Headlines

ಆಸ್ಟ್ರೇಲಿಯಾಕ್ಕೆ ಬಿಗ್​​​ ಶಾಕ್: ಸೂಪರ್ 8ಕ್ಕೆ ಏರಿದ ಜಿಂಬಾಬ್ವೆ – Kannada News | Australia OUT! T20 World Cup 2026 Super 8 Sees Zimbabwe Qualify After Rain Washout

ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರಲ್ಲಿ (ICC T20 World Cup 2026) ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದು, ಇದೀಗ ಆಸ್ಟ್ರೇಲಿಯಾ ತಂಡವು ಟೂರ್ನಿಯಿಂದ ಹೊರಬಿದ್ದಿದೆ. ಶ್ರೀಲಂಕಾದ ಪಲ್ಲೆಕೆಲೆ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಜಿಂಬಾಬ್ವೆ ಮತ್ತು ಐರ್ಲೆಂಡ್ ನಡುವಿನ ಪಂದ್ಯವು ಸತತ ಮಳೆಯಿಂದಾಗಿ ರದ್ದಾಗಿದೆ. ಪಂದ್ಯ ರದ್ದಾದ ಕಾರಣ ಎರಡೂ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ಇದರಿಂದ ಜಿಂಬಾಬ್ವೆ ಒಟ್ಟು 5 ಅಂಕಗಳನ್ನು ಗಳಿಸಿ ‘ಬಿ’ ಗುಂಪಿನಿಂದ ಸೂಪರ್ 8 ಹಂತಕ್ಕೆ ಅರ್ಹತೆ…

Read More

ಈ ಊರಲ್ಲಿ ದೇವಿ‌ ಜಾತ್ರೆ ಮಾಡಬೇಕಂದ್ರೆ ಜನ ಐದು ದಿನ ಮನೆ ಖಾಲಿಮಾಡಬೇಕು!: ಕಾರಣ ಇಲ್ಲಿದೆ – Kannada News | Villagers Vacate Homes for 5 Days During Unique Gramadevi Fair in Kalaghatagi, Dharwad

ಮನೆಗಳಿಗೆ ಬೀಗ, ಊರಿಗೆ ಊರೇ ಖಾಲಿ ಖಾಲಿImage Credit source: Tv9 Kannada ಹುಬ್ಬಳ್ಳಿ, ಫೆಬ್ರವರಿ 17: ಧಾರವಾಡ ಜಿಲ್ಲೆಯ ಕಲಘಟಗಿ ಪಟ್ಟಣದಲ್ಲಿ ಎಲ್ಲಿ ನೋಡಿದ್ರೂ ಜನರು ಹೆಂಡತಿ ಮಕ್ಕಳನ್ನು ಕರೆದುಕೊಂಡು ಮನೆ ತೊರೆಯುತ್ತಿರುವ ದೃಶ್ಯಗಳು ಕಂಡು ಬರ್ತಿವೆ. ಅಷ್ಟಕ್ಕೂ ಊರಿಗೇನು ಯಾವುದೇ ಸಾಂಕ್ರಾಮಿಕ ರೋಗ ಲಗ್ಗೆ ಇಟ್ಟಿಲ್ಲ. ಹೀಗಿದ್ರೂ ಪಟ್ಟಣಕ್ಕೆ ಪಟ್ಟಣವೇ ಬಂದ್​​ ಆಗಿದೆ. ಇದಕ್ಕೆ ಕಾರಣ ದೇವಿಯ ಜಾತ್ರೆ. ಹೌದು, ದೇವಿ ಜಾತ್ರೆ ನಡೆಯಬೇಕಾದ್ರೆ ಐದು ದಿನ ಜನರು ಮನೆ ಖಾಲಿ ಮಾಡಬೇಕು. ಹಿಂದೂಗಳು…

Read More

ಜೂ ಎನ್​​ಟಿಆರ್​ ಹಳೆ ಸಿನಿಮಾ ಸೀಕ್ವೆಲ್​​ಗೆ ಕತೆ ರೆಡಿ, ಆದರೆ ನಟಿಸುತ್ತಾರಾ ನಟ? – Kannada News | Adhurs 2 first half story is ready will Jr NTR accepted the movie

