Category Archives: Blog

Your blog category

ಚಾಕೊಲೇಟ್ ಕೊಡುವ ನೆಪದಲ್ಲಿ ಹೇಯ ಕೃತ್ಯ: 8 ವರ್ಷದ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ – Kannada News | Hubballi: Elderly Man Arrested for POCSO After Physical assaulting 8 Year Old Girl

ಅಶೋಕನಗರ ಪೊಲೀಸ್ ಠಾಣೆImage Credit source: tv9 kannada

ಹುಬ್ಬಳ್ಳಿ, ಫೆಬ್ರವರಿ 02: ಕ್ಯಾನ್ಸರ್ ಪೀಡಿತ 75 ವರ್ಷದ ವೃದ್ಧನಿಂದ 8 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವಂತಹ ಘಟನೆ ಹುಬ್ಬಳ್ಳಿಯ (Hubballi) ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜನವರಿ 29ರಂದು ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಚಾಕೊಲೇಟ್ ಕೊಡುವುದಾಗಿ ಹೇಳಿ ಪಕ್ಕದ ಮನೆಯ ಬಾಲಕಿಯನ್ನ ಮನೆಗೆ ಕರೆಸಿಕೊಂಡು ವೃದ್ಧ ಕೃತ್ಯವೆಸಗಿದ್ದಾನೆ. ಹುಬ್ಬಳ್ಳಿಯ ಅಶೋಕನಗರ ಠಾಣೆಯಲ್ಲಿ ಪೋಕ್ಸೋ ಕೇಸ್ (POCSO Case) ದಾಖಲಾಗಿದ್ದು, ಸದ್ಯ ಆರೋಪಿ ವೃದ್ಧನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

ಸಾಲ ತೀರಿಸು ಎಂದಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪತಿ

ಚಾಕುವಿನಿಂದ ಪತ್ನಿಯ ಕತ್ತು ಕೊಯ್ದು ಪತಿ ಕೊಲೆಗೈದಿರುವಂತಹ ಘಟನೆ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರದಲ್ಲಿ ನಡೆದಿದೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಮನೆ ಮುಂದೆಯೇ ಪತ್ನಿ ತೆಹಸಿನ್(28)ರನ್ನು ಪತಿ ಇರ್ಫಾನ್ ಬರ್ಬರವಾಗಿ ಹತ್ಯೆಗೈದಿದ್ದಾರೆ. ಗೋಕುಲ್​ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಆರತಕ್ಷತೆಗೆ ತೆರಳುವಾಗ ಅಡ್ಡಗಟ್ಟಿ ವರನಿಗೆ ಚಾಕು ಇರಿತ ಕೇಸ್​​​ಗೆ ಬಿಗ್ ಟ್ವಿಸ್ಟ್​, ಮದ್ವೆಯಾಗಬೇಕಿದ್ದವಳೇ ವಿಲನ್

ಕೊಲೆ ಮಾಡಿ ಕೆಲ ಹೊತ್ತು ತಲೆ ಮರೆಸಿಕೊಂಡಿದ್ದ ಇರ್ಫಾನ್, ಬಳಿಕ ತಾವೇ ಮಗುವಿನೊಂದಿಗೆ ಬಂದು ಕೇಶ್ವಾಪುರ ಪೊಲೀಸ್ ಠಾಣೆಗೆ ಶರಣಾಗಿದ್ದಾರೆ. ತೆಗೆದುಕೊಂಡಿದ್ದ ಸಾಲವನ್ನು ದುಡಿದು ತುಂಬುವಂತೆ ತೆಹಸಿನ್​​ ಹೇಳಿದ್ದಾರೆ. ಇದೇ ವಿಚಾರವಾಗಿ ದಂಪತಿ ಮಧ್ಯೆ ಪದೇ ಪದೇ ಜಗಳ ಕೂಡ ನಡೆದಿದೆ. ಹೀಗಾಗಿ ಆಕ್ರೋಶಗೊಂಡು ಕೊಲೆ ಮಾಡಲಾಗಿದೆ. ಕುತ್ತಿಗೆ ಸೇರಿದಂತೆ ನಾಲ್ಕೈದು ಕಡೆಗಳಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ.

ಚಲಿಸುತ್ತಿದ್ದ ಆಲ್ಟೋ ಕಾರಿಗೆ ಕ್ಯಾಂಟರ್ ಲಾರಿ ಡಿಕ್ಕಿ: ಇಬ್ಬರು ಸಾವು

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಉಳ್ಳೂರು ಗ್ರಾಮದ ಮುಡಿಂಗೆಮಟ್ಟೆ ಕ್ರಾಸ್ ಬಳಿ ಕ್ಯಾಂಟರ್​ ಡಿಕ್ಕಿಯಾಗಿ ಆಲ್ಟೋ ಕಾರು ಚಾಲಕ ಸೇರಿ ಇಬ್ಬರು ದುರ್ಮರಣ ಹೊಂದಿರುವಂತಹ ಘಟನೆ ನಡೆದಿದೆ. ಕಾರು ಚಾಲಕ ವೀರೇಶ್, ಪವಿತ್ರಾ ಮೃತರು.

ಇದನ್ನೂ ಓದಿ: ಹಣಕ್ಕಾಗಿ ತ್ರಿವಳಿ ಕೊಲೆ ಶಂಕೆ: ತಂಗಿ ಗರ್ಭಿಣಿ ಎಂದು ಖಾಕಿ ಮುಂದೆ ಕತೆ ಹೇಳಿದ್ನಾ ಕಿರಾತಕ?

ಆನಂದಪುರದಲ್ಲಿ ಸ್ನೇಹಿತರ ಮನೆಯಲ್ಲಿ ಕಾರ್ಯಕ್ರಮ ಮುಗಿಸಿ ಸಾಗರ ಪಟ್ಟಣಕ್ಕೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ. ಕ್ಯಾಂಟರ್ ಲಾರಿ ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ. ಆನಂದಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 3:17 pm, Mon, 2 February 26

Source link

ಕೇವಲ ಸೀಟಲ್ಲ ರೈಲಿನ ಒಂದು ಬೋಗಿಯೇ ನಾಪತ್ತೆ, ಒಡಿಶಾದಲ್ಲಿ ಘಟನೆ – Kannada News | Passengers Stranded After Coach Goes Missing on Odisha Train

ಸಂಬಲ್ಪುರ, ಫೆಬ್ರವರಿ 02: ಸಂಬಲ್ಪುರ-ನಾಂದೇಡ್ ಎಕ್ಸ್​ಪ್ರೆಸ್​ ರೈಲಿನಲ್ಲಿ ಒಂದು ಸೀಟಲ್ಲ ಒಂದು ಬೋಗಿ(Coach)ಯೇ ಕಾಣೆಯಾಗಿರುವ ಘಟನೆ ವರದಿಯಾಗಿದೆ. ಪ್ರಯಾಣಿಕರು ತಾವು ರೈಲು ಟಿಕೆಟ್ ಬುಕ್ ಮಾಡಿದ ಕೋಚ್ ಕಾಣೆಯಾಗಿದೆ ಎಂದು ತಿಳಿದು ದಿಗ್ಭ್ರಮೆಗೊಂಡರು. ಒಡಿಶಾದ ಸಂಬಲ್ಪುರ ರೈಲು ನಿಲ್ದಾಣದ ದೃಶ್ಯಗಳು ಗೊಂದಲಮಯವಾಗಿದ್ದವು. ತಾವು ಬುಕ್ ಮಾಡಿದ್ದ ಎಸಿ ಬೋಗಿ ಕಾಣೆಯಾಗಿತ್ತು. ಸಂಬಲ್ಪುರ-ನಾಂದೇಡ್ ಎಕ್ಸ್‌ಪ್ರೆಸ್ ಎಸಿ-3 ಟೈರ್ ಕೋಚ್ ಇಲ್ಲದೆ ನಿಲ್ದಾಣಕ್ಕೆ ಬಂದಿತು ಮತ್ತು ಸುಮಾರು 57 ಪ್ರಯಾಣಿಕರು ತಿಳಿಯದೆ ಪ್ಲಾಟ್‌ಫಾರ್ಮ್‌ನಲ್ಲಿ ನಿಂತಿದ್ದರು.

