ನೆಲಮಂಗಲ, ಫೆಬ್ರವರಿ 05: ಬೆಂಗಳೂರಲ್ಲಿ ರೋಡ್ ರೇಜ್ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿದ್ದು, ಸಣ್ಣಪುಟ್ಟ ಕಾರಣಗಳಿಗೂ ಸವಾರರು ರೌಡಿಸಂ ಪ್ರದರ್ಶಿಸುತ್ತಿದ್ದಾರೆ. ನೆಲಮಂಗಲದಿಂದ ಕೆಲಸಕ್ಕೆ ತೆರಳುತ್ತಿದ್ದ ಆದಿತ್ಯ ಎಂಬುವವರ ಕಾರಿಗೆ ಮಾದಾವರ ಜಂಕ್ಷನ್ ಬಳಿ ಬೈಕ್ ಸವಾರನೊಬ್ಬ ಅಡ್ಡ ಹಾಕಿ ಕಿರಿಕ್ ತೆಗೆದಿದ್ದಾನೆ. ಬೈಕ್ ಸವಾರನು ಕಾರಿನ ಮಿರರ್ ಅನ್ನು ಮುರಿದು, ಆದಿತ್ಯ ಅವರನ್ನು ನಿಂದಿಸಿ ಬೆದರಿಕೆಯನ್ನೂ ಹಾಕಿದ್ದಾನೆ. ಈ ಘಟನೆ ಕುರಿತು ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ ಚಾಲಕನ ಮೊಬೈಲ್ನಲ್ಲಿ ಘಟನೆ ರೆಕಾರ್ಡ್ ಆಗಿದೆ.
ತಮಿಳುನಾಡು ರಾಜ್ಯವನ್ನು ಸಾಮಾನ್ಯವಾಗಿ “ದೇವಾಲಯಗಳ ನಾಡು” ಎಂದು ಕರೆಯಲಾಗುತ್ತದೆ. 33,000ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳು, ಭವ್ಯವಾದ ಗೋಪುರಗಳು ಮತ್ತು ದ್ರಾವಿಡ ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾಗಿರುವ ಈ ರಾಜ್ಯವು ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿದೆ. ಅಂತಹ ಅಪೂರ್ವ ಆಧ್ಯಾತ್ಮಿಕ ತಾಣಗಳಲ್ಲಿ ಒಂದು ತಂಜಾವೂರು ಜಿಲ್ಲೆಯ ನಲ್ಲೂರು ಗ್ರಾಮದಲ್ಲಿರುವ ಕಲ್ಯಾಣ ಸುಂದರೇಶ್ವರ ದೇವಾಲಯ. ಸಾವಿರ ವರ್ಷಗಳ ಇತಿಹಾಸವನ್ನು ಹೊತ್ತಿರುವ ಈ ಪವಿತ್ರ ಕ್ಷೇತ್ರವು ತನ್ನ ಅದ್ಭುತ ಶಿವಲಿಂಗದ ಮೂಲಕ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ.
ಈ ದೇವಾಲಯದ ಪ್ರಮುಖ ಆಕರ್ಷಣೆ ಎಂದರೆ ಇಲ್ಲಿ ಪೂಜಿಸಲ್ಪಡುವ ಶಿವಲಿಂಗ. ಭಕ್ತರ ನಂಬಿಕೆಯ ಪ್ರಕಾರ, ಈ ಶಿವಲಿಂಗವು ಒಂದೇ ದಿನದಲ್ಲಿ ಐದು ಬಾರಿ ಬಣ್ಣ ಬದಲಾಯಿಸುತ್ತದೆ. ಬೆಳಿಗ್ಗೆ ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳುವ ಲಿಂಗವು ಮಧ್ಯಾಹ್ನ ಬಿಳಿಯಾಗಿ, ಸಂಜೆ ಕೆಂಪಾಗಿ, ರಾತ್ರಿ ತಿಳಿ ನೀಲಿ ಬಣ್ಣಕ್ಕೆ, ಮಧ್ಯರಾತ್ರಿ ಹಸಿರಾಗಿ ರೂಪಾಂತರಗೊಳ್ಳುತ್ತದೆ ಎಂದು ಹೇಳಲಾಗುತ್ತದೆ. ದಿನದ ವಿವಿಧ ಸಮಯಗಳಲ್ಲಿ ವಿವಿಧ ಬಣ್ಣಗಳಲ್ಲಿ ಶಿವನ ದರ್ಶನ ಪಡೆಯಲು ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಅಪರೂಪದ ದೃಶ್ಯವನ್ನು ನೋಡುವುದಕ್ಕಾಗಿ ತಮಿಳುನಾಡಿನಷ್ಟೇ ಅಲ್ಲದೆ ಬೇರೆ ಬೇರೆ ರಾಜ್ಯಗಳಿಂದಲೂ ಸಾವಿರಾರು ಜನರು ಇಲ್ಲಿ ಹರಿದು ಬರುತ್ತಾರೆ.
ಬಣ್ಣ ಬದಲಿಸುವ ಅದ್ಭುತ ಶಿವಲಿಂಗ
ಐತಿಹಾಸಿಕ ದಾಖಲೆಗಳ ಪ್ರಕಾರ, ಈ ದೇವಾಲಯವನ್ನು ಸುಮಾರು ಸಾವಿರ ವರ್ಷಗಳ ಹಿಂದೆ ಚೋಳ ಚಕ್ರವರ್ತಿ ರಾಜರಾಜ ಚೋಳನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ಕಾಲಕ್ರಮೇಣ ಕೆಲವು ನವೀಕರಣಗಳು ನಡೆದಿದ್ದರೂ, ದೇವಾಲಯದ ಮೂಲ ಸಂಪ್ರದಾಯಗಳು ಮತ್ತು ಧಾರ್ಮಿಕ ಆಚರಣೆಗಳು ಇಂದಿಗೂ ಹಾಗೆಯೇ ಉಳಿದಿವೆ. ಇಲ್ಲಿ ಶಿವನನ್ನು “ಕಲ್ಯಾಣ ಸುಂದರೇಶ್ವರ” ಎಂದು ಆರಾಧಿಸಲಾಗುತ್ತದೆ. ಶಿವನ ಜೊತೆಗೆ ಮುರುಗನ್ (ಕಾರ್ತಿಕೇಯ) ದೇವರಿಗೂ ವಿಶೇಷ ಮಹತ್ವವಿದೆ.
ದೇವಾಲಯದ ಇನ್ನೊಂದು ವಿಶೇಷವೆಂದರೆ ಎರಡು ಕಪ್ಪು ಕಲ್ಲಿನ ಶಿವಲಿಂಗಗಳು. ಮುಖ್ಯ ಗರ್ಭಗುಡಿಯಲ್ಲಿ ಇರುವ ಲಿಂಗವನ್ನು ಚಿನ್ನದ ಅಲಂಕಾರಗಳಿಂದ ಸಿಂಗರಿಸಲಾಗಿದೆ. ಮತ್ತೊಂದು ಶಿವಲಿಂಗವು ದೇವಾಲಯದ ಪ್ರವೇಶದ್ವಾರದ ಬಳಿ ಇದೆ. ಪ್ರತಿದಿನ ಬೆಳಿಗ್ಗೆ ಈ ಲಿಂಗಕ್ಕೆ ಶ್ರೀಗಂಧದ ಅಭಿಷೇಕ ಮಾಡಲಾಗುತ್ತದೆ. ಮಧ್ಯಾಹ್ನ ವೇಳೆಗೆ ಅದರ ಸುಗಂಧವೇ ಭಕ್ತರನ್ನು ಆಧ್ಯಾತ್ಮಿಕ ವಾತಾವರಣಕ್ಕೆ ಕರೆದೊಯ್ಯುತ್ತದೆ.
