ಲಕ್ನೋ ವಿವಿ ಆವರಣದಲ್ಲಿ ನಮಾಜ್ ವರ್ಸಸ್ ಹನುಮಾನ್ ಚಾಲೀಸಾ ಹಗ್ಗಜಗ್ಗಾಟ; 13 ವಿದ್ಯಾರ್ಥಿಗಳಿಗೆ ನೋಟಿಸ್ ಜಾರಿ – Kannada News | Namaz vs Hanuman Chalisa in Lucknow University campus 13 Students Issued Notice ABVP workers Detained
ನವದೆಹಲಿ, ಫೆಬ್ರವರಿ 24: ಲಕ್ನೋ ವಿಶ್ವವಿದ್ಯಾಲಯದ ಆವರಣದೊಳಗೆ ನಮಾಜ್ ಮಾಡಿದ್ದನ್ನು ವಿರೋಧಿಸಿ ಹಿಂದೂ ವಿದ್ಯಾರ್ಥಿಗಳು ಹನುಮಾನ್ ಚಾಲೀಸಾ (Hanuman Chalisa) ಪಠಿಸಿರುವ ಘಟನೆ ಭಾರೀ ಚರ್ಚೆಗೆ ಕಾರಣವಾಗಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರು, ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗ ದಳದ ಕಾರ್ಯಕರ್ತರು ಲಕ್ನೋ ವಿಶ್ವವಿದ್ಯಾಲಯದ ಕ್ಯಾಂಪಸ್‌ನೊಳಗಿನ ಐತಿಹಾಸಿಕ ಲಾಲ್ ಬರಾದಾರಿಯಲ್ಲಿ ಹನುಮಾನ್ ಚಾಲೀಸಾ ಪಠಿಸಲು ಪ್ರಯತ್ನಿಸಿದ ನಂತರ ಇಂದು ಲಕ್ನೋ ವಿಶ್ವವಿದ್ಯಾಲಯದಲ್ಲಿ ಉದ್ವಿಗ್ನತೆ ಉಂಟಾಯಿತು. ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ, ಹಲವಾರು…