ರೈಲು ಸಂಖ್ಯೆ 20809 ಒಡಿಶಾದ ಸಂಬಲ್ಪುರ ರೈಲು ನಿಲ್ದಾಣವನ್ನು ಸೀಟು ಇಲ್ಲದೆ ಅಲ್ಲ, ಸಂಪೂರ್ಣ ಕೋಚ್ ಇಲ್ಲದೆ ಪ್ರವೇಶಿಸಿತ್ತು. ದೃಢಪಡಿಸಿದ ಟಿಕೆಟ್‌ಗಳನ್ನು ಹೊಂದಿರುವ ಪ್ರಯಾಣಿಕರಿಗೆ ರೈಲಿನ ಲಭ್ಯವಿರುವ ಖಾಲಿ ಬರ್ತ್‌ಗಳಲ್ಲಿ ಸ್ಥಳಾವಕಾಶ ಕಲ್ಪಿಸಲಾಗಿತ್ತು. ಘಟನೆಯ ಬಗ್ಗೆ ಪ್ರಶ್ನಿಸಿದಾಗ, ತಾಂತ್ರಿಕ ಸಮಸ್ಯೆಯಿಂದಾಗಿ ಕಾಯ್ದಿರಿಸಿದ ಕೋಚ್ ಅನ್ನು ರೈಲಿಗೆ ಜೋಡಿಸಲು ಸಾಧ್ಯವಾಗಲಿಲ್ಲ ಎಂದು ರೈಲ್ವೆ ತಿಳಿಸಿದೆ.

ಪ್ರಯಾಣಿಕರ ಸುರಕ್ಷತೆ ಮತ್ತು ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಯಿತು,ಮಹಾರಾಷ್ಟ್ರದ ಸಂಬಲ್ಪುರ ಮತ್ತು ನಾಂದೇಡ್ ನಡುವೆ ರೈಲು ಚಲಿಸುತ್ತದೆ. ಅವ್ಯವಸ್ಥೆಯ ನಂತರ, ಪ್ರಯಾಣಿಕರಿಗೆ ಅನುಕೂಲವಾಗುವಂತೆ ವಿಶಾಖಪಟ್ಟಣಂ ನಿಲ್ದಾಣದಲ್ಲಿ ಹೊಸ ಕೋಚ್ ಅನ್ನು ಸೇರಿಸಲಾಯಿತು.

ಮತ್ತಷ್ಟು ಓದಿ: ಪ್ರಯಾಣಿಕರಿಗೆ ಗುಡ್ ನ್ಯೂಸ್: ಯಶವಂತಪುರದಿಂದ ಹೊರಡುವ ಈ ವಂದೇ ಭಾರತ್ ರೈಲಿಗೆ ಹೆಚ್ಚುವರಿ ಬೋಗಿಗಳು

ಆಧುನೀಕರಣದ ಬಗ್ಗೆ ಪದೇ ಪದೇ ಘೋಷಣೆಗಳನ್ನು ಮಾಡುತ್ತಿದ್ದರೂ, ಅನೇಕ ಮಾರ್ಗಗಳು ಇನ್ನೂ ಹಳೆಯ ಮೂಲಸೌಕರ್ಯ ಮತ್ತು ಕಳಪೆ ನಿರ್ವಹಣೆಯೇ ಮುಂದುವರೆದಿದೆ. ಕೆಲವು ಪ್ರಯಾಣಿಕರು ರೈಲ್ವೆ ಆಡಳಿತದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ತಮ್ಮ ಅಸಮಾಧಾನ ಹೊರಹಾಕಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ರೈಲ್ವೆ ಅಧಿಕಾರಿಗಳು, ಟಿಟಿಇಗಳು ಮತ್ತು ರೈಲ್ವೆ ರಕ್ಷಣಾ ಪಡೆ (ಆರ್‌ಪಿಎಫ್) ಸ್ಥಳಕ್ಕೆ ತಲುಪಿ ಪ್ರಯಾಣಿಕರಿಗೆ ಪರಿಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.

ರೈಲ್ವೆ ಆಡಳಿತದ ಪ್ರಕಾರ, ತೊಂದರೆಗೊಳಗಾದ ಪ್ರಯಾಣಿಕರಿಗೆ ಪ್ರಯಾಣಕ್ಕೆ ಅಡ್ಡಿಯಾಗದಂತೆ ಇತರ ಬೋಗಿಗಳಲ್ಲಿ ಲಭ್ಯವಿರುವ ಖಾಲಿ ಬರ್ತ್‌ಗಳಲ್ಲಿ ತಾತ್ಕಾಲಿಕವಾಗಿ ಸ್ಥಳಾವಕಾಶ ಕಲ್ಪಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 3:18 pm, Mon, 2 February 26

Source link

ಬಾಯಿಯ ಆರೋಗ್ಯಕ್ಕೂ ಹೃದಯಕ್ಕೂ ಸಂಬಂಧವಿದೆಯೇ; ಈ ಬಗ್ಗೆ ಮಾಹಿತಿ ನೀಡಿದ್ದಾರೆ ಡಾ. ಅನುಪಮಾ ವಿ. ಹೆಗ್ಡೆ – Kannada News | Dr. Anupama V. Hegde on Oral Health & Heart Connection

ಸಾಮಾನ್ಯವಾಗಿ ಬಾಯಿಯ ಆರೋಗ್ಯದ ಬಗ್ಗೆ ಹೆಚ್ಚಾಗಿ ಕಾಳಜಿ ವಹಿಸುವುದಿಲ್ಲ. ಆದರೆ ಬಾಯಿ ಮತ್ತು ಹೃದಯಕ್ಕೂ ಸಂಬಂಧವಿದೆ ಎಂಬುದು ನಿಮಗೆ ತಿಳಿದಿದೆಯೇ. ಹೌದು, ಈ ಬಗ್ಗೆ ಸರಿಯಾಗಿ ತಿಳಿದುಕೊಂಡು ಬಾಯಿಯ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಅನಿವಾರ್ಯವಾಗಿದೆ. ಅದಕ್ಕಾಗಿಯೇ ಟಿವಿ9 ಕನ್ನಡ ಈ ವಿಷಯಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿ ಪಡೆಯಲು ಬೆಂಗಳೂರು ರಾಮಯ್ಯ ಮೆಮೋರಿಯಲ್ ಆಸ್ಪತ್ರೆಯ ಹೃದ್ರೋಗ ವಿಭಾಗದ ಹಿರಿಯ ಸಲಹೆಗಾರರಾಗಿರುವ ಡಾ. ಅನುಪಮಾ ವಿ. ಹೆಗ್ಡೆ (Dr. Anupama V. Hegde), ಅವರನ್ನು ಸಂಪರ್ಕಿಸಿತ್ತು. ಈ ವಿಷಯದ ಕುರಿತಂತೆ ಅವರು ಹೆಚ್ಚಿನ ಮಾಹಿತಿ ನೀಡಿದ್ದು, ದಂತದ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ವಿವರವಾದ ಮಾಹಿತಿ ನೀಡಿದ್ದಾರೆ. ಅವರು ಹೇಳುವ ಪ್ರಕಾರ, ನಾವು ಸೇವಿಸುವ ಆಹಾರದ ಜೀರ್ಣಕ್ರಿಯೆಗೆ ಅತ್ಯಗತ್ಯವಾಗುವುದರಿಂದ ಬಾಯಿಯ ಆರೋಗ್ಯ ಚೆನ್ನಾಗಿರುವುದು ಅತ್ಯಮೂಲ್ಯವಾಗಿರುತ್ತದೆ. ಇಲ್ಲವಾದಲ್ಲಿ, ವಸಡಿನ ಸೋಂಕು, ಹಾನಿಕಾರಕ ರೋಗಾಣುಗಳು ಆಹಾರದ ಮೂಲಕ ದೇಹಕ್ಕೆ ಪ್ರವೇಶಿಸುತ್ತದೆ. ಈ ರೋಗಾಣುಗಳು ನಂತರ ಹೃದಯರಕ್ತನಾಳದ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಆದ್ದರಿಂದ, ಹೃದಯವನ್ನು ಆರೋಗ್ಯವಾಗಿಟ್ಟುಕೊಳ್ಳಲು ಬಾಯಿ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ ಎಂದು ಹೇಳಿದ್ದಾರೆ. ಈ ಬಗೆಗಿನ ಮತ್ತಷ್ಟು ಮಾಹಿತಿ ಪಡೆಯಲು ಈ ವಿಡಿಯೋ ನೋಡಿ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​ ಮಾಡಿ.

