Category Archives: Blog

Your blog category

ತೋಟದ ಮನೆ ಟಾರ್ಗೆಟ್: ಕಳ್ಳರನ್ನು ಕರೆಸಿ ಕಳ್ಳತನ ಮಾಡಿಸಿದ ಕಾನ್ಸ್‌ಟೇಬಲ್‌; ಆರು ಜನರ ಬಂಧನ – Kannada News | Haveri: Six people, including a constable arrested for theft

ಹಾವೇರಿ, ಫೆಬ್ರವರಿ 07: ಮದುವೆಯಾಗಿದ್ದ ಊರಿನಲ್ಲಿ ಕಳ್ಳತನ (Theft) ಮಾಡಿಸಿದ್ದ ಕಾನ್ಸ್‌ಟೇಬಲ್​ ಸೇರಿದಂತೆ ಆರು ಜನ ಕಳ್ಳರನ್ನು ಜಿಲ್ಲೆಯ ಹಿರೇಕೆರೂರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ಹಿರೇಕೇರೂರು ತಾಲೂಕಿನ ಹಳೆ ನಿಡು ನೇಗಿಲು ಗ್ರಾಮದಲ್ಲಿ ಘಟನೆ ನಡೆದಿದೆ. ಬಾಗಲಕೋಟೆ ಮೂಲದ ರಾಘವೇಂದ್ರ, ವಿಜಯ, ಮಲ್ಲೇಶ, ಕಾಂತೇಶ್, ನಾಗೇಶ್ ಮತ್ತು ಹಿರೇಕೆರೂರು ಪೊಲೀಸ್ ಠಾಣೆಯ ಕಾರು ಚಾಲಕ ಪ್ರದೀಪ್ ನಾಯಕ್ ಬಂಧಿತರು.

ನಡೆದಿದ್ದೇನು? 

ಜನವರಿ 19ರಂದು ರಾತ್ರಿ ಹಿರೇಕೆರೂರು ತಾಲೂಕಿನ ಹಳೇ ನಿಡುನೇಗಿಲು ಗ್ರಾಮದ ಮಲ್ಲನಗೌಡ ಈಶ್ವರಗೌಡ ಪಾಟೀಲ್ ಅವರ ತೋಟದ ಮನೆಯಲ್ಲಿ ಕಳ್ಳತನ ನಡೆದಿತ್ತು. ಮಲ್ಲನಗೌಡ ಇತ್ತೀಚೆಗೆ ಹೊಸ ಮನೆ ನಿರ್ಮಾಣಕ್ಕೆಂದು ದುಡ್ಡು ತಂದಿಟ್ಟಿದ್ದರು. ಕಾನ್ಸ್‌ಟೇಬಲ್‌ ಪ್ರದೀಪ್ ನಾಯಕ್​​ ಹಾಕಿ ಕೊಟ್ಟಿದ್ದ ಸ್ಕೆಚ್​​ನಂತೆ  ರಾತ್ರಿ ಸುಮಾರು 11.30ರ ವೇಳೆಗೆ ತೋಟದ ಮನೆಯ ಹಿಂಬದಿ ಬಾಗಿಲು ಮುರಿದು ಒಳನುಗ್ಗಿದ್ದ ಕಳ್ಳರು, ಸುಮಾರು 90 ಗ್ರಾಂ ಚಿನ್ನಾಭರಣ, ಅರ್ಧ ಕೆ.ಜಿ ಬೆಳ್ಳಿ ಮತ್ತು ಸುಮಾರು 5 ಲಕ್ಷ ರೂ. ನಗದು ಕದ್ದು ಪರಾರಿಯಾಗಿದ್ದರು.

ಇದನ್ನೂ ಓದಿ: ಮಗು ಹುಟ್ಟಿ ಏಳೇ ದಿನಕ್ಕೆ ಮಾರಾಟಕ್ಕೆ ಮುಂದಾದ ಹೆತ್ತವರು: ದಂಪತಿ ಸೇರಿ ಐವರ ಬಂಧನ

ಹಳೇ ನಿಡುನೇಗಿಲು ಗ್ರಾಮದ ಅಳಿಯ ಕಾನ್ಸ್‌ಟೇಬಲ್ ಪ್ರದೀಪ್ ನಾಯಕ್, ನೈಟ್‌ ಬೀಟ್‌ಗೆ ತೆರಳುವ ನೆಪದಲ್ಲಿ ಸ್ಥಳದ ಮಾಹಿತಿ ಸಂಗ್ರಹಿಸಿ, ಕಳ್ಳರನ್ನು ಕರೆಸಿ ಕೃತ್ಯ ನಡೆಸಿಸಿರುವುದು ಪೊಲೀಸ್​ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಕಾನ್ಸ್‌ಟೇಬಲ್ ಪ್ರದೀಪ್ ನಾಯಕ್ ಸೇರಿದಂತೆ ಆರು ಜನ ಆರೋಪಿಗಳನ್ನು ಬಂಧಿಸಿರುವ ಹಿರೇಕೆರೂರು ಠಾಣೆ ಪೊಲೀಸರು ತನಿಖೆ ನಡೆಸಿದ್ದಾರೆ.

ತಿರುಪತಿಗೆ ತೆರಳಿದ್ದ ವೇಳೆ ಕೈಚಳಕ ತೋರಿಸಿದ ಕಳ್ಳರು

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿ ಮನೆ ಬೀಗ ಒಡೆದು 30 ಗ್ರಾಂ ಚಿನ್ನ , 450 ಗ್ರಾಂ ಬೆಳ್ಳಿ ಸೇರಿದಂತೆ 46 ಸಾವಿರ ರೂ ಹಣವನ್ನು ಕಳ್ಳರು ಕಳತನ ಮಾಡಿರುವಂತಹ ಘಟನೆ ನಡೆದಿದೆ. ಗೌರಿಬಿದನೂರು ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಮಹಿಳೆಯರೇ ಡ್ರಾಪ್ ಕೇಳುವ ಮುನ್ನ ಹುಷಾರ್: ಸಹಾಯ ಮಾಡುವ ನೆಪದಲ್ಲಿ ಹೀಗಾ ಮಾಡೋದು?

ಡಿಆರ್​ಎಂ ಬಡಾವಣೆಯಲ್ಲಿ ಹರೀಶ್​ ಮನೆಯಲ್ಲಿ ಕಳ್ಳತನ ನಡೆದಿದೆ. ಕುಟುಂಬದವರೆಲ್ಲಾ ತಿರುಪತಿಗೆ ಹೋಗಿದ್ದಾಗ ಕಳ್ಳರು ಕೈಚಳಕ ತೋರಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಜೊತೆಗಿದ್ದವರೇ ಮೋಸ ಮಾಡಿದರು, ಆ ನಟನ ಮಾತು ಕೇಳಲಿಲ್ಲ: ಅರ್ಜುನ್ ಸರ್ಜಾ – Kannada News | Arjun Sarja emotional about financial loss and Sobhan Babu advice

ಈಗ ಎಲ್ಲರೂ ಆಕ್ಷನ್ ಕಿಂಗ್​​ಗಳೇ ಆದರೆ ಕೆಲ ದಶಕದ ಮುಂಚೆ ನಿಜವಾದ ‘ಆಕ್ಷನ್ ಕಿಂಗ್’ ಎಂದರೆ ಅರ್ಜುನ್ ಸರ್ಜಾ (Arjun Sarja) ಮಾತ್ರವೇ. ಚಿತ್ರರಂಗಕ್ಕೆ ಆಕ್ಷನ್​​ನಲ್ಲಿ ಭಿನ್ನತೆ ತಂದವರೇ ಅರ್ಜುನ್ ಸರ್ಜಾ. ತಮ್ಮ ಅದ್ಭುತ ಮೈಕಟ್ಟು, ಕರಾಟೆ ಪಟ್ಟುಗಳು ಜೊತೆಗೆ ಅದ್ಭುತ ನಟನೆಯ ಮೂಲಕ ಅರ್ಜುನ್ ಸರ್ಜಾ ಲಕ್ಷಾಂತರ ಪ್ರೇಕ್ಷಕರನ್ನು ಸೆಳೆದಿದ್ದರು. ಬಾಲ ನಟನಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅರ್ಜುನ್ ಸರ್ಜಾ ತಮ್ಮ 46 ವರ್ಷಗಳ ವೃತ್ತಿ ಪಯಣದಲ್ಲಿ ಹಲವಾರು ರೀತಿಯ ಪಾತ್ರಗಳಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಅರ್ಜುನ್ ಸರ್ಜಾ, ವೈಯಕ್ತಿಕ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ನಾಲ್ಕು ದಶಕಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಅರ್ಜುನ್ ಸರ್ಜಾ, ಸುಮಾರು 180ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ತಮ್ಮ 46 ವರ್ಷಗಳ ಸುದೀರ್ಘ ವೃತ್ತಿಜೀವನದಲ್ಲಿ ಅನೇಕರು ತಮಗೆ ಹಲವು ರೀತಿಯಾಗಿ ವಂಚಿಸಿದ್ದಾರೆ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ. ‘ನನ್ನ ಸುತ್ತಮುತ್ತಲಿದ್ದವರೇ ನನ್ನನ್ನು ಮೋಸಗೊಳಿಸಿದರು. ಆ ಸಮಯದಲ್ಲಿ ನನಗೆ ಯಾವುದರ ಬಗ್ಗೆಯೂ ಅರಿವಿಲ್ಲದ ವಯಸ್ಸಾಗಿತ್ತು. ಬಹಳಷ್ಟು ಜನರು ನನ್ನನ್ನು ತಪ್ಪು ದಾರಿಗೆ ಎಳೆದರು’ ಎಂದು ಅವರು ಹೇಳಿಕೊಂಡಿದ್ದಾರೆ.

