Category Archives: Blog

Your blog category

‘ವೀರ ಕಂಬಳ’ ಸಿನಿಮಾದಲ್ಲಿ ವೀರೇಂದ್ರ ಹೆಗ್ಗಡೆ ನಟಿಸಿದ್ದು ಯಾಕೆ? ಇಲ್ಲಿದೆ ಕಾರಣ – Kannada News | This is why Veerendra Heggade acted in Veera Kambala movie directed by Rajendra Singh Babu

ಖ್ಯಾತ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು (Rajendra Singh Babu) ಅವರು ನಿರ್ದೇಶನ ಮಾಡಿರುವ ‘ವೀರ ಕಂಬಳ’ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ರಿಲೀಸ್ ಆಗಲಿದೆ. ರಿಲೀಸ್ ದಿನಾಂಕ ಹತ್ತಿರ ಆಗಿರುವ ಈ ಹೊತ್ತಿನಲ್ಲಿ ಹೊಸ ಹೊಸ ಅಪ್​​ಡೇಟ್ಸ್ ಹಂಚಿಕೊಳ್ಳಲಾಗುತ್ತಿದೆ. ‘ವೀರ ಕಂಬಳ’ (Veera Kambala) ರೂಪುಗೊಂಡಿದ್ದರ ಹಿಂದೆ ದಶಕಗಳಷ್ಟು ಸುದೀರ್ಘವಾದ ಕಥನವಿದೆ. ಅಂದಾಜು ಏಳುನೂರು ವರ್ಷಗಳಷ್ಟು ಐತಿಹ್ಯವಿರುವ ಕಂಬಳದ ಬಗ್ಗೆ ಇಂಚಿಂಚು ಮಾಹಿತಿಯನ್ನು ಕಲೆಹಾಕುವ ಮೂಲಕ ರಾಜೇಂದ್ರ ಸಿಂಗ್ ಬಾಬು ಅವರು ಈ ಸಿನಿಮಾವನ್ನು ರೂಪಿಸಿದ್ದಾರೆ. ಈ ಸಿನಿಮಾದಲ್ಲಿನ ಒಂದು ಮಹತ್ವದ ಪಾತ್ರದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ (Veerendra Heggade) ನಟಿಸಿದ್ದಾರೆ.

ವೀರೇಂದ್ರ ಹೆಗ್ಗಡೆ ಅವರು ‘ವೀರ ಕಂಬಳ’ ಸಿನಿಮಾದಲ್ಲಿ ನಟಿಸುತ್ತಾರೆ ಎಂಬ ಸುದ್ದಿ ಈ ಮೊದಲೇ ಹೊರಬಂದಿತ್ತು. ಆದರೆ, ನಿರ್ದೇಶಕರಾಗಲಿ, ಚಿತ್ರತಂಡದವರಾಗಲಿ ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ಬಿಟ್ಟು ಕೊಡದೆ ಗೌಪ್ಯತೆ ಕಾಪಾಡಿಕೊಂಡಿದ್ದರು. ಈಗ ವೀರೇಂದ್ರ ಹೆಗ್ಗಡೆ ನಿರ್ವಹಿಸಿರೋ ಪಾತ್ರದ ಚಹರೆಗಳನ್ನು ನಿರ್ದೇಶಕರೇ ಪ್ರೇಕ್ಷಕರ ಮುಂದಿಟ್ಟಿದ್ದಾರೆ.

ಈ ಪಾತ್ರಕ್ಕೆ ವೀರೇಂದ್ರ ಹೆಗ್ಗಡೆ ಅವರನ್ನೇ ಆಯ್ಕೆ ಮಾಡಿಕೊಂಡಿದ್ದರ ಹಿಂದಿರುವ ಅಂಶಗಳನ್ನೂ ಕೂಡ ರಾಜೇಂದ್ರ ಸಿಂಗ್ ಬಾಬು ಅವರು ಹಂಚಿಕೊಂಡಿದ್ದಾರೆ. ಕಂಬಳದ ಇತಿಹಾಸ ಕೆದಗುತ್ತಾ ಹೋದಂತೆಲ್ಲ ಅದಕ್ಕೂ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರಿಗೂ ಇರುವ ನಂಟಿನ ವಿಚಾರ ರಾಜೇಂದ್ರ ಸಿಂಗ್ ಬಾಬು ಅವರಿಗೆ ಅಚ್ಚರಿ ಮೂಡಿಸಿತು. ಅದಕ್ಕಾಗಿ ಈ ನಿರ್ಧಾರ ತೆಗೆದುಕೊಂಡರು.

ಅದುವರೆಗೆ ತುಳುನಾಡ ಸೀಮೆಯ ಖಾಸಗಿ ಮನರಂಜನೆಯ ಕ್ರೀಡೆಯಾಗಿದ್ದ ಕಂಬಳವನ್ನು 70ರ ದಶಕದಲ್ಲಿ ದೊಡ್ಡ ಮಟ್ಟದಲ್ಲಿ ಆಯೋಜಿಸಿದ್ದವರು ವೀರೇಂದ್ರ ಹೆಗ್ಗಡೆ. ಆ ನಂತರ ಅದು ಬೇರೆ ಬೇರೆ ರೂಪಗಳಲ್ಲಿ ರೂಪಾಂತರಗೊಂಡು ಇಡೀ ಕರುನಾಡನ್ನೇ ಸೆಳೆದುಕೊಂಡಿತ್ತು. ಈ ಕಾರಣದಿಂದಲೇ ವೀರೇಂದ್ರ ಹೆಗ್ಗಡೆ ‘ವೀರ ಕಂಬಳ’ ಸಿನಿಮಾದಲ್ಲಿನ ಮಹತ್ವದ ಪಾತ್ರ ಮಾಡಬೇಕೆಂಬ ಆಸೆಯು ನಿರ್ದೇಶಕರ ಮನಸಲ್ಲಿ ಮೂಡಿತ್ತು. ಅದು ನೆರವೇರಿದೆ. ಬಹಳ ಸಂಭ್ರಮದಿಂದಲೇ ವೀರೇಂದ್ರ ಹೆಗ್ಗಡೆ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ: ಹುದ್ದೆಗಾಗಿ ಹಂಬಲಿಸಿದವನು ನಾನಲ್ಲ, ಕೇಳಿದವನೂ ಅಲ್ಲ: ವಿರೇಂದ್ರ ಹೆಗ್ಗಡೆ

‘ವೀರ ಕಂಬಳ’ ಸಿನಿಮಾವನ್ನು ‘ಬಾಬಾಸ್ ಬ್ಲೆಸಿಂಗ್ ಫಿಲ್ಮ್ಸ್’ ಬ್ಯಾನರ್ ಮೂಲಕ ಡಾ. ವಿನಿತಾ ವಿಜಯ್ ಕುಮಾರ್ ರೆಡ್ಡಿ ಮತ್ತು ಅರುಣ್ ರೈ ತೊಡಾರ್ ನಿರ್ಮಾಣ ಮಾಡಿದ್ದಾರೆ. ಪ್ರಕಾಶ್ ರೈ, ರವಿಶಂಕರ್ ಪ್ರಧಾನ ಪಾತ್ರಗಳಲ್ಲಿ ನಟಿಸಿದ್ದಾರೆ. ರಾಧಿಕಾ ನಾರಾಯಣ್ ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ತುಳು ಭಾಷೆಯಲ್ಲಿಯೂ ಸಿನಿಮಾ ಬಿಡುಗಡೆ ಆಗಲಿದ್ದು, ನವೀನ್ ಪಡೀಲ್, ಗೋಪಿನಾಥ್ ಭಟ್, ಭೋಜರಾಜ್ ವಾಮಂಜೂರು ಮುಂತಾದವರು ನಟಿಸಿದ್ದಾರೆ.

ವಿಜಯ್ ಕೊಡಿಯಾಲ್‌ಬೈಲ್ ಅವರು ಚಿತ್ರಕಥೆ, ಸಂಭಾಷಣೆ ಬರೆದಿದ್ದಾರೆ. ಮಣಿಕಾಂತ್ ಕದ್ರಿ ಅವರು ಸಂಗೀತ ನೀಡಿದ್ದಾರೆ. ಆರ್. ಗಿರಿ ಅವರ ಛಾಯಾಗ್ರಹಣ, ಶ್ರೀನಿವಾಸ್ ಎಸ್. ಬಾಬು ಅವರ ಸಂಕಲನ, ಚಂದ್ರಶೇಖರ್ ಸುವರ್ಣ ಮುಲ್ಕಿ ಅವರ ಕಲಾ ನಿರ್ದೇಶನ, ಕಾಂತ ಅವರ ಪ್ರಸಾದನ, ಭಾಷಾ ಅವರ ವಸ್ತ್ರವಿನ್ಯಾಸ ಈ ಸಿನಿಮಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಾಜಿ ಸೇನಾ ಮುಖ್ಯಸ್ಥ ನರವಾಣೆಯ ವಿವಾದಿತ ಪುಸ್ತಕ ಎಲ್ಲೂ ಪ್ರಕಟವೇ ಆಗಿಲ್ಲ; ಪೆಂಗ್ವಿನ್‌ ಪ್ರಕಾಶನದಿಂದ ಸ್ಪಷ್ಟನೆ – Kannada News | Ex army chief MM Naravanes book publisher clarifies memoir not yet published

ನವದೆಹಲಿ, ಫೆಬ್ರವರಿ 10: ಮಾಜಿ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಮುಕುಂದ್ ನರವಾಣೆ (ಎಂಎಂ ನರವಾಣೆ) ಅವರು ತಮ್ಮ ಆತ್ಮಚರಿತ್ರೆಯ ವಿವಾದ ಭುಗಿಲೆದ್ದ ನಂತರ ಮೊದಲ ಬಾರಿಗೆ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಆ ಪುಸ್ತಕದ ಪ್ರಕಾಶಕರಾದ ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ (PRHI) ನರವಾಣೆಯವರ (MM Naravane) ಪುಸ್ತಕವನ್ನು ಇನ್ನೂ ಪ್ರಕಟಿಸಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿತ್ತು. ಆ ಸ್ಪಷ್ಟನೆಯನ್ನು ನರವಾಣೆ ಕೂಡ ಶೇರ್ ಮಾಡಿಕೊಂಡಿದ್ದಾರೆ.