Source link

ಪಾಕಿಸ್ತಾನದಿಂದ ವಲಸೆ ಬಂದ ದಲಿತ ಹಿಂದೂಗಳಿಗೆ ವಸತಿ ಕಲ್ಪಿಸಿ; ಸುಪ್ರೀಂ ಕೋರ್ಟ್ ಆದೇಶ – Kannada News | Supreme Court stops eviction of Pakistan Born Dalit Hindus in Delhi seeks dignified housing

ನವದೆಹಲಿ, ಫೆಬ್ರವರಿ 2: ಪಾಕಿಸ್ತಾನದಿಂದ ವಲಸೆ ಬಂದ ಪರಿಶಿಷ್ಟ ಜಾತಿಯ ಹಿಂದೂಗಳ ದುಃಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ದೆಹಲಿಯಲ್ಲಿ ಅವರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸುಪ್ರೀಂ ಕೋರ್ಟ್ (Supreme Court) ಆದೇಶಿಸಿದೆ. ದೆಹಲಿಯಿಂದ ಪಾಕ್ ನಿರಾಶ್ರಿತರನ್ನು ಗಡಿಪಾರಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಮಜ್ನು ಕಾ ತಿಲಾ ಮತ್ತು ಸಿಗ್ನೇಚರ್ ಸೇತುವೆ ಬಳಿ ವಾಸಿಸುವ ಸುಮಾರು 250 ಕುಟುಂಬಗಳ 1,000ಕ್ಕೂ ಹೆಚ್ಚು ಜನರನ್ನು ಗಡಿಪಾರಿನಿಂದ ರಕ್ಷಿಸಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎಂ.ಎಂ. ಸುಂದರೇಶ್ ಮತ್ತು ಎನ್. ಕೋಟೇಶ್ವರ ಸಿಂಗ್ ಅವರ ನ್ಯಾಯಪೀಠವು ಈ ಆದೇಶವನ್ನು ಹೊರಡಿಸಿದೆ.

ಕೇಂದ್ರ ಸರ್ಕಾರ ಈ ಜನರಿಗೆ ಭಾರತೀಯ ಪೌರತ್ವವನ್ನು ನೀಡಿರುವುದರಿಂದ, ಅವರಿಗೆ ಘನತೆಯಿಂದ ಬದುಕಲು ಸ್ಥಳವನ್ನು ಕೂಡ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗೇ, ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರಕ್ಕೆ 4 ವಾರಗಳ ಕಾಲಾವಕಾಶ ಕೂಡ ನೀಡಲಾಗಿದೆ. ಅಲ್ಲಿಯವರೆಗೆ, ಈ ಕುಟುಂಬಗಳನ್ನು ಸ್ಥಳಾಂತರಿಸಲು ಪ್ರಯತ್ನಿಸುವ ಯಾವುದೇ ಸರ್ಕಾರಿ ಕ್ರಮಗಳು ಅಥವಾ ಯೋಜನೆಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುವುದು ಎಂದು ತಿಳಿಸಿದೆ.

ಇದನ್ನೂ ಓದಿ: ಎಲ್ಲ ಶಾಲೆಗಳಲ್ಲಿ ಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ ನೀಡುವುದು ಕಡ್ಡಾಯ; ಸುಪ್ರೀಂ ಕೋರ್ಟ್ ಆದೇಶ

ದೆಹಲಿಯ ಮಜ್ನು ಕಾ ತಿಲಾ ಪ್ರದೇಶದ ಸಿಗ್ನೇಚರ್ ಸೇತುವೆಯ ಬಳಿ ವಾಸಿಸುತ್ತಿರುವ ಈ ಕುಟುಂಬಗಳ ಸಂಭಾವ್ಯ ಸ್ಥಳಾಂತರಕ್ಕೆ ಸಂಬಂಧಿಸಿದ ವಿಷಯದ ವಿಚಾರಣೆಯ ಸಂದರ್ಭದಲ್ಲಿ ಈ ಆದೇಶ ಹೊರಬಿದ್ದಿದೆ.

ಪಾಕಿಸ್ತಾನದಿಂದ ಸ್ಥಳಾಂತರಗೊಂಡು ಭಾರತಕ್ಕೆ ಬರುವ ಜನರ ದುಃಸ್ಥಿತಿಯ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿದೆ. ಭಾರತದ ಪೌರತ್ವ ಪಡೆದಿದ್ದರೂ ಈ ಜನರು ಎದುರಿಸುತ್ತಿರುವ ಗಡಿಪಾರಿನ ಆತಂಕ ಗಂಭೀರ ವಿಷಯವಾಗಿದೆ ಎಂದು ನ್ಯಾಯಮೂರ್ತಿ ಸುಂದರೇಶ್ ಅವರ ಪೀಠ ಹೇಳಿದೆ. ಭಾರತದ ಪ್ರಜೆಗಳಾಗಿ ಅವರಿಗೆ ಗೌರವಯುತವಾಗಿ ಬದುಕಲು ವಸತಿ ಸಿಗಬೇಕು. ಸಿಗ್ನೇಚರ್ ಸೇತುವೆಯ ಬಳಿ ತಾತ್ಕಾಲಿಕವಾಗಿ ವಾಸಿಸುವ ಈ ಜನರನ್ನು ಕಾಂಕ್ರೀಟ್ ಯೋಜನೆ ಇಲ್ಲದೆ ತೆಗೆದುಹಾಕುವುದು ಅವರ ಹಕ್ಕುಗಳನ್ನು ಉಲ್ಲಂಘಿಸಿದಂತೆ ಎಂದು ನ್ಯಾಯಾಲಯ ಹೇಳಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On – 3:10 pm, Mon, 2 February 26

Source link

ಸಿ.ಜೆ. ರಾಯ್ ಆತ್ಮಹತ್ಯೆ ಬಗ್ಗೆ ನ್ಯಾಯಾಂಗ ತನಿಖೆಗೆ ಆಗ್ರಹಿಸಿ ವಿತ್ತ ಸಚಿವೆಗೆ ಕೇರಳ ಸಿಎಂ ಪತ್ರ – Kannada News | C.J. Roy Suicide: Kerala CM Pinarayi Vijayan Urges Judicial Probe, Writes to Finance Minister Nirmala Sitharaman

ಸಿ.ಜೆ. ರಾಯ್​​ ಕೇಸ್​ ಬಗ್ಗೆ ವಿತ್ತ ಸಚಿವೆಗೆ ಕೇರಳ ಸಿಎಂ ಪತ್ರ
Image Credit source: Google

ತಿರುವನಂತಪುರಂ, ಫೆಬ್ರವರಿ 02: ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿ ವಿತ್ತ ಸಚಿವೆ ನಿರ್ಮಲಾ​ ಸೀತಾರಾಮನ್​​ಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಪತ್ರ ಬರೆದು ಒತ್ತಾಯಿಸಿದ್ದಾರೆ. ಕಾನ್ಫಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ. ರಾಯ್ ಆತ್ಮಹತ್ಯೆ ಪ್ರಕರಣದ ತನಿಖೆಗೆ ಕರ್ನಾಟಕ ಸರ್ಕಾರ ಈಗಾಗಲೇ ಎಸ್‌ಐಟಿ ರಚಿಸಿದ್ದು, ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ ವಂಶಿಕೃಷ್ಣ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎನ್ನುವುದಿಲ್ಲಿ ಗಮನಾರ್ಹ.