ಜೂ ಎನ್​​ಟಿಆರ್ (Jr NTR) ಈಗ ಪ್ಯಾನ್ ಇಂಡಿಯಾ ನಟ. ಮೊದಲಿನಿಂದಲೂ ಅವರಿಗೆ ಮಾಸ್ ಇಮೇಜಿದೆ. ಈಗಲೂ ಸಹ ಅವರು ಮಾಸ್, ಕಮರ್ಶಿಯನ್ ಸಿನಿಮಾಗಳಲ್ಲಿಯೇ ನಟಿಸುತ್ತಾರೆ, ಯಾವುದೇ ಹೆಚ್ಚಿನ ಪ್ರಯೋಗಕ್ಕೆ ಒಡ್ಡಿಕೊಳ್ಳುವುದಿಲ್ಲ. ಅವರು 2010ರಲ್ಲಿ ನಟಿಸಿದ್ದ ಹಿಟ್ ಸಿನಿಮಾ ‘ಅಧುರ್ಸ್’ ತುಸು ಭಿನ್ನವಾದ ಸಿನಿಮಾ ಆಗಿತ್ತು. ಸಿನಿಮಾನಲ್ಲಿ ಅಪ್ಪಟ ಹಾಸ್ಯ ಪಾತ್ರವೊಂದರಲ್ಲಿ ಜೂ ಎನ್​​ಟಿಆರ್ ನಟಿಸಿದ್ದರು. ಈಗ ಅದೇ ಸಿನಿಮಾದ ಸೀಕ್ವೆಲ್​​ನ ಕತೆಯನ್ನು ಕತೆಗಾರ ಕೋನ ವೆಂಕಟ್ ರೆಡಿ ಮಾಡಿದ್ದಾರೆ. ಆದರೆ ಜೂ ಎನ್​​ಟಿಆರ್ ನಟಿಸುತ್ತಾರಾ ಎಂಬುದೇ…

Read More

ಗ್ಲೋಯಿಂಗ್ ಸ್ಕಿನ್‌ ನಿಮ್ಮದಾಗಲು ತಪ್ಪದೇ ಈ ಆಹಾರಗಳನ್ನು ಸೇವನೆ ಮಾಡಿ – Kannada News | What foods should be consumed to increase skin radiance?

ಪ್ರತಿಯೊಬ್ಬರೂ  ತಮ್ಮ ತ್ವಚೆಯನ್ನು ಆರೋಗ್ಯಕರ ಮತ್ತು ಕಾಂತಿಯುತವಾಗಿಡಲು (glowing skin) ಬಯಸುತ್ತಾರೆ. ಇದಕ್ಕಾಗಿ ದುಬಾರಿ ಉತ್ಪನ್ನಗಳ ಮೊರೆ ಹೋಗ್ತಾರೆ. ಮಾರುಕಟ್ಟೆಯಲ್ಲಿ ಲಭ್ಯವಿರುವ  ಕ್ರೀಮ್‌ಗಳು, ಔಷಧಿಗಳು ಮತ್ತು ಸೌಂದರ್ಯವರ್ಧಕಗಳು ಚರ್ಮಕ್ಕೆ ತಾತ್ಕಾಲಿಕ ಹೊಳಪನ್ನು ನೀಡಬಹುದು, ಆದರೆ ಇವು ಹೆಚ್ಚು ಪರಿಣಾಮಕಾರಿಯಲ್ಲ. ಹಾಗಾಗಿ ರಾಸಾಯನಿಕ ಉತ್ಪನ್ನಗಳ ಮೇಲೆ ಹೆಚ್ಚು ಅವಲಂಬಿತರಾಗುವ ಬದಲು, ಉತ್ಕರ್ಷಣ ನಿರೋಧಕಗಳು, ಜೀವಸತ್ವಗಳು, ಆರೋಗ್ಯಕರ ಕೊಬ್ಬುಗಳು ಮತ್ತು ಜಲಸಂಚಯನದಿಂದ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವ ಮೂಲಕ ತ್ವಚೆಯ ಕಾಂತಿ, ಆರೋಗ್ಯ ಎರಡನ್ನೂ ಹೆಚ್ಚಿಸಬಹುದು. ತ್ವಚೆಯ ಕಾಂತಿಯನ್ನು ಹೆಚ್ಚಿಸಲು ಯಾವ ಆಹಾರಗಳನ್ನು…

