ಬಿಹಾರದಲ್ಲಿ ಮತ್ತೆ ಬಲವಂತದ ಮದುವೆ ಪದ್ಧತಿ ಮುನ್ನೆಲೆಗೆ ಬಂದಿದ್ದು, ಹೋಮ್ ಗಾರ್ಡ್ ಉದ್ಯೋಗಾಕಾಂಕ್ಷಿಯೊಬ್ಬರನ್ನು ಅಪಹರಿಸಿ, ಮಾದಕ ದ್ರವ್ಯ ನೀಡಿ ಬಲವಂತವಾಗಿ ಮದುವೆ ಮಾಡಿಸಿರುವ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬಿಹಾರದ ಲಖಿಸರಾಯ್ ಜಿಲ್ಲೆಯ ನಿವಾಸಿ, ಹೋಮ್ ಗಾರ್ಡ್ ಹುದ್ದೆಯ ಆಕಾಂಕ್ಷಿಯಾದ ಯುವಕ ದೈಹಿಕ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದರು. ಈ ವೇಳೆ ಕೆಲವು ವ್ಯಕ್ತಿಗಳು ಅವರನ್ನು ಅಪಹರಿಸಿದ್ದಾರೆ. ಅಪಹರಣಕಾರರು ಯುವಕನಿಗೆ ಮಾದಕ ದ್ರವ್ಯ ಬೆರೆಸಿದ ಪಾನೀಯವನ್ನು ನೀಡಿದ್ದರಿಂದ ಅವರು ಪ್ರಜ್ಞೆ ಕಳೆದುಕೊಂಡಿದ್ದರು ಎನ್ನಲಾಗಿದೆ. ಯುವಕನ ಹೇಳಿಕೆಯ ಪ್ರಕಾರ, ಅವರು ಕಣ್ಣು ಬಿಟ್ಟಾಗ ಮದುವೆ ಮಂಟಪದಲ್ಲಿದ್ದರು. ಮಾದಕ ದ್ರವ್ಯದ ಪ್ರಭಾವದಿಂದ ಅವರು ಅರೆ ಪ್ರಜ್ಞಾವಸ್ಥೆಯಲ್ಲಿದ್ದಾಗಲೇ, ಬೆದರಿಕೆ ಹಾಕಿ ಯುವತಿಯೊಬ್ಬಳ ಜೊತೆ ಮದುವೆ ವಿಧಿವಿಧಾನಗಳನ್ನು ಮಾಡಲಾಗಿದೆ. ನಾನು ಎಚ್ಚರಗೊಂಡಾಗ ಮದುವೆಯ ಕಾರ್ಯಗಳು ನಡೆಯುತ್ತಿದ್ದವು, ನನಗೆ ಏನಾಗುತ್ತಿದೆ ಎಂದು ಅರ್ಥವಾಗುವಷ್ಟರಲ್ಲಿ ಮದುವೆ ಮುಗಿದಿತ್ತು ಎಂದು ಹೇಳಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿImage Credit source: scroll.in
ಬೆಂಗಳೂರು, ಫೆಬ್ರವರಿ 11: ರಾಜ್ಯ ಸರ್ಕಾರವು ಕರ್ನಾಟಕ ಪಬ್ಲಿಕ್ ಸ್ಕೂಲ್ (KPS) ಮ್ಯಾಗ್ನೆಟ್ ಯೋಜನೆ ಜಾರಿಗೆ ಮುಂದಾಗಿದೆ. ಆ ಮೂಲಕ ಕನ್ನಡ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುವುದು ಎಂಬ ಚರ್ಚೆಗಳು ನಡೆಯುತ್ತಿವೆ. ಸದ್ಯ ಈ ವಿಚಾರವಾಗಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj S Bommai)
ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಕರ್ನಾಟಕ ಸರ್ಕಾರ ಈಗಾಗಲೇ 638 ಕನ್ನಡ ಶಾಲೆಗಳನ್ನು ಮುಚ್ಚಿದೆ. ಇದು ಕನ್ನಡ ಮತ್ತು ಕನ್ನಡ ಶಾಲೆಗಳ ವಿರೋಧಿಯಾಗಿದೆ. ಇದನ್ನು ಖಂಡಿಸುತ್ತೇನೆ, ಕನ್ನಡ ಶಾಲೆಗಳ ಪುನರಾರಂಭಕ್ಕೆ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ: ಬೊಮ್ಮಾಯಿ
ನವದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕಾಂಗ್ರೆಸ್ ಮೇಲಿಂದ ಮೇಲೆ ಚುನಾವಣೆಯಲ್ಲಿ ಸೋಲುತ್ತಿರುವುದರಿಂದ ಅವರ ನಾಯಕ ಹತಾಶರಾಗಿದ್ದಾರೆ. ಹೀಗಾಗಿ ಸಂಸತ್ತಿನಲ್ಲಿ ಅವರು ನಗರ ನಕ್ಸಲರಂತೆ ವರ್ತಿಸುತ್ತಿದ್ದಾರೆ ಎಂದು ವಾಗ್ದಾಳಿ ಮಾಡಿದ್ದಾರೆ. ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ರಾಜ್ಯ ಸರ್ಕಾರ ದಿವಾಳಿಯಾಗಿದೆ. ಸಂಬಳ ಕೊಡಲು ಆಗುತ್ತಿಲ್ಲ. ಹೀಗಾಗಿ ಕನ್ನಡ ಶಾಲೆಗಳನ್ನು ಮುಚ್ಚುತ್ತಿದ್ದಾರೆ.
ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟ್ವೀಟ್
They have shut down 638 schools because Karnataka’s finances are in a precarious state. Unable to pay salaries, they are closing institutions. This is anti-Kannada education. I strongly condemn it and urge the government to restart these schools.
