Category Archives: Blog

Your blog category

ಬೆಂಗಳೂರು ಜೀವನ ಇಷ್ಟೊಂದು ದುಬಾರಿನಾ?; ತಿಂಗಳ ಖರ್ಚು 70 ಸಾವಿರ ರೂ., ಪಟ್ಟಿ ಬಿಚ್ಚಿಟ್ಟ ಯುವಕ – Kannada News | Bangalore Expenses Soar: Man’s Rs70,000 Monthly Budget Shocks X Users

ಬೆಂಗಳೂರು, ಫೆ.23: ಸಿಲಿಕಾನ್​​ ಸಿಟಿಯನ್ನು ಭಾರತದ ತಂತ್ರಜ್ಞಾನಗಳ ತವರು ಎಂದರೆ ತಪ್ಪಾಗಲಾರದು, ಇಲ್ಲಿ ಜೀವನ ನಡೆಸುವುದು ತುಂಬಾ ಸುಲಭ ಎಂದುಕೊಂಡವರಿಗೆ ಖರ್ಚಿನ ಲೆಕ್ಕಚಾರದ (Bengaluru Living Costs) ಪಟ್ಟಿಯನ್ನು ವ್ಯಕ್ತಿಯೊಬ್ಬರು ನೀಡಿದ್ದಾರೆ. ಬೆಂಗಳೂರಿನಲ್ಲಿ ಜೀವನ ನಿರ್ವಹಣೆ ಎಷ್ಟು ದುಬಾರಿ? ಎಂಬುದಕ್ಕೆ ಅಭಿಷೇಕ್ ಸಿಂಗ್ ಎಂಬುವವರು ಎಕ್ಸ್ (X) ನಲ್ಲಿ ತಮ್ಮ ತಿಂಗಳ ಬಜೆಟ್ ಬಗ್ಗೆ ಹಂಚಿಕೊಂಡಿದ್ದಾರೆ. ಇದೀಗ ಈಗ ಈ ಪೋಸ್ಟ್​​ ಭಾರೀ ವೈರಲ್ ಆಗಿದೆ. ತಾವೊಬ್ಬರೇ ಆರಾಮದಾಯಕ ಜೀವನ ನಡೆಸಲು ತಿಂಗಳಿಗೆ 70,000 ರೂ. ಖರ್ಚು ಮಾಡುತ್ತಿರುವುದಾಗಿ ಅವರು ಹೇಳಿಕೊಂಡಿದ್ದಾರೆ.

ಸುಮಾರು 74,000ಕ್ಕೂ ಹೆಚ್ಚು ವೀಕ್ಷಣೆಯನ್ನು ಪಡೆದುಕೊಂಡಿದೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ನೆಟ್ಟಿಗರು ಕೂಡ ಕಮೆಂಟ್​​​ ಮಾಡಿದ್ದಾರೆ. ಅಭಿಷೇಕ್ ಸಿಂಗ್ ಅವರು ಬೆಂಗಳೂರಿನಲ್ಲಿ ನನ್ನ ಮಾಸಿಕ ಜೀವನ ವೆಚ್ಚದ ಬಗ್ಗೆ ಹಂಚಿಕೊಂಡಿದ್ದಾರೆ. ಅದು ಯಾವುದೆಲ್ಲ ಎಂಬುದನ್ನು ಇಲ್ಲಿ ವಿವರಿಸಲಾಗಿದೆ ನೋಡಿ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

ಬಾಡಿಗೆ + ನಿರ್ವಹಣೆ: 25,000 ರೂ.

ಆಹಾರ, ಮಾಂಸ, ಮೀನು, ಮೊಟ್ಟೆಗಳು: 12,000 ರೂ.

ರೆಸ್ಟೋರೆಂಟ್‌ಗಳು, ಕಾಫಿ: 5,500

ವಿವಿಧ ವೆಚ್ಚಗಳು (ಆನ್‌ಲೈನ್ ಆರ್ಡರ್‌ಗಳು, ಇತ್ಯಾದಿ): 4,000 ರೂ.

ರಜೆ ಮೋಜು: 12,500 ರೂ.

ಬಂಬಲ್ ಡೇಟ್ಸ್: 4,000 ರೂ.

ಶೇರ್​ ಹೂಡಿಕೆ : 3,000 ರೂ.

ಜಿಮ್ + ಕ್ರೀಡೆ: 1,500 ರೂ.

ಇಂಟರ್ನೆಟ್ + ಫೋನ್ : 1,000 ರೂ.

ಒಟಿಟಿ, ಮೂವಿ ಚಂದಾದಾರಿಕೆ: 1,500 ರೂ.

ಒಟ್ಟು ತಿಂಗಳ ಖರ್ಚು: 70,000 ರೂ.

ಇದನ್ನೂ ಓದಿ: “ಬೆಂಗಳೂರನ್ನು ಮತ್ತೆ ಶ್ರೇಷ್ಠ ನಗರವನ್ನಾಗಿಸೋಣ”: ಈ ಬದಲಾವಣೆಯಾದರೆ ಸಿಲಿಕಾನ್ ಸಿಟಿ ವಿಶ್ವ ದರ್ಜೆಯ ನಗರ ಆಗುವುದು ಖಂಡಿತ

ಸೋಶಿಯಲ್​​ ಮೀಡಿಯಾದಲ್ಲಿ ಈ ಬಗ್ಗೆ ವ್ಯಂಗ್ಯವಾಗಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕೇವಲ 3,000 ರೂ. ಹೂಡಿಕೆ ಮಾಡುತ್ತಿದ್ದೀರಾ? ಇಷ್ಟು ದೊಡ್ಡ ಮೊತ್ತದ ‘ಪೀಳಿಗೆಯ ಸಂಪತ್ತಿನಿಂದ’ ಇಡೀ ಮಾರುಕಟ್ಟೆಯನ್ನೇ ಖರೀದಿಸುವ ಪ್ಲಾನ್ ಇದೆಯೇ?” ಎಂದು ಇಬ್ಬರು ತಮಾಷೆ ಮಾಡಿದ್ದಾರೆ. ನಾನು ಬೆಂಗಳೂರಿನಲ್ಲಿ ಕೇವಲ 25,000 ರೂ. ನಲ್ಲಿ ‘ಡ್ರೀಮ್ ಲೈಫ್’ ನಡೆಸುತ್ತಿದ್ದೇನೆ. ಕಂಪನಿಯ ಜಿಮ್ ಮತ್ತು ಫುಡ್ ಕೋರ್ಟ್ ಬಳಸಿದರೆ ಖರ್ಚು ಕಡಿಮೆ ಮಾಡಬಹುದು ಎಂದು ಮತ್ತೊಬ್ಬರು ಹೇಳಿದ್ದಾರೆ. ಇಷ್ಟೆಲ್ಲಾ ಖರ್ಚು ಮಾಡುತ್ತಿದ್ದೀರಿ, ನಿಮ್ಮ ಸಂಬಳ ಎಷ್ಟು?” ಎಂದು ಕೇಳಿದ್ದಕ್ಕೆ, “ಆರಾಮದಾಯಕ ಜೀವನ ನಡೆಸುವಷ್ಟು ಸಂಪಾದಿಸುತ್ತೇನೆ,” ಎಂದು ಅಭಿಷೇಕ್ ಉತ್ತರಿಸಿದ್ದಾರೆ.

ಬೆಂಗಳೂರಿನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Bengaluru: ಹನಿಟ್ರ್ಯಾಪ್​​​​ ಕೇಸ್ ಆರೋಪಿ ಯುವತಿಯಿಂದ ಸಾಮೂಹಿಕ ಅತ್ಯಾಚಾರ ದೂರು – Kannada News | Honeytrap Accused Files Physical Harassment Complaint Against Two Youths in Bengaluru

ಬೆಂಗಳೂರು, ಫೆಬ್ರವರಿ 23: ಹನಿಟ್ರ್ಯಾಪ್​​​​ ಕೇಸ್ ಆರೋಪಿತ ಯುವತಿ ತನ್ನ ಮೇಲೆ ಗ್ಯಾಂಗ್​ರೇಪ್ ನಡೆದಿದೆ ಎಂದು ಆರೋಪಿಸಿ ಬೆಂಗಳೂರಿನ ಅಮೃತಹಳ್ಳಿ ಠಾಣೆಗೆ ದೂರು ನೀಡಿದ್ದಾರೆ. ಪಾರ್ಟಿಯೊಂದಕ್ಕೆ ಕರೆದೊಯ್ದು ನನ್ನ ಮೇಲೆ ಅತ್ಯಾಚಾರ ಮಾಡಲಾಗಿದೆ ಎಂದು ಸಂತ್ರಸ್ತೆ ದೂರಿದ್ದು, ಈ ಸಂಬಂಧ ನಿಖಿಲ್​ ಮತ್ತು ಡಿಕ್ಸನ್​ ಸಾಂಡ್ರಾ ಎಂಬ ಇಬ್ಬರ ವಿರುದ್ಧ ಫೆ.22ರಂದು ಎಫ್​​ಐಆರ್​​ ದಾಖಲಾಗಿದೆ. ಇದಕ್ಕೂ ಮುನ್ನ ಒಂದು ದಿನ ಮೊದಲಷ್ಟೇ ಅಂದರೆ ಫೆ.21ರಂದು ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಯುವತಿ ವಿರುದ್ಧ ಹನಿಟ್ರ್ಯಾಪ್ ಕೇಸ್ ದಾಖಲಾಗಿತ್ತು.

ಯುವತಿ ಆರೋಪವೇನು?

2026ರ ಜನವರಿಯಲ್ಲಿ ಸಾಮಾಜಿಕ ಜಾಲತಾಣದ ಮೂಲಕ ಡಿಕ್ಸನ್​ ಸಾಂಡ್ರಾ ಎಂಬಾತನ ಪರಿಚಯವಾಗಿದ್ದು, ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರೂ ಹಲವು ಬಾರಿ ಭೇಟಿ ಆಗಿದ್ದೆವು. ಹೀಗಿರುವಾಗ ಫೆಬ್ರವರಿ 14ರಂದು ಕರೆ ಮಾಡಿದ್ದ ಡಿಕ್ಸನ್, ಜಕ್ಕೂರಿನಲ್ಲಿರುವ ವಿಲ್ಲಾವೊಂದಕ್ಕೆ ಪಾರ್ಟಿಗೆ ಬರುವಂತೆ ಕರೆದಿದ್ದ. ಹೀಗಾಗಿ ಗೆಳತಿಯ ಜೊತೆ ತಾನು ಮಧ್ಯರಾತ್ರಿ ಸುಮಾರು 1.15ಕ್ಕೆ ವಿಲ್ಲಾಗೆ ತೆರಳಿದ್ದು, ಈ ವೇಳೆ ಡಿಕ್ಸನ್​​ ಆತನ ಗೆಳೆಯ ಎಂದು ನಿಖಿಲ್​​ ಎಂಬಾತನನ್ನು ಪರಿಚಯಿಸಿದ್ದ. ಪಾರ್ಟಿ ನಡುವೆ ಡಿಕ್ಸನ್​​ ಮತ್ತು ನಿಖಿಲ್​​ ಸೇರಿ ಬಲವಂತವಾಗಿ ಮಾತ್ರೆಯನ್ನು ತಿನ್ನಿಸಿದ್ದಾರೆ. ಈ ವೇಳೆ ಕಣ್ಣುಗಳು ಮಂಜಾಗತೊಡಗಿದ್ದು, ಡಿಕ್ಸನ್​​ ರೂಮಿಗೆ ಕರೆದೊಯ್ದು ತನ್ನ ಮಲಗಿಸಿದ್ದ. ಆದಾದ ನಂತರ ನನಗೆ ಪ್ರಜ್ಞೆತಪ್ಪಿದೆ. ನನಗೆ ಎಚ್ಚರ ಆದಾಗ ನನ್ನ ದೇಹದ ಮೇಲೆ ಅರ್ಧಂಬರ್ಧ ಬಟ್ಟೆ ಇರುವುದರ ಜೊತೆಗೆ ಪಕ್ಕದಲ್ಲಿ ನಿಖಿಲ್​​ ಇರುವುದನ್ನು ಕಂಡು ಶಾಕ್​​ ಆಗಿದ್ದೇನೆ ಎಂದು ಯುವತಿ ಆರೋಪಿಸಿದ್ದಾಳೆ.

ಇದನ್ನೂ ಓದಿ: ಮಹಿಳಾ ಅಧಿಕಾರಿ ಮನೆಯಲ್ಲಿ ಹಿಡನ್ ಕ್ಯಾಮರಾ ಇಟ್ಟಿದ್ದ ಕೇಸ್; ನಕಲಿ ಪತ್ರಕರ್ತರ ಮೊಬೈಲಲ್ಲಿತ್ತು 100ಕ್ಕೂ ಹೆಚ್ಚು ಬೆತ್ತಲೆ ವಿಡಿಯೋ!

ಮೊದಲೇ ಗಾಬರಿಗೊಂಡಿದ್ದ ತಾನು ಡಿಕ್ಸನ್​​ ಬಗ್ಗೆ ಕೇಳಿದಾಗ ಹೊರಗಿನಿಂದ ಬಂದ ಆತ ತನ್ನ ಬಟ್ಟೆಯನ್ನು ಕಿತ್ತೆಸೆದಿದ್ದು, ಇಬ್ಬರೂ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಈ ವೇಳೆ ತಾನು ಜೋರಾಗಿ ಕಿರುಚಾಡಿದ ಪರಿಣಾಮ ನನ್ನನ್ನು ರೂಮ್​​ನಲ್ಲಿ ಲಾಕ್​​ ಮಾಡಲಾಗಿತ್ತು. ಬಳಿಕ ಮರುದಿನ ಮಧ್ಯಾಹ್ನದ ವೇಳೆಗೆ ಆರೋಪಿಗಳು ರೂಮ್​​ ಬಾಗಿಲು ತೆರೆದಿದ್ದು, ರಾತ್ರಿ ನಡೆದ ವಿಚಾರವನ್ನು ಯಾರಿಗಾದರೂ ಅಥವಾ ಪೊಲೀಸರಿಗೆ ಹೇಳಿದರೆ ನಿನ್ನನ್ನು ಜೀವ ಸಹಿತ ಬಿಡುವುದಿಲ್ಲ ಎಂದು ನಿಖಿಲ್​​ ಬೆದರಿಕೆ ಹಾಕಿರೋದಾಗಿ ಯುವತಿ ಆರೋಪಿಸಿದ್ದಾಳೆ.

