Category Archives: Blog

Your blog category

ಸೀತಾರಾಮ್, ಮಾರ್ನಮಿ, ಸುಬ್ಬರಾವ್.. ಈ ವಾರವೂ ಪ್ರೇಕ್ಷಕರಿಗೆ ಹಲವು ಆಯ್ಕೆ – Kannada News | Maarnami Second Case of Seetharam Alpha and other Kannada movies releasing on 20 February

ಕನ್ನಡ ಸಿನಿಮಾಗಳು ಸಾಲು ಸಾಲಾಗಿ ತೆರೆ ಕಾಣುತ್ತಿವೆ. ಬೇರೆ ಬೇರೆ ಚಿತ್ರತಂಡಗಳು ಹೊಸ ಹೊಸ ಕಥೆಗಳನ್ನು ಜನರ ಎದುರು ತರುತ್ತಿವೆ. ‘ಟಾಕ್ಸಿಕ್’, ‘ಕೆಡಿ’ ರೀತಿಯ ದೊಡ್ಡ ಸಿನಿಮಾಗಳು ರಿಲೀಸ್ ಆಗುವ ಮೊದಲೇ ಹಲವು ಸಣ್ಣ ಸಿನಿಮಾಗಳು ಒಟ್ಟೊಟ್ಟಿಗೆ ಬರುತ್ತಿವೆ. ಈ ವಾರ (ಫೆಬ್ರವರಿ 20) ಕೂಡ ಒಂದಷ್ಟು ಸಿನಿಮಾಗಳು (Kannada Cinema) ತೆರೆ ಕಾಣುತ್ತಿವೆ. ‘ಸೆಕೆಂಡ್ ಕೇಸ್ ಆಫ್ ಸೀತಾರಾಮ್’, ‘ಸರಳ ಸುಬ್ಬರಾವ್’, ‘ಮಾರ್ನಮಿ’ (Maarnami) ಮುಂತಾದ ಸಿನಿಮಾಗಳು ಬಿಡುಗಡೆ ಆಗುತ್ತಿವೆ. ಆ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ.

ಸೆಕೆಂಡ್ ಕೇಸ್ ಆಫ್ ಸೀತಾರಾಮ್: ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಇಷ್ಟಪಡುವ ಪ್ರೇಕ್ಷಕರಿಗೆ ಈ ಸಿನಿಮಾ ಬೆಸ್ಟ್ ಆಯ್ಕೆ ಆಗಿದೆ. ಮರ್ಡರ್ ಮಿಸ್ಟರಿ ಕಹಾನಿ ಈ ಸಿನಿಮಾದಲ್ಲಿ ಇದೆ. ವಿಜಯ್ ರಾಘವೇಂದ್ರ, ಗೋಪಾಲಕೃಷ್ಣ ದೇಶಪಾಂಡೆ ಮುಂತಾದವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ಅವರು ನಿರ್ದೇಶಿಸಿದ್ದಾರೆ.

ಮಾರ್ನಮಿ: ರಿತ್ವಿಕ್ ಮಠದ್, ಚೈತ್ರಾ ಆಚಾರ್, ಪ್ರಕಾಶ್ ತುಮಿನಾಡು, ಸೋನು ಗೌಡ ಮುಂತಾದ ಕಲಾವಿದರು ‘ಮಾರ್ನಮಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ರಿಶಿತ್ ಶೆಟ್ಟಿ ಅವರ ನಿರ್ದೇಶನ ಈ ಸಿನಿಮಾಗಿದೆ. ಚರಣ್ ರಾಜ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಕರಾವಳಿ ಭಾಗದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗುತ್ತದೆ.

ಸರಳ ಸುಬ್ಬರಾವ್: ತ್ರಿವೇಣಿ ಅವರ ಕಾದಂಬರಿ ಆಧರಿಸಿ ‘ಸರಳ ಸುಬ್ಬರಾವ್’ ಸಿನಿಮಾ ನಿರ್ಮಾಣ ಆಗಿದೆ. ಮಂಜು ಸ್ವರಾಜ್ ಅವರು ಈ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ. ಕೃಷ್ಣ ಅಜಯ್ ರಾವ್, ರಂಗಾಯಣ ರಘು, ವೀಣಾ ಸುಂದರ್ ಮುಂತಾದವರು ಈ ಚಿತ್ರದ ಪಾತ್ರವರ್ಗದಲ್ಲಿ ಇದ್ದಾರೆ. ಅಜನೀಶ್ ಬಿ. ಲೋಕನಾಥ್ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಫೆಬ್ರವರಿ 20ಕ್ಕೆ ‘ಮಾರ್ನಮಿ’ ನೋಡಲು ಬನ್ನಿ

ಸೂರಿಯಣ್ಣ: ಸಲಗ ಸಿನಿಮಾ ಖ್ಯಾತಿಯ ಸೂರಿಯಣ್ಣ ಅವರು ಈ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಸಖತ್ ಮಾಸ್ ಆಗಿ ಈ ಸಿನಿಮಾ ಮೂಡಿಬಂದಿದೆ. ಭೂಗತ ಲೋಕದ ಕಥೆ ಇರುವ ಈ ಸಿನಿಮಾದಲ್ಲಿ ಸೂರಿಯಣ್ಣ ಜೊತೆ ಕಾಕ್ರೋಜ್ ಸುಧಿ, ರವಿ ಕಾಳೆ, ಹರೀಶ್ ರಾಯ್ ಮುಂತಾದವರು ಕೂಡ ನಟಿಸಿದ್ದಾರೆ.

ಈ ಎಲ್ಲ ಸಿನಿಮಾಗಳು ಜೊತೆಗೆ ‘ಆಲ್ಫಾ ಮೆನ್ ಲವ್ ವೆಂಜೆನ್ಸ್’ ಚಿತ್ರ ಕೂಡ ಬರುತ್ತಿದೆ. ಈ ಸಿನಿಮಾದಲ್ಲಿ ಹೇಮಂತ್ ಕುಮಾರ್, ಬಾಲು ನಾಗೇಂದ್ರ, ಕಾರ್ತಿಕ್ ಮಹೇಶ್, ಅಚ್ಯುತ್ ಕುಮಾರ್ ಅಭಿನಯಿಸಿದ್ದಾರೆ. ಹಾರರ್ ಕಥಾಹಂದರ ಇರುವ ‘ಫೆಬ್ರವರಿ 30’ ಸಿನಿಮಾ ಕೂಡ ಈ ವಾರವೇ ಬಿಡುಗಡೆ ಆಗುತ್ತಿದೆ. ಸಿಂಟೋ ಜೇಕಬ್, ಸಂಹಿತಾ ವಿನ್ಯಾ ನಟನೆಯ ‘ಮಿಕ್ಸಿಂಗ್ ಪ್ರೀತಿ’ ಸಿನಿಮಾ ಕೂಡ ಈ ವಾರ ರಿಲೀಸ್ ಆಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

