Headlines

Weekly Career Horoscope: ನಿಮ್ಮ ರಾಶಿಗನುಗುಣವಾಗಿ ಫೆಬ್ರವರಿ ಕೊನೆಯ ವಾರದ ಉದ್ಯೋಗ ಭವಿಷ್ಯ ತಿಳಿಯಿರಿ – Kannada News | Job Horoscope Feb 22 28, 2026: Career Growth and New Opportunities

ಫೆಬ್ರವರಿ 22ರಿಂದ 28 ರವರೆಗೆ ಕೊನೆಯ ವಾರವಾಗಿದೆ. ಗ್ರಹಗತಿಗಳ ಪರಿವರ್ತನೆಯಿಂದ ಸಂಪತ್ತು, ಅಧಿಕಾರಿಗಳು ಬರಲಿದ್ದು, ಕೆಲವರಿಗೆ ಬರುವ ಸೂಚನೆಯೂ ಸಿಗುವುದು. ಯಾವುದನ್ನೂ ನಿರ್ಲಕ್ಷಿಸದೇ ಪ್ರಾಮಾಣಿಕತೆಯಿಂದ ಇರುವಂತೆ ನೋಡಿಕೊಳ್ಳಿ. ​ಮೇಷ: ವೃತ್ತಿಯಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿವೆ. ಮೇಲಧಿಕಾರಿಗಳ ಬೆಂಬಲ ಸಿಗಲಿದ್ದು, ನಿಮ್ಮ ಕಾರ್ಯಕ್ಷಮತೆಗೆ ಮೆಚ್ಚುಗೆ ದೊರೆಯಲಿದೆ. ಆದರೂ ಸಹೋದ್ಯೋಗಿಗಳ ನಡುವೆ ಸಣ್ಣಪುಟ್ಟ ಪೈಪೋಟಿ ಎದುರಾಗಬಹುದು, ಎಚ್ಚರಿಕೆ ಇರಲಿ. ​ವೃಷಭ: ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಅಥವಾ ರಫ್ತು-ಆಮದು ವ್ಯವಹಾರದವರಿಗೆ ಈ ವಾರ ಅತ್ಯಂತ ಲಾಭದಾಯಕ. ಕೆಲಸದ ನಿಮಿತ್ತ ದೂರದ…

Read More

ಈ ವರ್ಣ ರಂಜಿತ ಧ್ವಜವನ್ನು ಬೈಕ್‌ಗಳಲ್ಲಿ ಹಾಕುವುದೇಕೆ ಗೊತ್ತಾ? – Kannada News | Do you know the purpose of putting the Tibetan flag on bikes?

ಟಿಬೆಟಿಯನ್‌ ಪ್ರಾರ್ಥನಾ ಧ್ವಜImage Credit source: Pinterest ಇತ್ತೀಚಿನ ದಿನಗಳಲ್ಲಿ ಲಡಾಕ್‌ನಂತಹ ಹಿಲ್‌ ಸ್ಟೇಷನ್‌ಗಳಿ ಬೈಕ್‌ ರೈಡ್‌ ಹೋಗುವಂತಹದ್ದು ಟ್ರೆಂಡ್‌ ಆಗಿದೆ. ಯುವ ಜನರಂತೂ ರಜಾ ದಿನಗಳಲ್ಲಿ ಬ್ಯಾಗ್‌ ಪ್ಯಾಕ್‌ ಮಾಡಿ ಈ ರೀತಿ ರೈಡ್‌ಗಳಿಗೆ ಹೋಗುತ್ತಿರುತ್ತಾರೆ. ಹೀಗೆ ದೂರದೂರುಗಳಿಗೆ ರೈಡ್‌ ಹೋಗುವವರು ತಮ್ಮ ಬೈಕ್‌ಗಳಲ್ಲಿ (bikes)ಐದು ಬಣ್ಣಗಳಿಂದ ಕೂಡಿದ ಟಿಬೆಟಿಯನ್ ಫ್ಲ್ಯಾಗ್‌ ಒಂದನ್ನು ನೇತುಹಾಕಿರುತ್ತಾರೆ. ಬಹುಶಃ ನೀವು ಕೂಡ ಇದನ್ನು ಗಮನಿಸಿರುತ್ತೀರಿ ಅಲ್ವಾ. ಸಾಕಷ್ಟು ಮಂದಿ ಇದನ್ನು ಫ್ಯಾಶನ್‌ ಮತ್ತು ಅಲಂಕಾರಕ್ಕಾಗಿ ಹಾಕಿರುತ್ತಾರೆ ಎಂದು ಭಾವಿಸುತ್ತಾರೆ….

