Category Archives: Blog

Your blog category

ಪ್ರೀತಿಯ ಗೆಲುವು: ನ್ಯಾಯಾಧೀಶರ ಮುಂದೆಯೇ ವಿಚ್ಛೇದನ ಪತ್ರ ಹರಿದು ಗಂಡನನ್ನು ಅಪ್ಪಿಕೊಂಡ ಹೆಂಡತಿ – Kannada News | Delhi Court Reunion: Wife Tears Divorce Papers, Hugs Husband After Act of Love

ನವದೆಹಲಿ, ಜೂನ್ 12: ಕೋಪ, ಅಹಂಕಾರ ಮತ್ತು ತಪ್ಪು ತಿಳಿವಳಿಕೆಗಳ ಮಧ್ಯೆ ಮುರಿದು ಬೀಳುವ ಹಂತ ತಲುಪಿರುವ ಸಂಬಂಧಗಳನ್ನು ಕೇವಲ ಒಂದು ಸಣ್ಣ ಗುಣ ಹೇಗೆ ಮರುಜೋಡಣೆ ಮಾಡಬಲ್ಲದು ಎಂಬುದಕ್ಕೆ ದೆಹಲಿಯ ಕೌಟುಂಬಿಕ ನ್ಯಾಯಾಲಯದಲ್ಲಿ ನಡೆದ ಈ ಅಪರೂಪದ, ಘಟನೆಯೇ ಸಾಕ್ಷಿ. ವಿಚ್ಛೇದನ(Divorce) ನೀಡಲು ಕೋರ್ಟ್ ಮೆಟ್ಟಿಲೇರಿದ್ದ ದಂಪತಿ, ನ್ಯಾಯಾಧೀಶರ ಮುಂದೆಯೇ ಪರಸ್ಪರ ಅಪ್ಪಿಕೊಂಡು ಒಂದಾದ ಸುಂದರ ಘಟನೆ ಇಲ್ಲಿದೆ.

2020 ರ ಮದುವೆ ಮತ್ತು ಕೌಟುಂಬಿಕ ಬಿರುಗಾಳಿ
ದೊಡ್ಡ ಕನಸುಗಳೊಂದಿಗೆ 2020 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಈ ದಂಪತಿ ನಡುವೆ, ಮದುವೆಯಾದ ಕೆಲವೇ ದಿನಗಳಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಭುಗಿಲೆದ್ದವು. ಜಗಳ ತಾರಕಕ್ಕೇರಿ ಪ್ರಕರಣ ಕೋರ್ಟ್ ತಲುಪಿತು. ಕಳೆದ ಕೆಲವು ಸಮಯದಿಂದ ಇಬ್ಬರ ನಡುವೆ ತೀವ್ರ ಕಾನೂನು ಹೋರಾಟ ನಡೆಯುತ್ತಿತ್ತು.

ಆದರೆ, ಮಗಳ ಸಂಸಾರ ಹಳಸುತ್ತಿರುವುದನ್ನು ಕಂಡು ಆಕೆಯ ವಯಸ್ಸಾದ ತಂದೆ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಮಗಳ ದುಃಖವನ್ನು ಸಹಿಸಲಾಗದೆ ಅವರು ಕೊನೆಗೊಂದು ದಿನ ತೀವ್ರವಾಗಿ ಅಸ್ವಸ್ಥಗೊಂಡು, ಆಸ್ಪತ್ರೆಯ ಐಸಿಯು (ICU) ಸೇರಿದರು.

ದ್ವೇಷ ಮರೆತು ಮಾವನಿಗೆ ‘ಮಗ’ನಾದ ಅಳಿಯ
ಮಾವನ ಅನಾರೋಗ್ಯ ಮತ್ತು ಇಡೀ ಕುಟುಂಬದ ಕಷ್ಟದ ಪರಿಸ್ಥಿತಿಯ ವಿಷಯ ತಿಳಿದ ತಕ್ಷಣ, ಆ ಅಳಿಯ ಕೋರ್ಟ್, ಕೇಸ್ ಮತ್ತು ಎಲ್ಲಾ ದ್ವೇಷಗಳನ್ನು ಸಂಪೂರ್ಣವಾಗಿ ಬದಿಗಿಟ್ಟರು. ಒಂದು ಕ್ಷಣವೂ ವ್ಯರ್ಥ ಮಾಡದೆ ಆಸ್ಪತ್ರೆಗೆ ಧಾವಿಸಿದ ಆತ, ಬಿಕ್ಕಟ್ಟಿನ ಸಮಯದಲ್ಲಿ ಅಳಿಯನಾಗಿ ಅಲ್ಲ, ಒಬ್ಬ ಜವಾಬ್ದಾರಿಯುತ ಮಗನಾಗಿ ನಿಂತರು.

ಚಿಕಿತ್ಸೆಗೆ ಅಗತ್ಯವಿದ್ದ ಭಾರಿ ಮೊತ್ತದ ಹಣವನ್ನು ತಾನೇ ಸ್ವತಃ ವ್ಯವಸ್ಥೆ ಮಾಡಿದ್ದಲ್ಲದೆ, ಹಗಲಿರುಳು ಆಸ್ಪತ್ರೆಯಲ್ಲೇ ಇದ್ದು ವೈದ್ಯರೊಂದಿಗೆ ಮಾತನಾಡಿ ಮಾವನಿಗೆ ಅತ್ಯುತ್ತಮ ಚಿಕಿತ್ಸೆ ಸಿಗುವಂತೆ ನೋಡಿಕೊಂಡರು. ಕೋರ್ಟಿನಲ್ಲಿ ಎದುರಾಳಿಯಾಗಿದ್ದ ವ್ಯಕ್ತಿ ಆಸ್ಪತ್ರೆಯಲ್ಲಿ ತಮ್ಮ ಪಾಲಿನ ದೇವದೂತನಂತೆ ಮಗನಾಗಿ ನಿಂತದ್ದನ್ನು ಕಂಡು ಹುಡುಗಿ ಮತ್ತು ಆಕೆಯ ಕುಟುಂಬದ ಕಣ್ಣುಗಳು ತೇವವಾದವು.

ಮತ್ತಷ್ಟು ಓದಿ: ದೃಢ ಸಂಕಲ್ಪಕ್ಕೆ ಸಂದ ಜಯ: ವಿಚ್ಛೇದನ, 23 ವರ್ಷಗಳ ಸುದೀರ್ಘ ಹೋರಾಟದ ಬಳಿಕ 85 ಕೋಟಿ ರೂ. ಜೀವನಾಂಶ ಪಡೆದ ವರ್ಷಾ

ಆಸ್ಪತ್ರೆಯ ಐಸಿಯುನಲ್ಲಿ ಬರೆಯಲಾದ ಈ ಪ್ರೀತಿಯ ಅಧ್ಯಾಯ, ಮರುದಿನ ಕೋರ್ಟ್ ರೂಮಿನಲ್ಲಿ ಒಂದು ಅದ್ಭುತ ದೃಶ್ಯಕ್ಕೆ ಕಾರಣವಾಯಿತು. ಪ್ರಕರಣದ ಮುಂದಿನ ವಿಚಾರಣೆಗಾಗಿ ನ್ಯಾಯಾಧೀಶರ ಮುಂದೆ ಫೈಲ್ ಬಂದಾಗ, ಇಡೀ ಕೋರ್ಟ್ ಬೆರಗಾಗುವಂತಹ ಘಟನೆ ನಡೆಯಿತು.