KSRTC, BMTC ಸಾರಿಗೆ ನೌಕರರ ಮುಷ್ಕರ ಏನಾಯ್ತು? ಜಂಟಿ ಕ್ರಿಯಾ ಸಮಿತಿ ಕೈಗೊಂಡ ನಿರ್ಧಾರವೇನು? – Kannada News | Karnataka Transport employees Union vijay Bhaskar Clarify about Strike after Meeting

ಬೆಂಗಳೂರು, (ಫೆಬ್ರವರಿ 19): ನಾಳೆಯಿಂದ ಬಸ್ ಇರುತ್ತೋ, ಇಲ್ವೋ ಎಂಬ ಆತಂಕದಲ್ಲಿದ್ದ ರಾಜ್ಯದ ಪ್ರಯಾಣಿಕರಿಗೆ ಸಾರಿಗೆ ನೌಕರರು ಸಿಹಿ ಸುದ್ದಿ ನೀಡಿದ್ದಾರೆ. ನಾಳೆ (ಶುಕ್ರವಾರ) ಯಾವುದೇ ಸಾರಿಗೆ ಮುಷ್ಕರ (Transport Strike) ನಡೆಸದಿರಲು ನೌಕರರ ಕೂಟ ತೀರ್ಮಾನಿಸಿದೆ. ಇಂದು (ಫೆಬ್ರವರಿ 19) ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿಯ (Joint Action Committee) ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸರ್ಕಾರದ ಭರವಸೆಗಳು ಮತ್ತು ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು. ಅಂತಿಮವಾಗಿ, ಸಾರ್ವಜನಿಕರಿಗೆ ತೊಂದರೆ ಕೊಡುವುದು ಬೇಡ ಎಂಬ ಉದ್ದೇಶದಿಂದ ಸದ್ಯಕ್ಕೆ ಬಸ್ ಸಂಚಾರ ಬಂದ್ ಮಾಡದಿರಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಸರ್ಕಾರಕ್ಕೆ ಮತ್ತೊಂದು ಡೆಡ್​​ಲೈನ್ ನೀಡಿ ಮುಷ್ಕರ ವಾಪಾಸ್ ಪಡೆದ ಸಾರಿಗೆ ನೌಕರರು

Source link

ರೆಸಾರ್ಟ್ ಮಾಲೀಕರ ಲಾಬಿಗೆ ಒಳಗಾದ್ರಾ ಬಂಡೀಪುರ ಅರಣ್ಯ ಸಿಬ್ಬಂದಿ? ರೈತರ ವಿರುದ್ದವೇ ದಬ್ಬಾಳಿಕೆ – Kannada News | Bandipur Safari Controversy: Forest Dept Accused of Aiding Resorts Amidst Farmer Outcry

ಅರಣ್ಯ ಸಿಬ್ಬಂದಿ ವಿರುದ್ಧ ಎಸ್​ಪಿ ಗರಂ Image Credit source: tv9 kannada

ಚಾಮರಾಜನಗರ, ಫೆಬ್ರವರಿ 19: ಕಳೆದ ಮೂರು ತಿಂಗಳಿಂದ ಬಂದ್ ಆಗಿದ್ದ ಸಫಾರಿ (Safari) ಈಗ ಮತ್ತೆ ಕೆಲ ಷರತ್ತುಗಳೊಂದಿಗೆ ಪುನಾರಂಭ ಮಾಡಲು ಹೊರಟಿರುವ ಸರ್ಕಾರದ ಕ್ರಮ ಖಂಡಿಸಿ ರೈತರು ಇಂದು ಬಂಡೀಪುರದ ಸಫಾರಿ ಕೇಂದ್ರದ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಇದಕ್ಕೆ ರೆಸಾರ್ಟ್ ಮಾಲೀಕರು ವಿರೋಧ ವ್ಯಕ್ತಪಡಿಸಿದ್ದು, ಅರಣ್ಯ ಸಿಬ್ಬಂದಿ ರೆಸಾರ್ಟ್​​ನವರನ್ನ ಸಫಾರಿ ಕೇಂದ್ರದ ಒಳ ಬಿಟ್ಟುಕೊಂಡು ನೌಟಂಕಿ ಆಟವಾಡಿದ್ದಾರೆ.

ಸಫಾರಿ ಪುನಾರಂಭಕ್ಕೆ ಸೂಚನೆ

ಸದಾ ಮಾನವ, ಕಾಡು ಪ್ರಾಣಿ ಸಂಘರ್ಷದಿಂದ ಬೇಸತ್ತಿದ್ದ ಜನರಿಗೆ ಸಫಾರಿ ಬಂದ್ ಮಾಡಿ ಸರ್ಕಾರ ಗುಡ್ ನ್ಯೂಸ್ ಕೊಟ್ಟಿತ್ತು. ಸಫಾರಿ ಬಂದ್ ಆಗಿದ್ದೆ ತಡ ಕಾಡು ಪ್ರಾಣಿ ದಾಳಿ ಕೂಡ ಕಡಿಮೆಯಾಗಿತ್ತು. ಆದರೆ ಯಾವ ಲಾಬಿಗೆ ರಾಜ್ಯ ಸರ್ಕಾರ ಬಿತ್ತೋ ಗೊತ್ತಿಲ್ಲ ಮತ್ತೆ ಇದೀಗ ಸಫಾರಿ ಪುನಾರಂಭಕ್ಕೆ ಸೂಚನೆ ಸಿಕ್ಕಿದೆ.

ಇದನ್ನೂ ಓದಿ: ನಾಳೆಯಿಂದಲೇ ನಾಗರಹೊಳೆ, ಬಂಡೀಪುರ ಸಫಾರಿ ಪುನರಾರಂಭ: ಗುಡ್​​ನ್ಯೂಸ್​​ ಕೊಟ್ಟ ಅರಣ್ಯ ಸಚಿವರು

