Headlines

ಸಖತ್ ಬೋಲ್ಡ್ ಪಾತ್ರದಲ್ಲಿ ನಟಿಸಿದ್ದಾರೆ ರಶ್ಮಿಕಾ: ಪಾತ್ರ ಎಂತಹದ್ದು ಗೊತ್ತೆ? – Kannada News | Rashmika Mandanna acted in a bold role in Cocktail 2 movie

ರಶ್ಮಿಕಾ ಮಂದಣ್ಣ (Rashmika Mandanna) ತಮ್ಮ ನಟನೆ ಮತ್ತು ಗ್ಲಾಮರ್​​ನಿಂದ ದಕ್ಷಿಣ ಭಾರತ ಚಿತ್ರರಂಗ ಮಾತ್ರವೇ ಅಲ್ಲದೆ ಬಾಲಿವುಡ್​​ನಲ್ಲೂ ಸಖತ್ ಸದ್ದು ಮಾಡುತ್ತಿದ್ದಾರೆ. ರಶ್ಮಿಕಾ ಮೊದಲೆಲ್ಲ ಸೀದಾ-ಸಾದಾ ‘ಪಕ್ಕದ ಮನೆ ಹುಡುಗಿ’ ರೀತಿಯ ಪಾತ್ರಗಳಲ್ಲಿ ನಟಿಸುತ್ತಿದ್ದರು. ಆದರೆ ಅನುಭವ ಹೆಚ್ಚಾದಂತೆ ತುಸು ಬೋಲ್ಡ್ ಆದ ಪಾತ್ರಗಳಲ್ಲಿಯೂ ನಟಿಸಲು ಆರಂಭಿಸಿದರು. ‘ಪುಷ್ಪ’ ಸಿನಿಮಾದ ಅವರ ಪಾತ್ರ ಅಲ್ಲಲ್ಲಿ ತುಸು ಬೋಲ್ಡ್ ಆಗಿತ್ತು. ಕೆಲ ತಿಂಗಳುಗಳ ಹಿಂದೆ ಬಿಡುಗಡೆ ಆದ ‘ಥಮ’ ಸಿನಿಮಾನಲ್ಲಿ ತುಸು ಹೆಚ್ಚೇ ಬೋಲ್ಡ್ ಆಗಿ ನಟಿಸಿದ್ದರು….

Read More

ಪರೀಕ್ಷೆಯಲ್ಲಿ ಕಾಪಿ ಮಾಡುವ ವೇಳೆ ಸಿಕ್ಕಿಬಿದ್ದ ವಿದ್ಯಾರ್ಥಿ: ಪ್ರಶ್ನಿಸಿದ್ದಕ್ಕೆ ಮೇಲ್ವಿಚಾರಕರ ಮೇಲೆ ಹಲ್ಲೆ – Kannada News | Kalaburagi: Student Assaults Professor for Preventing Malpractice During Exam

ವಿದ್ಯಾರ್ಥಿಯಿಂದ ಮೇಲ್ವಿಚಾರಕರ ಮೇಲೆ ಹಲ್ಲೆImage Credit source: tv9 kannada ಕಲಬುರಗಿ, ಫೆಬ್ರವರಿ 20: ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ ಸಹಾಯಕ ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿ (Student) ಹಲ್ಲೆ (attacks) ಮಾಡಿರುವಂತಹ ಘಟನೆಯೊಂದು ನಗರದ ಡಾ. ಮಾಲಕರೆಡ್ಡಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ನಡೆದಿದೆ. ವಿದ್ಯಾರ್ಥಿ ಶಹಬಾಜ್​​ ಎಂಬಾತನಿಂದ ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್​ ಮೇಲೆ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ನಡೆದಿದ್ದೇನು?  ಡಾ.ಮಾಲಕರೆಡ್ಡಿ ಹೋಮಿಯೋಪಥಿಕ್ ಕಾಲೇಜಿನಲ್ಲಿ ಇಂದು ಮಟೇರಿಯಾ ಮೆಡಿಕಾ ವಿಷಯದ ಇಂಟರ್ನಲ್ ಎಕ್ಸಾಮ್​…

