Category Archives: Blog

Your blog category

ಈ ಪೋಸ್ಟ್ ಆಫೀಸ್ ಸ್ಕೀಮ್​ನಿಂದ ತೆರಿಗೆ ಉಳಿತಾಯದ ಜೊತೆಗೆ ತಿಂಗಳಿಗೆ 20,000 ರೂ ಆದಾಯ ಸೃಷ್ಟಿಸುವುದು ಹೇಗೆ? ಇಲ್ಲಿದೆ ಡೀಟೇಲ್ಸ್ – Kannada News | Post Office SCSS scheme offers max interest, generate over 20k monthly income

ಪೋಸ್ಟ್ ಆಫೀಸ್​ನಲ್ಲಿ ಲಭ್ಯ ಇರುವ ವಿವಿಧ ಸ್ಕೀಮ್​ಗಳಲ್ಲಿ ಎಸ್​ಸಿಎಸ್​ಎಸ್ (SCSS- Senior Citizen Savings Scheme) ಒಂದು. ಇದು ಸೀನಿಯರ್ ಸಿಟಿಜನ್ಸ್ ಸೇವಿಂಗ್ಸ್ ಸ್ಕೀಮ್. ಪೋಸ್ಟ್ ಆಫೀಸ್​ನ ಉಳಿತಾಯ ಯೋಜನೆಗಳ ಪೈಕಿ ಗರಿಷ್ಠ ರಿಟರ್ನ್ ತರುವಂತಹ ಸ್ಕೀಮ್ ಕೂಡ ಹೌದು. ಈ ಹಿರಿಯ ನಾಗರಿಕರ ಉಳಿತಾಯ ಯೋಜನೆ ಕೇವಲ ಪೋಸ್ಟ್ ಆಫೀಸ್​ನಲ್ಲಷ್ಟೇ ಅಲ್ಲ, ಬ್ಯಾಂಕುಗಳಲ್ಲೂ ಲಭ್ಯ ಇರುತ್ತದೆ. ರಿಟೈರ್ಮೆಂಟ್ ನಂತರ ಪಿಂಚಣಿ ಸೌಲಭ್ಯ ಇಲ್ಲದವರಿಗೆ ಈ ಎಸ್​ಸಿಎಸ್​ಎಸ್ ಹೇಳಿ ಮಾಡಿಸಿದೆ.

ಎಸ್​ಸಿಎಸ್​ಎಸ್​ನಿಂದ ಮೂರು ಲಾಭಗಳು

  1. ಸೀನಿಯರ್ ಸಿಟಿಜನ್ ಸೇವಿಂಗ್ಸ್ ಸ್ಕೀಮ್​ನಲ್ಲಿ ಮಾಡಿದ ಹೂಡಿಕೆಯ ಹಣಕ್ಕೆ ಟ್ಯಾಕ್ಸ್ ಡಿಡಕ್ಷನ್ ಅವಕಾಶ ಇರುತ್ತದೆ
  2. ಈ ಸ್ಕೀಮ್​ನಲ್ಲಿ ಸದ್ಯಕ್ಕೆ ಶೇ. 8.2 ವಾರ್ಷಿಕ ಬಡ್ಡಿಯ ಆದಾಯ ಸಿಗುತ್ತದೆ.
  3. ಈ ಸ್ಕೀಮ್​ನಲ್ಲಿ ಲಂಪ್ಸಮ್ ಆಗಿ ಹೂಡಿಕೆ ಮಾಡಿ, ಅದರಿಂದ ತ್ರೈಮಾಸಿಕ ಆದಾಯ ಪಡೆಯಬಹುದು. ಅಂದರೆ ಪ್ರತೀ ಮೂರು ತಿಂಗಳಿಗೊಮ್ಮೆ ಬಡ್ಡಿ ಸಿಗುತ್ತಾ ಹೋಗುತ್ತದೆ.

ಇದನ್ನೂ ಓದಿ: Money Secrets: ಹಣಕಾಸು ಸಂಕಷ್ಟ ಬರಬಾರದೆಂದಿದ್ದರೆ ಈ ಮನಿ ಸೀಕ್ರೆಟ್ಸ್ ತಿಳಿದಿರಿ…

ಯಾರು ಈ ಎಸ್​ಸಿಎಸ್​ಎಸ್ ಸ್ಕೀಮ್ ಪಡೆಯಬಹುದು?

60 ವರ್ಷ ವಯಸ್ಸು ದಾಟಿರುವ ಹಿರಿಯ ನಾಗರಿಕರು ಎಸ್​ಸಿಎಸ್​ಎಸ್ ಅಕೌಂಟ್ ತೆರೆಯಬಹುದು. ವಿಆರ್​ಎಸ್ ಪಡೆದಿರುವವರಾದರೆ 55 ವರ್ಷ ವಯಸ್ಸು ದಾಟಿರಬೇಕು. ಸೇನೆಯಲ್ಲಿ ಕೆಲಸ ಮಾಡಿದ್ದರೆ 50 ವರ್ಷ ದಾಟಿದರೂ ಸಾಕು ಎಸ್​ಸಿಎಸ್​ಎಸ್ ಅಕೌಂಟ್ ತೆರೆಯಬಹುದು.

ಎಸ್​ಸಿಎಸ್​ಎಸ್​ನಲ್ಲಿ ಎಷ್ಟು ಹೂಡಿಕೆ ಸಾಧ್ಯ?

ಸೀನಿಯರ್ ಸಿಟಜನ್ ಸೇವಿಂಗ್ಸ್ ಅಕೌಂಟ್​ನಲ್ಲಿ ಒಬ್ಬರು ಕನಿಷ್ಠ 1,000 ರೂ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆ 30 ಲಕ್ಷ ರೂ ಇದೆ. ಕಂತುಗಳಲ್ಲಿ ಹೂಡಿಕೆಗೆ ಅವಕಾಶ ಇಲ್ಲ. ಲಂಪ್ಸಮ್ ಆಗಿ ಹಣ ತೊಡಗಿಸಬೇಕು.

ಒಂದು ವೇಳೆ ನೀವು ಎಸ್​ಸಿಎಸ್​ಎಸ್ ಅಕೌಂಟ್​ನಲ್ಲಿ 30 ಲಕ್ಷ ರೂ ಹಣವನ್ನು ಠೇವಣಿ ಇಟ್ಟಿದ್ದೇ ಆದಲ್ಲಿ, ಮತ್ತು ಈಗಿರುವ ಶೇ. 8.2 ಬಡ್ಡಿದರವೇ ಮುಂದುವರಿದಿದ್ದೇ ಆದಲ್ಲಿ ವರ್ಷಕ್ಕೆ 2.46 ಲಕ್ಷ ರೂ ಬಡ್ಡಿ ಶೇಖರಣೆ ಆಗುತ್ತದೆ. ಈ 12 ತಿಂಗಳ ಬಡ್ಡಿ ಆದಾಯವನ್ನು ವಿಭಜಿಸಿದರೆ ತಿಂಗಳಿಗೆ 20,500 ರೂ ಆಗುತ್ತದೆ.

ಇದನ್ನೂ ಓದಿ: ಫ್ಲೆಕ್ಸಿಕ್ಯಾಪ್, ಮಲ್ಟಿಕ್ಯಾಪ್, ಮಲ್ಟಿ ಅಸೆಟ್ ಫಂಡ್​ಗಳ ನಡುವೆ ಏನು ವ್ಯತ್ಯಾಸ?