ಯಾವಾಗ ಸಚಿವ ಈಶ್ವರ್ ಖಂಡ್ರೆ ಕಟ್ಟುನಿಟ್ಟಿನ ಕ್ರಮದೊಂದಿಗೆ ಬಂಡೀಪುರ ನಾಗರಹೊಳೆ ಸಫಾರಿಯನ್ನ ಶೇಕಡಾ 50 ಪರ್ಸೆಂಟ್ ಅಷ್ಟು ಮತ್ತೆ ಓಪನ್ ಮಾಡಲಾಗುತ್ತೆ ಅಂತ ಆದೇಶ ಮಾಡಿದ್ದರೆ, ಇತ್ತ ಗಡಿ ಜಿಲ್ಲೆಯ ರೈತರ ಕಣ್ಣು ಈಗ ಕೆಂಪಾಗಿದೆ. ಯಾವುದೇ ಕಾರಣಕ್ಕೂ ಬಂಡೀಪುರ ನಾಗರಹೊಳೆ ಸಫಾರಿಯನ್ನ ರೀ ಓಪನ್ ಮಾಡಬಾರದು ಅಂತ ಬಂಡೀಪುರ ಸಫಾರಿ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ಕ್ರಮ ವಿರೋಧಿಸಿ, ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದುರಂತ ಅಂದರೆ ಸ್ವತಃ ಬಂಡೀಪುರ ಆರ್​ಎಫ್​ಓ ಮಲ್ಲೇಶ್ ಹಾಗೂ ಎಸಿಎಫ್ ನವಿನ್ ರೆಸಾರ್ಟ್ ಸಿಬ್ಬಂದಿಗೆ ಎತ್ತಿ ಕಟ್ಟಿ ಪ್ರತಿಭಟನೆ ನಡೆಸಲು ಉತ್ತೇಜನ ನೀಡಿದ್ದು ಅಲ್ಲದೇ ಬಂಡೀಪುರ ಸಫಾರಿ ಪಾಯಿಂಟ್ ಒಳಗಡೆ ರೆಸಾರ್ಟ್ ಕಡೆಯವರನ್ನ ಬಿಟ್ಟುಕೊಂಡಿದ್ದಾರೆ. ಇದನ್ನ ಕಂಡು ಗರಂ ಆದ ಎಸ್​ಪಿ ಮುತ್ತುರಾಜ್​​, ಆರ್​ಎಫ್​ಓ ಮಲ್ಲೇಶ್, ಎಸಿಎಫ್ ನವೀನ್​​ಗೆ ಎಚ್ಚರಿಕೆ ನೀಡಿದ್ದಾರೆ. ಎಸ್​ಪಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳುತ್ತಿದ್ದಂತೆ ಸಫಾರಿ ಪಾಯಿಂಟ್ ಒಳಗಡೆ ಇದ್ದ ರೆಸಾರ್ಟ್​​ನವರನ್ನ ಬಂಡೀಪುರ ಅರಣ್ಯ ಸಿಬ್ಬಂದಿ ಹೊರಗಡೆ ಕಳಿಸಿದ್ದಾರೆ. ಬಂಡೀಪುರ ಅರಣ್ಯ ಸಿಬ್ಬಂದಿಯ ಈ ನಡೆ ಇದೀಗ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಸಫಾರಿ ಬಂದ್​ನಿಂದ ನೆರೆರಾಜ್ಯಕ್ಕೆ ಹರಿದು ಹೋಗುತ್ತಿದೆ ಪ್ರವಾಸಿಗರ ದಂಡು! ಕರ್ನಾಟಕಕ್ಕಾಗುವ ನಷ್ಟವೆಷ್ಟು ಗೊತ್ತಾ?

ಒಟ್ಟಿನಲ್ಲಿ ರೆಸಾರ್ಟ್ ಮಾಲೀಕರ ಲಾಬಿಗೆ ಒಳಗಾಗಿ ಓಪನ್ ಆಗಿ ರೆಸಾರ್ಟ್​ನವರಿಗೆ ಬೆಂಬಲಿಸಿದ ಇಂತ ಆರ್​ಎಫ್​ಓ ಮಲ್ಲೇಶ್, ಎಸಿಎಫ್ ನವೀನ್ ವಿರುದ್ದ ಕ್ರಮ ಆಗಲೇಬೇಕೆಂದು ಜನರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಧರ್ಮಗುರುವಿನಿಂದ ಬಾಲಕಿಗೆ ಲೈಂಗಿಕ ಕಿರುಕುಳ; ಮಗು ಹುಟ್ಟೋವರೆಗೂ ಗರ್ಭಿಣಿಯಾದ ವಿಷಯವೇ ಗೊತ್ತಾಗಲಿಲ್ಲ! – Kannada News | Uttar Pradesh Maulana raped and impregnates 14 year old girl parents learn it after she deliveres a baby

ಹಾಪುರ್, ಫೆಬ್ರವರಿ 19: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ 14 ವರ್ಷದ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ (Physical Harassment) ಎಸಗಿದ ಆರೋಪದ ಮೇಲೆ ಇಸ್ಲಾಂ ಎಂಬ ಧರ್ಮಗುರುವನ್ನು ಬಂಧಿಸಲಾಗಿದೆ. ಆ ಬಾಲಕಿ ತೀವ್ರ ಹೊಟ್ಟೆ ನೋವು ಅನುಭವಿಸಿ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದ ನಂತರವೇ ಈ ಅತ್ಯಾಚಾರದ ವಿಷಯ ಬೆಳಕಿಗೆ ಬಂದಿದೆ. ಆರೋಪಿ ಮೌಲಾನಾ ನೆರೆಮನೆಯವನಾಗಿದ್ದು, ಬಾಲಕಿಯನ್ನು ಆಗಾಗ ಮನೆಗೆ ಕರೆದುಕೊಂಡು ಹೋಗುತ್ತಿದ್ದ. ಅತ್ಯಾಚಾರದ ವಿಷಯ ಹೇಳದಂತೆ ಆಕೆಗೆ ಬೆದರಿಕೆ ಹಾಕಿದ್ದ. ಹೀಗಾಗಿ, ಆಕೆ ಸುಮ್ಮನಿದ್ದಳು. ಫೆಬ್ರವರಿ 14ರ ಮಧ್ಯರಾತ್ರಿ ಆ ಬಾಲಕಿಗೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತು. ಬಳಿಕ ಆಕೆ ತನ್ನ ಮನೆಯಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.

ಆಕೆ ಮಗುವಿಗೆ ಜನ್ಮ ನೀಡುವವರೆಗೂ ಆಕೆಯ ಮನೆಯವರಿಗೆ ಆಕೆ ಗರ್ಭಿಣಿಯಾಗಿದ್ದಾಳೆ ಎಂಬ ವಿಷಯವೇ ಗೊತ್ತಾಗದಿರುವುದು ವಿಚಿತ್ರ. ಆಕೆ ಕೂಡ ಮೌಲಾನಾಗೆ ಹೆದರಿ ತನ್ನ ದೇಹದಲ್ಲಿ ಆಗುತ್ತಿದ್ದ ಬದಲಾವಣೆಯನ್ನು ಮನೆಯವರಿಗೆ ತಿಳಿಸಿರಲಿಲ್ಲ. ಆಕೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಇದನ್ನೂ ಓದಿ: 3 ವರ್ಷದ ಮಗುವಿನ ಮೇಲೆ ಅಪ್ಪನ ಗೆಳೆಯನಿಂದಲೇ ಅತ್ಯಾಚಾರ

