Headlines

ಕೊಲ್ಲೂರು ದೇವಸ್ಥಾನಕ್ಕೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ – Kannada News | Tamil Nadu CM Joseph Vijay Kollur Visit: Purnakumbha Welcome Assured, Says Priest Nityananda Adiga

ಉಡುಪಿ, ಜೂನ್ 12: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಜೋಸೆಫ್ ವಿಜಯ್ (Joseph Vijay) ಇಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಮಧ್ಯಾಹ್ನ 3:00 ಗಂಟೆಗೆ ಸಿಎಂ ವಿಜಯ್ ಅವರು ಕೊಲ್ಲೂರಿಗೆ ಆಗಮಿಸಲಿದ್ದು, ಈ ಕುರಿತು ದೇವಸ್ಥಾನದ ಅರ್ಚಕ ನಿತ್ಯಾನಂದ ಅಡಿಗ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಅರ್ಚಕ ವೃಂದ ಹಾಗೂ ಸಿಬ್ಬಂದಿ…

Read More

Optical Illusion: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಗುರುತಿಸಬಲ್ಲಿರಾ – Kannada News | Optical Illusion: Can you spot a hidden cat in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: hindustantimes.com ಆಪ್ಟಿಕಲ್‌ ಇಲ್ಯೂಷನ್‌ನಂತಹ (optical illusion) ಈ ಒಗಟಿನ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಹೀಗಾಗಿ ಈ ಒಗಟನ್ನು ಬಿಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಹೆಚ್ಚಿನವರು ಈ ಒಗಟು ಬಿಡಿಸಲು ಸಾಧ್ಯವಿಲ್ಲ ಎಂದು ಸೋಲನ್ನು ಒಪ್ಪಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಕಳ್ಳ ಬೆಕ್ಕೊಂದು ಅಡಗಿ ಕುಳಿತಿದೆ. 15 ಸೆಕೆಂಡುಗಳಲ್ಲಿ ಈ ಬೆಕ್ಕನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ನೀವು ರೆಡಿ ಇದ್ದರೆ ನಿಮ್ಮ…

Read More

ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಸಾಕಷ್ಟು ವರ್ಷಗಳ ಹಿಂದೆ ಮುಳುಗಿದ್ದ ದೇಗುಲದ ಅವಶೇಷ ಗೋಚರ – Kannada News

ಮೈಸೂರು, ಜೂನ್ 12: ಮೈಸೂರು ಜಿಲ್ಲೆಯ ಹೆಚ್​ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಸಾಕಷ್ಟು ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಬಸವೇಶ್ವರ ದೇಗುಲದ ಅವಶೇಷಗಳು ಈಗ ಮತ್ತೆ ಗೋಚರವಾಗಿವೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಬಹುದು ಎಂಬ ಚರ್ಚೆಯ ನಡುವೆಯೇ ಈ ವಿದ್ಯಮಾನ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ ದೇವಸ್ಥಾನದ ಕಲ್ಲುಮಂಟಪದ ಭಾಗಗಳು ಕಾಣಿಸಿಕೊಳ್ಳುತ್ತಿವೆ. ಸ್ಥಳೀಯರ ಪ್ರಕಾರ, 15 ವರ್ಷಗಳ ಹಿಂದೆ ಇದೇ ರೀತಿಯ ಪರಿಸ್ಥಿತಿ ಎದುರಾದಾಗಲೂ ದೇಗುಲದ…