ಇನ್ನು ಫೆ.21ರಂದು ಇದೇ ಯುವತಿಯ ವಿರುದ್ಧ ನಿಖಿಲ್​​ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದ. ನಿಖಿಲ್​​ ಮತ್ತು ಡಿಕ್ಸನ್​​ ತನಗೆ ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ನಡೆಸಿರೋದಾಗಿ ಯುವತಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾಳೆ. ಅದರ ಬೆನ್ನಲ್ಲೇ ಖಾಸಗಿ ವಾಹನಿಯ ಕ್ರೈಂ ಬ್ಯೂರೋ ಹೆಡ್​​ ಎಂದು ಪರಿಚಯಿಸಿಕೊಂಡ ವ್ಯಕ್ತಿಯೋರ್ವರ ಕರೆ ಬಂದಿದ್ದು, ನಾವು ಹೇಳಿದ ಜಾಗಕ್ಕೆ ನೀವು ಬರಬೇಕು. ಹೇಳಿದಷ್ಟು ಹಣ ಕೊಡಬೇಕು. ಇಲ್ಲದಿದ್ದರೆ ಈ ವಿಚಾರವನ್ನು ನ್ಯೂಸ್​​ ಚಾನೆಲ್​​ನಲ್ಲಿ ಹಾಕಿ ಮಾನ ತೆಗೆಯೋ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಲಂಚ ತೆಗೆದುಕೊಳ್ಳುವ ಸಿಕ್ಕಿಬಿದ್ದ ಬಿಜೆಪಿ ಶಾಸಕನ ವಿರುದ್ಧ ಸ್ವಾಮೀಜಿ ಗಂಭೀರ ಆರೋಪ – Kannada News | BJP MLAS Chandru Lamani Bribery Case: Kumara Maharaja Swamiji Clarify about His Audio Viral

ಗದಗ, (ಫೆಬ್ರವರಿ 22): ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಶಿರಹಟ್ಟಿ ಶಾಸಕ ಡಾ ಚಂದ್ರು ಲಮಾಣಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕರನ್ನು ಯಾವುದಾದರೊಂದು ಪ್ರಕರಣದಲ್ಲಿ ಸಿಲುಕಿಸುವ ಬಗ್ಗೆ ಸ್ವಾಮೀಜಿಯೊಬ್ಬರ ಕೈವಾಡ ಇರುವ ಆರೋಪ ಕೇಳಿಬಂದಿದೆ. ಶಿರಹಟ್ಟಿ ತಾಲೂಕಿನ ಅದರಹಳ್ಳಿ ಕುಮಾರ ಮಹಾರಾಜರ ಸ್ವಾಮೀಜಿ ಹಾಗೂ ಬಿಜೆಪಿ ಕಾರ್ತಕರ್ತರೊಬ್ಬರು 2.36 ನಿಮಿಷಗಳ ಕಾಲ ಮಾತನಾಡಿರುವ ಆಡಿಯೋವೊಂದು ವೈರಲ್ ಆಗಿದೆ.

ಇನ್ನು ಈ ಬಗ್ಗೆ ಟಿವಿ9ಗೆ ಆದರಹಳ್ಳಿ ಗವಿಮಠದ ಕುಮಾರ ಮಹಾರಾಜ ಸ್ವಾಮೀಜಿ ಪ್ರತಿಕ್ರಿಯಿಸಿದ್ದು, ಶಾಸಕ ಡಾ.ಚಂದ್ರು ಲಮಾಣಿ ಬಗ್ಗೆ ನಾನು ಮಾತನಾಡಿರೋದು ಸತ್ಯ. ಆಡಿಯೋದಲ್ಲಿ ಇರುವ ಧ್ವನಿ ನನ್ನದೇ ನಾನೇ ಮಾತನಾಡಿರುವುದು. 6 ತಿಂಗಳ ಹಿಂದೆ ಚಂದ್ರು ಲಮಾಣಿ ಬಗ್ಗೆ ಮಾತಾಡಿರೋ ಆಡಿಯೋ. ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಮಾತಾಡಿದ್ದೆ. ಆದ್ರೆ, ಲೋಕಾಯುಕ್ತ ದಾಳಿಗೂ ನಾನು ಮಾತಾಡಿದ ಆಡಿಯೋಗೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದರೆ ಲೋಕಾಯುಕ್ತ ಟ್ರ್ಯಾಪ್​​​ಗೂ ನನ್ನ ಆಡಿಯೋಗೂ ಸಂಬಂಧವಿಲ್ಲ. ಬೇಕಿದ್ದರೆ ಆಡಿಯೋ ಬಗ್ಗೆ ತನಿಖೆ ನಡೆಸಲಿ. ಶಾಸಕರು ನನ್ನನ್ನು ಗ್ರಾಮದಿಂದ ಓಡಿಸಲು ಸಂಚು ರೂಪಿಸಿದ್ದರು. 18 ಲಕ್ಷ ರೂಪಾಯಿ ಖರ್ಚು ಮಾಡಿ ಮಠದಿಂದ ಓಡಿಸಲು ಪ್ಲ್ಯಾನ್​ ಮಾಡಿದ್ರು. ಇಡೀ ಕ್ಷೇತ್ರದಲ್ಲಿ ಶಾಸಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಇಲ್ಲ. ಒಳಮೀಸಲಾತಿಯಲ್ಲಿ ಬಂಜಾರ ಸಮುದಾಯಕ್ಕೆ ಅನ್ಯಾಯವಾಗಿತ್ತು ಎಂದು ಶಾಸಕ ಚಂದ್ರು ಲಮಾಣಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Video: ಪುಟ್ಟ ಕಂದಮ್ಮನನ್ನು ಹುಲ್ಲಿನ ಹೊರೆಯಲ್ಲಿ ಕಟ್ಟಿ ತಲೆ ಮೇಲೆ ಹೊತ್ತು ಸಾಗಿದ ಹೆತ್ತಮ್ಮ – Kannada News | A mother carried her son sleeping on her grass bundle

ತಾಯಿ (mother) ಪ್ರೀತಿಯೇ ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಮಕ್ಕಳ ಲಾಲನೆ ಪಾಲನೆ ಮಾಡುತ್ತಾ ಮಕ್ಕಳಿಗೆ ಸದಾ ನೆರಳಾಗಿರುವ ಜೀವವೇ ಈ ಅಮ್ಮ. ಆದರೆ ನಗರದಲ್ಲಿ ತಾಯಂದಿರು ತಮ್ಮ ಮಕ್ಕಳನ್ನು ಬೆಳೆಯುವ ರೀತಿಗೂ ಹಳ್ಳಿಯಲ್ಲಿ ಮಕ್ಕಳು ಬೆಳೆಯುವ ರೀತಿಗೆ ಸಾಕಷ್ಟು ವ್ಯತ್ಯಾಸವಿದೆ. ಇದಕ್ಕೆ ಉದಾಹರಣೆಯಂತಿದೆ ಈ ವಿಡಿಯೋ. ಇಲ್ಲೊಬ್ಬಳು ತಾಯಿ ಕೆಲಸದ ನಡುವೆಯೂ ತನ್ನ ಮಗನ ಬಗ್ಗೆ ಕಾಳಜಿ ವಹಿಸಿದ್ದಾಳೆ. ಹುಲ್ಲಿನ ಹೊರೆಯೊಂದರಲ್ಲಿ ಪುಟ್ಟ ಮಗುವನ್ನು ಸೇರಿಸಿ ಕಟ್ಟಿ ತಾಯಿಯೊಬ್ಬಳು ಹೊತ್ತುಕೊಂಡು ಸಾಗಿದ್ದಾಳೆ . ಈ ವಿಡಿಯೋ ನೋಡಿದ ನೆಟ್ಟಿಗರು ತಾಯಿ ಪ್ರೀತಿ ಎಂದೆಂದಿಗೂ ಶಾಶ್ವತ ಎಂದು ಕಾಮೆಂಟ್ ಮಾಡಿದ್ದಾರೆ.