ಇದನ್ನೂ ಓದಿ:ನಿಂದಿಸಿದ ಶ್ರೀನಿವಾಸ್​​ಗೆ ಪ್ರತ್ಯುತ್ತರ ಕೊಟ್ಟ ನಿರ್ದೇಶಕ ಎಪಿ ಅರ್ಜುನ್: ವಿಡಿಯೋ

‘ಒಂದು ಸಮಯದಲ್ಲಿ ಬಹಳ ಸಂಪಾದನೆ ಮಾಡುತ್ತಿದ್ದೆ, ಸಂಪಾದನೆಯ ಸಮಯದಲ್ಲಿ ಸರಿಯಾದ ಕಡೆ ಹೂಡಿಕೆ ಮಾಡುವ ಬಗ್ಗೆ ಹಿರಿಯ ನಟ ಶೋಭನ್ ಬಾಬು ಅವರು ಹಲವಾರು ಬಾರಿ ಕಿವಿಮಾತು ಹೇಳಿದ್ದರು’ ಎಂಬುದನ್ನು ಅರ್ಜುನ್ ಸರ್ಜಾ ನೆನಪಿಸಿಕೊಂಡಿದ್ದಾರೆ. ‘ಹಣವನ್ನು ವ್ಯರ್ಥ ಮಾಡಬೇಡ, ಜಾಗರೂಕತೆಯಿಂದ ಹೂಡಿಕೆ ಮಾಡು ಎಂದು ಶೋಭನ್ ಬಾಬು ಅವರು ಆಗಾಗ್ಗೆ ಎಚ್ಚರಿಸುತ್ತಿದ್ದರು. ಆದರೆ ಅಂದು ಅವರ ಮಾತುಗಳು ನನಗೆ ಅರ್ಥವಾಗಿರಲಿಲ್ಲ. ಅವರ ಮಾತನ್ನು ಕೇಳಿದ್ದಿದ್ದರೆ ಇಂದು ನನ್ನ ಪರಿಸ್ಥಿತಿ ಇನ್ನೂ ಉತ್ತಮವಾಗಿರುತ್ತಿತ್ತು ಮತ್ತು ನನ್ನ ಮಕ್ಕಳಿಗಾಗಿ ದೊಡ್ಡ ಆಸ್ತಿಯನ್ನು ಉಳಿಸಬಹುದಿತ್ತು’ ಎಂದು ಅವರು ಪಶ್ಚಾತ್ತಾಪ ಪಟ್ಟಿದ್ದಾರೆ.

ಮಧುಗಿರಿಯಲ್ಲಿ ಜನಿಸಿದ ಅರ್ಜುನ್ ಸರ್ಜಾ, ದಕ್ಷಿಣ ಭಾರತದ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ನಟನೆಯ ಜೊತೆಗೆ ನಿರ್ದೇಶನದಲ್ಲೂ ತೊಡಗಿಸಿಕೊಂಡಿರುವ ಇವರು, ಪ್ರಸ್ತುತ ‘ಸೀತಾ ಪಯಣ’ ಎಂಬ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮೂಲಕ ಅವರ ಪುತ್ರಿ ಐಶ್ವರ್ಯ ಸರ್ಜಾ ನಾಯಕಿಯಾಗಿ ತೆಲುಗು ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ. ಈ ಸಿನಿಮಾ ಫೆಬ್ರವರಿ 14 ರಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ನಿರ್ಮಾಣವನ್ನು ಸಹ ಅರ್ಜುನ್ ಸರ್ಜಾ ಅವರೇ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮಧುಮೇಹ, ಅಧಿಕ ರಕ್ತದೊತ್ತಡ ಇರುವವರಿಗೆ ಶ್ರವಣದೋಷ ಉಂಟಾಗುತ್ತದೆಯೇ? ವೈದ್ಯರು ಹೇಳುವುದೇನು? – Kannada News | Diabetes, High BP & Hearing Loss: The Link

ಮಧುಮೇಹ (Diabetes) ಅಥವಾ ಅಧಿಕ ರಕ್ತದೊತ್ತಡ (High BP) ಇದ್ದರೆ, ಹೃದಯ, ಮೂತ್ರಪಿಂಡ ಮತ್ತು ಕಣ್ಣಿಗೆ ಸಂಬಂಧ ಪಟ್ಟ ಕಾಯಿಲೆಗಳು ಬರುವ ಅಪಾಯವಿರುತ್ತದೆ. ಇದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಇದು ಹಿಯರಿಂಗ್ ಲಾಸ್ ಗೆ ಕಾರಣವಾಗುತ್ತದೆಯೇ ಅಥವಾ ಶ್ರವಣ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ ಎಂಬುದು ಹಲವರಿಗಿರುವ ಗೊಂದಲ. ಅದರಲ್ಲಿಯೂ ಈ ರೀತಿಯ ಸಮಸ್ಯೆ ವಯಸ್ಸಾದ ನಂತರ ಹೆಚ್ಚಾಗಿ ಕಂಡುಬರುತ್ತದೆ. ಆದರೆ ಇದು ನಿಜವೇ ಎಂಬ ಅನುಮಾನ ಮೂಡುತ್ತದೆ. ಅದಕ್ಕಾಗಿಯೇ ದೆಹಲಿಯ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜಿನ ಇಎನ್‌ಟಿ ವಿಭಾಗದ ಮುಖ್ಯಸ್ಥರಾದ ಪ್ರೊಫೆಸರ್ ಡಾ. ರವಿ ಮೆಹರ್ ಅವರು ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದ್ದಾರೆ.

ಈ ಕಾಯಿಲೆಗಳು ಶ್ರವಣ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆಯೇ?

ಈ ಎರಡು ಕಾಯಿಲೆಗಳು ಅಂದರೆ, ಮಧುಮೇಹ ಅಥವಾ ಅಧಿಕ ರಕ್ತದೊತ್ತಡ ಕೆಲವು ಸಂದರ್ಭಗಳಲ್ಲಿ ಶ್ರವಣ ಸಾಮರ್ಥ್ಯಕ್ಕೆ ಹಾನಿ ಮಾಡುತ್ತದೆ. ಈ ಕಾಯಿಲೆಗಳಿಂದ ಬಳಲುತ್ತಿರುವವರು ಶಬ್ದಗಳನ್ನು ಸ್ಪಷ್ಟವಾಗಿ ಕೇಳಲು ಸಾಧ್ಯವಾಗುವುದಿಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ದೀರ್ಘಕಾಲದ ವರೆಗೆ ಸಕ್ಕರೆ ಮಟ್ಟ ಹೆಚ್ಚಿರುವ ಮಧುಮೇಹ ರೋಗಿಗಳ ದೇಹದಲ್ಲಿ ನರಗಳಿಗೆ ಹಾನಿಯಾಗುತ್ತದೆ. ಜೊತೆಗೆ ಕಿವಿಯೊಳಗಿನ ಶ್ರವಣೇಂದ್ರಿಯ ನರಗಳ ಮೇಲೂ ಪರಿಣಾಮ ಬೀರಬಹುದು. ಹೆಚ್ಚಿನ ಸಕ್ಕರೆ ಮಟ್ಟವು ಕೂಡ ಕಿವಿಯಲ್ಲಿರುವ ನರಗಳಲ್ಲಿ ಉರಿಯೂತವನ್ನು ಉಂಟುಮಾಡಬಹುದು. ಆದರೆ ಈ ಸಮಸ್ಯೆ ಪ್ರತಿಯೊಬ್ಬ ಮಧುಮೇಹ ರೋಗಿಯಲ್ಲೂ ಕಂಡುಬರುವುದಿಲ್ಲ. ಇದು ಮುಖ್ಯವಾಗಿ ವಯಸ್ಸಾದವರಲ್ಲಿ ಮತ್ತು ದೀರ್ಘಕಾಲದವರೆಗೆ ಹೆಚ್ಚಿನ ಸಕ್ಕರೆ ಮಟ್ಟ ಹೊಂದಿರುವವರಲ್ಲಿ ಕಂಡುಬರುತ್ತದೆ.