Read More

ಅಭಿಮಾನಿಗಳ ಆ ಒಂದು ಮಹತ್ ಕಾರ್ಯಕ್ಕೆ ಜೈಲಿನಿಂದಲೇ ಧನ್ಯವಾದ ಹೇಳಿದ ದರ್ಶನ್ – Kannada News | Darshan Convey Happy To Fans After fans did good work on his birthday

ನಟ ದರ್ಶನ್ ಅವರು ಜೈಲಿನಲ್ಲಿ ಇದ್ದಾರೆ. ಪತ್ನಿ ವಿಜಯಲಕ್ಷ್ಮೀ, ಸಹೋದರನಂತೆ ಇರುವ ನಟ ಧನ್ವೀರ್ ಅವರು ಹೊರಗಿನ ಅಪ್​​ಡೇಟ್​​ನ ದರ್ಶನ್​ಗೆ ನೀಡುತ್ತಿದ್ದಾರೆ. ದರ್ಶನ್ ಜನ್ಮದಿನ (ಫೆಬ್ರವರಿ 16) ಪ್ರಯುಕ್ತ ಒಳ್ಳೊಳ್ಳೆಯ ಕೆಲಸಗಳನ್ನು ಅಭಿಮಾನಿಗಳು ಮಾಡಿದ್ದಾರೆ. ಈ ಸಂದರ್ಭದ ವಿಡಿಯೋನ ಕೊಲ್ಯಾಜ್ ಮಾಡಿ ದರ್ಶನ್ ಸೋಶಿಯಲ್ ಮೀಡಿಯಾ ಖಾತೆ ಮೂಲಕ ಹಂಚಿಕೊಳ್ಳಲಾಗಿದೆ. ‘ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡ ನನ್ನೆಲ್ಲಾ ಸೆಲೆಬ್ರಿಟಿಗಳಿಗೆ ಧನ್ಯವಾದ’ ಎಂದು ದರ್ಶನ್ ಬರೆದುಕೊಂಡಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

ದೇಶವೇ ನಾಚಿಕೆ ಪಡುವಂತಾಗಿದೆ; ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕರ ಟೀಕೆ – Kannada News | No one should demean our country Opposition leaders slam Youth Congress protest at AI Impact Summit

ನವದೆಹಲಿ, ಫೆಬ್ರವರಿ 21: ನವದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ (AI Impact Summit) ಸಂದರ್ಭದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ಟಾಪ್‌ಲೆಸ್ ಪ್ರತಿಭಟನೆ ನಡೆಸಿದ ನಂತರ ರಾಜಕೀಯ ವಿವಾದ ಭುಗಿಲೆದ್ದಿದೆ. ಇಡೀ ಜಗತ್ತಿನ ನಾಯಕರು ಆಗಮಿಸಿದ್ದ ಕೃತಕ ಬುದ್ಧಿಮತ್ತೆ (ಎಐ) ಮೇಲೆ ಕೇಂದ್ರೀಕರಿಸಿದ ಅಂತಾರಾಷ್ಟ್ರೀಯ ಸಭೆಯಲ್ಲಿ ಕಾಂಗ್ರೆಸ್​ ನಾಯಕರ ಇಂತಹ ವರ್ತನೆ ಸೂಕ್ತವಲ್ಲ ಎಂದು ಹಲವಾರು ವಿಪಕ್ಷ ನಾಯಕರು ಟೀಕಿಸಿದ್ದಾರೆ. ಭಾರತ ಮತ್ತು ವಿದೇಶಗಳಿಂದ ಪ್ರಮುಖ ಪ್ರತಿನಿಧಿಗಳು ಭಾಗವಹಿಸಿದ್ದ ಎಐ ಶೃಂಗಸಭೆಯು ಹೊಸ ತಂತ್ರಜ್ಞಾನಗಳಲ್ಲಿ ಭಾರತದ…

