Category Archives: Blog

Your blog category

ಅಲೆನ್ ಆರ್ಭಟಕ್ಕೆ ಅಭಿಷೇಕ್ ವಿಶ್ವ ದಾಖಲೆ ಉಡೀಸ್ – Kannada News | Finn Allen Breaks Abhishek Sharma’s World Record

ಇದೀಗ ಈ ದಾಖಲೆಯನ್ನು ಫಿನ್ ಅಲೆನ್ ಮುರಿದಿದ್ದಾರೆ. ಕೇವಲ 2854 ಎಸೆತಗಳಲ್ಲಿ 5 ಸಾವಿರ ಪೂರೈಸುವ ಮೂಲಕ ಅಲೆನ್ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಅತೀ ವೇಗವಾಗಿ 5000 ರನ್ ಕಲೆಹಾಕಿದ ಬ್ಯಾಟರ್ ಎನಿಸಿಕೊಂಡಿದ್ದಾರೆ. ಇದೀಗ ಐದು ಸಾವಿರ ರನ್​ಗಳ ಸರದಾರರ ಪಟ್ಟಿಯಲ್ಲಿ ಅಲೆನ್ ಹಾಗೂ ಅಭಿಷೇಕ್ ಮೊದಲೆರಡು ಸ್ಥಾನಗಳಲ್ಲಿದ್ದು, ಯಾರು ವೇಗವಾಗಿ 6 ಸಾವಿರ ರನ್​ಗಳಿಸಲಿದ್ದಾರೆ ಎಂಬುದೇ ಈಗ ಕುತೂಹಲ.

Source link

ಇಬ್ಬರೂ ಕುಡಿದ ಮತ್ತಿನಲ್ಲಿದ್ರು, ಸ್ನೇಹಿತ ಮ್ಯಾನ್​ಹೋಲ್​ಗೆ ಬಿದ್ರೂ ಗೊತ್ತಾಗಲಿಲ್ಲ – Kannada News | Man Dies After Falling Into Open Drain Near Rohini Temple in Delhi

ನವದೆಹಲಿ, ಫೆಬ್ರವರಿ 11: ವ್ಯಕ್ತಿಯೊಬ್ಬರು ತೆರೆದ ಮ್ಯಾನ್​ಹೋಲ್​ಗೆ ಬಿದ್ದು ಸಾವನ್ನಪ್ಪಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಸೋಮವಾರ ರಾತ್ರಿ ರೋಹಿಣಿ ಸೆಕ್ಟರ್ 32 ರ ಮಹಾಶಕ್ತಿ ಕಾಳಿ ದೇವಸ್ಥಾನದ ಬಳಿಯಲ್ಲಿ ಕಾರ್ಮಿಕ ಬಿರ್ಜು ಕುಮಾರ್ ಮತ್ತು ಅವರ ಸ್ನೇಹಿತ ಮನೆಗೆ ಹೋಗುತ್ತಿದ್ದಾಗ ಕುಮಾರ್ಕ್ತಿ ಮ್ಯಾನ್‌ಹೋಲ್‌ಗೆ ಬಿದ್ದಿದ್ದರು. ಘಟನೆ ನಡೆದ ಸಮಯದಲ್ಲಿ ಕುಮಾರ್ ಮತ್ತು ಅವರ ಸ್ನೇಹಿತ ಇಬ್ಬರೂ ಮದ್ಯದ ಅಮಲಿನಲ್ಲಿದ್ದರು, ಸ್ನೇಹಿತನಿಗೆ ಕುಮಾರ್ ಬಿದ್ದಿರುವ ಪರಿವೇ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ನೇಹಿತ ಮರುದಿನ ಕುಮಾರ್‌ಗೆ ಕರೆ ಮಾಡಲು ಪ್ರಯತ್ನಿಸಿದ್ದರು ಆದರೆ ಯಾವುದೇ ಪ್ರತಿಕ್ರಿಯೆ ಬರಲಿಲ್ಲ, ಮರುದಿನವೂ ಕುಮಾರ್‌ನ ಯಾವುದೇ ಸುಳಿವು ಸಿಗದಿದ್ದಾಗ, ದೆಹಲಿ ಪೊಲೀಸರು ಮತ್ತು ಅಗ್ನಿಶಾಮಕ ಇಲಾಖೆಯು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಮ್ಯಾನ್‌ಹೋಲ್ ಪಕ್ಕದಲ್ಲಿ ಅವನ ಚಪ್ಪಲಿಗಳು ಕಂಡುಬಂದವು. ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಕುಮಾರ್ ಅವರ ಮೃತದೇಹ ಒಳಚರಂಡಿಯಿಂದ ಹೊರ ತೆಗೆಯಲಾಯಿತು.

