Category Archives: Blog

Your blog category

ಚಂದ್ರು ಲಮಾಣಿಗೆ ನ್ಯಾಯಾಂಗ ಬಂಧನ: ಪರಪ್ಪನ ಅಗ್ರಹಾರ ಪಾಲಾದ ಬಿಜೆಪಿ ಶಾಸಕ – Kannada News | Chandrulamani Remanded to Judicial Custody Till March 2 by Special Court for People’s Representatives

ಬೆಂಗಳೂರು, ಫೆಬ್ರವರಿ 22: ಗುತ್ತಿಗೆದಾರನಿಂದ 5 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದ ಗದಗ ಜಿಲ್ಲೆಯ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಚಂದ್ರು ಲಮಾಣಿಗೆ ಮಾರ್ಚ್‌ 2ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ ಆದೇಶಿಸಿದೆ. ಯಲಹಂಕ ಜುಡಿಷಿಯಲ್ ಲೇಔಟ್​ನಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಶಾಸಕರನ್ನು ಲೋಕಾಯುಕ್ತ ಪೊಲೀಸರು ಹಾಜರುಪಡಿಸಿದ್ದರು. ನ್ಯಾಯಾಧೀಶರ ಆದೇಶದ ಅನ್ವಯ ಬಿಜೆಪಿ ಶಾಸಕ ಚಂದ್ರು ಲಮಾಣಿಯೀಗ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಪಿಎ ಮಂಜುನಾಥ್, ಸಂಬಂಧಿ ಗುರು ಲಮಾಣಿಗೂ ನ್ಯಾಯಾಂಗ ಬಂಧನ ವಿಧಿಸಿ ಜಡ್ಜ್​​ ಆದೇಶಿಸಿದ್ದಾರೆ.

ಬಿಜೆಪಿ ಶಾಸಕ ಡಾ.ಚಂದ್ರು ಲಮಾಣಿ, ಸರ್ಕಾರಿ ಪಿಎ ಮಂಜುನಾಥ್ ಮತ್ತು ಖಾಸಗಿ ಪಿಎ ಗುರುವಿಗೆ ವೈದ್ಯಕೀಯ ತಪಾಸಣೆ ಬಳಿಕ ಲೋಕಾಯುಕ್ತ ಪೊಲೀಸರು ಅವರನ್ನು ಬೆಂಗಳೂರಿಗೆ ಕರೆ ತಂದಿದ್ದರು.

(ಮಾಹಿತಿ ಅಪ್ಡೇಟ್​​ ಆಗುತ್ತಿದೆ.)

Source link

Lunar Eclipse 2026: ಮಾ.03 ವರ್ಷದ ಮೊದಲ ಚಂದ್ರಗ್ರಹಣ; ಇದು ಭಾರತದಲ್ಲಿ ಗೋಚರಿಸುತ್ತಾ? – Kannada News | Lunar Eclipse March 3, 2026: India Visibility, Sutak Timings and Duration

ಈ ವರ್ಷದ ಮೊದಲ ಚಂದ್ರಗ್ರಹಣವು ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸಲಿದೆ. ಈ ವರ್ಷ, ಫಾಲ್ಗುಣ ಹುಣ್ಣಿಮೆಯ ದಿನವು ಮಾರ್ಚ್ 03 ರಂದು ಬಂದಿದ್ದು, ಚಂದ್ರಗ್ರಹಣವು ಈ ದಿನದಂದು ಸಂಭವಿಸುತ್ತದೆ. ಈ ಚಂದ್ರಗ್ರಹಣವು ವರ್ಷದ ಅತ್ಯಂತ ದೀರ್ಘವಾಗಿರುತ್ತದೆ. ಗ್ರಹಣದ ದಿನದಂದು, ಚಂದ್ರನು ಸಿಂಹ ರಾಶಿಯಲ್ಲಿ ಸಾಗುತ್ತಾನೆ. ಪರಿಣಾಮವಾಗಿ, ಚಂದ್ರಗ್ರಹಣವು ಸಿಂಹ ಮತ್ತು ಪೂರ್ವಾ ಫಾಲ್ಗುಣಿ ನಕ್ಷತ್ರಪುಂಜದಲ್ಲಿ ಸಂಭವಿಸುತ್ತದೆ. ಈ ಗ್ರಹಣವು ಭಾರತದಲ್ಲಿ ಗೋಚರಿಸುತ್ತದೆ. ಪರಿಣಾಮವಾಗಿ, ಈ ಚಂದ್ರಗ್ರಹಣದ ಸೂತಕ ಅವಧಿಯು ಭಾರತದಲ್ಲಿಯೂ ಕಂಡುಬರುತ್ತದೆ.

2026 ರ ಚಂದ್ರ ಗ್ರಹಣ ಸಮಯಗಳು:

ಮಾರ್ಚ್ 3, ಮಂಗಳವಾರ ಮಧ್ಯಾಹ್ನ 3:20 ಕ್ಕೆ ಚಂದ್ರಗ್ರಹಣ ಆರಂಭವಾಗಲಿದೆ. ಸಂಜೆ 6:47 ಕ್ಕೆ ಕೊನೆಗೊಳ್ಳಲಿದೆ. ಈ ಚಂದ್ರಗ್ರಹಣದ ಅವಧಿ 3 ಗಂಟೆ 27 ನಿಮಿಷಗಳಾಗಿರುತ್ತದೆ. ಒಟ್ಟು ಚಂದ್ರಗ್ರಹಣವು ಸಂಜೆ 4:34 ಕ್ಕೆ ಪ್ರಾರಂಭವಾಗುತ್ತದೆ.

ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ

ಭಾರತದಲ್ಲಿ ಚಂದ್ರಗ್ರಹಣ:

ಚಂದ್ರಗ್ರಹಣದ ದಿನದಂದು ಭಾರತದಲ್ಲಿ ಚಂದ್ರೋದಯ ಸಂಜೆ 6:22 ಕ್ಕೆ ಸಂಭವಿಸುತ್ತದೆ. ಗ್ರಹಣವು ಸಂಜೆ 6:47 ಕ್ಕೆ ಕೊನೆಗೊಳ್ಳುತ್ತದೆ. ಪರಿಣಾಮವಾಗಿ, ಈ ಚಂದ್ರಗ್ರಹಣವು ಭಾರತದಲ್ಲಿ ಬಹಳ ಕಡಿಮೆ ಸಮಯದವರೆಗೆ ಗೋಚರಿಸುತ್ತದೆ. ಇದು ಸುಮಾರು 25 ನಿಮಿಷಗಳ ಕಾಲ ಇರುತ್ತದೆ. ಆದಾಗ್ಯೂ, ಭಾರತದ ವಿವಿಧ ಭಾಗಗಳಲ್ಲಿ ಚಂದ್ರೋದಯದ ಸಮಯಗಳು ಬದಲಾಗಬಹುದು, ಆದ್ದರಿಂದ ಚಂದ್ರಗ್ರಹಣದ ಅವಧಿಯು ವಿವಿಧ ರಾಜ್ಯಗಳಲ್ಲಿನ ಚಂದ್ರೋದಯವನ್ನು ಅವಲಂಬಿಸಿ ಬದಲಾಗಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 1:25 pm, Sun, 22 February 26

Source link

ನಾ ಬದಲಾಗಲ್ಲ… ಅಭಿಷೇಕ್ ಶರ್ಮಾ ತಿರುಗೇಟು – Kannada News | ‘I Will Not Change’: Abhishek Sharma

ಟೀಮ್ ಇಂಡಿಯಾ ಆರಂಭಿಕ ದಾಂಡಿಗ ಅಭಿಷೇಕ್ ಶರ್ಮಾ ಫಾರ್ಮ್​ನಲ್ಲಿದ್ದಾರಾ? ಈ ಪ್ರಶ್ನೆಗೆ ಉತ್ತರ ಹುಡುಕುವುದೇ ದೊಡ್ಡ ಸವಾಲು. ಏಕೆಂದರೆ ಒಬ್ಬ ಆಟಗಾರ ಫಾರ್ಮ್​ನಲ್ಲಿ ಇಲ್ಲ ಎನ್ನಲು ಆತನ ಕೆಲ ಇನಿಂಗ್ಸ್​ಗಳನ್ನು ನೋಡಬೇಕಾಗುತ್ತದೆ. ಇನ್ನು ಫಾರ್ಮ್​ನಲ್ಲಿದ್ದಾರೆ ಎಂದು ಗೊತ್ತಾಗಲು ಒಂದೆರಡು ಇನಿಂಗ್ಸ್ ನೋಡಿದ್ರೂ ಸಾಕಾಗುತ್ತದೆ. ಆದರೆ ಅಭಿಷೇಕ್ ವಿಷಯದಲ್ಲಿ ಅವರು ಫಾರ್ಮ್​ನಲ್ಲಿದ್ದಾರಾ ಅಥವಾ ಇಲ್ಲವಾ ಎಂದೇಳುವುದೇ ಕಷ್ಟಕರ.

ಏಕೆಂದರೆ ಅಭಿಷೇಕ್ ಅಬ್ಬರಿಸಿದರೆ ಅದು ಸಿಡಿಲಬ್ಬರ. ಇಲ್ಲದಿದ್ದರೆ ಶೂನ್ಯ ಎನ್ನುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಸಾಕ್ಷಿ ಅವರು ಟಿ20 ವಿಶ್ವಕಪ್​ಗೂ ಮುನ್ನ ಎರಡು ಸಿಡಿಲಬ್ಬರದ ಅರ್ಧಶತಕ ಬಾರಿಸಿರುವುದು. ಆದರೆ ಟಿ20 ವಿಶ್ವಕಪ್​ನಲ್ಲಿ ಬ್ಯಾಕ್ ಟು ಬ್ಯಾಕ್ ಮೂರು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ.

ಮೊದಲೇ ಹೇಳಿದಂತೆ ಒಂದೆರಡು ಎಸೆತಗಳಲ್ಲಿ ಬಿರುಸಿನ ಹೊಡೆತಕ್ಕೆ ಮುಂದಾಗಿ ವಿಕೆಟ್ ಒಪ್ಪಿಸುತ್ತಿರುವುದರಿಂದ ಅವರ ಫಾರ್ಮ್​ನಲ್ಲಿದ್ದಾರಾ ಅಥವಾ ಇಲ್ಲವಾ ಎಂದೇಳಲು ಸಾಧ್ಯವಾಗುತ್ತಿಲ್ಲ. ಬದಲಾಗಿ ಅವರ ಇಂಟೆಟ್ ಮಾತ್ರ ಇಲ್ಲಿ ಎದ್ದು ಕಾಣುತ್ತಿದೆ.

ಹೀಗಾಗಿಯೇ ಸೌತ್ ಆಫ್ರಿಕಾ ವಿರುದ್ಧದ ಸೂಪರ್-8 ಪಂದ್ಯದಲ್ಲೂ ಅಭಿಷೇಕ್ ಶರ್ಮಾ ಟೀಮ್ ಇಂಡಿಯಾ ಪರ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಿದೆ. ಈ ಸಾಧ್ಯತೆಗಳ ನಡುವೆ ಅಭಿ ನೀಡಿರುವ ಹೇಳಿಕೆ ಕೂಡ ಭಾರೀ ವೈರಲ್ ಆಗಿದೆ.