Read More

‘ಟಾಕ್ಸಿಕ್’ ಡೈರೆಕ್ಟರ್ ಮಹಿಳೆ ಆದ್ರೂ ಟೀಸರ್​​ನಲ್ಲಿ ನಟಿಯರಿಗೆ ಜಾಗ ಇಲ್ಲ; ನೆಟ್ಟಿಗರ ಟೀಕೆ – Kannada News | Why no female characters shown in Yash starrer Toxic teaser

ಬಹುನಿರೀಕ್ಷಿತ ‘ಟಾಕ್ಸಿಕ್’ (Toxic)  ಸಿನಿಮಾದ ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಮಾರ್ಚ್ 19ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆಕಾಣಲಿದೆ. ಚಿತ್ರದ ಬಿಡುಗಡೆಗೆ ಒಂದು ತಿಂಗಳು ಬಾಕಿ ಇದೆ ಎನ್ನುವಾಗ ಟೀಸರ್ ಅನಾವರಣ ಮಾಡಲಾಗಿದೆ. ಈ ಟೀಸರ್ ನೋಡಿ ಯಶ್ (Yash) ಅಭಿಮಾನಿಗಳಿಗೆ ಖುಷಿ ಆಗಿದೆ. ಆದರೆ ಒಂದು ಕೊರತೆ ಕಾಣಿಸಿದೆ. ಇಡೀ ಟೀಸರ್​​ನಲ್ಲಿ ಯಾವುದೇ ನಟಿಯರ ಮುಖ ಕಾಣಿಸಿಲ್ಲ! ನಯನತಾರಾ, ರುಕ್ಮಿಣಿ ವಸಂತ್ ಮುಂತಾದ ಸ್ಟಾರ್ ನಟಿಯರು ‘ಟಾಕ್ಸಿಕ್’ ಚಿತ್ರದಲ್ಲಿ ಅಭಿನಯಿಸಿದ್ದರೂ ಕೂಡ ಟೀಸರ್​ನಲ್ಲಿ ಅವರು ದರ್ಶನ ನೀಡಿಲ್ಲ….

Read More

ಶ್ರೀಮಂತ ದೇಶಗಳಿಗೆ ಎಐ ಕುತ್ತು; ಶೇ. 60 ಉದ್ಯೋಗನಷ್ಟ ಸಾಧ್ಯತೆ: ಐಎಂಎಫ್ ಎಚ್ಚರಿಕೆ – Kannada News | AI can take away 40pc jobs, warns IMF MD Kristalina Georgieva

ನವದೆಹಲಿ, ಫೆಬ್ರುವರಿ 20: ಎಐನಿಂದ ಒಳಿತೂ ಇದೆ, ಕೆಡಕೂ ಇದೆ. ದೂರಗಾಮಿಯಾಗಿ ಎಐನಿಂದ ಮನುಕುಲಕ್ಕೆ ಸಾಕಷ್ಟು ಪ್ರಯೋಜನಗಳಾಗಬಹುದು ಎಂದು ಅನೇಕರು ಹೇಳುತ್ತಿದ್ದಾರೆ. ಐಎಂಎಫ್​ನ ಮ್ಯಾನೇಜಿಂಗ್ ಡೈರೆಕ್ಟರ್ ಆಗಿರುವ ಕ್ರಿಸ್ಟಾಲಿನಾ ಜಾರ್ಜಿಯೆವಾ (Kristalina Georgieva) ಅವರು ಎಐನಿಂದ ಸದ್ಯೋಭವಿಷ್ಯದಲ್ಲಿ ಆಗಬಹುದಾದ ಒಳಿತು ಮತ್ತು ಅಪಾಯಗಳೆರಡನ್ನೂ ಪ್ರಸ್ತಾಪಿಸಿದ್ದಾರೆ. ಉದ್ಯೋಗ ಮಾರುಕಟ್ಟೆಯಲ್ಲಿ ಎಐ ಸುನಾಮಿಯಂತೆ ಅಪ್ಪಳಿಸಲಿದೆ ಎಂದು ಜಾರ್ಜಿಯೆವಾ ಎಚ್ಚರಿಸಿದ್ದಾರೆ. ಉದಯೋನ್ಮುಖ ಆರ್ಥಿಕತೆಯ ದೇಶಗಳಲ್ಲಿ ಶೇ. 40ರಷ್ಟು ಉದ್ಯೋಗಗಳು ಎಐನಿಂದಾಗಿ ಇಲ್ಲವಾಗುತ್ತವೆ. ಶ್ರೀಮಂತ ದೇಶಗಳಲ್ಲಂತೂ ಇದರ ಪರಿಣಾಮ ಇನ್ನೂ ಭಿಕರವಾಗಿರುತ್ತದೆ. ಅಲ್ಲಿ…

