Headlines

ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆ ವೇಳೆ ಬೆಚ್ಚಿಬಿದ್ದ ಖಾಕಿ: ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡಿದ್ದ ಮಾದಕ ಜಾಲ ಬಯಲು – Kannada News | Bengaluru: Drug, Assault and Blackmail Racket Targeting College Girls Busted

ಸಾಮೂಹಿಕ ಅತ್ಯಾಚಾರ ಕೇಸ್​​ ತನಿಖೆ ವೇಳೆ ಪೊಲೀಸರೇ ಶಾಕ್​​ ಬೆಂಗಳೂರು, ಫೆಬ್ರವರಿ 27: ಕಾಲೇಜು ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಆರೋಪ ಪ್ರಕರಣದ ತನಿಖೆ ವೇಳೆ ಬೆಚ್ಚಿಬೀಳಿಸುವ ಸಂಗತಿಗಳು ಬಯಲಾಗಿವೆ. ಯುವತಿಯರನ್ನು ಮಾದಕ ದ್ರವ್ಯಗಳ ಬಲೆಗೆ ಸಿಲುಕಿಸಿ, ನಂತರ ಅತ್ಯಾಚಾರ ಎಸಗಿ, ವಿಡಿಯೋ ಮಾಡಿ ಬ್ಲಾಕ್‌ಮೇಲ್ ಮಾಡುತ್ತಿದ್ದ ದೊಡ್ಡ ಜಾಲವೊಂದನ್ನು  ಅಮೃತಹಳ್ಳಿ ಪೊಲೀಸರು ಬಯಲಿಗೆಳೆದ್ದಿದ್ದಾರೆ. ನಿಖಿಲ್ ಮತ್ತು ಡಿಕ್ಸನ್ ಈ ಜಾಲದ ಪ್ರಮುಖ ಆರೋಪಿಗಳಾಗಿದ್ದು, ಈ ಪೈಕಿ ನಿಖಿಲ್ ಮಾಸ್ಟರ್‌ಮೈಂಡ್ ಎಂದು ತಿಳಿದುಬಂದಿದೆ. ಆರೋಪಿಗಳು ಇನ್‌ಸ್ಟಾಗ್ರಾಮ್ ಮೂಲಕ…

Read More

T20 World Cup: ಬುಮ್ರಾರನ್ನು ಹಿಂದಿಕ್ಕಿ ಇತಿಹಾಸ ನಿರ್ಮಿಸಿದ ಅರ್ಷದೀಪ್ ಸಿಂಗ್

2026 ರ ಟಿ20 ವಿಶ್ವಕಪ್‌ನ ಸೂಪರ್ 8 ಸುತ್ತಿನಲ್ಲಿ ಜಿಂಬಾಬ್ವೆ ವಿರುದ್ಧ ಭಾರತ 72 ರನ್‌ಗಳ ಜಯ ಸಾಧಿಸಿದೆ. ಈ ಗೆಲುವಿನಲ್ಲಿ ತಂಡದ ಸಾಂಘಿಕ ಪ್ರದರ್ಶನ ಪ್ರಮುಖವಾಗಿತ್ತು. ಇನ್ನು ಬೌಲಿಂಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಅರ್ಷದೀಪ್ ಸಿಂಗ್ 3 ವಿಕೆಟ್ ಪಡೆಯುವ ಮೂಲಕ ಜಸ್ಪ್ರೀತ್ ಬುಮ್ರಾ ಅವರನ್ನು ಹಿಂದಿಕ್ಕಿ ವಿಶೇಷ ಪಟ್ಟಿಯಲ್ಲಿ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದರು. ಈ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ನಾಲ್ಕು ಓವರ್ ಬೌಲಿಂಗ್ ಮಾಡಿ ಕೇವಲ 24 ರನ್ ನೀಡಿ ಮೂರು ವಿಕೆಟ್…