ಅಧಿಕ ರಕ್ತದೊತ್ತಡವು ಕಿವಿಗಳಿಗೆ ಹಾನಿಯನ್ನುಂಟುಮಾಡುತ್ತದೆಯೇ?

ಸಾಮಾನ್ಯವಾಗಿ ಅಧಿಕ ರಕ್ತದೊತ್ತಡದಲ್ಲಿ ಅಪಾಯ ಕಡಿಮೆ ಇರುತ್ತದೆ, ಆದರೆ ರಕ್ತದೊತ್ತಡವನ್ನು ನಿಯಂತ್ರಿಸದಿದ್ದರೆ ಅಥವಾ ಇದ್ದಕ್ಕಿದ್ದಂತೆ ಏರಿದರೆ, ಅದು ಶ್ರವಣ ನಷ್ಟಕ್ಕೆ ಕಾರಣವಾಗಬಹುದು. ಇದನ್ನು ಹಠಾತ್ ಶ್ರವಣ ನಷ್ಟ ಎಂದು ಕರೆಯಲಾಗುತ್ತದೆ, ಆದರೂ ಅಂತಹ ಪ್ರಕರಣಗಳು ಕಂಡುಬರುವುದು ಬಹಳ ಅಪರೂಪ. ಆದರೆ ಒಬ್ಬ ವ್ಯಕ್ತಿಗೆ ಮಧುಮೇಹ ಮತ್ತು ಅಧಿಕ ರಕ್ತದೊತ್ತಡ ಎರಡು ಕೂಡ ಇದ್ದಲ್ಲಿ ಅಪಾಯ ಮತ್ತಷ್ಟು ಹೆಚ್ಚಾಗುತ್ತದೆ.

ಇದನ್ನೂ ಓದಿ: ಚರ್ಮದ ಮೇಲೆ ಕಾಣಿಸಿಕೊಳ್ಳುವ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ, ಅವು ಮಧುಮೇಹ ಬರುವ ಮುನ್ಸೂಚನೆಯಾಗಿರಬಹುದು

ಯಾವ ಲಕ್ಷಣಗಳನ್ನು ನಿರ್ಲಕ್ಷಿಸಬಾರದು?

  • ಸಂಭಾಷಣೆಯ ಸಮಯದಲ್ಲಿ ತೊಂದರೆ
  • ಫೋನ್‌ನಲ್ಲಿ ಸ್ಪಷ್ಟವಾಗಿ ಕೇಳಲು ಸಾಧ್ಯವಾಗುವುದಿಲ್ಲ
  • ಟಿನ್ನಿಟಸ್ (ಕಿವಿಗಳಲ್ಲಿ ರಿಂಗಣಿಸುವುದು)
  • ಸ್ಪಷ್ಟವಾಗಿ ಕೇಳಲು ಫೋನ್ ವಾಲ್ಯೂಮ್ ಹೆಚ್ಚಿಸುವ ಅಗತ್ಯವಿದ್ದರೆ

ಈ ಎಲ್ಲಾ ಸಮಸ್ಯೆಗಳನ್ನು ನೀವು ಅನುಭವಿಸುತ್ತಿದ್ದರೆ, ಇಎನ್‌ಟಿ ವೈದ್ಯರನ್ನು ಭೇಟಿ ಮಾಡುವುದು ಬಹಳ ಮುಖ್ಯ. ನಿಮ್ಮ ಶ್ರವಣ ಸಾಮರ್ಥ್ಯ ಕಡಿಮೆಯಾಗುತ್ತಿದೆಯೇ ಎಂದು ಕಂಡುಹಿಡಿಯಲು ವೈದ್ಯರು ನಿಮ್ಮ ಕಿವಿಗಳನ್ನು ಪರೀಕ್ಷಿಸಬಹುದು. ಈ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಗಮನ ನೀಡಿದರೆ, ಹಾನಿಯನ್ನು ತಡೆಯಬಹುದು. ಆರಂಭಿಕ ಹಂತಗಳಲ್ಲಿ, ಔಷಧಿ ಮತ್ತು ಚಿಕಿತ್ಸೆಯಿಂದ ಸುಧಾರಣೆ ಕಂಡುಬರಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದೇ ಪದೇ ಆತ್ಮಹತ್ಯೆ ಯತ್ನಿಸಿದ 8ನೇ ತರಗತಿ ವಿದ್ಯಾರ್ಥಿನಿ: ಅಸಲಿ ಕಾರಣ ಇಲ್ಲಿದೆ – Kannada News | Child Protection Lapses: Karwar Children’s Home Fails Girl, Exposing Systemic Failures

ಕಾರವಾರ, ಫೆ.7: ಕಾರವಾರದ ಸರ್ಕಾರಿ ಬಾಲಮಂದಿರದಲ್ಲಿ ಬಾಲಕಿಯೊಬ್ಬಳು ಆತ್ಮಹತ್ಯೆಗೆ ಪ್ರಯತ್ನಿಸಿರುವ ಘಟನೆಯೊಂದು ನಡೆದಿದೆ. ಘೋರ ದೌರ್ಜನ್ಯಕ್ಕೆ ಒಳಗಾಗಿ ಈಗಾಗಲೇ ನೊಂದಿದ್ದ ಬಾಲಕಿಗೆ ರಕ್ಷಣೆ ಸಿಗಬೇಕಾದ ಜಾಗದಲ್ಲಿಯೇ ಇಂತಹ ನಿರ್ಧಾರ ಮಾಡಿರುವುದು ವ್ಯವಸ್ಥೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ. ಈ ಬಾಲಕಿ ಮೂಲತಃ ಹಳಿಯಾಳ ತಾಲೂಕಿನವಳು. ಕಳೆದ ಆಗಸ್ಟ್‌ನಲ್ಲಿ ಪೋಕ್ಸೋ ಪ್ರಕರಣವೊಂದರ ಅಡಿಯಲ್ಲಿ ಈಕೆಯನ್ನು ರಕ್ಷಿಸಿ ಕಾರವಾರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸರ್ಕಾರಿ ಬಾಲಮಂದಿರಕ್ಕೆ ದಾಖಲಿಸಲಾಗಿತ್ತು.

ಈಕೆ ಕಾರವಾರದ ಸರ್ಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದಳು. ಆದರೆ, ಮಾನಸಿಕ ಒತ್ತಡದ ಕಾರಣ ಕಳೆದ ಎರಡು ವಾರಗಳಿಂದ ಶಾಲೆಗೆ ಹೋಗದೆ ಬಾಲಮಂದಿರದಲ್ಲಿಯೇ ಉಳಿದುಕೊಂಡಿದ್ದಳು. ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ, ಯಾರೂ ಇಲ್ಲದ ಸಮಯ ನೋಡಿ ಮೇಲಿನ ಕೋಣೆಗೆ ತೆರಳಿ ನೇಣು ಹಾಕಿಕೊಳ್ಳಲು ಯತ್ನಿಸಿದ್ದಾಳೆ. ತಕ್ಷಣ ಗಮನಿಸಿದ ಸಿಬ್ಬಂದಿ ಆಕೆಯನ್ನು ರಕ್ಷಿಸಿ ಕಾರವಾರದ ಕ್ರಿಮ್ಸ್ (KRIMS) ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದೀಗ ಆಕೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಬಾಲಕಿ ಮಾನಸಿಕವಾಗಿ ಕುಗ್ಗಿದ್ದಾಳೆ ಎಂದು ತಿಳಿದಿದ್ದರೂ ಮತ್ತು ಆಕೆಯನ್ನು ಈ ಹಿಂದೆಯೇ ನಿಮಾನ್ಸ್ (NIMHANS) ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರೂ, ಆಕೆಗೆ ನಿರಂತರವಾಗಿ ನೀಡಬೇಕಾದ ‘ಕೌನ್ಸೆಲಿಂಗ್’ ಹಾಗೂ ಆಕೆ ನೀಡಬೇಕಿದ್ದ ರಕ್ಷಣೆಯಲ್ಲಿ ಲೋಪವಾಗಿರುವುದು ಕಂಡುಬರುತ್ತಿದೆ. ಬಾಲಮಂದಿರದಲ್ಲಿ 20 ಬಾಲಕಿಯರಿಗೆ 10 ಮಂದಿ ಸಿಬ್ಬಂದಿ ಇದ್ದಾರೆ. ಇಷ್ಟು ದೊಡ್ಡ ಸಂಖ್ಯೆಯ ಸಿಬ್ಬಂದಿ ಇದ್ದರೂ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪದೇ ಪದೇ ಬೆದರಿಕೆ ಹಾಕುತ್ತಿದ್ದ ಬಾಲಕಿ ಒಬ್ಬಂಟಿಯಾಗಿ ಬಿಟ್ಟಿರುವುದೇ ತಪ್ಪು. ವಿವಿಧ ಪ್ರಕರಣಗಳಲ್ಲಿ ಸಂತ್ರಸ್ತರಾಗಿ ಬರುವ ಮಕ್ಕಳಿಗೆ ಕೇವಲ ಆಶ್ರಯ ನೀಡಿದರೆ ಸಾಲದು, ಅವರಿಗೆ ಮಾನಸಿಕ ಧೈರ್ಯ ತುಂಬುವ ತಜ್ಞರ ಅವಶ್ಯಕತೆ ಇಂತಹ ಕೇಂದ್ರಗಳಲ್ಲಿ ಹೆಚ್ಚಾಗಿರುತ್ತದೆ.

