Headlines

ಏರ್​ಪೋರ್ಟ್ ರಸ್ತೆಯಲ್ಲಿ ಅಪಘಾತ ಹೆಚ್ಚಳ: 1 ವರ್ಷದಲ್ಲಿ 50ಕ್ಕೂ ಅಧಿಕ ಜನ ಸಾವು, ಜಾಗೃತಿ ಮೂಡಿಸಲು ಬಂದ ಯಮ – Kannada News | Devanahalli Airport Road Safety: Yamaraja Campaign Tackles Accidents and Helmet Use

ರಸ್ತೆ ಸಂಚಾರದ ಬಗ್ಗೆ ಯಮರಾಜನಿಂದ ಜಾಗೃತಿImage Credit source: tv9 kannada ದೇವನಹಳ್ಳಿ, ಫೆಬ್ರವರಿ 01: ಏರ್​ಪೋರ್ಟ್​​ ರಸ್ತೆ (Airport Road) ನಿತ್ಯ ಸಾವಿರಾರು ವಾಹನಗಳ ಸಂಚಾರದಿಂದ 24 ಗಂಟೆಯೂ ಫುಲ್ ಬ್ಯುಸಿಯಾಗಿರುವ ನಗರದ ಪ್ರಮುಖ ರಸ್ತೆ. ಹೀಗಾಗಿ ಈ ರಸ್ತೆಯಲ್ಲಿ ನೂರಾರು ಅಪಘಾತಗಳು, ಹತ್ತಾರು ಜನರ ಸಾವುಗಳು (deacth) ಸಂಭವಿಸುತ್ತಿದ್ದರು ವಾಹನ ಸವಾರರು ಮಾತ್ರ ಎಚ್ಚೆತ್ತುಕೊಂಡಿರಲಿಲ್ಲ. ಹಾಗಾಗಿ ಸಂಚಾರ ನಿಯಮ ತಿಳಿಸುವುದಕ್ಕೆ ಅಂತ ಸ್ವತಃ ಯಮರಾಜನೇ ರಸ್ತೆಗಿಳಿದಿದ್ದು, ಸವಾರರಿಗೆ ಎಚ್ಚರಿಕೆ ನೀಡಿದ್ದಾನೆ. ಚಿತ್ರಗುಪ್ತ ಮತ್ತು ಯಮರಾಜರಿಂದ…

Read More

Goddess saraswati: ಸರಸ್ವತಿ ದೇವಿಯನ್ನು ಜ್ಞಾನದ ದೇವತೆ ಎಂದು ಏಕೆ ಕರೆಯಲಾಗುತ್ತದೆ? – Kannada News | Saraswati: Unveiling True Knowledge and Wisdom in Indian Culture’s Ancient Philosophy

ಭಾರತೀಯ ಸಂಸ್ಕೃತಿಯಲ್ಲಿ ಜ್ಞಾನ ಎಂದರೆ ಕೇವಲ ಪುಸ್ತಕದ ಮಾಹಿತಿ ಅಥವಾ ಪರೀಕ್ಷಾ ಅಂಕಗಳು ಅಲ್ಲ. ಅದು ತಿಳುವಳಿಕೆ, ಆತ್ಮಪರಿಶೀಲನೆ ಮತ್ತು ಜೀವನದಲ್ಲಿ ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಬುದ್ಧಿವಂತಿಕೆ. ಈ ಆಳವಾದ ಅರ್ಥವನ್ನೇ ಪ್ರತಿನಿಧಿಸುವ ದೇವತೆಯಾಗಿ ಸರಸ್ವತಿಯನ್ನು ಪೂಜಿಸಲಾಗುತ್ತದೆ. ಲಕ್ಷ್ಮಿ ಸಮೃದ್ಧಿಯ ಸಂಕೇತ, ದುರ್ಗಾ ಶಕ್ತಿಯ ರೂಪವಾಗಿದ್ದರೆ, ಸರಸ್ವತಿಯನ್ನು ಮಾತ್ರ ಜ್ಞಾನದ ದೇವತೆಯೆಂದು ಏಕೆ ಕರೆಯಲಾಗುತ್ತದೆ ಎಂಬ ಪ್ರಶ್ನೆ ಅನೇಕರಿಗೆ ಮೂಡುತ್ತದೆ. ಇದರ ಉತ್ತರ ಪ್ರಾಚೀನ ವೇದಗಳು, ಭಾಷಾಶಾಸ್ತ್ರ ಮತ್ತು ಆಧುನಿಕ ಮನೋವಿಜ್ಞಾನದಲ್ಲಿದೆ. ‘ಸರಸ್ವತಿ’ ಎಂಬ ಹೆಸರಿನ ಅರ್ಥವೇನು?…