ಇದರ ಜೊತೆಗೆ, ವರ್ಷಕ್ಕೆ 1.50 ಲಕ್ಷ ರೂವರೆಗೆ ಬಡ್ಡಿ ಆದಾಯಕ್ಕೆ ಟ್ಯಾಕ್ಸ್ ಡಿಡಕ್ಷನ್ ಪಡೆಯಲು ಅವಕಾಶ ಇರುತ್ತದೆ.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಧನುಶ್ ಜೊತೆ ಮದುವೆ: ಕೊನೆಗೂ ಬಾಯ್ಬಿಟ್ಟ ನಟಿ ಮೃಣಾಲ್ ಠಾಕೂರ್ – Kannada News | Mrunal Thakur talks about her marriage and the right person

ಮೃಣಾಲ್ ಠಾಕೂರ್ (Mrunal Thakur), ಸ್ಟಾರ್ ಪ್ಯಾನ್ ಇಂಡಿಯಾ ನಟಿಯರಲ್ಲಿ ಒಬ್ಬರು. ಮರಾಠಿ ಮೂಲದ ಈ ನಟಿ ಮಿಂಚಿದ್ದು ಮಾತ್ರ ದಕ್ಷಿಣ ಭಾರತ ಚಿತ್ರರಂಗದಲ್ಲಿ. ಅದರಲ್ಲೂ ತೆಲುಗಿನ ‘ಸೀತಾ-ರಾಮಂ’ ಸಿನಿಮಾ ಮೃಣಾಲ್ ಠಾಕೂರ್​​ಗೆ ದಕ್ಷಿಣದಲ್ಲಿ ದೊಡ್ಡ ಅಭಿಮಾನಿ ವರ್ಗವನ್ನೇ ಸೃಷ್ಟಿಸಿ ಕೊಟ್ಟಿದೆ. ಈಗಲೂ ಸಹ ದಕ್ಷಿಣದ ಕೆಲವಾರು ಸಿನಿಮಾಗಳಲ್ಲಿ ಜೊತೆಗೆ ಕೆಲ ಬಾಲಿವುಡ್​​ ಸಿನಿಮಾಗಳಲ್ಲಿಯೂ ಮೃಣಾಲ್ ಠಾಕೂರ್ ಬ್ಯುಸಿಯಾಗಿದ್ದಾರೆ. ಆದರೆ ಇತ್ತೀಚೆಗೆ ಮೃಣಾಲ್ ಠಾಕೂರ್ ಬಗ್ಗೆ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಲು ಆರಂಭವಾಗಿತ್ತು. ಅದುವೇ ಸ್ಟಾರ್ ನಟ ಧನುಶ್ ಜೊತೆಗೆ ಅವರ ಮದುವೆ ಸುದ್ದಿ.

ತಮಿಳಿನ ಸ್ಟಾರ್ ನಟ ಧನುಶ್ ಜೊತೆಗೆ ಮೃಣಾಲ್ ಠಾಕೂರ್ ಮದುವೆ ಆಗಲಿದ್ದಾರೆ ಎಂಬ ಸುದ್ದಿ ಇತ್ತೀಚೆಗಷ್ಟೆ ಕಾಳ್ಗಿಚ್ಚಿನಂತೆ ಹಬ್ಬಿತ್ತು. ಧನುಶ್ ಅವರ 22 ವರ್ಷಗಳ ದಾಂಪತ್ಯ ಇತ್ತೀಚೆಗಷ್ಟೆ ಅಂತ್ಯವಾಗಿದ್ದು, ಪತ್ನಿ ಸೌಂದರ್ಯ ಅವರಿಂದ ವಿಚ್ಛೇದನ ಪಡೆದಿದ್ದಾರೆ. ರಜನೀಕಾಂತ್ ಪುತ್ರಿ ಸೌಂದರ್ಯ ಅವರನ್ನು ಧನುಶ್ 2004 ರಲ್ಲಿ ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ಸಹ ಇದ್ದಾರೆ. ಆದರೆ ಈ ಜೋಡಿ ಇತ್ತೀಚೆಗಷ್ಟೆ ವಿಚ್ಛೇದನ ಪಡೆದುಕೊಂಡಿದೆ.

ವಿಚ್ಛೇದನ ಪಡೆದುಕೊಂಡ ಬೆನ್ನಲ್ಲೆ ಧನುಶ್ ಹೆಸರು ಮೃಣಾಲ್ ಠಾಕೂರ್ ಜೊತೆಗೆ ಕೇಳಿ ಬಂದಿತ್ತು. ಈ ಇಬ್ಬರ ಕೆಲವು ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ಜೋಡಿ ಫೆಬ್ರವರಿ 14 ರಂದು ವಿವಾಹವಾಗಲಿದ್ದಾರೆ ಎಂಬ ಸುದ್ದಿಯೂ ಸಹ ಜೋರಾಗಿಯೇ ಹರಿದಾಡಿತ್ತು. ಆದರೆ ಮೃಣಾಲ್ ಆಗಲಿ, ಧನುಶ್ ಆಗಲಿ ಈ ಬಗ್ಗೆ ಮಾತನಾಡಿರಲಿಲ್ಲ. ಇತ್ತೀಚೆಗೆ ನಟಿ ಮೃಣಾಲ್ ಅವರಿಗೆ ಧನುಶ್ ಅವರ ಬಗ್ಗೆ ಪರೋಕ್ಷವಾಗಿ ಪ್ರಶ್ನೆಗಳನ್ನು ಕೇಳಲಾಗಿತ್ತು ಆದರೆ ಅದಕ್ಕೂ ಸಹ ಅವರು ನಗುತ್ತಲೇ ಉತ್ತರಿಸಿದ್ದರು. ಅದು ಮೃಣಾಲ್ ಹಾಗೂ ಧನುಶ್ ಅವರ ಸಂಬಂಧದ ಸುದ್ದಿಗೆ ಇನ್ನಷ್ಟು ತುಪ್ಪ ಸುರಿದಿತ್ತು.

ಇದನ್ನೂ ಓದಿ:‘ನನ್ನ ಮದುವೆ ಏಪ್ರಿಲ್ 1ಕ್ಕೆ’; ದಿನಾಂಕ ರಿವೀಲ್ ಮಾಡಿದ ಮೃಣಾಲ್ ಠಾಕೂರ್

ಆದರೆ ಇದೀಗ ಮೃಣಾಲ್ ಠಾಕೂರ್ ಪರೋಕ್ಷವಾಗಿ ಮದುವೆ ಸುದ್ದಿಯನ್ನು ನಕಾರಿಸಿದ್ದಾರೆ. ಮೃಣಾಲ್ ಅವರ ಹೊಸ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ಅವರನ್ನು ಮದುವೆ ಬಗ್ಗೆ ಪ್ರಶ್ನೆ ಕೇಳಲಾಗಿದೆ. ಮದುವೆಗೆ ಎಸ್ ಎಂದಿರುವ ನಟಿ ಮೃಣಾಲ್, ಖಂಡಿತ ಮದುವೆ ಆಗುವ ಆಸೆ, ಯೋಜನೆ ಇದೆ. ಆದರೆ ಅದಕ್ಕೆ ಸರಿಯಾದ ಸಮಯ ಕೂಡಿಬರಬೇಕು ಅದಕ್ಕಿಂತಲೂ ಮುಖ್ಯವಾಗಿ ಸರಿಯಾದ ವ್ಯಕ್ತಿಯೊಬ್ಬ ನನ್ನ ಜೀವನಕ್ಕೆ ಬಂದಾಗ ಮಾತ್ರ ಅದು ಸಾಧ್ಯ ಎಂದಿದ್ದಾರೆ. ಆ ಮೂಲಕ ಇನ್ನೂ ಯಾವ ಸರಿಯಾದ ವ್ಯಕ್ತಿಯೂ ತಮ್ಮ ಜೀವನಕ್ಕೆ ಬಂದಿಲ್ಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:07 pm, Sun, 15 February 26

Source link

BSNL Recruitment 2026: BSNLನಲ್ಲಿ 120 ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗೆ ನೇಮಕಾತಿ; 50 ಸಾವಿರ ರೂ. ರವರೆಗೆ ವೇತನ – Kannada News | BSNL Recruitment 2026: 120 Senior Executive Trainee Vacancies, Apply Now!

ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ದೇಶಾದ್ಯಂತ ಸೀನಿಯರ್ ಎಕ್ಸಿಕ್ಯುಟಿವ್ ಟ್ರೈನಿ ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಿದೆ. ಕೇಂದ್ರ ಸರ್ಕಾರದ ಪ್ರತಿಷ್ಠಿತ ದೂರಸಂಪರ್ಕ ಸಂಸ್ಥೆಯಾದ ಬಿಎಸ್‌ಎನ್‌ಎಲ್‌ನಲ್ಲಿ ವೃತ್ತಿಜೀವನ ಆರಂಭಿಸಲು ಇದು ಒಳ್ಳೆಯ ಅವಕಾಶವಾಗಿದೆ. ಈ ನೇಮಕಾತಿಯಡಿ ಒಟ್ಟು 120 ಹುದ್ದೆಗಳು ಭರ್ತಿಯಾಗಲಿದ್ದು, ಅವುಗಳಲ್ಲಿ 95 ಟೆಲಿಕಾಂ ವಿಭಾಗಕ್ಕೆ ಮತ್ತು 25 ಹಣಕಾಸು ವಿಭಾಗಕ್ಕೆ ಸೇರಿವೆ.

ಟೆಲಿಕಾಂ ಹುದ್ದೆಗಳಿಗೆ ಅರ್ಜಿ ಸಲ್ಲಿಸುವವರು ಕನಿಷ್ಠ ಶೇ.60 ಅಂಕಗಳೊಂದಿಗೆ BE ಅಥವಾ B.Tech ಪದವಿ ಪಡೆದಿರಬೇಕು. ಹಣಕಾಸು ಹುದ್ದೆಗಳಿಗೆ CA ಅಥವಾ CMA ಅರ್ಹತೆ ಅಗತ್ಯವಿದೆ. ಜೊತೆಗೆ ಅಧಿಸೂಚನೆಯಲ್ಲಿ ಸೂಚಿಸಿದಂತೆ ಸಂಬಂಧಿತ ಕೆಲಸದ ಅನುಭವವೂ ಬೇಕಾಗುತ್ತದೆ. ಅಭ್ಯರ್ಥಿಗಳ ವಯಸ್ಸು ಮಾರ್ಚ್ 7, 2026ರಂತೆ 21ರಿಂದ 30 ವರ್ಷಗಳೊಳಗಿರಬೇಕು. OBC ಅಭ್ಯರ್ಥಿಗಳಿಗೆ 3 ವರ್ಷ, SC/ST ಅಭ್ಯರ್ಥಿಗಳಿಗೆ 5 ವರ್ಷ ಮತ್ತು PwBD ಅಭ್ಯರ್ಥಿಗಳಿಗೆ ಗರಿಷ್ಠ 15 ವರ್ಷಗಳ ವಯೋಮಿತಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕವಾಗಿ ಸಾಮಾನ್ಯ, OBC ಮತ್ತು EWS ಅಭ್ಯರ್ಥಿಗಳು 2,500ರೂ. ಪಾವತಿಸಬೇಕು. SC, ST ಮತ್ತು PwBD ಅಭ್ಯರ್ಥಿಗಳಿಗೆ 1,250ರೂ. ನಿಗದಿಪಡಿಸಲಾಗಿದೆ. ಅಂತಿಮ ಆಯ್ಕೆ ಆನ್‌ಲೈನ್ ಲಿಖಿತ ಪರೀಕ್ಷೆಯ ಆಧಾರವಾಗಿರುತ್ತದೆ. ಆಯ್ಕೆಯಾದವರಿಗೆ ತಿಂಗಳಿಗೆ 24,900ರಿಂದ 50,500 ರೂ. ರವರೆಗೆ ವೇತನ ನೀಡಲಾಗುತ್ತದೆ.

ಇದನ್ನೂ ಓದಿ: ಕರ್ನಾಟಕದ ಹಾಲು ಒಕ್ಕೂಟದಲ್ಲಿ 194 ಹುದ್ದೆಗಳಿಗೆ ನೇಮಕಾತಿ; 10ರಿಂದ ಪದವೀಧರರವರೆಗೆ ಅರ್ಜಿ ಸಲ್ಲಿಸಲು ಅವಕಾಶ

ಆನ್‌ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 7 ರಾತ್ರಿ 10 ಗಂಟೆಯವರೆಗೆ ಅವಕಾಶವಿದೆ. ಅರ್ಜಿ ತಿದ್ದುಪಡಿ ಮಾರ್ಚ್ 8ರಿಂದ ಮಾರ್ಚ್ 15ರವರೆಗೆ ಅವಕಾಶವಿದೆ. ಲಿಖಿತ ಪರೀಕ್ಷೆ ಮಾರ್ಚ್ 29 ರಂದು ನಡೆಯಲಿದೆ. ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕದೊಳಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಸರ್ಕಾರಿ ಕ್ಷೇತ್ರದಲ್ಲಿ ಉತ್ತಮ ಭವಿಷ್ಯವನ್ನು ಕನಸು ಕಾಣುತ್ತಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ ಅರ್ಹತೆಗಳನ್ನು ಪರಿಶೀಲಿಸುವುದು ಮುಖ್ಯ.

ಬಿಎಸ್ಎನ್ಎಲ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಬದಲಾವಣೆ: ಪೂಜೆ ಬಳಿಕ ಹಿಂದೂಗಳು ಸ್ಫೋಟಕ ಆರೋಪ – Kannada News | Aland Ladley Mashak Dargah Shivalinga Changed: Hindus Allege Alteration After Worship

ಕಲಬುರಗಿ, ಫೆಬ್ರವರಿ 15: ಆಳಂದದಲ್ಲಿರುವ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ (ladle mashak dargah)  ಶಿವಲಿಂಗಕ್ಕೆ ಪೂಜೆ‌ ಸಲ್ಲಿಸಲಾಗಿದೆ. ಹೈಕೋರ್ಟ್ ಅನುಮತಿ ಪ್ರಕಾರ ಆಂದೋಲದ ಸಿದ್ದಲಿಂಗ ಸ್ವಾಮೀಜಿ, ಹರ್ಷಾನಂದ ಗುತ್ತೇದಾರ್, ಗುರುಶಾಂತ್ ಟೆಂಗಳಿ ಸೇರಿ 14 ಜನರು ಶಿವಲಿಂಗಕ್ಕೆ ಪೂಜೆ (Shivalinga pooja) ಸಲ್ಲಿಸಿದ್ದಾರೆ. ಆದರೆ ಪೂಜೆ ಬಳಿಕ ಶಿವಲಿಂಗದ ಆಕಾರವೇ ಬದಲಾಗಿದೆ ಎಂದು ಆರೋಪಿಸಿದ್ದು, ಭಾರೀ ಚರ್ಚೆಗೆ ಗ್ರಾಸವಾಗಿದೆ.

14 ಜನ ಹಿಂದೂ ಮುಖಂಡರಿಂದ ಪೂಜೆ

ಇಂದು ಮಹಾಶಿವರಾತ್ರಿ ಹಬ್ಬದ ನಿಮಿತ್ಯ ಇಡೀ ನಾಡಿನ ಜನ ಶಿವನಾಮ ಪಠಿಸುತ್ತ, ಜಾಗರಣೆ ಮಾಡುತ್ತ ಶಿವನ ಧ್ಯಾನದಲ್ಲಿ ಮುಳುಗುತ್ತಾರೆ. ಆದರೆ ಬಿಸಿಲೂರು ಕಲಬುರಗಿ ಜಿಲ್ಲೆಯ ಆಳಂದ ಪಟ್ಟಣದಲ್ಲಿ ಮಾತ್ರ ಅಘೋಷಿತ ಬಂದ್ ಆಗಿತ್ತು. ಇದಕ್ಕೆ ಕಾರಣ ಆಳಂದ ಪಟ್ಟಣದ ಲಾಡ್ಲೇ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗ ಪೂಜೆ ವಿವಾದ.