ಇದನ್ನೂ ಓದಿ: 6 ವರ್ಷದಿಂದ ಒಂದೇ ರೂಮಿನಲ್ಲಿದ್ದು ಈಗ ನಾನು ಬೇಡ ಅಂತಿದ್ದಾಳೆ: ನ್ಯಾಯಕ್ಕಾಗಿ ಪಟ್ಟು ಹಿಡಿದ ಪ್ರಿಯಕರ

ಇದೀಗ ಬಾಲಕಿಯ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಆದರೆ, ಈ ಘಟನೆಯ ನಂತರ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು ಬಾಲಮಂದಿರದ ಭದ್ರತೆ ಮತ್ತು ಮಕ್ಕಳ ಮಾನಸಿಕ ಸ್ವಾಸ್ಥ್ಯದ ಬಗ್ಗೆ ಹೆಚ್ಚಿನ ಕ್ರಮ ಕೈಗೊಳ್ಳಬೇಕಿದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯ ಮೂಲಗಳ ಪ್ರಕಾರ, ಘಟನೆಯ ಬಗ್ಗೆ ಸಮಗ್ರ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮುಖ್ಯವಾಗಿ, 10 ಮಂದಿ ಸಿಬ್ಬಂದಿ ಇರುವಾಗ ಈ ಲೋಪ ಹೇಗೆ ಸಂಭವಿಸಿತು ಎಂಬ ಬಗ್ಗೆ ಆಂತರಿಕ ತನಿಖೆ ನಡೆಯುತ್ತಿದೆ. ಘಟನೆಯ ಸಮಯದಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಯನ್ನು CWC ವಿಚಾರಣೆ ನಡೆಸುತ್ತಿದೆ. ಬಾಲಕಿ ಈ ಹಿಂದೆಯೇ ಆತ್ಮಹತ್ಯೆಯ ಬೆದರಿಕೆ ಹಾಕಿದ್ದರೂ ಆಕೆಯ ಮೇಲೆ ವಿಶೇಷ ನಿಗಾ ವಹಿಸದಿದ್ದಕ್ಕೆ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಲಾಗುವುದು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup: ಮೊದಲ ದಿನವೇ ಹ್ಯಾಟ್ರಿಕ್ ವಿಕೆಟ್; ವಿಂಡೀಸ್​ಗೆ ಜಯ – Kannada News | T20 World Cup 2026: Romario Shepherd’s Historic Hat Trick Powers West Indies Win

2026 ರ ಟಿ20 ವಿಶ್ವಕಪ್​ ಮೊದಲ ದಿನವೇ ಕೆಲವು ಅಚ್ಚರಿಯ ಘಟನೆಗಳಿಗೆ ಸಾಕ್ಷಿಯಾಗಿದೆ. ದಿನದ ಮೊದಲ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ನೆದರ್ಲ್ಯಾಂಡ್ಸ್ ಸೋಲಿನ ಭಯ ಹುಟ್ಟಿಸಿತು. ಆದರೆ ಕೊನೆಯಲ್ಲಿ ಪಾಕಿಸ್ತಾನಕ್ಕೆ ಗೆಲುವು ಸಿಕ್ಕಿತು. ಆ ನಂತರ ನಡೆದ ಎರಡನೇ ಪಂದ್ಯದಲ್ಲಿ ಸ್ಕಾಟ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಅಮೋಘ ಪ್ರದರ್ಶನ ನೀಡಿತು. ಇದೇ ಪಂದ್ಯದಲ್ಲಿ ಆಲ್‌ರೌಂಡರ್ ರೊಮಾರಿಯೊ ಶೆಫರ್ಡ್​ ಹ್ಯಾಟ್ರಿಕ್ ವಿಕೆಟ್ ಪಡೆಯುವುದರ ಜೊತೆಗೆ ಒಂದೇ ಓವರ್​ನಲ್ಲಿ 4 ವಿಕೆಟ್ ಉರುಳಿಸಿದರು. ಇದರ ಫಲವಾಗಿ ವಿಂಡೀಸ್ ತಂಡ 35 ರನ್​ಗಳ ಸುಲಭ ಜಯ ದಾಖಲಿಸಿತು.

ಇನ್ನು ಈ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಉರುಳಿಸಿದ ಶೆಫರ್ಡ್​, 2026 ರ ಟಿ20 ವಿಶ್ವಕಪ್‌ನಲ್ಲಿ ಹ್ಯಾಟ್ರಿಕ್ ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಹಾಗೆಯೇ ಟಿ20 ವಿಶ್ವಕಪ್‌ನಲ್ಲಿ ಈ ಸಾಧನೆ ಮಾಡಿದ ವೆಸ್ಟ್ ಇಂಡೀಸ್‌ನ ಮೊದಲ ಬೌಲರ್ ಎಂಬ ದಾಖಲೆಯನ್ನು ಬರೆದರು. ಇದು ಟಿ20 ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಶೆಫರ್ಡ್ ಅವರ ಎರಡನೇ ಹ್ಯಾಟ್ರಿಕ್ ಆಗಿದ್ದು, ಇದಕ್ಕೂ ಮೊದಲು, ರೊಮಾರಿಯೊ ಶೆಫರ್ಡ್ ಬಾಂಗ್ಲಾದೇಶ ವಿರುದ್ಧ ಹ್ಯಾಟ್ರಿಕ್ ಪಡೆದಿದ್ದರು.

ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಪಂದ್ಯದಲ್ಲಿ ಶೆಫರ್ಡ್​ ಹ್ಯಾಟ್ರಿಕ್ ಜೊತೆಗೆ ಒಟ್ಟು 5 ವಿಕೆಟ್‌ಗಳನ್ನು ಕಬಳಿಸಿ ಸ್ಕಾಟ್ಲೆಂಡ್ ತಂಡವನ್ನು ಮಣಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. 17 ನೇ ಓವರ್‌ನಲ್ಲಿ ಸತತ 3 ಎಸೆತಗಳಲ್ಲಿ ಮ್ಯಾಥ್ಯೂ ಕ್ರಾಸ್, ಮೈಕೆಲ್ ಲೀಸ್ಕ್ ಮತ್ತು ಆಲಿವರ್ ಡೇವಿಡ್ಸನ್ ಅವರನ್ನು ಔಟ್ ಮಾಡುವ ಮೂಲಕ ರೊಮಾರಿಯೊ ಶೆಫರ್ಡ್ 2026 ರ ಟಿ20 ವಿಶ್ವಕಪ್‌ನ ಮೊದಲ ಹ್ಯಾಟ್ರಿಕ್ ಪೂರ್ಣಗೊಳಿಸಿದರು. ಅದೇ ಓವರ್‌ನ ಕೊನೆಯ ಎಸೆತದಲ್ಲಿ ಅವರು ವಿಕೆಟ್ ಪಡೆದರು.

ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 182 ರನ್ ಗಳಿಸಿತು. ತಂಡದ ಪರ ಶಿಮ್ರಾನ್ ಹೆಟ್ಮೆಯರ್ 36 ಎಸೆತಗಳಲ್ಲಿ 2 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಾಯದಿಂದ 64 ರನ್ ಗಳಿಸಿದರೆ, ಪೊವೆಲ್ ಮತ್ತು ರುದರ್ಫೋರ್ಡ್ ಕೂಡ ಕ್ರಮವಾಗಿ 24 ಮತ್ತು 26 ರನ್ ಗಳಿಸಿದರು. 183 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸ್ಕಾಟ್ಲೆಂಡ್ ಒಂದು ಹಂತದಲ್ಲಿ 3 ವಿಕೆಟ್‌ಗಳಿಗೆ 115 ರನ್‌ಗಳಿಸಿತ್ತು. ಅದಾದ ನಂತರ, ಸ್ಕಾಟ್ಲೆಂಡ್ ನಿಯಮಿತ ಅಂತರದಲ್ಲಿ ವಿಕೆಟ್ ಕಳೆದುಕೊಳ್ಳಲು ಪ್ರಾರಂಭಿಸಿತು. ಹೀಗಾಗಿ ತಂಡ 19ನೇ ಓವರ್​ನಲ್ಲಿ 147 ರನ್​ಗಳಿಗೆ ಆಲೌಟ್ ಆಯಿತು.