Read More

ಪ್ರಧಾನಿ ಉದ್ಘಾಟಿಸಿದ ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಕೊತ್ತೂರು ಶಾಸಕ! – Kannada News | Kolar MLA Rages: Vehmagal Helicopter Unit Inauguration Sparks Local Disregard Controversy

ಕೋಲಾರ, ಫೆಬ್ರವರಿ 21: ಮಂಗಳವಾರ (ಫೆ.17) ಪ್ರಧಾನಿ ನರೇಂದ್ರ ಮೋದಿಯವರಿಂದ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ಜೋಡಣಾ ಘಟಕ ಉದ್ಘಾಟಿಸಲ್ಪಟ್ಟಿತು. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಿವಾಸಿಗಳನ್ನು ನಿರ್ಲಕ್ಷ್ಯ ಮಾಡಿರುವುದಾಗಿ ಜಿಲ್ಲೆಯ ವೇಮಗಲ್ ಪಟ್ಟಣ ಪಂಚಾಯತ್ ಸಭೆಯಲ್ಲಿ ಕೈಗಾರಿಕೆಗಳ ವಿರುದ್ಧ ಶಾಸಕ ಕೊತ್ತೂರು ಮಂಜುನಾಥ್ ಕಿಡಿಕಾರಿದ್ದಾರೆ.  ಅಲ್ಲದೆ  ಘಟಕಕ್ಕೆ ವಿದ್ಯುತ್ ಪೂರೈಕೆ ನಿಲ್ಲಿಸಬೇಕೆಂದು ಹೇಳಿರುವ ಅವರ ಹೇಳಿಕೆಗಳಿಂದ ವಿವಾದಗಳೆದ್ದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಹೆಲಿಕಾಪ್ಟರ್ ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ವೇಮಗಲ್ ಪಟ್ಟಣ ಪಂಚಾಯತ್ ಅಧ್ಯಕ್ಷರನ್ನು ಆಹ್ವಾನಿಸದೇ…

Read More

‘ಹೌಸ್ ಆಫ್ ಡ್ರಾಗನ್’ ಸೀಸನ್ 3 ಟೀಸರ್ ರಿಲೀಸ್: ಈ ಬಾರಿ ಇನ್ನೂ ರೋಚಕ – Kannada News | House of the Dragon season 3 teaser released, web series releasing in June

ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಹಾಲಿವುಡ್‌ನ ದೈತ್ಯ ವೆಬ್ ಸರಣಿ ‘ಹೌಸ್ ಆಫ್ ದಿ ಡ್ರ್ಯಾಗನ್’ (House Of the Dragon) ಈಗ ತನ್ನ ಮೂರನೇ ಸೀಸನ್‌ನೊಂದಿಗೆ ಮರಳಲು ಸಜ್ಜಾಗಿದೆ. ಈ ಸರಣಿಯ ಬಗ್ಗೆ ಹೆಚ್ಚು ಗೊತ್ತಿಲ್ಲದವರಿಗಾಗಿ ಹೇಳಬೇಕೆಂದರೆ, ಇದು ಜಗತ್ತಿನ ನಂಬರ್ 1 ವೆಬ್ ಸರಣಿಯಾದ ‘ಗೇಮ್ ಆಫ್ ಥ್ರೋನ್ಸ್’ ಸರಣಿಯ ಪ್ರೀಕ್ವೆಲ್ ಆಗಿದ್ದು, ‘ಗೇಮ್ ಆಫ್ ಥ್ರೋನ್ಸ್’ ಕತೆ ನಡೆಯುವ ಸುಮಾರು 200 ವರ್ಷಗಳ ಹಿಂದೆ ನಡೆದ ಕಥೆ ಆಗಿದೆ. ರಾಜಮನೆತನದ ಆಂತರಿಕ ಕಲಹ, ಬೆಂಕಿ…

Read More

ISRO VSSC Internship 2026: ISRO ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ಇಂಟರ್ನ್‌ಶಿಪ್​​​ಗೆ ಅರ್ಜಿ ಆಹ್ವಾನ – Kannada News | ISRO VSSC Internship 2026: Apply Now for Space Research Opportunities!