ಪ್ರತಿದಿನ ಇಲ್ಲಿ ಐದು ಕಾಲ ಪೂಜೆಗಳು ನಡೆಯುತ್ತವೆ. ಪ್ರತಿ ಪೂಜೆಯಲ್ಲೂ ಶಿವನು ವಿಭಿನ್ನ ರೂಪದಲ್ಲಿ ದರ್ಶನ ನೀಡುತ್ತಾನೆ ಎಂಬ ನಂಬಿಕೆ ಇದೆ. ಬೆಳಿಗ್ಗೆ ವೈದ್ಯನಾಥ ಸ್ವರೂಪದಲ್ಲಿ, ನಂದಿಯೊಂದಿಗೆ ಭಕ್ತರಿಗೆ ಕೃಪೆ ನೀಡುತ್ತಾನೆ ಎಂದು ಹೇಳಲಾಗುತ್ತದೆ. ಶಿವಲಿಂಗದ ಬಣ್ಣ ಬದಲಾವಣೆಗೆ ಇನ್ನೂ ವೈಜ್ಞಾನಿಕ ಸ್ಪಷ್ಟನೆ ಸಿಕ್ಕಿಲ್ಲ. ಆದರೂ, ಈ ಘಟನೆ ಸ್ವಾಭಾವಿಕವಾಗಿ ನಡೆಯುತ್ತದೆ ಎಂಬ ಭಕ್ತರ ವಿಶ್ವಾಸವೇ ದೇವಾಲಯದ ಮಹಿಮೆ ಮತ್ತು ಆಧ್ಯಾತ್ಮಿಕತೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಶಿವರಾತ್ರಿ, ಪ್ರದೋಷ ಮತ್ತು ಇತರ ಹಬ್ಬಗಳ ಸಂದರ್ಭದಲ್ಲಿ ಈ ಕ್ಷೇತ್ರವು ಭಕ್ತರ ಸಂಚಾರದಿಂದ ಕಿಕ್ಕಿರಿದುಕೊಳ್ಳುತ್ತದೆ. ಪ್ರಾಚೀನ ಇತಿಹಾಸ, ಶಿಲ್ಪಕಲೆ, ಮತ್ತು ದೈವಿಕ ಅನುಭವ ಎಲ್ಲಾ ಸೇರಿ ಕಲ್ಯಾಣ ಸುಂದರೇಶ್ವರ ದೇವಾಲಯವನ್ನು ಒಂದು ವಿಶಿಷ್ಟ ತೀರ್ಥಕ್ಷೇತ್ರವನ್ನಾಗಿ ಮಾಡಿವೆ. ಭಕ್ತಿಭಾವದಿಂದ ಶಿವನ ದರ್ಶನ ಪಡೆಯಲು ಬಯಸುವವರಿಗೆ ಇದು ತಪ್ಪದೆ ಭೇಟಿ ನೀಡಬೇಕಾದ ಪವಿತ್ರ ಸ್ಥಳವಾಗಿದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಎಸ್ಎಸ್ ರಾಜಮೌಳಿ (SS Rajamouli), ಭಾರತದ ಅತ್ಯಂತ ಪ್ರಭಾವಿ ವ್ಯಕ್ತಿಗಳಲ್ಲಿ ಒಬ್ಬರು. ರಾಜಮೌಳಿ, ರಾಜಕೀಯದಿಂದ ಬಲು ದೂರವಾದರೂ ಎಲ್ಲ ರಾಜಕಾರಣಿಗಳು, ಉದ್ಯಮಿಗಳು, ಸಿನಿಮಾ ಮಂದಿಯಿಂದ ಸಮಾನ ಗೌರವಕ್ಕೆ ಅರ್ಹವಾಗಿರುವ ವ್ಯಕ್ತಿ ಅವರು. ರಾಜಮೌಳಿಯ ಪ್ರತಿಭೆ, ಮಾಡಿರುವ ಕಾರ್ಯಗಳು ಅವರನ್ನು ಭಾರತದ ಅತ್ಯಂತ ಗೌರವಾನ್ವಿತ ವ್ಯಕ್ತಿಗಳಲ್ಲಿ ಒಬ್ಬರನ್ನಾಗಿಸಿದೆ. ಪ್ರಭಾವಿ ವ್ಯಕ್ತಿ ಆಗಿರುವ ಜೊತೆಗೆ ಸಾಕಷ್ಟು ಶ್ರೀಮಂತಿಕೆಯನ್ನೂ ಹೊಂದಿರುವ ರಾಜಮೌಳಿಗೆ ಯಾವುದನ್ನೇ ಆಗಲಿ ಪಡೆದುಕೊಳ್ಳುವುದು ಕಷ್ಟವೇನೂ ಅಲ್ಲ. ಆದರೂ ರಾಜಮೌಳಿ, ಬೇಡಿಕೆಯೊಂದರ ಈಡೇರಿಕೆಗೆ ಧರಣಿ ಕುಳಿತುಕೊಳ್ಳುವುದಾಗಿ ಹೇಳಿದ್ದಾರೆ.
ರಾಜಮೌಳಿ, ಸಿನಿಮಾಗಳ ಬಗ್ಗೆ ಅಪಾರ ಕಾಳಜಿ ಇರುವ ವ್ಯಕ್ತಿ. ಜನರಿಗೆ ಒಳ್ಳೆಯ ಸಿನಿಮಾ. ಅತ್ಯುತ್ತಮ ಗುಣಮಟ್ಟದ ಸಿನಿಮಾ ನೀಡಬೇಕು ಎಂಬ ಅಪಾರ ಹಪ-ಹಪಿ ಇರುವ ನಿರ್ದೇಶಕ. ಇದೇ ಕಾರಣಕ್ಕೆ ಅವರು ವಿಶ್ವದ ಅತ್ಯುತ್ತಮ ತಂತ್ರಜ್ಞರೊಟ್ಟಿಗೆ ಕೆಲಸ ಮಾಡುತ್ತಾರೆ, ವಿಶ್ವದ ಅತ್ಯುತ್ತಮ ತಂತ್ರಜ್ಞಾನವನ್ನು ತಮ್ಮ ಸಿನಿಮಾಕ್ಕೆ ಅಳವಡಿಸಿಕೊಳ್ಳುತ್ತಾ ಬರುತ್ತಿದ್ದಾರೆ. ತಂತ್ರಜ್ಞಾನದ ಮಿತಿ ಇದ್ದಾಗಲೇ ಅವರು ‘ಈಗ’ ಅಂಥಹಾ ಸಿನಿಮಾ ನೀಡಿದವರು. ಆದರೆ ರಾಜಮೌಳಿ ಅವರು ಭಾರತದ ಚಿತ್ರಮಂದಿರಗಳ ಬಗ್ಗೆ ದೂರು ಇದೆ. ಇದೇ ಕಾರಣಕ್ಕೆ ಅವರು ಪ್ರತಿಭಟನೆ ಮಾಡುವೆ ಎಂದು ಹೇಳಿರುವುದು.