ಪಿಣರಾಯಿ ವಿಜಯನ್ ಪತ್ರದಲ್ಲಿ ಏನಿದೆ?

ಜನವರಿ 30, 2026ರಂದು ಆದಾಯ ತೆರಿಗೆ ಸಿಬ್ಬಂದಿ ನಡೆಸಿದ ಶೋಧ ಕಾರ್ಯಾಚರಣೆಯ ಮಧ್ಯೆ ಬೆಂಗಳೂರಿನಲ್ಲಿ ಕಾನ್ಫಿಡೆಂಟ್ ಗ್ರೂಪ್‌ನ ಮುಖ್ಯಸ್ಥ ಸಿ.ಜೆ. ರಾಯ್ ಅಸಹಜ ಮರಣದ ಬಗ್ಗೆ ಕೇರಳದ ಜನರ ತೀವ್ರ ದುಃಖವನ್ನು ಹಂಚಿಕೊಳ್ಳಲು ನಾನು ಈ ಪತ್ರವನ್ನು ಬರೆಯುತ್ತಿದ್ದೇನೆ. ಈ ಘಟನೆಯ ಬಗ್ಗೆ ಕೇಳಿ ಉದ್ಯಮ ಸಮುದಾಯ ಮತ್ತು ನಾಗರಿಕ ಸಮಾಜ ಆಘಾತಕ್ಕೊಳಗಾಗಿದೆ. ಈ ದುರದೃಷ್ಟಕರ ಘಟನೆಯು ದೇಶದ ತೆರಿಗೆ ಆಡಳಿತದ ಮೇಲೆ ಒಂದು ಕಪ್ಪು ಚುಕ್ಕೆ ಎಂದು ನಾನು ಭಾವಿಸಿದ್ದೇನೆ.

ಇದನ್ನೂ ಓದಿ: ಸಿ.ಜೆ.ರಾಯ್​​​ ಆತ್ಮಹತ್ಯೆ; ಮೋದಿ, ನಿರ್ಮಲಾ ಸೀತಾರಾಮನ್​ಗೆ ಮೋಹನ್ ದಾಸ್ ಪೈ ವಿಶೇಷ ಮನವಿ

ಆದಾಯ ತೆರಿಗೆ ಇಲಾಖೆಯು ಶೋಧ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆಯೇ ವ್ಯಕ್ತಿಯೊಬ್ಬ, ಬಂದೂಕನ್ನು ಹಿಡಿದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎನ್ನುವುದು ಅಚ್ಚರಿಯ ಸಂಗತಿ. ಇಂತಹ ಕಾರ್ಯಾಚರಣೆಗಳು ನಡೆಯುತ್ತಿರುವಾಗ ಆ ಸ್ಥಳ ತೆರಿಗೆ ಅಧಿಕಾರಿಗಳ ನಿಯಂತ್ರಣದಲ್ಲಿರಬೇಕು ಮತ್ತು ಪರಿಶೀಲನೆ ಸುರಕ್ಷಿತವಾಗಿರಬೇಕು. ಯಾವುದೇ ಶೋಧ ಕಾರ್ಯಾಚರಣೆಯಲ್ಲಿ, ಸರ್ಚ್ ವಾರಂಟ್ ಹೊರಡಿಸಲಾದ ವ್ಯಕ್ತಿಯು ಅಧಿಕಾರಿಗಳು ಶೋಧ ನಡೆಸುತ್ತಿರುವ ಸ್ಥಳದಲ್ಲಿ ಹಾಜರಿರಬೇಕು. ಸ್ಥಾಪಿತ ಕಾರ್ಯವಿಧಾನಗಳ ಪ್ರಕಾರ ಕನಿಷ್ಠ ಇಬ್ಬರು ಸ್ವತಂತ್ರ ಸಾಕ್ಷಿಗಳು ಇರಬೇಕು. ಈ ಪ್ರಕರಣ ಸಂಬಂಧ ಮಾಧ್ಯಮಗಳ ವರದಿ ಪ್ರಕಾರ ಶೋಧ ನಡೆಯುತ್ತಿರುವಾಗಲೇ ರಾಯ್ ಮತ್ತೊಂದು ಕೋಣೆಗೆ ತೆರಳಿ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡಿದ್ದಾರೆ. ಇದು ಸತ್ಯವೇ ಆಗಿದ್ದರೆ, ಇದೊಂದು ಗಂಭೀರ ಲೋಪವಾಗಿದೆ.

ಮೃತ ವ್ಯಕ್ತಿಯ ಜೊತೆಗೆ ಅವರ ಕುಟುಂಬದತ್ತಲೂ ಗಮನಹರಿಸಬೇಕಿದ್ದು, ದಿವಂಗತ ಸಿ.ಜೆ.ರಾಯ್ ಅವರ ಸಹೋದರ ಅಧಿಕಾರಿಗಳಿಂದ ಕಿರುಕುಳದಂತಹ ಗಂಭೀರ ಸಮಸ್ಯೆಗಳ ಬಗ್ಗೆ ಹೇಳಿದ್ದಾರೆ. ಸಹಜವಾಗಿಯೇ ಆದಾಯ ತೆರಿಗೆ ಇಲಾಖೆಯೂ ತನ್ನ ಹೇಳಿಕೆಯನ್ನು ನೀಡುತ್ತದೆ. ಈ ಘಟನೆಯ ಬಗ್ಗೆ ಸಂಪೂರ್ಣ ಸತ್ಯ ಹೊರಬರಬೇಕು. ಭವಿಷ್ಯದಲ್ಲಿ ಇಂತಹ ದುರಂತ ಘಟನೆಗಳು ಸಂಭವಿಸುವುದನ್ನು ತಡೆಯಬೇಕಾದರೆ ಈ ವಿಷಯದ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಆದೇಶಿಸುವುದು ಅತ್ಯಗತ್ಯವಾಗಿದೆ. ಹೀಗಾಗಿ ಈ ವಿಷಯದಲ್ಲಿ ಭಾರತ ಸರ್ಕಾರದ ಅತ್ಯುತ್ತಮ ಆಯ್ಕೆಯೆಂದರೆ ಘಟನೆಯ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸುವುದು. ಯಾವುದೇ ವಿಳಂಬವಿಲ್ಲದೆ ನ್ಯಾಯಾಂಗ ತನಿಖೆಗೆ ಆದೇಶಿಸುವಲ್ಲಿ ಮತ್ತು ಕಾಲಮಿತಿಯೊಳಗೆ ಸಮಗ್ರ ವರದಿಯನ್ನು ಪಡೆಯುವಲ್ಲಿ ಭಾರತ ಸರ್ಕಾರದ ಕಡೆಯಿಂದ ಯಾವುದೇ ಹಿಂಜರಿಕೆ ಇರಬಾರದು ಎಂದು ಪಿಣರಾಯಿ ವಿಜಯನ್​​ ಆಗ್ರಹಿಸಿದ್ದಾರೆ.