Read More

‘ನಾನು ಸತ್ತಿಲ್ಲ, ಟಿವಿ9 ನೋಡ್ತಾ ಆರಾಮಾಗಿದ್ದೇನೆ’; ದೊಡ್ಡಣ್ಣ ಸ್ಪಷ್ಟನೆ – Kannada News

ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ  (Doddanna) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಕಿಡಿಗೇಡಿಗಳು ಸುಳ್ಳು ಸುದ್ದಿಯೊಂದನ್ನು ಹರಿಬಿಟ್ಟಿದ್ದಾರೆ. ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಭಾವಪೂರ್ಣ ಶ್ರದ್ಧಾಂಜಲಿಯ ಪೋಸ್ಟರ್ ಮತ್ತು ಪೋಸ್ಟ್‌ಗಳು ಫೇಸ್‌ಬುಕ್ ಸೇರಿದಂತೆ ಹಲವು ಕಡೆ ಭಾರಿ ವೈರಲ್ ಆಗಿದ್ದವು. ಇದನ್ನು ನೋಡಿ ಅವರ ಅಭಿಮಾನಿಗಳು ಹಾಗೂ ಆತ್ಮೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದರೆ, ಈ ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ನಟ ದೊಡ್ಡಣ್ಣ ಸಿಟ್ಟಾಗಿದ್ದಾರೆ . ತಾವೇ ಸ್ಪಷ್ಟನೆ ಕೊಡುವ ಮೂಲಕ ಈ ವದಂತಿಗೆ…

Read More

ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ 120ಕ್ಕೂ ಹೆಚ್ಚು ಸ್ಟ್ರೀಟ್ ಲೈಟ್ಸ್ ನಾಪತ್ತೆ! ಕಳ್ಳರ ಕಾಟಕ್ಕೆ ಜನ ಕಂಗಾಲು – Kannada News

ಬೆಂಗಳೂರಿನ ಗಾಂಧಿ ಬಜಾರ್‌ನಲ್ಲಿ 120ಕ್ಕೂ ಹೆಚ್ಚು ಸ್ಟ್ರೀಟ್ ಲೈಟ್ಸ್ ನಾಪತ್ತೆ!Image Credit source: The Hindu ಬೆಂಗಳೂರು, ಜೂನ್ 12: ಗಾಂಧಿ ಬಜಾರ್​ನಲ್ಲಿ (Gandhibazar) ಹಬ್ಬ ಹರಿದಿನಗಳಿರಲಿ ಅಥವಾ ವೀಕೆಂಡ್ ಇರಲಿ, ಅಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸುತ್ತಾರೆ. ಆದರೆ, ಕಳೆದ ಕೆಲವು ದಿನಗಳಿಂದ ಸಂಜೆಯಾಗುತ್ತಿದ್ದಂತೆ ಇಲ್ಲಿಗೆ ಬರಲು ಮಹಿಳೆಯರು ಮತ್ತು ಮಕ್ಕಳು ತೀವ್ರ ಭಯಪಡುತ್ತಿದ್ದಾರೆ. ಇದಕ್ಕೆ ಕಾರಣ, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾದ ಬಸವನಗುಡಿಯ ಗಾಂಧಿ ಬಜಾರ್ ರಸ್ತೆ ಈಗ ಸಂಪೂರ್ಣ ಕತ್ತಲೆಯಲ್ಲಿ ಮುಳುಗಿದೆ. ಮುಖ್ಯಾಂಶಗಳು…

Read More

ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್ ಇದ್ದ ರೈಲಿನ ಮೇಲೆ ಕಲ್ಲು ತೂರಾಟ – Kannada News

ಕಾನ್ಪುರ, ಜೂನ್ 12: ಆರ್​ಎಸ್​ಎಸ್​ ಸರಸಂಘ ಚಾಲಕ ಮೋಹನ್ ಭಾಗವತ್(Mohan Bhagwat) ಇದ್ದ ರೈಲಿನ ಮೇಲೆ ಕಲ್ಲು ತೂರಾಟ ನಡೆದಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಕಾನ್ಪುರದಿಂದ ದೆಹಲಿಗೆ ತೆರಳುತ್ತಿದ್ದ ಸ್ವರ್ಣ ಶತಾಬ್ದಿ ಎಕ್ಸ್​ಪ್ರೆಸ್ ರೈಲಿನ ಮೇಲೆ ಫಿಜೋರಾಬಾದ್ ಬಳಿ ಗುರುವಾರ ಸಂಜೆ ಕಲ್ಲು ತೂರಾಟ ನಡೆದಿದೆ. ರೈಲ್ವೆ ಮತ್ತು ಸ್ಥಳೀಯ ಪೊಲೀಸರು ಅತ್ಯಂತ ತೀವ್ರ ಹಾಗೂ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ರೈಲಿನಲ್ಲಿದ್ದ ಆರ್‌ಎಸ್‌ಎಸ್ ಸರ್ಸಂಘಚಾಲಕ್ ಮೋಹನ್ ಭಾಗವತ್ ಸೇರಿದಂತೆ ಎಲ್ಲಾ ಪ್ರಯಾಣಿಕರು ಸಂಪೂರ್ಣ ಸುರಕ್ಷಿತವಾಗಿದ್ದು, ತನಿಖೆ…