Read More

ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು – Kannada News | Bagalkote Shivaji Jayanti Stone Pelting: Onnce Again Rally From Same Place Says Narayansa Bandage

ಬಾಗಲಕೋಟೆ, (ಫೆಬ್ರವರಿ 20): ಬಾಗಲಕೋಟೆಯಲ್ಲಿ (Bagalkot) ಶಿವಾಜಿ ಭಾವಚಿತ್ರ ಮೆರವಣಿಗೆ ವೇಳೆ ಕಲ್ಲು, ಚಪ್ಪಲಿ ತೂರಾಟ (Stone Pelting) ನಡೆದಿದೆ. ಘಟನೆಯಲ್ಲಿ ಪೊಲೀಸರು ಸೇರಿ ಹಲವರಿಗೆ ಗಾಯಗಳಾಗಿವೆ. ಪರಿಸ್ಥಿತಿ ತಿಳಿಗೊಳಿಸಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಹೆಚ್ಚುವರಿ ಭದ್ರತೆ ನಿಯೋಜಿಸಲಾಗಿದೆ. ಇನ್ನು ಪೊಲೀಸರು ಇಂದು (ಫೆಬ್ರವರಿ 20) ಡಿಸಿ ಕಚೇರಿಯಲ್ಲಿ ಕರೆದಿದ್ದ ಶಾಂತಿ ಸಭೆಗೆ ಮುಸ್ಲಿಂ ಮುಖಂಡರು ಗೈರಾಗಿದ್ದಾರೆ. ಇದರಿಂದ ಆಕ್ರೋಶಗೊಂಡ ಹಿಂದೂ ಮುಖಂಡರು ಸಹ ಶಾಂತಿ ಸಭೆ ಬಹಿಷ್ಕರಿಸಿ ಹೊರ ನಡೆದಿದ್ದಾರೆ. ಇದೇ ವೇಳೆ ಟಿವಿ9ಗೆ ಪ್ರತಿಕ್ರಿಯಿಸಿದ ಬಿಜೆಪಿ…

Read More

ಶಿವಾಜಿ ಜಯಂತಿ ವೇಳೆ ಕಲ್ಲು ತೂರಾಟ: ನಿಮಗೆ ಧೈರ್ಯ ಇದ್ರೆ ಆ ಗುಂಪಿನ ನಾಲ್ವರಿಗೆ ಹೊಡೆಯಿರಿ, SPಗೆ ಮಾಜಿ ಶಾಸಕ ಸವಾಲ್ – Kannada News | Bagalkote Shivaji Jayanti Stone Pelting: BJP Former MLA charantimath Angry On Police

ಬಾಗಲಕೋಟೆ, (ಫೆಬ್ರವರಿ 20): ಶಿವಾಜಿ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ.ಮಸೀದಿ ಮುಂದೆ ಕಲ್ಲು ಹಾಗೂ ಚಪ್ಪಲಿ ಎಸೆದಿರೋದು ಕೋಮು ಉದ್ವಿಗ್ನತೆ ಪಡೆದುಕೊಂಡಿದೆ. ಇಷ್ಟು ಮಾತ್ರವಲ್ಲದೇ ಕೆಲ ಕಿಡಿಗೇಡಿಗಳು ಅಂಗಡಿಗಳಿಗೆ ಬೆಂಕಿ ಹಚ್ಚುವ ಕೆಲಸ ಮಾಡಿದ್ದಾರೆ. ಇದರಿಂದ ಬಾಗಲಕೋಟೆ ಬೂದಿ ಮುಚ್ಚಿದ ಕೆಂಡದಂತಾಗಿದೆ. ಇನ್ನೊಂದೆಡೆ ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಹಿಂದೂ ಮುಖಂಡರು, ಬಿಜೆಪಿ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಬಾಗಲಕೋಟೆ ಎಸ್ಪಿ ಸಿದ್ದಾರ್ಥ ಗೋಯಲ್…