ಇತ್ತೀಚೆಗಷ್ಟೆ ಆಂಗ್ಲ ಮಾಧ್ಯಮವೊಂದಕ್ಕೆ ಹೈದರಾಬಾದ್ನಲ್ಲಿ ಸಂದರ್ಶನ ನೀಡಿರುವ ಎಸ್ಎಸ್ ರಾಜಮೌಳಿ, ತಾವು ‘ವಾರಣಾಸಿ’ ಸಿನಿಮಾವನ್ನು ಐಮ್ಯಾಕ್ಸ್ ಕ್ಯಾಮೆರಾನಲ್ಲಿ ಶೂಟ್ ಮಾಡಿರುವ ವಿಚಾರ ಹಂಚಿಕೊಂಡಿದ್ದಾರೆ. ತಮ್ಮ ಸಿನಿಮಾನಲ್ಲಿ ದೃಶ್ಯಗಳ ಆಳ-ಅಗಲ ಮತ್ತು ಎತ್ತರ ಬಹಳ ದೊಡ್ಡದಾಗಿದ್ದು, ಅವುಗಳನ್ನು ಸರಿಯಾಗಿ ಕ್ಯಾಪ್ಚರ್ ಮಾಡಲು ಐಮ್ಯಾಕ್ಸ್ ಸೂಕ್ತ ಎಂಬ ಕಾರಣಕ್ಕೆ ತಾವು ಐಮ್ಯಾಕ್ಸ್ ಬಳಸಿದ್ದಾಗಿ ಹೇಳಿಕೊಂಡಿದ್ದಾರೆ.
ಆದರೆ ಐಮ್ಯಾಕ್ಸ್ ನಲ್ಲಿ ಶೂಟ್ ಆದ ಸಿನಿಮಾವನ್ನು ಪ್ರದರ್ಶಿಸಲು ಭಾರತದಲ್ಲಿ ಒಂದೇ ಒಂದು ಫುಲ್ ಲೆಂತ್ ಐಮ್ಯಾಕ್ಸ್ ಸ್ಕ್ರೀನ್ಗಳೇ ಇಲ್ಲ. ಈ ಬಗ್ಗೆ ಅಸಮಾಧಾನ ಹೊಂದಿರುವ ರಾಜಮೌಳಿ, ಸಂದರ್ಶನದಲ್ಲಿ ಮಾತನಾಡುತ್ತಾ, ‘ಭಾರತದಲ್ಲಿ ಐಮ್ಯಾಕ್ಸ್ ಸ್ಕ್ರೀನ್ಗಳ ಅಗತ್ಯ ಇದೆ. ಭಾರತದಲ್ಲಿ ಸಹ ದೊಡ್ಡ ಐಮ್ಯಾಕ್ಸ್ ಸ್ಕ್ರೀನ್ಗಳನ್ನು ಹಾಕುವಂತೆ ನಾನು ಐಮ್ಯಾಕ್ಸ್ ಕಚೇರಿ ಎದುರು ಧರಣಿ ಕೂರುತ್ತೇನೆ’ ಎಂದಿದ್ದಾರೆ ರಾಜಮೌಳಿ.
ಭಾರತದಲ್ಲಿ ಐಮ್ಯಾಕ್ಸ್ ಸ್ಕ್ರೀನ್ಗಳು ಇವೆ ಆದರೆ 1.43:1 ಅಳತೆಯ ಬೃಹತ್ ಐಮ್ಯಾಕ್ಸ್ ಸ್ಕ್ರೀನ್ಗಳು ಇಲ್ಲ. ಭಾರತದಲ್ಲಿ ಇರುವುದೆಲ್ಲ 70 ಎಂಎಂ ಸ್ಕ್ರೀನ್ಗಳು ಮಾತ್ರ. ಆದರೆ ವಿದೇಶದಲ್ಲಿ ಅದರಲ್ಲೂ ಐಮ್ಯಾಕ್ಸ್ ಸ್ಕ್ರೀನ್ಗಳು 100*140 ಅಡಿ ಅಗಲ-ಉದ್ದದ ಸ್ಕ್ರೀನ್ಗಳು ಇವೆ. ಈ ಬೃಹತ್ ಸ್ಕ್ರೀನ್ಗಳಲ್ಲಿ ಸಿನಿಮಾ ನೋಡುವ ಅನುಭವವೇ ಅದ್ಭುತ. ಆದರೆ 70 ಎಂಎಂ ಸ್ಕ್ರೀನ್ಗಳಲ್ಲಿ ದೃಶ್ಯದ ಎತ್ತರ ಗೊತ್ತೇ ಆಗುವುದಿಲ್ಲ. ಎತ್ತರವಾದ ಬೆಟ್ಟದ ದೃಶ್ಯ ತೋರಿಸಿದರೆ ಅದರ ತಲೆ ಕಟ್ ಆಗಿ ಕಾಣುತ್ತದೆ. ಇದೇ ಕಾರಣಕ್ಕೆ ರಾಜಮೌಳಿ, ಭಾರತದಲ್ಲೂ ಬೃಹತ್ ಆದ ಐಮ್ಯಾಕ್ಸ್ ಸ್ಕ್ರೀನ್ಗಳು ಬೇಕು ಎಂದು ಆಗ್ರಹಿಸುತ್ತಿದ್ದಾರೆ.
ನವದೆಹಲಿ, ಫೆಬ್ರುವರಿ 5: ಭಾರತದ ವಿಚಾರದಲ್ಲಿ ಉಡಾಫೆಯಿಂದ ವರ್ತಿಸುತ್ತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಕೆಲ ದಿನಗಳ ಹಿಂದೆ ಭಾರತದ ಜೊತೆ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ ಎಂದು ಘೋಷಿಸಿದ್ದರು. ಈ ಹಿಂದೆ ಅವರ ಭಾಷೆಯಲ್ಲಿ ಇರುತ್ತಿದ್ದ ಅಹಂಕಾರ, ಉಡಾಫೆಗಳು ಈ ಬಾರಿ ಇರಲಿಲ್ಲ ಎನ್ನುವುದು ಗಮನಾರ್ಹ. ಎರಡೂ ದೇಶಗಳ ಮಧ್ಯೆ ವ್ಯಾಪಾರ ಒಪ್ಪಂದ ಏರ್ಪಡುವುದೇ ಇಲ್ಲ ಎನ್ನುವಂತಿದ್ದ ಸ್ಥಿತಿ ರಾತ್ರೋರಾತ್ರಿ ಬದಲಾಗಿ ಹೋಗಿದೆ. ವ್ಯಾಪಾರ ಒಪ್ಪಂದಕ್ಕೆ ಸಹಿ ಬೀಳುವುದು ಖಚಿತವಾಗಿದೆ.
ಅಮೆರಿಕದ ಈ ಬದಲಾವದ ವರ್ತನೆಯ ಹಿಂದೆ ಅಜಿತ್ ದೋವಲ್ (Ajit Doval) ಇದ್ದಾರೆ ಎನ್ನುವಂತಹ ಮಾತುಗಳು ಕೇಳಿಬರುತ್ತಿವೆ. ಅಮೆರಿಕದ ಡಿಫೆನ್ಸ್ ಮಿನಿಸ್ಟರ್ರನ್ನು ಭೇಟಿ ಮಾಡಿದ್ದ ಅಜಿತ್ ದೋವಲ್, ನೇರಾನೇರ ಆಡಿದ ಮಾತುಗಳು ಫಲ ನೀಡಿವೆ ಎನ್ನಲಾಗಿದೆ.