ಪೆಂಗ್ವಿನ್ ಬಿಡುಗಡೆ ಮಾಡಿದ ಹೇಳಿಕೆಯನ್ನು ಹಂಚಿಕೊಂಡ ಜನರಲ್ ಎಂಎಂ ನರವಾಣೆ, “ಇದು ನನ್ನ ಪುಸ್ತಕದ ಸದ್ಯದ ಸ್ಥಿತಿ” ಎಂದು ಹೇಳಿದ್ದಾರೆ. ಆತ್ಮಚರಿತ್ರೆಯ ಅನಧಿಕೃತ ಪ್ರತಿಗಳ ಹಂಚಿಕೆಯ ಕುರಿತಾದ ರಾಜಕೀಯ ವಿವಾದದ ನಡುವೆ ಪ್ರಕಾಶಕರ ಸ್ಪಷ್ಟೀಕರಣವನ್ನು ನರವಾಣೆ ಕೂಡ ಬೆಂಬಲಿಸಿದ್ದಾರೆ.

ಇದನ್ನೂ ಓದಿ: ಪ್ರಕಟವಾಗದ ಪುಸ್ತಕದಲ್ಲಿರುವ ವಿಷಯ ಉಲ್ಲೇಖಿಸಲು ಹೋಗಿ ಸದನದ ಬಾಯಿಗೆ ಆಹಾರವಾದ್ರಾ ರಾಹುಲ್ ಗಾಂಧಿ

ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಸಂಸ್ಥೆ ಮಾಜಿ ಸೇನಾ ಮುಖ್ಯಸ್ಥ ನರವಾಣೆಯವರ ಆತ್ಮಚರಿತ್ರೆಯಾದ ‘ಫೋರ್ ಸ್ಟಾರ್ಸ್ ಆಫ್ ಡೆಸ್ಟಿನಿ’ಯ ಏಕೈಕ ಪ್ರಕಾಶನ ಹಕ್ಕುಗಳನ್ನು ತಾನೇ ಹೊಂದಿರುವುದಾಗಿ ಪುನರುಚ್ಚರಿಸಿದೆ. ಹಾಗೇ, ಆ ಪುಸ್ತಕ ಇನ್ನೂ ಪ್ರಕಟಣೆಗೆ ಹೋಗಿಲ್ಲ, ಅದರ ಸಾಫ್ಟ್​ ಕಾಪಿಗಳು ಕೂಡ ಎಲ್ಲೂ ಲಭ್ಯವಿಲ್ಲ ಎಂದು ಹೇಳಿದೆ. ಮುದ್ರಣ ಅಥವಾ ಡಿಜಿಟಲ್ ರೂಪದಲ್ಲಿ ಯಾವುದೇ ಪ್ರತಿಗಳನ್ನು ಪ್ರಕಟಿಸಲಾಗಿಲ್ಲ, ವಿತರಿಸಲಾಗಿಲ್ಲ, ಮಾರಾಟ ಮಾಡಲಾಗಿಲ್ಲ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿಲ್ಲ ಎಂದು ಪ್ರಕಾಶಕರು ಹೇಳಿದ್ದಾರೆ.

ಇದನ್ನೂ ಓದಿ: ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಅಪ್ರಕಟಿತ ಪುಸ್ತಕದ ಪ್ರಸಾರದ ಕುರಿತು ಕೇಸ್ ದಾಖಲು

ಆತ್ಮಚರಿತ್ರೆಯ ಪಿಡಿಎಫ್ ಆವೃತ್ತಿಗಳು ಪ್ರಸಾರವಾಗುತ್ತಿವೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ನೀಡಲಾಗಿದೆ. ಆ ಪುಸ್ತಕದ ಹಸ್ತಪ್ರತಿಗೆ ರಕ್ಷಣಾ ಸಚಿವಾಲಯದಿಂದ ಇನ್ನೂ ಕಡ್ಡಾಯ ಅನುಮತಿ ಸಿಗದ ಕಾರಣದಿಂದ ಪುಸ್ತಕ ಪ್ರಕಟವಾಗಿಲ್ಲ ಎಂದು ತಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್: ಬೆಂಗಳೂರಿನಲ್ಲೊಂದು ಲವ್ ಜಿಹಾದ್ – Kannada News | Love Jihad In Bengaluru: Man Cheating to West Bengal Hindu Woman

ಬೆಂಗಳೂರು, (ಫೆಬ್ರವರಿ 10): ಬೆಂಗಳೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಯುವತಿಯೋರ್ವಳಿಗೆ ಹೆಣ್ಣು ಮಗು ಕರುಣಿಸಿ ಸೈಯದ್ ಎನ್ನುವ ವ್ಯಕ್ತಿ ಕೈಕೊಟ್ಟು ಪರಾರಿಯಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಬಿಟಿಎಂ ಲೇಔಟ್​​ನ ಸೈಯದ್ ಇಮ್ತಿಯಾಜ್‌ ಎನ್ನುವಾತ ಸಾಮಾಜಿಕ ಜಾಲತಾಣಗಳಲ್ಲಿ ಪಶ್ಚಿಮಬಂಗಾಳದ ಯುವತಿಯನ್ನು ಪರಿಚಯ ಮಾಡಿಕೊಂಡಿದ್ದು, ಬಳಿಕ ಆಕೆಯನ್ನು ಜೈನಾಬ್​ ಎಂದು ಹೆಸರಿಟ್ಟು ಇಸ್ಲಾಂಗೆ ಮತಾಂತರ ಮಾಡಿದ್ದಾನೆ. ಬಳಿಕ 2025 ಜುಲೈನಲ್ಲಿ ಇಬ್ಬರೂ ರಿಜಿಸ್ಟರ್ ಮ್ಯಾರೇಜ್ ಆಗಿದ್ದು, ದಂಪತಿ ಒಂದು ಹೆಣ್ಣು ಮಗುವಾಗಿದೆ. ಆಗ ಸೈಯದ್ ತಾಯಿ ಹಾಗೂ ಮಗುವನ್ಉ ಕೋಲ್ಕತ್ತಾದಲ್ಲಿ ಬಿಟ್ಟು ಎಸ್ಕೇಪ್ ಆಗಿದ್ದಾನೆ. ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದು, ನ್ಯಾಯಕ್ಕಾಗಿ ಅಂಗಲಾಚಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಮಗಳ ಭವಿಷ್ಯಕ್ಕಾಗಿ ತಂದೆಯ ಹೋರಾಟ; ತನ್ನ ಆಟೋದಲ್ಲಿ ಮಗಳನ್ನು ಮಲಗಿಸಿ ಆಟೋ ಓಡಿಸುವ ವ್ಯಕ್ತಿ – Kannada News | A father who drives his auto with his daughter sleeping in it

ಬದುಕು (life) ಯಾವಾಗ ಹೇಗೆ ತಿರುವು ಪಡೆದುಕೊಳ್ಳುತ್ತದೆ ಎಂದು ಹೇಳಲಾಗದು. ಕೆಲವೊಮ್ಮೆ ಒಂಟಿಯಾಗಿ ತಮ್ಮ ಮಕ್ಕಳ ಜವಾಬ್ದಾರಿ ಹೊತ್ತು ಕೊಂಡು ಅವರುಗಳಿಗೆ ಉತ್ತಮ ಭವಿಷ್ಯ ಕಟ್ಟಿ ಕೊಡಬೇಕಾಗುತ್ತದೆ. ಇಲ್ಲೊಬ್ಬ ಆಟೋ ಡ್ರೈವರ್‌ನದ್ದು (auto driver) ಅದೇ ಕಥೆ. ಪತ್ನಿಯನ್ನು ಕಳೆದುಕೊಂಡ ಆಟೋ ಡ್ರೈವರ್ ತನ್ನ ಮಗಳಿಗೆ ತಂದೆ ಮಾತ್ರವಲ್ಲ ತಾಯಿಯೂ ಆಗಿದ್ದಾನೆ. ಹೀಗಾಗಿ ಆಟೋದಲ್ಲೇ ತನ್ನ ಪುಟ್ಟ ಪ್ರಪಂಚವನ್ನು ಮಲಗಿಸಿಕೊಂಡು ದುಡಿಮೆಯನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾನೆ. ಈ ವ್ಯಕ್ತಿಯ ಬದುಕಿನ ಕಣ್ಣೀರಿನ ಕಥೆಯನ್ನು ಪ್ರಯಾಣಿಕನೊಬ್ಬ ಬಿಚ್ಚಿಟ್ಟಿದ್ದಾನೆ.