ಫೆಬ್ರವರಿ 5 ರಂದು ದೆಹಲಿಯ ಜನಕಪುರಿಯಲ್ಲಿ 25 ವರ್ಷದ ಕಮಲ್ ಧಯಾನಿ ಬೈಕ್​ನಲ್ಲಿ ಬರುವಾಗ ದೆಹಲಿ ಜಲ ಮಂಡಳಿಯು ಅಗೆದ ಸುಮಾರು 15 ಅಡಿ ಆಳದ ಗುಂಡಿಗೆ ಬಿದ್ದು ಸಾವನ್ನಪ್ಪಿದ್ದರು, ಅದಾದ ಐದು ದಿನಕ್ಕೆ ಈ ಘಟನೆ ನಡೆದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Bengaluru Air Quality: ಇಂದೂ ರಾಜ್ಯದಲ್ಲಿ ವಾಯು ಗುಣಮಟ್ಟ ಇನ್ನಷ್ಟು ಕುಸಿತ – Kannada News | Bangalore Air Pollution Crisis: Bengaluru, Manglore, Ballari and Shivamogga Air quality has gotten worse

ಇಂದೂ ರಾಜ್ಯದಲ್ಲಿ ವಾಯು ಗುಣಮಟ್ಟ ಇನ್ನಷ್ಟು ಕುಸಿತ

ಬೆಂಗಳೂರು, ಫೆಬ್ರವರಿ 11: ಕೆಲ ದಿನಗಳಿಂದ ಏರಿಕೆಯಾಗುತ್ತಿದ್ದ ಬೆಂಗಳೂರಿನ AQI (Bengaluru Air Quality) ಇಂದು ಹಠಾತ್ತನೆ ಕಳಪೆ ಮಟ್ಟ ತಲುಪಿದೆ. ನಿನ್ನೆ ತಕ್ಕ ಮಟ್ಟಿಗೆ ಸುಧಾರಿಸಿತೆಂದು ಎಂದುಕೊಂಡ ಬೆಂಗಳೂರಿನ ವಾಯು ಗುಣಮಟ್ಟವೀಗ ಮತ್ತೊಮ್ಮೆ ಕುಸಿತ ಕಂಡಿದೆ. ಅದರೊಂದಿಗೆ ಮಂಗಳೂರು, ಮೈಸೂರು ಮತ್ತು ಬೆಳಗಾವಿಯಲ್ಲೂ ಸಹ ಗಾಳಿಯ ಗುಣಮಟ್ಟ 170ಕ್ಕಿಂತ ಜಾಸ್ತಿಯಾಗಿದೆ. ದಿನದಿಂದ ದಿನಕ್ಕೆ ಈ ನಗರಗಳ AQI ಕುಸಿಯುತ್ತಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 178ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಶಿವಮೊಗ್ಗದ ಏರ್ ಕ್ವಾಲಿಟಿ 160 ಆಗಿದೆ. ಜೊತೆಗೆ ಬಳ್ಳಾರಿಯ ವಾಯು ಗುಣಮಟ್ಟವೂ ಸಹ 168 ಆಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –178
  • ಮಂಗಳೂರು-186
  • ಮೈಸೂರು –169
  • ಬೆಳಗಾವಿ – 160
  • ಕಲಬುರ್ಗಿ-126
  • ಶಿವಮೊಗ್ಗ – 160
  • ಬಳ್ಳಾರಿ – 168
  • ಹುಬ್ಬಳ್ಳಿ- 152
  • ಉಡುಪಿ –184
  • ವಿಜಯಪುರ –141

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಅಮೃತಧಾರೆ’:ಕಳೆದುಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಸ್ತೀನಿ; ಗೌತಮ್ ಚಾಲೆಂಜ್ – Kannada News | Amrutadhare: Gautham’s Epic Comeback New Business Plan and Jayadev’s Downfall Begins

‘ಅಮೃತಧಾರೆ’ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್ ಬರೋ ಸಮಯ ಬಂದಿದೆ. ಗೌತಮ್ ಅವರು ಕ್ಯಾಬ್ ಓಡಿಸಿಕೊಂಡು ಹಾಯಾಗಿದ್ದ. ಮಗ ಕ್ಯಾಬ್ ಓಡಿಸೋದನ್ನು ನೋಡಿ ಅವನ ತಾಯಿ ಬೇಸರ ಮಾಡಿಕೊಂಡಿದ್ದಾರೆ. ಈ ವಿಷಯವನ್ನು ಭೂಮಿಕಾ ಬಳಿ ಹೇಳುವಾಗ ಗೌತಮ್ ಇದನ್ನು ಕದ್ದು ಕೇಳಿಸಿಕೊಂಡಿದ್ದಾನೆ. ಅಷ್ಟೇ ಅಲ್ಲ, ಉದ್ಯಮ ಶುರು ಮಾಡೋದಾಗಿ ಹೇಳಿದ್ದಾನೆ. ಇದರಿಂದ ಹೊಸ ಅಧ್ಯಾಯ ತೆರೆದುಕೊಳ್ಳುವ ಸಾಧ್ಯತೆ ಇದೆ.

