ತಂಗಿಯ ಕನಸಿಗೆ ರೆಕ್ಕೆ ಪುಕ್ಕ ಕಟ್ಟಿದ್ದು ಅಣ್ಣಂದಿರು: ಚಪ್ಪಲಿ ಹೊಲಿಯುವವರ ತಂಗಿ ಪದ್ಮಾವತಿ ಈಗ ಸಿವಿಲ್ ಜಡ್ಜ್ – Kannada News | Kannada Medium Barrier Broken: Dandeli’s Padmavathi Becomes Civil Judge
ದಾಂಡೇಲಿ, ಫೆ.20: ಬಡತನವು ಸಾಧನೆಗೆ ಅಡ್ಡಿಯಲ್ಲ, ಬದಲಾಗಿ ಅದು ಛಲವನ್ನು ಹೆಚ್ಚು ಮಾಡುತ್ತದೆ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ದಾಂಡೇಲಿಯ ಯುವತಿ ಪದ್ಮಾವತಿ ನಾಗಣ್ಣ ಮಾದಿಗ ಅವರು ಸಿವಿಲ್ ನ್ಯಾಯಾಧೀಶರಾಗಿ (Civil Judge) ಆಯ್ಕೆಯಾಗುವ ಮೂಲಕ ಇಡೀ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಆದರೆ ಈ ಸಾಧನೆಯ ಹಿಂದೆ ಅವರಿಗಿಂತ ಹೆಚ್ಚಾಗಿ ಶ್ರಮಿಸಿದ್ದು ಅವರ ಅಣ್ಣಂದಿರು. ಮನೆಯಲ್ಲಿ ಹೆಣ್ಣು ಮಕ್ಕಳಿದ್ದರೆ ಅವರನ್ನು ಬೇಗ ಮದುವೆ ಮಾಡಿಕೊಡುವ ಎಂಬ ಯೋಚನೆಯಲ್ಲಿರುವ ಈ ಕಾಲದಲ್ಲಿ ನಮ್ಮ ಮನೆಯ ಮಗಳು ಸಾಧನೆ ಮಾಡಿ…