Read More

ಕೊಟ್ಟೂರು ತ್ರಿಬಲ್​​ ಮರ್ಡರ್​​ಗೆ ಹೊಸ ಟ್ವಿಸ್ಟ್​​​​​: ಮರ್ಯಾದಾ ಹತ್ಯೆಯೋ? ಹಣಕ್ಕಾಗಿ ಕೊಲೆಯೋ? – Kannada News | Vijaynagara Triple Murder: Honour Killing or Money Motive? Police Probe Continues

ಆರೋಪಿ ಅಕ್ಷಯ್​ ಮತ್ತು ಮೃತ ಮೂವರುImage Credit source: Tv9 Kannada ಬೆಂಗಳೂರು, ಫೆ. 01: ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ತ್ರಿವಳಿ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್​​ ಪಡೆಯುತ್ತಿದೆ. ಆರೋಪಿ ಅಕ್ಷಯ್, ತಂಗಿಯ ಪ್ರೇಮ ಪ್ರಕರಣ ಮತ್ತು ಆಕೆ ಗರ್ಭಿಣಿಯಾಗಿರುವುದು ತಿಳಿದು ಮರ್ಯಾದಾ ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದ. ಆದ್ರೆ ತನಿಖೆ ವೇಳೆ ತಂಗಿ ಗರ್ಭಿಣಿ ಎಂದು ಈತ ಕತೆ ಕಟ್ಟಿದ್ದಾನಾ ಎನ್ನುವ ಶಂಕೆಯೀಗ ಪೊಲೀಸರನ್ನು ಕಾಡ್ತಿದೆ. ಬೆಟ್ಟಿಂಗ್, ಗ್ಯಾಂಬ್ಲಿಂಗ್ ಚಟಕ್ಕೆ ಬಿದ್ದಿದ್ದ ಆರೋಪಿ ಅಕ್ಷಯ್, …

Read More

T20 World Cup: ಭಾರತಕ್ಕೆ ಬಂದ ಪಾಕ್ ಮೂಲದ ಆಟಗಾರರಿಗೆ ತಿಲಕವಿಟ್ಟು ಸ್ವಾಗತ – Kannada News | 2026 T20 World Cup: USA Cricket Team Receives Traditional Indian Welcome, Gears Up for Group A

2026 ರ ಟಿ20 ವಿಶ್ವಕಪ್ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಫೆಬ್ರವರಿ 7, 2026 ರಂದು ಪ್ರಾರಂಭವಾಗಿ ಮಾರ್ಚ್ 8 ರವರೆಗೆ ನಡೆಯಲಿರುವ ಈ ಪಂದ್ಯಾವಳಿಯಲ್ಲಿ 20 ತಂಡಗಳು ಭಾಗವಹಿಸಲಿವೆ. ಈ ಟೂರ್ನಿಗೆ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆತಿಥ್ಯವಹಿಸುತ್ತಿವೆ. ಹೀಗಾಗಿ ಭಾರತ ಮತ್ತು ಶ್ರೀಲಂಕಾಕ್ಕೆ ಟೂರ್ನಿಯಲ್ಲಿ ಭಾಗವಹಿಸುವ ತಂಡಗಳು ಆಗಮಿಸಲು ಪ್ರಾರಂಭಿಸಿವೆ. ಅದರಂತೆ ಭಾರತಕ್ಕೆ ಆಗಮಿಸಿದ ಯುಎಸ್ಎ ಕ್ರಿಕೆಟ್ ತಂಡವನ್ನು ಸಂಭ್ರಮದಿಂದ ಸ್ವಾಗತಿಸಲಾಯಿತು. ಭಾರತೀಯ ಸಂಪ್ರದಾಯಕ್ಕೆ ಅನುಗುಣವಾಗಿ ಆಟಗಾರರನ್ನು ಸ್ವಾಗತಿಸಲಾಗುತ್ತಿರುವ ವೀಡಿಯೊ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್…

Read More

February Weekly Horoscope 2026: ನಿಮ್ಮ ರಾಶಿಗನುಗುಣವಾಗಿ ಫೆಬ್ರವರಿ ಮೊದಲ ವಾರದ ಭವಿಷ್ಯ ತಿಳಿಯಿರಿ – Kannada News | February Weekly Horoscope 2026: Zodiac Predictions and Planetary Effects for Your Rashi