ಗೌತಮ್ ದೀವಾನ್ ‘ದೀವಾನ್ ಗ್ರೂಪ್ ಆಫ್ ಕಂಪನೀಸ್’ ಸಂಸ್ಥೆಯ ಮಾಲೀಕನಾಗಿದ್ದ. ಆದರೆ, ಆತನ ಮಲತಾಯಿ ಅವನಿಗೆ ಮೋಸ ಮಾಡಿದಳು. ಆತನ ತಮ್ಮ ಜಯದೇವ್ ಕೂಡ ಇದೇ ಕೆಲಸ ಮಾಡಿದ. ಮೋಸದಿಂದ ಎಲ್ಲ ಆಸ್ತಿಯನ್ನ ಬರೆಸಿಕೊಂಡನು. ಇದರಿಂದ ಗೌತಮ್ ಮನೆ ಬಿಟ್ಟು ಹೋಗುವಂತೆ ಆಯಿತು.

ಮೊದಲು ಭೂಮಿಕಾ ಗೌತಮ್ ಬಿಟ್ಟು ಹೋದಳು. ಇದರಿಂದ ಗೌತಮ್ ದೀವಾನ್ ಒಂಟಿ ಆದನು. ಮನೆಯವರ ಕುತಂತ್ರ ಸಹಿಸಲಾರದೆ ಆಸ್ತಿ ಬರೆದುಕೊಟ್ಟು ಮನೆ ಬಿಟ್ಟು ಹೋದನು. ಈಗ ಗೌತಮ್ ಹಾಗೂ ಭೂಮಿಕಾ ಒಂದಾಗಿದ್ದಾರೆ. ಈ ಸಂದರ್ಭದಲ್ಲಿ ಆತ ಕ್ಯಾಬ್ ಓಡಿಸಿಕೊಂಡು ಇರೋದನ್ನು ಆತನ ತಾಯಿ ಇಷ್ಟಪಟ್ಟಿಲ್ಲ. ಹೀಗಾಗಿ, ಹೊಸ ಉದ್ಯಮ ಮಾಡೋದಾಗಿ ಅವನು ತಾಯಿ ಭರವಸೆ ನೀಡಿದ್ದಾನೆ.

‘ನಾನು ಕಳೆದುಕೊಂಡಿದ್ದಕ್ಕಿಂತ 10 ಪಟ್ಟು ಹೆಚ್ಚು ಗಳಿಸಿ, ನಿನ್ನ ಕಾಲ ಕೆಳಗೆ ಹಾಕ್ತೀನಿ’ ಎಂದು ಅಮ್ಮನಿಗೆ ಪ್ರಾಮಿಸ್ ಮಾಡಿದ್ದಾನೆ. ಗೌತಮ್ ದೀವಾನ್ ಮಾತನ್ನು ಕೇಳಿ ತಾಯಿ ಖುಷಿ ಆಗಿದ್ದಾಳೆ. ಗೌತಮ್ ಇದನ್ನು ಸಾಧಿಸಿ ತೋರಿಸುತ್ತಾನೆ ಎಂಬ ನಂಬಿಕೆ ಎಲ್ಲರಿಗೂ ಬಂದಿದೆ.

ಇದನ್ನೂ ಓದಿ: ‘ಅಮೃತಧಾರೆ’; ಮಿಂಚು ಕೂಡ ಗೌತಮ್ ಮಗಳು ಅನ್ನೋದು ಗೊತ್ತಾಗಿ ಹೋಯ್ತು

ಅತ್ತ ಜಯದೇವ್ಗೆ ಸಂಕಷ್ಟ ಎದುರಾಗಿದೆ. ಅವರು ಮಾಡಿದ ಸಾಲದಿಂದ ಸಂಕಷ್ಟ ಬಂದಿದೆ. ಬ್ಯಾಂಕ್ನವರು ಮನೆಗೆ ಬಂದು ಪೀಡಿಸುತ್ತಿದ್ದಾರೆ. ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಎದುರಿಸೋ ಪರಿಸ್ಥಿತಿ ಬರಬಹುದು ಎಂದು ಹೇಳಲಾಗುತ್ತಾ ಇದೆ. ಗೌತಮ್ ಹಾಗೂ ಭೂಮಿಕಾ ಒಂದಾದ ಖುಷಿಯಲ್ಲಿ ಎಲ್ಲರೂ ಇದ್ದರು. ಇದರ ಜೊತೆ ಈಗ ಬಂಪರ್ ಸಿಹಿಸುದ್ದಿ ಸಿಕ್ಕಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿ20 ವಿಶ್ವಕಪ್‌ನಲ್ಲಿ ನ್ಯೂಝಿಲೆಂಡ್ ಆರಂಭಿಕರ ವಿಶ್ವ ದಾಖಲೆಯ ಚೇಸಿಂಗ್ – Kannada News | New Zealand Openers Creates New World Record in T20 World Cup 2026

T20 World Cup 2026: ಟಿ20 ವಿಶ್ವಕಪ್‌ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ದಾಖಲೆ ನಿರ್ಮಿಸಿರುವುದು ನ್ಯೂಝಿಲೆಂಡ್ ತಂಡದ ಆರಂಭಿಕರಾದ ಟಿಮ್ ಸೈಫರ್ಟ್ ಹಾಗೂ ಫಿನ್ ಅಲೆನ್. ಅದು ಸಹ ಜೋಸ್ ಬಟ್ಲರ್ ಹಾಗೂ ಅಲೆಕ್ಸ್ ಹೇಲ್ಸ್ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ.