Read More

ಭಾರತದಲ್ಲಿ ಬರಲಿವೆ 50ಕ್ಕೂ ಹೆಚ್ಚು ಡೀಪ್​ಟೆಕ್ ಕಂಪನಿಗಳು: ಅಶ್ವಿನಿ ವೈಷ್ಣವ್ – Kannada News | Expecting arrival of over 50 deep tech Indian companies, says Ashwini Vaishnaw at India AI Impact Summit

ನವದೆಹಲಿ, ಫೆಬ್ರುವರಿ 17: ‘ಕ್ರಿಯೇಟ್ ಇನ್ ಇಂಡಿಯಾ’ ಉಪಕ್ರಮದ ಅಡಿಯಲ್ಲಿ ಮುಂಬರುವ ವರ್ಷಗಳಲ್ಲಿ ಭಾರತದಲ್ಲಿ 50ಕ್ಕೂ ಹೆಚ್ಚು ಡೀಪ್-ಟೆಕ್ ಕಂಪನಿಗಳು ತಲೆ ಎತ್ತುವ ನಿರೀಕ್ಷೆ ಇದೆ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಡಾ. ಅಶ್ವಿನಿ ವೈಷ್ಣವ್ ಹೇಳಿದ್ದಾರೆ. ದೆಹಲಿಯಲ್ಲಿ ನಿನ್ನೆಯಿಂದ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯ ಭಾಗವಾಗಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಚಿವರು, ಎಐ ಆವಿಷ್ಕಾರಗಳಿಗೆ ಪೂರಕವಾಗಿ ಭಾರತದ ಸೆಮಿಕಂಡಕ್ಟರ್ ಮಿಷನ್ನ ಹಾದಿ ಸಾಗುತ್ತದೆ ಎಂದಿದ್ದಾರೆ. ಹಾಗೆಯೇ, ಮಿಷನ್​ನ ಮುಂದಿನ ಹಂತದಲ್ಲಿ ಚಿಪ್ ಡಿಸೈನ್…

Read More

ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪ್ರಮಾಣವಚನ ಸ್ವೀಕಾರ – Kannada News | Tarique Rahman takes oath as Bangladesh New Prime Minister

ಢಾಕಾ, ಫೆಬ್ರವರಿ 17: ಬಿಎನ್​ಪಿ ನಾಯಕ ತಾರಿಕ್ ರೆಹಮಾನ್ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ತಾರಿಕ್ ರೆಹಮಾನ್ ಎಲ್ಲಾ ಚುನಾಯಿತ ಬಿಎನ್‌ಪಿ ಸಂಸದರೊಂದಿಗೆ ಇಂದು ಢಾಕಾದ ರಾಷ್ಟ್ರೀಯ ಸಂಸತ್ ಕಟ್ಟಡದಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಫೆಬ್ರವರಿ 12ರಂದು ನಡೆದ 13ನೇ ಸಂಸತ್ ಚುನಾವಣೆಯ ನಂತರ ಈ ಮಹತ್ವದ ಸಮಾರಂಭ ನಡೆಯಿತು. ಬಾಂಗ್ಲಾದೇಶದಲ್ಲಿ ಈ ಬಾರಿ ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷ (ಬಿಎನ್‌ಪಿ) ಭರ್ಜರಿ ಜಯ ಸಾಧಿಸಿತ್ತು. ಬಾಂಗ್ಲಾದೇಶದ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ತಾರಿಕ್ ರೆಹಮಾನ್ ಮತ್ತು ಅವರ ನೂತನ…