ಪಿಲ್ಖುವಾ ಕೊಟ್ವಾಲಿ ಪ್ರದೇಶದ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದೆ. ಫೆಬ್ರವರಿ 14ರಂದು 14 ವರ್ಷದ ಬಾಲಕಿಗೆ ಹಠಾತ್ತನೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಾಗ, ಆಕೆಯ ಕುಟುಂಬ ಆಕೆಯನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದಿತು, ಅಲ್ಲಿ ವೈದ್ಯರು ಆಕೆ ಗರ್ಭಿಣಿ ಎಂದು ತಿಳಿಸಿದರು. ಈ ವಿಷಯ ತಿಳಿದು ಶಾಕ್ ಆದ ಅವರು ಬೇರೆಯವರಿಗೆ ಈ ವಿಚಾರ ಗೊತ್ತಾಗಬಾರದು ಎಂದು ಆಕೆಯನ್ನು ವಾಪಾಸ್ ಮನೆಗೆ ಕರೆದುಕೊಂಡು ಬಂದರು. ಅದಾದ ಸ್ವಲ್ಪ ಸಮಯದ ನಂತರ, ಆಕೆ ಮನೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಆ ಬಾಲಕಿಯ ತಂದೆ ಕಾರ್ಮಿಕರಾಗಿದ್ದು, ತಾಯಿ ಮನೆಯಲ್ಲೇ ಇರುತ್ತಾರೆ. ಆದರೂ ಅವರಿಗೆ ಮೌಲಾನಾ ಈ ರೀತಿ ಅತ್ಯಾಚಾರ ನಡೆಸಿದ್ದು, ಮಗಳು ಗರ್ಭಿಣಿಯಾಗಿದ್ದು ಗೊತ್ತಾಗಿರಲಿಲ್ಲ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿದ್ಯಾರ್ಥಿಗಳೇ ಪರೀಕ್ಷೆ ಹೊತ್ತಲ್ಲಿ ಭಯ ಬೇಡ.. ನಿಮಗಾಗಿ ಸಿಂಪಲ್ ಟಿಪ್ಸ್ – Kannada News | Dr Gururaj Karajagi gives Some Tips to Students about Exams

ಮಾರ್ಚ್ ತಿಂಗಳು ಬಂದರೆ ಸಾಕು, ವಿದ್ಯಾರ್ಥಿಗಳ (Students) ಹೃದಯ ಬಡಿತ ಜೋರಾಗುತ್ತದೆ. ಯಾಕಂದ್ರೆ ಮಾರ್ಚ್​​​​ನಿಂದಲೇ ಎಸ್‌ಎಸ್‌ಎಲ್‌ಸಿ (SSLC) ಹಾಗೂ ದ್ವಿತೀಯ ಪಿಯುಸಿ (PUC) ಪರೀಕ್ಷೆಗಳು ಶುರುವಾಗುತ್ತವೆ. ಹೀಗಾಗಿ ಮಾರ್ಚ್ ತಿಂಗಳನ್ನ ಪರೀಕ್ಷೆ ತಿಂಗಳು ಎಂದೇ ಕರೆಯಲಾಗುತ್ತೆ. ಇನ್ನು ಹಲವು ವಿದ್ಯಾರ್ಥಿಗಳು ಪರೀಕ್ಷೆ ಅಂದ್ರೆ ಸಾಕು ಭಯ ಹುಟ್ಟಿಸುತ್ತೆ. ಪ್ರತಿ ವಿಷಯಕ್ಕೆ ಎಷ್ಟು ದಿನಗಳು ಬೇಕು, ಯಾವ ಚಾಪ್ಟರ್ ಎಷ್ಟು ಗಂಟೆ ಓದಬೇಕು, ರಿವಿಷನ್‌ಗೆ ಎಷ್ಟು ಸಮಯ ಬೇಕು ಎನ್ನುವ ಗೊಂದಗಳು ವಿದ್ಯಾರ್ಥಿಗಳಲ್ಲಿ ಇದ್ದೇ ಇರುತ್ತವೆ. ಹೀಗಾಗಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಆತಂಕ, ಭಯಪಡಬಾರದು.  ಈ ಬಗ್ಗೆ ಖ್ಯಾತ ಶಿಕ್ಷಣತಜ್ಞರಾದ ಡಾ ಗುರುರಾಜ ಕರ್ಜಗಿ ವಿದ್ಯಾರ್ಥಿಗಳಿಗಾಗಿ ಕೆಲ ಟಿಪ್ಸ್ ಹೇಳಿದ್ದಾರೆ. ಇದನ್ನು ಫಾಲೋ ಮಾಡಿ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸಿ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಗದಗದಲ್ಲಿ ಮುಂದುವರೆದ ಹಿಂದೂ ದೇವರ ಮೇಲಿನ ಅಟ್ಟಹಾಸ: 2 ಗ್ರಾಮಗಳಲ್ಲಿ ಮೂರ್ತಿಗಳು ಧ್ವಂಸ – Kannada News | Miscreants Targets Hindu Temples In Gadag District, two Village Gods destroyed

ಗದಗ, (ಫೆಬ್ರವರಿ 19): ಜಿಲ್ಲೆಯಲ್ಲಿ ಹಿಂದೂ ದೇವರಗಳ (Hindu God) ಮೇಲಿನ ದಾಳಿ ಮುಂದುವರೆದಿದೆ. ಮೊನ್ನೇ ಶಿವರಾತ್ರಿ ಸಂಭ್ರಮದ ಮಧ್ಯೆ ದುಷ್ಕರ್ಮಿಗಳು ಶಿವಲಿಂಗ, ಅದರ ಪಾಣಿಪೀಠ ಮತ್ತು ನಂದಿ ವಿಗ್ರಹವನ್ನು ಭಗ್ನಗೊಳಿಸಿದ್ದರು. ಇದರ ಬೆನ್ನಲ್ಲೇ ಇದೀಗ ಗದಗ (Gadag) ಜಿಲ್ಲೆಯ ಮುಂಡರಗಿ ತಾಲೂಕಿನ ಮಲ್ಲಿಕಾರ್ಜುನಪುರ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಆದರಳ್ಳಿ ದೇವರು ಮೂರ್ತಿಗಳನ್ನು ಭಗ್ನಗೊಳಿಸಿದ್ದಾರೆ. ಈ ಮೂಲಕ ಕಿಡಿಗೇಡಿಗಳು ಹಿಂದೂ ದೇವರುಗಳನ್ನು ಟಾರ್ಗೆಟ್ ಮಾಡಿದ್ರಾ ಎನ್ನುವ ಪ್ರಶ್ನೆ ಉದ್ಭವಿಸಿದೆ.

ಮಲ್ಲಿಕಾರ್ಜುನಪುರದ ಗಾಳಿ ಬಸವೇಶ್ವರ ದೇವಸ್ಥಾನ ಶಿವಲಿಂಗ, ಪಾಣಿಪೀಠ ಹಾಗೂ ಆದರಳ್ಳಿ ಸಮೀಪದ ದಂಡೇರಿ ಮರಿಯಮ್ಮ ದೇವರುಗಳ ಮೂರ್ತಿ ಭಗ್ನಗೊಳಿಸಿದ್ದಾರೆ. ಇನ್ನು ಮರಿಯಮ್ಮ ದೇವಿ ಮುಖಕ್ಕೆ ಕೀಚಕರು ಮಸಿ ಬಳಿದು ಮುಖ ಧ್ವಂಸಗೊಳಿಸಿದ್ದಾರೆ. ದುಷ್ಟರ ದುಷ್ಕೃತ್ಯಕ್ಕೆ ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ನೋಡಿ: ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಗ್ರಾಮಸ್ಥರು