ಖಾಸಗಿ ಚಾನೆಲ್​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಭಿಷೇಕ್ ಶರ್ಮಾ, ನನ್ನ ಆಟದ ಶೈಲಿ ಬದಲಾಯಿಸಲ್ಲ. ಸತತ ವೈಫಲ್ಯಗಳ ನಡುವೆಯೂ ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಶೈಲಿ ಅಥವಾ ಮನಸ್ಥಿತಿಯನ್ನು ಬದಲಾಯಿಸಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ತಾನು ಕಳೆದ ಎರಡು ವರ್ಷಗಳಿಂದ ಒತ್ತಡ ತೆಗೆದುಕೊಳ್ಳುವುದನ್ನು ಬಿಟ್ಟಿದ್ದೇನೆ. ಕೇವಲ ತನ್ನ ಸಿದ್ಧತೆ ಹಾಗೂ ತರಬೇತಿಯ ಮೇಲೆ ಮಾತ್ರ ಗಮನ ಹರಿಸುತ್ತಿದ್ದೇನೆ ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.

ನನ್ನ ಬ್ಯಾಟಿಂಗ್ ಅನ್ನು ನಾನು ಆನಂದಿಸುತ್ತೇನೆ. ಅಭ್ಯಾಸ ಮತ್ತು ತರಬೇತಿ ಮಾತ್ರ ನಾನು ನಿಯಂತ್ರಿಸಿಕೊಳ್ಳಬಹುದು. ಇದರ ಹೊರತಾಗಿ ಆಕ್ರಮಣಕಾರಿ ಆಟದ ಮೇಲೆ ಗಮನವನ್ನು ಕೇಂದ್ರೀಕರಿಸುತ್ತೇನೆ. ಅದನ್ನು ಆನಂದಿಸುತ್ತಿದ್ದೇನೆ.

ಬ್ಯಾಟರ್‌ಗಳಲ್ಲಿ ಯಾವಾಗಲೂ ಏರಿಳಿತಗಳಿರುತ್ತವೆ. ಕೆಲವೊಮ್ಮೆ ರನ್‌ಗಳು ಬರುತ್ತವೆ, ಕೆಲವೊಮ್ಮೆ ರನ್ ಬರುವುದಿಲ್ಲ. ಆದರೆ ನಾನು ಒಂದು ನಿರ್ದಿಷ್ಟ ಉದ್ದೇಶದಿಂದ, ಒಂದು ನಿರ್ದಿಷ್ಟ ರೀತಿಯಲ್ಲಿ ಆಡುತ್ತೇನೆ ಎಂದು ನಿರ್ಧರಿಸಿದ್ದೇನೆ. ನಾನು ಯಶಸ್ವಿಯಾಗಬಹುದು ಅಥವಾ ಯಶಸ್ವಿಯಾಗದಿರಬಹುದು, ಆದರೆ ನಾನು ನನ್ನ ಪ್ರಕ್ರಿಯೆ ಅಥವಾ ಮನಸ್ಥಿತಿಯನ್ನು ಬದಲಾಯಿಸುವುದಿಲ್ಲ ಎಂದು ಅಭಿಷೇಕ್ ಶರ್ಮಾ ಹೇಳಿದ್ದಾರೆ.

ಇದನ್ನೂ ಓದಿ: ‘ಪವರ್’​ ಇಲ್ಲ… ಬಾಬರ್ ಆಝಂ ಮಾನ ಕಳೆದ ಪಾಕ್ ಕೋಚ್

ಈ ಮೂಲಕ ಮುಂಬರುವ ಪಂದ್ಯಗಳಲ್ಲೂ ಆಕ್ರಮಣಕಾರಿ ಆಟಕ್ಕೆ ಒತ್ತು ನೀಡುವುದಾಗಿ ಅಭಿಷೇಕ್ ಶರ್ಮಾ ಸ್ಪಷ್ಟಪಡಿಸಿದ್ದಾರೆ. ಇದರ ಹೊರತಾಗಿ ಈ ಹಿಂದಿನ ವೈಫಲ್ಯಗಳ ಬಗ್ಗೆ ಚಿಂತಿಸುವುದಿಲ್ಲ. ಅಲ್ಲದೆ ಟೀಕೆಗಳ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಅಭಿಷೇಕ್ ಶರ್ಮಾ ವಿಮರ್ಶಕರಿಗೆ ಖಡಕ್ ತಿರುಗೇಟು ನೀಡಿದ್ದಾರೆ.

Published On – 1:19 pm, Sun, 22 February 26

Source link

ಕಾರಿಗೆ ಟಚ್​​ ಆಗಿದ್ದಕ್ಕೆ ಆ್ಯಂಬುಲೆನ್ಸ್ ಅಡ್ಡಗಟ್ಟಿ ರಸ್ತೆ ರಂಪಾಟ – Kannada News | Road Rage: Car Driver Abuses Ambulance Driver in Anekal