Read More

ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ದಳಪತಿ ವಿಜಯ್ ಪತ್ನಿ: ನಟಿ ಜೊತೆ ಅನೈತಿಕ ಸಂಬಂಧ ಆರೋಪ – Kannada News | Thalapathy Vijay wife Sangeetha applies for divorce Alleging affair with an actress

ಕಾಲಿವುಡ್ ಖ್ಯಾತ ನಟ ದಳಪತಿ ವಿಜಯ್ (Thalapathy Vijay) ಸಂಸಾರದಲ್ಲಿ ಬಿರುಕು ಮೂಡಿದೆ. ವಿಜಯ್ ಪತ್ನಿ ಸಂಗೀತಾ (Sangeetha) ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. 27 ವರ್ಷಗಳ ದಾಂಪತ್ಯದ ಬಳಿಕ ಅವರು ಡಿವೋರ್ಸ್ (Divorce) ಪಡೆಯಲು ಮುಂದಾಗಿದ್ದಾರೆ. ವಿಜಯ್ ಅವರಿಗೆ ನಟಿಯೊಬ್ಬರ ಜೊತೆ ಅನೈತಿಕ ಸಂಬಂಧ ಇದೆ ಎಂದು ಸಂಗೀತಾ ಆರೋಪಿಸಿದ್ದಾರೆ. ಸಿನಿಮಾಗಿಂತಲೂ ಹೆಚ್ಚಾಗಿ ರಾಜಕೀಯದಲ್ಲಿ ವಿಜಯ್ ಅವರು ಈಗ ಆಸಕ್ತಿ ಹೊಂದಿದ್ದಾರೆ. ಆದರೆ, ಅವರ ಮೇಲೆ ಅನೈತಿಕ ಸಂಬಂಧದ ಆರೋಪ ಕೇಳಿಬಂದಿರುವುದರಿಂದ ರಾಜಕೀಯದ ಹಾದಿಗೆ ಇದು…

Read More

ಇನ್ಮುಂದೆ ಪೆಟ್ರೋಲ್​​ಗೆ 20% ಎಥನಾಲ್ ಮಿಕ್ಸ್ ಕಡ್ಡಾಯ: ವಾಹನ ಸವಾರರು ನೋಡಲೇಬೇಕಾದ ಸ್ಟೋರಿ – Kannada News | Mandate E20 Ethanol blended Petrol April, what Impact on vehicles Mileage And Performance, here Is details

ನವದೆಹಲಿ, (ಫೆಬ್ರವರಿ 27): ಇದೇ ಏಪ್ರಿಲ್ 1ರಿಂದ ಶೇ.20ರಷ್ಟು ಎಥೆನಾಲ್ (Ethanol )ಮಿಶ್ರಿತ ಪೆಟ್ರೋಲ್ (Petrol) ಮಾರಾಟವನ್ನು ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ತೈಲ ಮಾರಾಟ ಕಂಪನಿ ಗಳಿಗೆ ಈ ಕುರಿತು ನಿರ್ದೇಶನ ನೀಡಿದೆ. ಫೆ.17ರಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಭಾರತೀಯ ಗುಣಮಟ್ಟ ಪ್ರಮಾಣೀಕರಣ ಸಂಸ್ಥೆ ಪ್ರಕಾರ, ತೈಲ ಕಂಪನಿಗಳು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಪೆಟ್ರೋಲ್‌ಗೆ ಸಂಶೋಧನಾ ಆಕ್ಟೇನ್ ಸಂಖ್ಯೆ (ಆರ್‌ಒಎನ್) ಕನಿಷ್ಠ 95 ಮಾನ ದಂಡ…

Read More

ದೇಶದ ಆರ್ಥಿಕ ಕ್ಷೇತ್ರಕ್ಕೆ ಗುಡ್ ನ್ಯೂಸ್; 3ನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ. 7.8ರಷ್ಟು ದಾಖಲು – Kannada News | India’s GDP Grows 7.8 Percent In Q3 FY26 under New Series Data