ವಕೀಲರು ತಮ್ಮ ವಾದ ಮಂಡಿಸಲು ಸಿದ್ಧರಾಗುತ್ತಿದ್ದಂತೆಯೇ, ಆ ಮಹಿಳೆ ಇದ್ದಕ್ಕಿದ್ದಂತೆ ಮುಂದೆ ಬಂದು, ತನ್ನ ಕೈಯಲ್ಲಿದ್ದ ವಿಚ್ಛೇದನ ಅರ್ಜಿ ಪತ್ರಗಳನ್ನು ಎಲ್ಲರ ಮುಂದೆಯೇ ಹರಿದು ಹಾಕಿದಳು. ಅಲ್ಲದೆ, ಓಡಿಹೋಗಿ ಕಣ್ಣೀರ ನಡುವೆಯೇ ತನ್ನ ಗಂಡನನ್ನು ಎಲ್ಲರ ಮುಂದೆ ಗಟ್ಟಿಯಾಗಿ ಅಪ್ಪಿಕೊಂಡಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ಮತ್ತೊಬ್ಬ ಸೂರ್ಯವಂಶಿ ಬರಲು 40 ವರ್ಷ ಬೇಕಾಗಬಹುದು’;  ರಾಹುಲ್ ದ್ರಾವಿಡ್ – Kannada News | Vaibhav Suryavanshi: Dravid Hails IPL Star as ‘Unique Player’ for Team India

ವೈಭವ್ ಸೂರ್ಯವಂಶಿ ಅವರು ತಮ್ಮ ಪ್ರತಿಭೆಯನ್ನು ಜಗತ್ತಿನ ಎದರು ತೆರೆದಿಟ್ಟಿದ್ದಾರೆ. ಈ ಬಾರಿಯ ಐಪಿಎಲ್ ಸೀಸನ್​ ಅಲ್ಲಿ ದಾಖಲೆ ಮೇಲೆ ದಾಖಲೆ ಬರೆದಿದ್ದಾರೆ. ಸೂಪರ್​ ಸ್ಟ್ರೈಕರ್​, ಆರೆಂಜ್ ಕ್ಯಾಪ್, ಸೀಸನ್​ನ ಅತಿ ಹೆಚ್ಚು ಸಿಕ್ಸ್ ಸೇರಿದಂತೆ ಅನೇಕ ಅವಾರ್ಡ್ ಅವರ ಕೈ ಸೇರಿತ್ತು. ಈಗ ಅವರಿಗೆ ಟೀಂ ಇಂಡಿಯಾ ಮಣೆ ಹಾಕಿದೆ. ಈ ಕುರಿತು ಮಾಜಿ ನಾಯಕ, ಕನ್ನಡಿಗ ರಾಹುಲ್ ದ್ರಾವಿಡ್ ಮನಬಿಚ್ಚಿ ಮಾತನಾಡಿದ್ದಾರೆ. ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದ್ರಾವಿಡ್, ‘ಎಲ್ಲರನ್ನೂ ವೈಭವ್ ಸೂರ್ಯವಂಶಿಗೆ ಹೋಲಿಕೆ ಮಾಡುವುದು ಸರಿಯಲ್ಲ. ಆತ ಒಬ್ಬ ಅತ್ಯಂತ ಯೂನಿಕ್ ಪ್ಲೇಯರ್’ ಎಂದಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಮಹಾರಾಜ ಟ್ರೋಫಿ ಕೆಎಸ್‌ಸಿಎ ಟಿ20 ಟೂರ್ನಿಯ ಉದ್ಘಾಟನಾ ಸಮಾರಂಭದಲ್ಲಿ ರಾಹುಲ್ ದ್ರಾವಿಡ್ ಈ ಮಾತುಗಳನ್ನು ಆಡಿದ್ದಾರೆ. ಮಾಜಿ ಕ್ರಿಕೆಟಿಗ ಹಾಗೂ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಅವರೊಂದಿಗೆ ಸೇರಿ ಟ್ರೋಫಿ ಅನಾವರಣಗೊಳಿಸಿದ ಬಳಿಕ, ಮಾಧ್ಯಮಗಳ ಜೊತೆ ಮಾತನಾಡುತ್ತಾ ದ್ರಾವಿಡ್ ಅವರು ವೈಭವ್ ಅವರ ಬ್ಯಾಟಿಂಗ್ ಶೈಲಿ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡಿದ್ದಾರೆ.

‘ಎಲ್ಲರನ್ನೂ ವೈಭವ್ ಸೂರ್ಯವಂಶಿಗೆ ಹೋಲಿಸಿ ನೋಡುವುದು ಚೆನ್ನಾಗಿರಲ್ಲ. ವೈಭವ್ ಸೂರ್ಯವಂಶಿ ಒಬ್ಬ ವಿಭಿನ್ನ ಮತ್ತು ಯೂನಿಕ್ ಪ್ಲೇಯರ್. ಸಚಿನ್ 15 ವರ್ಷದವರಿದ್ದಾಗ ಆಡಿದ್ರು. 40 ವರ್ಷಗಳ ಸುದೀರ್ಘ ಅವಧಿಯ ಬಳಿಕ ಈಗ ಮತ್ತೊಬ್ಬ ವೈಭವ್ ಸೂರ್ಯವಂಶಿ ನಮಗೆ ಸಿಕ್ಕಿದ್ದಾನೆ. ಮತ್ತೊಬ್ಬ ವೈಭವ್ ಬರಲು ಇನ್ನು 40 ವರ್ಷ ಬೇಕಾಗಬಹುದು’ ಎಂದು ನಕ್ಕಿದ್ದಾರೆ.

ಇದನ್ನೂ ಓದಿ: ಸೂರ್ಯವಂಶಿ ಟೀಮ್ ಇಂಡಿಯಾ ಡೆಬ್ಯೂ ವಿಳಂಬ? ಎದುರಾಯ್ತು ಅಡಚಣೆ

‘ನಮ್ಮ ಹುಡುಗರೂ ಚೆನ್ನಾಗಿ ಆಡುತ್ತಾರೆ, ಅವರಿಗೂ ಅವಕಾಶ ಸಿಗಬೇಕು. ಆದರೆ ವೈಭವ್ ಒಬ್ಬ ವಿಭಿನ್ನ ಆಟಗಾರ ಎಂಬುದನ್ನು ನಾವೆಲ್ಲರೂ ಒಪ್ಪಿಕೊಳ್ಳಬೇಕು. ಆತ ಸಖತ್ ಆಗಿ ಆಡುತ್ತಿದ್ದಾನೆ. ಅದೊಂದು ಸ್ಪೆಷಲ್ ಟ್ಯಾಲೆಂಟ್. ಮುಂಬರುವ ದಿನಗಳಲ್ಲೂ ಆತ ಇದೇ ರೀತಿಯ ಪ್ರದರ್ಶನವನ್ನು ಮುಂದುವರಿಸಿಕೊಂಡು ಹೋಗಲಿ’ ಎಂದು ಹಾರೈಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rate: ಸತತ ಕುಸಿತದ ಬಳಿಕ ಚಿನ್ನದ ಬೆಲೆ ಸಖತ್ ಏರಿಕೆ; ಇಲ್ಲಿದೆ ದರಪಟ್ಟಿ – Kannada News | Gold Price Today on 12th June 2026, Gold And Silver Rates In Bengaluru, Delhi, Mumbai | Latest News in Kannada