ರೋಶಿ (Rosy) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಹಳ್ಳಿಯ ಮಹಿಳೆಯೊಬ್ಬಳು ಮೇವಿನ ಹೊರೆಯಲ್ಲಿ ತನ್ನ ಪುಟ್ಟ ಕಂದಮ್ಮನನ್ನು ಸೇರಿ ಕಟ್ಟಿ ಹೊತ್ತುಕೊಂಡು ಹೋಗುತ್ತಿರುವುದನ್ನು ಕಾಣಬಹುದು.

ವೈರಲ್‌ ಪೋಸ್ಟ್‌ ಇಲ್ಲಿದೆ ನೋಡಿ

ಇದನ್ನೂ ಓದಿ: ಕರುವನ್ನು ಕಂಡೊಡನೆ ಓಡೋಡಿ ಬಂದು ಮುದ್ದಿಸಿದ ಹಸು

ಈ ವಿಡಿಯೋ ಎರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ನನ್ನ ಬಾಲ್ಯವನ್ನು ನೆನಪಿಸಿದ ವಿಡಿಯೋ, ನನ್ನ ತಾಯಿ ಹೀಗೆಯೇ ಕಟ್ಟಿ ಹೊತ್ತುಕೊಂಡು ಹೋಗುತ್ತಿದ್ದರು ಎಂದು ಹೇಳಿದ್ದಾರೆ. ಮತ್ತೊಬ್ಬರು, ತಾಯಿ ಪ್ರೀತಿ ಬೆಲೆ ಕಟ್ಟಲು ಸಾಧ್ಯವಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಹಳ್ಳಿಯಲ್ಲಿ ಬೆಳೆದ ಮಕ್ಕಳಿಗೂ ಮಾತ್ರ ಇಂತಹ ಅನುಭವವಾಗಲು ಸಾಧ್ಯ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಪ್ರತಿದಿನ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ 31 ಜೀವಗಳು! ಬೆಂಗಳೂರಿನಲ್ಲೇ ಅತಿಹೆಚ್ಚು ಸಾವು! – Kannada News | Karnataka Road Accidents: 31 Daily Deaths Highlight Urgent Safety Crisis

ಕರ್ನಾಟಕದಲ್ಲಿ ಪ್ರತಿದಿನ ರಸ್ತೆ ಅಪಘಾತಕ್ಕೆ ಬಲಿಯಾಗುತ್ತಿವೆ 31 ಜೀವಗಳು!

ಬೆಂಗಳೂರು, ಫೆಬ್ರವರಿ 23: ಕರ್ನಾಟಕದಲ್ಲಿ ಪ್ರತಿದಿನ ಸರಾಸರಿ 31 ಮಂದಿ ರಸ್ತೆ ಅಪಘಾತಗಳಲ್ಲಿ (Road accidents) ಸಾವನ್ನಪ್ಪುತ್ತಿದ್ದು, 86 ಮಂದಿ ಗಾಯಗೊಳ್ಳುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. 2025ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಶೇ 62.68 ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲೇ ನಡೆದಿದ್ದು, 2026ರ ಜನವರಿಯಲ್ಲಿಯೇ 1,009 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಈ ವರದಿ ಬಹಿರಂಗಪಡಿಸಿದೆ. ವೇಗದ ಚಾಲನೆ, ನಿರ್ಲಕ್ಷ್ಯ, ಹೆದ್ದಾರಿ ಕಾಮಗಾರಿಗಳು ಮತ್ತು ಮೂಲಸೌಕರ್ಯ ಸಮಸ್ಯೆಗಳೇ ಇದಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಒಂದೇ ವರ್ಷದಲ್ಲಿ 800ಕ್ಕೂ ಹೆಚ್ಚು ಬೆಂಗಳೂರಿಗರು ಬಲಿ

2025ರಲ್ಲಿ 11,408 ಅಪಘಾತಗಳಲ್ಲಿ ಜನರು ಪ್ರಾಣ ಕಳೆದುಕೊಂಡರೆ, 31,751 ಅಪಘಾತಗಳಿಂದ ಜನರು ಗಂಭೀರವಾಗಿ ಗಾಯಗೊಂಡಿದ್ದಾಗಿ ಈ ವರದಿ ತಿಳಿಸಿದೆ. ಬೆಂಗಳೂರಿನಲ್ಲೇ ಅತಿ ಹೆಚ್ಚುಸಾವುಗಳು ಸಂಭವಿಸಿದ್ದು, 891 ಜನರು ಸಾವನ್ನಪ್ಪಿದ್ದಾರೆ. ಜೊತೆಗೆ ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳೂ ಹೆಚ್ಚು ಸಾವಿನ ಪ್ರಕರಣಗಳನ್ನು ಹೊಂದಿರುವುದಾಗಿ ತಿಳಿದು ಬಂದಿದೆ. ಅಪಘಾತ ತಡೆಗೆ ಉತ್ತಮ ಮೂಲಸೌಕರ್ಯ, ಕಠಿಣ ಕ್ರಮ ಜಾರಿ ಜೊತೆಗೆ ಜಾಗೃತಿ ಅಭಿಯಾನ ಅಗತ್ಯವೆಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ರಸ್ತೆ ಅಪಘಾತಗಳ ಹೆಚ್ಚಳ ಹಿನ್ನೆಲೆ ಪೊಲೀಸ್ ಇಲಾಖೆ ಕಠಿಣ ಕ್ರಮಗಳನ್ನು ಜಾರಿಗೊಳಿಸಿದೆ. ಸಾಮಾಜಿಕ ಜಾಲತಾಣಗಳ ಅಭಿಯಾನಗಳ ಮೂಲಕ ರಸ್ತೆ ಸುರಕ್ಷತೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ರಸ್ತೆಗಳಲ್ಲಿ ಪ್ರತಿಫಲಕ ಗುರುತುಗಳ ಕೊರತೆ ಹಾಗೂ ಅಡ್ಡವಾಗಿ ಬೆಳೆದ ಗಿಡಗಂಟಿಗಳು ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿವೆ. ಹೆದ್ದಾರಿಗಳಲ್ಲಿ ಸಂಭವಿಸುವ ಅಪಘಾತಗಳಿಗೆ ಅತಿ ವೇಗದ ಚಾಲನೆ, ನಿರ್ಲಕ್ಷ್ಯವೇ ಪ್ರಮುಖ ಕಾರಣಗಳಾಗಿವೆ ಎಂದು ಅಧಿಕಾರಿಗಳು ‘ದಿ ನ್ಯೂ ಇಂಡಿಯನ್ ಎಕ್ಸ್​ಪ್ರೆಸ್​ಗೆ’ ತಿಳಿಸಿದ್ದಾರೆ.