ಅಂದಹಾಗೆ ಮಹಾಶಿವರಾತ್ರಿ ನಿಮಿತ್ಯ ವಿವಾದಿತ ಲಾಡ್ಲೇ ಮಶಾಕ್ ದರ್ಗಾದಲ್ಲಿನ‌ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ 14 ಜನ ಹಿಂದೂಗಳು ಪೂಜೆ ಸಲ್ಲಿಸಲು ಹೈಕೋರ್ಟ್ ಅನುಮತಿ ನೀಡಿದ್ದು,‌ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆವರೆಗೆ ಪೂಜೆ ಸಲ್ಲಿಸಲು ಸಮಯ ನಿಗದಿ ಮಾಡಿತ್ತು. ಅದರಂತೆ ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್, ಅರ್ಜಿದಾರರಾದ ಸಿದ್ದರಾಮಯ್ಯ ಹಿರೇಮಠ ಮತ್ತು ಗುರುಶಾಂತ್ ಟೆಂಗಳಿ ನೇತೃತ್ವದಲ್ಲಿ ಮಧ್ಯಾಹ್ನ 2.35 ಕ್ಕೆ ಪೂಜೆ ಸಲ್ಲಿಸಲು ದರ್ಗಾದೊಳಗೆ ಪ್ರವೇಶ ಮಾಡಿದರು. ಸುಮಾರು 50 ನಿಮಿಷಗಳ ಕಾಲ ಶ್ರೀ ರಾಘವ ಚೈತನ್ಯ ಶಿವಲಿಂಗಕ್ಕೆ ಜಲಾಭಿಷೇಕ, ಬಿಲ್ವಪತ್ರೆ, ಪಂಚಾಮೃತದಿಂದ ಪೂಜೆ ಸಲ್ಲಿಸಿ ಹೊರಬಂದರು.

ಶಿವಲಿಂಗ ಆಕಾರದಲ್ಲಿ ಬದಲಾವಣೆಯಾಗಿದೆ: ಸಿದ್ರಾಮಯ್ಯ ಹಿರೇಮಠ

ಶಿವಲಿಂಗ ಪೂಜೆ ಬಳಿಕ ಮಾತಾಡಿದ ಅರ್ಜಿದಾರ ಸಿದ್ರಾಮಯ್ಯ ಹಿರೇಮಠ, ಹೈಕೋರ್ಟ್ ಅನಮತಿಯಂತೆ ನಾವು ಶಿವರಾತ್ರಿ ದಿನ ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ್ದೇವೆ. ಇದಕ್ಕೆ ಹೈಕೋರ್ಟ್ ಹಾಗೂ ಜಿಲ್ಲಾಡಳಿತಕ್ಕೆ ಧನ್ಯವಾದ ಹೇಳುತ್ತೇವೆ. ಪೊಲೀಸ್ ಭದ್ರತೆಯಲ್ಲಿ ನಾಡಿನ ಒಳಿತಿಗಾಗಿ ಪೂಜೆ ಸಲ್ಲಿದ್ದೇವೆ. ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಆಕಾರದಲ್ಲಿ ಬದಲಾವಣೆಯಾಗಿದೆ. ಆ ಬಗ್ಗೆ ತನಿಖೆಯಾಗಬೇಕು. ಅಲ್ಲಿ ಸ್ವಚ್ಚತಾ ಕಾರ್ಯ ನಡಿದಿದೆ. ಹಿಂದೂ ಮುಖಂಡರ ಗಮನಕ್ಕೆ ತರದೆ ಕೆಲಸ ಮಾಡಿದ್ದಾರೆಂದು ಆರೋಪಿಸಿದರು.

ಹಿಂದೂಗಳ ಹಕ್ಕನ್ನ ದಮನ ಮಾಡಲಾಗುತ್ತಿದೆ: ಹರ್ಷಾನಂದ ಗುತ್ತೇದಾರ್​ ಕಿಡಿ

ಬಿಜೆಪಿ ಮುಖಂಡ ಹರ್ಷಾನಂದ ಗುತ್ತೇದಾರ್ ಮಾತನಾಡಿ, ಉದ್ದೇಶಪೂರ್ವಕವಾಗಿ ಶಿವಲಿಂಗ ಮೇಲೆ ಮಲಮೂತ್ರ ಮಾಡಿ ಅಪಮಾನ ಮಾಡಲಾಗಿತ್ತು, ಹೀಗಾಗಿ ಶಿವಲಿಂಗದ ಶುದ್ದಿಕರಣಕ್ಕೆ 2022ರಲ್ಲಿ ತೆರಳಿದ್ದ ವೇಳೆ ಹಿಂದೂ-ಮುಸ್ಲಿಂ ಭಾವೈಕ್ಯತೆ ಕೆಡಿಸಲು ಗಲಭೆ ಎಬ್ಬಿಸಲಾಗಿತ್ತು. ಬಳಿಕ ಕಾಂಗ್ರೆಸ್ ಸರ್ಕಾರ ಬಂದ ನಂತರ ಶಿವಲಿಂಗಕ್ಕೆ ಪೂಜೆ ಸಲ್ಲಿಸಲು ಅಡ್ಡಿಪಡಿಸುತ್ತಾ ಬಂದ್ದಿದ್ದು, ಸತತ ಮೂರ್ನಾಲ್ಕು ವರ್ಷದಿಂದ ಕೋರ್ಟ್ ಮೂಲಕ ಬಂದು ಪೂಜೆ ಮಾಡ್ತಿದ್ದು, ಜಿಲ್ಲಾಡಳಿತ ಹಿಂದೂಗಳ ಹಕ್ಕನ್ನ ದಮನ ಮಾಡುತ್ತಿದೆ ಎಂದು ಅವರು ಕಿಡಿಕಾರಿದರು.

ಬಿಗಿ ಪೊಲೀಸ್ ಬಂದೋಬಸ್ತ್

ಇನ್ನು ಯಾವುದೇ ಅಹಿತಕರ ಘಟನೆ ನಡೆಯದಂತೆ ಈಶಾನ್ಯ ವಲಯ ಐಜಿಪಿ ಡಾ.ಶರಣಪ್ಪ ನೇತೃತ್ವದಲ್ಲಿ ಬಂದೋಬಸ್ತ್‌‌ ಕೈಗೊಳ್ಳಲಾಗಿತ್ತು. ಆಳಂದ ಪಟ್ಟಣದಲ್ಲಿ 144 ಸೆಕ್ಷನ್ ನಿಷೇಧಾಜ್ಞೆ ಜಾರಿ ಮಾಡಿಗಿದೆ. KSRP, DAR ತುಕಡಿ ಸೇರಿ 1500ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು. ದರ್ಗಾ ಒಳಗೆ ಹಾಗೂ ದರ್ಗಾ ಸುತ್ತಮುತ್ತ 40ಕ್ಕೂ ಹೆಚ್ಚು ಸಿಸಿಟಿವಿಗಳ ಅಳವಡಿಕೆ ಮಾಡಲಾಗಿತ್ತು. ಅಲ್ಲದೆ 4 ಅತ್ಯಾಧುನಿಕ ಡ್ರೋನ್​​ ಕ್ಯಾಮರಾಗಳ ಮೂಲಕ ಹದ್ದಿನಕಣ್ಣಿಡಲಾಗಿದ್ದು, ಆಳಂದ ಸಂಪರ್ಕಿಸುವ ಎಲ್ಲಾ ಮಾರ್ಗಗಳಲ್ಲಿ ಚೆಕ್‌ಪೋಸ್ಟ್ ನಿರ್ಮಿಸಲಾಗಿತ್ತು.