Source link

ಕರಣ್ ಜೋಹರ್ ಬಗ್ಗೆ ಅತೀ ಕೆಟ್ಟದಾಗಿ ವಿಡಿಯೋ ಮಾಡಿದ ಯೂಟ್ಯೂಬರ್ ಕ್ಯಾರಿಮಿನಾಟಿಗೆ ಸಂಕಷ್ಟ – Kannada News | CarryMinati vs Karan Johar: Court Orders Video Takedown for Impersonation

ಖ್ಯಾತ ಯೂಟ್ಯೂಬರ್ ಕ್ಯಾರಿಮಿನಾಟಿ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಅವರು ವಿವಿಧ ರೀತಿಯ ವಿಡಿಯೋಗಳನ್ನು ಮಾಡಿ ಸಾಕಷ್ಟು ಹಿಂಬಾಲಕರನ್ನು ಸಂಪಾದಿಸಿದ್ದಾರೆ. ಈಗ ಅವರು ಸಂಕಷ್ಟದಲ್ಲಿದ್ದಾರೆ. ನಿರ್ಮಾಪಕ ಹಾಗೂ ನಿರ್ದೇಶಕ ಕರಣ್ ಜೋಹರ್ ಅವರನ್ನು ಅನುಕರಿಸಿದ್ದಕ್ಕೆ ತೊಂದರೆ ಎದುರಿಸುತ್ತಿದ್ದಾರೆ. ಈ ಸಂಬಂಧ ಕೋರ್ಟ್​​ನಿಂದ ಆದೇಶ ಬಂದಿದ್ದು, ವಿಡಿಯೋನ ತೆಗೆಯುವಂತೆ ಸೂಚನೆ ನೀಡಿದೆ.

ಇತ್ತೀಚೆಗೆ ವಿಡಿಯೋ ಒಂದನ್ನು ಮಾಡಿ ಕ್ಯಾರಿ ಮಿನಾಟಿ ಪೋಸ್ಟ್ ಮಾಡಿದ್ದರು. ಕರಣ್ ಜೋಹರ್ ನಡೆಸಿಕೊಡೋ ‘ಕಾಫಿ ವಿತ್ ಕರಣ್’ ಹೋಲುವ ರೀತಿಯ ಶೋನ ಕ್ಯಾರಿಮಿನಾಟಿ ಮಾಡಿದ್ದರು. ಇದರಲ್ಲಿ ಕರಣ್ ಜೋಹರ್ ರೀತಿ ರೆಡಿ ಆಗಿ ಬಂದಿದ್ದ ಕ್ಯಾರಿ, ಅವರನ್ನು ಅನುಕರಿಸಿದ್ದರು. ಇದರಲ್ಲಿ ಸಾಕಷ್ಟು ಕೆಟ್ಟ ಶಬ್ದಗಳು, ಕರಣ್​​ನ ಕೆಟ್ಟ ರೀತಿ ತೋರಿಸಲಾಗಿತ್ತು. ಇದನ್ನು ಮುಂಬೈ ಸಿವಿಲ್ ಕೋರ್ಟ್​​ನಲ್ಲಿ ಕರಣ್ ಪ್ರಶ್ನೆ ಮಾಡಿದ್ದರು. ಕರಣ್ ಜೋಹರ್ ಪರವಾಗಿ ಆದೇಶ ಬಂದಿದೆ.

ಕರಣ್ ಜೋಹರ್ ಅವರನ್ನು ಯಾರೂ ಅನುಕರಿಸುವಂತಿಲ್ಲ. ಅವರ ಧ್ವನಿ ಹಾಗೂ ಫೋಟೋಗಳನ್ನು ಅನುಮತಿ ಇಲ್ಲದೆ ಯಾರೂ ಬಳಕೆ ಮಾಡುವಂತೆ ಇಲ್ಲ. ಈ ಸಂಬಂಧ ಅವರು ಕೋರ್ಟ್​ನಿಂದ ಆದೇಶ ತಂದಿದ್ದಾರೆ. ಆದಾಗ್ಯೂ ಈ ರೀತಿಯ ಕೆಲಸ ಆಗಿದೆ. ‘ದಶಕಗಳಿಂದ ಶ್ರಮವಹಿಸಿ ಸಂಪಾದಿಸಿದ ಖ್ಯಾತಿಗೆ ಹಾನಿ ಮಾಡಲು ಈ ವಿಡಿಯೋ ಮಾಡಲಾಗಿದೆ ಎಂದು ಜೋಹರ್ ವಾದಿಸಿದರು. ಬಳಸಿದ ಭಾಷೆ ವೈಯಕ್ತಿಕ ಮತ್ತು ವೃತ್ತಿಪರದ ಮಿತಿಯನ್ನು ಮೀರಿದೆ ಎಂದು ಕರಣ್ ಪರ ವಕೀಲರು ಹೇಳಿದರು. ಈ ವಿಡಿಯೋನ ನಿಲ್ಲಿಸಲು ತಡೆಯಾಜ್ಞೆ ನೀಡಬೇಕು ಎಂದು ಕೋರಿದರು.