ಬೆಂಚ್ಗಳ ಮೇಲೆ ನಿಲ್ಲುವುದು, ಸ್ಪೀಕರ್ ಮೇಲೆ ದಾಳಿ ಮಾಡುವುದು ಇದು ಮಿತಿಮೀರಿದೆ. ಕಾಂಗ್ರೆಸ್ ಮಹಿಳಾ ಸಂಸದರು ಪ್ರಧಾನಮಂತ್ರಿಯ ಆಸನದವರೆಗೆ ಬಂದು ಅವರು ಬರುವುದನ್ನು ತಡೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಸಂಸತ್ತಿನ ಇತಿಹಾಸದಲ್ಲಿ ಯಾವತ್ತೂ ಆಗಿರಲಿಲ್ಲ ಎಂದಿದ್ದಾರೆ.
ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಕಲಾಪವನ್ನು ಸುಗಮವಾಗಿ ನಡೆಸಲು ಬಿಡುತ್ತಾರೆ ಎನ್ನುವ ನಂಬಿಕೆ ಇದೆಯಾ ಎಂದು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರು ಏನು ಮಾಡುತ್ತಾರೆ ಎನ್ನುವುದು ಗೊತ್ತಿಲ್ಲ. ಆದರೆ, ಅವರು ಜನರ ಸಮಸ್ಯೆಯ ಬಗ್ಗೆ ಮಾತನಾಡುವುದಿಲ್ಲ. ಅವರು ತೊಂದರೆ ಕೊಡುವುದನ್ನೇ ಅಜೆಂಡಾ ಮಾಡಿಕೊಂಡಿದ್ದಾರೆ. ಬಹುತೇಕ ಅದೇ ಆಗಬಹುದು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಿಡಿಕಾರಿದ್ದಾರೆ.
ಸಿಎಂ ಕುರ್ಚಿ ಕದನ ಮತ್ತೆ ಮುನ್ನೆಲೆಗೆImage Credit source: Tv9 Kannada
ಬೆಂಗಳೂರು, ಫೆಬ್ರವರಿ 11: ರಾಜ್ಯ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಫೈಟ್ ಮತ್ತೆ ಮುನ್ನೆಗೆ ಬಂದಿದ್ದು ಅತ್ತ ಡಿಸಿಎಂ ಡಿ.ಕೆ. ಶಿವಕುಮಾರ್ ದೆಹಲಿಗೆ ಹಾರಿದ್ದರೆ, ಇತ್ತ ಡಿ.ಕೆ. ಸುರೇಶ್ ಸಹೋದರನ ಪರ ಅಖಾಡಕ್ಕಿಳಿದಿದ್ದಾರೆ. ಕೊಟ್ಟ ಮಾತಿನ ವಿಚಾರವನ್ನು ಮತ್ತೆ ಪ್ರಸ್ತಾಪಿಸಿರುವ ಮಾಜಿ ಸಂಸದ, ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ವಲ್ಪ ನಿಧಾನವಾದರೂ ಪರವಾಗಿಲ್ಲ ಕೊಟ್ಟ ಮಾತನ್ನು ಉಳಿಸಿಕೊಳ್ತಾರೆ. ಆ ಬಗ್ಗೆ ನನಗೆ ಈಗಲೂ ಭರವಸೆ ಇದೆ ಎಂದಿದ್ದಾರೆ.
ಡಿಕೆಶಿ ಪರ ಸಹೋದರನ ಬ್ಯಾಟಿಂಗ್
ಸಿದ್ದರಾಮಯ್ಯ ಅವರೇ 5 ವರ್ಷ ಸಿಎಂ ಎಂದು ಕಾಂಗ್ರೆಸ್ ಎಂಎಲ್ಸಿ ಯತೀಂದ್ರ ಹೇಳಿಕೆ ಸಂಬಂಧವೂ ವ್ಯಂಗ್ಯವಾಡಿರುವ ಸುರೇಶ್, ಅವರು ಹೇಳಿದ ಮೇಲೆ ಅದೇ ವೇದ ವಾಕ್ಯ ಎಂದಿದ್ದಾರೆ. ಕಾಂಗ್ರೆಸ್ ಪಕ್ಷದ ಕೆಲ ಶಾಸಕರಿಗೆ ಡಿಕೆಶಿ ವಿದೇಶ ಪ್ರವಾಸ ಆಯೋಜಿಸಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ವಿದೇಶ ಪ್ರವಾಸಕ್ಕೂ ಡಿ.ಕೆ.ಶಿವಕುಮಾರ್ಗೂ ಸಂಬಂಧವಿಲ್ಲ. ಯಾರು ವಿದೇಶ ಪ್ರವಾಸ ಹೋಗ್ತಿದ್ದಾರೆ ಅವರನ್ನೇ ನೀವು ಕೇಳಬೇಕು ಎಂದು ಸ್ಪಷ್ಟಪಡಿಸಿದ್ದಾರೆ.