ಇದನ್ನೂ ಓದಿ: ಆಳಂದ ಲಾಡ್ಲೇ ಮಶಾಕ್ ದರ್ಗಾದಲ್ಲಿನ ಶಿವಲಿಂಗ ಪೂಜೆಗೆ ಕೋರ್ಟ್‌ ಗ್ರೀನ್‌ ಸಿಗ್ನಲ್‌

ಮತ್ತೊಂದೆಡೆ ಕಲಬುರಗಿ ಬಹುಮನಿ ಕೋಟೆಯೊಳಗಿರೋ ಶಿವಲಿಂಗಕ್ಕೆ ಪೂಜೆಗೆ ಅವಕಾಶ ಕೊಡಬೇಕೆಂದು ಪ್ರತಿಭಟನೆ ನಡೆಯಿತು. ಶಿವಲಿಂಗ ಪೂಜೆಗೆ ಅವಕಾಶ ನೀಡಿದ ಹಿನ್ನೆಲೆ ಧರಣಿ ಮಾಡಿದ ಹಿಂದೂ ಸಂಘಟನೆ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 5:53 pm, Sun, 15 February 26

Source link

35 ವರ್ಷದ ನಂತರ ಪ್ರೆಗ್ನನ್ಸಿಗೆ ಪ್ಲಾನ್ ಮಾಡುವವರು ಕಡ್ಡಾಯವಾಗಿ ಈ 3 ಪರೀಕ್ಷೆಗಳನ್ನು ಮಾಡಿಸಬೇಕು! – Kannada News | Planning Pregnancy at 35+: Tests to Do

35 ವರ್ಷದ ನಂತರ, ಮಹಿಳೆಯರ ದೇಹದಲ್ಲಿ ವಿವಿಧ ರೀತಿಯ ಬದಲಾವಣೆಗಳಾಗುತ್ತದೆ. ಈ ವಯಸ್ಸಿನಲ್ಲಿ, ಅಂಡಾಣುಗಳ ಗುಣಮಟ್ಟದಲ್ಲಿ ಇಳಿಕೆ, ಹಾರ್ಮೋನುಗಳ ಅಸಮತೋಲನ ಮತ್ತು ಥೈರಾಯ್ಡ್ ಸಮಸ್ಯೆ, ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳ ಅಪಾಯ ಹೆಚ್ಚಾಗಬಹುದು. ಹೆಚ್ಚುವರಿಯಾಗಿ, ಗರ್ಭಧಾರಣೆಗೆ ಹೆಚ್ಚು ಸಮಯ ತೆಗೆದುಕೊಳ್ಳಬಹುದು. ಅಷ್ಟು ಮಾತ್ರವಲ್ಲ, ಗರ್ಭಪಾತ ಮತ್ತು ಗರ್ಭಧಾರಣೆಯಲ್ಲಿ ತೊಡಕು ಹಿಂದಿನ ವರ್ಷಗಳಿಗೆ ಹೋಲಿಸಿದರೆ ಹೆಚ್ಚಾಗಿರುತ್ತದೆ. ವಯಸ್ಸಾದಂತೆ, ದೇಹದ ಚೇತರಿಕೆಯ ಸಾಮರ್ಥ್ಯವೂ ಸ್ವಲ್ಪ ಕಡಿಮೆಯಾಗುತ್ತದೆ, ಇದು ತಾಯಿ ಮತ್ತು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ, 35 ವರ್ಷದ ನಂತರ ಗರ್ಭಧಾರಣೆಯನ್ನು (Pregnancy) ಯೋಜಿಸುವಾಗ, ಸಂಪೂರ್ಣ ವೈದ್ಯಕೀಯ ತಪಾಸಣೆ ಮತ್ತು ಸಿದ್ಧತೆ ಅತ್ಯಗತ್ಯ. ಯಾವುದೇ ಕೊರತೆ ಅಥವಾ ಅಪಾಯವನ್ನು ಮೊದಲೇ ಪತ್ತೆಹಚ್ಚಲು ಸರಿಯಾದ ಸಮಯದಲ್ಲಿ ವೈದ್ಯರನ್ನು ಸಂಪರ್ಕಿಸಿ ಅಗತ್ಯ ವೈದ್ಯಕೀಯ ಪರೀಕ್ಷೆಗಳಿಗೆ ಒಳಗಾಗುವುದು ಬಹಳ ಮುಖ್ಯವೆಂದು ಪರಿಗಣಿಸಲಾಗುತ್ತದೆ. ಇದು ಗರ್ಭಾವಸ್ಥೆಯಲ್ಲಿ ಉಂಟಾಗಬಹುದಾದ ಸಮಸ್ಯೆಗಳನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಾಗಾದರೆ 35 ವರ್ಷದ ನಂತರ ಗರ್ಭಧರಿಸುವ ಮೊದಲು ಯಾವ ಪರೀಕ್ಷೆಗಳನ್ನು ಮಾಡಿಸಬೇಕು, ಇದು ಯಾಕೆ ಅಗತ್ಯ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈ 3 ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸುವುದು ಒಳ್ಳೆಯದು:

ಆರ್‌ಎಂಎಲ್ ಆಸ್ಪತ್ರೆಯ ಸ್ತ್ರೀರೋಗ ಶಾಸ್ತ್ರ ವಿಭಾಗದ ಅಸೋಸಿಯೇಟ್ ಪ್ರೊಫೆಸರ್ ಡಾ. ಸಲೋನಿ ಚಡ್ಡಾ ಹೇಳುವ ಪ್ರಕಾರ, 35 ವರ್ಷಗಳ ನಂತರ ಗರ್ಭಧಾರಣೆ ಅಥವಾ ಪ್ರೆಗ್ನನ್ಸಿಗೆ ಪ್ಲಾನ್ ಮಾಡುವ ಮೊದಲು, ಕೆಲವು ಪ್ರಮುಖ ಪರೀಕ್ಷೆಗಳನ್ನು ಮಾಡಿಸಿಕೊಳ್ಳುವುದು ಪ್ರಯೋಜನಕಾರಿಯಾಗಿದೆ. ಮೊದಲನೆಯದಾಗಿ, ಮಧುಮೇಹದ ಸ್ಥಿತಿಯನ್ನು ನಿರ್ಧರಿಸಲು ಸಹಾಯ ಮಾಡುವ ರಕ್ತದಲ್ಲಿನ ಸಕ್ಕರೆ ಪರೀಕ್ಷೆ, ಏಕೆಂದರೆ ಗರ್ಭಾವಸ್ಥೆಯಲ್ಲಿ ಸಕ್ಕರೆ ಮಟ್ಟದಲ್ಲಿನ ಅಸಮತೋಲನವು ತಾಯಿ ಮತ್ತು ಮಗುವಿಗೆ ಹಾನಿಕಾರಕವಾಗಿದೆ. ಎರಡನೆಯದಾಗಿ, ಥೈರಾಯ್ಡ್ ಪರೀಕ್ಷೆ, ಏಕೆಂದರೆ ಥೈರಾಯ್ಡ್ ಹಾರ್ಮೋನುಗಳು ಗರ್ಭಧಾರಣೆ ಮತ್ತು ಮಗುವಿನ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಮೂರನೆಯದಾಗಿ, ಹಿಮೋಗ್ಲೋಬಿನ್ ಅಥವಾ ಸಂಪೂರ್ಣ ರಕ್ತ ಎಣಿಕೆ ಪರೀಕ್ಷೆ, ಇದು ದೇಹದಲ್ಲಿನ ರಕ್ತಹೀನತೆ ಮತ್ತು ಸೋಂಕುಗಳ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ. ಈ ಪರೀಕ್ಷೆಗಳ ಮೂಲಕ, ದೇಹವು ಗರ್ಭಧಾರಣೆಗೆ ಯಾವ ರೀತಿಯಲ್ಲಿ ಸಿದ್ಧವಾಗಿದೆ ಎಂಬುದನ್ನು ಅರ್ಥಮಾಡಿಕೊಳ್ಳಬಹುದು. ಜೊತೆಗೆ ಯಾವುದೇ ಸಂಭಾವ್ಯ ಸಮಸ್ಯೆಗಳಿಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಬಹುದು.