ಪುರಾತನ ಕಾಲದ ಐತಿಹಾಸಿಕ ದೇವಸ್ಥಾನಗಳನ್ನು ಗುರಿಯಾಗಿಸಿಕೊಂಡು ಕೃತ್ಯ ನಡೆಸುತ್ತಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಜನವಸತಿ ಕಡಿಮೆ ಇರುವ ಪ್ರದೇಶದಲ್ಲಿರುವ ಐತಿಹಾಸಿಕ ದೇವಸ್ಥಾನಗಳಲ್ಲಿ ಧ್ವಂಸ ಕೃತ್ಯಗಳು ನಡೆದಿವೆ. ಈವರೆಗೂ ಶಿಂಗಟಾಲೂರು ಘಟನೆಗೆ ಕಾರಣರಾದ ಆರೋಪಿಗಳ ಪತ್ತೆ ಆಗಿಲ್ಲ. ಇದೀಗ ಮತ್ತೆ ಎರಡು ಕಡೆಗಳಲ್ಲಿ ಹಿಂದೂ ಧರ್ಮದ ಭಾವನೆಗಳಿಗೆ ಧಕ್ಕೆ ತರುವಂತಾಗಿದ್ದು, ಪೊಲೀಸರು ಈ ಕೃತ್ಯಗಳಿಗೆ ಕಡಿವಾಣ ಹಾಕಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನಾನು ಸ್ಟಾರ್ ಆಗಲು ಸಲ್ಮಾನ್ ಖಾನ್ ತಂದೆ ಕಾರಣ ಎಂದಿದ್ದ ಶಾರುಖ್ – Kannada News | Shah Rukh Khan once said I am who I am because of Salim Khan

ಶಾರುಖ್ ಖಾನ್ (Shah Rukh Khan) ಈಗ ಬಾಲಿವುಡ್​ನ ಸೂಪರ್ ಸ್ಟಾರ್ ನಟ. ಕಳೆದ ಕೆಲವ ವರ್ಷಗಳಲ್ಲಿ ಸಲ್ಮಾನ್ ಖಾನ್ ಮತ್ತು ಆಮಿರ್ ಖಾನ್ ಅವರುಗಳನ್ನು ಸಹ ಹಿಂದಿಕ್ಕಿ ನಂಬರ್ 1 ಎನಿಸಿಕೊಂಡಿದ್ದಾರೆ. ಸಲ್ಮಾನ್ ಮತ್ತು ಆಮಿರ್ ಅವರಂತೆ ಚಿತ್ರರಂಗದ ಹಿನ್ನೆಲೆ ಇಲ್ಲದೆ ಕೇವಲ ಪ್ರತಿಭೆಯ ಆಧಾರದ ಮೇಲೆ ಅವಕಾಶ ಗಿಟ್ಟಿಸಿಕೊಂಡು ಸ್ಟಾರ್ ಆಗಿ ಬೆಳೆದವರು ಶಾರುಖ್ ಖಾನ್. ಆದರೆ ಹಿಂದೆ ಸಂದರ್ಶನವೊಂದರಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಅವರ ತಂದೆಯನ್ನು ಕೊಂಡಾಡಿದ್ದರು. ಯಾವ ಮಟ್ಟಿಗೆಂದರೆ, ‘ನಾನು ಇಂದು ಏನಾಗಿದ್ದೇನೊ ಅದಕ್ಕೆ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಕಾರಣ’ ಎಂದಿದ್ದರು. ಇಂದು ಆಸ್ಪತ್ರೆಯಲ್ಲಿ ಮಲಗಿರುವ ಸಲೀಂ ಖಾನ್, ಶಾರುಖ್ ಖಾನ್​​ಗೆ ಮಾಡಿದ್ದ ಸಹಾಯ ಎಂಥಹದ್ದು?

ಶಾರುಖ್ ಖಾನ್ ಮೂಲತಃ ದೆಹಲಿಯವರು. ಅವರು ನಟನಾಗಲೆಂದೇ ಮುಂಬೈಗೆ ಬಂದರು ಅದೂ ಬಹಳ ಸಣ್ಣ ವಯಸ್ಸಿನಲ್ಲಿ. ಕೇವಲ 15ನೇ ವಯಸ್ಸಿಗೆ ತಂದೆಯನ್ನು ಕಳೆದುಕೊಂಡಿದ್ದ ಶಾರುಖ್ ಖಾನ್​​ 19ರ ವಯಸ್ಸಿನಲ್ಲೇ ಮುಂಬೈಗೆ ಬಂದಿದ್ದರು. ಕುಟುಂಬವನ್ನು ಬಿಟ್ಟು ಬಂದಿದ್ದ ಶಾರುಖ್ ಖಾನ್​​ ಅವರಿಗೆ ಕುಟುಂಬ ಎಂದು ದೊರೆತಿದ್ದು ಸಲ್ಮಾನ್ ಖಾನ್ ಅವರ ಕುಟುಂಬ. ಅವರೇ ಹೇಳಿಕೊಂಡಿದ್ದಂತೆ ಶಾರುಖ್ ಖಾನ್ ಅವರು ಸಲೀಂ ಖಾನ್ ಅವರ ಮನೆಯಲ್ಲಿ ಹಲವು ಸಮಯ ನೆಲೆಸಿದ್ದರಂತೆ. ಸಲೀಂ ಖಾನ್ ಅವರು ನನ್ನ ವೃತ್ತಿ ಜೀವನದ ಆರಂಭದ ಸಮಯದಲ್ಲಿ ಸಾಕಷ್ಟು ಸಹಾಯ ಮಾಡಿದ್ದರು ಎಂದು ಅವರು ನೆನಪು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:ತಮ್ಮದೇ ಹಳೆ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಲಿದ್ದಾರೆ ಶಾರುಖ್ ಖಾನ್

ಇತ್ತೀಚೆಗೆ ಸಹ ಸಂದರ್ಶನವೊಂದರಲ್ಲಿ, ‘ಸಿನಿಮಾ ಹಿನ್ನೆಲೆ ಇಲ್ಲದ ಕುಟುಂಬದವನು ಎಂದು ನನಗೆ ಹೇಳಬೇಡಿ, ನಾನು ಸಲ್ಮಾನ್ ಖಾನ್ ಕುಟುಂಬದ ಸದಸ್ಯ’ ಎಂದಿದ್ದರು. ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ವೃತ್ತಿಯಲ್ಲಿ ಪ್ರತಿಸ್ಪರ್ಧಿಗಳಾಗಿದ್ದರೂ ಸಹ ಅತ್ಯುತ್ತಮ ಗೆಳೆಯರಾಗಿದ್ದರು. ಆಮಿರ್ ಖಾನ್ ಸಹ ಇವರ ಆತ್ಮೀಯ ಗೆಳೆಯರೇ ಆಗಿದ್ದರು. ಅದರೆ ಕತ್ರಿನಾ ಕೈಫ್ ಹುಟ್ಟುಹಬ್ಬದ ಪಾರ್ಟಿಯಲ್ಲಿ ಸಲ್ಮಾನ್ ಮತ್ತು ಶಾರುಖ್ ಖಾನ್ ಪರಸ್ಪರ ಜಗಳ ಮಾಡಿಕೊಂಡು ದೂರಾಗಿದ್ದರು. ಆದರೆ ಬಳಿಕ ಇಬ್ಬರೂ ಮತ್ತೆ ಮುನಿಸು ಮರೆತು ಒಂದಾದರು. ಶಾರುಖ್ ಖಾನ್ ಪುತ್ರ ಡ್ರಗ್ಸ್ ಕೇಸಿನಲ್ಲಿ ಬಂಧನಕ್ಕೆ ಒಳಗಾದಾಗ ಸಲ್ಮಾನ್ ಖಾನ್ ಖುದ್ದು ಶಾರುಖ್ ಖಾನ್ ಮನೆಗೆ ಭೇಟಿ ನೀಡಿ, ಸಂಕಷ್ಟದ ಸಮಯದಲ್ಲಿ ಗೆಳೆಯನ ಜೊತೆಗೆ ನಿಂತಿದ್ದರು.

