Headlines

ಮಾಜಿ ಅತ್ತಿಗೆ ಸಮಂತಾಗೆ ಅಖಿಲ್ ಅಕ್ಕಿನೇನಿ ಅಭಿನಂದನೆ – Kannada News | Samantha Akhil Akkineni Bond Strong Post Divorce He wish For Samantha

ನಟಿ ಸಮಂತಾ ರುತ್ ಪ್ರಭು (Samantha) ಹಾಗೂ ನಾಗ ಚೈತನ್ಯ ಅವರ ವಿಚ್ಛೇದನದ ನಂತರವೂ ಅಕ್ಕಿನೇನಿ ಕುಟುಂಬದ ಜೊತೆಗಿನ ಸಂಬಂಧದ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ವಿಚ್ಛೇದನಕ್ಕೂ ಮುನ್ನ ಸಮಂತಾ ಮತ್ತು ಅವರ ಮೈದುನ ಅಖಿಲ್ ಅಕ್ಕಿನೇನಿ ನಡುವೆ ಅತ್ಯುತ್ತಮ ಬಾಂಧವ್ಯವಿತ್ತು. ಇಬ್ಬರೂ ಸದಾ ಆತ್ಮೀಯ ಸ್ನೇಹಿತರಂತೆ ಇರುತ್ತಿದ್ದರು. ಆದರೆ, ವಿಚ್ಛೇದನದ ನಂತರ ಈ ಬಾಂಧವ್ಯ ಇಂದಿಗೂ ಹಾಗೆಯೇ ಇದೆಯೇ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಇದಕ್ಕೆ ಈಗ ಉತ್ತರ ಸಿಕ್ಕಂತಾಗಿದೆ. ಸಮಂತಾ ಅವರ ಹೊಸ ಚಿತ್ರ ‘ಮಾ ಇಂಟಿ ಬಂಗಾರಂ’ ಸಿನಿಮಾವನ್ನು ಅಖಿಲ್ ಮುಕ್ತಕಂಠದಿಂದ ಹಾಡಿ ಹೊಗಳಿದ್ದಾರೆ. ಆ ಮೂಲಕ ಇಂದಿಗೂ ಮಾಜಿ ಅತ್ತಿಗೆಯ ಮೇಲಿನ ಗೌರವ ಮತ್ತು ಪ್ರೀತಿ ಹಾಗೇ ಉಳಿದಿದೆ ಎಂಬುದನ್ನು ಅವರು ಸಾಬೀತುಪಡಿಸಿದ್ದಾರೆ.

ಇತ್ತೀಚೆಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅಖಿಲ್ ಅಕ್ಕಿನೇನಿ, ಸಮಂತಾ ಅವರ ಹೊಸ ಚಿತ್ರದ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ. ‘ನಾನು ಇನ್ನೂ ಮಾ ಇಂಟಿ ಬಂಗಾರಂ ಚಿತ್ರವನ್ನು ನೋಡಿಲ್ಲ. ಆದರೆ ಚಿತ್ರದ ಟ್ರೈಲರ್ ನೋಡಿದೆ. ಅದು ನನಗೆ ತುಂಬಾ ಇಷ್ಟವಾಯಿತು. ಸಿನಿಮಾದ ಒಟ್ಟಾರೆ ವೈಬ್ ಮತ್ತು ಕಥೆ ತುಂಬಾ ಆಸಕ್ತಿದಾಯಕವಾಗಿ ಮೂಡಿಬಂದಿದೆ ಅನ್ನಿಸಿತು. ಈ ಅದ್ಭುತ ಪ್ರಯತ್ನಕ್ಕಾಗಿ ಸಮಂತಾ ಮತ್ತು ಚಿತ್ರದ ಇಡೀ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು’ ಎಂದು ಹೇಳುವ ಮೂಲಕ ಮಾಜಿ ಅತ್ತಿಗೆಗೆ ತಮ್ಮ ಬೆಂಬಲ ಸೂಚಿಸಿದ್ದಾರೆ.

‘ಮಾ ಇಂಟಿ ಬಂಗಾರಂ’ ಸಮಂತಾ ಅವರ ನಟನೆಯ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಕೌಟುಂಬಿಕ ಮೌಲ್ಯಗಳು ಮತ್ತು ಭಾವನಾತ್ಮಕ ಕಥಾಹಂದರವನ್ನು ಹೊಂದಿರುವ ಈ ಚಿತ್ರದ ಟ್ರೈಲರ್ ಈಗಾಗಲೇ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸಮಂತಾ ಅವರ ವಿಭಿನ್ನ ಪಾತ್ರ ಮತ್ತು ನಟನೆಗೆ ಚಿತ್ರರಂಗದ ಗಣ್ಯರಿಂದಲೂ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದ್ದು, ಬಾಕ್ಸ್ ಆಫೀಸ್‌ನಲ್ಲೂ ಸಿನಿಮಾ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ‘ಇದು ನನ್ನ ಸಿಕ್ಸ್​ ಪ್ಯಾಕ್’; ಬೇಬಿ ಬಂಪ್ ಫೋಟೋ ಹಂಚಿಕೊಂಡ ನಟಿ ಸಮಂತಾ

ಸಮಂತಾ ಅವರ ವೈಯಕ್ತಿಕ ಜೀವನದ ಮತ್ತೊಂದು ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಅವರು ಶೀಘ್ರವೇ ತಾಯಿ ಆಗುತ್ತಿದ್ದಾರೆ. ಇತ್ತೀಚೆಗೆ ವೇದಿಕೆ ಮೇಲೆಯೇ ತಮ್ಮ ಪ್ರೆಗ್ನೆನ್ಸಿ ವಿಷಯವನ್ನು ಅವರು ಘೋಷಿಸಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Leave a Reply

Your email address will not be published. Required fields are marked *