ಕೆಲ ತಿಂಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ಹಾಗೂ ಚೀನಾ ಮುಖ್ಯಸ್ಥರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ನ್ಯಾಷನಲ್ ಸೆಕ್ಯೂರಿಟಿ ಅಡ್ವೈಸರ್ ಆದ ಅಜಿತ್ ದೋವಲ್ ಅವರು ಅಮೆರಿಕಕ್ಕೆ ತೆರಳಿ, ಅಲ್ಲಿಯ ರಕ್ಷಣಾ ಸಚಿವ ಮಾರ್ಕೊ ರೂಬಿಯೋ ಅವರನ್ನು ಭೇಟಿ ಮಾಡಿದ್ದರು. ಎರಡೂ ದೇಶಗಳು ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಮಾತುಕತೆಗಳಿಗೆ ಮತ್ತೆ ತೆರೆದುಕೊಳ್ಳುವಂತೆ ಒಪ್ಪಿಸಲು ಅಜಿತ್ ದೋವಲ್ ಯಶಸ್ವಿಯಾದರೆಂದು ಎಕನಾಮಿಕ್ ಟೈಮ್ಸ್ ಪತ್ರಿಕೆಯ ವರದಿಯಲ್ಲಿ ಹೇಳಲಾಗಿದೆ.
ಭಾರತವನ್ನು ಬೆದರಿಸುವ ಪ್ರಯತ್ನ ಬೇಡ ಎಂದ ದೋವಲ್
ಆ ಮಾತುಕತೆ ಗೌಪ್ಯ ಸಭೆಯಲ್ಲಿ ನಡೆದಿತ್ತೆಂದು ಹೇಳಲಾಗುತ್ತಿದೆ. ಹೀಗಾಗಿ, ಯಾವುದೇ ಮಾಧ್ಯಮಗಳಲ್ಲೂ ಈ ಭೇಟಿಯ ವೇಳೆ ಆದ ಮಾತುಕತೆ ಬಗ್ಗೆ ವರದಿ ಬಂದಿರಲಿಲ್ಲ. ಮೂಲಗಳು ತಿಳಿಸಿರುವ ಪ್ರಕಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತವರ ತಂಡದವರು ಭಾರತವನ್ನು ಹೆದರಿಸಲು ಆಗುವುದಿಲ್ಲ ಎಂದು ಮಾರ್ಕೋ ರೂಬಿಯೋ ಅವರಿಗೆ ಅಜಿತ್ ದೋವಲ್ ಕಡ್ಡಿ ತುಂಡು ಮಾಡಿದಂತೆ ತಿಳಿಸಿದರೆನ್ನಲಾಗಿದೆ.
ಈ ಹಿಂದೆ ಬೇರೆ ಅಮೆರಿಕನ್ ಆಡಳಿತಗಳನ್ನು ಭಾರತ ನೋಡಿದೆ. ಟ್ರಂಪ್ ಅವರಧಿ ಮುಗಿಯುವವರೆಗೆ ಬೇಕಾದರೆ ಕಾಯಲು ಭಾರತ ಸಿದ್ಧ ಇದೆ ಎಂದು ಮಾರ್ಕ್ ರುಬಿಯೋಗೆ ನೇರಾನೇರ ಹೇಳಿದ್ದ ಅಜಿತ್ ದೋವಲ್, ಅಮೆರಿಕನ್ನರು ಭಾರತದ ಮೇಲೆ ಸಾರ್ವಜನಿಕ ಟೀಕೆಗಳನ್ನು ಮಾಡುವುದನ್ನು ನಿಲ್ಲಿಸಿದರೆ ಸಂಬಂಧಗಳು ಮತ್ತೆ ಬೆಸೆಯಲು ಸಾಧ್ಯ ಎಂದು ಸ್ಪಷ್ಟವಾಗಿ ಹೇಳಿದ್ದರಂತೆ.
ಬೆಂಗಳೂರು, ಫೆಬ್ರವರಿ 5: ಬೆಂಗಳೂರಿನಲ್ಲಿ ಕುಡಿಯುವ ನೀರಿನ ದರ (Water Price) ಹೆಚ್ಚಳವಾಗಲಿದೆ ಎಂಬ ವದಂತಿಗಳಿಗೆ ಬೆಂಗಳೂರು ಜಲಮಂಡಳಿ (BWSSB) ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಬ್ರೇಕ್ ಹಾಕಿದ್ದಾರೆ. ನೀರಿನ ದರ ಏರಿಕೆ ಮಾಡುವ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕಾವೇರಿ ನೀರಿನ ಬೆಲೆ ಏರಿಕೆ ಕುರಿತು ವದಂತಿಗಳು ಹಬ್ಬಿರುವ ಕಾರಣ ಬೆಂಗಳೂರಿನಲ್ಲಿ ‘ಟಿವಿ9’ಗೆ ಮಾಹಿತಿ ನೀಡಿದ ಅವರು, ಕಾವೇರಿ ನೀರಿನ ಬೆಲೆ ಏರಿಕೆ ಕುರಿತು ಹರಿದಾಡುತ್ತಿರುವ ಸುದ್ದಿಗಳು ಸಂಪೂರ್ಣ ವದಂತಿ ಎಂದು ಸ್ಪಷ್ಟಪಡಿಸಿದ್ದಾರೆ. ಕುಡಿಯುವ ನೀರಿನ ದರ ಹೆಚ್ಚಿಸುವ ಬಗ್ಗೆ ಜಲಮಂಡಳಿ ಯಾವುದೇ ಮಟ್ಟದಲ್ಲೂ ಚಿಂತನೆ ನಡೆಸಿಲ್ಲ ಹಾಗೂ ಇದಕ್ಕೆ ಸಂಬಂಧಿಸಿದಂತೆ ಯಾವುದೇ ಸಭೆ ಅಥವಾ ಚರ್ಚೆಯೂ ನಡೆದಿಲ್ಲ ಎಂದು ತಿಳಿಸಿದ್ದಾರೆ.
ಇದರಿಂದ ಬೆಂಗಳೂರಿನ ನಾಗರಿಕರು ಸದ್ಯದ ಮಟ್ಟಿಗೆ ನಿರಾಳರಾಗುವಂತಾಗಿದೆ.
ಕಳೆದ ವರ್ಷ (2025) ಏಪ್ರಿಲ್ನಲ್ಲಿ ಬೆಂಗಳೂರು ಜಲ ಮಂಡಳಿ ನೀರಿನ ದರ ಏರಿಕೆ ಮಾಡಿತ್ತು. 2014ರ ಅಕ್ಟೋಬರ್ ನಂತರ ನಗರದಲ್ಲಿ ನೀರಿನ ದರ ಏರಿಕೆ ಮಾಡಿಲ್ಲ. ಹೆಚ್ಚುತ್ತಿರುವ ವೆಚ್ಚಗಳನ್ನು ಸರಿದೂಗಿಸಲು ನೀರಿನ ದರ ಏರಿಕೆ ಮಾಡದೆ ಬೇರೆ ವಿಧಿಯಿಲ್ಲ ಎಂದು ಜಲಮಂಡಳಿಯು ದರ ಏರಿಕೆ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು.