ಇದನ್ನೂ ಓದಿ: ಸಿನಿಮಾ ನಿರ್ಮಾಣಕ್ಕೆ 25 ಕೋಟಿ, ಪ್ರಚಾರಕ್ಕೆ ಬೇಕು 100 ಕೋಟಿ: ಕೊಡ್ತಾರಾ ಕರಣ್ ಜೋಹರ್?

ವಿಚಾರಣೆಯ ಸಮಯದಲ್ಲಿ, ಕ್ಯಾರಿಮಿನಾಟಿ ಪರ ವಕೀಲರು ಈ ಬಗ್ಗೆ ಮಾತನಾಡಿದ್ದಾರೆ. ಕ್ಯಾರಿಮಿನಾಟಿ ಅವರು ಈಗಾಗಲೇ ವಿವಾದಾತ್ಮಕ ವಿಡಿಯೋ ತೆಗೆಯಲು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕ್ರಮ ಕೈಗೊಳ್ಳಲು ಯಾವುದೇ ಕಾರಣವಿಲ್ಲ ಎಂದು ಅಭಿಪ್ರಾಯಪಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮದುವೆ ನೆಪದಲ್ಲಿ 9 ಯುವತಿಯರ ಬಾಳಲ್ಲಿ ಚೆಲ್ಲಾಟವಾಡಿದ್ದ ‘ಮ್ಯಾಟ್ರಿಮೋನಿ ಮನ್ಮಥ’, ನಕಲಿ ಮಾವ ಪೊಲೀಸ್ ಬಲೆಗೆ – Kannada News | Matrimony Man Arrested: Man Who Cheated 9 Women in Name of Marriage Nabbed by Mangaluru Police

ಸುಶಾಂತ್ ಪೂಜಾರಿ ಹಾಗೂ ಭಾಸ್ಕರ್‌Image Credit source: tv9

ಮಂಗಳೂರು, ಫೆಬ್ರವರಿ 11: ಆನ್‌ಲೈನ್ ಮ್ಯಾಟ್ರಿಮೋನಿ ಮೂಲಕ ಮದುವೆಯ ಹೆಸರಲ್ಲಿ ಯುವತಿಯರನ್ನು ವಂಚಿಸುತ್ತಿದ್ದ ಖತರ್ನಾಕ್ ಆರೋಪಿಯನ್ನು ಮಂಗಳೂರು ಪೊಲೀಸರು (Mangalore Police) ಬಂಧಿಸಿದ್ದಾರೆ. ಮ್ಯಾಟ್ರಿಮೋನಿಯಲ್ಲಿ (Matrimony) ವರ ಹುಡುಕುತ್ತಿದ್ದ ಯುವತಿಯರನ್ನು ಗುರಿಯಾಗಿಸಿಕೊಂಡು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ. ಬಂಧಿತನನ್ನು ಸುಶಾಂತ್ ಪೂಜಾರಿ ಎಂದು ಗುರುತಿಸಲಾಗಿದ್ದು, ಈತನ ವಂಚನೆಗೆ ಸಾಥ್ ನೀಡಿದ್ದ ಮುಲ್ಕಿ ನಿವಾಸಿ ಭಾಸ್ಕರ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಸುಶಾಂತ್ ತನ್ನ ಅಳಿಯ ಎಂದು ಹೇಳಿ ಸಂತ್ರಸ್ತೆಯ ಕುಟುಂಬದವರಿಗೆ ನಂಬಿಕೆ ಮೂಡಿಸಲು ಭಾಸ್ಕರ್ ಧಾರ್ಮಿಕ ವಿಧಿವಿಧಾನಗಳಲ್ಲೂ ಭಾಗವಹಿಸಿದ್ದಾನೆ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.

ಇಬ್ಬರ ಜೊತೆ ಮದುವೆ, 9 ಯುವತಿಯರಿಗೆ ವಂಚನೆ!