ಇದನ್ನೂ ಓದಿ: ಗರ್ಭಾವಸ್ಥೆಯಲ್ಲಿ ಖಿನ್ನತೆ ಕಂಡುಬರುವುದಕ್ಕೆ ಕಾರಣವೇನು? ತಡೆಗಟ್ಟಲು ಏನು ಮಾಡಬಹುದು ತಿಳಿದುಕೊಳ್ಳಿ

ಗರ್ಭಧಾರಣೆಯ ಮೊದಲು ಜೀವನಶೈಲಿಯಲ್ಲಿ ಈ ಬದಲಾವಣೆಗಳು ಅಗತ್ಯ:

ಸಾಮಾನ್ಯವಾಗಿ 35 ರ ನಂತರ, ಗರ್ಭಧಾರಣೆಗೆ ಜೀವನಶೈಲಿಯನ್ನು ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವುದು ಬಹಳ ಮುಖ್ಯ. ಕಬ್ಬಿಣ, ಕ್ಯಾಲ್ಸಿಯಂ ಮತ್ತು ಫೋಲಿಕ್ ಆಮ್ಲವನ್ನು ಒಳಗೊಂಡಿರುವ ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ. ದೇಹವನ್ನು ಸದೃಢವಾಗಿಡಲು ಲಘು ವ್ಯಾಯಾಮ ಅಥವಾ ಯೋಗ ಮಾಡಿ. ಸರಿಯಾಗಿ ನಿದ್ರೆ ಮಾಡಿ ಮತ್ತು ಒತ್ತಡವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿ. ಧೂಮಪಾನ ಮತ್ತು ಮದ್ಯಪಾನದಿಂದ ದೂರವಿರಿ. ಸಮತೋಲಿತ ತೂಕವನ್ನು ಕಾಪಾಡಿಕೊಳ್ಳಿ. ವೈದ್ಯರ ಸಲಹೆಯ ಮೇರೆಗೆ ಮಾತ್ರ ಔಷಧಿಯನ್ನು ತೆಗೆದುಕೊಳ್ಳಿ. ಇದರ ಜೊತೆಗೆ ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs PAK T20 WC Live Score: ಕೆಲವೇ ನಿಮಿಷಗಳಲ್ಲಿ ಟಾಸ್ – Kannada News | Team A vs Team B T20 World Cup 2026 Live Cricket Score IND vs PAK Group A Today Match, highlights latest news in Kannada

2026 ರ ಟಿ20 ವಿಶ್ವಕಪ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಕೆಲವೇ ನಿಮಿಷಗಳಲ್ಲಿ ಆರಂಭವಾಗಲಿದೆ. ಈ ಕ್ರಿಕೆಟ್ ಸಂಭ್ರಮ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡೂ ತಂಡಗಳು ಅದಕ್ಕಾಗಿ ಸಜ್ಜಾಗಿವೆ. ಇಲ್ಲಿಯವರೆಗೆ, ಎರಡೂ ತಂಡಗಳು ಟಿ20 ವಿಶ್ವಕಪ್ 2026 ರಲ್ಲಿ ಗೆಲುವಿನ ಮೇಲೆ ಸವಾರಿ ಮಾಡುತ್ತಿವೆ. ಇದರರ್ಥ ಒಂದು ತಂಡವು ಈಗ ಪಂದ್ಯಾವಳಿಯಲ್ಲಿ ತನ್ನ ಮೊದಲ ಸೋಲನ್ನು ಎದುರಿಸಲಿದೆ. ಟೂರ್ನಿಯಲ್ಲಿ ಎರಡೂ ತಂಡಗಳು ತಲಾ ಎರಡು ಪಂದ್ಯಗಳನ್ನು ಆಡಿದ್ದು, ಎರಡೂ ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಆದಾಗ್ಯೂ, ಉತ್ತಮ ರನ್ ರೇಟ್ ಆಧಾರದ ಮೇಲೆ ಪಾಯಿಂಟ್ಸ್ ಟೇಬಲ್‌ನಲ್ಲಿ ಭಾರತಕ್ಕೆ ಮುನ್ನಡೆ ಇದೆ.

Source link

ಗಂಡನ ಪ್ರೇಮ, ಪ್ರೀತಿ-ಪ್ರಣಯದಾಟಕ್ಕೆ ಪತ್ನಿ ಸುಸ್ತು: ಇದು ಮಂಗಳೂರು ಮನ್ಮಥನ ಭಯಾನಕ ಸ್ಟೋರಿ – Kannada News | Mangaluru Man Manish Cheating Wife for Targets others Woman From foreign

ಮಂಗಳೂರು, (ಫೆಬ್ರವರಿ 15): ಇದು ಮಂಗಳೂರು (Mangaluru) ಮನ್ಮಥನ ಭಯಾನಕ ಸ್ಟೋರಿ. ಫೇಸ್​ಬುಕ್​ನಲ್ಲಿ ಹುಡುಗಿಯರಿಗೆ ಗಾಳ ಹಾಕಿ ವಂಚಿಸುವುದೇ ಮನೀಶ್​​​​ನ ಕೆಲಸ. ಫೇಸ್​ಬುಕ್​ನಲ್ಲಿ ಪರಿಚಯವಾಗಿ, ಪ್ರೀತಿ ಎಂಬಾಕೆಯನ್ನು ಮನೀಶ್ ಮದುವೆ ಆಗಿದ್ದ. ಆ ನಂತರ ಪ್ರೀತಿಯೇ 2 ಲಕ್ಷ ರೂ. ಕೊಟ್ಟು ಮನೀಶ್​ಗೆ ವಿದೇಶದಲ್ಲಿ ಕೆಲಸ ಕೊಡಿಸಿದ್ದಳು. ಆದ್ರೆ, ದುಬೈ ಕೆಲಸಕ್ಕೆಂದು ಹೋದ ಮನೀಶ್, ಬಹರೇನ್​ನಲ್ಲಿರೋ ಮಹಿಳೆ ಜೊತೆ ಲವ್ವಿಡವ್ವಿಗೆ ಬಿದ್ದಿದ್ದ. ಈ ವಿಷಯ ಪ್ರೀತಿಗೆ ತಿಳಿದು ಮನೀಷ್ ಇತಿಹಾಸ ಕೆದಕಿದ್ದು, ಈತನಿಗೆ ಮದುವೆಗೂ ಮುನ್ನ ಯುವತಿಯರ ಜೊತೆ ಲವ್ ಅಫೇರ್ ಇತ್ತು ಎನ್ನುವುದು ಬಯಲಾಗಿದೆ.

ಈ ಹಿಂದೆಯೂ ಮನೀಷ್ ಯುವತಿಯರ ಬಳಿ ಹಣ ಪಡೆದು ಮೋಸ ಮಾಡಿದ್ದ ಅನ್ನೋ ಬಗ್ಗೆ ಪ್ರೀತಿಗೆ ಮಾಹಿತಿ ಸಿಕ್ಕಿದೆ. ಹಣ ವಾಪಸ್ ಕೇಳಿದ್ರೆ, ಬ್ರೈನ್ ಟ್ಯೂಮರ್ ಇದೆ ಎಂದು ಎಲ್ಲಾ ಹುಡುಗೀರಿಗೆ ಹೇಳಿ, ಹಣ ಕೊಡದೇ ಲವ್ ಬ್ರೇಕಪ್ ಮಾಡ್ಕೊಂಡಿದ್ದಾನೆ. ಅಂದಾಗೆ, ಈ ಮಂಗಳೂರಿನ ಮನ್ಮಥ, ಟಿಕ್ ಟಾಕ್​ನಲ್ಲಿ ರೀಲ್ಸ್ ಮಾಡಿ ಯುವತಿಯರಿಗೆ ಗಾಳ ಹಾಕ್ತಿದ್ದ. ಸದ್ಯ ಮನೀಷ್ ವಿರುದ್ಧ ಪತ್ನಿ ದೂರು ನೀಡಿದ್ದು, ಮಂಗಳೂರು ಮಹಿಳಾ ಠಾಣೆಯಲ್ಲಿ FIR ದಾಖಲಾಗಿದೆ.