ನವದೆಹಲಿ, ಫೆಬ್ರವರಿ 27: ಭಾರತ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ. ಭಾರತದ ಆರ್ಥಿಕತೆಯ ಬೆಳವಣಿಗೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣಗಳಲ್ಲಿ ಪ್ರಸ್ತಾಪಿಸುತ್ತಲೇ ಇರುತ್ತಾರೆ. ಇದೀಗ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ, 2025ರ ಅಕ್ಟೋಬರ್-ಡಿಸೆಂಬರ್​ನಲ್ಲಿ ಅಂದರೆ ಮೂರನೇ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ (GDP) ಬೆಳವಣಿಗೆ ದರವು ಶೇ. 7.8ರಷ್ಟಾಗಿದೆ. ಇದು ಹಿಂದಿನ ವರ್ಷದ ಅವಧಿಯಲ್ಲಿ ಶೇ. 6.2ರಷ್ಟಿತ್ತು. 2026ರ ಆರ್ಥಿಕ ವರ್ಷದ…

Read More

ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ಎತ್ತಿಕೊಂಡು ಬಂದು ತಮ್ಮದೇ ಕಾರಿನಲ್ಲಿ ಆಸ್ಪತ್ರೆಗೆ ಸಾಗಿಸಿದ ಕೇಂದ್ರ ಸಚಿವ – Kannada News | Union Minister Shivraj Chouhan’s Exemplary Act: Saves Accident Victim’s Life in Bhopal.

ಭೋಪಾಲ್‌, ಫೆ.27: ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜನಸಾಮಾನ್ಯರ ಕಷ್ಟಕ್ಕೆ ಹೇಗೆ ಸ್ಪಂದಿಸಬೇಕು ಎಂಬುದಕ್ಕೆ ಕೇಂದ್ರ ಸಚಿವ ಶಿವ್‌ರಾಜ್ ಸಿಂಗ್ ಚೌಹಾಣ್ ಅವರು ಸಾಕ್ಷಿಯಾಗಿದ್ದಾರೆ. ಭೋಪಾಲ್‌ನ ಚೆತಕ್ ಬ್ರಿಡ್ಜ್ ಬಳಿ ಅಪಘಾತಕ್ಕೀಡಾಗಿ ರಸ್ತೆಯಲ್ಲಿ ಬಿದ್ದಿದ್ದ ಯುವಕನನ್ನು ಕಂಡು, ತಮ್ಮ ಬೆಂಗಾವಲು ಪಡೆಯನ್ನು (Convoy) ತಡೆದು ನಿಲ್ಲಿಸಿ ಆತನನ್ನು ಆಸ್ಪತ್ರೆಗೆ ದಾಖಲಿಸುವ ಮೂಲಕ ಜೀವ ಉಳಿಸಿದ್ದಾರೆ. ಶಿವ್‌ರಾಜ್ ಸಿಂಗ್ ಚೌಹಾಣ್ ಅವರು ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ ಚೆತಕ್ ಬ್ರಿಡ್ಜ್ ಬಳಿ ಜನಸಂದಣಿ ಇರುವುದನ್ನು ಗಮನಿಸಿದರು. ತಕ್ಷಣ ವಾಹನ ನಿಲ್ಲಿಸಿ ವಿಚಾರಿಸಿದಾಗ, ಅಪಘಾತವಾಗಿ ಯುವಕನೊಬ್ಬ…

Read More

Lunar Eclipse 2026: ಗ್ರಹಣದ ಸಮಯದಲ್ಲಿ ಏನು ಮಾಡಬೇಕು ಮತ್ತು ಏನು ಮಾಡಬಾರದು? – Kannada News | Lunar Eclipse 2026 : Travel Guidelines and Spiritual Impact of Falguana Poornima Chandra Grahan