Read More

ಲಕ್ಕುಂಡಿಯಲ್ಲಿ‌ ನಿಧಿ ಸಿಕ್ಕ ಬಳಿಕ ಮತ್ತೊಂದು ರಹಸ್ಯ ಬಯಲು: ಹಳೆ ಪ್ರಕರಣಕ್ಕೆ ಮರುಜೀವ; ಮೌಲ್ವಿ ಬಂಧನ – Kannada News | Gadag Police Bust Lakkundi Fake Treasure Scam: Inter State Kingpin Arrested

ಗದಗ, ಫೆಬ್ರವರಿ 20: ಐತಿಹಾಸಿಕ ಲಕ್ಕುಂಡಿ (Lakkundi) ಗ್ರಾಮದಲ್ಲಿ ಸಾಕಷ್ಟು ಸಂಪತ್ತು ಇದೆ ಎನ್ನುವ ನಂಬಿಕೆಯಿದೆ. ಅದಕ್ಕೆ ಪುಷ್ಟಿ ನೀಡುವಂತೆ ಮನೆಯ ಪಾಯ ಮುಚ್ಚುವ ವೇಳೆ ಚಿನ್ನದ ನಿಧಿ ಸಿಕ್ಕಿದೆ. ಇದರ ಬೆನ್ನಲ್ಲೇ ಲಕ್ಕುಂಡಿ ಚಿನ್ನದ ನಿಧಿ ರಹಸ್ಯ ಬಯಲಾಗಿದೆ. 2೦22ರಲ್ಲಿ ಲಕ್ಕುಂಡಿ ಗ್ರಾಮದಲ್ಲಿ ಅಪಾರ ಪ್ರಮಾಣದ ಚಿನ್ನದ ಸಂಪತ್ತು ಸಿಕ್ಕಿದ್ದು, ಅದನ್ನು ಮಾರಾಟ ಮಾಡಲು ಸಂಚು ರೂಪಿಸಲಾಗಿತ್ತು. ಅಂದು ನಿಧಿ ಶೋಧ ಮಾಡಿದ್ದ ಮಾಸ್ಟರ್ ಮೈಂಡ್​ನನ್ನು ಇದೀಗ ಪೊಲೀಸರು ಅರೆಸ್ಟ್ (Arrest) ಮಾಡಿದ್ದು, ಆ ಮೂಲಕ…

Read More

ನಾನೇ ಭಾರತ-ಪಾಕ್ ಸಂಘರ್ಷ ನಿಲ್ಲಿಸಿದ್ದು; ಮತ್ತೆ ಹಳೇ ರಾಗ ಹಾಡಿದ ಟ್ರಂಪ್, ಶೆಹಬಾಜ್ ಷರೀಫ್ ಗಪ್​ಚುಪ್ – Kannada News | Donald Trump Says 11 Jets Shot Down During India Pakistan Conflict Praises PM Modi