ಡೊಮೆಸ್ಟಿಕ್ ಕನೆಕ್ಷನ್ಗೆ ಗರಿಷ್ಠ ಲೀಟರ್ಗೆ ಒಂದು ಪೈಸೆ ಹೆಚ್ಚಳ ಮಾಡಲಾಗಿತ್ತು 0-8 ಸಾವಿರದೊಳಗೆ ಸ್ಲ್ಯಾಬ್ಗೆ ಲೀಟರ್ಗೆ 0.15 ಪೈಸೆ, 8-25 ಸಾವಿರದೊಳಗಿನ ಸ್ಲ್ಯಾಬ್ಗೆ ಲೀಟರ್ಗೆ 0.40 ಪೈಸೆ, 25 ಸಾವಿರ ಲೀಟರ್ಗಿಂತ ಹೆಚ್ಚು ಬಳಕೆ ಮಾಡಿದ್ರೆ 0.80 ಪೈಸೆ, 50 ಸಾವಿರದಿಂದ 1 ಲಕ್ಷ ಲೀಟರ್ ನೀರು ಬಳಕೆಗೆ 1 ಪೈಸೆ ಹೆಚ್ಚಳ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಮಾತನಾಡಿದ್ದ ರಾಮ ಪ್ರಸಾತ್ ಮನೋಹರ್, ನೀರಿನ ದರ ಪ್ರತಿ ವರ್ಷ ಏಪ್ರಿಲ್ 1ರಿಂದ ಶೇಕಡಾ 3ರಷ್ಟು ಹೆಚ್ಚಳವಾಗಲಿದೆ. ಸದ್ಯ ಗೃಹ ಬಳಕೆದಾರರಿಗೆ ತಿಂಗಳಿಗೆ 20-30 ರೂ. ಹೆಚ್ಚುವರಿ ಹೊರೆಯಾಗಬಹುದು. ವಾಣಿಜ್ಯ ಬಳಕೆದಾರರಿಗೆ ಪ್ರತಿ ತಿಂಗಳು 50-60 ರೂ. ಹೊರೆಯಾಗಬಹುದು ಎಂದು ಹೇಳಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಫೆ.5: ರಾಜ್ಯದ ಜೈಲುಗಳಲ್ಲಿ ಖೈದಿಗಳಿಗೆ ನೀಡಲಾಗುತ್ತಿದ್ದ ರಾಜಾತಿಥ್ಯ ಮತ್ತು ನಡೆಯುತ್ತಿದ್ದ ಅಕ್ರಮಗಳಿಗೆ ಬ್ರೇಕ್ ಹಾಕಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ (DGP Alok Kumar )ಅವರು ಈಗ ‘ವರ್ಗಾವಣೆ ಅಸ್ತ್ರ’ವನ್ನು ಪ್ರಯೋಗಿಸಲು ಮುಂದಾಗಿದ್ದಾರೆ. ರಾಜ್ಯದ ವಿವಿಧ ಜೈಲುಗಳಲ್ಲಿ, ವಿಶೇಷವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ವರ್ಷಾನುಗಟ್ಟಲೆ ಒಂದೇ ಕಡೆ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಪ್ಲಾನ್ ಮಾಡಲಾಗಿದೆ. ಜೈಲು ಸಿಬ್ಬಂದಿ ಹಣ ಪಡೆದು ಖೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಇದೇ ತಿಂಗಳ 9ರಿಂದ ಕೇಂದ್ರ ಕಾರಾಗೃಹ ಕಚೇರಿಯಲ್ಲಿ ಸಿಬ್ಬಂದಿಗಳಿಗೆ ಕೌನ್ಸೆಲಿಂಗ್ ನಡೆಸಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಮುಹೂರ್ತ ನಿಗದಿಯಾಗಿದೆ. ಇತ್ತೀಚೆಗೆ ಖೈದಿಗಳಿಗೆ ರಾಜಾತಿತ್ಯ ನೀಡಿ ಅತಿ ಹೆಚ್ಚು ಸುದ್ದಿಯಾಗಿದ್ದ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿಗಳ ಮೇಲೆ ಅಲೋಕ್ ಕುಮಾರ್ ಕಣ್ಣಿಟ್ಟಿದ್ದಾರೆ. ಬೇರೆ ಕಡೆಗಳಿಂದ ಜೈಲಿಗೆ ನಿಯೋಜನೆ (OOD) ಮೇಲೆ ಬಂದಿರುವ ಅಧಿಕಾರಿಗಳಿಗೂ ಈಗ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸಿಬ್ಬಂದಿಗಳನ್ನು ಆಗಾಗ ಬದಲಾವಣೆ ಮಾಡುವುದರಿಂದ ಜೈಲಿನ ಒಳಗಿನ ಅಕ್ರಮ ಜಾಲವನ್ನು ತಡೆಯಬಹುದು ಹಾಗೂ ಶಿಸ್ತನ್ನು ಕಾಪಾಡಬಹುದು ಎಂಬುದು ಡಿಜಿಪಿ ಅವರ ಉದ್ದೇಶವಾಗಿದೆ.
ಅಲೋಕ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಜೈಲುಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬರುತ್ತಿದ್ದು, ಈ ಸರಣಿ ವರ್ಗಾವಣೆಗಳು ಜೈಲು ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗಿದೆ. ಇದೀಗ ಅಲೋಕ್ ಕುಮಾರ್ ಅವರ ಈ ಕ್ರಮದಿಂದ ಅಧಿಕಾರಿಗಳಿಗೆ ಭಯ ಶುರುವಾಗಿದೆ. ಈಗಾಗಲೇ ಅವರು ಮಂಗಳೂರು, ಬೆಂಗಳೂರು ಜೈಲಿಗೆ ಭೇಟಿ ನೀಡಿ. ಅಲ್ಲಿನ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಚ್ಚರಿಕೆ ಬೆನ್ನಲ್ಲೇ ವರ್ಗಾವಣೆ ಕ್ರಮವನ್ನು ತೆಗೆದುಕೊಂಡಿದ್ದಾರೆ.
ಬಾಲಿವುಡ್ನಲ್ಲಿ (Bollywood) ಸಾಕಷ್ಟು ಹಾಟ್ ನಟಿಯರಿದ್ದಾರೆ ಆದರೆ ದಿಶಾ ಪಟಾನಿ ನಂಬರ್ 1 ಎನ್ನಬಹುದು. ಫಿಟ್ನೆಸ್ಗೆ ಅಪಾರ ಒತ್ತು ಕೊಡುವ ದಿಶಾ ಪಟಾನಿ, ಗ್ಲಾಮರಸ್ ಆಗಿಯೂ ಕಾಣಿಸಿಕೊಳ್ಳುತ್ತಾರೆ. ಸಿನಿಮಾ, ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುವ ನಟಿ ದಿಶಾ ಪಟಾನಿ, ನಿಜ ಜೀವನದಲ್ಲಿ ಸಹ ಸಖತ್ ಬೋಲ್ಡ್ ಆದ ನಿರ್ಣಯಗಳನ್ನೇ ತೆಗೆದುಕೊಳ್ಳುತ್ತಾರೆ. ಪದೇ ಪದೇ ಬಾಯ್ಫ್ರೆಂಡ್ ಬದಲಾಯಿಸುವ ದಿಶಾ ಪಟಾನಿ ಇದೀಗ ವಿಚಿತ್ರ ವ್ಯಕ್ತಿಯೊಡನೆ ಪ್ರೀತಿಗೆ ಬಿದ್ದಿದ್ದಾರೆ. ಮುಖಕ್ಕೆ ಪ್ರೇತತ ಪೇಯಿಂಟ್ ಬಳಿದುಕೊಂಡು ಓಡಾಡುವ ಯುವಕನೊಟ್ಟಿಗೆ ದಿಶಾ ರಿಲೇಷನ್ನಲ್ಲಿದ್ದಾರೆ.