ನಿಗಮ ಮಂಡಳಿಯಲ್ಲಿ ಬಿಜೆಪಿ ಮುಖಂಡನಿಗೆ ಸ್ಥಾನ ನೀಡಿದ ವಿಚಾರವಾಗಿಯೂ ಸರ್ಕಾರದ ವಿರುದ್ಧ ಡಿ.ಕೆ.ಸುರೇಶ್ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷ ಎಲ್ಲರನ್ನೂ ಗೌರವಿಸುತ್ತದೆ ಅಂತಾಯ್ತಲ್ಲ. ರಾಜ್ಯ ಸರ್ಕಾರ ಎಲ್ಲರನ್ನೂ ಕೂಡ ಜೊತೆಗೆ ಕರೆದೊಯ್ಯಬೇಕು. ಕಾಂಗ್ರೆಸ್ ಪಕ್ಷದ್ದು ಸರ್ವಧರ್ಮ ಪಾಲಿಸಿ ಅಲ್ವಾ? ಬಿಜೆಪಿ, ಜೆಡಿಎಸ್ ಸೇರಿದಂತೆ ಎಲ್ಲರೂ ನಮ್ಮ ಪಕ್ಷದಲ್ಲೇ ಇದ್ದಾರೆ. ಹೀಗಾಗಿ ಎಲ್ಲ ವಿಚಾರದಲ್ಲೂ ಹೊರಗಿನಿಂದ ಬಂದ ಅತಿಥಿಗಳಿಗೆ ಮೊದಲ ಆದ್ಯತೆ ನೀಡುತ್ತೇವೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡನೇ ಆದ್ಯತೆ ನೀಡಲಾಗುವುದು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ನಡೆ ಬಗ್ಗೆ ಕಿಡಿ ಕಾರಿದ್ದಾರೆ.
ಬೆಂಗಳೂರು, ಫೆಬ್ರವರಿ 11: ನಾಯಕತ್ವ ಗೊಂದಲದ ಕುರಿತು ಪದೇ ಪದೇ ಕೇಳಿಬರುತ್ತಿರುವ ಪ್ರಶ್ನೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಮಾಧ್ಯಮ ಪ್ರತಿನಿಧಿಗಳು ಪ್ರಶ್ನೆ ಕೇಳಿದಾಗ ಸಿಎಂ ಸಿಟ್ಟಾದ ಘಟನೆ ಬೆಂಗಳೂರಿನಲ್ಲಿ ಬುಧವಾರ ನಡೆಯಿತು. ಕಳೆದ ಮೂರು ತಿಂಗಳಿಂದಲೂ ಇದೇ ವಿಷಯವನ್ನು ಪದೇ ಪದೇ ಕೇಳಲಾಗುತ್ತಿದೆ. ದಯವಿಟ್ಟು ಇದನ್ನು ಪುನರಾವೃತ್ತಿ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಗರಂ ಆಗಿಯೇ ಹೇಳಿದರು.
ಶಾಸಕರ ವಿದೇಶ ಪ್ರವಾಸದ ವಿಷಯ ಪ್ರಸ್ತಾಪಿಸಿದಾಗ, ತಮ್ಮ ಗಮನಕ್ಕೆ ಬಂದಿಲ್ಲ, ಅದು ವೈಯಕ್ತಿಕ ಖರ್ಚಿನಲ್ಲಿದ್ದರೆ ವಿವಾದ ಏಕೆ ಎಂದು ಪ್ರಶ್ನಿಸಿದರು. ಆದರೆ, ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಯಿಂದ ಅವರು ಸಿಡಿಮಿಡಿಗೊಂಡರು.
‘ನಾನು ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಬ್ಬರೂ ಪಕ್ಷದ ಹೈಕಮಾಂಡ್‌ನ ನಿರ್ಧಾರಕ್ಕೆ ಬದ್ಧರಾಗಿದ್ದೇವೆ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ, ಅದನ್ನು ನಾವು ತಪ್ಪದೆ ಪಾಲಿಸುತ್ತೇವೆ. ಇದು ಸಂಪೂರ್ಣವಾಗಿ ಹೈಕಮಾಂಡ್ಗೆ ಬಿಟ್ಟ ವಿಚಾರ’ ಎಂದು ಸಿದ್ದರಾಮಯ್ಯ ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಣಕ್ಕಿಳಿಯುವುದು ಎಲ್ಲಿ? ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಸಿಗಲು ಇನ್ನೂ ಕೆಲ ದಿನಗಳವರೆಗೆ ಕಾಯಬೇಕಾಗಿ ಬರಬಹುದು. ಏಕೆಂದರೆ ಆರ್ಸಿಬಿ ಫ್ರಾಂಚೈಸಿ ಬೆಂಗಳೂರಿನಿಂದ ಹೊರ ನಡೆಯಲು ತೆರೆಮರೆಯ ಪ್ರಯತ್ನ ಮುಂದುವರೆಸಿದ್ದಾರೆ.
ಅದರಂತೆ ಐಪಿಎಲ್ 2026ರ ಸೀಸನ್ಗಾಗಿ ನವಿ ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂ ಅನ್ನು ತನ್ನ ತವರು ಮೈದಾನವಾಗಿ ಬಳಸಿಕೊಳ್ಳಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲ್ಯಾನ್ ರೂಪಿಸಿತ್ತು. ಆದರೆ ಆರ್ಸಿಬಿಯ ಈ ಮನವಿಯನ್ನು ಮುಂಬೈ ಇಂಡಿಯನ್ಸ್ ತಿರಸ್ಕರಿಸಿದೆ ಎಂದು ವರದಿಯಾಗಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಳೆದ ವರ್ಷ ನಡೆದ ದುರದೃಷ್ಟಕರ ಕಾಲ್ತುಳಿತದ ಘಟನೆಯ ನಂತರ ಉಂಟಾದ ಸುರಕ್ಷತಾ ನಿರ್ಬಂಧಗಳಿಂದಾಗಿ ಆರ್ಸಿಬಿ ಪರ್ಯಾಯ ಮೈದಾನವನ್ನು ಹುಡುಕುತ್ತಿದೆ. ಹೀಗಾಗಿ ಡಿವೈ ಪಾಟೀಲ್ ಸ್ಟೇಡಿಯಂ ಅನ್ನು ತವರು ಮೈದಾನವನ್ನಾಗಿ ಆಯ್ಕೆ ಮಾಡಲು ಬಯಸಿತ್ತು.