@SaffronChargers ಹೆಸರಿನ ಎಕ್ಸ್ ಖಾತೆಯಲ್ಲಿ ಆಟೋ ಡ್ರೈವರ್ ನ ಕಥೆಯನ್ನು ಹಂಚಿಕೊಳ್ಳಲಾಗಿದೆ. ಈ ಆಟೋ ಚಾಲಕನನ್ನು ಭೇಟಿ ಮಾಡಿ, ಈತ ಒಬ್ಬ ಸಿಂಗಲ್ ಪೇರೆಂಟ್. ಹೆಂಡತಿ ತೀರಿಹೋದ ಬಳಿಕ ಈತನಿಗೆ ಮಗಳೇ ಪ್ರಪಂಚ. ಮಗಳನ್ನು ಎಲ್ಲೆಡೆ ಕರೆದೊಯ್ಯುತ್ತಾ, ಜೀವನೋಪಾಯಕ್ಕಾಗಿ ದುಡಿಯುತ್ತಾ ಆಕೆಯನ್ನು ಏಕಾಂಗಿಯಾಗಿ ಸಾಕುತ್ತಿದ್ದಾನೆ. ಪುರುಷನಾಗಿರುವುದು ಅಷ್ಟು ಸುಲಭವಲ್ಲ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಈ ವಿಡಿಯೋದಲ್ಲಿ ಆಟೋ ಚಾಲಕನೊಬ್ಬ ತನ್ನ ಪುಟ್ಟ ಮಗಳನ್ನು ಆಟೋದಲ್ಲಿ ಮಲಗಿಸಿರುವುದನ್ನು ಕಾಣಬಹುದು. ಈ ಆಟೋದಲ್ಲಿದ್ದ ಪ್ರಯಾಣಿಕರೊಬ್ಬ ‘ಆಟೋದಲ್ಲಿ ಮಗುವನ್ನು ಏಕೆ ಮಲಗಿಸಿದ್ದೀರಿ? ಯಾರಿದು ಮಗು? ಎಂದು ಪ್ರಶ್ನೆ ಮಾಡಿದ್ದಾನೆ. ಈ ವೇಳೆ ಆಟೋ ಚಾಲಕನು ಇವಳು ನನ್ನ ಮಗಳು. ಇತ್ತೀಚೆಗಷ್ಟೇ ನನ್ನ ಹೆಂಡತಿ ತೀರಿಕೊಂಡಳು. ಮಗಳನ್ನು ಮನೆಯಲ್ಲಿ ಒಬ್ಬಳೇ ಬಿಟ್ಟು ಆಟೋ ಓಡಿಸಲು ಬರಲು ನನಗೆ ಸಾಧ್ಯವಿಲ್ಲ. ನಾನು ಮಗುವನ್ನು ನೋಡಿಕೊಳ್ಳಬೇಕು. ಜೊತೆಗೆ ಕೆಲಸಕ್ಕೆ ಹೋಗದಿದ್ದರೆ ನಮ್ಮ ಜೀವನ ನಡೆಯುವುದು ಕಷ್ಟವಾಗುತ್ತದೆ. ನಾನು ಈಗ ಸಿಂಗಲ್ ಪೇರೆಂಟ್ ಆಗಿರುವ ಕಾರಣ, ಮಗಳನ್ನು ಆಟೋದಲ್ಲೇ ಮಲಗಿಸಿಕೊಂಡು ಕೆಲಸಕ್ಕೆ ಕರೆತರುತ್ತೇನೆ ಎಂದು ಹೇಳಿದ್ದಾನೆ. ಈ ಆಟೋ ಪ್ರಯಾಣಿಕನ ಕಥೆ ಕೇಳಿ ಮನದಲ್ಲೇ ನೊಂದುಕೊಂಡ ಪ್ರಯಾಣಿಕ, ಮಗು ಎಚ್ಚರಗೊಂಡಾಗ ಜ್ಯೂಸ್ ಕೊಡಿಸಿ ಎಂದು ಹಣ ನೀಡಿರುವುದನ್ನು ಕಾಣಬಹುದು.

ಇದನ್ನೂ ಓದಿ: ರೈಲಿನಲ್ಲಿ ಬ್ರೇಸ್ಲೆಟ್‌ ಮಾರಿ ಸ್ವಾಭಿಮಾನದ ಬದುಕು ಕಟ್ಟಿಕೊಂಡ ಅಜ್ಜಿ, ವೈರಲ್ ಆಯ್ತು ದೃಶ್ಯ 

ಈ ವಿಡಿಯೋ ನಾಲ್ಕು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದು ಕೊಂಡಿವೆ. ಒಬ್ಬ ಬಳಕೆದಾರ, ಅಪ್ಪ ಯಾವತ್ತಿದ್ದರೂ ಹೀರೋನೇ ಎಂದಿದ್ದಾರೆ. ಮತ್ತೊಬ್ಬರು, ಕಷ್ಟಪಟ್ಟು ದುಡಿಯುತ್ತಾ ಮಗಳನ್ನು ಏಕಾಂಗಿಯಾಗಿ ಸಾಕುವುದು ಅಷ್ಟು ಸುಲಭವಲ್ಲ. ಇವರೇ ನಿಜವಾದ ಹೀರೋಗಳು, ಈ ಕಥೆ ಹೃದಯಸ್ಪರ್ಶಿ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಅಪ್ಪನ ಪ್ರೀತಿಗೆ ಬೆಲೆ ಕಟ್ಟಲು ಅಸಾಧ್ಯ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

“ನಿಮ್ಮ ಮಗಳು ಶಿವನ ಪಾದ ಸೇರಿದ್ದಾಳೆ ಬಂದು ನೋಡಿ” ಎಂದ ಅಳಿಯ: ಇದಕ್ಕೆಲ್ಲ ಇವನೇ ಕಾರಣ – Kannada News | Belagavi Womans Death: Husband Accused of Murder Amidst Marital Discord.

ಬೆಳಗಾವಿ, ಫೆ.10: ಜಿಲ್ಲೆಯ ( Belagavi murder allegation) ಬೈಲಹೊಂಗಲ ತಾಲೂಕಿನ ಹೊಸೂರ ಗ್ರಾಮದಲ್ಲಿ 29 ವರ್ಷದ ಸಕ್ಕುಬಾಯಿ ದಿಡಗಣ್ಣವರ್ ಎಂಬುವವರು ಸಾವನ್ನಪ್ಪಿದ್ದು, ಇದೀಗ ಇದು ಸಹಜ ಸಾವಲ್ಲ, ಕೊಲೆ ಎಂದು ಸಕ್ಕುಬಾಯಿ ಮನೆಯವರು ಆರೋಪಿಸಿದ್ದಾರೆ. ಸಕ್ಕುಬಾಯಿ ಅವರ ಪತಿ ನಾಗಪ್ಪ ದಿಡಗಣ್ಣವರ್ ಅವರೇ ತಮ್ಮ ಪತ್ನಿಯನ್ನು ಕೊಲೆ ಮಾಡಿ, ಅದನ್ನು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಸಕ್ಕುಬಾಯಿ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕುಟುಂಬಸ್ಥರು ನಾಗಪ್ಪ ವಿರುದ್ಧ ತೀವ್ರ ಪ್ರತಿಭಟನೆ ನಡೆಸಿ, ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಸಕ್ಕುಬಾಯಿ ಮತ್ತು ನಾಗಪ್ಪ ಅವರ ಮದುವೆಯಾಗಿ 11 ವರ್ಷಗಳಾಗಿದ್ದು, ಈ ಅವಧಿಯಲ್ಲಿ ನಿರಂತರವಾಗಿ ಕೌಟುಂಬಿಕ ಕಲಹಗಳು ನಡೆಯುತ್ತಲೇ ಇದ್ದವು ಎಂದು ಸಕ್ಕುಬಾಯಿ ಕುಟುಂಬಸ್ಥರು ಹೇಳಿದ್ದಾರೆ. ದಂಪತಿಗೆ ನಾಲ್ಕು ಮಕ್ಕಳಿದ್ದರು, ಅದರಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದು, ಇಬ್ಬರು ಮಕ್ಕಳು ಮನೆಯಲ್ಲಿದ್ದಾರೆ. ಪಂಚಾಯಿತಿಯಲ್ಲಿ ನೌಕರಿ ಮಾಡುತ್ತಿರುವ ನಾಗಪ್ಪ ಅವರು ಸಕ್ಕುಬಾಯಿಗೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು ಎಂದು ತಾಯಿ ಆರೋಪಿಸಿದ್ದಾರೆ. ತುಂಬಾ ದಿನದಿಂದ ಮಗಳಿಗೆ ಶಿಕ್ಷೆ ನೀಡುತ್ತಿದ್ದ ಎಲ್ಲವನ್ನೂ ಸಹಿಸಿಕೊಂಡು ಹಿರಿಯರ ಮಾತಿಗೆ ಬೆಲೆ ನೀಡಿ ಮಗಳನ್ನು ಅಲ್ಲೇ ಬಿಟ್ಟಿದ್ದೆವು” ಎಂದು ಸಕ್ಕುಬಾಯಿ ತಾಯಿ ಅಳಲು ತೋಡಿಕೊಂಡಿದ್ದಾರೆ. ಅತ್ತೆಯ ಕಿರುಕುಳವೂ ಇತ್ತು ಎಂದು ಕುಟುಂಬಸ್ಥರು ಹೇಳಿದ್ದಾರೆ.

