ನರ್ಸ್ ನಿರ್ಲಕ್ಷ್ಯಕ್ಕೆ 6 ತಿಂಗಳ ಮಗುವಿನ ಬೆರಳೇ ತುಂಡು!: ಆಸ್ಪತ್ರೆ ವಿರುದ್ಧ ಕೇಸ್ ದಾಖಲು – Kannada News | Bangalore Nurse Negligence: 6 Month Old Baby’s Finger Cut at Indiranagar Hospital
ಬೆಂಗಳೂರು, ಫೆಬ್ರವರಿ 25: ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದ 6 ತಿಂಗಳ ಮಗುವಿನ ಬೆರಳನ್ನೇ ನರ್ಸ್ ಕತ್ತರಿಸಿರುವ ಘಟನೆ ಬೆಂಗಳೂರಿನ ಇಂದಿರಾ ನಗರದಲ್ಲಿ ನಡೆದಿದೆ. ಜ್ವರ ಮತ್ತು ಕಫದ ಹಿನ್ನೆಲೆ ಚಿನ್ಮಯ್ ಮಿಷನ್ ಆಸ್ಪತ್ರೆಗೆ ಮಗುವನ್ನು ಪೋಷಕರು ಫೇಬ್ರವರಿ 19ರಂದು ದಾಖಲಿಸಿದ್ದರು. ಅಲ್ಲಿಂದ ಫೆ.24ರ ವರೆಗೆ ಮಗುವಿಗೆ ನಿರಂತರ ಚಿಕಿತ್ಸೆ ನೀಡಲಾಗಿತ್ತು. ಆದರೆ ನಿನ್ನೆ ಡ್ರಿಪ್ಸ್ಗೆ ಹಾಕಿದ್ದ ಡ್ರೆಸ್ಸಿಂಗ್ ತೆಗೆಯುವ ಸಂದರ್ಭ ನಿರ್ಲಕ್ಷದ ಕಾರಣದಿಂದ ನರ್ಸ್ ಮಗುವಿನ ಎಡಗೈ ಕಿರುಬೆರೆಳಿನ ಅರ್ಧ ಬಾಗವನ್ನೇ ಕತ್ತರಿಸಿದ್ದಾರೆ. ಗಂಭೀರ ಗಾಯದಿಂದ…