ಆದರೆ ಡಿವೈ ಪಾಟೀಲ್ ಸ್ಟೇಡಿಯಂ ಮುಂಬೈ ಇಂಡಿಯನ್ಸ್ನ ಕಾರ್ಯಕ್ಷೇತ್ರಕ್ಕೆ ಹತ್ತಿರವಿರುವುದರಿಂದ, ಆರ್ಸಿಬಿ ಇಲ್ಲಿ ಪಂದ್ಯಗಳನ್ನು ಆಯೋಜಿಸಲು MI ತಂಡದ 'ನಿರಾಕ್ಷೇಪಣಾ ಪತ್ರ' (NOC) ಅಗತ್ಯವಿತ್ತು. ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಯು ತನ್ನ ತವರು ಪ್ರದೇಶದ ಘನತೆಯನ್ನು ಕಾಪಾಡುವ ಉದ್ದೇಶದಿಂದ ಈ ಅನುಮತಿಯನ್ನು ನಿರಾಕರಿಸಿದೆ.
ಮುಂಬೈ ಇಂಡಿಯನ್ಸ್ ಆಡಳಿತ ಮಂಡಳಿಯ ಅನುಮತಿ ನಿರಾಕರಣೆಯ ಕಾರಣ, ಡಿವೈ ಪಾಟೀಲ್ ಸ್ಟೇಡಿಯಂ ಅನ್ನು ಆರ್ಸಿಬಿ ತನ್ನ ತವರು ಮೈದಾನವನ್ನಾಗಿ ಆಯ್ಕೆ ಮಾಡಲಾಗುವುದಿಲ್ಲ. ಹೀಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಮತ್ತೊಂದು ಪರ್ಯಾಯ ಸ್ಟೇಡಿಯಂನತ್ತ ಮುಖ ಮಾಡಬೇಕಿದೆ. ಇಲ್ಲಾ, ರಾಜ್ಯ ಸರ್ಕಾರದ ನಿಯಮಗಳನ್ನು ಪಾಲಿಸಿ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಣಕ್ಕಿಳಿಯಬೇಕಾಗುತ್ತದೆ.
ಬಾಲಿವುಡ್ನ (Bollywoo) ಖ್ಯಾತ ಹಾಸ್ಯನಟ ರಾಜ್ಪಾಲ್ ಯಾದವ್ 2010ರ ಹಳೆಯ ಸಾಲ ಮತ್ತು ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿಯೆಂದು ಆದೇಶಿಸಲಾಗಿದೆ ಶಿಕ್ಷೆಗೆ ಗುರಿಯಾಗಿದ್ದಾರೆ. ಹಲವು ವರ್ಷಗಳ ಕಾಲ ನಡೆದ ನ್ಯಾಯಾಲಯದ ಸಮರದಲ್ಲಿ ರಾಜ್ಪಾಲ್ ಯಾದವ್ ಅವರಿಗೆ ಸೋಲಾಗಿದ್ದು ಇತ್ತೀಚೆಗಷ್ಟೆ ಅವರು ನ್ಯಾಯಾಲಯದ ಆದೇಶದಂತೆ ತಿಹಾರ್ ಜೈಲಿಗೆ ಸರೆಂಡರ್ ಆಗಿದ್ದು ಮುಂದಿನ ಹಲವು ತಿಂಗಳು ಅವರು ಜೈಲಿನಲ್ಲಿ ಸೆರೆವಾಸ ಅನುಭವಿಸಬೇಕಿದೆ. ಆದರೆ ಇದೀಗ ರಾಜ್ಪಾಲ್ ಯಾದವ್ ಅವರಿಗೆ ಚಿತ್ರರಂಗದ ನೆರವು ಸಿಗುತ್ತಿದೆ.
ರಾಜ್ಪಾಲ್ ಯಾದವ್ ಬಾಲಿವುಡ್ನಲ್ಲಿ 27 ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ದೇಶದ ಅತ್ಯುತ್ತಮ ಹಾಸ್ಯನಟರಲ್ಲಿ ರಾಜ್ಪಾಲ್ ಯಾದವ್ ಸಹ ಒಬ್ಬರು. ಇದೇ ಕಾರಣಕ್ಕೆ ಚಿತ್ರರಂಗದ ಕೆಲವರು ಇದೀಗ ರಾಜ್ಪಾಲ್ ಯಾದವ್ ಅವರ ನೆರವಿಗೆ ಬಂದಿದ್ದಾರೆ. ಇತ್ತೀಚೆಗೆ ಟ್ವೀಟ್ ಮಾಡಿದ್ದ ನಟ ಸೋನು ಸೂದ್, ‘ಚಿತ್ರರಂಗದವರು ರಾಜ್ಪಾಲ್ ಯಾದವ್ ನೆರವಿಗೆ ಬರಬೇಕು, ಅವರೊಟ್ಟಿಗೆ ಸಿನಿಮಾ ಸಹಿ ಮಾಡಿಸಿಕೊಂಡಾದರೂ ಅವರಿಗೆ ಅಡ್ವಾನ್ಸ್ ರೂಪದಲ್ಲಿ ಹಣ ನೀಡಬೇಕು, ನಾನೂ ಸಹ ಹಾಗೆಯೇ ಮಾಡುತ್ತಿದ್ದೇನೆ. ಇದರಿಂದ ಅವರ ಸಮಸ್ಯೆಗೆ ಪರಿಹಾರ ಸಿಗುತ್ತದೆ’ ಎಂದಿದ್ದರು.