Source link

ಮಲೇಷ್ಯಾದ 800 ಕಲಾವಿದರಿಂದ ಪ್ರಧಾನಿ ಮೋದಿಗೆ ಶಾಸ್ತ್ರೀಯ ನೃತ್ಯದ ಸ್ವಾಗತ; ವಿಡಿಯೋ ವೈರಲ್ – Kannada News | PM Modi Welcomed with Indian Traditional dance in Malaysia Watch Aamzing Video

ಕೌಲಾಲಂಪುರ, ಫೆಬ್ರವರಿ 7: ಪ್ರಧಾನಿ ಮೋದಿ ಇಂದು ತಮ್ಮ 2 ದಿನಗಳ ಭೇಟಿಗಾಗಿ ಮಲೇಷ್ಯಾಕ್ಕೆ ಆಗಮಿಸಿದರು. ಈ ವೇಳೆ 800ಕ್ಕೂ ಹೆಚ್ಚು ನೃತ್ಯಗಾರರಿಂದ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ನೃತ್ಯಗಳನ್ನು ಪ್ರದರ್ಶಿಸುವ ಮೂಲಕ ಪ್ರಧಾನಿ ಮೋದಿಯವರಿಗೆ (PM Modi in Malaysia) ವಿನೂತನವಾಗಿ ಸ್ವಾಗತ ಕೋರಲಾಯಿತು. ವಿದೇಶಿ ನೆಲದಲ್ಲಿ ನೂರಾರು ಜನರು ಪ್ರದರ್ಶಿಸಿದ ಭರತನಾಟ್ಯ ಕಂಡು ಪ್ರಧಾನಿ ಮೋದಿ ಅಚ್ಚರಿಗೊಂಡರು. ಈ ವೇಳೆ ‘ಭಾರತ್ ಮಾತಾ ಕಿ ಜೈ’, ‘ಮೋದಿ, ಮೋದಿ’ ಘೋಷಣೆಗಳು ಮಾರ್ದನಿಸಿದವು.

ಪ್ರಧಾನಿ ಮೋದಿ ಭಾರತೀಯ ವಲಸಿಗರನ್ನು ಉದ್ದೇಶಿಸಿ ಮಾತನಾಡಿದ ಸಮುದಾಯ ಕಾರ್ಯಕ್ರಮದ ಭಾಗವಾದ ಈ ಪ್ರದರ್ಶನವನ್ನು ಮಲೇಷ್ಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣೀಕರಿಸಿದೆ. ಭಾರತೀಯ ಸಮುದಾಯ ಮಲೇಷ್ಯಾದ ಸಾಂಸ್ಕೃತಿಕ ಸಮಿತಿಯ ಬ್ಯಾನರ್ ಅಡಿಯಲ್ಲಿ ಸುಮಾರು 800 ನರ್ತಕರು ಒಂದೇ ಬಾರಿಗೆ ನಿರಂತರ 5 ನಿಮಿಷಗಳ ಕಾಲ ನೃತ್ಯ ಪ್ರದರ್ಶಿಸಿದರು. ಇದು ವಿವಿಧ ರೀತಿಯ ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಾಯಿತು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

BCCI Contracts: ಬಿಸಿಸಿಐ ಕೇಂದ್ರ ಒಪ್ಪಂದದಲ್ಲಿ 21 ಆಟಗಾರ್ತಿಯರು; ಕನ್ನಡತಿಗೆ ಶಾಕ್ – Kannada News | *BCCI Women’s Central Contracts 2026: Grades, Salaries and New Players Revealed

ಬಿಸಿಸಿಐ ಶೀಘ್ರದಲ್ಲೇ ಭಾರತದ ಪುರುಷರ ಹಾಗೂ ಮಹಿಳೆಯರ ಕ್ರಿಕೆಟ್ ತಂಡದ ಹೊಸ ಕೇಂದ್ರ ಒಪ್ಪಂದವನ್ನು ಪ್ರಕಟಿಸಲು ತಯಾರಿ ನಡೆಸಿದೆ. ಅದರಂತೆ ಈ ಬಾರಿ ಎಷ್ಟು ಆಟಗಾರರಿಗೆ ಕೇಂದ್ರ ಒಪ್ಪಂದಗಳನ್ನು ನೀಡಬೇಕು ಎಂಬುದನ್ನು ಬಿಸಿಸಿಐ ಈಗಾಗಲೇ ನಿರ್ಧರಿಸಿದೆ. ಪುರುಷರ ಕೇಂದ್ರ ಒಪ್ಪಂದದಲ್ಲಿ ರೋಹಿತ್ ಶರ್ಮಾ ಹಾಗೂ ವಿರಾ್ ಕೊಹ್ಲಿ ಎ+ ಗ್ರೇಡ್​ನಿಂದ ಬಿ ಗ್ರೇಡ್​ಗೆ ಕುಸಿದಿದ್ದಾರೆ ಎಂದು ವರದಿಯಾಗಿದೆ. ಇತ್ತ ಮಹಿಳಾ ತಂಡದ ಕೇಂದ್ರ ಒಪ್ಪಂದದ ಬಗ್ಗೆಯೂ ಮಾಹಿತಿ ಹೊರಬಿದ್ದಿದ್ದು, ಕಳೆದ ಬಾರಿಯ ಕೇಂದ್ರ ಒಪ್ಪಂದದಲ್ಲಿ ಕೇವಲ 16 ಆಟಗಾರ್ತಿಯರಿದ್ದರೆ, ಈ ಬಾರಿಯ ಕೇಂದ್ರ ಒಪ್ಪಂದದಲ್ಲಿ ಒಟ್ಟು 21 ಮಹಿಳಾ ಆಟಗಾರ್ತಿಯರಿಗೆ ಸ್ಥಾನ ಸಿಗಲಿದೆ ಎಂದು ಹೇಳಲಾಗುತ್ತಿದೆ.

ಜೆಮಿಮಾ ರೊಡ್ರಿಗಸ್​ಗೆ ಬಡ್ತಿ

ಕಳೆದ ಬಾರಿಯಂತೆ, ನಾಯಕಿ ಹರ್ಮನ್‌ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂಧಾನ ಮತ್ತು ಆಲ್‌ರೌಂಡರ್ ದೀಪ್ತಿ ಶರ್ಮಾ ಅವರನ್ನು ಮತ್ತೊಮ್ಮೆ ಎ ಗ್ರೇಡ್‌ಗೆ ಸೇರಿಸಲಾಗಿದೆ. ಜೆಮಿಮಾ ರೋಡ್ರಿಗಸ್ ಕೂಡ ಎ ಗ್ರೇಡ್‌ಗೆ ಬಡ್ತಿ ಪಡೆದಿದ್ದಾರೆ, ಅವರು ಈ ಹಿಂದೆ ಬಿ ಗ್ರೇಡ್‌ನಲ್ಲಿದ್ದರು. ಈ ಆಟಗಾರ್ತಿಯರು ವಾರ್ಷಿಕವಾಗಿ 50 ಲಕ್ಷ ರೂಪಾಯಿಗಳನ್ನು ವೇತನವಾಗಿ ಪಡೆಯುತ್ತಾರೆ. ಏತನ್ಮಧ್ಯೆ, ರೇಣುಕಾ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್ ಮತ್ತು ಸ್ನೇಹ ರಾಣಾ ಬಿ ಗ್ರೇಡ್​ನಲ್ಲಿ ಸ್ಥಾನ ಪಡೆದಿದ್ದು, 3 ಲಕ್ಷ ರೂಪಾಯಿ ವೇತನ ಪಡೆಯುತ್ತಾರೆ.