Read More

3 ಹೆಸರಲ್ಲಿ ಪ್ರೀತಿ, ಮದ್ವೆ ನಾಟಕ: ಯುವಕರಿಗೆ ಗಾಳ ಹಾಕುತ್ತಿದ್ದವಳು ಮಾಡಿದ್ದೇನು ಗೊತ್ತಾ? – Kannada News | A Woman Cheating Youths On Love And Marriage Name at Dharwad

ಧಾರವಾಡ, (ಫೆಬ್ರವರಿ 17): ಯುವತಿಯೋರ್ವಳು ಮೂರ್ಮೂರು ಹೆಸರಿಟ್ಟುಕೊಂಡು ಯುವಕರನ್ನು ವಂಚಿಸಿದ್ದಾಳೆ ಎನ್ನುವ ಆರೋಪ (Accusation) ಕೇಳಿ ಬಂದಿದೆ. ಶ್ರೀಮಂತ ಹುಡುಗರಿಗೆ ಗಾಳ ಹಾಕ್ತಿದ್ದ ಐಶ್ವರ್ಯ ಎನ್ನುವ ಯುವತಿ, ಪ್ರೀತಿ (Love) ನಾಟಕವಾಡಿ ಯುವಕರಿಂದ ಹಣ ಪಡೆದು ವಂಚಿಸಿದ್ದಾಳಂತೆ. ಅದರಂತೆ ಐಶ್ವರ್ಯ, ಯುವಕನನ್ನು ಮದ್ವೆಯಾಗುವುದಾಗಿ ಲಕ್ಷಾಂತರ ರೂಪಾಯಿ ಮೋಸ ಮಾಡಿದ್ದಾಳೆ. ಐಶ್ವರ್ಯ, ರೇಣುಕಾ, ಆರೋಹಿ ಎಂಬ ಮೂರು ವಿಭಿನ್ನ ಹೆಸರಿನಲ್ಲಿ ಯುವಕರನ್ನು ಪರಿಚಯಿಸಿಕೊಂಡಿದ್ದ ಯುವತಿ, ಆರ್ಥಿಕವಾಗಿ ಸಹಾಯ ಮಾಡುವ ಯುವಕರನ್ನೇ ಟಾರ್ಗೆಟ್ ಮಾಡುತ್ತಿದ್ದಳಂತೆ. ಸಂಜು ದೊಡಮನಿ ಹಾಗೂ ಗುರು…

Read More

ರಿಷಬ್ ಶೆಟ್ಟಿ ಜೊತೆ ನಟಿಸಲಿರುವ ‘ಬಾಹುಬಲಿ’ಯ ‘ಸಹೋದರ’ – Kannada News | Rana Daggubati joins Rishab Shetty’s Jai Hanuman movie

ರಿಷಬ್ ಶೆಟ್ಟಿ (Rishab Shetty) ‘ಕಾಂತಾರ: ಚಾಪ್ಟರ್ 1’ ಸಿನಿಮಾ ಮೂಲಕ ಅಭೂತಪೂರ್ವ ಗೆಲುವು ಕಂಡಿದ್ದಾರೆ. ‘ಕಾಂತಾರ 1’ ಸಿನಿಮಾದ ಬಳಿಕ ಇದೀಗ ರಿಷಬ್ ತಮ್ಮ ಹೊಸ ಪ್ರಾಜೆಕ್ಟ್​ನಲ್ಲಿ ತೊಡಗಿಸಿಕೊಳ್ಳುವ ಸಮಯ ಬಂದಾಗಿದೆ. ‘ಕಾಂತಾರ: ಚಾಪ್ಟರ್ 1’ ಶೂಟಿಂಗ್ ಮಾಡುತ್ತಿರುವಾಗಲೇ ಅವರಿಗೆ ತೆಲುಗಿನ ‘ಜೈ ಹನುಮಾನ್’ ಸಿನಿಮಾದ ಆಫರ್ ಬಂದಿತ್ತು, ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿದೆ. ಕೆಲವೇ ದಿನಗಳಲ್ಲಿ ಸಿನಿಮಾದ ಚಿತ್ರೀಕರಣವೂ ಪ್ರಾರಂಭ ಆಗಲಿದೆ. ಇದೀಗ ಸ್ಟಾರ್ ನಟರೊಬ್ಬರು ರಿಷಬ್ ಜೊತೆಗೆ ನಟಿಸಲಿರುವ ಸುದ್ದಿ ಹೊರಬಿದ್ದಿದೆ….