ವರದಿ: ಪ್ರದೀಪ್​​ ಚಿಕ್ಕಾಟೆ, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:02 pm, Mon, 2 February 26

Source link

Real Estate Mafia In Kodagu: ಕೊಡಗಿನಲ್ಲಿ ರೆಸಾರ್ಟ್, ವಿಲ್ಲಾಗಳಿಗಾಗಿ ಬೆಟ್ಟ ಬಗೆದ ಮಾಫಿಯಾ ಗ್ಯಾಂಗ್ – Kannada News | Kodagus Ambatti Hills Under Threat: Real Estate Mafia Illegally Blasts Mountains for Resorts

ಕೊಡಗು, ಫೆಬ್ರುವರಿ 02: ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಂಬಟ್ಟಿ ಬೆಟ್ಟದಲ್ಲಿ ರಿಯಲ್ ಎಸ್ಟೇಟ್ ಮಾಫಿಯಾ ಅಟ್ಟಹಾಸ ಮಿತಿ ಮೀರಿದೆ. ರೆಸಾರ್ಟ್ ಹಾಗೂ ವಿಲ್ಲಾಗಳ ನಿರ್ಮಾಣಕ್ಕಾಗಿ ಯಾವುದೇ ಇಲಾಖಾ ಅನುಮತಿ ಪಡೆಯದೆ ಬೃಹತ್ ಬೆಟ್ಟವನ್ನು ಬಗೆದು, ಬೆಟ್ಟದ ಬುಡದಲ್ಲೇ ಡೈನಮೈಟ್ ಸ್ಫೋಟಿಸಲಾಗಿದೆ. ಬೆಟ್ಟದ ಮೇಲಿನಿಂದ ಹರಿಯುತ್ತಿದ್ದ ನೀರಿನ ಮೂಲವನ್ನೇ ಬಂದ್ ಮಾಡಿರುವ ಆರೋಪ ಕೇಳಿಬಂದಿದೆ. ಇದರಿಂದ ಮಳೆಗಾಲದಲ್ಲಿ ಭಾರೀ ಭೂ ಕುಸಿತ ಸಂಭವಿಸುವ ಆತಂಕ ವ್ಯಕ್ತವಾಗಿದ್ದು, ಅವೈಜ್ಞಾನಿಕ ಕಾಮಗಾರಿ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳೀಯ ಪಂಚಾಯಿತಿ ಮೌನ ವಹಿಸಿರುವುದನ್ನು ಖಂಡಿಸಿದ ಗ್ರಾಮಸ್ಥರು, ಕಾಮಗಾರಿ ತಕ್ಷಣ ತಡೆಯುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

ಸಿಗ್ನಲ್ ಜಂಪ್ ಕೃತಿಗೆ ಕಸಾಪ ದತ್ತಿ ಪ್ರಶಸ್ತಿ – Kannada News | Avva pustakaalaya Anant Kunigal gets Publisher RN Hubbu datti Award 2024 for tv9 creative producer Ravindra Muddi’s Signal Jump book

ಬೆಂಗಳೂರು, (ಫೆಬ್ರವರಿ 02): ಕನ್ನಡ ಟಿವಿ9 ಕ್ರಿಯೇಟಿವ್ ಪ್ರೊಡ್ಯೂಸರ್ ರವೀಂದ್ರ ಮುದ್ದಿ ಅವರ ಸಿಗ್ನಲ್ ಜಂಪ್ (Signal Jump) ಕಥಾ ಸಂಕಲನ ಪ್ರಕಟಿಸಿದ್ದ ಅವ್ವ ಪುಸ್ತಕಾಲಯದ ಅನಂತ ಕುಣಿಗಲ್ ಅವರಿಗೆ 2024ನೇ ಸಾಲಿನ ಪ್ರಕಾಶಕ ಆರ್. ಎನ್. ಹಬ್ಬು ದತ್ತಿ ಪ್ರಶಸ್ತಿ ಲಭಿಸಿದೆ. 2024ರ ಜನವರಿಯಿಂದ ಡಿಸೆಂಬರ್ ಅಂತ್ಯದವರೆಗೂ ಪ್ರಕಟಗೊಂಡ ಕೃತಿಗಳನ್ನು ಒಟ್ಟು 54 ಪ್ರಕಾರದ ದತ್ತಿಗಳ 58 ಪ್ರಶಸ್ತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಆಯ್ಕೆ ಮಾಡಿದೆ. ವಿವಿಧ ಪ್ರಕಾರದ ಸಾಹಿತ್ಯದ ಪ್ರಶಸ್ತಿಗಾಗಿ ಸುಮಾರು 900 ಕೃತಿಗಳಲ್ಲಿ ಬಂದಿದ್ದವು. ಸಾಹಿತಿ ಕೆ. ಮರುಳಸಿದ್ದಪ್ಪ ಅವರ ಅಧ್ಯಕ್ಷತೆಯ ಸಮಿತಿಯು ಪ್ರಕಾಶಕರಿಗೆ ನೀಡುವ ದತ್ತಿ ಪ್ರಶಸ್ತಿಗಾಗಿ ಸಿಗ್ನಲ್ ಜಂಪ್ ಕೃತಿ ಆಯ್ಕೆ ಮಾಡಿದೆ

ರವೀಂದ್ರ ಮುದ್ದಿ ಅವರು ಬರೆದ ವಿಭಿನ್ನ ಹಾಗೂ ಹೊಸತನ ಹೊಂದಿದ ಒಟ್ಟು ಕಥೆಗಳು ಸಿಗ್ನಲ್ ಜಂಪ್ ಕೃತಿಯಲ್ಲಿದ್ದು ಹಲವಾರು ಓದುಗರ ಮೆಚ್ಚುಗೆಗೆ ಪಾತ್ರವಾಗಿತ್ತು. ಈಗ ಈ ಕೃತಿಯ ಮೂಲಕ ಅವ್ವ ಪುಸ್ತಕಾಲಯಕ್ಕೆ ಕನ್ನಡ ಸಾಹಿತ್ಯ ಪರಿಷತ್ತು ನೀಡುವ ದತ್ತಿ ಪ್ರಶಸ್ತಿ ಸಿಕ್ಕಿದೆ.

2024ರ ಜನವರಿ 1ರಿಂದ ಡಿಸೆಂಬರ್ 31ರೊಳಗೆ ಪ್ರಕಟಗೊಂಡ ಪುಸ್ತಕಗಳನ್ನು ಲೇಖಕರು, ಪ್ರಕಾಶಕರಿಂದ ದತ್ತಿ ಪ್ರಶಸ್ತಿಗೆ ಆಹ್ವಾನಿಸಲಾಗಿತ್ತು. ಈ ಪ್ರಶಸ್ತಿಗಳಿಗೆ 900 ಕೃತಿಗಳು ಬಂದಿದ್ದವು. ಸಾಹಿತಿ ಕೆ ಮರುಳುಸಿದ್ದಪ್ಪ ಅವರ ಅಧ್ಯಕ್ಷತೆಯ ಸಮಿತಿ ಸಾಹಿತಿದ ವಿವಿಧ ಪ್ರಕಾರಳಲ್ಲಿ ಕೃತಿಗಳನ್ನು ಆಯ್ಕೆ ಮಾಡಿದೆ.

ಸಿಗ್ನಲ್ ಜಂಪ್’ ನಲ್ಲಿ ನಾಡಿನ ಹತ್ತು ಬರಹಗಾರರು

ರವೀಂದ್ರ ಮುದ್ದಿ ಅವರು ಬರೆದ ‘ಸಿಗ್ನಲ್ ಜಂಪ್’ ಕಥಾ ಸಂಕಲನದಲ್ಲಿ ಒಟ್ಟು ವಿಭಿನ್ನ ಹತ್ತು ಕಥೆಗಳಿವೆ. ನಾಡಿನ ಹತ್ತು ಪ್ರಮುಖ ಬರಹಗಾರರು ಇಲ್ಲಿನ ಒಂದೊಂದು ಕಥೆಯನ್ನು ಒಬ್ಬೊಬ್ಬರು ಓದಿ ಆ ಕಥೆಯ ಬಗ್ಗೆ ಅವಲೋಕನ ಮಾಡಿದ್ದಾರೆ. ವಿಶೇಷ ಅಂದರೆ ಆ ಹತ್ತು ಬರಹಗಾರರು ಬರೆದ ಕಥೆಗಳ ಬಗೆಗಿನ ಅನಿಸಿಕೆ ಕೂಡಾ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಕಥಾ ಸಂಕಲನದಲ್ಲಿ ಅಚ್ಚಾಗಿವೆ.