ಈ ಆಟಗಾರ್ತಿಯರಿಗೆ ಸಿ ಗ್ರೇಡ್‌

ಗ್ರೇಡ್ ಸಿ ಯಲ್ಲಿ ರಾಧಾ ಯಾದವ್, ಅಮಂಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಛೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಾಶ್ವಿ ಗೌತಮ್, ಜಿ. ಕಮಲಿನಿ, ವೈಷ್ಣವಿ ಶರ್ಮಾ ಮತ್ತು ತೇಜಲ್ ಸೇರಿದ್ದಾರೆ. ಈ ಆಟಗಾರ್ತಿಯರಿಗೆ ವಾರ್ಷಿಕವಾಗಿ10 ಲಕ್ಷ ರೂ. ವೇತನ ಪಡೆಯಲಿದ್ದಾರೆ. ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಶ್ರೀ ಚರಣಿ, ಕಶ್ವಿ ಗೌತಮ್, ಜಿ. ಕಮಲಿನಿ, ವೈಷ್ಣವಿ ಶರ್ಮಾ ಮತ್ತು ತೇಜಲ್ ಅವರು ಮೊದಲ ಬಾರಿಗೆ ಕೇಂದ್ರ ಒಪ್ಪಂದದ ಭಾಗವಾಗಲಿದ್ದಾರೆ. ಆದರೆ, ಪೂಜಾ ವಸ್ತ್ರಾಕರ್, ಶ್ರೇಯಾಂಕಾ ಪಾಟೀಲ್ ಮತ್ತು ಟಿಟಾಸ್ ಸಾಧು ಕೇಂದ್ರ ಒಪ್ಪಂದಿಂದ ಹೊರಬಿದ್ದಿದ್ದಾರೆ. ಕೇಂದ್ರ ಒಪ್ಪಂದ ಪಡೆದಿರುವ ಆಟಗಾರ್ತಿಯರು ಒಪ್ಪಂದದಲ್ಲಿ ನಿಗದಿಯಾಗಿರುವ ವೇತನದ ಜೊತೆಗೆ ಪಂದ್ಯದ ಶುಲ್ಕವನ್ನು ಸಹ ವೇತನವಾಗಿ ಪಡೆಯುತ್ತಾರೆ. ಆ ಪ್ರಕಾರ ಟೆಸ್ಟ್ ಪಂದ್ಯವನ್ನಾಡುವ ಆಟಗಾರ್ತಿಗೆ 15 ಲಕ್ಷ, ಏಕದಿನ ಪಂದ್ಯಕ್ಕೆ 6 ಲಕ್ಷ ಮತ್ತು ಟಿ20 ಪಂದ್ಯಕ್ಕೆ 3 ಲಕ್ಷ ರೂ. ವೇತನ ಪಡೆಯುತ್ತಾರೆ.

ಬಿಸಿಸಿಐ ಕೇಂದ್ರ ಒಪ್ಪಂದ ಪಟ್ಟಿ

ಗ್ರೇಡ್ ಎ: ಹರ್ಮನ್‌ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ.

ಗ್ರೇಡ್ ಬಿ: ರೇಣುಕಾ ಠಾಕೂರ್, ಶೆಫಾಲಿ ವರ್ಮಾ, ರಿಚಾ ಘೋಷ್, ಸ್ನೇಹ ರಾಣಾ.

ಗ್ರೇಡ್ ಸಿ: ರಾಧಾ ಯಾದವ್, ಅಮಂಜೋತ್ ಕೌರ್, ಪ್ರತೀಕಾ ರಾವಲ್, ಕ್ರಾಂತಿ ಗೌಡ್, ಉಮಾ ಛೆಟ್ರಿ, ಅರುಂಧತಿ ರೆಡ್ಡಿ, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ಹರ್ಲೀನ್ ಡಿಯೋಲ್, ಕಶ್ವಿ ಗೌತಮ್, ಜಿ ಕಮಲಿನಿ, ವೈಷ್ಣವಿ ಶರ್ಮಾ, ತೇಜಲ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Propose Day 2026: ಪ್ರಪೋಸ್‌ ಡೇಯಂದು ಈ ರೀತಿ ನಿಮ್ಮ ಮನಸ್ಸಿಗೆ ಇಷ್ಟವಾದ ಹುಡ್ಗಿಗೆ ಪ್ರೇಮ ಪ್ರಸ್ತಾಪ ಮಾಡಿ – Kannada News | Propose Day 2026: How to propose to your loved one on Propose Day? Here’s the information

ವ್ಯಾಲೆಂಟೈನ್‌ ವೀಕ್‌ನ ಎರಡನೇ ದಿನ ಅಂದ್ರೆ ಫೆಬ್ರವರಿ 8 ರಂದು ಪ್ರಪೋಸ್‌ ಡೇ (Propose Day) ಆಚರಿಸಲಾಗುತ್ತದೆ. ಪ್ರೇಮಿಗಳ ಪಾಲಿಗಂತೂ ಈ ದಿನ ತುಂಬಾನೇ ಸ್ಪೆಷಲ್.‌ ಈ ದಿನವನ್ನು ಪ್ರೀತಿಯನ್ನು ವ್ಯಕ್ತಪಡಿಸಲು ಅತ್ಯಂತ ಸುಂದರವಾದ ಸಮಯವೆಂದು ಪರಿಗಣಿಸಲಾಗಿದೆ. ನೀವು ಸಹ ಬಹಳ ದಿನಗಳಿಂದ ಒಂದು ಹುಡುಗ/ಹುಡುಗಿಯನ್ನು ಮೆಚ್ಚಿಕೊಂಡಿದ್ದರೆ ಮತ್ತು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಪರಿಪೂರ್ಣ ಅವಕಾಶವನ್ನು ಹುಡುಕುತ್ತಿದ್ದರೆ, ಪ್ರಪೋಸ್‌ ಡೇ ನಿಮಗೆ ಸೂಕ್ತವಾಗಿದೆ. ನೀವು ಈ ರೀತಿ ಪ್ರಪೋಸ್‌ ಮಾಡಿದ್ರೆ ಪಕ್ಕಾ ನೀವು ಇಷ್ಟಪಟ್ಟ ಹುಡುಗಿ ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ.

ಪ್ರಪೋಸ್‌ ಡೇಯಂದು ಈ ರೀತಿ ಪ್ರೇಮ ನಿವೇದನೆ ಮಾಡಿಕೊಳ್ಳಿ:

ಒಂದು ಪ್ರಣಯ ಪತ್ರ ಅಥವಾ ಸಂದೇಶ ಬರೆಯಿರಿ: ನಿಮ್ಮ ಭಾವನೆಗಳನ್ನು ಮುಖಾಮುಖಿಯಾಗಿ ವ್ಯಕ್ತಪಡಿಸಲು ನೀವು ಹಿಂಜರಿಯುತ್ತಿದ್ದರೆ, ಒಂದು ಪ್ರೇಮ ಪತ್ರ ಬರೆಯಿರಿ. ಇಲ್ಲವೆ ಮೊಬೈಲ್‌ನಲ್ಲಿ ಸಂದೇಶ ಕಳುಹಿಸಿ.   ಈ ಪತ್ರ ಅಥವಾ ಸಂದೇಶದಲ್ಲಿ ನಿಮ್ಮ ಭಾವನೆಗಳನ್ನು ಸ್ಪಷ್ಟವಾಗಿ ಮತ್ತು ಪ್ರಾಮಾಣಿಕವಾಗಿ ಬರೆಯಿರಿ. ಕೈಬರಹದ ಪತ್ರವು ಹೆಚ್ಚು ವೈಯಕ್ತಿಕ ಮತ್ತು ವಿಶೇಷವೆನಿಸುತ್ತದೆ ಮತ್ತು ನಿಮ್ಮ ಪ್ರೀತಿಯು ಅದನ್ನು ಶಾಶ್ವತವಾಗಿ ಸುರಕ್ಷಿತವಾಗಿರಿಸುತ್ತದೆ.

ಸರ್ಪ್ರೈಸ್‌ ಪ್ಲಾನ್ ಮಾಡಿ: ನೀವು ನಿಮ್ಮ ಭಾವನೆಗಳನ್ನು ಚಾಕೊಲೇಟ್‌ಗಳು, ಗುಲಾಬಿಗಳು, ಸಣ್ಣ ಉಡುಗೊರೆ ಅಥವಾ ಕೈಯಿಂದ ಮಾಡಿದ ಕಾರ್ಡ್‌ನೊಂದಿಗೆ ವ್ಯಕ್ತಪಡಿಸಬಹುದು. ಸರ್ಪ್ರೈಸ್ ದೊಡ್ಡದಾಗಿರಬೇಕಾಗಿಲ್ಲ, ಸಣ್ಣದಾಗಿದ್ದರೂ ಅದು ಪ್ರತಿಬಿಂಬಿಸಬೇಕು.

ಕಾಫಿ ಅಥವಾ ವಾಕ್ ಡೇಟ್‌ಗೆ ಪ್ರಪೋಸ್ ಮಾಡಿ: ಶಾಂತ ಮತ್ತು ಆರಾಮದಾಯಕ ವಾತಾವರಣದಲ್ಲಿ ಪ್ರಪೋಸ್ ಮಾಡುವುದು ಹೆಚ್ಚು ಪರಿಣಾಮಕಾರಿ. ಕೆಫೆಯಲ್ಲಿ ಕಾಫಿ ಕುಡಿಯುತ್ತಾ ಅಥವಾ ಸಂಜೆ ನಡಿಗೆಯ ಸಮಯದಲ್ಲಿ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಿ. ಅಂತಹ ಸ್ಥಳದಲ್ಲಿ, ಸಂಭಾಷಣೆ ಸಹಜವಾಗಿರಲಿ.

