ತೋಟದ ಮನೆ ಟಾರ್ಗೆಟ್: ಕಳ್ಳರನ್ನು ಕರೆಸಿ ಕಳ್ಳತನ ಮಾಡಿಸಿದ ಕಾನ್ಸ್‌ಟೇಬಲ್; ಆರು ಜನರ ಬಂಧನ – Kannada News | Haveri: Six people, including a constable arrested for theft
ಹಾವೇರಿ, ಫೆಬ್ರವರಿ 07: ಮದುವೆಯಾಗಿದ್ದ ಊರಿನಲ್ಲಿ ಕಳ್ಳತನ (Theft) ಮಾಡಿಸಿದ್ದ ಕಾನ್ಸ್‌ಟೇಬಲ್ ಸೇರಿದಂತೆ ಆರು ಜನ ಕಳ್ಳರನ್ನು ಜಿಲ್ಲೆಯ ಹಿರೇಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹಿರೇಕೇರೂರು ತಾಲೂಕಿನ ಹಳೆ ನಿಡು ನೇಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. ಬಾಗಲಕೋಟೆ ಮೂಲದ ರಾಘವೇಂದ್ರ, ವಿಜಯ, ಮಲ್ಲೇಶ, ಕಾಂತೇಶ್, ನಾಗೇಶ್ ಮತ್ತು ಹಿರೇಕೆರೂರು ಪೊಲೀಸ್ ಠಾಣೆಯ ಕಾರು ಚಾಲಕ ಪ್ರದೀಪ್ ನಾಯಕ್ ಬಂಧಿತರು. ನಡೆದಿದ್ದೇನು? ಜನವರಿ 19ರಂದು ರಾತ್ರಿ ಹಿರೇಕೆರೂರು ತಾಲೂಕಿನ ಹಳೇ ನಿಡುನೇಗಿಲು ಗ್ರಾಮದ ಮಲ್ಲನಗೌಡ ಈಶ್ವರಗೌಡ ಪಾಟೀಲ್…