2026ರ ಮಾರ್ಚ್ 3ರ ಫಾಲ್ಗುಣ ಪೂರ್ಣಿಮೆಯ ಆ ರಾತ್ರಿ ಆಕಾಶದಲ್ಲಿ ಒಂದು ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದೆ. ಅಂದು ಭೂಮಿಯ ನೆರಳು ಚಂದ್ರನನ್ನು ಆವರಿಸುವ ವರ್ಷದ ಮೊದಲ ಚಂದ್ರಗ್ರಹಣ ಸಂಭವಿಸಲಿದೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ಇದು ಕೇವಲ ಒಂದು ಖಗೋಳ ಘಟನೆಯಲ್ಲ; ಇದು ಪ್ರಕೃತಿ ಮತ್ತು ಮನುಷ್ಯನ ನಡುವಿನ ಶಕ್ತಿಯ ಸಮತೋಲನವನ್ನು ಪರೀಕ್ಷಿಸುವ ಆಧ್ಯಾತ್ಮಿಕ ಸಮಯ. ಪೌರಾಣಿಕ ಕಥೆಗಳ ಪ್ರಕಾರ, ರಾಹು ಮತ್ತು ಕೇತುಗಳು ಚಂದ್ರನನ್ನು ಬಾಧಿಸುವ ಈ ಕಾಲದಲ್ಲಿ ವಾತಾವರಣದಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತವೆ ಎಂಬ ನಂಬಿಕೆ…

Read More

Holi 2026: ಈ ವರ್ಷ ಹೋಳಿ ಹಬ್ಬ ಯಾವಾಗ? ಹೋಲಿಕಾ ದಹನದ ಶುಭ ಮುಹೂರ್ತ ಇಲ್ಲಿದೆ – Kannada News | Holi 2026: March 4th Celebrations, Holika Dahan and Eco Friendly Fun

2026ರ ಸಾಲಿನಲ್ಲಿ ಹೋಳಿ ಹಬ್ಬವನ್ನು ಮಾರ್ಚ್ 4ರಂದು ದೇಶಾದ್ಯಂತ ಅತ್ಯಂತ ಸಡಗರದಿಂದ ಆಚರಿಸಲಾಗುತ್ತದೆ. ಈ ಹಬ್ಬವು ಕೇವಲ ಬಣ್ಣಗಳಾಟವಲ್ಲ, ಬದಲಾಗಿ ಇದು ಸಂಸ್ಕೃತಿ, ಭಕ್ತಿ ಮತ್ತು ಪ್ರಕೃತಿಯ ಬದಲಾವಣೆಯ ಸಂಗಮವಾಗಿದೆ. ಇದು ಪ್ರಕೃತಿಯ ನವೀಕರಣ ಮತ್ತು ಮಾನವ ಸಂಬಂಧಗಳ ಮರುಜೋಡಣೆಯ ಅದ್ಭುತ ಸಂಕೇತವಾಗಿದೆ. ಹಬ್ಬದ ಆರಂಭವು ಹಿಂದಿನ ದಿನವಾದ ಮಾರ್ಚ್ 3ರ ಸಂಜೆ ನಡೆಯುವ ‘ಹೋಳಿಕಾ ದಹನ’ದೊಂದಿಗೆ ಶುರುವಾಗುತ್ತದೆ. ಸಂಜೆ 6:22 ರಿಂದ 8:50ರವರೆಗಿನ ಶುಭ ಮುಹೂರ್ತದಲ್ಲಿ, ಅಧರ್ಮದ ಸಂಕೇತವಾದ ಹೋಳಿಕೆಯನ್ನು ದಹಿಸಿ, ಸತ್ಯದ ಹಾದಿಯಲ್ಲಿ ನಡೆಯುವ…

Read More

ಇದ್ದ ಜಿಲ್ಲಾಧಿಕಾರಿಗೆ ಸ್ಥಳ ತೋರಿಸದೆ ವರ್ಗಾವಣೆ: ಸಚಿವರ ಆಪ್ತ ಕಾರ್ಯದರ್ಶಿ ಪತ್ನಿಗೆ ಒಲಿದ ಡಿಸಿ ಭಾಗ್ಯ – Kannada News | Bengaluru Rurl DC Basavaraj transferred, Minister KH muniyappa PS Wife CEO Anuradha appointed As New DC