ಶಾರುಖ್ ಖಾನ್, ತಂದೆಯಂತೆ ಕಂಡಿದ್ದ ಸಲೀಂ ಖಾನ್ ಅವರು ಇದೀಗ ಆಸ್ಪತ್ರೆಯಲ್ಲಿದ್ದಾರೆ. ಸಲೀಂ ಖಾನ್ ಅವರಿಗೆ ಮೆದುಳಿನಲ್ಲಿ ರಕ್ತಸ್ರಾವ ಆಗಿದೆ ಎನ್ನಲಾಗಿದ್ದು, ಸಣ್ಣ ಶಸ್ತ್ರಚಿಕಿತ್ಸೆ ಸಹ ಮಾಡಲಾಗಿದೆಯಂತೆ. ಇತ್ತೀಚೆಗಿನ ವರದಿಗಳ ಪ್ರಕಾರ, ಸಲೀಂ ಖಾನ್ ಅವರು ಸುಧಾರಿಸಿಕೊಳ್ಳುತ್ತಿದ್ದು, ಶೀಘ್ರವೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ರಾಜಮೌಳಿಯ ‘ವಾರಣಾಸಿ’ ಸಿನಿಮಾನಲ್ಲಿ ಸುದೀಪ್ ನಟನೆ? – Kannada News | Sudeep may act in SS Rajamouli’s Varanasi movie: Report

ಎಸ್​​ಎಸ್ ರಾಜಮೌಳಿ (SS Rajamouli) ಪ್ರಸ್ತುತ ಭಾರತ ಚಿತ್ರರಂಗದ ನಂಬರ್ 1 ನಿರ್ದೇಶಕ. ಭಾರಿ ಬಜೆಟ್​ನ ‘ವಾರಣಾಸಿ’ ಸಿನಿಮಾವನ್ನು ಅವರು ನಿರ್ದೇಶಿಸುತ್ತಿದ್ದಾರೆ. ಹಾಲಿವುಡ್ ಲೆವೆಲ್​​ನಲ್ಲಿ ನಿರ್ಮಾಣ ಆಗುತ್ತಿರುವ ಈ ಸಿನಿಮಾವನ್ನು ಭಾರತ ಮಾತ್ರವಲ್ಲದೆ ಹಾಲಿವುಡ್ ಮಾರುಕಟ್ಟೆಯನ್ನೂ ಸಹ ಗಮನದಲ್ಲಿರಿಸಿಕೊಂಡೇ ನಿರ್ಮಾಣ ಮಾಡಲಾಗುತ್ತಿದೆ. ಸಿನಿಮಾನಲ್ಲಿ ಮಹೇಶ್ ಬಾಬು ನಾಯಕ, ಪ್ರಿಯಾಂಕಾ ಚೋಪ್ರಾ ನಾಯಕಿ, ಪೃಥ್ವಿರಾಜ್ ಸುಕುಮಾರ್ ವಿಲನ್. ಇವರ ಜೊತೆಗೆ ಇನ್ನೂ ಕೆಲವು ಬೇರೆ ಬೇರೆ ಕಲಾವಿದರು ನಟಿಸುತ್ತಿದ್ದಾರೆ. ಆದರೆ ಇದೇ ಸಿನಿಮಾನಲ್ಲಿ ಕನ್ನಡದ ಸ್ಟಾರ್ ನಟ ಸುದೀಪ್ ಸಹ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

ಪಿಂಕ್​​ವಿಲ್ಲಾ ಸೌಥ್ ಮಾಡಿರುವ ವರದಿಯಂತೆ, ಸುದೀಪ್ ಅವರು ರಾಜಮೌಳಿ ನಿರ್ದೇಶನದ ‘ವಾರಣಾಸಿ’ ಸಿನಿಮಾನಲ್ಲಿ ಪ್ರಮುಖವಾದ ಪಾತ್ರವೊಂದರಲ್ಲಿ ನಟಿಸಲಿದ್ದಾರೆ. ಈ ಹಿಂದೆ ರಾಜಮೌಳಿ ನಿರ್ದೇಶನದ ‘ಈಗ’ ಮತ್ತು ‘ಬಾಹುಬಲಿ: ದಿ ಬಿಗಿನಿಂಗ್’ ಸಿನಿಮಾಗಳಲ್ಲಿ ಸುದೀಪ್ ನಟಿಸಿದ್ದು, ಎರಡೂ ಸಿನಿಮಾಗಳಲ್ಲಿ ಅತ್ಯದ್ಭುತ ಪ್ರದರ್ಶನವನ್ನು ಸುದೀಪ್ ನೀಡಿದ್ದರು. ಇದೀಗ ಮೂರನೇ ಬಾರಿಗೆ ರಾಜಮೌಳಿ ಜೊತೆಗೆ ಸುದೀಪ್ ಜೊತೆ ಆಗುತ್ತಿದ್ದಾರೆ. ‘ವಾರಣಾಸಿ’ ಸಿನಿಮಾನಲ್ಲಿ ಸುದೀಪ್ ಅವರ ಪಾತ್ರವು, ಸಿನಿಮಾದ ಕತೆಗೆ ಮಹತ್ತರವಾದ ತಿರುವು ನೀಡುವ ಪಾತ್ರವಾಗಿರುತ್ತದೆ ಎನ್ನಲಾಗುತ್ತಿದೆ.