Read More

ತುಂಗಭದ್ರಾ ಒಡಲು ಖಾಲಿ ಖಾಲಿ! ಜಲಾಶಯಲ್ಲಿ ಕೇವಲ 9 TMC ನೀರು ಸಂಗ್ರಹ – Kannada News

ಕೊಪ್ಪಳ, ಜೂನ್ 12: ಕೊಪ್ಪಳ, ರಾಯಚೂರು, ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿ ಪ್ರಮಾಣದಲ್ಲಿ ಕುಸಿದಿದೆ. ಪ್ರಸ್ತುತ ಜಲಾಶಯದಲ್ಲಿ ಕೇವಲ 9 ಟಿಎಂಸಿ ನೀರು ಮಾತ್ರ ಸಂಗ್ರಹವಾಗಿದ್ದು, ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅತಿ ಕಡಿಮೆ ಪ್ರಮಾಣವಾಗಿದೆ. ಕಳೆದ ವರ್ಷ ಜೂನ್‌ನಲ್ಲಿ ಜಲಾಶಯದಲ್ಲಿ 24 ಟಿಎಂಸಿ ನೀರಿತ್ತು. ಈ ವರ್ಷ ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದರೂ, ಮಲೆನಾಡು ಭಾಗದಲ್ಲಿ ಮಳೆಯ ಕೊರತೆಯಿಂದ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಕೇವಲ…

Read More

‘ಗಾಳಿ ಸುದ್ದಿ ನಂಬಬೇಡಿ’; ಧರ್ಮಸ್ಥಳ ಪ್ರಕರಣದ ಆರೋಪಕ್ಕೆ ಪ್ರಕಾಶ್ ರಾಜ್ ಪ್ರತಿಕ್ರಿಯೆ – Kannada News

ಬೆಂಗಳೂರು, ಜೂನ್, 12: ಧರ್ಮಸ್ಥಳದ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ಟ್ವಿಸ್ಟ್ ಎದುರಾಗಿದೆ. ತನ್ನನ್ನು ಕೆಲವರು ಬಳಸಿಕೊಂಡು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ಚಿನ್ನಯ್ಯ ಹೇಳಿದ್ದಾನೆ. ಅಲ್ಲದೆ, ಈತ ಪ್ರಕಾಶ್ ರಾಜ್ ಹೆಸರನ್ನು ರಿಟ್ ಅರ್ಜಿಯಲ್ಲಿ ಉಲ್ಲೇಖ ಮಾಡಿದ್ದಾನೆ. ಈ ಬೆನ್ನಲ್ಲೇ, ನಟ ಪ್ರಕಾಶ್ ರಾಜ್ ಅವರು (Prakash Raj) ಪ್ರತಿಕ್ರಿಯಿಸಿದ್ದಾರೆ. ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹೆಸರು ಕೇಳಿಬರುತ್ತಿದ್ದಂತೆ ಅಧಿಕೃತ ಸ್ಪಷ್ಟನೆ ನೀಡಿರುವ ಅವರು, ತಮ್ಮ ಬಗ್ಗೆ ಹರಡುತ್ತಿರುವುದು ಸುಳ್ಳು ಸುದ್ದಿ ಎಂದು…