ಕನ್ನಡ ಟಿವಿ9 ಕ್ರಿಯೇಟಿವ್ ಪ್ರೊಡ್ಯೂಸರ್ ರವೀಂದ್ರ ಮುದ್ದಿ ಅವರ ‘ಸಿಗ್ನಲ್ ಜಂಪ್’ ಕಥಾ ಸಂಕಲನ ಕಳೆದ ಅಂದರೆ 2025ರ ಜುಲೈ 14ರಂದು ಅವ್ವ ಪುಸ್ತಕಾಲಯದಿಂದ ಬಿಡುಗಡೆಯಾಗಿತ್ತು. ಬಳಿಕ ಈ ಪುಸ್ತಕ ಸಾಕಷ್ಟು ಓದಗರ ಗಮನಸೆಳೆದಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 2:46 pm, Mon, 2 February 26

Source link

Lakkundi Excavation: ಬಯಲು ಪ್ರಾಚ್ಯವಸ್ತು ಸಂಗ್ರಹಾಲಯ ಅಭಿವೃದ್ಧಿಗೆ ಡೆಕ್ಕನ್ ಹೆರಿಟೇಜ್ ಫೌಂಡೇಶನ್ ಸಜ್ಜು

ಗದಗ, ಫೆಬ್ರುವರಿ 02: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮವು ತನ್ನ ಅಪಾರ ಪುರಾತತ್ವ ಸಂಪತ್ತಿನಿಂದಾಗಿ ಪ್ರಾಮುಖ್ಯತೆ ಗಳಿಸಿದೆ. ಇತ್ತೀಚೆಗೆ ನಡೆದ ಚಿನ್ನದ ನಿಧಿ ಶೋಧವು ಈ ಪ್ರದೇಶದ ಬಗ್ಗೆ ಆಸಕ್ತಿಯನ್ನು ಮತ್ತಷ್ಟು ಹೆಚ್ಚಿಸಿದೆ. ಡೆಕ್ಕನ್ ಹೆರಿಟೇಜ್ ಫೌಂಡೇಶನ್ (ಡಿಎಚ್‌ಎಫ್) ಲಕ್ಕುಂಡಿಯ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಪ್ರಮುಖ ಪಾತ್ರ ವಹಿಸುತ್ತಿದೆ. ಸರ್ಕಾರದ ಸಹಯೋಗದೊಂದಿಗೆ ಲಕ್ಕುಂಡಿಯಲ್ಲಿ ಬಯಲು ಪ್ರಾಚ್ಯವಸ್ತು ಸಂಗ್ರಹಾಲಯವನ್ನು ಅಭಿವೃದ್ಧಿಪಡಿಸಲು ಫೌಂಡೇಶನ್ ಸಿದ್ಧತೆ ನಡೆಸುತ್ತಿದೆ.

ಸಿದ್ದರಾಮಯ್ಯ ಸೇರಿದಂತೆ ಮುಖ್ಯಮಂತ್ರಿಗಳು ಈ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಫೌಂಡೇಶನ್‌ನ ಮುಖ್ಯಸ್ಥೆ ಡಾ. ಹೆಲೆನ್ ನೇತೃತ್ವದ ತಂಡ ಲಕ್ಕುಂಡಿ, ಡಂಬಳ ಮತ್ತು ಗದಗ ಪ್ರದೇಶಗಳ ಕುರಿತು ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಹೊಸ ಕೈಪಿಡಿಯನ್ನು ಮಾರ್ಚ್ 15 ರಂದು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಕೈಪಿಡಿಯಲ್ಲಿ ಕರ್ನಾಟಕದ ಶಿಲ್ಪಕಲೆಗಳು, ವೀರಗಲ್ಲುಗಳು, ನಾಣ್ಯಗಳು ಮತ್ತು ಇತರ ಪ್ರಾಚೀನ ಅವಶೇಷಗಳ ವಿವರಗಳು ಸೇರಿವೆ ಎಂದು ಹೆಲೆನ್ ಹೇಳಿದ್ದಾರೆ.

 

Source link

ಭಾರತದ ಪ್ರಗತಿಗೆ ಪೂರಕವಾಗಿದೆ ಈ ಬಜೆಟ್: ಅಪೋಲೋ ಹಾಸ್ಪಿಟಲ್ಸ್ ಮುಖ್ಯಸ್ಥ ಡಾ. ಪ್ರತಾಪ್ ಸಿ. ರೆಡ್ಡಿ – Kannada News | Budget 2026 sends reassuring message about India’s growth: Chairman & Apollo Hospitals founder Dr PC Reddy

ಡಾ. ಪ್ರತಾಪ್ ಸಿ ರೆಡ್ಡಿ

ನವದೆಹಲಿ, ಫೆಬ್ರುವರಿ 2: ಈ ಬಾರಿಯ ಕೇಂದ್ರ ಬಜೆಟ್ (Union Budget) ಬಗ್ಗೆ ಹೆಲ್ತ್​ಕೇರ್ ಉದ್ಯಮ ಸಮಾಧಾನಪಟ್ಟಿದೆ. ದೇಶದ ಆರೋಗ್ಯ ವ್ಯವಸ್ಥೆಗೆ ಪುಷ್ಟಿ ಕೊಡಲು ಬಜೆಟ್​ನಲ್ಲಿ ತೆಗೆದುಕೊಳ್ಳಲಾದ ಕ್ರಮಗಳನ್ನು ಈ ಉದ್ಯಮದ ನಾಯಕರು ಸ್ವಾಗತಿಸಿದ್ದಾರೆ. ಹೆಚ್ಚು ಜನರಿಗೆ ಚಿಕಿತ್ಸಾ ವ್ಯವಸ್ಥೆ ಮುಟ್ಟಲು ಅನುವು ಮಾಡಿಕೊಂಡುವಂತಹ ಕ್ರಮಗಳನ್ನು ಬಜೆಟ್​ನಲ್ಲಿ ತೆಗೆದುಕೊಳ್ಳಲಾಗಿದೆ ಎಂಬುದು ಇವರ ಅನಿಸಿಕೆ. ಅಪೋಲೋ ಹಾಸ್ಪಿಟಲ್ಸ್​ನ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರತಾಪ್ ಸಿ ರೆಡ್ಡಿ (Dr Pratap C Reddy) ಅವರು ಸಕಾರಾತ್ಮಕ ಬಜೆಟ್ ಎಂದು ಅಭಿಪ್ರಾಯಪಟ್ಟಿದ್ಧಾರೆ. ವಿಕಸಿತ ಭಾರತದ ಆಶಯದಂತೆ ಆರೋಗ್ಯಕರ ಜನರ ನಿರ್ಮಾಣಕ್ಕೆ ಪುಷ್ಟಿ ಕೊಡುತ್ತದೆ ಈ ಬಜೆಟ್. ಪಬ್ಲಿಕ್ ಹೆಲ್ತ್ ಕೆಪಾಸಿಟಿ, ವೈದ್ಯಕೀಯ ಶಿಕ್ಷಣ, ನಾವೀನ್ಯತೆ ಮತ್ತು ಅಗ್ಗದ ಚಿಕಿತ್ಸೆ ಲಭ್ಯವಾಗುವತ್ತ ಈ ಬಜೆಟ್ ಒತ್ತು ಕೊಡುತ್ತದೆ ಎಂದು ಡಾ. ಪ್ರತಾಪ್ ರೆಡ್ಡಿ ಅಭಿಪ್ರಾಯಪಟ್ಟಿದ್ದಾರೆ.

