​ಉದ್ಯೋಗದಲ್ಲಿ ಈ ವಾರ ಮಿಶ್ರ ಫಲಿತಾಂಶವಿದೆ. ಸೃಜನಾತ್ಮಕ ಕೆಲಸಗಳಲ್ಲಿ ಆಸಕ್ತಿ ಹೆಚ್ಚಲಿದ್ದು, ಉತ್ತಮ ಹೆಸರು ಗಳಿಸುವಿರಿ. ವರ್ಗಾವಣೆಯ ಬಯಕೆ ಇದ್ದವರಿಗೆ ಇಷ್ಟದ ಜಾಗ ಸಿಗಬಹುದು. ಕೆಲಸದ ವಿಚಾರದಲ್ಲಿ ಪರರ ಮಧ್ಯಪ್ರವೇಶದಿಂದ ಅಸಮಾಧಾನ ಮೂಡಬಹುದು. ಸಮಾಧಾನದಿಂದ ಕೆಲಸ ಮಾಡಿದರೆ ಭಡ್ತಿಯ ಹಾದಿ ಸುಗಮವಾಗಲಿದೆ. ನಿಮ್ಮ ವ್ಯಕ್ತಿತ್ವ ಮತ್ತು ದಕ್ಷತೆ ಮೇಲಧಿಕಾರಿಗಳಿಗೆ ಮೆಚ್ಚುಗೆಯಾಗಲಿದೆ. ಸ್ಥಾನಮಾನದಲ್ಲಿ ಧನಾತ್ಮಕ ಬದಲಾವಣೆ ನಿರೀಕ್ಷಿಸಬಹುದು.

– ಲೋಹಿತ ಹೆಬ್ಬಾರ್ – 8762924271

Source link

ಚೆಕ್ ಬೌನ್ಸ್ ಪ್ರಕರಣದ ಬಗ್ಗೆ ವಿವರವಾಗಿ ಮಾತನಾಡಿದ ರಾಜ್​​ಪಾಲ್ ಯಾದವ್ – Kannada News | Rajpal Yadav talks about his cheque bounce case

ರಾಜ್​ಪಾಲ್ ಯಾದವ್ (Rajpal Yadav) ಅವರು ಸಾಲ ಮರುಪಾವತಿ ಮಾಡದಿರುವ, ಚೆಕ್ ಬೌನ್ಸ್ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿತವಾಗಿದ್ದು ಜೈಲುವಾಸಿಯಾಗಿದ್ದರು. ಆದರೆ ಸಹೋದರನ ಮಗಳ ಮದುವೆಗಾಗಿ ಒಂದು ತಿಂಗಳ ಕಾಲ ಜೈಲಿನಿಂದ ಜಾಮೀನು ಪಡೆದು ಹೊರಬಂದಿದ್ದು, ಇಂದು ಡಿಜಿಟಲ್ ವೇದಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದ ರಾಜ್​​ಪಾಲ್ ಯಾದವ್ ಅವರು ತಾವು ಶಿಕ್ಷೆ ಅನುಭವಿಸುತ್ತಿರುವ ಚೆಕ್ ಬೌನ್ಸ್ ಪ್ರಕರಣ, ಸಾಲ ಇನ್ನೂ ಇತರೆ ವಿಷಯಗಳ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link