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ISRO) ಆಶ್ರಯದಲ್ಲಿರುವ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ(VSSC) ವಿದ್ಯಾರ್ಥಿಗಳಿಗೆ ಮಹತ್ವದ ಅವಕಾಶವನ್ನು ತಂದಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗಾಗಿ ವಿವಿಧ ಇಂಟರ್ನ್‌ಶಿಪ್ ಕಾರ್ಯಕ್ರಮಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಬಿಟೆಕ್, ಬಿಇ, ಎಂಟೆಕ್, ಎಂಇ, ಎಂಎಸ್ಸಿ, ಇಂಟಿಗ್ರೇಟೆಡ್ ಎಂಎಸ್ಸಿ/ಎಂಟೆಕ್, ಬಿಎಸ್-ಎಂಎಸ್ ಮತ್ತು ಪಿಎಚ್‌ಡಿ ಸೇರಿದಂತೆ ವಿವಿಧ ಪದವಿ ಹಾಗೂ ಸ್ನಾತಕೋತ್ತರ ಕಾರ್ಯಕ್ರಮಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳು ಈ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಬಹುದು. ಅರ್ಹತೆ ಮತ್ತು ಅಂಕಗಳ ಮಾನದಂಡ: ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು…

Read More

ಪ್ರೇಯಸಿಯನ್ನು ಮದುವೆಯಾಗಲು ಕರೆದೊಯ್ಯುತ್ತಿದ್ದ ವೇಳೆ ಕಾರು ಪಲ್ಟಿ; ದಾರಿ ಮಧ್ಯೆ ಯುವಕನನ್ನು ಬಿಟ್ಟು ಯುವತಿ ಪರಾರಿ – Kannada News | Bengaluru Elopement Tragedy: Car Crash Injures Groom, Bride Flees Hirekeru

ಹಾವೇರಿ, ಫೆ.21: ಪ್ರೀತಿಸಿದ ಹುಡುಗಿಯನ್ನ ಕೈಹಿಡಿಯಲು ಬೆಂಗಳೂರಿನಿಂದ ಬಾಡಿಗೆ ಕಾರು ಮಾಡಿಕೊಂಡು ಬಂದಿದ್ದ ಯುವಕನ ಮದುವೆ ಕನಸು ರಸ್ತೆ ಮಧ್ಯೆಯೇ ನುಚ್ಚುನೂರಾಗಿದೆ. ಕಾರು ಪಲ್ಟಿಯಾಗಿ ಪ್ರಿಯಕರ ಸೇರಿ ಮೂವರು ಆಸ್ಪತ್ರೆ ಪಾಲಾಗಿದ್ದರೆ, ಯುವತಿ ಮಾತ್ರ ಅಲ್ಲಿಂದ ಪರಾರಿಯಾಗಿ ಬೆಂಗಳೂರು ಸೇರಿಕೊಂಡ ಘಟನೆ ಹಿರೇಕೆರೂರು ತಾಲೂಕಿನ ಚೆನ್ನಹಳ್ಳಿ ತಾಂಡಾ ಬಳಿ ನಡೆದಿದೆ. ಗಾಯಾಳು ಯುವಕ ಇರ್ಫಾನ್ ಮತ್ತು ಹಿರೇಕೆರೂರು ಮೂಲದ ಯುವತಿ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿಯೇ ಅವರಿಬ್ಬರ ನಡುವೆ ಪರಿಚಯವಾಗಿ, ಪ್ರೀತಿ ಅಂಕುರಿಸಿತ್ತು. ಇಬ್ಬರೂ…

Read More

‘ಟಾಕ್ಸಿಕ್’ನಲ್ಲಿ ಯಶ್ ಪಾತ್ರದ ಹೆಸರು ಟಿಕೆಟ್; ಮಾಸ್ಟರ್ ಪ್ಲ್ಯಾನ್ ಮಾಡಿದ ರಾಕಿಂಗ್ ಸ್ಟಾರ್ – Kannada News | Toxic Teaser Controversy: Yash’s Dual Role anda Why Heroines Are Missing – A Marketing Ploy?