‘ಭಾರತದ ಪ್ರಗತಿಯು ಆರೋಗ್ಯಕರ ಜನರು ಹಾಗೂ ಪ್ರಬಲ ಆರೋಗ್ಯ ವ್ಯವಸ್ಥೆಯ ಜೊತೆಗೆ ಭಾರತದ ಪ್ರಗತಿಯು ಇರುತ್ತದೆ ಎನ್ನುವ ಭರವಸೆಯನ್ನು 2026-27ರ ಬಜೆಟ್​ನಲ್ಲಿ ನೀಡಲಾಗಿದೆ. ಪಬ್ಲಿಕ್ ಹೆಲ್ತ್ ಕೆಪಾಸಿಟಿಯನ್ನು ಹೆಚ್ಚಿಸುವುದು, ರೋಗ ನಿಯಂತ್ರಣ ಕಾರ್ಯವನ್ನು ಬಲಪಡಿಸುವುದು, ಎರಡನೇ ಮತ್ತು ಮೂರನೇ ಸ್ತರದ ಪ್ರದೇಶಗಳಲ್ಲಿ ಹೆಲ್ತ್ ಸಿಸ್ಟಂಗಳು ಮತ್ತಷ್ಟು ತಲುಪುವುದು ಇವುಗಳತ್ತ ಗಮನ ಇಡಲಾಗಿದೆ’ ಎಂದು ಅಪೋಲೋ ಹಾಸ್ಪಿಟಲ್ಸ್​ನ ಛೇರ್ಮನ್ ಹೇಳಿದ್ದಾರೆ.

ಇದನ್ನೂ ಓದಿ: ಅಪೋಲೋ ಆಸ್ಪತ್ರೆಗಳು 24×7 ಆರೋಗ್ಯ ಸೇವೆಗೆ ಬದ್ಧ: ಐಎಚ್​ಡಿ ಸಮಾವೇಶದಲ್ಲಿ ಘೋಷಣೆ

‘ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳನ್ನು ಬಲಪಡಿಸುವುದು, 1,000 ಅನುಮೋದಿತ ಕ್ಲಿನಿಕಲ್ ಟ್ರಯಲ್ ಸೈಟ್​ಳ ಜಾಲ ನಿರ್ಮಿಸುವುದೂ ಒಳಗೊಂಡಂತೆ ಬಯೋಫಾರ್ಮಾ ಶಕ್ತಿ ಯೋಜನೆ ಮೂಲಕ ಜೀವ ವಿಜ್ಞಾನಗಳು (ಲೈಫ್ ಸೈನ್ಸಸ್) ಮತ್ತು ಇನ್ನೋವೇಶನ್ ಇಕೋಸಿಸ್ಟಂ ಅನ್ನು ಈ ಬಜೆಟ್​ನಲ್ಲಿ ಬಲಪಡಿಸಲಾಗುತ್ತಿರುವುದು ಸ್ವಾಗತಾರ್ಹ. ಈ ಕ್ರಮಗಳು ಸುಧಾರಿತ ಥೆರಪಿಗಳ ಅಭಿವೃದ್ಧಿಯ ವೇಗ ಹೆಚ್ಚಿಸುತ್ತವೆ. ಹೆಲ್ತ್​ಕೇರ್ ಮತ್ತು ಲೈಫ್ ಸೈನ್ಸ್​ ಕ್ಷೇತ್ರದಲ್ಲಿ ಭಾರತದ ಮೇಲೆ ಜಾಗತಿಕ ವಿಶ್ವಾಸ ಹೆಚ್ಚಿಸುತ್ತವೆ’ ಎಂದು ಡಾ. ಪ್ರತಾಪ್ ಸಿ. ರೆಡ್ಡಿ ಹೇಳಿದ್ದಾರೆ.

‘ಜನರತ್ತ ಗಮನ ನೆಟ್ಟಿರುವುದು ಬಹಳ ಖುಷಿಯ ಸಂಗತಿ. ಮುಂಬರುವ ವರ್ಷದಲ್ಲಿ 10,000 ಮೆಡಿಲ್ ಸೀಟ್​ಗಳನ್ನು ಸೇರಿಸುವದು, ಒಂದೂವರೆ ಲಕ್ಷ ಕೇರ್​ಗಿವರ್​ಗಳಿಗೆ (ಆರೋಗ್ಯ ಕಾಳಜಿ ಸಹಾಯಕ) ತರಬೇತಿ ಕೊಡುವುದು, ಸಂಬಂಧಿತ ಆರೋಗ್ಯ ವಿಭಾಗಗಳನ್ನು ಬಲಪಡಿಸುವುದು, ಇವುಗಳಿಂದ ಪ್ರಧಾನಿಗಳ ಹೀಲ್ ಇನ್ ಇಂಡಿಯಾ, ಹೀಲ್ ಬೈ ಇಂಡಿಯಾ ಆಶಯ ಮತ್ತಷ್ಟು ಬಲಗೊಳ್ಳುತ್ತದೆ’ ಎಂದು ಅಪೋಲೋ ಹಾಸ್ಪಿಟಲ್ಸ್​ನ ಛೇರ್ಮನ್ ತಿಳಿಸಿದ್ದಾರೆ.

‘ನಿಮ್ಹಾನ್ಸ್-2 ಸ್ಥಾಪಿಸುವುದು, ರಾಂಚಿ ಮತ್ತು ತೇಜ್​ಪುರ್​ನಲ್ಲಿರುವ ಮಾನಸಿಕ ಆರೋಗ್ಯ ಸಂಸ್ಥೆಗಳನ್ನು ಬಲಪಡಿಸುವುದು, ಜಿಲ್ಲಾಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಮತ್ತು ಟ್ರೌಮಾ ಕೇರ್ ಸಾಮರ್ಥ್ಯವನ್ನು ಶೇ. 50ರಷ್ಟು ಹೆಚ್ಚಿಸುವುದು, ಇತ್ಯಾದಿ ಕ್ರಮಗಳನ್ನು ಬಜೆಟ್​ನಲ್ಲಿ ಪ್ರಸ್ತಾಪಿಸಲಾಗಿದೆ. ಮಾನಸಿಕ ಆರೋಗ್ಯ ಮತ್ತು ಟ್ರೌಮಾ ಕೇರ್ ಬಗ್ಗೆ ಸರ್ಕಾರಕ್ಕೆ ಬದ್ಧತೆ ಇರುವುದನ್ನು ನಾವು ಪ್ರಶಂಸಿಸುತ್ತೇವೆ’ ಎಂದಿದ್ದಾರೆ.

ಇದನ್ನೂ ಓದಿ: ಜೀವ ರಕ್ಷಕ ಔಷಧಿಗಳ ದರ ಇಳಿಕೆ, 3 ಹೊಸ ಏಮ್ಸ್ ಆಸ್ಪತ್ರೆ: ಬಜೆಟ್​​ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ಭರಪೂರ ಕೊಡುಗೆ

36 ಜೀವರಕ್ಷಕ ಔಷಧಿಗಳಿಗೆಗೆ ಸುಂಕ ತೆಗೆದುಹಾಕಿರುವುದೂ ಸೇರಿದಂತೆ ಔಷಧಗಳು ಅಗ್ಗದ ಬೆಲೆಗೆ ಲಭ್ಯವಾಗುವಂತೆ ಕ್ರಮ ತೆಗೆದುಕೊಂಡಿರುವುದರಿಂದ ರೋಗಿಗಳಿಗೆ ಹಣದ ಹೊರೆ ಕಡಿಮೆ ಆಗಬಲ್ಲುದು ಎಂದು ಡಾ. ಪ್ರತಾಪ್ ಸಿ ರೆಡ್ಡಿ ಹೇಳಿದ್ದಾರೆ.