ಸ್ವತಃ ರಾಜಮೌಳಿ ಅವರೇ ಈ ಹಿಂದೆ ಹಲವು ಬಾರಿ ಹೇಳಿಕೊಂಡಿರುವಂತೆ ಸುದೀಪ್, ಅವರ ನೆಚ್ಚಿನ ನಟ. ‘ಈಗ’ ಸಿನಿಮಾದ ಸುದೀಪ್ ನಟನೆ ರಾಜಮೌಳಿಗೆ ಅಚ್ಚುಮೆಚ್ಚಂತೆ, ‘ನನ್ನ ಸಿನಿಮಾಗಳಲ್ಲಿ ನನಗೆ ನಾಯಕನಿಗಿಂತಲೂ ವಿಲನ್ ಇಷ್ಟ, ಅದರಲ್ಲೂ ನನ್ನ ಸಿನಿಮಾಗಳಲ್ಲಿ ನನ್ನ ಮೆಚ್ಚಿನ ವಿಲನ್ ಸುದೀಪ್’ ಎಂದು ಈ ಹಿಂದೆ ಅವರು ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ಸುದೀಪ್ ಅವರನ್ನು ‘ಬಾಹುಬಲಿ’ ಸಿನಿಮಾದ ಅರೇಬಿಯಾದ ಕತ್ತಿಗಳ ವ್ಯಾಪಾರಿ ಅಸ್ಲಂ ಖಾನ್ ಪಾತ್ರಕ್ಕೆ ಹಾಕಿಕೊಂಡಿದ್ದರು. ಒಳ್ಳೆಯ ಫೈಟ್ ಸಹ ಆ ಸಿನಿಮಾನಲ್ಲಿ ಸುದೀಪ್ ಅವರಿಗೆ ಇತ್ತು.

ಇದನ್ನೂ ಓದಿ:‘ವಾರಣಾಸಿ’ ಚಿತ್ರಕ್ಕಾಗಿ ಅತ್ಯಂತ ವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ ರಾಜಮೌಳಿ

ರಾಜಮೌಳಿ ಅವರ ಈ ವರೆಗಿನ ಸಿನಿಮಾಗಳಲ್ಲಿಯೇ ಅತ್ಯಂತ ನಿರೀಕ್ಷಿತ ಮತ್ತು ಅತ್ಯಂತ ದುಬಾರಿ ಸಿನಿಮಾ ಆಗಿರುವ ‘ವಾರಣಾಸಿ’ಯಲ್ಲೂ ಸುದೀಪ್ ಅವರಿಗೆ ವಿಶೇಷ ಪಾತ್ರವೊಂದನ್ನು ರಾಜಮೌಳಿ ನೀಡುತ್ತಿದ್ದು, ಆ ಪಾತ್ರ ಹೇಗಿರಲಿದೆ ಎಂಬ ಕುತೂಹಲ ಸಹಜವಾಗಿಯೇ ಇದೆ. ಸುದೀಪ್ ಅವರು ‘ವಾರಣಾಸಿ’ ಸಿನಿಮಾನಲ್ಲಿ ನಟಿಸಲಿರುವ ಸುದ್ದಿ ಖಾತ್ರಿ ಆಗಿಲ್ಲ. ಆದರೆ ಆದಷ್ಟು ಬೇಗ ಸುದ್ದಿಯನ್ನು ಚಿತ್ರತಂಡವೇ ಹಂಚಿಕೊಳ್ಳಲಿದೆ ಎನ್ನಲಾಗುತ್ತಿದೆ.

‘ವಾರಣಾಸಿ’ ಸಿನಿಮಾವು ಮುಂದಿನ ವರ್ಷ ಏಪ್ರಿಲ್ 07 ರಂದು ಬಿಡುಗಡೆ ಆಗಲಿದೆ. ಸಿನಿಮಾದ ಅರ್ಧಕ್ಕೂ ಹೆಚ್ಚು ಭಾಗದ ಚಿತ್ರೀಕರಣವನ್ನು ರಾಜಮೌಳಿ ಮುಗಿಸಿದ್ದಾರೆ. ಈ ಸಿನಿಮಾಕ್ಕೆ ಸುಮಾರು 1000 ಕೋಟಿ ಬಜೆಟ್ ಹೂಡಲಾಗಿದ್ದು, ಸಿನಿಮಾವನ್ನು ಪಿವಿಆರ್ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಿಸಿರುವುದು ವಿಶೇಷ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ಸಂಸ್ಥೆಗಳು ಸಹ ಕೆಲಸ ಮಾಡಿವೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಸಂಗೀತ ನೀಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:46 pm, Thu, 19 February 26

Source link

ಮಂಗಳೂರಿನಲ್ಲಿ ಘೋರ ದುರಂತ: ಬಾಲ್ ಎಂದು ಬಾಂಬ್​​​​​ನಿಂದ ಬೌಲಿಂಗ್: ಬ್ಯಾಟ್​ನಿಂದ ಹೊಡೆದಾಗ ಬ್ಲಾಸ್ಟ್ – Kannada News | Mangaluru: Ball Shaped Object Explodes After Boy Hits It With Bat, Injured

ಸ್ಫೋಟಗೊಂಡ ವಸ್ತು, ಬಾಲಕನ ಕಾಲಿಗೆ ಗಾಯ

ಮಂಗಳೂರು, ಫೆಬ್ರವರಿ 19: ಚೆಂಡಿನ ಆಕಾರದ ವಸ್ತು ಸ್ಫೋಟಗೊಂಡು (explosion) ಓರ್ವ ಬಾಲಕನಿಗೆ ಗಾಯವಾಗಿರುವಂತಹ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ‌ ಬಂದಾರು ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ಅಭೀಶ್​ ಎಂಬ ಬಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ರವಾನಿಸಲಾಗಿದೆ. ಆಟ ಆಡುತ್ತಿದ್ದ ವೇಳೆ ಪತ್ತೆ ಚೆಂಡಿನಾಕಾರದ ವಸ್ತು ಪತ್ತೆಯಾಗಿದೆ. ಬಾಲ್​ ಅಂದುಕೊಂಡು ಬ್ಯಾಟ್​ನಿಂದ ಹೊಡೆದಾಗ ಬ್ಲಾಸ್ಟ್ ಆಗಿದೆ. ಸದ್ಯ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಮತ್ತಷ್ಟು ಮಾಹಿತಿ ಅಪ್​ಡೇಟ್​ ಆಗಲಿದೆ.

Source link

Chanakya Niti: ಈ ಕೆಲವು ಸಂದರ್ಭಗಳಲ್ಲಿ ಮೌನವಾಗಿರುವುದೇ ಉತ್ತಮ – Kannada News | Chanakya Niti: It is better to remain silent than to speak in these situations

ಆಚಾರ್ಯ ಚಾಣಕ್ಯರು (Acharya Chanakya) ರಾಜಕೀಯ ವಿಷಯಗಳು ಮಾತ್ರವಲ್ಲ ಜೀವನಕ್ಕೆ ಸಂಬಂಧಿಸಿದ ಸಾಕಷ್ಟು ವಿಚಾರಗಳ ಬಗ್ಗೆ ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಯಶಸ್ಸು, ಶ್ರೀಮಂತಿಕೆ ಗಳಿಸಲು ಏನು ಮಾಡಬೇಕು ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಪತಿಪತ್ನಿಯರು ಹೇಗಿರಬೇಕು ಎಂಬುದರ ಬಗ್ಗೆ ಸಾಕಷ್ಟು ಸಲಹೆಗಳನ್ನು ನೀಡಿದ್ದಾರೆ. ಅದೇ ರೀತಿ ಅವರು ಜೀವನದಲ್ಲಿ ಎದುರಾಗುವಂತಹ ಅನಗತ್ಯ ಸಂಕಷ್ಟಗಳನ್ನು ತಪ್ಪಿಸಲು ಒಂದಷ್ಟು ಸಂದರ್ಭಗಳಲ್ಲಿ ಮಾತನಾಡದೇ ಮೌನವಾಗಿರಬೇಕು ಎಂದು ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. ಹಾಗಿದ್ರೆ ಯಾವೆಲ್ಲಾ ಸಂದರ್ಭಗಳಲ್ಲಿ ಮೌನವಾಗಿರಬೇಕು ಎಂಬುದನ್ನು ತಿಳಿದುಕೊಳ್ಳಿ.