ದಿಶಾ ಪಟಾನಿ ಈ ಹಿಂದೆ ಬಾಲಿವುಡ್ ಸ್ಟಾರ್ ನಟ ಟೈಗರ್ ಶ್ರಾಫ್ ಜೊತೆಗೆ ಪ್ರೀತಿಯಲ್ಲಿದ್ದರು. ಇವರಿಬ್ಬರ ಪ್ರೇಮ ಸಂಬಂಧ ಕೆಲ ವರ್ಷ ನಡೆಯಿತು, ಬಳಿಕ ಇಬ್ಬರೂ ದೂರಾದರು. ಬಳಿಕ ದಿಶಾ ಹೆಸರು ವಿದೇಶಿ ವ್ಯಕ್ತಿಯೊಬ್ಬನ ಜೊತೆ ಕೇಳಿ ಬಂತು. ಆದರೆ ಇದೀಗ ದಿಶಾ ಪಟಾನಿ, ಸದಾ ಕಾಲ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಓಡಾಡುವ ಸಂಗೀತಗಾರನೊಟ್ಟಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ಇಬ್ಬರೂ ಪರಸ್ಪರ ಕೈ-ಕೈ ಹಿಡಿದುಕೊಂಡು ಓಡಾಡುವ ಹಲವು ವಿಡಿಯೋ, ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಅಷ್ಟಕ್ಕೂ ಈ ವಿಚಿತ್ರ ವ್ಯಕ್ತಿ ಯಾರು?
ದಿಶಾ ಪಟಾನಿ ಪ್ರೀತಿಗೆ ಬಿದ್ದಿರುವ ಆ ವಿಚಿತ್ರ ಮುಖದ ವ್ಯಕ್ತಿಯ ಹೆಸರು ತಲ್ವಿಂಧರ್. ಭಾರತೀಯ ಮೂಲದ ಆದರೆ ಅಮೆರಿಕದ ಬೇ ಏರಿಯಾನಲ್ಲಿ ಬೆಳೆದ ತಲ್ವೀಂದರ್ ಇತ್ತೀಚೆಗೆ ಜನಪ್ರಿಯತೆ ಗಳಿಸಿರುವ ಗಾಯಕ. ಪಂಜಾಬಿ ಹಾಡುಗಳನ್ನು ಹಿಪ್-ಹಾಪ್, ಎಲೆಕ್ಟ್ರಾನಿಕ್ ಸಂಗೀತ ಜೊತೆಗೆ ಸೇರಿಸಿ ಹಾಡುವುದು ಇವರ ಸ್ಟೈಲ್. ಹಲವು ಶೋಗಳನ್ನು ಸಹ ನೀಡಿರುವ ತಲ್ವೀಂಧರ್, ಭಾರತದ ಜನಪ್ರಿಯ ಹಿಪ್-ಹಾಪ್ ಗಾಯಕರುಗಳಲ್ಲಿ ಒಬ್ಬರಾಗಿದ್ದಾರೆ.
ಮುಖಕ್ಕೆ ಬೇತಾಳದಂತೆ ಬಣ್ಣವನ್ನು ಬಳಿದುಕೊಂಡೇ ಓಡಾಡುತ್ತಾರೆ ತಲ್ವಿಂಧರ್. ಇತ್ತೀಚೆಗೆ ಸಂದರ್ಶನದಲ್ಲಿ ಭಾಗಿ ಆಗಿದ್ದಾಗಲೂ ಸಹ ಮುಖಕ್ಕೆ ಅವರು ಬಣ್ಣ ಬಳಿದುಕೊಂಡಿದ್ದರು. ತಲ್ವಿಂಧರ್ ಅವರ ತಂದೆ ಪೇಂಟರ್ ಆಗಿದ್ದರಂತೆ, ಅವರಿಗೆ ಗೌರವ ನೀಡಲೆಂದು ತಲ್ವಿಂಧರ್ ಮುಖಕ್ಕೆ ಬಣ್ಣ ಹಚ್ಚಿಕೊಳ್ಳುತ್ತಾರೆ. ಮಾತ್ರವಲ್ಲದೆ, ತಮ್ಮ ಮುಖವನ್ನು ಅವರು ಈ ವರೆಗೆ ಯಾವುದೇ ಕಾರ್ಯಕ್ರಮ ಅಥವಾ ಸಾಮಾಜಿಕ ಜಾಲತಾಣಗಳಲ್ಲಿ ತೋರಿಸಿಲ್ಲ.
ಇತ್ತೀಚೆಗೆ ತಲ್ವಿಂಧರ್ ನೀಡಿರುವ ಸಂದರ್ಶನದಲ್ಲಿ ಅವರಿಗೆ ದಿಶಾ ಪಟಾನಿಯೊಟ್ಟಿಗಿನ ಪ್ರೀತಿಯ ಬಗ್ಗೆ ಪ್ರಶ್ನೆ ಕೇಳಲಾಯ್ತು. ಹೌದು, ತಾವು ಪ್ರೀತಿಯಲ್ಲಿರುವುದಾಗಿ ತಲ್ವಿಂಧರ್ ಹೇಳಿದ್ದಾರೆ ಅಲ್ಲದೆ, ನಾನು ಪಇನ್ನೂ ನಿಜವಾದ ಪ್ರೀತಿಯನ್ನು ಹುಡುಕುತ್ತಲೇ ಇದ್ದೇನೆ ಎಂದು ಸಹ ಹೇಳಿದ್ದಾರೆ. ಆ ಮೂಲಕ ತಾವು ದಿಶಾ ಜೊತೆಗೆ ಭವಿಷ್ಯದಲ್ಲಿ ಬ್ರೇಕ್ ಅಪ್ ಮಾಡಿಕೊಳ್ಳಬಹುದು ಎಂದು ಸಹ ಹೇಳಿದ್ದಾರೆ.
ದಿಶಾ, ಬಾಲಿವುಡ್ನ ಹಾಟೆಸ್ಟ್ ನಟಿ, ದಿಶಾಗೆ ಈ ದೆವ್ವದ ಮುಖದವನಿಗಿಂತಲೂ ಬಹಳ ಒಳ್ಳೆಯ ಹುಡುಗರು, ನಟರುಗಳೇ ಸಿಗುತ್ತಿದ್ದರು ಎಂದು ದಿಶಾ ಅಭಿಮಾನಿಗಳೇ ಮೂಗು ಮುರಿಯುತ್ತಿದ್ದಾರೆ. ಏನೇ ಆಗಲಿ, ಪ್ರೀತಿಗೆ ಕಣ್ಣಿಲ್ಲ ಎಂಬುದು ದಿಶಾ ಪಟಾನಿ ವಿಷಯದಲ್ಲಿ ಸತ್ಯವೇ ಆದಂತಿದೆ.
ಬೆಂಗಳೂರು, ಫೆ.5: ರಾಜ್ಯದ ಜೈಲುಗಳಲ್ಲಿ ಖೈದಿಗಳಿಗೆ ನೀಡಲಾಗುತ್ತಿದ್ದ ರಾಜಾತಿಥ್ಯ ಮತ್ತು ನಡೆಯುತ್ತಿದ್ದ ಅಕ್ರಮಗಳಿಗೆ ಬ್ರೇಕ್ ಹಾಕಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ (DGP Alok Kumar )ಅವರು ಈಗ ‘ವರ್ಗಾವಣೆ ಅಸ್ತ್ರ’ವನ್ನು ಪ್ರಯೋಗಿಸಲು ಮುಂದಾಗಿದ್ದಾರೆ. ರಾಜ್ಯದ ವಿವಿಧ ಜೈಲುಗಳಲ್ಲಿ, ವಿಶೇಷವಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ವರ್ಷಾನುಗಟ್ಟಲೆ ಒಂದೇ ಕಡೆ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ವರ್ಗಾವಣೆ ಮಾಡಲು ಪ್ಲಾನ್ ಮಾಡಲಾಗಿದೆ. ಜೈಲು ಸಿಬ್ಬಂದಿ ಹಣ ಪಡೆದು ಖೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ.