“ಸಕ್ಕುಬಾಯಿಗೆ ಒಂದಾದ ಮೇಲೊಂದು ಕೆಲಸಗಳನ್ನು ನೀಡಿ ತೊಂದರೆ ನೀಡಲಾಗುತ್ತಿತ್ತು. ಕೆಲಸ ಮಾಡುವ, ರೊಟ್ಟಿ ಬರುವ, ಅಡುಗೆ ಮಾಡುವ ವಿಚಾರದಲ್ಲಿ ನಿರಂತರವಾಗಿ ತೊಂದರೆ ಕೊಡುತ್ತಿದ್ದರು. ನಾವು ದಿನವೂ ಬೆಳಿಗ್ಗೆ 6 ಗಂಟೆಗೆ ಕೆಲಸಕ್ಕೆ ಹೋಗಿ ರಾತ್ರಿ 6 ಗಂಟೆಯವರೆಗೂ ದುಡಿಯುತ್ತಿದ್ದೆವು. ಮಗಳಿಗೆ ಬಹಳಷ್ಟು ತೊಂದರೆಯಾಗುತ್ತಿತ್ತು” ಎಂದು ತಾಯಿ ವಿವರಿಸಿದ್ದಾರೆ. ಈ ಕುರಿತು ಗ್ರಾಮದ ಹಿರಿಯರು ಹಲವಾರು ಬಾರಿ ಮಧ್ಯಪ್ರವೇಶಿಸಿ, ರಾಜಿ ಸಂಧಾನಕ್ಕೆ ಪ್ರಯತ್ನಿಸಿದ್ದರು. “ಬಾಂಡ್ ಮಾಡಿ ಕೊಡಿ” ಎಂದು ಹಿರಿಯರು ಹೇಳಿದ್ದರೂ ಪರಿಸ್ಥಿತಿ ಸುಧಾರಿಸಿರಲಿಲ್ಲ. ಮಗನಿಗೆ ನೌಕರಿ ಇದ್ದು, ಮಗಳಿಗೆ ಒಳ್ಳೆಯ ಜೀವನ ಸಿಗುತ್ತದೆ ಎಂಬ ಆಸೆಯಿಂದ ಸಕ್ಕುಬಾಯಿ ಪೋಷಕರು ಮಗಳನ್ನು ಅಲ್ಲೇ ಉಳಿಯಲು ಬುದ್ಧಿ ಹೇಳಿ ಕಳಿಸುತ್ತಿದ್ದರು.

ಇದನ್ನೂ ಓದಿ: ಸ್ಮಶಾನ ಸೇರಬೇಕಿದ್ದ ಶವ ಆಸ್ಪತ್ರೆಯ ಶವಗಾರಕ್ಕೆ: 17 ವರ್ಷದ ಬಾಲಕಿ ಸಾವಿನ ಸುತ್ತ ಅನುಮಾನದ ಹುತ್ತ

ಇಲ್ಲಿದೆ ನೋಡಿ ವಿಡಿಯೋ:

ಸಕ್ಕುಬಾಯಿ ಸಾವನ್ನಪ್ಪಿದ ದಿನದಂದು ನಾಗಪ್ಪ ಅವರು ಸಕ್ಕುಬಾಯಿ ಸಹೋದರನಿಗೆ ಸಂಜೆ 5 ಗಂಟೆಗೆ ನೇರವಾಗಿ ಕರೆ ಮಾಡಿ, “ನಿಮ್ಮ ತಂಗಿ ಮೇಲೆ ಹೋಗಿದ್ದಾಳೆ ನೋಡು” ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಮಕ್ಕಳು ತಾಯಿ ಮನೆಯೊಳಗೆ ಜೋತಾಡುವುದನ್ನು ನೋಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸಕ್ಕುಬಾಯಿ ಪೋಷಕರು ಆ ದಿನ ಅಯ್ಯಪ್ಪಸ್ವಾಮಿ ಪೂಜೆಗೆಂದು ಬೈಲಹೊಂಗಲಕ್ಕೆ ಹೋಗಿದ್ದರು. ಅಲ್ಲಿದ್ದಾಗಲೇ ಈ ದುರ್ಘಟನೆಯ ಸುದ್ದಿ ತಿಳಿದು ತಕ್ಷಣವೇ ಹೊಸೂರ ಗ್ರಾಮಕ್ಕೆ ಧಾವಿಸಿದ್ದಾರೆ. ಎಂಟು ದಿನಗಳ ಹಿಂದೆ ಸಕ್ಕುಬಾಯಿ ತಾಯಿ ಮಗಳನ್ನು ಕರೆದುಕೊಂಡು ಹೋಗಲು ಬಂದಿದ್ದರಾದರೂ, ಸಕ್ಕುಬಾಯಿ ಅಲ್ಲಿಂದ ಹೋಗಿರಲಿಲ್ಲ. ಸಕ್ಕುಬಾಯಿ ಸಾವಿನ ಹಿಂದೆ ಪತಿ ನಾಗಪ್ಪ ದಿಡಗಣ್ಣವರ್ ಅವರ ಕೈವಾಡವಿದೆ ಎಂದು ಕುಟುಂಬಸ್ಥರು ಬಲವಾಗಿ ನಂಬಿದ್ದಾರೆ. ಘಟನೆಯ ಕುರಿತು ಸಮಗ್ರ ಮತ್ತು ನ್ಯಾಯಯುತ ತನಿಖೆ ನಡೆಸಿ, ಸಕ್ಕುಬಾಯಿಗೆ ನ್ಯಾಯ ಒದಗಿಸುವಂತೆ ಮತ್ತು ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಅವರು ಸಂಬಂಧಪಟ್ಟ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 7:53 pm, Tue, 10 February 26

Source link

Yadgir: ಮದ್ಯ ಕುಡಿಯಬೇಡಮ್ಮ ಎಂದಿದ್ದಕ್ಕೆ ಹೆತ್ತ ಮಗಳನ್ನೇ ಕತ್ತು ಹಿಸುಕಿ ಕೊಂದ ತಾಯಿ – Kannada News | Drunk Mother Strangles Daughter in Yadgiri After Plea to Quit Drinking

ಯಾದಗಿರಿ, ಫೆಬ್ರವರಿ 10: ಮದ್ಯದ ದಾಸಿಯಾಗಿದ್ದ ಮಹಿಳೆಯೊಬ್ಬಳು ಎಣ್ಣೆ ನಶೆಯಲ್ಲಿ ಹೆತ್ತ ಮಗಳನ್ನೇ ಕೊಂದಿರುವ ಹೃದಯ ವಿದ್ರಾವಕ ಘಟನೆ ಯಾದಗಿರಿ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ನಡೆದಿದೆ. ಪ್ರತಿಭಾ (11) ಮೃತ ಬಾಲಕಿಯಾಗಿದ್ದು, ಆರೋಪಿ ನಿರ್ಮಲಾಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ತಂದೆಯನ್ನ ಕಳೆದುಕೊಂಡಿದ್ದ ಬಾಲಕಿ ಪಾಲಿಗೆ ತಾಯಿಯೇ ವಿಲನ್​​ ಆಗಿದ್ದು, ಬಡತನ ಹಿನ್ನೆಲೆ ಆಡಿ ಬೆಳೆಯಬೇಕಾದ ವಯಸ್ಸಲ್ಲೇ ಶಾಲೆ ಬಿಟ್ಟು ದುಡಿಯೋಕೆ ಹೋಗ್ತಿದ್ದ ಪ್ರತಿಭಾ ಕ್ರೂರವಾಗಿ ಹತ್ಯೆಯಾಗಿದ್ದಾಳೆ.

ಮಗಳ ಕೊಂದು ತಾಯಿಯ ನಾಟಕ

ಇನ್ನು ಕೊಲೆ ಮಾಡಿ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಿರ್ಮಲಾ ಕತೆ ಕಟ್ಟಿದ್ದಳು. ಜ್ಯೂಸ್ ಕುಡಿಯಲಯ 15 ರೂ. ಕೊಡುವಂತೆ ಮಗಳು ಕೇಳಿದ್ದಳು. ಆದ್ರೆ ನಾನು ಹಣ ಕೊಡದ ಕಾರಣ ನೇರವಾಗಿ ಪಕ್ಕದ ಮನೆge ಹೋಗಿ ಕುರ್ಚಿ ತೆಗೆದುಕೊಂಡು ಬಂದು ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪೊಲೀಸರ ಮುಂದೆ ಹೇಳಿದ್ದಳು. ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ್ರೆ ಕುತ್ತಿಗೆ ಭಾಗದಲ್ಲಿ ಗಾಯವಿರುತ್ತೆ. ಆದ್ರೆ ಪ್ರತಿಭಾ ದೇಹದಲ್ಲಿ ಯಾವುದೇ ಗಾಯಗಳಿರಲಿಲ್ಲ. ಹೀಗಾಗಿ ಪೊಲೀಸರು ನಿರ್ಮಲಾಳನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇದು ಆತ್ಮಹತ್ಯೆ ಅಲ್ಲ, ಬದಲಿಗೆ ಕತ್ತು ಹಿಸುಕಿ ಕೊಲೆ ಮಾಡಿರೋದು ಎಂಬ ವಿಷಯ ರಿವೀಲ್​​ ಆಗಿದೆ.