ಈ ಸಂದರ್ಭಗಳಲ್ಲಿ ಮೌನವಾಗಿರುವುದೇ ಉತ್ತಮ:

ಯಾರೂ ನಿಮ್ಮ ಮಾತನ್ನು ಕೇಳಲು ಸಿದ್ಧರಿಲ್ಲದಿದ್ದಾಗ: ಚಾಣಕ್ಯರು ಹೇಳುವಂತೆ ನಿಮ್ಮ ಮಾತನ್ನು ಕೇಳದವರ ಬಳಿ ನೀವು ಮಾತನಾಡುವುದು ಅಥವಾ ಅವರಿಗೆ  ನೀಡುವುದು ನಿಷ್ಪ್ರಯೋಜಕ. ನಿಮ್ಮ ಮಾತುಗಳಿಗೆ ಬೆಲೆ ಇಲ್ಲದಿರುವಲ್ಲಿ ನೀವು ಮೌನವಾಗಿರುವುದೇ ಉತ್ತಮ.

ನಿಮಗೆ ಸಂಪೂರ್ಣ ಮಾಹಿತಿ ಇಲ್ಲದಿದ್ದಾಗ: ಅಪೂರ್ಣ ಜ್ಞಾನ ಯಾವಾಗಲೂ ಅಪಾಯಕಾರಿ. ಒಂದು ವಿಷಯದ ಬಗ್ಗೆ ನಿಮಗೆ ಎಲ್ಲವೂ ತಿಳಿದಿಲ್ಲದಿದ್ದರೆ,  ಅದರ ಬಗ್ಗೆ ಮಾತನಾಡಲು ಹೋಗಬೇಡಿ, ಆ ಸಂದರ್ಭದಲ್ಲಿ ಮೌನವಾಗಿರುವುದೇ ಉತ್ತಮ ಎಂದು ಆಚಾರ್ಯ ಚಾಣಕ್ಯರು ಹೇಳಿದ್ದಾರೆ. ಈ ಸಂದರ್ಭಗಳಲ್ಲಿ ಮೌನವಾಗಿರುವುದರಿಂದ ನೀವು ನಗೆಪಾಟಲಿಗೆ ಗುರಿಯಾಗುವುದನ್ನು ತಪ್ಪಿಸಬಹುದು ಜೊತೆಗೆ ನಿಮಗೆ ಎದುರಾಗುವ ಅಪಾಯವನ್ನೂ ತಪ್ಪಿಸಬಹುದು.

ಕೋಪದಲ್ಲಿರುವಾಗ ಮೌನವಾಗಿರಿ: ಕೋಪದಲ್ಲಿ ಯಾವತ್ತೂ ಮಾತನಾಡಲು ಹೋಗಬಾರದು ಎಂದು ಚಾಣಕ್ಯರು ಒತ್ತಿ ಹೇಳಿದ್ದಾರೆ. ಕೋಪದಲ್ಲಿ ಮಾತನಾಡುವ ಮಾತುಗಳು ಸಂಬಂಧಗಳಲ್ಲಿ ಬಿರುಕು ಉಂಟುಮಾಡುತ್ತವೆ, ಇದರಿಂದ ಸುಂದರ ಸಂಬಂಧವೇ ಹಾಳಾಗುತ್ತದೆ. ಆದ್ದರಿಂದ ನೀವು ಕೋಪಗೊಂಡಾಗಲೆಲ್ಲಾ ತಕ್ಷಣ ಮೌನವಾಗಿರಿ. ಮೌನವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ನಿಮ್ಮನ್ನು ರಕ್ಷಿಸುತ್ತದೆ.

ಇದನ್ನೂ ಓದಿ: ಯೌವನದಲ್ಲಿ ಕೆಲಸಗಳನ್ನು ಮಾಡಿದರೆ ವೃದ್ಧಾಪ್ಯವು ಸಂತೋಷದಿಂದಿರುವುದು

ಯಾರಾದರೂ ಯಾರ ಬಗ್ಗೆಯಾದರೂ ಗಾಸಿಪ್‌ ಮಾಡುವಾಗ: ಮೂರನೇ ವ್ಯಕ್ತಿಯೊಬ್ಬರು ನಿಮ್ಮ ಮುಂದೆ ಯಾರನ್ನಾದರೂ ಗಾಸಿಪ್ ಮಾಡುತ್ತಿದ್ದರೆ ಅಥವಾ ಆ ವ್ಯಕ್ತಿಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದರೆ, ಆ ಚರ್ಚೆಯಲ್ಲಿ ತೊಡಗಿಕೊಳ್ಳುವುದನ್ನು ತಪ್ಪಿಸಿ. ನಿಮ್ಮ ಈ ಮೌನವು ಭವಿಷ್ಯದಲ್ಲಿ ದೊಡ್ಡ ಘರ್ಷಣೆಗಳು ಮತ್ತು ವಿವಾದಗಳಿಂದ ನಿಮ್ಮನ್ನು ರಕ್ಷಿಸುತ್ತದೆ.

ನಿಮ್ಮ ಗುರಿಗಳು ಮತ್ತು ರಹಸ್ಯಗಳ ಬಗ್ಗೆ ಮಾತನಾಡಬೇಡಿ: ಆಚಾರ್ಯ ಚಾಣಕ್ಯರು ನಿಮ್ಮ ರಹಸ್ಯಗಳನ್ನು ಮತ್ತು ಯಶಸ್ಸಿನ ಹಾದಿಯನ್ನು ಎಂದಿಗೂ ಹಂಚಿಕೊಳ್ಳಬಾರದು, ಇದರ ಬಗ್ಗೆ ಮೌನವಾಗಿರುವುದು ಉತ್ತಮ ಎಂದು ಹೇಳಿದ್ದಾರೆ. ನಿಮ್ಮ ಗುರಿ ಸಾಧಿಸುವವರೆಗೆ ಮೌನವಾಗಿರಿ. ಏಕೆಂದರೆ ನಿಮ್ಮ ರಹಸ್ಯಗಳನ್ನು ಹಂಚಿಕೊಂಡರೆ ಕೆಲವರು ನಿಮ್ಮ ದಾರಿಗೆ ಅಡ್ಡಿಯುಂಟುಮಾಡುವ ಸಾಧ್ಯತೆ ಇರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link