ಮದುವೆಯ ಹೆಸರಿನಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 9 ಯುವತಿಯರನ್ನು ಸುಶಾಂತ್ ವಂಚಿಸಿದ್ದಾನೆ. ಈ ಪೈಕಿ ಇಬ್ಬರು ಯುವತಿಯರೊಂದಿಗೆ ಮದುವೆಯಾಗಿ ನಂತರ ಕೈಕೊಟ್ಟಿರುವುದಾಗಿ ತಿಳಿದುಬಂದಿದೆ. ಮ್ಯಾಟ್ರಿಮೋನಿ ವೆಬ್‌ಸೈಟ್ ಮೂಲಕ ಪರಿಚಯ ಮಾಡಿಕೊಂಡು ನಂಬಿಕೆ ಗಳಿಸಿದ ಬಳಿಕ ಹಂತ ಹಂತವಾಗಿ ಹಣ ಪಡೆದು ಆರೋಪಿ ನಾಪತ್ತೆಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂಬೈನಲ್ಲಿ ಒಬ್ಬ ಯುವತಿಯನ್ನು ಮದುವೆಯಾಗಿದ್ದು, ಆಕೆಯಿಂದ ಸುಮಾರು 6.6 ಲಕ್ಷ ರೂಪಾಯಿ ಪಡೆದು ಬಳಿಕ ಪರಾರಿಯಾಗಿದ್ದ. ಉಡುಪಿ ಭಾಗದ ಇಬ್ಬರು ಯುವತಿಯರಿಗೆ ಮದುವೆಯಾಗುವುದಾಗಿ ನಂಬಿಸಿ ಹಣ ಪಡೆದು ವಂಚಿಸಿದ್ದಾನೆ. ಇದೇ ರೀತಿಯಾಗಿ ಬೆಂಗಳೂರಿನಲ್ಲಿ ಇಬ್ಬರು ಯುವತಿಯರು, ಕಾರ್ಕಳದ ಒಬ್ಬ ಯುವತಿ ಹಾಗೂ ಮಂಗಳೂರಿನ ಮತ್ತೊಬ್ಬ ಯುವತಿಯನ್ನೂ ಮೋಸಗೊಳಿಸಿದ್ದ ಪ್ರಕರಣಗಳು ಈಗ ಬೆಳಕಿಗೆ ಬಂದಿವೆ.

ಈ ಕುರಿತು ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಸಂತ್ರಸ್ತೆಯೊಬ್ಬಳು ದೂರು ನೀಡಿದ್ದಳು. ದೂರು ಆಧಾರಿಸಿ ತನಿಖೆ ಆರಂಭಿಸಿದ ಪೊಲೀಸರು ಆರೋಪಿಯ ಹಿನ್ನಲೆ ಕೆದಕಿದಾಗ ಆತನ ವಂಚನೆಗಳ ಸರಣಿ ಬಯಲಾಗಿತ್ತು. ನಕಲಿ ಮಾವ-ಅಳಿಯರಾಗಿ ನಟನೆ ಮಾಡಿ ಮದುವೆ ನಾಟಕವಾಡಿ ಯುವತಿಯರ ಜೀವನದೊಂದಿಗೆ ಆಟವಾಡಿದ್ದ ಆರೋಪಿಗಳನ್ನು ಇದೀಗ ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ: ಪಡ್ಡೆ ಹುಡುಗರ ಬಲೆಗೆ ಬೀಳಿಸಲು ಹೆಸರೇ ಬದಲಾಯಿಸಿದ್ದ ಸುಚಿತ್ರಾ! ಖತರ್ನಾಕ್ ಪ್ಲಾನ್ ರಹಸ್ಯ ಬಟಾಬಯಲು

ಆನ್‌ಲೈನ್ ಮ್ಯಾಟ್ರಿಮನಿ ಬಳಕೆ ಮಾಡುವವರು ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Daily Devotional: ದೇವಾಲಯದ ಹೊರಗೆ ಚಪ್ಪಲಿ ಯಾಕೆ ಬಿಟ್ಟು ಹೋಗಬೇಕು? – Kannada News | Daily Devotional: Why should you leave your slippers outside the temple?

ಬೆಂಗಳೂರು, ಫೆಬ್ರವರಿ​ 11: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿದೇವಾಲಯದ ಹೊರಗೆ ಚಪ್ಪಲಿ ಯಾಕೆ ಬಿಟ್ಟು ಹೋಗಬೇಕು? ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಪಾದರಕ್ಷೆಗಳು ನಮ್ಮ ದೈನಂದಿನ ಜೀವನದಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕೇವಲ ಕಾಲಿನ ರಕ್ಷಣೆಗೆ ಮಾತ್ರ ಸೀಮಿತವಾಗದೆ, ಅವು ನಮ್ಮ ಸಂಸ್ಕೃತಿ ಮತ್ತು ಆಧ್ಯಾತ್ಮಿಕ ನಂಬಿಕೆಗಳ ಭಾಗವಾಗಿವೆ. ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಚಪ್ಪಲಿಗಳನ್ನು ಹೊರಗೆ ಬಿಡುವುದು ಅಹಂಕಾರ ಮತ್ತು ದರ್ಪವನ್ನು ತ್ಯಾಗ ಮಾಡುವ ಸಂಕೇತವಾಗಿದೆ ಎಂದು ಹಿಂದೂ ಧರ್ಮದಲ್ಲಿ ನಂಬಲಾಗಿದೆ.