ನವದೆಹಲಿ, ಜೂನ್ 12: ಕಳೆದ ಎರಡು ದಿನದಲ್ಲಿ 600 ರೂಗಳಷ್ಟು ಇಳಿಕೆಯಾಗಿದ್ದ ಚಿನ್ನದ ಬೆಲೆ (Gold Rate) ಇವತ್ತು 270 ರೂಗಳಷ್ಟು ಏರಿದೆ. ಬೆಳ್ಳಿ ಬೆಲೆಯೂ 10 ರೂ ಜಂಪ್ ಆಗಿದೆ. ಬಂಗಾರದ ದರ ವಿದೇಶಗಳಲ್ಲೂ ಹೆಚ್ಚಿನ ಕಡೆ ಏರಿಕೆ ಕಂಡಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,36,200 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,48,580 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 26,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,36,200 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 26,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 26,500 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜೂನ್ 12ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,858 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,620 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,144 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,858 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 13,620 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 260 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 13,620 ರೂ
  • ಚೆನ್ನೈ: 13,800 ರೂ
  • ಮುಂಬೈ: 13,620 ರೂ
  • ದೆಹಲಿ: 13,635 ರೂ
  • ಕೋಲ್ಕತಾ: 13,620 ರೂ
  • ಕೇರಳ: 13,620 ರೂ
  • ಅಹ್ಮದಾಬಾದ್: 13,625 ರೂ
  • ಜೈಪುರ್: 13,635 ರೂ
  • ಲಕ್ನೋ: 13,635 ರೂ
  • ಭುವನೇಶ್ವರ್: 13,620 ರೂ

ಇದನ್ನೂ ಓದಿ: ಕೈಯಿಂದ ಪ್ರೀಮಿಯಮ್ ಕಟ್ಟಬೇಕಿಲ್ಲ; ಉಚಿತ 7 ಲಕ್ಷ ರೂ ವಿಮಾ ಸೌಲಭ್ಯ ಪಡೆಯುವುದು ಹೇಗೆ?

ವಿದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 551 ರಿಂಗಿಟ್ (12,924 ರುಪಾಯಿ)
  • ದುಬೈ: 499.25 ಡಿರಾಮ್ (12,944 ರುಪಾಯಿ)
  • ಅಮೆರಿಕ: 137 ಡಾಲರ್ (13,055 ರುಪಾಯಿ)
  • ಸಿಂಗಾಪುರ: 184.50 ಸಿಂಗಾಪುರ್ ಡಾಲರ್ (13,676 ರುಪಾಯಿ)
  • ಕತಾರ್: 510.50 ಕತಾರಿ ರಿಯಾಲ್ (13,105 ರೂ)
  • ಸೌದಿ ಅರೇಬಿಯಾ: 514 ಸೌದಿ ರಿಯಾಲ್ (13,044 ರುಪಾಯಿ)
  • ಓಮನ್: 52.85 ಒಮಾನಿ ರಿಯಾಲ್ (13,076 ರುಪಾಯಿ)
  • ಕುವೇತ್: 42.25 ಕುವೇತಿ ದಿನಾರ್ (13,101 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 260 ರೂ
  • ಚೆನ್ನೈ: 265 ರೂ
  • ಮುಂಬೈ: 260 ರೂ
  • ದೆಹಲಿ: 260 ರೂ
  • ಕೋಲ್ಕತಾ: 260 ರೂ
  • ಕೇರಳ: 265 ರೂ
  • ಅಹ್ಮದಾಬಾದ್: 260 ರೂ
  • ಜೈಪುರ್: 260 ರೂ
  • ಲಕ್ನೋ: 260 ರೂ
  • ಭುವನೇಶ್ವರ್: 265 ರೂ
  • ಪುಣೆ: 260

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Jaspal Rana: ಪ್ರಸಿದ್ದ ಶೂಟಿಂಗ್ ತರಬೇತುದಾರ ಜಸ್ಪಾಲ್ ರಾಣಾ ನಿಧನ, ಮನು ಭಾಕರ್​ಗೆ ಮಾರ್ಗದರ್ಶನ ನೀಡಿದ್ದ ಕೋಚ್ ಇನ್ನಿಲ್ಲ – Kannada News | Jaspal Rana Passesaway: India Mourns Legendary Shooting Coach and Dronacharya Awardee

ನವದೆಹಲಿ, ಜೂನ್ 12: ಭಾರತೀಯ ಕ್ರೀಡಾಲೋಕಕ್ಕೆ ಅಪಾರ ಕೊಡುಗೆ ನೀಡಿದ ಶ್ರೇಷ್ಠ ಶೂಟರ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ತರಬೇತುದಾರ ಜಸ್ಪಾಲ್ ರಾಣಾ(49)(Jaspal Rana) ಅವರು ಕೊನೆಯುಸುರೆಳೆದಿದ್ದಾರೆ. ಆದರೆ, ಅವರು ಕ್ರೀಡಾಲೋಕಕ್ಕೆ ನೀಡಿರುವ ಮೂರು ದಶಕಗಳ ಅದ್ಭುತ ಕೊಡುಗೆ, ಒಲಿಂಪಿಕ್ ಪದಕ ವಿಜೇತರನ್ನು ರೂಪಿಸಿದ ಅವರ ಸಾಧನೆ ಮತ್ತು ಭಾರತೀಯ ಕ್ರೀಡಾ ಇತಿಹಾಸದಲ್ಲಿ ಅವರು ಬಿಟ್ಟು ಹೋಗಿರುವ ಅಮರ ಪರಂಪರೆ ಎಂದಿಗೂ ಸ್ಫೂರ್ತಿಯಾಗಿ ಉಳಿಯಲಿದೆ.

1990ರ ದಶಕದಲ್ಲಿ ಭಾರತದಲ್ಲಿ ಶೂಟಿಂಗ್ ಕ್ರೀಡೆಯು ಇನ್ನು ಜನಪ್ರಿಯವಾಗದ ಕಾಲದಲ್ಲೇ ಜಸ್ಪಾಲ್ ರಾಣಾ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅಸಾಧಾರಣ ಪ್ರದರ್ಶನ ನೀಡುವ ಮೂಲಕ ದೇಶದ ಗಮನ ಸೆಳೆದರು. ಏಷ್ಯನ್ ಗೇಮ್ಸ್, ಕಾಮನ್‌ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಚಾಂಪಿಯನ್‌ಶಿಪ್‌ಗಳಲ್ಲಿ ಸಾಲು ಸಾಲು ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಭಾರತದಲ್ಲಿ ಶೂಟಿಂಗ್ ಕ್ರೀಡೆಗೆ ಒಂದು ಹೊಸ ಮೆರುಗನ್ನು ತಂದುಕೊಟ್ಟರು. ಅಸಂಖ್ಯಾತ ಯುವಕರು ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳಲು ಇವರೇ ಮುಖ್ಯ ಸ್ಫೂರ್ತಿಯಾಗಿದ್ದರು.

ತಮ್ಮ ಯಶಸ್ವಿ ಕ್ರೀಡಾ ವೃತ್ತಿಜೀವನದ ನಂತರ ಜಸ್ಪಾಲ್ ರಾಣಾ ಅವರು ಯುವ ಪ್ರತಿಭೆಗಳನ್ನು ಗುರುತಿಸುವ ತರಬೇತುದಾರರಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದರು. ಭಾರತದ ಒಲಿಂಪಿಕ್ ಇತಿಹಾಸದಲ್ಲಿ ಹೊಸ ದಾಖಲೆ ಬರೆದ ಮನು ಭಾಕರ್ ಸೇರಿದಂತೆ ದೇಶದ ಹಲವು ಅತ್ಯುನ್ನತ ಪಿಸ್ತೂಲ್ ಶೂಟರ್‌ಗಳನ್ನು ಅಂತಾರಾಷ್ಟ್ರೀಯ ಮಟ್ಟದ ಚಾಂಪಿಯನ್‌ಗಳನ್ನಾಗಿ ರೂಪಿಸಿದ ಕೀರ್ತಿ ಜಸ್ಪಾಲ್ ರಾಣಾ ಅವರಿಗೆ ಸಲ್ಲುತ್ತದೆ.