ಇದನ್ನೂ ಓದಿ: ವಿದೇಶದಲ್ಲೇ ಕುಳಿತು ಮಂಗಳೂರು ಯುವತಿಯರಿಗೆ ಗಾಳ: ಪತಿಯ ಪ್ರೀತಿ, ಪ್ರಣಯದಾಟ ಬಿಚ್ಚಿಟ್ಟ ಪತ್ನಿ

Source link

ಗೂಗಲ್, ಮೈಕ್ರೋಸಾಫ್ಟ್ ಇತ್ಯಾದಿ ಟೆಕ್ ಕಂಪನಿಗಳ ಬ್ರಿಟಿಷ್ ಈಸ್ಟ್ ಇಂಡಿಯಾ ಸಂಸ್ಥೆಗೆ ಹೋಲಿಸಿದ ಶ್ರೀಧರ್ ವೆಂಬು – Kannada News | Sridhar Vembu compares today’s tech giants to British East India Company

ನವದೆಹಲಿ, ಫೆಬ್ರುವರಿ 15: ಜೋಹೋ ಸಂಸ್ಥಾಪಕ ಶ್ರೀಧರ್ ವೆಂಬು (Sridhar Vembu) ಅವರು ಜಾಗತಿಕ ಟೆಕ್ ದೈತ್ಯ ಕಂಪನಿಗಳನ್ನು ಬ್ರಿಟಿಷರ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿದ್ದಾರೆ. ಗೂಗಲ್ ಸಂಸ್ಥೆ ಒಂದೇ ದಿನದಲ್ಲಿ 32 ಬಿಲಿಯನ್ ಡಾಲರ್​ನಷ್ಟು (3 ಲಕ್ಷ ಕೋಟಿ ರೂ) ಫಂಡ್ ಸೃಷ್ಟಿಸಿಕೊಂಡಿರುವುದನ್ನು ಉಲ್ಲೇಖಿಸುತ್ತಾ, ವೆಂಬು ಅವರು ಈ ಅನಿಸಿಕೆ ವ್ಯಕ್ತಪಡಿಸಿದ್ದಾರೆ. 17ನೇ ಶತಮಾನದಲ್ಲಿ ಆರಂಭವಾದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ 19ನೇ ಶತಮಾನದ ಮಧ್ಯ ಭಾಗದವರೆಗೂ ಅಸ್ತಿತ್ವದಲ್ಲಿತ್ತು. 200ಕ್ಕೂ ಹೆಚ್ಚು ವರ್ಷ ಕಾಲ ಜಗತ್ತಿನ ಹಲವು ಭಾಗಗಳನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿತ್ತು. ಈಗಿನ ಟೆಕ್ ಕಂಪನಿಗಳನ್ನು ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಕೆ ಮಾಡಿರುವುದು ಕುತೂಹಲದ ಸಂಗತಿ.

ಗೂಗಲ್ ಕಂಪನಿಯ ಅಗಾಧ ಫಂಡ್ ಎತ್ತುವಳಿ ಸಾಮರ್ಥ್ಯದ ಬಗ್ಗೆ ಅವಿರಳ್ ಭಟ್ನಾಗರ್ ಅವರು ಹಾಕಿದ ಎಕ್ಸ್ ಪೊಸ್ಟ್​ಗೆ ಶ್ರೀಧರ್ ವೆಂಬು ಪ್ರತಿಕ್ರಿಯೆಯಾಗಿ ಹೋಲಿಕೆ ಮಾಡಿದ್ದಾರೆ.

ಇದನ್ನೂ ಓದಿ: ನಗರಗಳೇ ಅಭಿವೃದ್ಧಿ ಯಂತ್ರಗಳು; ಸರ್ಕಾರದಿಂದ 1 ಲಕ್ಷ ಕೋಟಿ ರೂ ಅರ್ಬನ್ ಚಾಲೆಂಜ್ ಫಂಡ್

‘ಗೂಗಲ್ 1 ದಿನದಲ್ಲಿ 32 ಬಿಲಿಯನ್ ಸಾಲ ಪಡೆದಿದೆ. ಭಾರತದಂತಹ ಸಾರ್ವಭೌಮ ಸರ್ಕಾರಕ್ಕೆ ಇಷ್ಟು ಸಾಲ ಎತ್ತಲು 100 ದಿನ ಬೇಕಾಗುತ್ತದೆ. ಗೂಗಲ್ 1 ಬಿಲಿಯನ್ ಡಾಲರ್ ಮೌಲ್ಯದ 100 ವರ್ಷದ ಬಾಂಡ್ ಅನ್ನೂ ವಿತರಿಸುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಹೋಲಿಸಿದರೆ ಭಾರತದ ಅತ್ಯಂತ ಸುದೀರ್ಘ ಬಾಂಡ್ 40 ವರ್ಷದ್ದು. ದೊಡ್ಡ ಟೆಕ್ ಕಂಪನಿಗಳು ಈಗ ಫಂಡ್ ರೈಸಿಂಗ್ ಅಗಾಧತೆಯಲ್ಲಿ ಮತ್ತು ಅವಧಿಯಲ್ಲಿ ಸಾರ್ವಭೌಮ ರಾಷ್ಟ್ರಗಳಂತೆ ಕಾರ್ಯನಿರ್ವಹಿಸುತ್ತಿವೆ’ ಎಂದು ಹೂಡಿಕೆದಾರರೂ ಆಗಿರುವ ಅವಿರಳ್ ಭಟ್ನಾಗರ್ ತಮ್ಮ ಎಕ್ಸ್ ಪೋಸ್ಟ್​ನಲ್ಲಿ ಟ್ವೀಟ್ ಮಾಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಜೋಹೋ ಕಾರ್ಪೊರೇಶನ್​ನ ಸಂಸ್ಥಾಪಕರಾದ ಶ್ರೀಧರ್ ವೆಂಬು ಅವರು ಈಗಿನ ಟೆಕ್ ಕಂಪನಿಗಳನ್ನು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೆ ಹೋಲಿಸಿದ್ದಾರೆ.

ಶ್ರೀಧರ್ ವೆಂಬು ಅವರ ಎಕ್ಸ್ ಪೋಸ್ಟ್

ಇದನ್ನೂ ಓದಿ: ಆಂಟ್ರೋಪಿಕ್ ಹಾಗೂ ಇತರ 13 ಎಐ ಕಂಪನಿಗಳೊಂದಿಗೆ ಮುಕೇಶ್ ಅಂಬಾನಿ ಅವರ ಜಿಯೋ ಮೈತ್ರಿ

ಗೂಗಲ್, ಮೈಕ್ರೋಸಾಫ್ಟ್, ಆ್ಯಪಲ್, ಮೆಟಾ, ಎನ್​ವಿಡಿಯಾ, ಅಮೇಜಾನ್ ಮತ್ತು ಟೆಸ್ಲಾ ಕಂಪನಿಗಳನ್ನು ಬಿಗ್ ಟೆಕ್ ಅಥವಾ ಮ್ಯಾಗ್ನಿಫಿಕೆಂಟ್ ಸೆವೆನ್ ಕಂಪನಿಗಳೆಂದು ಬಣ್ಣಿಸಲಾಗುತ್ತದೆ. ಈ ಒಂದೊಂದು ಕಂಪನಿಯ ಮಾರುಕಟ್ಟೆ ಮೌಲ್ಯವು ದೊಡ್ಡ ದೇಶದ ಜಿಡಿಪಿಗೆ ಸಮವಾಗಿದೆ. ಆ್ಯಪಲ್ ಕಂಪನಿಯ ಮೌಲ್ಯವು ಇಟಲಿಗಿಂತ ಹೆಚ್ಚಿನದ್ದಾಗಿದೆ. ಮಾರುಕಟ್ಟೆಯಲ್ಲಿ ಇವುಗಳ ಏಕಸ್ವಾಮ್ಯ ಎದ್ದು ಕಾಣುವಂತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 5:19 pm, Sun, 15 February 26

Source link

ಗಂಡು ಹುಲಿ ಮೃತದೇಹ ಪತ್ತೆ: ಡ್ಯಾಂನಲ್ಲಿ ಶವ ತೇಲುತ್ತಿರುವುದನ್ನು ಕಂಡು ಬೆಚ್ಚಿಬಿದ್ದ ಪ್ರವಾಸಿಗರು – Kannada News | Chamarajanagar: Male Tiger Carcass Found in Gundal Reservoir