ಇದು ವಿನಮ್ರವಾಗಿ ದೈವದ ಮುಂದೆ ಶರಣಾಗುವ ಭಾವವನ್ನು ಪ್ರತಿಬಿಂಬಿಸುತ್ತದೆ. ಭರತನು ರಾಮನ ಪಾದುಕೆಗಳನ್ನು ಸಿಂಹಾಸನದ ಮೇಲೆ ಇಟ್ಟು ಆಡಳಿತ ನಡೆಸಿದ ಉದಾಹರಣೆಯು ಪಾದರಕ್ಷೆಗಳ ಮಹತ್ವವನ್ನು ಎತ್ತಿ ತೋರಿಸುತ್ತದೆ. ಗುರುಗಳ ಪಾದರಕ್ಷೆಗಳಿಗೆ ಪಾದುಕಾ ಪೂಜೆ ಸಲ್ಲಿಸುವುದು ಭಾರತೀಯ ಸಂಪ್ರದಾಯದಲ್ಲಿ ಶ್ರೇಷ್ಠವಾದುದು. ಪಾದರಕ್ಷೆಗಳ ದಾನವನ್ನು ಕೂಡ ಶುಭವೆಂದು ಪರಿಗಣಿಸಲಾಗುತ್ತದೆ. ಪಾದರಕ್ಷೆಗಳು ದೇಹದ ಶಕ್ತಿಯನ್ನು ಹೊಂದಿರುತ್ತವೆ ಮತ್ತು ಅವುಗಳನ್ನು ಸರಿಯಾಗಿ ಜೋಡಿಸುವುದು ಸಕಾರಾತ್ಮಕ ಶಕ್ತಿಯನ್ನು ಕಾಪಾಡುತ್ತದೆ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

ಲಕ್ಕುಂಡಿಯಲ್ಲಿ‌ ಮತ್ತೊಂದು ಅಚ್ಚರಿ: ಪುರಾತನ ದೇವಸ್ಥಾನದ ಆವರಣದಲ್ಲಿ ನಿಜ ನಾಗಸರ್ಪ ಪತ್ತೆ! – Kannada News | Real Cobra Found in Lakkundi Temple: Workers Stunned During Renovation at Historic Site in Gadag

ಗದಗ, ಫೆಬ್ರವರಿ 11: ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಪುರಾತನ ದೇವಸ್ಥಾನದ ಆವರಣದಲ್ಲಿ ನಿಜ ನಾಗಸರ್ಪ ಕಾಣಿಸಿಕೊಂಡು ಆತಂಕ ಮೂಡಿಸಿದೆ. ಗದಗ ತಾಲೂಕಿನ ಪ್ರಸಿದ್ಧ ಲಕ್ಕುಂಡಿ ಗ್ರಾಮದಲ್ಲಿರುವ ಈಶ್ವರ ಹಾಗೂ ಅರ್ಧನಾರೀಶ್ವರ ದೇವಸ್ಥಾನದ ಆವರಣದಲ್ಲಿ ನಿಜವಾದ ನಾಗಸರ್ಪ ಕಾಣಿಸಿಕೊಂಡು, ಸ್ಥಳೀಯರು ಹಾಗೂ ಕಾರ್ಮಿಕರಲ್ಲಿ ಕೆಲಕಾಲ ಭಯದ ವಾತಾವರಣ ನಿರ್ಮಾಣವಾಯಿತು. ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾದ ಐತಿಹಾಸಿಕ ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ಇದೀಗ ಲಕ್ಕುಂಡಿಯಲ್ಲಿ ನಡೆಯುತ್ತಿದೆ. ಚೌಕಿಮಠ ಕುಟುಂಬಕ್ಕೆ ಸೇರಿದ ಮನೆ ಸಂಕೀರ್ಣದೊಳಗಿನ ಹುದುಗಿದ ಈಶ್ವರ ದೇವಸ್ಥಾನವನ್ನು ‘ಮನೆಯೊಳಗೊಂದು ದೇವಸ್ಥಾನ’ ಎಂಬ ಶೀರ್ಷಿಕೆಯಡಿ ಟಿವಿ9 ವರದಿ ಪ್ರಸಾರ ಮಾಡಿತ್ತು. ನಂತರ ಅಭಿವೃದ್ಧಿ ಹಾಗೂ ಜೀರ್ಣೋದ್ಧಾರ ಕಾರ್ಯಗಳಿಗೆ ವೇಗ ದೊರೆತಿತ್ತು.