ಇದೀಗ ಖ್ಯಾತ ಸಂಗೀತ ನಿರ್ದೇಶಕ ರಾವ್ ಇಂದೆರ್ಜೀತ್ ಸಿಂಗ್ ಅವರು ರಾಜ್ಪಾಲ್ ಯಾದವ್ ಸಹಾಯಕ್ಕೆ ಬಂದಿದ್ದು, ರಾಜ್ಪಾಲ್ ಯಾದವ್ ಅವರಿಗೆ 1.11 ಕೋಟಿ ರೂಪಾಯಿಗಳ ನೆರವು ನೀಡಿದ್ದಾರೆ. ‘ಭೂಲ್ ಭುಲಯ್ಯ’, ‘ಹಂಗಾಮ’, ‘ವೆಲ್ಕಮ್’ ಇನ್ನೂ ಹಲವು ಹಿಂದಿ ಸಿನಿಮಾಗಳಿಗೆ ಸಂಗೀತ ನೀಡಿರುವ ರಾವ್ ಇಂದೆರ್ಜೀತ್ ಸಿಂಗ್ ಅವರು ರಾಜ್ಪಾಲ್ ಯಾದವ್ ಅವರಿಗೆ ನೆರವಿನ ಹಸ್ತ ಚಾಚಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇಂದೆರ್ಜೀತ್ ಸಿಂಗ್, ‘ರಾಜ್ಪಾಲ್ ಯಾದವ್ ಅವರು ಭಾರತೀಯರನ್ನು ದಶಕಗಳಿಂದಲೂ ರಂಜಿಸುತ್ತಾ ಬಂದಿದ್ದಾರೆ. ಸಿನಿಮಾ ಪ್ರೇಮಿಗಳಿಗೆ ಹಲವು ನೆನಪುಳಿವ, ಸಂತೋಷದ ಕ್ಷಣಗಳನ್ನು ನೀಡಿದ್ದಾರೆ. ಭಾರತೀಯ ಚಿತ್ರರಂಗದ ಅವಿಭಾಜ್ಯ ಅಂಗ ಸಹ ಆಗಿದ್ದಾರೆ. ಇದು ಕೇವಲ ಹಣದ ಸಹಾಯ ಮಾತ್ರ ಅಲ್ಲ. ಇದು ಒಬ್ಬ ವ್ಯಕ್ತಿ ಕಷ್ಟದಲ್ಲಿದ್ದಾಗ, ಅದರಲ್ಲೂ ಒಬ್ಬ ಚಿತ್ರಕರ್ಮಿ ಕಷ್ಟದಲ್ಲಿದ್ದಾಗ ಜೊತೆಗೆ ನಿಲ್ಲಬೇಕಾದುದು ಕರ್ತವ್ಯ ಎಂಬ ಕಾರಣಕ್ಕೆ ಮಾಡಿದ ಸಹಾಯ’ ಎಂದಿದ್ದಾರೆ.
ರಾಜ್ಪಾಲ್ ಯಾದವ್ ಅವರಿಗೆ 10 ಲಕ್ಷ ರೂಪಾಯಿ ಹಣ ಸಹಾಯ ಮಾಡುವುದಾಗಿ ವಿವಾದಾತ್ಮಕ ಸಿನಿಮಾ ವಿಮರ್ಶಕ ಕಮಾಲ್ ಆರ್ ಖಾನ್ ಸಹ ಹೇಳಿದ್ದಾರೆ. ಕೆಲ ಮಾಹಿತಿಗಳ ಪ್ರಕಾರ, ಚಿತ್ರರಂಗದ ಕೆಲವು ದಿಗ್ಗಜರು ತೆರೆ ಮರೆಯಲ್ಲಿ ರಾಜ್ಪಾಲ್ ಯಾದವ್ ಅವರಿಗೆ ಹಣ ನೀಡಿದ್ದಾರೆ ಎಂದು ಸಹ ಹೇಳಲಾಗುತ್ತಿದೆ.
ರಾಜ್ಪಾಲ್ ಯಾದವ್ ಅವರು 9 ಕೋಟಿ ರೂಪಾಯಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಒಂದೊಮ್ಮೆ ಅವರು 9 ಕೋಟಿ ರೂಪಾಯಿ ಹಣವನ್ನು ಕಟ್ಟಿದ್ದೇ ಆದಲ್ಲಿ ಅವರು ಜೈಲಿನಿಂದ ಬಿಡುಗಡೆ ಹೊಂದಬಹುದಾಗಿದೆ.