ಇದನ್ನೂ ಓದಿ: ನಿಮ್ಮ ಸಂಗಾತಿಗೆ ಉಡುಗೊರೆಗಳನ್ನು ನೀಡುವ ಮೂಲಕ ಪ್ರಪೋಸ್‌ ಡೇಯನ್ನು ಸ್ಪೆಷಲ್‌ ಆಗಿ ಆಚರಿಸಿ

ಸರಳ ಆದರೆ ನಿಜವಾದ ಪ್ರಸ್ತಾಪ: ಕೆಲವೊಮ್ಮೆ, ಯಾವುದೇ ಯೋಜನೆ ಅಥವಾ ನಾಟಕವಿಲ್ಲದೆ, “ನಾನು ನಿನ್ನನ್ನು ಇಷ್ಟಪಡುತ್ತೇನೆ” ಎಂದು ಹೃದಯದಿಂದ ನೇರವಾಗಿ ಹೇಳುವುದು ಹೆಚ್ಚು ಪರಿಣಾಮ ಬೀರುತ್ತದೆ. ನಿಜವಾದ ಭಾವನೆಗಿಂತ ಮಿಗಿಲಾದದ್ದು ಯಾವುದೂ ಇಲ್ಲ. ನಿಮ್ಮ ನೈಜ ಭಾವನೆಗಳನ್ನು ವ್ಯಕ್ತಪಡಿಸಿ, ಖಂಡಿತವಾಗಿಯೂ ಅವರು ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ.

ನಿಜ ಹೇಳಬೇಕೆಂದರೆ, ಯಾವುದೇ ಪ್ರಪೋಸಲ್ ಪರಿಪೂರ್ಣವಾಗಿರುವುದಿಲ್ಲ. ಮಾತುಗಳು ಎಡವುತ್ತವೆ, ಎದೆ ಢವ ಢವ ಎನ್ನುತ್ತದೆ, ಕೈಗಳು ನಡುಗುತ್ತವೆ. ಆದರೆ ಈ ಸಣ್ಣ ವಿಷಯಗಳೇ ಆ ಕ್ಷಣವನ್ನು ನಿಮ್ಮದಾಗಿಸಿಕೊಳ್ಳುತ್ತವೆ, ನೀವು ಪ್ರೀತಿಸಿದ ಜೀವವನ್ನು ಶಾಶ್ವತವಾಗಿ ನಿಮಗೆ ಒದಗಿಸಿಕೊಡುತ್ತದೆ. ಇನ್ನೊಂದೇನೆಂದರೆ ಗ್ರ್ಯಾಂಡ್‌ ಆಗಿ ಸರ್ಪ್ರೈಸ್‌ ಅರೇಂಜ್‌ ಮಾಡಬೇಕಾಗಿಯೂ ಇಲ್ಲ, ನೀವು ಸರಳವಾಗಿಯೂ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಬಹುದು, ಸರಳ, ಸಹಜವಾದ ಪ್ರೇಮ ನಿವೇದನೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನೀವೇ ಭಾರತ- ಮಲೇಷ್ಯಾ ನಡುವಿನ ಜೀವಂತ ಸೇತುವೆ; ಭಾರತೀಯ ವಲಸಿಗರ ಜೊತೆ ಪ್ರಧಾನಿ ಮೋದಿ ಸಂವಾದ – Kannada News | Indian origin community is a living bridge between India and Malaysia PM Modi says in Kuala Lumpur

ಕೌಲಾಲಂಪುರ, ಫೆಬ್ರವರಿ 7: ಮಲೇಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿರುವ ಭಾರತೀಯ ಸಮುದಾಯದವರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಮೋದಿ (PM Modi), “ನಂಬಿಕೆ ಭಾರತದ ಪ್ರಬಲ ಕರೆನ್ಸಿಯಾಗಿದೆ. ಭಾರತೀಯ ವಲಸಿಗರು ಭಾರತ ಮತ್ತು ಮಲೇಷ್ಯಾ ನಡುವೆ ಜೀವಂತ ಸೇತುವೆಯಾಗಿ ಕಾರ್ಯನಿರ್ವಹಿಸಿದ್ದಾರೆ. ಮಲೇಷ್ಯಾ ವಿಶ್ವದ ಎರಡನೇ ಅತಿದೊಡ್ಡ ಭಾರತೀಯ ಮೂಲದ ಸಮುದಾಯವನ್ನು ಹೊಂದಿದೆ. ಭಾರತೀಯ ಮತ್ತು ಮಲೇಷಿಯಾದ ಹೃದಯಗಳನ್ನು ಸಂಪರ್ಕಿಸುವ ಬಹಳಷ್ಟು ವಿಷಯಗಳಿವೆ. ನೀವು ನಮ್ಮನ್ನು ಸಂಪರ್ಕಿಸುವ ಜೀವಂತ ಸೇತುವೆ” ಎಂದು ಹೇಳಿದ್ದಾರೆ.

ಭಾರತೀಯ ಮೂಲದ ಸುಮಾರು ಮೂರು ಮಿಲಿಯನ್ ಜನರು ಮಲೇಷ್ಯಾದಲ್ಲಿ ವಾಸಿಸುತ್ತಿದ್ದಾರೆ. ಇದು ವಿಶ್ವದ ಎರಡನೇ ಅತಿದೊಡ್ಡ ರಾಷ್ಟ್ರವಾಗಿದೆ. ಅವರಲ್ಲಿ ಬಹುಪಾಲು ತಮಿಳು ಮೂಲದವರು. ಹೀಗಾಗಿ, ತಮಿಳು ಭಾಷೆಯ ಕುರಿತು ತಮ್ಮ ಭಾಷಣದಲ್ಲಿ ಮಾತನಾಡಿದ ಮೋದಿ, “ತಮಿಳು ಜಗತ್ತಿಗೆ ಭಾರತ ನೀಡಿದ ಕೊಡುಗೆ. ತಮಿಳು ಸಾಹಿತ್ಯ ಶಾಶ್ವತ ಮತ್ತು ಜಾಗತಿಕವಾಗಿದೆ. ಭಾರತದ ಉಪರಾಷ್ಟ್ರಪತಿ ಸಿ.ಪಿ ರಾಧಾಕೃಷ್ಣನ್, ಕೇಂದ್ರ ಸಚಿವರಾದ ಎಸ್ ಜೈಶಂಕರ್ ಮತ್ತು ನಿರ್ಮಲಾ ಸೀತಾರಾಮನ್ ಅವರಂತಹ ತಮಿಳು ಸಮುದಾಯದ ನಾಯಕರು ತಮ್ಮ ಪ್ರತಿಭೆಯಿಂದ ಮಾನವೀಯತೆಗೆ ಸೇವೆ ಸಲ್ಲಿಸಿದ್ದಾರೆ” ಎಂದು ಅವರು ಹೇಳಿದರು.

ಇದನ್ನೂ ಓದಿ: ಮಲೇಷ್ಯಾಗೆ ತೆರಳಿದ ಪ್ರಧಾನಿ ಮೋದಿಗೆ ಅಪ್ಪುಗೆಯ ಸ್ವಾಗತ

ತಮಿಳು ವಲಸಿಗರ ಸಾಮರ್ಥ್ಯಗಳನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ತಮಿಳು ಇತಿಹಾಸದಿಂದ ಪ್ರೇರಿತರಾಗಿ ಮಲಯ ವಿಶ್ವವಿದ್ಯಾಲಯದಲ್ಲಿ ತಿರುವಳ್ಳುವರ್ ಪೀಠವನ್ನು ಸ್ಥಾಪಿಸಲಾಗಿದೆ. ನಮ್ಮ ತಮಿಳು ಪರಂಪರೆಯನ್ನು ಮತ್ತಷ್ಟು ಬಲಪಡಿಸಲು ನಾವು ತಿರುವಳ್ಳುವರ್ ಕೇಂದ್ರವನ್ನು ಸ್ಥಾಪಿಸಿದ್ದೇವೆ” ಎಂದು ಪ್ರಧಾನಿ ಹೇಳಿದ್ದಾರೆ.