ಬೆಂಗಳೂರು, (ಫೆಬ್ರವರಿ 27): ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆ ಸಿಟಿ ಔಟ್ ಸ್ಕಟ್ಸ್ ನಲ್ಲಿ ಕೆಂಪೇಗೌಡ ಏರ್ಪೋಟ್ ನಿಂದ ಪ್ರಸಿದ್ದಿಯಾಗಿರುವ ಪ್ಯೂಚರ್ ಬೆಂಗಳೂರು (Bengaluru) ಅಂತಲೆ ಕರೆಸಿಕೊಳ್ಳುವ ಜಿಲ್ಲೆ. ಹೀಗಾಗಿ ಜಿಲ್ಲೆಗೆ ಬರಲು ಅಧಿಕಾರಿಗಳು ತುದ್ದಿಗಾಲಲ್ಲಿ ನಿಲ್ಲುತ್ತಿದ್ದು, ಡಿಮ್ಯಾಂಡ್ ಸಹ ಹಚ್ಚಿದೆ. ಇಷ್ಟು ಡಿಮ್ಯಾಂಡ್ ನಡುವೆಯೂ ಸಿಇಒ ಆಗಿ ಎರೆಡೂವರೆ ವರ್ಷದಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ಅನುರಾಧ ಕೆ ಎನ್ ಡಿಸಿಯಾಗಿ ಮುಂಬಡ್ತಿ ಪಡೆದಿದ್ದರೆ, ಬಂದ ಒಂದು ವರ್ಷಕ್ಕೆ ಜಿಲ್ಲಾಧಿಕಾರಿ ಬಸವರಾಜ್ ಅವರನ್ನು ದಿಢೀರ್ ವರ್ಗಾವಣೆ…

Read More

ಬೀದರ್‌ ಪಶು ವಿವಿ ಘಟಿಕೋತ್ಸವ: 16 ಚಿನ್ನದ ಪದಕ ಬಾಚಿಕೊಂಡ ಮೀನು ವ್ಯಾಪಾರಿಯ ಮಗಳು – Kannada News | Bidar Veterinary University Convocation: Fishmonger daughter wins 16 gold medals

ಬೀದರ್​​​, ಫೆಬ್ರವರಿ 27: ಅವಿರತ ಶ್ರಮಪಟ್ಟು, ಶ್ರದ್ಧೆಯಿಟ್ಟು ಮಾಡಿದರೆ ಎಂತಹ ಕನಸೂ ನನಸಾಗುತ್ತದೆ. ಕಂಡ ಕನಸು ಕಾಣುವುದು ಅದನ್ನ ಸಾಕಾರಗೊಳಿಸುವುದು ಅವರವರ ಕೈಯಲ್ಲಿಯೇ ಇದೆ. ಇಂತಹ ಅದ್ಭುತ ಕನಸನ್ನ ಸಾಕಾರಗೊಳಿಸಿ ಚಿನ್ನದ ವಿದ್ಯಾರ್ಥಿಯಾಗಿದ್ದಾರೆ. ಪಶು ವೈದ್ಯಕೀಯ ಪದವಿಯಲ್ಲಿ 16 ಚಿನ್ನದ ಪದಕಗಳನ್ನ (gold medals) ಬಾಚಿಕೊಂಡ ಉಡುಪಿಯ ಖುಷಿ, 6 ಚಿನ್ನದ ಪದಕ ಪಡೆದ ತುಮಕೂರಿನ ಭೂಮಿಕಾರ ಯಶೋಗಾಥೆ ಎಂತಹವರನ್ನೂ ಪ್ರೇರೇಪಿಸುತ್ತದೆ. ಮೀನು ವ್ಯಾಪಾರಿಯ ಮಗಳು ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಉಡುಪಿಯ ಮಂದಾರ್ತಿ ಗ್ರಾಮದ ಖುಷಿ, ಪಶುವೈದ್ಯಕೀಯ…

Read More