ಮತ್ತಷ್ಟು ಓದಿ: CWG 2022: ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತೀಯರ ಈ ಐತಿಹಾಸಿಕ ಸಾಧನೆಗಳ ಬಗ್ಗೆ ನಿಮಗೆಷ್ಟು ಗೊತ್ತು?

2012 ರಿಂದ ದೇಶದ ಜೂನಿಯರ್ ಪಿಸ್ತೂಲ್ ತಂಡದ ಜವಾಬ್ದಾರಿ ಹೊತ್ತು, ಭಾರತದ ಬೆಂಚ್ ಸ್ಟ್ರೆಂತ್ ಅನ್ನು ಜಾಗತಿಕ ಮಟ್ಟದಲ್ಲಿ ಬಲಿಷ್ಠಗೊಳಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಮ್ಯೂನಿಚ್‌ನಲ್ಲಿ ನಡೆದ ಐಎಸ್‌ಎಸ್‌ಎಫ್  ವಿಶ್ವಕಪ್ ಮುಗಿಸಿ ಭಾರತಕ್ಕೆ ಮರಳುವ ವಿಮಾನ ಪ್ರಯಾಣದಲ್ಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ರಾಣಾ ಅವರನ್ನು ನವದೆಹಲಿಯ ಸಾಕೇತ್‌ನ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಜೂನ್ 11ರ ಗುರುವಾರ ಅವರು ಕೊನೆಯುಸಿರೆಳೆದಿದ್ದಾರೆ ಎಂದು ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಪರಿಷತ್ತು ದೃಢಪಡಿಸಿದೆ.

ಜಸ್ಪಾಲ್ ರಾಣಾ ಅವರ ದೈಹಿಕ ಅಗಲಿಕೆ ಭಾರತೀಯ ಕ್ರೀಡಾರಂಗಕ್ಕೆ ತುಂಬಲಾರದ ನಷ್ಟವಾದರೂ, ಅವರು ತರಬೇತಿ ನೀಡಿದ ನೂರಾರು ಕ್ರೀಡಾಪಟುಗಳು ಮುಂದಿನ ಒಲಿಂಪಿಕ್ಸ್ ಮತ್ತು ಜಾಗತಿಕ ವೇದಿಕೆಗಳಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿಹಿಡಿಯಲಿದ್ದಾರೆ. ಅವರು ಕ್ರೀಡೆಗೆ ನೀಡಿದ ಕೊಡುಗೆಗೆ ಪ್ರತಿಯಾಗಿ ಭಾರತೀಯ ಕ್ರೀಡಾಲೋಕವು ಅವರಿಗೆ ಶ್ರದ್ಧಾಪೂರ್ವಕ ನಮನಗಳನ್ನು ಸಲ್ಲಿಸುತ್ತಿದೆ.

ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 10:39 am, Fri, 12 June 26

Source link

ಸಲ್ಮಾನ್ ನೆರೆಯವರಿಗೆ ಮುಂಬೈ ಹೈಕೋರ್ಟ್ ಬಲವಾದ ಎಚ್ಚರಿಕೆ; ಏನಿದು ವಿಷಯ?

ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ಪನ್ವೇಲ್ ಫಾರ್ಮ್‌ಹೌಸ್‌ನ ನೆರೆಮನೆಯವರಾದ ಕೇತನ್ ಕಕ್ಕರ್ ನಡುವಿನ ಜಮೀನು ವಿವಾದ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಪ್ರಕರಣದ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ’ಸಾಮಾಜಿಕ ಜಾಲತಾಣಗಳು ಯಾರನ್ನೂ ದೂಷಿಸುವ ಅಥವಾ ಅವಹೇಳನ ಮಾಡುವ ಹಕ್ಕನ್ನು ಯಾರಿಗೂ ನೀಡುವುದಿಲ್ಲ, ಅದು ಸಾಮಾನ್ಯ ನಾಗರಿಕನಿರಲಿ ಅಥವಾ ಸೆಲೆಬ್ರಿಟಿಯಾಗಿರಲಿ’ ಎಂದು ಗಂಭೀರವಾಗಿ ಹೇಳಿದೆ. ಅಲ್ಲದೆ, ಸಲ್ಮಾನ್ ಖಾನ್ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹಾಕಿರುವ ಆಕ್ಷೇಪಾರ್ಹ ಪೋಸ್ಟ್‌ಗಳು ಹಾಗೂ ವಿಡಿಯೋಗಳನ್ನು ತೆಗೆದುಹಾಕುವಂತೆ ನೆರೆಮನೆಯವರಾದ ಕೇತನ್ ಕಕ್ಕರ್ ಅವರಿಗೆ ನ್ಯಾಯಮೂರ್ತಿ ಶರ್ಮಿಳಾ ದೇಶಮುಖ್ ಸೂಚಿಸಿದ್ದಾರೆ.

ಏನಿದು ಜಮೀನು ವಿವಾದ?

ಅಮೆರಿಕದಲ್ಲಿ ನೆಲೆಸಿದ್ದ ಅನಿವಾಸಿ ಭಾರತೀಯ ಕೇತನ್ ಕಕ್ಕರ್, 1990ರ ದಶಕದಲ್ಲಿ ಮಹಾರಾಷ್ಟ್ರದ ರಾಯಗಡ ಜಿಲ್ಲೆಯ ಪನ್ವೇಲ್‌ನಲ್ಲಿರುವ ಸಲ್ಮಾನ್ ಖಾನ್ ಅವರ ಪ್ರಸಿದ್ಧ ‘ಅರ್ಪಿತಾ ಫಾರ್ಮ್ಸ್’ ಬಳಿ ಎರಡೂವರೆ ಎಕರೆ ಗುಡ್ಡಗಾಡು ಭೂಮಿಯನ್ನು ಖರೀದಿಸಿದ್ದರು. ಆರಂಭದಲ್ಲಿ ಎರಡೂ ಕುಟುಂಬಗಳ ನಡುವೆ ಉತ್ತಮ ಸಂಬಂಧವಿತ್ತು. ಆದರೆ, 2019 ರಲ್ಲಿ ಇವರ ನಡುವಿನ ಬಾಂಧವ್ಯ ಹದಗೆಟ್ಟಿತು.

ಸಲ್ಮಾನ್ ಖಾನ್ ಮೇಲಿರುವ ಗಂಭೀರ ಆರೋಪಗಳೇನು?

ತಮ್ಮ ಜಮೀನಿನಲ್ಲಿದ್ದ ಪರಿಸರ ಸ್ನೇಹಿ ಮನೆ ಮತ್ತು ಗಣಪತಿ ದೇವಸ್ಥಾನವನ್ನು ಕೆಡವಲಾಗಿದೆ, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ ಹಾಗೂ ತಮ್ಮ ಭೂಮಿಯನ್ನು ಖಾಸಗಿ ಅರಣ್ಯ ಪ್ರದೇಶವೆಂದು ಘೋಷಿಸಲು ಕೆಲವು ದಾಖಲೆಗಳನ್ನು ತಿರುಚಲಾಗಿದೆ’ ಎಂದು ಕೇತನ್ ಕಕ್ಕರ್, ಸಲ್ಮಾನ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು.

ಸಲ್ಮಾನ್ ಖಾನ್ ವಕೀಲರ ವಾದವೇನು?