ಇದೇ ತಿಂಗಳ 9ರಿಂದ ಕೇಂದ್ರ ಕಾರಾಗೃಹ ಕಚೇರಿಯಲ್ಲಿ ಸಿಬ್ಬಂದಿಗಳಿಗೆ ಕೌನ್ಸೆಲಿಂಗ್ ನಡೆಸಿ ವರ್ಗಾವಣೆ ಪ್ರಕ್ರಿಯೆ ಆರಂಭಿಸಲು ಮುಹೂರ್ತ ನಿಗದಿಯಾಗಿದೆ. ಇತ್ತೀಚೆಗೆ ಖೈದಿಗಳಿಗೆ ರಾಜಾತಿತ್ಯ ನೀಡಿ ಅತಿ ಹೆಚ್ಚು ಸುದ್ದಿಯಾಗಿದ್ದ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿಗಳ ಮೇಲೆ ಅಲೋಕ್ ಕುಮಾರ್ ಕಣ್ಣಿಟ್ಟಿದ್ದಾರೆ. ಬೇರೆ ಕಡೆಗಳಿಂದ ಜೈಲಿಗೆ ನಿಯೋಜನೆ (OOD) ಮೇಲೆ ಬಂದಿರುವ ಅಧಿಕಾರಿಗಳಿಗೂ ಈಗ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ. ಸಿಬ್ಬಂದಿಗಳನ್ನು ಆಗಾಗ ಬದಲಾವಣೆ ಮಾಡುವುದರಿಂದ ಜೈಲಿನ ಒಳಗಿನ ಅಕ್ರಮ ಜಾಲವನ್ನು ತಡೆಯಬಹುದು ಹಾಗೂ ಶಿಸ್ತನ್ನು ಕಾಪಾಡಬಹುದು ಎಂಬುದು ಡಿಜಿಪಿ ಅವರ ಉದ್ದೇಶವಾಗಿದೆ.
ಅಲೋಕ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ ಜೈಲುಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳು ಜಾರಿಗೆ ಬರುತ್ತಿದ್ದು, ಈ ಸರಣಿ ವರ್ಗಾವಣೆಗಳು ಜೈಲು ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರುವ ಉದ್ದೇಶವನ್ನು ಹೊಂದಿದೆ ಎಂದು ಹೇಳಲಾಗಿದೆ. ಇದೀಗ ಅಲೋಕ್ ಕುಮಾರ್ ಅವರ ಈ ಕ್ರಮದಿಂದ ಅಧಿಕಾರಿಗಳಿಗೆ ಭಯ ಶುರುವಾಗಿದೆ. ಈಗಾಗಲೇ ಅವರು ಮಂಗಳೂರು, ಬೆಂಗಳೂರು ಜೈಲಿಗೆ ಭೇಟಿ ನೀಡಿ. ಅಲ್ಲಿನ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ. ಈ ಎಚ್ಚರಿಕೆ ಬೆನ್ನಲ್ಲೇ ವರ್ಗಾವಣೆ ಕ್ರಮವನ್ನು ತೆಗೆದುಕೊಂಡಿದ್ದಾರೆ.
ನಿವೀನ್ ಪೌಳಿ (Nivin Pauly) ಅವರು ಹಲವು ಹಿಟ್ ಚಿತ್ರಗಳನ್ನು ನೀಡಿದವರು. ಆದರೆ, ಅವರಿಗೆ ಇತ್ತೀಚೆಗೆ ಗೆಲುವು ಸಿಕ್ಕಿರಲಿಲ್ಲ. ಆದರೆ, ‘ಸರ್ವಮ್ ಮಾಯಾ’ ಚಿತ್ರದ ಮೂಲಕ ಅವರು ಗೆಲುವಿನ ನಗೆ ಬೀರಿದ್ದಾರೆ. ಹಾಗಾದರೆ ಈ ಸಿನಿಮಾದಲ್ಲಿ ಅಂಥದ್ದೇನಿದೆ? ಈ ಚಿತ್ರದ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುವುದು ಏಕೆ? ಆ ಎಲ್ಲಾ ಪ್ರಶ್ನೆಗಳಿಗೆ ಈ ಸ್ಟೋರಿಯಲ್ಲಿದೆ ಉತ್ತರ. ಈ ಸಿನಿಮಾ ಹಾಟ್ಸ್ಟಾರ್ನಲ್ಲಿ ಮಲಯಾಳಂ ಜೊತೆ ಕನ್ನಡದಲ್ಲೂ ವೀಕ್ಷಣೆಗೆ ಲಭ್ಯವಿದೆ.
ಪ್ರಭೇಂದು (ನಿವೀನ್ ಪೌಳಿ) ದೊಡ್ಡ ಗಿಟಾರ್ ವಾದಕ ಆಗಬೇಕು ಎಂದು ಕನಸು ಕಾಣುತ್ತಾನೆ. ಅವರ ಟೀಂ ಯುರೋಪ್ಗೆ ತೆರಳುತ್ತದೆ. ಆದರೆ, ಪ್ರಭೇಂದುಗೆ ಮಾತ್ರ ವೀಸಾ ಸಿಗೋದಿಲ್ಲ. ಹೀಗಾಗಿ ಆತ ಊರಿಗೆ ಮರಳುತ್ತಾನೆ. ಇವರದ್ದು ಅರ್ಚಕರ ಕುಟುಂಬ. ಆ ವೃತ್ತಿಯನ್ನು ಮಾಡೋದಿಲ್ಲ ಎಂದು ದಿಕ್ಕರಿಸಿ ಹೋದವನು ಪ್ರಭೇಂದು. ನಂತರ ಮತ್ತೆ ಇದೇ ವೃತ್ತಿ ಮಾಡೋ ಪರಿಸ್ಥಿತಿ ಬರುತ್ತದೆ. ಆಗ ಶುರುವಾಗುತ್ತೆ ನೋಡಿ ಸಮಸ್ಯೆ.
ಮಯಾ ಮ್ಯಾಥೀವ್/ಡೆಲುಲು (ರಿಯಾ ಶಿಬು) ಆತ್ಮ ಪ್ರಭೇಂದು ಬೆನ್ನು ಬೀಳುತ್ತದೆ . ಮಾಯಾ ಈತನ ಹಿಂದೆ ಬೀಳಲು ಕಾರಣ ಏನು? ಕೊನೆ ಪ್ರಕರಣ ಯಾವ ಹಂತಕ್ಕೆ ತಲುಪುತ್ತದೆ ಎಂಬುದನ್ನು ಹಾಸ್ಯದ ರೂಪದಲ್ಲಿ ಹೇಳಲಾಗಿದೆ. ಅಜು ವರ್ಗೀಸ್ ಹಾಗೂ ನಿವೀನ್ ಪೌಳಿಯ ಕಾಂಬಿನೇಷನ್ನಲ್ಲಿ ಮೂಡಿಬರೋ ಹಾಸ್ಯ ಸಖತ್ ಆಗಿದೆ.