‘ಟಾಕ್ಸಿಕ್’ ಟೀಸರ್ (Toxic Teaser) ಸದ್ಯ ಹಲ್​ಚಲ್ ಸೃಷ್ಟಿ ಮಾಡುತ್ತಿದೆ. ಈ ಟೀಸರ್​​ನಲ್ಲಿ ಯಶ್ ಮಾತ್ರ ಕಾಣಿಸಿದ್ದಾರೆ. ಯಶ್ ಅವರ ದ್ವಿಪಾತ್ರ ಸಾಕಷ್ಟು ಗಮನ ಸೆಳೆದಿದೆ. ಟೀಸರ್​​ನಲ್ಲಿ ಯಶ್ ಮಾತ್ರ ಕಾಣಿಸಿಕೊಂಡಿದ್ದು ಏಕೆ ಎಂದು ಅನೇಕರು ಪ್ರಶ್ನೆ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ನಯನಾತಾರ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ ಅಂಥವರು ನಟಿಸಿದ್ದಾರೆ. ಆದರೆ, ಇವರನ್ನು ಟೀಸರ್​ ಅಲ್ಲಿ ತೋರಿಸಿಯೇ ಇಲ್ಲ ಎಂಬ ಟೀಕೆ ವ್ಯಕ್ತವಾಗಿದೆ. ಆದರೆ, ಇದರ ಹಿಂದೆ ಮಾಸ್ಟರ್​ ಪ್ಲ್ಯಾನ್ ಇದೆ ಎಂದು ವರದಿ ಆಗಿದೆ. ಯಶ್…

Read More

ಎಐ ಶೃಂಗಸಭೆಯಲ್ಲಿ ಕಾಂಗ್ರೆಸ್​​ನಿಂದ ಅರೆಬೆತ್ತಲೆ ಪ್ರತಿಭಟನೆ; ಬಂಧಿತ 4 ಆರೋಪಿಗಳು 5 ದಿನ ಪೊಲೀಸ್ ವಶಕ್ಕೆ – Kannada News | AI Summit protest Patiala House Court sends 4 Indian Youth Congress workers to police custody for 5 days

ನವದೆಹಲಿ, ಫೆಬ್ರವರಿ 21: ದೆಹಲಿಯಲ್ಲಿ ನಡೆದ ಎಐ ಇಂಪ್ಯಾಕ್ಟ್ ಶೃಂಗಸಭೆಯ (AI Impact Summit) ಸಭಾಂಗಣದೊಳಗೆ ಶರ್ಟ್ ಬಿಚ್ಚಿ, ಮೋದಿ-ಟ್ರಂಪ್ ಫೋಟೋ ಇದ್ದ ಟಿ-ಶರ್ಟ್ ಹಿಡಿದುಕೊಂಡು, ಅಮೆರಿಕದ ಜೊತೆಗಿನ ವ್ಯಾಪಾರ ಒಪ್ಪಂದದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದ ಯುವ ಕಾಂಗ್ರೆಸ್ ಕಾರ್ಯರ್ತರನ್ನು ಬಂಧಿಸಲಾಗಿತ್ತು. ಬಂಧಿತರಲ್ಲಿ ನಾಲ್ವರನ್ನು ಇಂದು ಪಟಿಯಾಲ ಹೌಸ್ ನ್ಯಾಯಾಲಯದೆದುರು ಹಾಜರುಪಡಿಸಲಾಗಿತ್ತು. ಆ ನಾಲ್ವರನ್ನೂ 5 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ. ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ನೇಪಾಳದ…

Read More