ಸಲ್ಮಾನ್ ಖಾನ್ ಈ ಎಲ್ಲಾ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಕೇತನ್ ಕಕ್ಕರ್ ಖರೀದಿಸಲು ಬಯಸಿದ್ದ ಭೂಮಿಯ ಪ್ರಕ್ರಿಯೆಯೇ ಕಾನೂನುಬಾಹಿರವಾಗಿತ್ತು, ಹೀಗಾಗಿಯೇ ಸರ್ಕಾರ ಅದನ್ನು ರದ್ದುಗೊಳಿಸಿದೆ ಎಂದು ಸಲ್ಮಾನ್ ಅವರ ವಕೀಲರು ಸ್ಪಷ್ಟಪಡಿಸಿದ್ದಾರೆ. ಈ ಕೋಪದಲ್ಲಿ ಕಕ್ಕರ್ ಅವರು ಸಲ್ಮಾನ್ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎನ್ನುವುದು ನಟನ ವಾದವಾಗಿದೆ.

ವಿವಾದಕ್ಕೆ ಧಾರ್ಮಿಕ ತಿರುವು ಮತ್ತು ಮಾನನಷ್ಟ ಮೊಕದ್ದಮೆ

ಖಾಸಗಿಯಾಗಿ ವಿವಾದ ಬಗೆಹರಿಯದಿದ್ದಾಗ, ಕೇತನ್ ಕಕ್ಕರ್ ಸಾಮಾಜಿಕ ಜಾಲತಾಣಗಳಲ್ಲಿ ಸಲ್ಮಾನ್ ವಿರುದ್ಧ ಸರಣಿ ವಿಡಿಯೋಗಳನ್ನು ಅಪ್‌ಲೋಡ್ ಮಾಡಿದ್ದರು. ಒಂದು ವಿಡಿಯೋದಲ್ಲಿ ಸಲ್ಮಾನ್ ಅವರನ್ನು ಬಾಬರ್ ಮತ್ತು ಔರಂಗಜೇಬ್‌ಗೆ ಹೋಲಿಸಿ, ಗಣಪತಿ ಹಾಗೂ ಅಯೋಧ್ಯೆ ದೇವಾಲಯದ ಪ್ರಸ್ತಾಪ ಮಾಡಿ ವಿವಾದಕ್ಕೆ ಧಾರ್ಮಿಕ ತಿರುವು ನೀಡಲು ಯತ್ನಿಸಿದ್ದರು. ಈ ವಿಡಿಯೋ ವೈರಲ್ ಆದ ಬೆನ್ನಲ್ಲೇ, ಸಲ್ಮಾನ್ ಖಾನ್ ಅವರು ಕಕ್ಕರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದರು. ಕೆಳ ನ್ಯಾಯಾಲಯದಲ್ಲಿ ತಕ್ಷಣದ ಪರಿಹಾರ ಸಿಗದ ಕಾರಣ ಸಲ್ಮಾನ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಇದನ್ನೂ ಓದಿ: ಸಲ್ಮಾನ್ ಖಾನ್ ಆಪ್ತನ ಜಿಮ್ ಮೇಲೆ ಬಿಷ್ಣೊಯಿ ಗ್ಯಾಂಗ್ ದಾಳಿ

ಹೈಕೋರ್ಟ್ ನೀಡಿದ ಖಡಕ್ ಎಚ್ಚರಿಕೆ

ಪ್ರಕರಣದ ತೀರ್ಪು ನೀಡಿರುವ ಬಾಂಬೆ ಹೈಕೋರ್ಟ್, ವಿಷಯ ನ್ಯಾಯಾಲಯದಲ್ಲಿ ಬಾಕಿ ಇರುವಾಗ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರುವುದನ್ನು ಪ್ರಶ್ನಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸುಲಭವಾಗಿ ನಮ್ಮ ಅಭಿಪ್ರಾಯ ಹೇಳಬಹುದು ಎಂದಾಕ್ಷಣ, ಇನ್ನೊಬ್ಬರ ಪ್ರತಿಷ್ಠೆಗೆ ಕಳಂಕ ತರುವಂತೆ ದೂಷಿಸುವುದು ಸರಿಯಲ್ಲ ಎಂದು ಕೋರ್ಟ್ ಕಕ್ಕರ್ ಅವರಿಗೆ ಎಚ್ಚರಿಕೆ ನೀಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ: ಜೂನ್ 15 ರಿಂದಲೇ ಆದೇಶ ಜಾರಿ, ಪರ್ಯಾಯ ಮಾರ್ಗ ಇಲ್ಲಿದೆ – Kannada News | Agumbe Ghat Closed for Heavy Vehicles From June 15; Check Alternate Routes

ಶಿವಮೊಗ್ಗ, ಜೂನ್ 12: ಮಳೆಗಾಲದ ಹಿನ್ನೆಲೆಯಲ್ಲಿ ಇತಿಹಾಸ ಪ್ರಸಿದ್ಧ ಆಗುಂಬೆ ಘಾಟಿಯಲ್ಲಿ(Agumbe ghat) ಜೂನ್ 15 ರಿಂದ ಮಳೆಗಾಲ ಮುಗಿಯುವವರೆಗೂ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು ಅಧಿಕೃತ ಆದೇಶ ಹೊರಡಿಸಿದ್ದಾರೆ.

ಮುಖ್ಯಾಂಶಗಳು

  • ಆಗುಂಬೆ ಘಾಟಿಯಲ್ಲಿ ಜೂನ್ ಹದಿನೈದರಿಂದ ಭಾರಿ ವಾಹನಗಳ ಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
  • ಮಳೆಗಾಲದಲ್ಲಿ ಭೂಕುಸಿತ ಮತ್ತು ಅಪಘಾತ ತಡೆಯಲು ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
  • ಪ್ರಯಾಣಿಕರ ಅನುಕೂಲಕ್ಕಾಗಿ ಕೊಲ್ಲೂರು ಮತ್ತು ಶೃಂಗೇರಿ ಮಾರ್ಗವಾಗಿ ಪರ್ಯಾಯ ರಸ್ತೆ ಸೂಚಿಸಲಾಗಿದೆ.

ಹುಲಿಕಲ್ ಘಾಟಿಯಲ್ಲಿ ಭೂಕುಸಿತ

ರಾಷ್ಟ್ರೀಯ ಹೆದ್ದಾರಿ 169ಎ ತೀರ್ಥಹಳ್ಳಿ-ಮಲ್ಪೆ-ಉಡುಪಿ ರಸ್ತೆಯ ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಓಡಾಟ ಹೆಚ್ಚಾದರೆ ರಸ್ತೆ ಬದಿಯ ಭೂಕುಸಿತ ಸಂಭವಿಸುವ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುವ ಅಪಾಯವಿದೆ. ಇದೇ ವೇಳೆ, ಮತ್ತೊಂದು ಪ್ರಮುಖ ಸಂಪರ್ಕ ರಸ್ತೆಯಾದ ಹುಲಿಕಲ್ ಘಾಟಿಯಲ್ಲೂ ಭೂಕುಸಿತ ಸಂಭವಿಸಿದ್ದು, ಅಲ್ಲಿನ ತಾತ್ಕಾಲಿಕ ರಕ್ಷಣಾತ್ಮಕ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಆಗುಂಬೆ ಘಾಟಿ ಮಾರ್ಗವು ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಮತ್ತು ಹಾವೇರಿ ಜಿಲ್ಲೆಗಳ ಜನರಿಗೆ ಉಡುಪಿ, ಮಂಗಳೂರು ಹಾಗೂ ಮಣಿಪಾಲ್ ಆಸ್ಪತ್ರೆಗಳಿಗೆ ತುರ್ತು ಚಿಕಿತ್ಸೆಗೆ ತೆರಳಲು ಪ್ರಮುಖ ಸಂಪರ್ಕವಾಗಿದೆ. ಇದೀಗ ಈ ಆದೇಶದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಿಲ್ಲಾಡಳಿತವು ಪರ್ಯಾಯ ಮಾರ್ಗಗಳನ್ನು ಸೂಚಿಸಿದೆ.