ಆನೇಕಲ್​​, ಫೆಬ್ರವರಿ 22: ಬೆಂಗಳೂರು ಹೊರವಲಯದಲ್ಲಿ ಆ್ಯಂಬುಲೆನ್ಸ್ ಅಡ್ಡಗಟ್ಟಿ ರಸ್ತೆ ರಂಪಾಟ ನಡೆಸಿರುವ ಘಟನೆ ವರದಿಯಾಗಿದೆ. ಆನೇಕಲ್‌ನ ಅಲಯನ್ಸ್ ಕಾಲೇಜು ಮುಂಭಾಗದಲ್ಲಿ ಘಟನೆ ನಡೆದಿದ್ದು, ರೋಗಿಯೊಬ್ಬರನ್ನು ಕರೆತರಲು ತೆರಳುತ್ತಿದ್ದ ಆ್ಯಂಬುಲೆನ್ಸ್​​ನ ಕಾರು ಚಾಲಕ ಮತ್ತು ಕೆಲ ವಿದ್ಯಾರ್ಥಿಗಳು ತಡೆದಿದ್ದಾರೆ. ಕಾಲೇಜು ಮುಂಭಾಗದ ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ಕಾರಿಗೆ ಆ್ಯಂಬುಲೆನ್ಸ್  ಸ್ಪರ್ಶಿಸಿದೆ ಎಂಬ ಕಾರಣಕ್ಕೆ  ಗಲಾಟೆ ಶುರುವಾಗಿದೆ. ಸುಮಾರು ಹದಿನೈದು ನಿಮಿಷಗಳ ಕಾಲ ಆ್ಯಂಬುಲೆನ್ಸ್ ತಡೆದು ನಿಲ್ಲಿಸಿದ್ದು, ಆ್ಯಂಬುಲೆನ್ಸ್ ಚಾಲಕನನ್ನು ಅಶ್ಲೀಲ ಪದಗಳಿಂದ ಬಾಯಿಗೆ ಬಂದಂತೆ ನಿಂದಿಸಲಾಗಿದೆ. ರೋಗಿಗಳನ್ನು ಸಾಗಿಸುವ ತುರ್ತು ವಾಹನಕ್ಕೆ ಅಡ್ಡಿಪಡಿಸಿ, ಅದರ ಸಿಬ್ಬಂದಿಗೆ ನಿಂದಿಸಿದ ಕಾರು ಚಾಲಕನ ನಡೆಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇಂತಹ ಘಟನೆಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂಬ ಒತ್ತಾಯ ಕೇಳಿಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಜೈ ಹನುಮಾನ’ ಚಿತ್ರದ ಮುಹೂರ್ತ: ಅಂಜನಾದ್ರಿ ಬೆಟ್ಟಕ್ಕೆ ಬಂದ ರಿಷಬ್ ಶೆಟ್ಟಿ – Kannada News | Rishab Shetty arrives at Anjanadri Hills for Jai Hanuman movie muhurtha

ರಿಷಬ್ ಶೆಟ್ಟಿ ಅವರು ‘ಜೈ ಹನುಮಾನ್’ (Jai Hanuman) ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ತೆಲುಗಿನ ಪ್ರಶಾಂತ್ ವರ್ಮಾ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇಂದು (ಫೆಬ್ರವರಿ 22) ಕರ್ನಾಟಕದಲ್ಲಿ ಈ ಸಿನಿಮಾಗೆ ಮುಹೂರ್ತ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಅಂಜನಾದ್ರಿ ಬೆಟ್ಟಕ್ಕೆ ಇಡೀ ಚಿತ್ರತಂಡ ಆಗಮಿಸಿದೆ. ರಿಷಬ್ ಶೆಟ್ಟಿ ಜೊತೆ ಪತ್ನಿ ಪ್ರಗತಿ ಶೆಟ್ಟಿ ಕೂಡ ಆಗಮಿಸಿದ್ದಾರೆ. ಹನುಮ ಹುಟ್ಟಿದ ಸ್ಥಳ ಅಂಜನಾದ್ರಿಯಲ್ಲಿಯೇ ‘ಜೈ ಹನುಮಾನ್’ ಸಿನಿಮಾಗೆ ಪೂಜೆ ಮಾಡಿರುವುದು ವಿಶೇಷ. ಈ ಮೂಲಕ ಚಿತ್ರಕ್ಕೆ ಚಾಲನೆ ಸಿಕ್ಕಿದೆ. ರಿಷಬ್ ಶೆಟ್ಟಿ (Rishab Shetty) ಅವರನ್ನು ನೋಡಲು ಅಂಜನಾದ್ರಿ ಬೆಟ್ಟದಲ್ಲಿ ಅಭಿಮಾನಿಗಳು ಜಮಾಯಿಸಿದ್ದರು. ಅವರನ್ನು ನೋಡಿ ಜೈಕಾರ ಕೂಗಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಎಂಟು ಮಂದಿ ಶಂಕಿತ ಉಗ್ರರ ಬಂಧನ; ಗಾರ್ಮೆಂಟ್ಸ್ ಫ್ಯಾಕ್ಟರಿ ಮತ್ತಿತರೆಡೆಯಲ್ಲಿ ಕೆಲಸ ಮಾಡುತ್ತಿದ್ದವರಿವರು – Kannada News | Police arrest many terror suspects from Tamil Nadu and West Bengal