ಇದನ್ನೂ ಓದಿ ಹಾಸನ: ಅವೈಜ್ಞಾನಿಕ ಹಂಪ್​​ಗೆ ವಿದ್ಯಾರ್ಥಿನಿ ಬಲಿ, ಮತ್ತೋರ್ವಳ ಸ್ಥಿತಿ ಗಂಭೀರ

ಇಷ್ಟೆಲ್ಲಾ ಸಾವು ನೋವುಗಳಿಗೆ ಕಾರಣವೇನು?

ಹಾಸನದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿ, ಹೆದ್ದಾರಿಗಳಲ್ಲಿ ನಿಯಮಿತ ಪೆಟ್ರೋಲಿಂಗ್ ನಡೆಸಿ, ಶಿಸ್ತಿನ ಉಲ್ಲಂಘನೆ ಮತ್ತು ಅತಿವೇಗ ಚಾಲನೆ ಮಾಡುವವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ. ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಧರಿಸುವಂತಹ ನಿಯಮಗಳನ್ನು ಪಾಲಿಸಿದರೆ ಅಪಘಾತಗಳಿಂದಾಗುವ ಸಾವುಗಳನ್ನು ಕಡಿಮೆ ಮಾಡಬಹುದು. ಅತಿವೇಗ ಮತ್ತು ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವುದು ದೊಡ್ಡ ತಪ್ಪುಗಳಾಗಿವೆ ಎಂದು ಹೇಳಿದ್ದಾರೆ.

ಹಾಸನ ಜಿಲ್ಲೆಯಲ್ಲಿ ಅವೈಜ್ಞಾನಿಕ ಸ್ಪೀಡ್ ಬ್ರೇಕರ್‌ಗಳು, ಅಪಾಯಕಾರಿ ತಿರುವುಗಳು ಅಪಘಾತಗಳಿಗೆ ಕಾರಣವಾಗುತ್ತಿರುವುದು ಉಪವಿಭಾಗ ಡಿವೈಎಸ್ಪಿಗಳು ಗುರುತಿಸಿದ್ದಾರೆ.ರಾಜ್ಯ ಹೆದ್ದಾರಿಗಳ ಕುರಿತು ಸಾರ್ವಜನಿಕ ಕಾಮಗಾರಿಗಳ ಇಲಾಖೆ (PWD)ಗೆ ವರದಿ ಸಲ್ಲಿಸಲಾಗಿದೆ. ತುಮಕೂರು ಜಿಲ್ಲೆಯಲ್ಲಿ ಬಹುತೇಕ ಹೆದ್ದಾರಿಗಳು ಕಾಮಗಾರಿ ಹಂತದಲ್ಲಿದ್ದು, ಹಲವೆಡೆ ಸಮರ್ಪಕ ಬೆಳಕಿನ ಕೊರತೆ ಇದೆ ಎಂದು ಎಸ್‌ಪಿ ಕೆ.ವಿ. ಅಶೋಕ್ ತಿಳಿಸಿದ್ದಾರೆ. 2025ರಲ್ಲಿ ಅತಿವೇಗ ಪ್ರಕರಣಗಳು ದ್ವಿಗುಣಗೊಂಡಿವೆ. ಸೇವಾ ರಸ್ತೆಗಳ ಕೊರತೆಯೂ ದೂರ ಪ್ರಯಾಣಿಕರಿಗೆ ತೊಂದರೆ ತಂದಿದೆ. ಬೆಂಗಳೂರು ನಗರದಲ್ಲಿ ಜನಸಂಖ್ಯೆ ಮತ್ತು ವಾಹನಗಳ ಹೆಚ್ಚಳದಿಂದ ಸಂಚಾರ ದಟ್ಟಣೆ ಹೆಚ್ಚಾಗಿ ಅಪಘಾತಗಳ ಪ್ರಮಾಣವೂ ಏರಿಕೆಯಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 2:22 pm, Mon, 23 February 26

Source link

ಆನ್​ಲೈನ್ ಗೇಮ್ ಚಟಕ್ಕೆ ಮಾಡಿದ್ದ ಲಕ್ಷಾಂತರ ರೂ. ಸಾಲ ತೀರಿಸಲು ವೃದ್ಧೆಯ ಕೊಂದು ಚಿನ್ನಾಭರಣ ದೋಚಿದ್ದ ಯುವಕ ಅಂದರ್ – Kannada News | Youth Kills Elderly Woman to Repay Online Gaming Debt, Arrested in Davanagere District

ದಾವಣಗೆರೆ, ಫೆಬ್ರವರಿ 23: ಆನ್‌ಲೈನ್ ಗೇಮ್ ವ್ಯಸನದಿಂದ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಯುವಕನೊಬ್ಬ ಸಾಲ ತೀರಿಸಲು ವೃದ್ಧೆಯೊಬ್ಬರನ್ನು ಹತ್ಯೆ ಮಾಡಿ ಚಿನ್ನ ದೋಚಿದ ಪ್ರಕರಣ ದಾವಣಗೆರೆ (Davanagere) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ಫೆಬ್ರವರಿ 2ರಂದು ಈ ಘಟನೆ ನಡೆದಿತ್ತು. ಗ್ರಾಮದ ಒಂಟಿ ವೃದ್ಧೆ ಕಮಲಮ್ಮ (64) ಅವರನ್ನು ಮನೆಗೆ ನುಗ್ಗಿ ಹತ್ಯೆ ಮಾಡಿ, ಸುಮಾರು 8.44 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ದೋಚಲಾಗಿತ್ತು. ಪ್ರಕರಣ ಸಂಬಂಧ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಕಾಳೇನಹಳ್ಳಿ ಗ್ರಾಮದ ನಿವಾಸಿ ಅಭಿಷೇಕ (23) ಎಂಬ ಯುವಕನನ್ನು ಬಂಧಿಸಲಾಗಿದೆ.

ಪೊಲೀಸರ ತನಿಖೆಯಲ್ಲಿ ತಿಳಿದುಬಂದಿರುವ ಪ್ರಕಾರ, ಅಭಿಷೇಕ ಆನ್‌ಲೈನ್ ಗೇಮ್ ಆಡುತ್ತಾ 20ರಿಂದ 25 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ. ಸಾಲಗಾರರ ಒತ್ತಡದಿಂದ ಮನೆ ಬಿಟ್ಟು ಸುತ್ತಾಡುತ್ತಿದ್ದ ಆತ, ರಾತ್ರಿ ವೇಳೆ ಬಸ್ ನಿಲ್ದಾಣಗಳಲ್ಲಿ ವಾಸಿಸುತ್ತಿದ್ದ. ಇದೇ ವೇಳೆ ನ್ಯಾಮತಿ ತಾಲೂಕಿನ ಆರುಂಡಿ ಗ್ರಾಮದಲ್ಲಿ ದೇವರ ಹಬ್ಬ ನಡೆಯುತ್ತಿರುವುದು ತಿಳಿದು ಫೆಬ್ರವರಿ 2ರಂದು ಗ್ರಾಮಕ್ಕೆ ತೆರಳಿದ್ದ.