ಬೆಂಗಳೂರು, ಫೆಬ್ರವರಿ 11: ಬಿಕ್ಲು ಶಿವ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಭೈರತಿ ಬಸವರಾಜ್ ಅವರನ್ನು ಬಂಧಿಸಲು ಸಿಐಡಿ ಪೊಲೀಸರು ಸಿದ್ಧತೆ ನಡೆಸಿದ್ದಾರೆ. ಬೇಲ್ ಅರ್ಜಿ ಎರಡು ಬಾರಿ ರದ್ದಾದ ಬೆನ್ನಲ್ಲೇ ಭೈರತಿ ಬಸವರಾಜ್ ವಿದೇಶಕ್ಕೆ ತೆರಳುವುದನ್ನು ತಡೆಯುವ ನಿಟ್ಟಿನಲ್ಲಿ ಲುಕ್ ಔಟ್ ನೋಟಿಸ್ ಕೂಡ ಜಾರಿ ಮಾಡಲಾಗಿದೆ ಎಂದು ಟಿವಿ9ಗೆ ಸಿಐಡಿ ಉನ್ನತ ಮೂಲಗಳಿಂದ ಮಾಹಿತಿ ಲಭಿಸಿದೆ. ಬೆಂಗಳೂರಿನಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಮಾತನಾಡಿ, ರೌಡಿ ಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದ ಸಂಬಂಧ ಭೈರತಿ ಬಸವರಾಜ್ ಸ್ವತಃ ಶರಣಾದರೆ ಒಳ್ಳೆಯದು. ಇಲ್ಲವಾದರೆ ಪೊಲೀಸರು ಅವರನ್ನು ಪತ್ತೆ ಹಚ್ಚಿ ಬಂಧಿಸುತ್ತಾರೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಈ ವಿಡಿಯೋದಲ್ಲಿ ಒಬ್ಬ ಹೂವು ಮಾರುವ ಮಹಿಳೆಯ ಮುಗ್ಧತೆ ಮತ್ತು ಆಕೆಯ ಮುಖದಲ್ಲಿರುವ ಸುಂದರವಾದ ನಗು ಎಲ್ಲರ ಗಮನ ಸೆಳೆಯುತ್ತದೆ. ಆಕೆ ಹಣಕ್ಕಿಂತ ಹೆಚ್ಚಾಗಿ ಪ್ರೀತಿ ಮತ್ತು ಗೌರವಕ್ಕೆ ಬೆಲೆ ನೀಡುತ್ತಾಳೆ ಎಂಬುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತದೆ. ಈ ವಿಡಿಯೋ ಇಷ್ಟೊಂದು ಜನರಿಗೆ ತಲುಪಲು ಮುಖ್ಯ ಕಾರಣ ಆ ಹೂವು ಮಾರುವ ಮಹಿಳೆಯ ಆತ್ಮವಿಶ್ವಾಸ ಮತ್ತು ಮುಗ್ಧತೆ ಕಾರಣ. ಸಾಮಾನ್ಯವಾಗಿ ರಸ್ತೆ ಬದಿಯಲ್ಲಿ ವ್ಯಾಪಾರ ಮಾಡುವವರು ಗ್ರಾಹಕರೊಂದಿಗೆ ಚೌಕಾಶಿ ಮಾಡುವುದನ್ನು ನಾವು ನೋಡುತ್ತೇವೆ. ಆದರೆ ಇಲ್ಲಿ ಈಕೆ, ನೀವು ಖುಷಿಯಿಂದ ಎಷ್ಟು ಕೊಡ್ತೀರೋ ಅಷ್ಟೇ ಕೊಡಿ. ಎಂದು ಹೇಳುವ ಮೂಲಕ ಹಣಕ್ಕಿಂತ ಗೌರವ ಮತ್ತು ಸಂಬಂಧಕ್ಕೆ ಹೆಚ್ಚಿನ ಬೆಲೆ ನೀಡಿದ್ದಾಳೆ. ಈ ವಿಡಿಯೋದಲ್ಲಿ ನಡೆದ ಸಂಭಾಷಣೆ ಏನು? ಎಂಬುದು ಇಲ್ಲಿದೆ. ಹೂವು ಮಾರುವಾಕೆ ಅರೇ… ಇಲ್ಲ ಇಲ್ಲ ಇಲ್ಲ. ಇದು ನಿಮಗಾಗಿ, ಇದಕ್ಕೆ ಕಾರಿನಲ್ಲಿದ್ದವರು ಎಷ್ಟು ಇದರ ಬೆಲೆ? ಹೇಳಿ ಎಂದು ಕೇಳುತ್ತಾರೆ. ಇಟ್ಟುಕೊಳ್ಳಿ ದೀದಿ. ಪರವಾಗಿಲ್ಲ ಎಂದು ಹೂವು ಮಾರುವಾಕೆ ಹೇಳುತ್ತಾಳೆ. ಫ್ರೀ ಆದ್ರೆ ಬೇಡ, ನನಗೆ ಬೇಡ ಎಂದು ಕಾರಿನಲ್ಲಿದ್ದವರು ಹೇಳುತ್ತಾರೆ. ಮತ್ತೆ ಹೂವು ಮಾರುವ ಮಹಿಳೆ, ಇಲ್ಲ, ಇದು ನಿಮಗಾಗಿ ಎಂದು ಹೇಳುತ್ತಾಳೆ. ಇದರ ಬೆಲೆ ಎಷ್ಟು? ಬೇಗ ಹೇಳಿ ಎಂದು ಕಾರಿನಲ್ಲಿದ್ದವರು ಕೇಳುತ್ತಾರೆ. ನೀವು ಖುಷಿಯಿಂದ ಎಷ್ಟು ಕೊಡ್ತೀರೋ ಅಷ್ಟು ಕೊಡಿ ಎಂದು ಈ ಮಹಿಳೆ ಹೇಳುತ್ತಾಳೆ. ಥ್ಯಾಂಕ್ ಯು ಸರ್… ಬಾಯ್! ಎಂದು ಹೇಳುತ್ತಾಳೆ.