ನವದೆಹಲಿ, ಫೆಬ್ರುವರಿ 22: ರಾಷ್ಟ್ರರಾಜಧಾನಿಯಲ್ಲಿ ಮತ್ತೊಂದು ಉಗ್ರ ದಾಳಿಗೆ ಸಂಚು (Terror plot) ರೂಪಿಸಲಾಗುತ್ತಿದೆ ಎನ್ನುವ ಗುಪ್ತಚರ ಮಾಹಿತಿ ಬರುತ್ತಿರುವ ಬೆನ್ನಲ್ಲೇ ಎಂಟು ಮಂದಿ ಉಗ್ರ ಶಂಕಿತರನ್ನು ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡು ಮತ್ತು ಪಶ್ಚಿಮ ಬಂಗಾಳದಲ್ಲಿ ಈ ಎಂಟು ಮಂದಿಯನ್ನು ಬಂಧಿಸಲಾಗಿದೆ. ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಗಾರ್ಮೆಂಟ್ಸ್ ಫ್ಯಾಕ್ಟರಿಗಳಲ್ಲಿ ಆರು ಮಂದಿ ಶಂಕಿತರು ಬಂಧಿತರಾದರೆ, ಪಶ್ಚಿಮ ಬಂಗಾಳದಲ್ಲಿ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ತಮಿಳುನಾಡಿನಲ್ಲಿ ಬಂಧಿತರಾದ ಆರು ಮಂದಿ ಶಂಕಿತ ಉಗ್ರರನ್ನು ಮಿಜಾನುರ್ ರಹಮಾನ್, ಮೊಹಮ್ಮದ್ ಶಬತ್, ಉಮರ್, ಮೊಹಮ್ಮದ್ ಲಿಟನ್, ಮೊಹಮ್ಮದ್ ಶಾಹೀದ್ ಮತ್ತು ಮೊಹಮ್ಮದ್ ಉಜ್ಜಲ್ ಎಂದು ಹೇಳಲಾಗಿದೆ. ಈ ಆರೋಪಗಳು ನಕಲಿ ಆಧಾರ್ ಕಾರ್ಡ್ ಅನ್ನು ಬಳಸಿದ್ದಾರೆ. ಈ ಎಂಟು ಮಂದಿಯಲ್ಲಿ ಒಬ್ಬಾತ ಬಾಂಗ್ಲಾದೇಶದ ನಾಗರಿಕ ಎನ್ನಲಾಗಿದೆ.

ಇದನ್ನೂ ಓದಿ: Mann Ki Baat: AI ಇಂಪ್ಯಾಕ್ಟ್ ಸಮಿಟ್, ಡಿಜಿಟಲ್​​ ವಂಚನೆ ಸೇರಿ ಹಲವು ಅಂಶ ಉಲ್ಲೇಖಿಸಿದ ನಮೋ

ತಮಿಳುನಾಡು ಪೊಲೀಸರು ಶಂಕಿತರನ್ನು ಬಂಧಿಸಿದ್ದು ದೆಹಲಿ ಪೊಲೀಸರಿಗೆ ಅವರನ್ನು ಒಪ್ಪಿಸುತ್ತಿದ್ದಾರೆ. ಆರೋಪಿಗಳಿಂದ ಹತ್ತಕ್ಕೂ ಹೆಚ್ಚು ಮೊಬೈಲ್ ಫೋನ್​ಗಳು ಹಾಗೂ 16 ಸಿಮ್ ಕಾರ್ಡ್​ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದೆಹಲಿಯಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು?

ದೆಹಲಿಯ ಕೆಂಪು ಕೋಟೆ ಹಾಗು ದೇಶದ ವಿವಿಧೆಡೆ ಪ್ರಮುಖ ಧಾರ್ಮಿಕ ಸ್ಥಳಗಳಲ್ಲಿ ಪಾಕಿಸ್ತಾನದ ಲಷ್ಕರೆ ತೈಬಾ ಸಂಘಟನೆ ಬಾಂಬ್ ಸ್ಫೋಟಕ್ಕೆ ಸಂಚು ರೂಪಿಸುತ್ತಿದೆ ಎಂದು ಗುಪ್ತಚರ ಮಾಹಿತಿ ಎಚ್ಚರಿಸಿದೆ. ಫೆಬ್ರುವರಿ 6ರಂದು ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ಮಸೀದಿಯೊಂದರಲ್ಲಿ ಸಂಭವಿಸಿದ ಆತ್ಮಹತ್ಯಾ ದಾಳಿಗೆ ಪ್ರತೀಕಾರವಾಗಿ ಭಾರತದಲ್ಲಿ ಬಾಂಬ್ ದಾಳಿಗೆ ಸಂಚು ರೂಪಿಸಲಾಗುತ್ತಿದೆ ಎಂದು ವರದಿಗಳು ಹೇಳುತ್ತಿವೆ. ಫೆ. 6 ಬಾಂಬ್ ದಾಳಿ ಘಟನೆಗೆ ಇಸ್ಲಾಮಿಕ್ ಸ್ಟೇಟ್ ಸಂಘಟನೆ ಹೊಣೆ ಹೊತ್ತುಕೊಂಡಿದೆ. ಆದರೆ, ಭಾರತದ ಮೇಲೆ ಉಗ್ರರು ಪ್ರತೀಕಾರ ತೀರಿಸಿಕೊಳ್ಳಲು ಮುಂದಾದಂತಿದೆ.