ಇದನ್ನೂ ಓದಿ: ಹಿಂದೂ ಯುವತಿಗೆ ಮಗು ಕರುಣಿಸಿ ಕೈಕೊಟ್ಟ ಸೈಯದ್; ಬೆಂಗಳೂರಿನಲ್ಲೊಂದು ಲವ್ ಜಿಹಾದ್

ಕಳೆದ ಕೆಲ ವರ್ಷಗಳಿಂದ ಈ ನಿರ್ಮಲಾ ಪತಿ ಜೊತೆಗೆ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು. ಆದ್ರೆ ಕಳೆದ ಮೂರು ವರ್ಷಗಳ ಹಿಂದೆ ಪತಿ ಸಾವನ್ನಪ್ಪಿದ ಬಳಿಕ ತನ್ನ ಮೂರು ಜನ ಹೆಣ್ಣು ಮಕ್ಕಳು ಹಾಗೂ ಓರ್ವ ಗಂಡು ಮಗುವಿನ ಜೊತೆಗೆ ಯಾದಗಿರಿ ನಗರದ ರಾಜೀವ್ ಗಾಂಧಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದಳು. ನಗರದಲ್ಲೇ ಮನೆ ಕೆಲಸ ಮಾಡಿಕೊಂಡಿದ್ದ ಈಕೆ, ಸಾಲದ್ದಕ್ಕೆ ತನ್ನ ಮಕ್ಕಳನ್ನೂ ಕೆಲಸಕ್ಕೆ ಕಳುಹಿಸುತ್ತಿದ್ದಳು. ಗಂಡನನ್ನ ಕಳೆದುಕೊಂಡ ಬಳಿಕ ಮದ್ಯ ವ್ಯಸನಿಯಾಗಿದ್ದ ನಿರ್ಮಲಾ, ದುಡಿದ ಹಣವನ್ನೆಲ್ಲ ಚಟಕ್ಕೇ ಸುರಿಯುತ್ತಿದ್ದಳು. ಹೀಗಾಗಿ ಮಕ್ಕಳ ದುಡಿಮೆಯಲ್ಲಿಯೇ ಸಂಸಾರ ನಡೆಯುತ್ತಿತ್ತು. ಇದೇ ಕಾರಣಕ್ಕೆ ಕುಡಿಯಬೇಡಮ್ಮ, ಈಗಾಗಲೇ ಅಪ್ಪನನ್ನು ಕಳೆದುಕೊಂಡಿದ್ದೇವೆ. ನಿನಗೂ ಏನಾದರೂ ಆದರೆ ಏನು ಮಾಡೋದು ಎಂದು ಗೋಗರೆಯುತ್ತಿದ್ದರು .ನಿನ್ನೆ ಕೂಡ ಪ್ರತಿಭಾ ತಾಯಿಗೆ ಅದೇ ಮಾತು ಹೇಳಿದ್ದಾಳೆ. ಆದ್ರೆ ಕುಡಿದ ನಶೆಯಲ್ಲಿದ್ದ ನಿರ್ಮಲಾ ಸಿಟ್ಟಿನಲ್ಲಿ ಕತ್ತು ಹಿಸುಕಿ ಬುದ್ಧಿ ಹೇಳಿದ ಮಗಳನ್ನೇ ಕೊಲೆ ಮಾಡಿದ್ದಾಳೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಬಿಜೆಪಿ ಮುಖಂಡನಿಗೆ ರಾಜ್ಯ ಸಚಿವ ಸ್ಥಾನಮಾನ!: ‘ಕೈ’ ಕಾರ್ಯಕರ್ತರ ಕಿಡಿ – Kannada News | Karnataka Government Grants Minister Status to 54 Corp Heads; BJP Leader Inclusion Fuels Congress Outrage

ಬಿಜೆಪಿ ಮುಖಂಡ ಬಿ.ಡಿ. ಭೂಕಾಂತ್​​Image Credit source: Tv9 Kannada

ಬೆಂಗಳೂರು, ಫೆಬ್ರವರಿ 10: ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಾಗಿರುವ ಒಟ್ಟು 54 ಮಂದಿಗೆ ಸಚಿವ ಸ್ಥಾನಮಾನ ನೀಡಿ ರಾಜ್ಯಸರ್ಕಾರ ಮೊನ್ನೆಯಷ್ಟೇ ಆದೇಶಿಸಿದ್ದು, ಶಿಕಾರಿಪುರದ ಬಿಜೆಪಿ ಮುಖಂಡನಿಗೂ ರಾಜ್ಯ ಸಚಿವ ಸ್ಥಾನಮಾನ ನೀಡಿರೋದೀಗ ಕಾಂಗ್ರೆಸ್​ ಪಾಳಯದಲ್ಲಿ ಆಕ್ರೋಶದ ಕಿಡಿ ಹೊತ್ತಿಸಿದೆ. ಪಕ್ಷದ ನಾಯಕರ ನಿರ್ಧಾರದ ವಿರುದ್ಧ ‘ಕೈ’ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದು, ಭಾರೀ ಅಸಮಾಧಾನ ಹೊರಹಾಕಿದ್ದಾರೆ.

54 ಮಂದಿ ನಿಗಮ ಮಂಡಳಿ ಅಧ್ಯಕ್ಷರ ಪಟ್ಟಿಯಲ್ಲಿ ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ಅಧ್ಯಕ್ಷ, ಬಿಜೆಪಿ ಮುಖಂಡ ಬಿ.ಡಿ. ಭೂಕಾಂತ್​​ ಅವರ ಹೆಸರೂ ಉಲ್ಲೇಖವಾಗಿದೆ. ಭೂಕಾಂತ್ ಅವರ ಪತ್ನಿ ಕೂಡ ಬಿಜೆಪಿಯಿಂದ ಜಿಲ್ಲಾ ಪಂಚಾಯತಿ ಸದಸ್ಯೆಯಾಗಿದ್ದರು. ಹೀಗಿರುವಾಗ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶಿಸಿರೋದೀಗ ಸ್ವಪಕ್ಷ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಿದೆ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಮೋದಿ ಬಗ್ಗೆ ಸಿದ್ದರಾಮಯ್ಯ ಪೋಸ್ಟ್​​​; ರಾಹುಲ್​​ ಹೆಸರು ಉಲ್ಲೇಖಿಸಿ ಬಿಜೆಪಿ ಗುದ್ದು

ಇಲ್ಲಿಯವರೆಗೂ ಪ್ರಮುಖ ನಿಗಮಗಳ ಅಧ್ಯಕ್ಷರಾಗಿರುವ ಶಾಸಕರಿಗಷ್ಟೇ ದೊರೆಯುತ್ತಿದ್ದ ಈ ಸ್ಥಾನಮಾನವನ್ನು ಎಲ್ಲ ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರಿಗೂ ಅನ್ವಯಿಸುವಂತೆ ವಿಸ್ತರಿಸಿ ಸರ್ಕಾರ ಆದೇಶಿಸಿತ್ತು. ಎಲ್ಲ 54 ನಿಗಮಗಳ ಅಧ್ಯಕ್ಷರಿಗೆ ರಾಜ್ಯ ಸಚಿವರ ಸ್ಥಾನಮಾನ ನೀಡಲಾಗಿದ್ದು, ಅಗತ್ಯ ಸೌಲಭ್ಯಗಳನ್ನು ಆಯಾ ಇಲಾಖೆಗಳು ಒದಗಿಸುವಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಶಿಷ್ಟಾಚಾರ ವಿಭಾಗ ಹೊರಡಿಸಿದ್ದ ಆದೇಶದಲ್ಲಿ ತಿಳಿಸಲಾಗಿತ್ತು.