ಹುಲಿಯ ಮೃತದೇಹ ಪತ್ತೆImage Credit source: tv9 kannada

ಚಾಮರಾಜನಗರ, ಫೆಬ್ರವರಿ 15: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಗುಂಡಾಲ್​​ ಜಲಾಶಯದಲ್ಲಿ ಗಂಡು ಹುಲಿಯ ಮೃತದೇಹ (tiger deadbody) ಪತ್ತೆ ಆಗಿರುವಂತಹ ಘಟನೆ ನಡೆದಿದೆ. ಡ್ಯಾಂನಲ್ಲಿ ಹುಲಿಯ ಶವ ತೇಲುತ್ತಿರುವುದನ್ನು ನೋಡಿದ ಪ್ರವಾಸಿಗರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕೊಳ್ಳೇಗಾಲ ಪೊಲೀಸರು ಮತ್ತು ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ಸಿಬ್ಬಂದಿ ಭೇಟಿ ನೀಡಿದ್ದಾರೆ. ಸದ್ಯ ಜಲಾಶಯದಿಂದ ಹುಲಿಯ ಮೃತದೇಹವನ್ನು ಅರಣ್ಯ ಸಿಬ್ಬಂದಿ ಹೊರತೆಗೆದಿದ್ದು, ಪಶು ವೈದ್ಯರಿಂದ ಸ್ಥಳದಲ್ಲೇ ಹುಲಿಯ ಮರಣೋತ್ತರ ಪರೀಕ್ಷೆ ಮಾಡಿ, ಸ್ಯಾಂಪಲ್ ಸಂಗ್ರಹಿಸಿ ಎಫ್​ಎಸ್​ಎಲ್​ಗೆ ರವಾನಿಸಿದ್ದಾರೆ.

ಚಾಮರಾಜನಗರದಲ್ಲಿ ಮಿತಿಮೀರಿದ ಚಿರತೆ ಉಪಟಳ

ಇನ್ನು ಗಡಿನಾಡು ಚಾಮರಾಜನಗರದಲ್ಲಿ ದಿನ ಕಳೆದಂತೆ ಚಿರತೆ ಉಪಟಳವೂ ಮಿತಿಮೀರಿದೆ. ಇತ್ತೀಚೆಗೆ ಹನೂರು ಭಾಗದಲ್ಲಿ ಚಿರತೆ ದಾಳಿ ನಡೆಸಿ ಮೂರು ಕುರಿಯನ್ನ ತಿಂದು ತೇಗಿತ್ತು. ಕಳೆದ ಒಂದುವರೆ ತಿಂಗಳಲ್ಲಿ ಚಾಮರಾಜನಗರ ಜಿಲ್ಲೆಯಲ್ಲಿ ಬರೋಬ್ಬರಿ 15 ಕಡೆ ಚಿರತೆ ದಾಳಿ ನಡೆದಿದೆ.

ಇದನ್ನೂ ಓದಿ: ಜನರನ್ನ ಬಲಿ ಪಡೆಯುತ್ತಿದ್ದ ಹುಲಿಗಳ ಸೆರೆ: ಆಪರೇಷನ್​ T2 ಆಲ್ಫಾ 5ನೇ ಹಂತದ ಕಾರ್ಯಾಚರಣೆಯೂ ಯಶಸ್ವಿ

ಗಡಿ ನಾಡು ಚಾಮರಾದನಗರ ಅಪಾರ ವನ್ಯ ಮೃಗಗಳ ಸಂಪತ್ತು ಹೊಂದಿರುವ ಜಿಲ್ಲೆ. ಬಂಡೀಪುರ ಟೈಗರ್ ರಿಸರ್ವ್ ಫಾರೆಸ್ಟ್ ಬಿಳಿಗಿರಿ ಟೈಗರ್ ರಿಸರ್ವ್ ಫಾರೆಸ್ಟ್ ನಂತಹ ಎರೆಡೆರೆಡು ಟೈಗರ್ ರಿಸರ್ವ್ ಫಾರೆಸ್ಟ್ ಹಾಗೂ ಕಾವೇರಿ ವೈಲ್ಡ್ ಲೈಫ್ ಮಲೆ ಮಹದೇಶ್ವರ ವನ್ಯಜೀವಿಧಾಮವಿದೆ.

ಇದನ್ನೂ ಓದಿ: ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ತೆರಳುತ್ತಿದ್ದ ಭಕ್ತನ ಕತ್ತು ಸೀಳಿ ಕೊಂದು ಹೊತ್ತೊಯ್ದಿದ್ದ ಚಿರತೆ ಕೊನೆಗೂ ಸೆರೆ

ಇಷ್ಟೊಂದು ಅಪಾರ ಸಂಪತ್ತು ವನ್ಯ ಮೃಗಗಳು ಇರುವ ಈ ಜಿಲ್ಲೆಯಲ್ಲಿ ದಿನ ಕಳೆದಂತೆ ಚಿರತೆ ಉಪಟಳ ಹೆಚ್ಚಾಗಿದೆ. ಕಾಡಿನಿಂದ ನಾಡಿಗೆ ಬರುವ ಚಿರತೆಗಳು ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ. ಮಾದಪ್ಪನ ಭಕ್ತನನ್ನ ಕೊಂದು ತಿಂದ ನರಭಕ್ಷಕ ಚಿರತೆ ಸೆರೆಯಾದ ಬಳಿಕವು ಹನೂರು ಭಾಗದಲ್ಲಿ ಮತ್ತೆ ಮಹಾಲಿಂಗನಕಟ್ಟೆಯಲ್ಲಿ ಚಿರತೆ ದಾಳಿ ನಡೆಸಿ 3 ಮೇಕೆಗಳನ್ನ ತಿಂದು ತೇಗಿತ್ತು.

ಕರ್ನಾಟಕದ ನತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಮಹಾಶಿವರಾತ್ರಿ ಸಂಭ್ರಮದ ಮಧ್ಯೆ ಶಿವಲಿಂಗ ಮೂರ್ತಿ ಭಗ್ನ: ರೊಚ್ಚಿಗೆದ್ದ ಗ್ರಾಮಸ್ಥರು – Kannada News | Gadag: Shivling and Nandi Idol Vandalised in on Shivaratri

ಗದಗ, ಫೆಬ್ರವರಿ 15: ಜಿಲ್ಲೆಯ ಮುಂಡರಗಿ ತಾಲೂಕಿನ ಸಿಂಗಟಾಲೂರು ಗ್ರಾಮದಲ್ಲಿ ಮಹಾಶಿವರಾತ್ರಿ ಹಬ್ಬದಂದೇ ಅಹಿತಕರ ಘಟನೆವೊಂದು ನಡೆದಿದೆ. ತುಂಗಭದ್ರಾ ನದಿ ದಡದಲ್ಲಿರುವ ಐತಿಹಾಸಿಕ ರಾಮಲಿಂಗೇಶ್ವರ ದೇವಾಲಯದಲ್ಲಿನ ಶಿವಲಿಂಗ, ಅದರ ಪಾಣಿಪೀಠ ಮತ್ತು ನಂದಿ ವಿಗ್ರಹವನ್ನು ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ. ಅಹೋರಾತ್ರಿ ಘಟನೆ ನಡೆದಿದೆ. ದೇಶಾದ್ಯಂತ ಶಿವರಾತ್ರಿಯನ್ನು ಭಕ್ತಿ ಭಾವದಿಂದ ಆಚರಿಸುತ್ತಿರುವಾಗ ಈ ರೀತಿಯ ಘಟನೆ ನಡೆದಿರುವುದು ಭಕ್ತರಲ್ಲಿ ತೀವ್ರ ನೋವುಂಟು ಮಾಡಿದೆ. ಸದ್ಯ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಆರೋಪಿಗಳನ್ನು ಬಂಧಿಸದಿದ್ದರೆ ಡಿಸಿ ಕಚೇರಿ ಬಳಿ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

 

Source link