ಹಬ್ಬಕ್ಕೆ ಚಿನ್ನಾಭರಣ ಧರಿಸಿ ದೇವಸ್ಥಾನಕ್ಕೆ ಹೋಗಿದ್ದೇ ಮುಳುವಾಯ್ತು

ಹಬ್ಬದ ನಿಮಿತ್ತ ಚಿನ್ನಾಭರಣ ಧರಿಸಿಕೊಂಡು ದೇವಾಲಯಕ್ಕೆ ಬಂದಿದ್ದ ಕಮಲಮ್ಮ ಅವರನ್ನು ಗಮನಿಸಿದ್ದ ಆತ, ಅವರ ಮನೆ ಹಿಂಬಾಗಿಲಿನಿಂದ ಒಳನುಗ್ಗಿ ಅಡಗಿ ಕುಳಿತಿದ್ದಾನೆ. ತಡರಾತ್ರಿ ದಿಂಬಿನಿಂದ ಉಸಿರುಗಟ್ಟಿಸಿ ಹತ್ಯೆ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಬಳಿಕ ಕಮಲಮ್ಮ ಅವರ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದ.

ಕದ್ದ ಚಿನ್ನ ಅಡವಿಟ್ಟು ಸಾಲ ಪಡೆದಿದ್ದ ಖತರ್ನಾಕ್!

ದೋಚಿದ ಚಿನ್ನವನ್ನು ಶಿಕಾರಿಪುರದ ವಿವಿಧ ಬ್ಯಾಂಕ್‌ಗಳಲ್ಲಿ ಅಡವಿಟ್ಟು ಹಣ ಪಡೆದಿದ್ದ ಆತ, ಆ ಹಣದಿಂದ ಮತ್ತೆ ಆನ್‌ಲೈನ್ ಗೇಮ್ ಆಡಲು ಆರಂಭಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯರ ಸಹಕಾರ ಮತ್ತು ಸೂಕ್ತ ಮಾಹಿತಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ: ದಾವಣಗೆರೆ: ಹಾನಿಕಾರಕ ಇಂಜೆಕ್ಷನ್ ಹಾಕಿಕೊಂಡು ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

ಈ ಕುರಿತು ದಾವಣಗೆರೆ ಎಸ್ಪಿ ಎಚ್.ಟಿ. ಶೇಖರ ಮಾಹಿತಿ ನೀಡಿದ್ದು, ಆರೋಪಿಯಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರಕರಣದ ಕುರಿತ ತನಿಖೆ ಮುಂದುವರಿದಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಟೀಮ್ ಇಂಡಿಯಾ ಮುಂದಿನ ಪಂದ್ಯವನ್ನು ಎಷ್ಟು ರನ್​ಗಳ ಅಂತರದಿಂದ ಗೆಲ್ಲಬೇಕು? – Kannada News | India must achieve massive victory in this margins

ಸೌತ್ ಆಫ್ರಿಕಾ ವಿರುದ್ಧದ ಸೋಲಿನ ಬೆನ್ನಲ್ಲೇ ಟೀಮ್ ಇಂಡಿಯಾದ ಸೆಮಿಫೈನಲ್ ಲೆಕ್ಕಾಚಾರಗಳು ಶುರುವಾಗಿದೆ. ಇದಕ್ಕೆ ಮುಖ್ಯ ಕಾರಣ ಭಾರತ ತಂಡವು ಹೀನಾಯವಾಗಿ ಸೋತಿರುವುದು. ಅಂದರೆ ಸೌತ್ ಆಫ್ರಿಕಾ ವಿರುದ್ಧದ 76 ರನ್​ಗಳ ಅಂತರದಿಂದ ಸೋತಿರುವ ಕಾರಣ ಟೀಮ್ ಇಂಡಿಯಾದ ನೆಟ್ ರನ್ ರೇಟ್ -3.800 ಕ್ಕೆ ಕುಸಿದಿದೆ. ಈ ನೆಗೆಟಿವ್ ನೆಟ್ ರನ್ ರೇಟ್ ಅನ್ನು ಪಾಸಿಟಿಮ್ ಮಾಡಬೇಕಿದ್ದರೆ ಭಾರತ ತಂಡವು ಮುಂದಿನ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಬೇಕು.

ಅದರಂತೆ ಭಾರತ ತಂಡವು ತನ್ನ ಮುಂದಿನ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ ಎಷ್ಟು ರನ್​ಗಳ ಅಂತರದಿಂದ ಗೆಲ್ಲಬೇಕು ಎಂದು ನೋಡುವುದಾದರೆ…

  • ಮೊದಲು ಬ್ಯಾಟಿಂಗ್ ಲೆಕ್ಕಾಚಾರ: ಭಾರತ ತಂಡವು  200ಕ್ಕೂ ಹೆಚ್ಚು ರನ್ ಗಳಿಸಬೇಕು ಮತ್ತು ಎದುರಾಳಿ ತಂಡವನ್ನು ಕನಿಷ್ಠ 70 ರಿಂದ 80 ರನ್‌ಗಳ ಅಂತರದಿಂದ ಸೋಲಿಸಬೇಕು.
  • ಮೊದಲು ಬೌಲಿಂಗ್ ಲೆಕ್ಕಾಚಾರ: ಎದುರಾಳಿ ತಂಡವನ್ನು 130 ರಿಂದ 140 ರನ್​ಗಳ ಒಳಗೆ ಆಲೌಟ್ ಮಾಡಬೇಕು.
  • ಚೇಸಿಂಗ್ ಲೆಕ್ಕಾಚಾರ: ಎದುರಾಳಿ ತಂಡವನ್ನು 140 ರನ್​ಗೆ ಆಲೌಟ್ ಮಾಡಿದರೆ ಟೀಮ್ ಇಂಡಿಯಾ ಈ ಗುರಿಯನ್ನು 9 ರಿಂದ 10 ಓವರ್​ಗಳಲ್ಲಿ ಚೇಸ್ ಮಾಡಬೇಕು.

ಈ ಮೂರು ಲೆಕ್ಕಾಚಾರಗಳೊಂದಿಗೆ ಭಾರತ ತಂಡವು ಝಿಂಬಾಬ್ವೆ ವಿರುದ್ಧ ಕಣಕ್ಕಿಳಿಯುವ ಸಾಧ್ಯತೆಯಿದೆ. ಅಲ್ಲದೆ ಈ ಮ್ಯಾಚ್​ನಲ್ಲಿ ಭರ್ಜರಿ ಜಯ ಸಾಧಿಸಿದರೆ ಟೀಮ್ ಇಂಡಿಯಾದ ನೆಟ್ ರನ್ ರೇಟ್ + ಆಗಲಿದೆ.