54 ನಿಗಮ – ಮಂಡಳಿಗಳ ಅಧ್ಯಕ್ಷರ ಪಟ್ಟಿ

  1. ಮಮತಾ ಗಟ್ಟಿ- ಅಧ್ಯಕ್ಷರು, ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು
  2. ಎನ್​.ರಂಗಸ್ವಾಮಿ-ಅಧ್ಯಕ್ಷರು, ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೈಸೂರು
  3. ವಡ್ನಾಳ್ ಜಗದೀಶ್-ಅಧ್ಯಕ್ಷರು, ಕರ್ನಾಟಕ ಜೀವ ವೈವಿದ್ಯ ಮಂಡಳಿ
  4. ಮಹೇಶ್ ಎಂ.ಎನ್​- ಅಧ್ಯಕ್ಷರು, ಕರ್ನಾಟಕ ತಜ್ಞರ ಮೌಲ್ಯಮಾಪನ ಸಮಿತಿ
  5. ಗುರುಪ್ರಸಾದ್ ಬಿ-ಅಧ್ಯಕ್ಷರು, ರಾಜ್ಯ ಪರಿಸರ ಪರಿಣಾಮ ಮೌಲ್ಯ ಮಾಪನಾ ಪ್ರಾಧಿಕಾರ
  6. ಬಿ.ಕೆ. ಅಲ್ತಾಫ್ ಖಾನ್-ಅಧ್ಯಕ್ಷರು, ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ
  7. ಜುಲ್ಫಿಕರ್ ಅಹಮದ್ ಖಾನ್-ಅಧ್ಯಕ್ಷರು, ಕರ್ನಾಟಕ ರಾಜ್ಯ ಹಜ್ ಸಮಿತಿ
  8. ಮುಹಮದ್ ಅಲಿ ಅಲ್ ಹುಸೇನಿ-ಅಧ್ಯಕ್ಷರು, ಕರ್ನಾಟಕ ರಾಜ್ಯ ವಕ್ಸ್ ಮಂಡಳಿ
  9. ಡಾ.ಎಸ್​.ಜಫೇಟ್-ಅಧ್ಯಕ್ಷರು, ಕರ್ನಾಟಕ್ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮ
  10. ವಿ.ಎಸ್. ಆರಾಧ್ಯ-ಅಧ್ಯಕ್ಷರು, ಬೆಂಗಳೂರು ಮಹಾ ನಗರ ಸಾರಿಗೆ ಸಂಸ್ಥೆ
  11. ಅರುಣ್ ಕುಮಾ‌ರ್ ಪಾಟೀಲ್-ಅಧ್ಯಕ್ಷರು, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
  12. ಲಕ್ಷ್ಮೀಶ.ಕೆ.ಎಂ- ಅಧ್ಯಕ್ಷರು, ಬೆಂಗಳೂರು ವಿದ್ಯುಚ್ಛಕ್ತಿ ಸರಬರಾಜು ನಿಗಮ ನಿಯಮಿತ
  13. ಲಲಿತ್ ರಾಘವ್‌-ಅಧ್ಯಕ್ಷರು, ಕರ್ನಾಟಕ ವಿದ್ಯುತ್ ಕಾರ್ಖಾನೆ ನಿಯಮಿತ
  14. ಎಸ್ ಮನೋಹರ್- ಅಧ್ಯಕ್ಷರು, ದಿ ಮೈಸೂರು ಎಲೆಕ್ನಿಕಲ್ ಇಂಡಸ್ಟ್ರೀಸ್ ಲಿಮಿಟೆಡ್
  15. ಕೀರ್ತಿ ಗಣೇಶ್- ಅಧ್ಯಕ್ಷರು, ಡಿ. ದೇವರಾಜ ಅರಸ್ ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ
  16. ಜಿ. ಹೆಚ್. ಮರಿಯೋಜಿರಾವ್- ಅಧ್ಯಕ್ಷರು, ಕರ್ನಾಟಕ ಮರಾಠ ಅಭಿವೃದ್ಧಿ ನಿಗಮ
  17. ಎಂ.ಎಸ್.ಆತ್ಮಾನಂದ- ಅಧ್ಯಕ್ಷರು, ಒಕ್ಕಲಿಗರ ಸಮುದಾಯಗಳ ಅಭಿವೃದ್ಧಿ ನಿಗಮ
  18. ಸುಜ್ಞಾನಮೂರ್ತಿ ಪಿ.-  ಅಧ್ಯಕ್ಷರು, ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮ ನಿಯಮಿತ
  19. ಭರಮಣ್ಯ ಉಪ್ಪಾರ- ಅಧ್ಯಕ್ಷರು, ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
  20. ಶ್ರೀ ಎಂ.ಎಸ್.ಮುತ್ತುರಾಜ್- ಅಧ್ಯಕ್ಷರು, ಸಮಿತಾ ಸಮಾಜ ಅಭಿವೃದ್ಧಿ ನಿಗಮ
  21. ನಂಜಪ್ಪ.ಸಿ- ಅಧ್ಯಕ್ಷರು, ಮಡಿವಾಳ ಮಾಚಿದೇವ ಅಭಿವೃದ್ಧಿನಿಗಮ
  22. ಮಹೇಶ್ .ಎಂ- ಅಧ್ಯಕ್ಷರು, ಕಾಡುಗೊಲ್ಲ ಅಭಿವೃದ್ಧಿ ನಿಗಮ
  23. ಎಸ್.ಗಂಗಾಧರ್- ಅಧ್ಯಕ್ಷರು, ಕರ್ನಾಟಕ ರೇಷ್ಮೆ ಮಾರಾಟ ಮಂಡಳಿ ನಿಯಮಿತ
  24. ನೀಲಕಂಠರಾವ್ ಎಸ್. ಮೂಲಗೆ- ಅಧ್ಯಕ್ಷರು, ಕರ್ನಾಟಕ ರಾಜ್ಯ ಸಾಂಬಾರು ಅಭಿವೃದ್ಧಿ ಮಂಡಳಿ, ಹುಬ್ಬಳ್ಳಿ
  25. ಬಿ.ಎಸ್. ಕವಲಗಿ- ಅಧ್ಯಕ್ಷರು, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿ, ಇಂಡಿ, ವಿಜಯಪುರ
  26. ಹೆಚ್.ಬಿ. ಮಂಜಪ್ಪ- ಅಧ್ಯಕ್ಷರು, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ, ಚಿತ್ರದುರ್ಗ
  27. ఆరా.ఎం. ಮಂಜುನಾಥಗೌಡ- ಅಧ್ಯಕ್ಷರು, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ, ಶಿವಮೊಗ್ಗ
  28. ಮುತ್ತಪ್ಪ- ಅಧ್ಯಕ್ಷರು, ಕರ್ನಾಟಕ ರಾಜ್ಯ ಲ್ಯಾಂಪ್ಸ್ ಸಹಕಾರ ಮಹಾಮಂಡಳಿ ನಿಯಮಿತ, ಮೈಸೂರು
  29. ಎಂ. ಶ್ರೀನಿವಾಸ್- ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ
  30. ಆಯೂಬ್ ಖಾನ್- ಅಧ್ಯಕ್ಷರು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರ, ಮೈಸೂರು
  31. ಸೈಯದ್ ಮೊಹಮೂದ್ ಚಿಸ್ಮಿ- ಅಧ್ಯಕ್ಷರು, ಕರ್ನಾಟಕ ರಾಜ್ಯ ದ್ವಿದಳ ಧಾನ್ಯ ಅಭಿವೃದ್ಧಿ ಮಂಡಳಿ, ಕಲಬುರಗಿ
  32. ಅಂಜನಪ್ಪ- ಅಧ್ಯಕ್ಷರು, ಕರ್ನಾಟಕ ರಾಜ್ಯ ಬೀಜ ನಿಗಮ
  33. ಗಂಗಾಧರ್- ಅಧ್ಯಕ್ಷರು, ಮೈಸೂರು ಸಕ್ಕರೆ ಕಾರ್ಖಾನೆ ಮಂಡ್ಯ, ದಿ ಮೈಸೂರು ಷುಗ‌ರ್ ಕಂಪನಿ
  34. ಜಿ.ಎಸ್. ಪಾಟೀಲ್- ಅಧ್ಯಕ್ಷರು, ಮೈಸೂರು ಸ್ಟೇಟ್ ಮಿನರಲ್ ಕಾರ್ಪೋರೇಷನ್ ಲಿಮಿಟೆಡ್, ಬೆಂಗಳೂರು
  35. ಸತೀಶ್ ಕೃಷ್ಣಸೈಲ್- ಅಧ್ಯಕ್ಷರು, ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯುನಿಕೇಷನ್ ಆ್ಯಂಡ್​ ಅಡ್ವರ್ಟೈಸಿಂಗ್ ಲಿಮಿಟೆಡ್
  36. ಬಿ. ನಾಗೇಂದ್ರ ಕುಮಾರ್- ಅಧ್ಯಕ್ಷರು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮನಿಯಮಿತ, ಹುಬ್ಬಳ್ಳಿ
  37. ಜೆ.ಎಂ. ಗಣೇಶ- ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರ ಕೈಮಗ್ಗ ನೇಮಕಾರರ ಮಹಾ ಮಂಡಳಿ ನಿಯಮಿತ
  38. ಚೇತನ್ ಕೆ.- ಅಧ್ಯಕ್ಷರು, ಕರ್ನಾಟಕ ರಾಜ್ಯ ಜವಳಿ ಮೂಲಸೌಲಭ್ಯ ಅಭಿವೃದ್ಧಿನಿಗಮ, ಬೆಳಗಾವಿ
  39. ಕೆ. ವಿ. ರಾಮ್‌ಪ್ರಸಾದ್- ಅಧ್ಯಕ್ಷರು, ಕರ್ನಾಟಕ ಆರ್ಯವೈಶ್ಯ ಸಮುದಾಯ ಅಭಿವೃದ್ಧಿ ನಿಗಮ
  40. ಜಯಸಿಂಹ- ಅಧ್ಯಕ್ಷರು, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ
  41. ಆರ್ ಸಂಪತ್ ರಾಜ್- ಅಧ್ಯಕ್ಷರು, ಡಾ: ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ
  42. ಎನ್ ಜಯದೇವನಾಯ್ಕ- ಅಧ್ಯಕ್ಷರು, ಕರ್ನಾಟಕ ತಾಂಡಾ/ಬಂಜಾರ ಅಭಿವೃದ್ಧಿ ನಿಗಮ
  43. ಜಿ.ಎಸ್. ಮಂಜುನಾಥ್- ಅಧ್ಯಕ್ಷರು, ಕರ್ನಾಟಕ ಆದಿಜಾಂಬವ ಅಭಿವೃದ್ಧಿ ನಿಗಮ
  44. ಮುರಳಿ ಅಶೋಕ್‌ ಸಾಲಪ್ಪ,- ಅಧ್ಯಕ್ಷರು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
  45. ಪಲ್ಲವಿ.ಜಿ- ಅಧ್ಯಕ್ಷರು, ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ
  46. ಮುಂಡರಗಿ ನಾಗರಾಜು- ಅಧ್ಯಕ್ಷರು, ಡಾ: ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ
  47. ದೇವೇಂದ್ರಪ್ಪ ಮರ್ತೂರು- ಅಧ್ಯಕ್ಷರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ
  48. ಮಾಲಾ ನಾರಾಯಣರಾವ್‌- ಅಧ್ಯಕ್ಷರು, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ನಿಯಮಿತ, ಮಂಗಳೂರು
  49. ಪದ್ಮಾವತಿ-  ಅಧ್ಯಕ್ಷರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ನಿಗಮ
  50. ಕಾಂತಾ ನಾಯ್ಕ್- ಅಧ್ಯಕ್ಷರು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ಪ್ರಾಧಿಕಾರ
  51. ಪಿ. ರಘು- ಅಧ್ಯಕ್ಷರು, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ, ಬೆಂಗಳೂರು
  52. ಬಿ. ಹೆಚ್. ಹರೀಶ್- ಅಧ್ಯಕ್ಷರು, ಕರ್ನಾಟಕ ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮ ಬೆಂಗಳೂರು
  53. ಮಧುಸೂಧನ್ ಆರ್. ನಾಯ್ಕ್- ಅಧ್ಯಕ್ಷರು, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ಬೆಂಗಳೂರು
  54. ಡಾ. ಬಿ.ಡಿ. ಭೂಕಾಂತ್- ಅಧ್ಯಕ್ಷರು, ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕೆ ಮಾರಾಟ ಮಹಾಮಂಡಳಿ ನಿಯಮಿತ

    ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ

Published On – 7:33 pm, Tue, 10 February 26

Source link

ಬಗೆದಷ್ಟು ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನ ರಹಸ್ಯ ಬಯಲು: ಸಿದ್ದೇಶ್ವರನ ಸುತ್ತ ನಾಗಸರ್ಪ ಕಾವಲು – Kannada News | Siddeshwara Temple Architecture of Chalukya Period In Jantli Shirur at gadag

ಗದಗ, (ಫೆಬ್ರವರಿ 10): ಗದಗ ಜಿಲ್ಲೆಯ ಮುಂಡರಗಿ ಜಂತ್ಲಿಶಿರೂರ ಗ್ರಾಮದಲ್ಲಿ ಕಲ್ಯಾಣ ಚಾಲುಕ್ಯರ ಕಾಲದಲ್ಲಿ ನಿರ್ಮಾಣವಾಗಿದ್ದ ಐತಿಹಾಸಿಕ ಸಿದ್ದೇಶ್ವರ ದೇವಸ್ಥಾನದ ಅಡಿಯಲ್ಲಿ ಸಾಕಷ್ಟು ಸಿರಿ ಸಂಪತ್ತು ಇದೆ ಎನ್ನುವ ಚರ್ಚೆ ಶುರುವಾಗಿದೆ. ಹಳೇ ಕಾಲದ ಸಿದ್ದೇಶ್ವರ ದೇಗುಲ ಸಂಪೂರ್ಣ ಹಾಳಾಗಿದೆ. ನಿಧಿಗಳ್ಳರ ಅಟ್ಟಹಾಸಕ್ಕೆ ದೇವಸ್ಥಾನ ನಾಶವಾಗಿದೆ. ಇನ್ನು ಈ ದೇವಸ್ಥಾನದ ಕೆಳಗೆ ಮತ್ತೊಂದು ದೇಗುಲ ಇದೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ. ಈ ಬಗ್ಗೆ ನಮ್ಮ ಪ್ರತಿನಿಧಿ ಸಂಜೀವ್ ಪಾಂಡ್ರೆ ಅವರು ಪ್ರತ್ಯಕ್ಷ ವರದಿ ನೀಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

2027ರಿಂದ ಉದ್ಯೋಗಪತನ ಶುರು; ಶೇ. 99 ಮಂದಿಗೆ ಕೆಲಸವೇ ಇರಲ್ಲ: ಡಾ. ಯಾಂಪೋಲ್​ಸ್ಕಿ ಭಯಾನಕ ಭವಿಷ್ಯ – Kannada News | AGI’s Job Apocalypse: Expert Predicts Mass Unemployment by 2027. Are YOU Ready?

ನವದೆಹಲಿ, ಫೆಬ್ರುವರಿ 10: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನ (AI Technology) ಬಹಳ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಈ ಟೆಕ್ನಾಲಜಿಯ ಮುಂದುವರಿದ ಭಾಗವಾಗಿರುವ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಅಥವಾ ಎಜಿಐ ಅನ್ನು ಸಾಧಿಸಲು ವಿಜ್ಞಾನಿಗಳು ಇನ್ನಿಲ್ಲದ ಪ್ರಯತ್ನದಲ್ಲಿದ್ದಾರೆ. ಒಂದು ವೇಳೆ ಎಜಿಐ ಸಿದ್ಧವಾಯಿತೆಂದರೆ ಯಂತ್ರದ ಬುದ್ಧಿಮತ್ತೆಯು ಮನುಷ್ಯರನ್ನು ಮೀರಿ ಹೆಚ್ಚುತ್ತದೆ. ಮನುಷ್ಯರ ಬಹುತೇಕ ಎಲ್ಲಾ ಕೆಲಸಗಳನ್ನೂ ಯಂತ್ರಗಳು ಮಾಡಬಲ್ಲುವು. ಆದರೆ, ಇಂಥದ್ದೊಂದು ಸ್ಥಿತಿ ಯಾವಾಗ ಬರುತ್ತೆ? ಅಮೆರಿಕದ ಲೂಯಿಸ್​ವಿಲೆ ಯೂನಿವರ್ಸಿಟಿಯ ಪ್ರೊಫೆಸರ್ ಹಾಗೂ ಕಂಪ್ಯೂಟರ್ ವಿಜ್ಞಾನಿ ಡಾ. ರೋಮನ್ ಯಾಂಪೋಲ್​ಸ್ಕಿ (Dr. Roman Yampolskiy) ಅವರ ಪ್ರಕಾರ ಮುಂದಿನ ವರ್ಷವೇ ಎಜಿಐ ಬಂದುಬಿಡಬಹುದು.

ದಿ ಡೈರಿ ಆಫ್ ಎ ಸಿಇಒ ಪೋಡ್​ಕ್ಯಾಸ್ಟ್​ನಲ್ಲಿ ಮಾತನಾಡುತ್ತಿದ್ದ ಡಾ. ಯಾಂಪೋಲ್​ಸ್ಕಿ ಅವರು, 2027ರಲ್ಲೇ ಆರ್ಟಿಫಿಶಿಯಲ್ ಜನರಲ್ ಇಂಟೆಲಿಜೆನ್ಸ್ ಆಗಮನ ಆಗಬಹುದು. ಎಲ್ಲಾ ಉದ್ಯಮಗಳಲ್ಲೂ ಸಾಲು ಸಾಲಾಗಿ ಉದ್ಯೋಗಗಳು ಇನ್ನಿಲ್ಲದಂತಾಗಬಹುದು ಎನ್ನುವ ಭಯಾನಕ ಸಂಗತಿಯನ್ನು ಈ ಕಂಪ್ಯೂಟರ್ ವಿಜ್ಞಾನಿ ತಿಳಿಸಿದ್ದಾರೆ.

ಇದನ್ನೂ ಓದಿ: ಜಗತ್ತು ವಿನಾಶದ ಅಂಚಿನಲ್ಲಿದ್ಯಾ? ಆಂಥ್ರೋಪಿಕ್ನ ಮೃಣಾಂಕ್ ಶರ್ಮಾ ರಾಜೀನಾಮೆ ಪತ್ರದಲ್ಲಿ ಹೇಳಿದ್ದರ ಅರ್ಥವೇನು?

ಈಗಿರುವ ಸಾಮಾನ್ಯ ಎಐ ಮಾಡಲ್​ಗಳೇ ಈಗಿರುವ ಮನುಷ್ಯರ ಶೇ. 60ರಷ್ಟು ಕೆಲಸಗಳನ್ನು ಮಾಡಬಲ್ಲುವು. ಮನುಷ್ಯರಿಗೆ ಮಾಡಲು ಸಾಧ್ಯವಿರುವ ಪ್ರತಿಯೊಂದು ಕೆಲಸವನ್ನೂ ಎಜಿಐ ಮಾಡಬಲ್ಲುದು. ಎಜಿಐ ಅಡಿ ಇಟ್ಟ ಬಳಿಕ ಐದು ವರ್ಷದಲ್ಲಿ ಶೇ. 99ರಷ್ಟು ಕೆಲಸಗಳೇ ಇಲ್ಲವಾಗುತ್ತವಂತೆ.

ಡಾ. ರೋಮನ್ ಯಾಂಪೋಲ್ಸ್​ಕಿ ಅವರು ಎಐ ಸುರಕ್ಷತೆ ಮತ್ತು ಅಪಾಯದ ಕುರಿತು 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ಬರೆದು ಮುದ್ರಿಸಿದ್ದಾರೆ. ಅವರ ಪ್ರಕಾರ, ಆಟೊಮೇಶನ್ ಸಾಧ್ಯವೇ ಇಲ್ಲದ ವೃತ್ತಿ ಯಾವುದೂ ಇಲ್ಲ. ಈ ಹಿಂದೆ ತಂತ್ರಜ್ಞಾನ ಆವಿಷ್ಕಾರಗಳ ಅಳವಡಿಕೆಗೆ ಮನುಷ್ಯರ ನೆರವು ಬೇಕಾಗಿತ್ತು. ಆದರೆ, ಈಗ ಎಐ ಸ್ವತಂತ್ರವಾಗಿ ಆಪರೇಟ್ ಮಾಡಲು ಸಮರ್ಥವಾಗಿದೆ. ಇದರಿಂದ ನಿರುದ್ಯೋಗ ಸೃಷ್ಟಿಯಾಗುವ ಸಾಧ್ಯತೆ ಬಹಳ ದಟ್ಟವಾಗಿದೆ ಎನ್ನುವುದು ಇವರ ಅನಿಸಿಕೆ.

ಕಂಪ್ಯೂಟರ್ ಆಧಾರಿತ ಉದ್ಯೋಗಗಳು ಮೊದಲು ನಶಿಸುತ್ತವೆ. ಕಾರ್ಮಿಕರ ಕೆಲಸಗಳು ಹೋಗುತ್ತವೆ. 2030ರೊಳಗೆ ಮನುಷ್ಯರ ಬಹುತೇಕ ಎಲ್ಲಾ ದೈಹಿಕ ಕೆಲಸಗಳನ್ನು ಯಂತ್ರಗಳೇ ಮಾಡುತ್ತವೆಯಂತೆ.

ಇದನ್ನೂ ಓದಿ: ಬೆಂಗಳೂರು ಮೂಲದ ಸರ್ವಮ್​ನಿಂದ ಎಐ ಸಂಚಲನ; ಈ ಕಂಪನಿ ಹಿಂದಿನ ಇಬ್ಬರು ವ್ಯಕ್ತಿಗಳು ಯಾರು?