ಇದನ್ನೂ ಓದಿ: ಭಾರತೀಯ ಉತ್ಪನ್ನಗಳು ಅತ್ಯುತ್ತಮ ಗುಣಮಟ್ಟದ ಪ್ರತೀಕವಾಗಬೇಕು; ಪ್ರಧಾನಿ ಮೋದಿ

ಮೂರು ತಿಂಗಳ ಹಿಂದೆ, ನವೆಂಬರ್ 10ರಂದು ಕೆಂಪು ಕೋಟೆಯಲ್ಲಿ ಕಾರ್ ಬಾಂಬ್ ಅನ್ನು ಉಗ್ರರು ಸ್ಫೋಟಿಸಿ 12 ಮಂದಿಯನ್ನು ಬಲಿತೆಗೆದುಕೊಂಡಿದ್ದರು. ಅದೇ ರೀತಿಯ ಬಾಂಬ್ ದಾಳಿಗಳಿಗೆ ಪಾಕ್ ಪ್ರಚೋದಿತ ಉಗ್ರರು ಯೋಜಿಸಿದ್ದಾರೆ ಎಂಬುದು ಗುಪ್ತಚರರಿಗೆ ಸಿಕ್ಕಿರುವ ಮಾಹಿತಿ. ಇದೀಗ ಬಂಧಿತರಾಗಿರುವ ಶಂಕಿತ ಉಗ್ರರು ದೆಹಲಿ ಹಾಗೂ ಕೋಲ್ಕತಾದಲ್ಲಿ ಹತ್ತಕ್ಕೂ ಹೆಚ್ಚು ಸ್ಥಳಗಳಲ್ಲಿ ಕಾಶ್ಮೀರ ಕುರಿತಾಗಿ ಪೋಸ್ಟರ್​ಗಳನ್ನು ಹಾಕುತ್ತಿದ್ದುದು ಬೆಳಕಿಗೆ ಬಂದಿದೆ. ಪೊಲೀಸರು ಇವರ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಶಿಕ್ಷಕರ ನೇಮಕಾತಿ ಬಗ್ಗೆ ಬಿಗ್​​ ಅಪ್ಡೇಟ್​​ ಕೊಟ್ಟ ಸಿಎಂ ಸಿದ್ದರಾಮಯ್ಯ: ಇಲ್ಲಿದೆ ಮಾಹಿತಿ – Kannada News | CM Siddaramaiah on Teacher Recruitment: Promises Phased Hiring

ಬೆಂಗಳೂರು, ಫೆಬ್ರವರಿ 22: ವಿಶ್ವವಿದ್ಯಾಲಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಶಿಕ್ಷಕರ ನೇಮಕಾತಿ ಮತ್ತು ಉನ್ನತ ಶಿಕ್ಷಣ ಕ್ಷೇತ್ರದ ಸವಾಲುಗಳ ಕುರಿತು ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಮೌಲ್ಯವರ್ಧನೆಗೆ ಶಿಕ್ಷಕರು ಅತ್ಯಗತ್ಯ. ಪ್ರಸ್ತುತ, ವಿಶ್ವವಿದ್ಯಾಲಯಗಳಲ್ಲಿ ಸುಮಾರು ಶೇ.65ರಷ್ಟು ಬೋಧಕ ಸಿಬ್ಬಂದಿ ಹುದ್ದೆಗಳು ಖಾಲಿ ಇವೆ. ಈ ಕೊರತೆಯನ್ನು ನಿಭಾಯಿಸಲು ಸರ್ಕಾರ ಬದ್ಧವಾಗಿದೆ. ಕಳೆದ ವರ್ಷ 2000 ಶಿಕ್ಷಕರನ್ನು ಭರ್ತಿ ಮಾಡಲಾಗಿದೆ. ಮುಂದೆಯೂ ಹಂತ ಹಂತವಾಗಿ ನೇಮಕಾತಿ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ. ಆದಾಗ್ಯೂ, ನೇಮಕಾತಿ ಆಗುವವರೆಗೆ ಕಾಯಲು ಸಾಧ್ಯವಿಲ್ಲದ ಕಾರಣ ಅತಿಥಿ ಉಪನ್ಯಾಸಕರ ಸೇವೆಗಳನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Love Tragedy: ಕ್ಷುಲ್ಲಕ ಕಾರಣಕ್ಕೆ ಜಗಳ; ಪ್ರೇಯಸಿ ಸಾವನ್ನಪ್ಪಿದ ಬೆನ್ನಲ್ಲೇ ವಿಷ ಕುಡಿದು ನೇಣಿಗೆ ಶರಣಾದ ಟೆಕ್ಕಿ – Kannada News | Hyderabad Techie Suicide: Love Story Ends in Tragedy, Software Engineer Found Dead in Bhimili

ಹೈದರಾಬಾದ್‌, ಫೆಬ್ರವರಿ 22: ಹೈದರಾಬಾದ್‌ನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಯುವಕನೊಬ್ಬ ವಿಶಾಖಪಟ್ಟಣ ಜಿಲ್ಲೆಯ ಭೀಮಿಲಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಚಲನ ಮೂಡಿಸಿದೆ. ಕೆಲವೇ ದಿನಗಳ ಅಂತರದಲ್ಲಿ ಪ್ರೇಮಿಗಳಿಬ್ಬರು ಸಾವನ್ನಪ್ಪಿರುವ ಘಟನೆ ಎರಡೂ ಕುಟುಂಬಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ.

ಮೃತ ಯುವಕನನ್ನು ಶ್ಯಾಮ್ ಕುಮಾರ್ ಎಂದು ಗುರುತಿಸಲಾಗಿದ್ದು, ಆತ ಹೈದರಾಬಾದ್‌ನಲ್ಲಿ ಉದ್ಯೋಗದಲ್ಲಿದ್ದು, ಪಾವನಿ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ತಿಳಿದುಬಂದಿದೆ. ಪ್ರೇಮಿಗಳ ನಡುವೆ ಇತ್ತೀಚೆಗೆ ಜಗಳ ಉಂಟಾದ ಹಿನ್ನೆಲೆಯಲ್ಲಿ, ಪಾವನಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕುಟುಂಬಸ್ಥರು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೂ, ಫಲಕಾರಿಯಾಗದೇ ಯುವತಿ ಸಾವನ್ನಪ್ಪಿದ್ದಾಳೆ.