ಇದನ್ನೂ ಓದಿ ಜೈಲಿನಲ್ಲಿ ಕುಳಿತು ಪತ್ನಿ ಕೊಲೆಗೆ ಸ್ಕೆಚ್: ಶಿವಮೊಗ್ಗದಲ್ಲಿ ನಾಲ್ವರು ಬುರ್ಖಾ ಹಾಕಿಕೊಂಡು ಬಂದವರಿಗೆ ಸಾರ್ವಜನಿಕರಿಂದ ಧರ್ಮದೇಟು

ಪರ್ಯಾಯ ಸಂಚಾರ ಮಾರ್ಗಗಳು

ತೀರ್ಥಹಳ್ಳಿಯಿಂದ ಉಡುಪಿ ಕಡೆಗೆ ಹೋಗುವ ವಾಹನಗಳು: ತೀರ್ಥಹಳ್ಳಿ-ನಗರ-ನಾಗೋಡಿ-ಕೊಲ್ಲೂರು-ಕುಂದಾಪುರ-ಉಡುಪಿ ಅಥವಾ ತೀರ್ಥಹಳ್ಳಿ-ಶೃಂಗೇರಿ-ಕೆರೆಕಟ್ಟೆ-ಬಜಗೋಳಿ-ಕಾರ್ಕಳ-ಉಡುಪಿ ಮಾರ್ಗವಾಗಿ ಸಂಚರಿಸಬೇಕು.
ಉಡುಪಿಯಿಂದ ತೀರ್ಥಹಳ್ಳಿ ಕಡೆಗೆ ಬರುವ ವಾಹನಗಳು: ಉಡುಪಿ-ಕುಂದಾಪುರ-ಕೊಲ್ಲೂರು-ನಾಗೋಡಿ-ನಗರ-ತೀರ್ಥಹಳ್ಳಿ ಅಥವಾ ಕಾರ್ಕಳ-ಬಜಗೋಳಿ-ಕೆರೆಕಟ್ಟೆ-ಶೃಂಗೇರಿ-ತೀರ್ಥಹಳ್ಳಿ ರಸ್ತೆಯನ್ನು ಬಳಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಕೊಲ್ಲೂರು ದೇವಸ್ಥಾನಕ್ಕೆ ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಭೇಟಿ: ಅರ್ಚಕ ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ – Kannada News | Tamil Nadu CM Joseph Vijay Kollur Visit: Purnakumbha Welcome Assured, Says Priest Nityananda Adiga

ಉಡುಪಿ, ಜೂನ್ 12: ತಮಿಳುನಾಡು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಜೋಸೆಫ್ ವಿಜಯ್ (Joseph Vijay) ಇಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದಾರೆ. ಇಂದು ಮಧ್ಯಾಹ್ನ 3:00 ಗಂಟೆಗೆ ಸಿಎಂ ವಿಜಯ್ ಅವರು ಕೊಲ್ಲೂರಿಗೆ ಆಗಮಿಸಲಿದ್ದು, ಈ ಕುರಿತು ದೇವಸ್ಥಾನದ ಅರ್ಚಕ ನಿತ್ಯಾನಂದ ಅಡಿಗ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ತಮಿಳುನಾಡು ಮುಖ್ಯಮಂತ್ರಿಗಳ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯಿಂದ ಅರ್ಚಕ ವೃಂದ ಹಾಗೂ ಸಿಬ್ಬಂದಿ ವರ್ಗಕ್ಕೆ ಮೌಖಿಕ ಮತ್ತು ಲಿಖಿತ ಆದೇಶಗಳನ್ನು ನೀಡಲಾಗಿದೆ. ಸಿಎಂ ವಿಜಯ್ ಅವರನ್ನು ದೇವಸ್ಥಾನದ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಬರಮಾಡಿಕೊಳ್ಳಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಸರ್ಕಾರಿ ನಿಯಮಾವಳಿ ಮತ್ತು ಪ್ರೋಟೋಕಾಲ್ ಪ್ರಕಾರ (Protocol) ಅವರಿಗೆ ಪೂರ್ಣಕುಂಭ ಸ್ವಾಗತದೊಂದಿಗೆ ಗೌರವ ಸಲ್ಲಿಸಿ ದೇವಳದ ಒಳಗೆ ಕರೆದೊಯ್ಯಲಾಗುವುದು. ಬಳಿಕ ಅವರು ದೇವಿಯ ದರ್ಶನ ಪಡೆದು, ದೇವಸ್ಥಾನದ ಆವರಣವನ್ನು ವೀಕ್ಷಿಸಿ ತೆರಳಲಿದ್ದಾರೆ.

ಸಿಎಂ ವಿಜಯ್ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದಲ್ಲಿ ಯಾವುದೇ ರೀತಿಯ ವಿಶೇಷ ಪೂಜೆಗಳಿರುವುದಿಲ್ಲ ಎಂದು ಅರ್ಚಕ ನಿತ್ಯಾನಂದ ಅಡಿಗ ಸ್ಪಷ್ಟಪಡಿಸಿದ್ದಾರೆ. ಕೊಲ್ಲೂರು ಕ್ಷೇತ್ರಕ್ಕೆ ಯಾರೇ ವಿವಿಐಪಿಗಳು ಬಂದರೂ ದೇವಸ್ಥಾನದಲ್ಲಿ ಪ್ರತ್ಯೇಕ ಪೂಜೆ ಮಾಡುವ ಪರಿಪಾಠವಿಲ್ಲ. ಉಳಿದ ದೇವಸ್ಥಾನಗಳಂತೆ ಗಣ್ಯರು ಬಂದಾಗ ಪದೇ ಪದೇ ಮಂಗಳಾರತಿ ಮಾಡುವ ಸಂಪ್ರದಾಯ ನಮ್ಮಲ್ಲಿಲ್ಲ. ಸಾಮಾನ್ಯ ಭಕ್ತರಂತೆ ಸಿಎಂ ವಿಜಯ್ ಅವರು ಕೂಡ ದೇವಿಯ ದರ್ಶನ ಪಡೆಯಲಿದ್ದಾರೆ. ಒಂದು ವೇಳೆ ಅವರು ಬರುವ ಸಮಯಕ್ಕೆ ಮಹಾಮಂಗಳಾರತಿ ನಡೆಯುತ್ತಿದ್ದರೆ, ಅದನ್ನು ವೀಕ್ಷಿಸುವ ಅವಕಾಶ ಸಿಗಲಿದೆ ಎಂದು ಅವರು ತಿಳಿಸಿದ್ದಾರೆ. ಇನ್ನು ಇಂದು ಶುಕ್ರವಾರವಾಗಿರುವುದರಿಂದ ಸಂಜೆ ಪ್ರದೋಷ ಕಾಲಕ್ಕೂ ಮುನ್ನ ದೇವಸ್ಥಾನದ ನಿರಂತರ ಸಂಪ್ರದಾಯದಂತೆ ರಥೋತ್ಸವ/ಉತ್ಸವ ನಡೆಯಲಿದ್ದು, ಇದು ವಿಜಯ್ ಅವರಿಗಾಗಿ ಮಾಡುತ್ತಿರುವ ವಿಶೇಷ ಸಿದ್ಧತೆಯಲ್ಲ, ಪ್ರತಿ ಶುಕ್ರವಾರದ ಸಾಮಾನ್ಯ ಪೂಜಾ ಪ್ರಕ್ರಿಯೆಯಾಗಿದೆ ಎಂದು ಅವರು ವಿವರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Optical Illusion: ನಿಮ್ಮದು ಹದ್ದಿನ ಕಣ್ಣಾಗಿದ್ರೆ ಈ ಚಿತ್ರದಲ್ಲಿ ಅಡಗಿರುವ ಕಳ್ಳ ಬೆಕ್ಕನ್ನು ಗುರುತಿಸಬಲ್ಲಿರಾ – Kannada News | Optical Illusion: Can you spot a hidden cat in this picture