ಇನ್ನು ವೆಸ್ಟ್ ಇಂಡೀಸ್ ವಿರುದ್ಧ ಕೂಡ ಭರ್ಜರಿ ಜಯ ಸಾಧಿಸುವ ಮೂಲಕ ಭಾರತ ತಂಡವು ತನ್ನ ನೆಟ್ ರನ್ ರೇಟ್​ ಅನ್ನು ಹೆಚ್ಚಿಸಿಕೊಳ್ಳಬಹುದು. ಈ ಮೂಲಕ 4 ಅಂಕಗಳೊಂದಿಗೆ ನೆಟ್ ರನ್ ರೇಟ್​ನಲ್ಲಿ ಇತರೆ ತಂಡಗಳನ್ನು ಹಿಂದಿಕ್ಕಿ ಸೆಮಿಫೈನಲ್​ಗೇರಬಹುದು.

ನೆಟ್ ರನ್ ರೇಟ್ ಲೆಕ್ಕಾಚಾರವಿಲ್ಲದೇ ಸೆಮಿಫೈನಲ್​ಗೇರಬಹುದೇ?

ನೆಟ್ ರನ್ ರೇಟ್ ಲೆಕ್ಕಾಚಾರವಿಲ್ಲದೇ ಭಾರತ ತಂಡ ಸೆಮಿಫೈನಲ್​ಗೆ ಪ್ರವೇಶಿಸಬಹುದು. ಆದರೆ ಇಲ್ಲಿ ಸೌತ್ ಆಫ್ರಿಕಾ ತಂಡವು ತನ್ನ ಮುಂದಿನ ಎರಡು ಮ್ಯಾಚ್​​ಗಳಲ್ಲಿ ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಬೇಕು.

ಹೀಗಾದಲ್ಲಿ ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ತಂಡಕ್ಕೆ ಸೋಲುಣಿಸಿ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್​ಗೆ ಪ್ರವೇಶಿಸಬಹುದು.

ಇದನ್ನೂ ಓದಿ: ಇಬ್ಬರಲ್ಲಿ ಒಬ್ಬರು… ಟೀಮ್ ಇಂಡಿಯಾದಲ್ಲಿ ಮಹತ್ವದ ಬದಲಾವಣೆ

ಭಾರತದ ಮುಂದಿನ ಪಂದ್ಯಗಳ ವೇಳಾಪಟ್ಟಿ:

  • ಫೆಬ್ರವರಿ 26, 2026: ಭಾರತ vs ಝಿಂಬಾಬ್ವೆ  (ಚೆನ್ನೈ)
  • ಮಾರ್ಚ್ 01, 2026: ವೆಸ್ಟ್ ಇಂಡೀಸ್ vs ಭಾರತ (ಕೋಲ್ಕತ್ತಾ)

Source link

Video: ತನಗೆ ಕಾಟ ಕೊಟ್ಟ ಕೋತಿಗೆ ಪಂಚ್ ಕೊಡ್ತಾ ಈ ಕೋತಿ ಮರಿ ‘ಪಂಚ್’? – Kannada News | Viral AI Edits Reimagine Baby Monkey Punch With a Dramatic Comeback

ಟೋಕಿಯೋ, ಫೆಬ್ರವರಿ 23: ಈ ಕೋತಿ ಮರಿ ಹುಟ್ಟಿನಿಂದಲೇ ಒಬ್ಬಂಟಿ, ಅದು ತೂಕ ಕಡಿಮೆ ಇದ್ದಿದ್ದರಿಂದ ತಾಯಿಗೂ ಅದನ್ನು ಸಾಕಲು ತಿಳಿಯದೆ ಬಿಟ್ಟು ಹೋಗಿತ್ತು. ಜಪಾನ್​ನ ಮೃಗಾಲಯದಲ್ಲಿ ಅದನ್ನು ಬಿಡಲಾಗಿತ್ತು. ಆದರೆ ಅದಕ್ಕೆ ಸ್ನೇಹಿತರು ಯಾರೂ ಇರಲಿಲ್ಲ, ಕೋತೊಯನ್ನೇ ಹೋಲುವ ಗೊಂಬೆಯನ್ನೇ ಅದು ತನ್ನ ಕುಟುಂಬವನ್ನಾಗಿ ಮಾಡಿಕೊಂಡಿತ್ತು. ಉಳಿದ ಕೋತಿಗಳೆಲ್ಲಾ ಅದರ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೋ ವೈರಲ್ ಆಗಿತ್ತು. ಬಳಿಕ ಅದಕ್ಕೆ ಕೆಲವು ಕೋತಿಗಳು ಫ್ರೆಂಡ್​ಶಿಪ್ ಮಾಡಿವೆ ಎನ್ನುವ ಮಾಹಿತಿಯೂ ಇದೆ. @ Pediavenir ಎಂಬ ಎಕ್ಸ್​ ಅಕೌಂಟ್​​ನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಆದರೆ ಈಗ ಹೇಳಲು ಹೊರಟಿರುವ ವಿಚಾರ ಅದಲ್ಲ, ಆ ಮರಿಗೆ ಮೊದಲು ತೊಂದರೆ ಕೊಟ್ಟಿದ್ದ ಕೋತಿ ಮೇಲೆ ಸೇಡು ತೀರಿಸಿಕೊಳ್ಳುವ ವಿಡಿಯೋ ಒಂದು ವೈರಲ್ ಆಗಿದೆ. ಆ ವಿಡಿಯೋದಲ್ಲಿ ಈ ಮರಿ ದೊಡ್ಡ ಕೋತಿಗೆ ಪಂಚ್ ಕೊಡುತ್ತಿರುವುದು, ಹಾರಿ ಒದೆಯುತ್ತಿರುವುದನ್ನು ಕಾಣಬಹುದು. ಆದರೆ ಇದು ಸತ್ಯ ಅಲ್ಲ ಇದು ಎಐ ರಚಿತ ವಿಡಿಯೋ ಆಗಿದ್ದು, ಮರಿ ಹೀಗೆ ಸೇಡು ತೀರಿಸಿಕೊಂಡರೆ ಹೇಗಿರುತ್ತೆ ಎಂಬುದಕ್ಕೆ ಈ ವಿಡಿಯೋ ಕ್ರಿಯೇಟ್ ಮಾಡಲಾಗಿದೆ. ಪಂಚ್ ಜುಲೈ 26, 2025 ರಂದು ಜನಿಸಿದ್ದು, ಕೇವಲ 500 ಗ್ರಾಂ ತೂಕವಿತ್ತು. ಮೈನಿಚಿ ಶಿಂಬುನ್ ವರದಿ ಮಾಡಿದಂತೆ, ಪಂಚ್​​ನ ತಾಯಿ ಮೊದಲ ಬಾರಿಗೆ ಗರ್ಭ ಧರಿಸಿತ್ತು, ಜನನದ ನಂತರ ಅವನನ್ನು ನೋಡಿಕೊಳ್ಳಲಿಲ್ಲ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

 

Source link

ಜೈಲಲ್ಲಿ ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿಯ ರೌಡಿಸಂ: ಸಹ ಕೈದಿಗಳ ಮೇಲೆ ಹಲ್ಲೆ – Kannada News | Biklu Shiva Murder Accused Pradeep Assaults Fellow Inmates in Parappana Agrahara Jail