ಪಾವನಿ ಬರೆದಿದ್ದ ಆತ್ಮಹತ್ಯೆ ಪತ್ರದ ಆಧಾರದ ಮೇಲೆ ಹೈದರಾಬಾದ್‌ನ ಜೀಡಿಮೆಟ್ಲಾ ಪೊಲೀಸ್ ಠಾಣೆಯಲ್ಲಿ ಶ್ಯಾಮ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆಯೇ ಕಾಣೆಯಾಗಿದ್ದ ಶ್ಯಾಮ್ ವಿಶಾಖಪಟ್ಟಣಕ್ಕೆ ತೆರಳಿ, ಭೀಮಿಲಿಯಲ್ಲಿರುವ ಲಾಡ್ಜ್‌ನಲ್ಲಿ ವಾಸವಿದ್ದ.

ಇದನ್ನೂ ಓದಿ: ಪೊಲೀಸ್​ ವ್ಯಾನ್​​ಗೆ​​ ಟ್ರಕ್​​ ಡಿಕ್ಕಿ; ಐವರು ಸ್ಥಳದಲ್ಲೇ ಸಾವು, ಮೂವರು ಗಂಭೀರ

ಲಾಡ್ಜ್‌ನಲ್ಲಿ ಶವ ಪತ್ತೆ:

ಶ್ಯಾಮ್ ತಂಗಿದ್ದ ರೂಮ್​​ ಶುಕ್ರವಾರ ಮಧ್ಯಾಹ್ನವರೆಗೂ ತೆರೆಯದ ಕಾರಣ ಲಾಡ್ಜ್ ಸಿಬ್ಬಂದಿಗೆ ಅನುಮಾನ ಉಂಟಾಗಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿ, ಬೇರೆ ಕೀಲಿಯಿಂದ ಬಾಗಿಲು ತೆರೆದಾಗ ಶ್ಯಾಮ್ ಕುಮಾರ್ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ಕೊಠಡಿಯಲ್ಲಿದ್ದ ಇಲಿ ವಿಷದ ಬಾಟಲಿ ಮತ್ತು ಒಂದು ಪತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ಶ್ಯಾಮ್ ಮದ್ಯದಲ್ಲಿ ವಿಷ ಬೆರೆಸಿ ಸೇವಿಸಿ ಬಳಿಕ ನೇಣು ಬಿಗಿದುಕೊಂಡಿರುವ ಸಾಧ್ಯತೆ ವ್ಯಕ್ತವಾಗಿದೆ. ಪತ್ರದಲ್ಲಿ “ನನ್ನ ಸಾವಿಗೆ ಯಾರೂ ಕಾರಣರಲ್ಲ. ಕ್ಷಮಿಸಿ ತಾಯಿ” ಎಂದು ಬರೆದಿರುವುದು ತಿಳಿದುಬಂದಿದೆ.

ಪಾವನಿಯ ಆತ್ಮಹತ್ಯೆ ಪತ್ರದ ಆಧಾರದ ಮೇಲೆ ಶ್ಯಾಮ್ ವಿರುದ್ಧ ಪ್ರಕರಣ ದಾಖಲಾಗಿದ್ದುದರಿಂದ ಮಾನಸಿಕ ಒತ್ತಡದಲ್ಲಿದ್ದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ಶ್ಯಾಮ್ ವಿರುದ್ಧ ಅನಕಪಲ್ಲಿ ಹಾಗೂ ಆನಂದಪುರಂ ಪ್ರದೇಶಗಳಲ್ಲಿ ಹಿಂದೆಯೂ ಕೆಲವು ಪ್ರಕರಣಗಳು ದಾಖಲಾಗಿದ್ದವು ಎಂಬ ಮಾಹಿತಿ ಹೊರಬಂದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:36 pm, Sun, 22 February 26

Source link

ಜಿಬಿಎ ನಿರ್ಲಕ್ಷ್ಯ! ಇಂದಿರಾ ಕ್ಯಾಂಟೀನ್​ನಲ್ಲಿ ಅಧ್ವಾನ – Kannada News | Indira Canteens and Bengaluru Parks Face Neglect: A TV9 Reality Check Reveals GBAs Failures