Read More

ಹಿಂದೂ ಯುವತಿಯರೇ ಟಾರ್ಗೆಟ್: ಶಾಕಿಂಗ್ ಆಗಿದೆ ‘ದಿ ಕೇರಳ ಸ್ಟೋರಿ 2’ ಟ್ರೇಲರ್ – Kannada News | The Kerala Story 2 trailer shows the shocking scenes of love Jihad

2023ರಲ್ಲಿ ಬಿಡುಗಡೆ ಆಗಿದ್ದ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಸೂಪರ್ ಹಿಟ್ ಆಗಿತ್ತು. ಆ ಸಿನಿಮಾದಲ್ಲಿ ಹಿಂದೂ ಹುಡುಗಿಯರನ್ನು ಬಲವಂತದಿಂದ ಭಯೋತ್ಪಾದಕ ಕೃತ್ಯಕ್ಕೆ ಬಳಸಿಕೊಳ್ಳುವ ಕಥೆಯನ್ನು ತೋರಿಸಲಾಗಿತ್ತು. ಈಗ ‘ದಿ ಕೇರಳ ಸ್ಟೋರಿ 2’ (The Kerala Story 2) ಸಿನಿಮಾ ಸಿದ್ಧವಾಗಿದೆ. ಈ ಸಿನಿಮಾದಲ್ಲಿ ಕೂಡ ಲವ್ ಜಿಹಾದ್ ಬಗ್ಗೆ ತೋರಿಸಲಾಗುತ್ತದೆ. ‘ದಿ ಕೇರಳ ಸ್ಟೋರಿ 2’ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು, ಅದರಲ್ಲಿ ಕಥೆಯ ಬಗ್ಗೆ ಝಲಕ್ ನೀಡಲಾಗಿದೆ. ಟ್ರೇಲರ್…

Read More

ಅವಳಿಗೆ ಮೊಬೈಲ್ ಚಟ ಇತ್ತು: ಹಲವು ಪುರುಷರ ಜತೆ ಸಂಪರ್ಕ ಇದೆ ಎಂದು ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ – Kannada News | Birur Husband Murders Wife Over Suspicion, Children Orphaned

ಅನುಮಾನದಿಂದ ಹೆಂಡತಿಯನ್ನೇ ಕೊಂದ ಪತಿ ಚಿಕ್ಕಮಗಳೂರು, ಫೆ.17: ಪ್ರೀತಿಸಿ ಮದುವೆಯಾಗಿ 12 ವರ್ಷಗಳ ಸುಖ ಸಂಸಾರ ನಡೆಸಿದ್ದ ದಂಪತಿಗಳ ನಡುವೆ ಅನುಮಾನದ ಕಿಚ್ಚು ಹತ್ತಿ, ದಾಂಪತ್ಯ ಜೀವನವೇ ನಾಶವಾಗಿದೆ. ಈ ಅನುಮಾನದ ಭೂತದಿಂದ ಪತ್ನಿಯ ಕೊಲೆ ಮಾಡಿರುವ ಘಟನೆ ಬೀರೂರು ಪಟ್ಟಣದ ಚೌಡೇಶ್ವರಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಮಮತಾ (32) ಎಂದು ಗುರುತಿಸಲಾಗಿದೆ. ಇದೀಗ ಕೊಲೆ ಮಾಡಿದ ಪತಿ ರಂಗನಾಥ್ ಪೊಲೀಸರ ವಶದಲ್ಲಿದ್ದಾನೆ. ಅಜ್ಜಂಪುರ ತಾಲೂಕಿನ ಬುರುಡೆಕಟ್ಟೆ ಗ್ರಾಮದ ರಂಗನಾಥ್ ಮತ್ತು ಮಮತಾ ಪರಸ್ಪರ ಪ್ರೀತಿಸಿ 12…

Read More