ಇದು ಆತ್ಮ/ದೆವ್ವದ ಸಿನಿಮಾ ಆದರೂ ಇಲ್ಲಿ ಎಲ್ಲಿಯೂ ಭಯ ಬೀಳೋ ಒಂದೇ ಒಂದು ದೃಶ್ಯ ಇಲ್ಲ. ಹೀಗಾಗಿ, ಹಾಹರ್ ಸಿನಿಮಾ ಎಂದು ದೂರ ಓಡುವವರು ಯಾವುದೇ ಅಂಜಿಕೆ ಇಲ್ಲದೆ ಈ ಚಿತ್ರ ವೀಕ್ಷಣೆ ಮಾಡಬಹುದು. ಈ ಸಿನಿಮಾದಲ್ಲಿ ಹಾಸ್ಯ ಇದೆ, ಒಂದು ಮಧರು ಪ್ರೇಮಕಥೆ ಇದೆ. ಆತ್ಮದ ಕಥೆ ಇಟ್ಟುಕೊಂಡು ಹೀಗೂ ಸಿನಿಮಾ ಮಾಡಬಹುದು ಎಂಬುದನ್ನು ನಿರ್ದೇಶಕ ಅಖಿಲ್ ಸತ್ಯನ್ ತೋರಿಸಿಕೊಟ್ಟಿದ್ದಾರೆ.
ಕ್ಲೈಮ್ಯಾಕ್ಸ್ ಅರ್ಥವೇನು? (ಸಿನಿಮಾ ನೋಡಿದವರಿಗೆ ಮಾತ್ರ)
ಚಿತ್ರದ ಕ್ಲೈಮ್ಯಾಕ್ಸ್ ಅಲ್ಲಿ ಪ್ರಭೇಂದು ಮಾಯಾ ಮನೆಗೆ ಬರುತ್ತಾನೆ. ಮಾಯಾ ತಾಯಿ, ನೀನೇನಾ ನನ್ನ ಮಗಳನ್ನು ಪ್ರೀತಿಸಿದ್ದು ಎಂದು ಕೇಳುತ್ತಾಳೆ. ಆಗ ಪ್ರಭೇಂದು ಹೌದು ಎನ್ನುವ ಉತ್ತರ ಕೊಡುತ್ತಾನೆ. ಆದರೆ, ಡೆಲುಲು ಅಥವಾ ಮಾಯ ಬದುಕಿದ್ದಾಗ ಪ್ರೀತಿಸಿದ ಹುಡುಗ ಪ್ರಭೇಂದು ಅಲ್ಲ. ಒಂದೊಮ್ಮೆ ಪ್ರಭೇಂದುವೇ ಆಕೆ ಪ್ರೀತಿಸಿದ ಹುಡುಗನಾಗಿದ್ದರೆ ಮೊದಲ ಭೇಟಿಯಲ್ಲೇ ಗೊತ್ತಾಗಿಬಿಡುತ್ತಿತ್ತು. ಆಕೆ ಪ್ರೀತಿಸಿದ ಹುಡುಗನ ಮಿಸ್ಟರಿಯಾಗಿಯೇ ಇಡಲಾಗಿದೆ. ಪ್ರಭೇಂದು ಹೇಳುವ ‘ಯೆಸ್’ ಎಂಬುದರಿಂದ ಮಾಯಾಗೆ ಮುಕ್ತಿ ಸಿಗುತ್ತದೆ. ಏಕೆಂದರೆ ತಾನು ಪ್ರೀತಿಸಿದ ಹುಡುಗನ ಮನೆಯವರಿಗೆ ಪರಿಚಯಿಸಬೇಕು ಎಂಬುದು ಆಕೆಯ ಕೊನೆಯ ಆಸೆ ಕೂಡ ಆಗಿತ್ತು. ಸತ್ತ ಬಳಿಕ ನಿಜಕ್ಕೂ ಪ್ರಭೇಂದು ಮೇಲೆ ಮಾಯಾಗೆ ಪ್ರೀತಿ ಆಗಿದ್ದರಿಂದ, ಅವಳು ಯೆಸ್ ಹೇಳಿದ್ದರಲ್ಲಿ ಅರ್ಥವಿದೆ ಎಂದು ಕೂಡ ಹೇಳಬಹುದು.
ಪಾಲಕ್ಕಾಡ್, ಫೆಬ್ರವರಿ 05: ವಲಯಾರ್-ವಡಕ್ಕಂಚೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಂಗಡಿ ಹಣ್ಣನ್ನು ಸಾಗಿಸುತ್ತಿದ್ದ ಟ್ರಕ್ನಲ್ಲಿ ಸ್ಫೋಟಕಗಳು(Explosive) ಪತ್ತೆಯಾಗಿದ್ದು, ಆತಂಕ ಮನೆ ಮಾಡಿದೆ. ತಮಿಳುನಾಡಿನ ಧರ್ಮಪುರಿಯ ಪಾಪರಪಟ್ಟಿ ಮೂಲದ ಲಾರಿ ಚಾಲಕ ಸೆಂಥಿಲ್ ಕುಮಾರ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
100ಕ್ಕೂ ಹೆಚ್ಚು ಪೆಟ್ಟಿಗೆಗಳಲ್ಲಿ, ಜಿಲೆಟಿನ್ ಹಾಗೂ ಡಿಟೋನೇಟರ್ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬುಧವಾರ ರಾತ್ರಿ 9 ಗಂಟೆ ಸುಮಾರಿಗೆ ಪಾಲಕ್ಕಾಡ್ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿಯ ಸರ್ವೀಸ್ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಲಾರಿಯ ಮೇಲೆ ರಾಶಿ ಹಾಕಿದ್ದ ಕಲ್ಲಂಗಡಿ ಹಣ್ಣುಗಳನ್ನು ತೆಗೆದು ಪರಿಶೀಲಿಸಿದಾಗ ಪೆಟ್ಟಿಗೆಗಳಲ್ಲಿ ಸ್ಫೋಟಕಗಳು ತ್ರಿಶೂರ್ಗೆ ಸಾಗಿಸಲಾಗುತ್ತಿತ್ತು ಎಂದು ಸೆಂಥಿಲ್ ಕುಮಾರ್ ತಿಳಿಸಿದ್ದಾರೆ.
#WATCH | Palakkad, Kerala: A large cache of explosives hidden in a watermelon truck was seized by the Palakkad police. pic.twitter.com/jPmfpEDm9o
ಸುಳಿವು ದೊರೆತ ನಂತರ, ದಕ್ಷಿಣ ಇನ್ಸ್ಪೆಕ್ಟರ್ ವಿಪಿನ್ ಕುಮಾರ್ ನೇತೃತ್ವದಲ್ಲಿ ತನಿಖೆ ನಡೆಸಲಾಯಿತು. ಬಾಂಬ್ ನಿಷ್ಕ್ರಿಯ ದಳವೂ ಸ್ಥಳಕ್ಕೆ ತಲುಪಿತ್ತು. ಚಾಲಕನನ್ನು ವಿಚಾರಣೆ ನಡೆಸಿದ ನಂತರವೇ ಹೆಚ್ಚಿನ ಮಾಹಿತಿ ಲಭ್ಯವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷವಷ್ಟೇ ಪಾಲಕ್ಕಾಡ್ ಮತ್ತು ಕೊಯಮತ್ತೂರಿನ ಪೊಲೀಸರು ತಮಿಳುನಾಡಿನಿಂದ ಕೇರಳಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ನಲವತ್ತು ಸಾವಿರಕ್ಕೂ ಹೆಚ್ಚು ಜಿಲೆಟಿನ್ಗಳು ಹಾಗೂ ಐದು ಸಾವಿರಕ್ಕೂ ಹೆಚ್ಚು ಡಿಟೋನೇಟರ್ಗಳನ್ನು ವಶಪಡಿಸಿಕೊಂಡಿದ್ದರು.