ಈ ಕೆಲ ಕೆಲಸಗಳು ಉಳಿದುಕೊಳ್ಳಬಹುದು

ಡಾ. ರೋಮನ್ ಯಾಂಪೋಲ್​ಸ್ಕಿ ಪ್ರಕಾರ ಎಜಿಐ ಆರ್ಭಟದ ಮಧ್ಯೆ ಮನುಷ್ಯರಿಗೆ ಕೆಲ ಕೆಲಸಗಳು ಉಳಿದುಕೊಳ್ಳಬಹುದು. ಶ್ರೀಮಂತರಿಗೆ ಸಹಾಯಕರು ಬೇಕಾಗಬಹುದು; ವೈಯಕ್ತಿಕ ಕಾಳಜಿ, ಆರೈಕೆ ಬಯಸುವ ಕೆಲಸಗಳು; ಎಐ ಸಿಸ್ಟಂಗಳನ್ನು ಗಮನಿಸಬಲ್ಲ ತಜ್ಞರು; ಕಂಪನಿಗಳಿಗೆ ಎಐ ಅಳವಡಿಕೆ ಮಾಡಲು ನೆರವಾಗುವ ತಜ್ಞರು, ಈ ಕೆಲಸಗಳು ಮಾತ್ರ ಚಾಲನೆಯಲ್ಲಿ ಇರಬಹುದು ಎಂದು ಯಾಂಪೋಲ್​ಸ್ಕಿ ಭಯಾನಕ ಭವಿಷ್ಯ ನುಡಿದಿದ್ದಾರೆ.

ಉದ್ಯೋಗ ಇಲ್ಲವೆಂದರೆ ಮನುಷ್ಯರಿಗೆ ಹಣ ಎಲ್ಲಿಂದ?

ಪ್ರತಿಯೊಂದು ಕೆಲಸವನ್ನೂ ಯಂತ್ರಗಳೇ ಮಾಡುವುದರಿಂದ ಮನುಷ್ಯರಿಗೆ ಕೆಲಸ ಇರಲ್ಲ. ಜೊತೆಗೆ ಉತ್ಪಾದನೆಯೂ ಕೂಡ ಗರಿಷ್ಠ ಮಟ್ಟಕ್ಕೆ ಹೋಗುತ್ತದೆ. ಕಡಿಮೆ ವೆಚ್ಚದಲ್ಲಿ ಗರಿಷ್ಠ ಪ್ರೊಡಕ್ಟಿವಿಟಿ ಇರುತ್ತದೆ. ಇದರ ಫಲ ಎಲ್ಲರಿಗೂ ಸಮಾನವಾಗಿ ಹಂಚಿಕೆಯಾದರೆ ಯಾರಿಗೂ ಕೂಡ ಯಾವುದರ ಕೊರತೆಯಾಗದು. ವಿಶ್ವದಲ್ಲಿ ಯೂನಿವರ್ಸಲ್ ಬೇಸಿಕ್ ಇನ್ಕಮ್​ನಂತಹ ವ್ಯವಸ್ಥೆ ಬರಬಹುದು. ಇಲಾನ್ ಮಸ್ಕ್ ಅವರು ಬಾರಿ ಬಾರಿ ಇದನ್ನೇ ಹೇಳುತ್ತಾ ಬರುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸ್ಮಶಾನ ಸೇರಬೇಕಿದ್ದ ಶವ ಆಸ್ಪತ್ರೆಯ ಶವಗಾರಕ್ಕೆ: 17 ವರ್ಷದ ಬಾಲಕಿ ಸಾವಿನ ಸುತ್ತ ಅನುಮಾನದ ಹುತ್ತ – Kannada News | Hoskote Teen Kalyani’s Suspicious Death: Inter District Body Transfer Raises Police Questions

ಚಿಕ್ಕಬಳ್ಳಾಪುರ, ಫೆ.10: ಜಿಲ್ಲೆಯಲ್ಲಿ 17 ವರ್ಷದ ಬಾಲಕಿ ಕಲ್ಯಾಣಿಯ ನಿಗೂಢ ಸಾವು ಮತ್ತು ಆಕೆಯ ಶವವನ್ನು ಪೊಲೀಸರಿಗೆ ತಿಳಿಸದೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಸಾಗಿಸಿರುವುದು ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಗಿಡ್ನಹಳ್ಳಿ ಗ್ರಾಮದಲ್ಲಿ ದೊಡ್ಡಪ್ಪ-ದೊಡ್ಡಮ್ಮನ ಮನೆಯಲ್ಲಿ ಬೆಳೆದಿದ್ದ ಕಲ್ಯಾಣಿ ಇಂದು ಬೆಳಿಗ್ಗೆ ಗಿಡ್ನಹಳ್ಳಿ ಗ್ರಾಮದ ತೋಟವೊಂದರ ಕೃಷಿ ಹೊಂಡದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಬಾಲಕಿ ಸಾವನ್ನಪ್ಪಿದ ನಂತರ, ಪೋಷಕರು ಮತ್ತು ಸಂಬಂಧಿಕರು ಸ್ಥಳೀಯ ನಂದಗುಡಿ ಪೊಲೀಸರಿಗೆ ಯಾವುದೇ ಮಾಹಿತಿ ನೀಡದೆ ಶವವನ್ನು ನೇರವಾಗಿ ಚಿಕ್ಕಬಳ್ಳಾಪುರ ತಾಲೂಕಿನ ಈತಮಾಕಲಹಳ್ಳಿ ಗ್ರಾಮಕ್ಕೆ ಸಾಗಿಸಿದ್ದಾರೆ.

ಇನ್ನೇನು ಶವ ಸಂಸ್ಕಾರಕ್ಕೆ ಎಲ್ಲಾ ಸಿದ್ಧತೆಗಳು ನಡೆಯುತ್ತಿದ್ದಾಗ, ವಿಷಯ ತಿಳಿದ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಸ್ಕಾರವನ್ನು ನಿಲ್ಲಿಸಿದ್ದಾರೆ. ಸ್ಮಶಾನ ಸೇರಬೇಕಿದ್ದ ಶವವನ್ನು ಪೊಲೀಸರು ವಾಪಸ್ ಆಸ್ಪತ್ರೆಯ ಶವಗಾರಕ್ಕೆ ಸಾಗಿಸಿ, ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಿದ್ದಾರೆ. ಆಕಸ್ಮಿಕವಾಗಿ ಕಾಲು ಜಾರಿ ನೀರಿನ ಹೊಂಡಕ್ಕೆ ಬಿದ್ದಿದ್ದಾಳೆ, ಸಾವಿನ ಹಿಂದೆ ಯಾವುದೇ ಅನುಮಾನವಿಲ್ಲ ಎಂದು ಮೃತಳ ದೊಡ್ಡಮ್ಮ ಮುನಿರತ್ನಮ್ಮ ಸಮಜಾಯಿಷಿ ನೀಡಿದ್ದಾರೆ.

ಸರಿಯಾದ ಮಾಹಿತಿ ಇಲ್ಲದೆ ಇದ್ದಕ್ಕಿದ್ದಂತೆ ಶವ ತಂದಿದ್ದಕ್ಕೆ ಈತಮಾಕಲಹಳ್ಳಿಯ ಕೆಲವು ಸಂಬಂಧಿಕರು ಆಕ್ಷೇಪ ವ್ಯಕ್ತಪಡಿಸಿದ್ದು, ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಅಸಹಜ ಸಾವು ಸಂಭವಿಸಿದಾಗ ಪೊಲೀಸರಿಗೆ ತಿಳಿಸುವುದು ಕಡ್ಡಾಯ. ಈ ಪ್ರಕರಣದಲ್ಲಿ ಪೊಲೀಸರಿಗೆ ತಿಳಿಸದೆ ಶವ ಸಾಗಿಸಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ಇದು ಆಕಸ್ಮಿಕ ಸಾವೋ ಅಥವಾ ಆತ್ಮಹತ್ಯೆಯೋ? ಸಾವಿನ ಹಿಂದೆ ಯಾರದ್ದಾದರೂ ಪ್ರಚೋದನೆ ಇದೆಯೇ? ಪೊಲೀಸ್ ತನಿಖೆಯಿಂದ ತಪ್ಪಿಸಿಕೊಳ್ಳಲು ಶವವನ್ನು ತರಾತುರಿಯಲ್ಲಿ ಸಾಗಿಸಲಾಯಿತೇ? ಎಂಬ ಅನುಮಾನಗಳು ಮೂಡಿದೆ.

ಇದನ್ನೂ ಓದಿ: ಬೆಂಗಳೂರು: ದೊಡ್ಡಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಕನ್ನ ಹಾಕಿದ ಯುವಕ

ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರವಷ್ಟೇ ಕಲ್ಯಾಣಿಯ ಸಾವಿಗೆ ನಿಖರ ಕಾರಣ ತಿಳಿಯಲಿದೆ. ಪ್ರಸ್ತುತ ಚಿಕ್ಕಬಳ್ಳಾಪುರ ಮತ್ತು ನಂದಗುಡಿ ಪೊಲೀಸರು ಜಂಟಿಯಾಗಿ ತನಿಖೆ ನಡೆಸುತ್ತಿದ್ದಾರೆ. ಕಲ್ಯಾಣಿಯ ದೊಡ್ಡಪ್ಪ ಹಾಗೂ ದೊಡ್ಡಮ್ಮ ಮುನಿರತ್ನಮ್ಮ , ತಮಗೆ ಮಕ್ಕಳಿಲ್ಲವೆಂದು, ಮುನಿರತ್ನಮ್ಮ ತಂಗಿ ನರಸಮ್ಮಳ ಎರಡನೆ ಮಗಳನ್ನು ದತ್ತು ಪಡೆದುಕೊಂಡಿದ್ದರು. ಇನ್ನು ವೈದ್ಯರ ವರದಿಯ ಆಧಾರದ ಮೇಲೆ ಪೊಲೀಸರು ತನಿಖೆಯನ್ನು ನಡೆಸಲಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link