ನವದೆಹಲಿ, ಫೆಬ್ರುವರಿ 11: ಎಐ ಸೃಷ್ಟಿದ ಫೋಟೋ, ವಿಡಿಯೋಗಳು (AI generated content) ಥೇಟ್ ನೈಜ ವ್ಯಕ್ತಿ ಮತ್ತು ಸ್ಥಳದ್ದೇ ಎನಿಸುವಂತಿರುತ್ತವೆ. ಯಾವುದು ಅಸಲಿ, ಯಾವುದು ಕೃತಕ ಎಂದು ಮೇಲ್ನೋಟಕ್ಕೆ ಕಂಡು ಹಿಡಿಯುವುದು ಕಷ್ಟ. ದುರುಳರು ಈ ಎಐ ಅನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ದಟ್ಟವಾಗಿರುತ್ತದೆ. ಇದನ್ನು ನಿಯಂತ್ರಿಸಲು ಸರ್ಕಾರವು ಹೊಸ ಮಾಹಿತಿ ತಂತ್ರಜ್ಞಾನ ನಿಯಮಗಳನ್ನು ರೂಪಿಸಿದೆ. ಡೀಪ್ಫೇಕ್ ವಿಡಿಯೋ, ಸಿಂಥೆಟಿಕ್ ಆಡಿಯೋ, ತಿರುಚಿದ ದೃಶ್ಯಗಳು ಇತ್ಯಾದಿ ಎಐ ಸೃಷ್ಟಿದ ಕಂಟೆಂಟ್ ಅನ್ನು ಐಟಿ ನಿಯಮಗಳಡಿ ತರಲಾಗಿದೆ. ಫೆಬ್ರುವರಿ 20ರಿಂದ ಹೊಸ ನಿಯಮಗಳು ಜಾರಿಗೆ ಬರುತ್ತವೆ.
ಎಐ ಕಂಟೆಂಟ್ ಎಂದು ನೋಡಿದ ಕೂಡಲೇ ಗೊತ್ತಾಗಬೇಕು…
ಫೇಸ್ಬುಕ್ ಇತ್ಯಾದಿ ಪ್ಲಾಟ್ಫಾರ್ಮ್ಗಳು ತಮ್ಮಲ್ಲಿ ಅಪ್ಲೋಡ್ ಆಗುವ ಕಂಟೆಂಟ್ಗಳು ಸಿಂಥೆಟಿಕ್ ಆಗಿದ್ದರೆ ಅದು ಗೊತ್ತಾಗುವ ರೀತಿಯಲ್ಲಿ ಲೇಬಲ್ ಆಗಿರಬೇಕು. ಮೆಟಾಡಾಟಾ ಮತ್ತು ಯೂನಿಕ್ ಐಡೆಂಟಿಫೈರ್ಗಳನ್ನು ಎಂಬೆಡ್ ಮಾಡಬೇಕು. ಒಟ್ಟಿನಲ್ಲಿ, ಸೋಷಿಯಲ್ ಮೀಡಿಯಾ ಮತ್ತು ವೆಬ್ಸೈಟ್ಗಳಲ್ಲಿ ಸಿಂಥೆಟಿಕ್ ಕಂಟೆಂಟ್ ಅಪ್ಲೋಡ್ ಆಗಿದ್ದರೆ, ಅದು ನೋಡುಗರಿಗೆ ಸ್ಪಷ್ಟವಾಗಿ ಗೊತ್ತಾಗುವಂತಿರಬೇಕು ಎಂಬುದು ಆಶಯ.
ಸಿಂಥೆಟಿಕ್ ಅಥವಾ ಎಐ ಜನರೇಟೆಡ್ ಕಂಟೆಂಟ್ ಯಾವುವು?
ನೈಜವೆನಿಸುವ ರೀತಿಯಲ್ಲಿ ಕಂಪ್ಯೂಟರ್ ಬಳಸಿ ಯಾವುದೇ ಧ್ವನಿ ಅಥವಾ ದೃಶ್ಯವನ್ನು ಸೃಷ್ಟಿಸಿದ್ದರೆ ಅಥವಾ ಬದಲಾಯಿಸಿದ್ದರೆ ಅಂಥದ್ದನ್ನು ಸಿಂಥೆಟಿಕ್ ಆಗಿ ಸೃಷ್ಟಿಸಿದ ಮಾಹಿತಿ ಎಂದು ವ್ಯಾಖ್ಯಾನಿಸಲಾಗಿದೆ.
ಗಮನಿಸಬೇಕಾದ ಸಂಗತಿ ಎಂದರೆ, ಫೋಟೋ ಅಥವಾ ವಿಡಿಯೋದಲ್ಲಿ ಮಾಡಲಾಗುವ ಎಲ್ಲಾ ಬದಲಾವಣೆಗಳೂ ಇದಕ್ಕೆ ಒಳಪಡುವುದಿಲ್ಲ. ಉದಾಹರಣೆಗೆ, ಫೋಟೋ ಅಥವಾ ವಿಡಿಯೋದಲ್ಲಿ ಕಲರ್ ಕರೆಕ್ಷನ್, ಬ್ರೈಟ್ನೆಸ್ ಹೊಂದಾಣಿಕೆ, ನಾಯ್ಸ್ ಕರೆಕ್ಷನ್ ಇತ್ಯಾದಿ ಮಾಡಿದರೆ ಸಮಸ್ಯೆ ಇರುವುದಿಲ್ಲ.
ಬಳಕೆದಾರರಿಗೆ ಜವಾಬ್ದಾರಿ…
ಸೋಷಿಯಲ್ ಮೀಡಿಯಾ ಬಳಕೆದಾರರು ತಾವು ಅಪ್ಲೋಡ್ ಮಾಡುವ ಕಂಟೆಂಟ್ ಎಐ ಸೃಷ್ಟಿತವಾಗಿದ್ದರೆ ಅದನ್ನು ನಮೂದಿಸಬೇಕು. ಇವರು ಕಂಟೆಂಟ್ ಅನ್ನು ಅಪ್ಲೋಡ್ ಮಾಡುವ ಮುನ್ನ ಅದು ಎಐ ಜನರೇಟೆಡ್ ಹೌದಾ ಅಲ್ಲವಾ ಎಂಬುದನ್ನು ಪ್ಲಾಟ್ಫಾರ್ಮ್ಗಳು ಕೇಳಬೇಕು. ಫೇಸ್ಬುಕ್ನಲ್ಲಿ ಯಾರಾದರೂ ಫೋಟೋ ಅಪ್ಲೋಡ್ ಮಾಡುವಾಗ ಇದನ್ನು ಘೋಷಿಸಬೇಕು.