Read More

ಇರಾನ್ ಮೇಲಿನ ದಾಳಿ ರದ್ದುಗೊಳಿಸಿದ ಟ್ರಂಪ್, ಶೀಘ್ರದಲ್ಲೇ ಶಾಂತಿ ಒಪ್ಪಂದ – Kannada News

ವಾಷಿಂಗ್ಟನ್, ಜೂನ್ 12: ಮಧ್ಯಪ್ರಾಚ್ಯದಲ್ಲಿ ಕಳೆದ ಕೆಲವು ದಿನಗಳಿಂದ ತೀವ್ರಗೊಂಡಿದ್ದ ಯುದ್ಧದ ಭೀತಿ ಮತ್ತು ಬಿಕ್ಕಟ್ಟು ಕೊನೆಗೊಳ್ಳುವ ಅತ್ಯಂತ ಆಶಾದಾಯಕ ಬೆಳವಣಿಗೆಯೊಂದು ಜಾಗತಿಕ ಮಟ್ಟದಲ್ಲಿ ನಡೆದಿದೆ. ಇರಾನ್ ಮೇಲಿನ ಸತತ ಮೂರನೇ ದಿನದ ನಿಗದಿತ ಮಿಲಿಟರಿ ದಾಳಿಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಅಧಿಕೃತವಾಗಿ ರದ್ದುಗೊಳಿಸಿದ್ದು, ಟೆಹ್ರಾನ್ ಜೊತೆಗಿನ ಐತಿಹಾಸಿಕ ಶಾಂತಿ ಒಪ್ಪಂದ ಅಂತಿಮ ಹಂತಕ್ಕೆ ತಲುಪಿದೆ ಎಂದು ಘೋಷಿಸಿದ್ದಾರೆ. ಒಪ್ಪಂದಕ್ಕೆ ಅಮೆರಿಕ-ಇರಾನ್ ಒಲವು: ಶ್ವೇತಭವನದ  ಮಾತನಾಡಿದ ಅಧ್ಯಕ್ಷ ಟ್ರಂಪ್, ಒಪ್ಪಂದಕ್ಕೆ ಎರಡೂ ಕಡೆಯವರು ಒಪ್ಪಿಗೆ…

Read More

ರಣವೀರ್ ಸಿಂಗ್ ಎಕ್ಸಿಟ್ ಎಫೆಕ್ಟ್: ಅಧಿಕೃತವಾಗಿ ‘ಡಾನ್ 3’ ಕೈಬಿಟ್ಟ ಫರ್ಹಾನ್ ಅಖ್ತರ್? – Kannada News

ಬಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಫ್ರಾಂಚೈಸಿ ‘ಡಾನ್ 3’ ಸಿನಿಮಾ ಶೂಟಿಂಗ್ ಆರಂಭಕ್ಕೂ ಮುನ್ನವೇ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ. ಚಿತ್ರದಿಂದ ನಟ ರಣವೀರ್ ಸಿಂಗ್ ಹೊರನಡೆದ ಮೇಲೆ ‘ಡಾನ್ 3’ ಸದ್ಯಕ್ಕಂತೂ ಸೆಟ್ಟೇರುವುದು ಅನುಮಾನ ಎಂಬ ಮಾತು ಕೇಳಿಬರುತ್ತಿತ್ತು. ಆ ಮಾತು ಈಗ ನಿಜವಾಗುವ ಸಮಯ ಬಂದಿದ್ದು, ನಿರ್ದೇಶಕ ಹಾಗೂ ನಟ ಫರ್ಹಾನ್ ಅಖ್ತರ್ ಈ ಪ್ರಾಜೆಕ್ಟ್ ಅನ್ನು ಸದ್ಯಕ್ಕೆ ಬದಿಗೆ ತಳ್ಳಿದ್ದಾರೆ. ಇದರ ಬೆನ್ನಲ್ಲೇ ಅವರು ಹೊಸದೊಂದು ಬಿಗ್ ಪ್ರಾಜೆಕ್ಟ್‌ಗೆ ಕೈಹಾಕಿದ್ದಾರೆ. ಹೊಸ ವರ್ದಿಗಳ ಪ್ರಕಾರ ಫರ್ಹಾನ್…

Read More