ಈ ಹಿನ್ನೆಲೆ ದೇವಸ್ಥಾನದ ಆವರಣ ಸ್ವಚ್ಛಗೊಳಿಸುವ ವೇಳೆ ಮಾರುದ್ದದ ನಾಗರ ಹಾವು ಪತ್ತೆಯಾಗಿದೆ. ಹಾವು ಕಾಣಿಸಿಕೊಂಡ ತಕ್ಷಣ ಕಾರ್ಮಿಕರು ದಂಗಾಗಿ ಕೆಲಕಾಲ ಕೆಲಸ ನಿಲ್ಲಿಸಿದರು. ಕೆಲವೇ ಕ್ಷಣಗಳಲ್ಲಿ ಹಾವು ಸರಿದು ಹೋಗಿದೆ. ನಂತರ ಭಯದೊಂದಿಗೇ ಕಾರ್ಮಿಕರು ಸ್ವಚ್ಛತಾ ಕಾರ್ಯ ಮುಂದುವರೆಸಿದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಫೆಬ್ರವರಿ 11ರ ದಿನಭವಿಷ್ಯ – Kannada News | Daily Numerology Prediction Feb 11: Birth Numbers 4, 5, 6 – What Awaits You?

ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 11ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಮನೆಗೆ ಟೀವಿ, ರೆಫ್ರಿಜರೇಟರ್ ಅಥವಾ ಡಿಶ್ ವಾಷರ್ ಇಂಥ ಉಪಕರಣ ಖರೀದಿ ಮಾಡುವ ಬಗ್ಗೆ ಆಲೋಚನೆ ಮಾಡುತ್ತೀರಿ. ಮತ್ತೆ ಕೆಲವರಿಗೆ ಇವು ಉಡುಗೊರೆಯಾಗಿ ದೊರೆಯುವ ಯೋಗ ಸಹ ಇದೆ. ಸಂಘ- ಸಂಸ್ಥೆಗಳ ಚುನಾವಣೆಗೆ ಸ್ಪರ್ಧೆ ಮಾಡುವ ಇರಾದೆ ಇರುವವರು ಅದಕ್ಕೆ ಕಾರ್ಯತಂತ್ರ ರೂಪಿಸುವುದಕ್ಕೆ ಸಂಬಂಧಪಟ್ಟ ವ್ಯಕ್ತಿಗಳನ್ನು ಭೇಟಿ ಆಗಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ಸಂಗೀತಗಾರರು, ಕಲಾವಿದರು, ನೃತ್ಯವನ್ನೇ ವೃತ್ತಿ ಆಗಿ ಮಾಡಿಕೊಂಡವರಿಗೆ ಹೊಸ ಹೊಸ ಅವಕಾಶ ಹುಡುಕಿ ಬರಲಿದೆ. ವಿದೇಶಗಳಿಂದಲೂ ನಿಮಗೆ ಆಹ್ವಾನ ಬರಬಹುದು. ಆಯುರ್ವೇದ ಮೂಲಿಕೆಗಳನ್ನು ಬೆಳೆಯುತ್ತಾ ಅದರ ಮಾರಾಟದ ಮೂಲಕ ಆದಾಯ ಬರುತ್ತಾ ಇರುವವರು ಶಾಖೆಯನ್ನು, ವ್ಯವಹಾರವನ್ನು ವಿಸ್ತರಣೆ ಮಾಡುವ ಅವಕಾಶಗಳ ಕಡೆಗೆ ನೋಡಲಿದ್ದೀರಿ. ನಿಮ್ಮಲ್ಲಿ ಕೆಲವರು ಸಂಬಂಧಿಗಳ ಮನೆಯ ವ್ಯಾಜ್ಯಗಳನ್ನು ಬಗೆಹರಿಸುವುದಕ್ಕೆ ಹೆಚ್ಚು ಸಮಯ ಮೀಸಲು ಇಡಬೇಕಾಗುತ್ತದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ದ್ವಿಚಕ್ರ ವಾಹನ ಬಳಕೆಯನ್ನು ಈ ದಿನ ಸಾಧ್ಯವಾದಷ್ಟೂ ಮಾಡದಿರುವುದು ಕ್ಷೇಮ. ಅನಿವಾರ್ಯ ಎಂದಾದಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಿ, ವೇಗದ ಚಾಲನೆ ಯಾವುದೇ ಕಾರಣಕ್ಕೂ ಬೇಡ. ನಿಮ್ಮಲ್ಲಿ ಕೆಲವರಿಗೆ ದೇವತಾ ಕಾರ್ಯಗಳಲ್ಲಿ ಭಾಗೀ ಆಗುವಂಥ ಯೋಗ ಇದೆ. ಸೈಟು- ಮನೆ ಖರೀದಿ ಮಾಡುವುದಕ್ಕಾಗಿ ಹಣಕಾಸಿನ ಹೊಂದಾಣಿಕೆಗೆ ಯತ್ನ ಮಾಡುತ್ತಿರುವವರಿಗೆ ಅದು ಸಾಧ್ಯವಾಗಲಿದೆ.

ಲೇಖನ- ಸ್ವಾತಿ ಎನ್.ಕೆ.

Source link