ಮಲೇಷ್ಯಾಕ್ಕೆ ಈ ಭೇಟಿ 2026ರಲ್ಲಿ ಪ್ರಧಾನಿಯವರ ಮೊದಲ ವಿದೇಶಿ ಭೇಟಿಯನ್ನು ಸೂಚಿಸುತ್ತದೆ. ಮಲೇಷ್ಯಾದ ಪ್ರಧಾನಿ ಅನ್ವರ್ ಇಬ್ರಾಹಿಂ ಅಧಿಕಾರಕ್ಕೇರುವ ಮೊದಲೇ ಪ್ರಧಾನಿ ಮೋದಿ ಅವರು ಮಲೇಷ್ಯಾ ಪ್ರಧಾನಿಯವರೊಂದಿಗೆ ಸ್ನೇಹ ಹೊಂದಿದ್ದರು. ಈ ಬಗ್ಗೆಯೂ ಮೋದಿ ಪ್ರಸ್ತಾಪಿಸಿದರು.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಮೆಟ್ರೋ ಟಿಕೆಟ್ ದರ ಸಮರ: ಯುದ್ಧ ಪೂರ್ತಿ ಗೆದ್ದಿಲ್ಲ ಎಂದ ಸಂಸದ; ಕೇಂದ್ರಕ್ಕೆ ಪತ್ರ ಬರೆಯುವಂತೆ ಒತ್ತಾಯ – Kannada News | Metro ticket price war: This is only temporary, the war has not been completely won, says Tejasvi Surya

ಸಂಸದ ತೇಜಸ್ವಿ ಸೂರ್ಯImage Credit source: deccanherald

ಬೆಂಗಳೂರು, ಫೆಬ್ರವರಿ 07: ಸೋಮವಾರದಿಂದ ನಮ್ಮ ಮೆಟ್ರೋ ಟಿಕೆಟ್ (Namma Metro) ಪ್ರಯಾಣ ದರ ಶೇಕಡಾ 5ರಷ್ಟು ಏರಿಕೆ ಮಾಡಲು ನಿರ್ಧರಿಸಲಾಗಿತ್ತು. ಇದೇ ದರ ಏರಿಕೆ ವಿಚಾರವಾಗಿ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಮಧ್ಯೆ ದಂಗಲ್ ಕೂಡ ಏರ್ಪಟ್ಟಿದೆ. ಈ ಮೆಟ್ರೋ ಪ್ರಯಾಣ ದರ ಏರಿಕೆ ಜಟಾಪಟಿಯ ನಡುವೆ ಸೋಮವಾರದಿಂದ ಮೆಟ್ರೋ ಪ್ರಯಾಣ ದರ ಏರಿಕೆಯಾಗಲ್ಲ ಅಂತಾ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya) ಘೋಷಿಸಿದ್ದು, ಇದು ತಾತ್ಕಾಲಿಕ ಅಷ್ಟೇ ನಾವು ಪೂರ್ತಿಯಾಗಿ ಯದ್ಧ ಗೆದ್ದಿಲ್ಲ ಎಂದು ಹೇಳಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಹೇಳಿದ್ದಿಷ್ಟು 

ನಗದರಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಸೋಮವಾರದಿಂದ ರಾಜ್ಯ ಸರ್ಕಾರ ಮತ್ತು ಬಿಎಂ‌ಆರ್‌ಸಿಎಲ್ ದರ ಹೆಚ್ಚಳದ ಪ್ರಸ್ತಾಪ ಇಟ್ಟಿತ್ತು. ನಾವು, ಸಾರ್ವಜನಿಕರು ಇದರ ವಿರುದ್ಧ ಧ್ವನಿ ಎತ್ತಿದ್ದೆವು. ಈಗಾಗಲೇ ದೇಶದ ದುಬಾರಿ ಮೆಟ್ರೋ ಎನ್ನುವ ಕುಖ್ಯಾತಿ ಇದೆ. ಕೇಂದ್ರ ಸಚಿವ ಮನೋಹರ ಲಾಲ್​ ಖಟ್ಟರ್ ಜೊತೆ ನಾನು, ವಿಪಕ್ಷ ನಾಯಕ ಆರ್ ಅಶೋಕ್, ಸಂಸದ ಪಿಸಿ ಮೋಹನ್ ಅವರು ಮಾತಾಡಿದ್ದೆವು. ನಗರಾಭಿವೃದ್ಧಿ ಇಲಾಖೆಯ ಸೆಕ್ರೆಟರಿ ಅವರಿಗೆ ತಾತ್ಕಾಲಿಕವಾಗಿ ದರ ಏರಿಕೆಯನ್ನು ನಿಲ್ಲಿಸಲು ಸೂಚಿಸಿದ್ದಾಗಿ ಹೇಳಿದ್ದಾರೆ. ಆದರೆ ಇದು ತಾತ್ಕಾಲಿಕ ಅಷ್ಟೇ, ನಾವು ಯದ್ದ‌ ಪೂರ್ತಿಯಾಗಿ ಗೆದ್ದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೆಟ್ರೋ ಪ್ರಯಾಣಿಕರಿಗೆ ಗುಡ್​ನ್ಯೂಸ್ ಕೊಟ್ಟ ತೇಜಸ್ವಿ ಸೂರ್ಯ: ಸೋಮವಾರದಿಂದ ದರ ಏರಿಕೆ ಆಗುವುದಿಲ್ಲ

ದೆಹಲಿಯಲ್ಲಿ 69 ರೂ ಮತ್ತು ಚೆನೈನಲ್ಲಿ 50 ರೂ ಗೆ ಮೆಟ್ರೋದಲ್ಲಿ ಸಂಚಾರ ಮಾಡಬೇಕಾದರೆ, ಬೆಂಗಳೂರಲ್ಲಿ ಏಕೆ 90 ರೂ. ಕೊಡಬೇಕು ಎನ್ನುವುದು ನಮ್ಮ‌ ಪ್ರಶ್ನೆ. ಈಗ ಮತ್ತೊಂದು ದರ ನಿಗದಿ ಕಮಿಟಿ ಮಾಡಬೇಕು. ರಾಜ್ಯ ಸರ್ಕಾರ ದರ ನಿಗದಿ ಕಮಿಟಿ ರಚಿಸಲು ನಾಲ್ಕಾರು ಬಾರಿ ಹಿಂದೆ ಪತ್ರ ಬರೆದಿದ್ದರು. ದರ ನಿಗದಿ ಕಮಿಟಿಯಲ್ಲಿ ಪ್ರತಿ ವರ್ಷ ದರ ಹೆಚ್ಚಳ ಮಾಡುವಂತೆ ರಾಜ್ಯ ಸರ್ಕಾರದ ಅಧಿಕಾರಿಗಳು ಮನವಿ ಮಾಡಿದ್ದರು. ನಾನು ಹೈಕೋರ್ಟ್‌ನಲ್ಲಿ ಕೇಸ್ ಹಾಕಿದ್ದೆ. ಫೇರ್ ಫಿಕ್ಸೇಷನ್ ಕಮಿಟಿ ಏಕೆ ಮುಚ್ಚಿಟ್ಟಿದ್ದರು,
ಇವರ ವಾದ ಮುಚ್ಚಿಡಲು ಹೀಗೆ ಮಾಡಿದ್ದರು ಎಂದು ವಾಗ್ದಾಳಿ ಮಾಡಿದ್ದಾರೆ.

ಹೊಸ ಕಮಿಟಿ ರಚನೆಗೆ ಪತ್ರ ಬರೆಯುವಂತೆ ಒತ್ತಾಯ

ರಾಜ್ಯ ಸರ್ಕಾರ ಹೊಸ ಫೇರ್ ಫಿಕ್ಸೇಷನ್ ಕಮಿಟಿ ರಚಿಸಿಲು ಪತ್ರ ಬರೆದರೆ, ನಾವು ಅದನ್ನ ಪರಿಗಣಿಸುತ್ತೇವೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ. ಈಗ ಬಾಲ್ ಸಿಎಂ ಮತ್ತು ಡಿಸಿಎಂ ಅಂಗಳದಲ್ಲಿ ಇದೆ. ಈಗ ಒಂದು ಪತ್ರ ಬರೆಯಿರಿ ಎಂದು ಹೇಳಿದ್ದಾರೆ. ಮರುಪರಿಷ್ಕರಣೆ ಮಾಡಿ ಎಂದು ಪತ್ರ ಬರೆದರೆ ಹೊಸ ಕಮಿಟಿ ರಚನೆ ಮಾಡುತ್ತಾರೆ. ಪತ್ರ ಬರೆದರೂ ಕಮಿಟಿ ಮಾಡಿಲ್ಲ ಎಂದರೆ ಕೇಂದ್ರದ ತಪ್ಪು. ಇವರು ಪತ್ರ ಬರೆದಿಲ್ಲ ಎಂದರೆ ಇವರ ತಪ್ಪು, ಏನು ಮಾಡುತ್ತಾರೆ ನೋಡೋಣ. ಟೆಕ್ನಿಕಲ್​ ಆಗಿ ಈಗಲೂ ಸಹ ತಡೆ ನೀಡಲು ಸಾಧ್ಯವಾಗುತ್ತಿರಲಿಲ್ಲ, ಆದರೆ ನಾವೆಲ್ಲಾ ಒತ್ತಡ ಹೇರಿದ್ದರಿಂದ ತಾತ್ಕಾಲಿಕವಾಗಿ ಮಾಡಿದ್ದಾರೆ. ಆದರೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಪತ್ರ ಬರೆದು ಕಮಿಟಿ ರಚಿಸಲು ಹೇಳಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ವರದಿ: ನಟರಾಜ್​​ ಟಿವಿ9

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link