ಬೆಂಗಳೂರು, ಫೆಬ್ರವರಿ 23: ಬಿಕ್ಲು ಶಿವ ಕೊಲೆ ಪ್ರಕರಣದ ಆರೋಪಿ ಪ್ರದೀಪ್ ಪರಪ್ಪನ ಅಗ್ರಹಾರ ಜೈಲಿನಲ್ಲಿ ತನ್ನ ಸಹ ಕೈದಿಗಳ ಮೇಲೆ ಹಲ್ಲೆ ನಡೆಸಿದ್ದಾನೆ.  ಕೊಲೆ ಆರೋಪದಡಿ ಬಂಧಿತನಾಗಿ ಜೈಲೂಟ ಸವಿಯುತ್ತಿದ್ದರೂ ಈತ ಮತ್ತೆ ತನ್ನ ರೌಡಿಸಂ ಪ್ರದರ್ಶಿಸಿದ್ದಾನೆ ಎನ್ನಲಾಗಿದೆ. ಫೆಬ್ರವರಿ 18ರಂದು ಸುರೇಶ್ ಹಾಗೂ ಆದಿತ್ ಮಧುಕಿರಣ್ ಎಂಬುವವರ ಮೇಲೆ ಪ್ರದೀಪ್ ಹಲ್ಲೆ ಮಾಡಿರುವ ಆರೋಪ ಕೇಳಿ ಬಂದಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದ್ದು, ಸುರೇಶ್ ಮತ್ತು ಆದಿತ್ ಮಧುಕಿರಣ್ ಅವರ ಮೂಗು ಮತ್ತು ಕಪಾಳಕ್ಕೆ ಪ್ರದೀಪ್​​ ಹೊಡೆದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿ ನಾನ್-ಕಾಗ್ನಿಜೆಬಲ್ ರಿಪೋರ್ಟ್ (ಎನ್‌ಸಿಆರ್) ಅನ್ನು ದಾಖಲಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಧುರಂಧರ್ 2’ ಚಿತ್ರಕ್ಕಿಂತ ‘ಟಾಕ್ಸಿಕ್’ ಚಿತ್ರಕ್ಕೆ ಸಿಕ್ತು ಹೆಚ್ಚುವರಿ 1200 ಪರದೆಗಳು? – Kannada News | Toxic vs Dhruvadhar 2: Box Office Battle Begins! Screens and Day 1 Collection Forecast

‘ಧುರಂಧರ್ 2’ vs ‘ಟಾಕ್ಸಿಕ್’ ಫೈಟ್​​ಗೆ ವೇದಿಕೆ ಸಿದ್ಧವಾಗುತ್ತಿದೆ. ಮಾರ್ಚ್ 19ರಂದು ಎರಡೂ ಸಿನಿಮಾಗಳು ಮುಖಾ ಮುಖಿ ಆಗುತ್ತಿವೆ. ಈ ಎರಡು ಸಿನಿಮಾಗಳ ಪೈಕಿ ಯಾರು ಗೆಲ್ಲುತ್ತಾರೆ ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿದೆ. ಹೀಗಿರುವಾಗಲೇ, ‘ಟಾಕ್ಸಿಕ್’ ಸಿನಿಮಾಗೆ (Toxic Movie) ‘ಧುರಂಧರ್ 2’ ಚಿತ್ರಕ್ಕಿಂತ ಹೆಚ್ಚುವರಿಯಾಗಿ 1200 ಸ್ಕ್ರೀನ್​​ಗಳು ಸಿಗಲಿವೆ ಎಂದು ಹೇಳಲಾಗುತ್ತಾ ಇದೆ.

‘ಧುರಂಧರ್ 2’ ಸಿನಿಮಾ ಬಗ್ಗೆ ಒಂದು ವರ್ಗದ ಜನರಿಗೆ ನಿರೀಕ್ಷೆ ಇದೆ. ಈಗಾಗಲೇ ರಿಲೀಸ್ ಆಗಿರುವ ಮೊದಲ ಪಾರ್ಟ್​ ಹಲ್​ಚಲ್ ಎಬ್ಬಿಸಿರುವುದರಿಂದ ಎರಡನೇ ಪಾರ್ಟ್ ಇಷ್ಟ ಆಗಬಹುದು ಎಂದು ಹೇಳಲಾಗುತ್ತಾ ಇದೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ನಿರೀಕ್ಷೆ ಹುಟ್ಟಲು ಕಾರಣ ಆಗಿದ್ದು ಯಶ್. ‘ಕೆಜಿಎಫ್ 2’ ಚಿತ್ರದ ಬಳಿಕ ಅವರು ಮತ್ತೊಂದು ಹಂತಕ್ಕೆ ಹೋಗಿದ್ದಾರೆ. ಈಗ ‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ ದಾಸ್ ಜೊತೆ ಅವರು ಕೂಡ ಕಥೆ ಬರೆದು, ಸಿನಿಮಾ ನಿರ್ಮಾಣದಲ್ಲಿ ಅವರು ಕೈ ಜೋಡಿಸಿದ್ದಾರೆ.

ಇದನ್ನೂ ಓದಿ: ಕೇರಳದಲ್ಲಿ ಡಾಮಿನೇಷನ್ ಮಾಡಲು ರೆಡಿ ಆದ ‘ಟಾಕ್ಸಿಕ್’; ದೊಡ್ಡ ಸಂಸ್ಥೆ ಪಾಲಾಯ್ತು ಹಂಚಿಕೆ ಹಕ್ಕು

ಈಗ ಕೇಳಿ ಬರುತ್ತಿರುವ ಮಾಹಿತಿ ಪ್ರಕಾರ ‘ಟಾಕ್ಸಿಕ್’ ಚಿತ್ರಕ್ಕೆ ಭಾರತಾದ್ಯಂತ ಸುಮಾರು 5,500 ಪರದೆಗಳು ಸಿಗುವ ಸಾಧ್ಯತೆ ಇದೆ. ‘ಧುರಂಧರ್ 2’ ಚಿತ್ರಕ್ಕೆ 4,300 ಪರದೆಗಳು ಸಿಗಲಿವೆ ಎಂದು ಹೇಳಲಾಗುತ್ತಾ ಇದೆ. ಹೀಗಾದಲ್ಲಿ ಯಶ್​ ಚಿತ್ರಕ್ಕೆ ಹೆಚ್ಚಿನ ಮೈಲೇಜ್ ಸಿಗಲಿದೆ.

ಮೊದಲ ದಿನದ ಕಲೆಕ್ಷನ್ ಬಗ್ಗೆಯೂ ಚರ್ಚೆ ನಡೆಯುತ್ತಿದೆ. ‘ಧುರಂಧರ್ 2’ ಸಿನಿಮಾ ಮೊದಲ ದಿನ ಭಾರತದಲ್ಲಿ 80-100 ಕೋಟಿ ರೂಪಾಯಿ ಕಲೆಕ್ಷನ್ ಮಾಡಬಹುದು ಎನ್ನಲಾಗುತ್ತಿದೆ. ‘ಟಾಕ್ಸಿಕ್’ ಸಿನಿಮಾ 260 ಕೋಟಿ ರೂಪಾಯಿಗೂ ಹೆಚ್ಚಿನ ಕಲೆಕ್ಷನ್ ಮಾಡುವ ನಿರೀಕ್ಷೆ ಇದೆ. ಹಾಗಾದಲ್ಲಿ ಯಶ್ ಚಿತ್ರಕ್ಕೆ ದೊಡ್ಡ ಗೆಲುವು ಸಿಕ್ಕಂತೆ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 1:41 pm, Mon, 23 February 26

Source link