‘ಈ ಆದ್ಯತೆಗಳು ಪ್ರತಿಯೊಬ್ಬ ಭಾರತೀಯನ ಆರೋಗ್ಯದ ಮೇಲೆ ಪರಿಣಾಮ ಬೀರಲಾಗುವಂತೆ ಸರ್ಕಾರ ಹಾಗೂ ಎಲ್ಲಾ ಭಾಗಿದಾರರ ಜೊತೆ ನಿಕವಾಗಿ ಕೆಲಸ ಮಾಡಲು ಅಪೋಲೋ ಹಾಸ್ಪಿಟಲ್ಸ್ ಬದ್ಧವಾಗಿರುತ್ತದೆ’ ಎಂದೂ ಈ ಸಂಸ್ಥೆಯ ಸಂಸ್ಥಾಪಕರು ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಮಾವನ ಮಗನ ಜೊತೆ ನಿಶ್ಚಿತಾರ್ಥ, ಚಾಲಕನ ಜೊತೆ ಓಡಿಹೋಗಿ ಮದುವೆಯಾದ ಯುವತಿ: ಆಮೇಲಾಯ್ತು ಸಿನಿಮೀಯ ಟ್ವಿಸ್ಟ್! – Kannada News | Tumakuru Love Twist: Engaged to Cousin, Woman Elopes With Family Driver, Police Mediation Ends Case

ತುಮಕೂರು, ಫೆಬ್ರವರಿ 2: ಅದೊಂದು ರೀತಿಯ ಚೆಲುವಿನ ಚಿತ್ತಾರ ಸಿನಿಮಾ ರೀತಿಯ ನೈಜ ಘಟನೆ. ಆಕೆ ಶ್ರೀಮಂತರ ಮಗಳು. ಆರ್ಥಿಕವಾಗಿ ಚೆನ್ನಾಗಿದ್ದ ಕುಟುಂಬದಲ್ಲಿ ಎಲ್ಲವೂ ಚೆನ್ನಾಗಿತ್ತು. ಮಗಳು ಚೆನ್ನಾಗಿ ಓದದಿದ್ದರೂ ಸಹ ಮಾವನ ಮಗನ ಜೊತೆ ಮದುವೆ ಮಾಡುವ ಯೋಚನೆಯಲ್ಲಿ ಮನೆಯವರಿದ್ದರು. ಅದರಂತೆ ಸಂಬಂಧಿಕರಿಗೆಲ್ಲಾ ಕಾರ್ಡ್ ಹಂಚಿ ಚೌಲ್ಟ್ರಿ, ಊಟ, ಡೆಕೊರೇಷನ್ ಎಂದು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಹೀಗೆ ಮದುವೆ ತಯಾರಿಯಲ್ಲಿದ್ದ ಕುಟುಂಬಕ್ಕೆ ಯುವತಿ ಶಾಕ್ ನೀಡಿದ್ದು, ಮನೆಯ ವಾಹನ ಚಾಲಕನ ಜೊತೆ ಓಡಿ ಹೋಗಿ ಮದುವೆಯಾಗಿದ್ದಾಳೆ! ಅಷ್ಟೇ ಅಲ್ಲದೇ, ಕುಟುಂಬದವರ ವಿರುದ್ಧವೇ ಬೆದರಿಕೆ ಆರೋಪ ಮಾಡಿದ್ದಾಳೆ.

ತುಮಕೂರು ನಗರ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ತುಮಕೂರು ನಗರ ನಿವಾಸಿ ಹಾಗೂ ಉದ್ಯಮಿಯೊಬ್ಬರ ಮಗಳಿಗೆ ತನ್ನದೇ ಮನೆಗೆ ಪಾರ್ಟ್ ಟೈಂ ಚಾಲಕನಾಗಿ ಬರುತಿದ್ದ ರವೀಶ ಎಂಬಾತನ ಜೊತೆ ಪ್ರೇಮಾಂಕುರವಾಗಿದೆ. ಈ ವಿಚಾರ ಆಕೆಯ ಅಣ್ಣನಿಗೆ ತಿಳಿದು ಎಚ್ಚರಿಕೆ ಸಹ ನೀಡಿದ್ದರು. ಇದಾದ ಬಳಿಕ ಈ ಹಿಂದೆ ಕೊಟ್ಟ ಮಾತಿನಂತೆ ಮಾವನ ಮಗನ ಜೊತೆ ಆಕೆಯ ಮದುವೆಗೆ ಕುಟುಂಬ ನಿಶ್ಚಯಿಸಿ ನಿಶ್ಚಿತಾರ್ಥ ಸಹ ಮುಗಿಸಿದೆ. ಇದಾದ ಬಳಿಕ, ಮದುವೆಗೆ ಇನ್ನೊಂದು ತಿಂಗಳು ಬಾಕಿ ಇರುವಾಗಲೇ, ಜನವರಿ 19ರಂದು ಯವತಿ ಮನೆಯ ರವೀಶ ಜೊತೆ ಓಡಿಹೊಗಿದ್ದಾಳೆ. ಚಿಕ್ಕನಾಯಕನಹಳ್ಳಿಯಲ್ಲಿ ಮದುವೆಯಾಗಿದ್ದಾಳೆ. ಇತ್ತ ಮಗಳು ಕಾಣದ ಹಿನ್ನಲೆ ಕಾಣೆಯಾದ ಬಗ್ಗೆ ನಗರ ಠಾಣೆಗೆ ದೂರು ನೀಡಿದ ಕುಟುಂಬಕ್ಕೆ ಶಾಕ್ ಆಗಿದೆ. ಅತ್ತ ಯುವತಿಯೇ, ‘ಕುಟುಂಬದವರಿಂದ ಬೆದರಿಕೆ ಇದೆ, ನನಗೆ ಭದ್ರತೆ ಬೇಕು’ ಎಂದು ಪೊಲೀಸರ ಮುಂದೆ ಕಣ್ಣೀರು ಹಾಕಿದ್ದಾಳೆ.

ಆಮೇಲೇನಾಯ್ತು?

ಯುವತಿಯ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಆಕೆಯ ಸಹೋದರ, ಅವಳ ಇಚ್ಛೆಗೆ ವಿರುದ್ಧವಾಗಿ ನಾವು ಮದುವೆ ನಿಶ್ಚಯಿಸಿರಲಿಲ್ಲ. ಮನೆ ಮಗಳು ಕಾಣೆಯಾಗಿದ್ದಾಳೆಂದು ನಾವು ಠಾಣೆಗೆ ಬಂದಿದ್ದೇವೆ ಹೊರತು ಅವರಲ್ಲ. ಆಕೆಯ ಒಪ್ಪಿಗೆಯಂತೆ ಚಿನ್ನಾಭರಣ ಖರೀದಿ, ಸೀರೆ, ಮದುವೆ ಕಾರ್ಡ್​​​ಗಳನ್ನು ಮಾಡಿದ್ದೆವು. ಆಕೆಯ ತಾಯಿ ಆರೋಗ್ಯದ ಸಮಸ್ಯೆ ನಡುವೆ ಮದುವೆ ಮಾಡಲು ಓಡಾಡುತಿದ್ದರು. ಮದುವೆ ಇಷ್ಟ ಇಲ್ಲ ಎಂದು ನಮಗೆ ಹೇಳಬಹುದಿತ್ತು. ಅದರ ಬದಲು ಈ ರೀತಿ ಮಾಡಿರುವುದು ನಮಗೆ ಆಘಾತ ಉಂಟುಮಾಡಿದೆ ಎಂದಿದ್ದಾರೆ.

ಪೊಲೀಸರ ಮಧ್ಯಸ್ಥಿಕೆಯಲ್ಲೇ ರಾಜಿ ಸಂಧಾನ!

ಯುವತಿ ಕಾಣೆಯಾದ ಬಗ್ಗೆ ತುಮಕೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ಪ್ರೇಮಿಗಳು ಮದುವೆಯಾಗಿರುವ ವಿಚಾರ ತಿಳಿದುಬಂತು. ಯುವತಿ ಕುಟುಂಬಸ್ಥರಿಂದ ಬೆದರಿಕೆ ಆರೋಪ ಸಹ ಮಾಡಿದ್ದರಿಂದ ಪೊಲೀಸರ ಮಧ್ಯಸ್ಥಿಕೆಯಲ್ಲೇ ರಾಜಿ ಸಂಧಾನ ನಡೆದು, ಎರಡೂ ಕಡೆಯ ಕುಟುಂಬದ ಒಪ್ಪಿಗೆ ಹಾಗೂ ಖುಲಾಸೆ ಪತ್ರಕ್ಕೆ ಸಹಿ ಹಾಕಿ ಪ್ರಕರಣಕ್ಕೆ ತೆರೆ ಎಳೆಯಲಾಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:55 pm, Mon, 2 February 26

Source link