ಬೆಂಗಳೂರು, ಫೆಬ್ರವರಿ 22: ಜಿಬಿಎ ನಿರ್ಲಕ್ಷ್ಯದಿಂದ ಕಾಂಗ್ರೆಸ್‌ನ ಕನಸಿನ ಯೋಜನೆಯಾದ ಇಂದಿರಾ ಕ್ಯಾಂಟೀನ್‌ಗಳ ಅವ್ಯವಸ್ಥೆ ಟಿವಿ9 ರಿಯಾಲಿಟಿ ಚೆಕ್‌ನಲ್ಲಿ ಬಹಿರಂಗಗೊಂಡಿದೆ. ಬಡವರ ಹಸಿವು ನೀಗಿಸುವ ಉದ್ದೇಶದಿಂದ ಆರಂಭವಾದ ಇಂದಿರಾ ಕ್ಯಾಂಟೀನ್‌ಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ. ಬೆಂಗಳೂರಿನ ಸಂಪಂಗಿರಾಮನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ಮೆನು ಪ್ರಕಾರ ತಿಂಡಿ ನೀಡಲಾಗುತ್ತಿಲ್ಲ. ಶನಿವಾರ ವಾಂಗೀಬಾತ್ ಮತ್ತು ಇಡ್ಲಿ ನೀಡಬೇಕಿದ್ದರೂ, ಕೇವಲ ಇಡ್ಲಿ ಮತ್ತು ಸಾಂಬಾರ್ ಮಾತ್ರ ಒದಗಿಸಲಾಗುತ್ತಿದೆ. ಚಟ್ನಿ ನೀಡದೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬೆಲ್ಲಾ ಆರೋಪಗಳು ಕೇಳಿಬಂದಿದ್ದು, ಗ್ರಾಹಕರು ಈ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಹಿಂದಿನ ಉತ್ತಮ ಆಹಾರ ಆಯ್ಕೆಗಳು ಈಗ ಲಭ್ಯವಿಲ್ಲ ಎಂದು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದು, ಇದು ಗ್ರಾಹಕರ ಸಂಖ್ಯೆ ಇಳಿಕೆಗೆ ಕಾರಣವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Gold Rate Today: ಚಿನ್ನದ ಬೆಲೆ ಗ್ರಾಮ್​ಗೆ 285 ರೂ ಹೆಚ್ಚಳ; ಇಲ್ಲಿದೆ ದರಪಟ್ಟಿ – Kannada News | Gold Price Today on 22nd February 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಫೆಬ್ರುವರಿ 22: ಚಿನ್ನ ಮತ್ತು ಬೆಳ್ಳಿ ಬೆಲೆಗಳು ಮತ್ತೆ ಏರಿಕೆಯ ಹಾದಿಗೆ ಬಂದಂತಿದೆ. ಈ ವಾರಾಂತ್ಯದಲ್ಲಿ ಚಿನ್ನದ ಬೆಲೆಯಲ್ಲಿ (Gold Rates) ಗ್ರಾಮ್​ಗೆ 285 ರೂನಷ್ಟು ಹೆಚ್ಚಳ ಆಗಿದೆ. ಭಾರತದಲ್ಲಿ ಮಾತ್ರವಲ್ಲ, ವಿದೇಶಗಳಲ್ಲಿ ಬಹುತೇಕ ಕಡೆ ಇದರ ಬೆಲೆಯಲ್ಲಿ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಕೂಡ ಗ್ರಾಮ್​ಗೆ 5 ರೂನಿಂದ 20 ರೂವರೆಗೆ ಹೆಚ್ಚಳ ಆಗಿದೆ. ಬೆಂಗಳೂರು ಮೊದಲಾದೆಡೆ ಬೆಳ್ಳಿ ಬೆಲೆ 5 ರೂ ಏರಿ 275 ರೂ ಮುಟ್ಟಿದೆ. ಚೆನ್ನೈ ಮೊದಲಾದೆಡೆ ಬೆಲೆ 20 ರೂ ಹೆಚ್ಚಳಗೊಂಡು 290 ರೂ ಮುಟ್ಟಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,46,000 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,59,280 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 27,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,46,000 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 27,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 29,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಫೆಬ್ರುವರಿ 22ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,928 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,600 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,946 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,928 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,600 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 275 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,600 ರೂ
  • ಚೆನ್ನೈ: 14,680 ರೂ
  • ಮುಂಬೈ: 14,600 ರೂ
  • ದೆಹಲಿ: 14,615 ರೂ
  • ಕೋಲ್ಕತಾ: 14,600 ರೂ
  • ಕೇರಳ: 14,600 ರೂ
  • ಅಹ್ಮದಾಬಾದ್: 14,605 ರೂ
  • ಜೈಪುರ್: 14,615 ರೂ
  • ಲಕ್ನೋ: 14,615 ರೂ
  • ಭುವನೇಶ್ವರ್: 14,600 ರೂ

ಇದನ್ನೂ ಓದಿ: ಶ್ರೀಮಂತ ದೇಶಗಳಿಗೆ ಎಐ ಕುತ್ತು; ಶೇ. 60 ಉದ್ಯೋಗನಷ್ಟ ಸಾಧ್ಯತೆ: ಐಎಂಎಫ್ ಎಚ್ಚರಿಕೆ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 619 ರಿಂಗಿಟ್ (14,387 ರುಪಾಯಿ)
  • ದುಬೈ: 563 ಡಿರಾಮ್ (13,908 ರುಪಾಯಿ)
  • ಅಮೆರಿಕ: 157 ಡಾಲರ್ (14,244 ರುಪಾಯಿ)
  • ಸಿಂಗಾಪುರ: 199.30 ಸಿಂಗಾಪುರ್ ಡಾಲರ್ (14,235 ರುಪಾಯಿ)
  • ಕತಾರ್: 559 ಕತಾರಿ ರಿಯಾಲ್ (13,904 ರೂ)
  • ಸೌದಿ ಅರೇಬಿಯಾ: 573 ಸೌದಿ ರಿಯಾಲ್ (13,859 ರುಪಾಯಿ)
  • ಓಮನ್: 59.95 ಒಮಾನಿ ರಿಯಾಲ್ (14,127 ರುಪಾಯಿ)
  • ಕುವೇತ್: 46.18 ಕುವೇತಿ ದಿನಾರ್ (13,717 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 277 ರೂ
  • ಚೆನ್ನೈ: 290 ರೂ
  • ಮುಂಬೈ: 275 ರೂ
  • ದೆಹಲಿ: 275 ರೂ
  • ಕೋಲ್ಕತಾ: 275 ರೂ
  • ಕೇರಳ: 290 ರೂ
  • ಅಹ್ಮದಾಬಾದ್: 275 ರೂ
  • ಜೈಪುರ್: 275 ರೂ
  • ಲಕ್ನೋ: 275 ರೂ
  • ಭುವನೇಶ್ವರ್: 290 ರೂ
  • ಪುಣೆ: 275

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link