ಇಷ್ಟು ಮಾತ್ರವಲ್ಲ, ಯಾರಾದರೂ ಉದ್ದೇಶಪೂರ್ವಕವಾಗಿಯೋ ಅಥವಾ ಆಕಸ್ಮಿಕವಾಗಿಯೋ ಎಐ ಸೃಷ್ಟಿತ ಕಂಟೆಂಟ್ ಅನ್ನು ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ಹಾಕುವ ಸಾಧ್ಯತೆ ಇರುವುದರಿಂದ, ಆಟೊಮೇಟ್ ಟೂಲ್ಗಳ ಮೂಲಕ ಅವುಗಳ ಕ್ರಾಸ್ ವೆರಿಫಿಕೇಶನ್ ಮಾಡಬೇಕು ಎನ್ನುತ್ತದೆ ನಿಯಮ.
ಪ್ಲಾಟ್ಫಾರ್ಮ್ಗಳಿಗೆ ಕಡಿಮೆ ಸಮಯಾವಕಾಶ…
ಸೋಷಿಯಲ್ ಮೀಡಿಯಾ ಪ್ಲಾಟ್ಫಾರ್ಮ್ಗಳಲ್ಲಿ ನಿರ್ದಿಷ್ಟ ಕಂಟೆಂಟ್ ಅನ್ನು ತೆಗೆದುಹಾಕಲು ಕಾನೂನಿನ ಆದೇಶ ಬಂದರೆ ಅದನ್ನು ಪಾಲಿಸಲು 36 ಗಂಟೆ ಇದ್ದ ಕಾಲಾವಕಾಶದ ಅವಧಿಯನ್ನು 3 ಗಂಟೆಗೆ ಇಳಿಸಲಾಗಿದೆ. 15 ದಿನಗಳಿದ್ದ ಕಾಲಾವಕಾಶವನ್ನು ಏಳು ದಿನಕ್ಕೆ ಇಳಿಸಲಾಗಿದೆ. 24 ಗಂಟೆ ಇದ್ದ ಡೆಡ್ಲೈನ್ ಅನ್ನು 12 ಗಂಟೆಗೆ ಇಳಿಸಲಾಗಿದೆ.
ಮಕ್ಕಳ ಲೈಂಗಿಕ ದುರ್ಬಳಕೆಯ ಸರಕುಗಳು, ಅಶ್ಲೀಲ ಕಂಟೆಂಟ್, ನಕಲಿ ಎಲೆಕ್ಟ್ರಾನಿಕ್ ರೆಕಾರ್ಡ್ಗಳು, ನೈಜ ವ್ಯಕ್ತಿಯನ್ನು ಹೋಲುವ ಡೀಪ್ಫೇಕ್ಗಳು ಮತ್ತು ನಕಲಿ ಧ್ವನಿಗಳನ್ನು ಸೃಷ್ಟಿಸಿದರೆ ಅದು ಭಾರತೀಯ ನ್ಯಾಯ ಸಂಹಿತೆ, ಪೋಕ್ಸೋ ಕಾಯ್ದೆ ಅಡಿಯಲ್ಲಿನ ಅಪರಾಧವಾಗುತ್ತದೆ ಎಂದು ಹೊಸ ಐಟಿ ನಿಯಮಗಳಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.
ಹಾವೇರಿ, ಫೆಬ್ರವರಿ 11: ರಾಣೆಬೆನ್ನೂರಿನಲ್ಲಿ ಮದುವೆ ವಂಚನೆಯ ಪ್ರಕರಣವೊಂದು ವರದಿಯಾಗಿದೆ. ತುಮ್ಕಿನಕಟ್ಟಿ ಗ್ರಾಮದ ರವಿಚಂದ್ರ ಎಂಬುವವರಿಗೆ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಮೂಲದ ರೇಖಾ ಎಂಬ ಮಹಿಳೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ರೇಖಾ ಅವರಿಗೆ ಈಗಾಗಲೇ ಇಬ್ಬರು ಮಕ್ಕಳಿದ್ದರೂ ರವಿಚಂದ್ರ ಅವರನ್ನು ಮದುವೆಯಾಗಿ 2.5 ಲಕ್ಷ ರೂಪಾಯಿ ವಧು ದಕ್ಷಿಣೆ ಪಡೆದಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ರೇಖಾ ಅವರ ಮಕ್ಕಳು ಕರೆ ಮಾಡಿದಾಗ ಈ ಕೃತ್ಯ ಬಯಲಾಗಿದೆ. ನ್ಯಾಯಕ್ಕಾಗಿ ರವಿಚಂದ್ರ ಅವರು ಹಲಗೇರಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರೋ ರೇಖಾ, ತಮಗೆ ಹಣದ ವಿಷಯ ತಿಳಿದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 2.5 ರಿಂದ 3 ಲಕ್ಷ ರೂಪಾಯಿ ಸ್ವೀಕರಿಸಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿರುವ ಅವರು, ಹಣವನ್ನು ಯಾರು ತೆಗೆದುಕೊಂಡಿದ್ದಾರೆ ಎಂದು ಬ್ರೋಕರ್ಗಳನ್ನು ಕೇಳುವಂತೆ ಹೇಳಿದ್ದಾರೆ. ಅಲ್ಲದೆ ಬ್ರೋಕರ್ಗೆ ತಾನು ಹಿಂದೆಯೇ ಮದುವೆಯಾಗಿದ್ದೇನೆ ಎಂದು ತಿಳಿಸಿದ್ದಾಗಿ ಸ್ಪಷ್ಟಪಡಿಸಿದ್ದಾರೆ.