ಆಪ್ಟಿಕಲ್‌ ಇಲ್ಯೂಷನ್‌ ಚಿತ್ರImage Credit source: hindustantimes.com

ಆಪ್ಟಿಕಲ್‌ ಇಲ್ಯೂಷನ್‌ನಂತಹ (optical illusion) ಈ ಒಗಟಿನ ಚಿತ್ರಗಳು ನಿಮ್ಮನ್ನು ಭ್ರಮೆಯಲ್ಲಿ ಸಿಲುಕಿಸಬಹುದು. ಹೀಗಾಗಿ ಈ ಒಗಟನ್ನು ಬಿಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ. ಹೆಚ್ಚಿನವರು ಈ ಒಗಟು ಬಿಡಿಸಲು ಸಾಧ್ಯವಿಲ್ಲ ಎಂದು ಸೋಲನ್ನು ಒಪ್ಪಿಕೊಳ್ಳುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಚಿತ್ರದಲ್ಲಿ ಕಳ್ಳ ಬೆಕ್ಕೊಂದು ಅಡಗಿ ಕುಳಿತಿದೆ. 15 ಸೆಕೆಂಡುಗಳಲ್ಲಿ ಈ ಬೆಕ್ಕನ್ನು ಕಂಡು ಹಿಡಿಯುವ ಸವಾಲು ನೀಡಲಾಗಿದೆ. ಈ ಒಗಟು ಬಿಡಿಸಲು ನೀವು ರೆಡಿ ಇದ್ದರೆ ನಿಮ್ಮ ಟೈಮ್ ಈಗಲೇ ಆರಂಭವಾಗುತ್ತದೆ.

ಈ ಚಿತ್ರದಲ್ಲಿ ಏನು ಕಾಣಿಸಿತು?

ಒಗಟಿನ ಆಟಗಳು ಮನೋರಂಜನೆಯನ್ನು ನೀಡುತ್ತದೆಯೋ ಹಾಗೆ ಯೋಚನಾ ಶಕ್ತಿಯನ್ನು ಹೆಚ್ಚಿಸುತ್ತದೆ. ಈ ಚಿತ್ರವು ಡ್ರೈವ್‌ವೇಯಲ್ಲಿ ನಿಲ್ಲಿಸಿರುವ ಹೊಳಪುಳ್ಳ ಕಪ್ಪು ಬಣ್ಣದ ಎಸ್ ಯುವಿಯನ್ನು ಕಾಣಬಹುದು. ಅದರ ಸುತ್ತಲೂ ಅಂದಗೊಳಿಸಲಾದ ಹಸಿರು ಹುಲ್ಲುಹಾಸು, ಹಚ್ಚ ಹಸಿರಿನ ಮರಗಳು ಇವೆ. ಚಿತ್ರದ ಮುಂಭಾಗದಲ್ಲಿರುವ ಗೋಡೆಯ ಪಕ್ಕದಲ್ಲಿ ಹೂವಿನ ಕುಂಡ ಇರಿಸಲಾಗಿದೆ. ಈ ಕುಂಡದಲ್ಲಿ ವಿಶಿಷ್ಟವಾದ ಬಿಳಿ ಹೂವುಗಳನ್ನು ಹೊಂದಿರುವ ರೋಮಾಂಚಕ ಸಸ್ಯವಿದೆ. ಇಲ್ಲಿ ಕಳ್ಳ ಬೆಕ್ಕೊಂದು ಮರೆ ಮಾಡಿ ಕುಳಿತುಕೊಂಡಿದೆ. ಹದಿನೈದು ಸೆಕೆಂಡುಗಳೊಳಗೆ ಈ ಸಾಕು ಪ್ರಾಣಿಯನ್ನು ಹುಡುಕಲು ಪ್ರಯತ್ನಿಸಿ.

ಇದನ್ನೂ ಓದಿ: ನಿಮ್ಮ ಬುದ್ಧಿವಂತಿಕೆಗೊಂದು ಸವಾಲ್; ಈ ಪ್ರಶ್ನೆಯಲ್ಲೇ ಅಡಗಿರುವ ಉತ್ತರವನ್ನು ಹೇಳಬಲ್ಲಿರಾ?

ನಿಮ್ಮ ಕಣ್ಣಿಗೆ ಕಳ್ಳ ಬೆಕ್ಕು ಕಾಣಿಸಿತೇ?

ಅಬ್ಬಬ್ಬಾ ಎಷ್ಟೇ ಹುಡುಕಿದರೂ ಚಿತ್ರದಲ್ಲಿ ಅಡಗಿರುವ ಬೆಕ್ಕನ್ನು ಕಂಡು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ತಲೆ ಕೆಡಿಸಿಕೊಳ್ಳಬೇಡಿ. ನೀವು ಅಡಗಿರುವ ಕಳ್ಳ ಬೆಕ್ಕನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದೀರಾ ಎಂದಾದ್ರೆ ನಿಮ್ಮದು ಹದ್ದಿನ ಕಣ್ಣು ಎಂದರ್ಥ. ಈ ಸಾಕು ಪ್ರಾಣಿ ನಿಮ್ಮ ಕಣ್ಣಿಗೆ ಕಾಣಿಸಿಲ್ಲ ಎಂದಾದರೆ ನಾವೇ ನಿಮಗೆ ಉತ್ತರ ಹೇಳುತ್ತೇವೆ. ಈ ಕೆಳಗಿನ ಚಿತ್ರದಲ್ಲಿ ಕಾರಿನ ಪಕ್ಕದಲ್ಲಿ ಬೆಕ್ಕು ಕುಳಿತುಕೊಂಡಿದೆ. ಈ ಕೆಳಗಿನ ಚಿತ್ರದಲ್ಲಿ ಕಪ್ಪು ಬಣ್ಣದ ಬೆಕ್ಕನ್ನು ಗುರುತಿಸಿರುವುದನ್ನು ನೀವು ಕಾಣಬಹುದು.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಬಿನಿ ಡ್ಯಾಂ ನೀರಿನಮಟ್ಟ ಭಾರೀ ಕುಸಿತ: ಸಾಕಷ್ಟು ವರ್ಷಗಳ ಹಿಂದೆ ಮುಳುಗಿದ್ದ ದೇಗುಲದ ಅವಶೇಷ ಗೋಚರ – Kannada News