ವಾಷಿಂಗ್ಟನ್, ಫೆಬ್ರವರಿ 20: ಕಳೆದ ವರ್ಷ ಭಾರತ-ಪಾಕಿಸ್ತಾನ ದೇಶಗಳ ನಡುವಿನ ಉದ್ವಿಗ್ನತೆಯ ಸಮಯದಲ್ಲಿ 11 ದುಬಾರಿ ಜೆಟ್‌ಗಳನ್ನು ಹೊಡೆದುರುಳಿಸಲಾಯಿತು. ಆಗ ನಾನು ಎರಡೂ ದೇಶಗಳು ಯುದ್ಧ ನಿಲ್ಲಿಸದಿದ್ದರೆ ಶೇ. 200ರಷ್ಟು ಸುಂಕ ವಿಧಿಸುತ್ತೇನೆ ಎಂದು ಬೆದರಿಕೆ ಹಾಕಿದ್ದೆ. ಎರಡೂ ದೇಶಗಳ ನಡುವಿನ ಸಂಘರ್ಷ ನಿಲ್ಲಿಸಲು ಮಧ್ಯಸ್ಥಿಕೆ ವಹಿಸಿದ್ದೆ ಎಂದು ಮತ್ತೊಮ್ಮೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದೇ ವೇಳೆ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು “ಒಬ್ಬ ಮಹಾನ್ ವ್ಯಕ್ತಿ” ಎಂದು ಹೊಗಳಿದ್ದಾರೆ. ಟ್ರಂಪ್ ಈ ಹೇಳಿಕೆ…

Read More

Ranji Trophy final 2026: ಫೈನಲ್​​ ಪಂದ್ಯಕ್ಕೆ ಕರ್ನಾಟಕ ತಂಡ ಪ್ರಕಟ – Kannada News | Ranji Trophy final 2026: Karnataka squad Announced for final Match Against Jammu Kashmir at hubballi On feb 24

ಬರೋಬ್ಬರಿ 11 ವರ್ಷದ ಬಳಿಕ ಕರ್ನಾಟಕ (Karnataka) ಕ್ರಿಕೆಟ್ ತಂಡ ರಣಜಿ ಟ್ರೋಫಿ (Ranji Trophy) ಫೈನಲ್‌ ಪ್ರವೇಶಿಸಿದೆ. ಉತ್ತರಾಖಂಡ(Uttarakhand) ವಿರುದ್ಧದ ಸೆಮಿಫೈನಲ್​​ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡರೂ ಮೊದಲ ಇನ್ನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಸಾಧಿಸಿದ್ದರಿಂದ ಕರ್ನಾಟಕ ಸುಲಭವಾಗಿ ಫೈನಲ್‌ ಪ್ರವೇಶಿಸಿದ್ದು,  ಫೆಬ್ರವರಿ 24 ರಿಂದ ಹುಬ್ಬಳ್ಳಿಯಲ್ಲಿ ನಡೆಯಲಿರುವ  ಫೈನಲ್‌ (Final) ಪಂದ್ಯದಲ್ಲಿ ಜಮ್ಮು ಕಾಶ್ಮೀರ (Jammu Kashmir) ತಂಡವನ್ನು ಎದುರಿಸಲಿದೆ. ಹೀಗಾಗಿ ಅಂತಿಮ ಫೈನಲ್ ಪಂದ್ಯಕ್ಕೆ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದ್ದು, ಟೀಂನಲ್ಲಿ ಯಾವುದೇ ಬದಲಾವಣೆಯಾಗಿಲ್ಲ, ಸೆಮಿಫೈನಲ್​​​ ಆಡಿದ…

Read More

ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು – Kannada News | Valsad Tragedy: Speeding Lorry Collides with Car, Seven Fatalities in Kaprada

ವಲ್ಸಾದ್, ಫೆ.20: ಗುಜರಾತ್‌ನ ವಲ್ಸಾದ್ ಜಿಲ್ಲೆಯ ಕಪ್ರಡಾ (Kaprada) ತಾಲ್ಲೂಕಿನಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ಅತಿ ವೇಗವಾಗಿ ಬಂದ ಸರಕು ಸಾಗಣೆ ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಕಾರಿನಲ್ಲಿದ್ದ ಏಳು ಮಂದಿ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಭೇಟಿ ನೀಡಿದ್ದು, ಅಪಘಾತಕ್ಕೆ ನಿಖರ ಕಾರಣವೇನು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಾಯಗೊಂಡವರನ್ನು ತಕ್ಷಣವೇ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತರ ದೇಹಗಳನ್ನು…

Read More