ಮೈಸೂರು, ಜೂನ್ 12: ಮೈಸೂರು ಜಿಲ್ಲೆಯ ಹೆಚ್​ಡಿ ಕೋಟೆ ತಾಲ್ಲೂಕಿನ ಬೀಚನಹಳ್ಳಿ ಗ್ರಾಮದ ಕಬಿನಿ ಜಲಾಶಯದ ಹಿನ್ನೀರಿನಲ್ಲಿ ಸಾಕಷ್ಟು ವರ್ಷಗಳ ಹಿಂದೆ ಮುಳುಗಡೆಯಾಗಿದ್ದ ಬಸವೇಶ್ವರ ದೇಗುಲದ ಅವಶೇಷಗಳು ಈಗ ಮತ್ತೆ ಗೋಚರವಾಗಿವೆ. ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಬಹುದು ಎಂಬ ಚರ್ಚೆಯ ನಡುವೆಯೇ ಈ ವಿದ್ಯಮಾನ ಕಂಡುಬಂದಿರುವುದು ಆತಂಕಕ್ಕೆ ಕಾರಣವಾಗಿದೆ. ಕಬಿನಿ ಜಲಾಶಯದಲ್ಲಿ ನೀರಿನ ಮಟ್ಟ ತೀವ್ರವಾಗಿ ಕುಸಿದಿರುವುದರಿಂದ ದೇವಸ್ಥಾನದ ಕಲ್ಲುಮಂಟಪದ ಭಾಗಗಳು ಕಾಣಿಸಿಕೊಳ್ಳುತ್ತಿವೆ. ಸ್ಥಳೀಯರ ಪ್ರಕಾರ, 15 ವರ್ಷಗಳ ಹಿಂದೆ ಇದೇ ರೀತಿಯ ಪರಿಸ್ಥಿತಿ ಎದುರಾದಾಗಲೂ ದೇಗುಲದ ಅವಶೇಷಗಳು ಗೋಚರಿಸಿದ್ದವು. ಮುಂಗಾರು ಮಳೆ ಕಡಿಮೆಯಾಗಿ ಒಳಹರಿವಿನ ಪ್ರಮಾಣ ಇಳಿಮುಖವಾದಾಗಲೆಲ್ಲಾ ಈ ದೇಗುಲದ ಭಾಗಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ರಾಜ್ಯದಲ್ಲಿ ಮೊದಲು ತುಂಬುವ ಜಲಾಶಯಗಳಲ್ಲಿ ಕಬಿನಿಯೂ ಒಂದು. ಆದರೆ ಈಗಿನ ನೀರಿನ ಮಟ್ಟವು ಆತಂಕಕ್ಕೆ ಕಾರಣವಾಗಿದ್ದು, ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ತಲೆದೋರುತ್ತಿದೆಯೇ ಎಂಬ ಚರ್ಚೆಗೆ ಪುಷ್ಟಿ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ನಾನು ಸತ್ತಿಲ್ಲ, ಟಿವಿ9 ನೋಡ್ತಾ ಆರಾಮಾಗಿದ್ದೇನೆ’; ದೊಡ್ಡಣ್ಣ ಸ್ಪಷ್ಟನೆ – Kannada News

ಕನ್ನಡ ಚಿತ್ರರಂಗದ ಹಿರಿಯ ನಟ ದೊಡ್ಡಣ್ಣ ಅವರ  (Doddanna) ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೊಮ್ಮೆ ಕಿಡಿಗೇಡಿಗಳು ಸುಳ್ಳು ಸುದ್ದಿಯೊಂದನ್ನು ಹರಿಬಿಟ್ಟಿದ್ದಾರೆ. ದೊಡ್ಡಣ್ಣ ಅವರು ನಿಧನರಾಗಿದ್ದಾರೆ ಎಂಬ ಭಾವಪೂರ್ಣ ಶ್ರದ್ಧಾಂಜಲಿಯ ಪೋಸ್ಟರ್ ಮತ್ತು ಪೋಸ್ಟ್‌ಗಳು ಫೇಸ್‌ಬುಕ್ ಸೇರಿದಂತೆ ಹಲವು ಕಡೆ ಭಾರಿ ವೈರಲ್ ಆಗಿದ್ದವು. ಇದನ್ನು ನೋಡಿ ಅವರ ಅಭಿಮಾನಿಗಳು ಹಾಗೂ ಆತ್ಮೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದರು. ಆದರೆ, ಈ ಸುದ್ದಿಯನ್ನು ಹಬ್ಬಿಸಿದವರ ವಿರುದ್ಧ ನಟ ದೊಡ್ಡಣ್ಣ ಸಿಟ್ಟಾಗಿದ್ದಾರೆ . ತಾವೇ ಸ್ಪಷ್ಟನೆ ಕೊಡುವ ಮೂಲಕ ಈ ವದಂತಿಗೆ ಬ್ರೇಕ್ ಹಾಕಿದ್ದಾರೆ.

‘ಪಬ್ಲಿಕ್ ಫ್ರೆಂಡ್​’ ಹೆಸರಿನ ಫೇಸ್​​ಬುಕ್​​ ಪೇಜ್​​​ನಲ್ಲಿ ಪೋಸ್ಟ್ ಒಂದನ್ನು ಹಾಕಲಾಗಿದೆ. ‘ದೊಡ್ಡಣ್ಣ ಇನ್ನಿಲ್ಲ’ ಎಂದು ಪೋಸ್ಟ್​​ನಲ್ಲಿ ಬರೆಯಲಾಗಿದೆ. ಮರಣ ಎಂದು ಜೂನ್ 12ರ ಡೇಟ್ ಹಾಕಲಾಗಿದೆ. ‘ನಿಮ್ಮ ಅಭಿನಯ, ನಿಮ್ಮ ಸಾಧನೆ ಯಾವಾಗಲೂ ನಮ್ಮ ಜೊತೆ ಇರುತ್ತದೆ’ ಎಂದು ನೆನಪಿಸಿಕೊಳ್ಳಲಾಗಿದೆ. ಇದು ದೊಡ್ಡಣ್ಣ ಗಮನಕ್ಕೂ ಬಂದಿದೆ.

ಟಿವಿ9 ಕನ್ನಡದ ಜೊತೆ ಮಾತನಾಡಿದ ಅವರು, ‘ನಾನು ಸಂಪೂರ್ಣವಾಗಿ ಆರೋಗ್ಯವಾಗಿದ್ದೇನೆ. ಮನೆಯಲ್ಲಿ ಆರಾಮಾಗಿ ಟೀ ಕುಡಿಯುತ್ತಾ, ಟಿವಿ9 ಕನ್ನಡ ವಾಹಿನಿಯನ್ನೇ ನೋಡುತ್ತಾ ಕುಳಿತಿದ್ದೇನೆ. ನನಗೇನೂ ಆಗಿಲ್ಲ, ಯಾರೂ ಆತಂಕ ಪಡುವ ಅಗತ್ಯವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದನ್ನೂ ಓದಿ: ದೊಡ್ಡಣ್ಣ ಎಂದರೆ ವಿಷ್ಣುವರ್ಧನ್​ಗೆ ಬಹಳ ಆತ್ಮೀಯತೆ: ಆ ದಿನಗಳ ಮೆಲುಕು ಹಾಕಿದ ನಟ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಶ್ರದ್ಧಾಂಜಲಿಯ ಪೋಸ್ಟರ್ ಸಂಪೂರ್ಣವಾಗಿ ನಕಲಿ ಮತ್ತು ಎಡಿಟೆಡ್ ಆಗಿದ್ದು, ಇಂತಹ ಸುಳ್ಳು ಸುದ್ದಿಗಳನ್ನು ಯಾರೂ ನಂಬಬೇಡಿ ಮತ್ತು ಶೇರ್ ಮಾಡಬೇಡಿ ಎಂದು ಅವರು ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ಹಿರಿಯ ನಟರ ಆರೋಗ್ಯದ ಬಗ್ಗೆ ಪದೇ ಪದೇ ಇಂತಹ ವಿಕೃತಿ ಮೆರೆಯುವ ಕಿಡಿಗೇಡಿಗಳ ವಿರುದ್ಧ ನೆಟ್ಟಿಗರು ಭಾರಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂಬ ಆಗ್ರಹ ಕೇಳಿ ಬಂದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link