2026ರ ಫೆಬ್ರವರಿಯ ಮೊದಲ ವಾರ ಇದಾಗಿದ್ದು ಗ್ರಹಗತಿಗಳ ನಿಖರ ಸ್ಥಾನವನ್ನು ಆಧರಿಸಿ, ಶುಭಾಶುಭಗಳು ನಿರ್ಣಯವಾಗುವುದು. ​ಮುಖ್ಯವಾಗಿ ಈ ಸಮಯದಲ್ಲಿ ಶನಿ ಮೀನ ರಾಶಿಯಲ್ಲಿ, ಗುರು ಮಿಥುನ ರಾಶಿಯಲ್ಲಿ ಮತ್ತು ರಾಹು ಕುಂಭ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಇವರ ಆಧಾರದ ಮೇಲೆ ಈ ವಾರ ಫಲಗಳು ಹೇಗಿರಲಿವೆ? ಮೇಷ ರಾಶಿ: ನಿಮ್ಮ ರಾಶ್ಯಾಧಿಪತಿ ಮಂಗಳನ ಶುಭ ದೃಷ್ಟಿಯಿಂದ ವೃತ್ತಿಯಲ್ಲಿ ಉತ್ಸಾಹ ಇರಲಿದೆ. ತೃತೀಯ ಗುರುವು ಧೈರ್ಯ ನೀಡಲಿದ್ದು, ಸಹೋದರರಿಂದ ಸಹಕಾರ ಸಿಗಲಿದೆ. ಆರ್ಥಿಕವಾಗಿ ಹೂಡಿಕೆಗೆ ಲಾಭದಾಯಕ ಸಮಯ. ಆದರೆ ಶನಿಯ…

Read More

ಭಾರತದ ಉಜ್ವಲ ಭವಿಷ್ಯಕ್ಕೆ ಅಡಿಪಾಯ ಬಲಪಡಿಸುವ ಬಜೆಟ್; ಪ್ರಧಾನಿ ಮೋದಿ ಬಣ್ಣನೆ – Kannada News | Budget 2026 strengthens foundation for Indias bright future says PM Narendra Modi

ನವದೆಹಲಿ, ಫೆಬ್ರವರಿ 1: ಈ ಬಾರಿಯ ಕೇಂದ್ರ ಬಜೆಟ್ (Budget 2026) ಐತಿಹಾಸಿಕ ಬಜೆಟ್ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಬಣ್ಣಿಸಿದ್ದಾರೆ. ಇದು ಮಹಿಳೆಯರ ಸಬಲೀಕರಣವನ್ನು ಪ್ರತಿಬಿಂಬಿಸುತ್ತದೆ, ಭಾರತದ ಸುಧಾರಣಾ ಪ್ರಯಾಣವನ್ನು ವೇಗಗೊಳಿಸುತ್ತದೆ ಮತ್ತು ದೇಶದ ಭವಿಷ್ಯದ ಬೆಳವಣಿಗೆಗೆ ಬಲವಾದ ಅಡಿಪಾಯವನ್ನು ಹಾಕುತ್ತದೆ ಎಂದು ಹೇಳಿದ್ದಾರೆ. ಹಾಗೇ, ಸತತ 9ನೇ ಬಾರಿ ಕೇಂದ್ರ ಬಜೆಟ್ ಮಂಡಿಸಿದ್ದಕ್ಕಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ನಿರ್ಮಲಾ ಸೀತಾರಾಮನ್…

Read More

ಬಜೆಟ್​​ ಬಗ್ಗೆ ನನಗೆ ಅರ್ಥವಾಗ್ತಿಲ್ಲ, ಆದ್ರೂ ಕೇಳೋಕೆ ಚೆನ್ನಾಗಿದೆ: ಸೋಶಿಯಲ್​ ಮೀಡಿಯಾದಲ್ಲಿ ಮೀಮ್ಸ್​​​ಗಳ ಹವಾ – Kannada News | Middle Class Budget 2026 Memes: Viral Humor, Tax Hopes and Economic Term Jokes

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡಿಸುತ್ತಿದ್ದಂತೆ, ಇತ್ತ ಸೋಶಿಯಲ್ ಮೀಡಿಯಾದಲ್ಲಿ ಮೀಮ್‌ಗಳ (Memes) ಮಹಾಪೂರವೇ ಹರಿದುಬಂದಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನೆಟ್ಟಿಗರು ಹಾಸ್ಯ ಪ್ರಜ್ಞೆಯನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಪಡಿಸಿದ್ದಾರೆ. “ಹೊಸ ತೆರಿಗೆ ಪದ್ಧತಿಯಲ್ಲಿ ವಿನಾಯಿತಿ ಸಿಗುತ್ತೆ ಅಂತ ಕಾಯ್ತಿರೋ ಮಧ್ಯಮ ವರ್ಗದ ಜನ” ಎಂಬ ಶೀರ್ಷಿಕೆಯಡಿ, ಹಳೆಯ ಸಿನಿಮಾದ ಪೋಸ್ಟ್​​ಗಳನ್ನು ಹಂಚಿಕೊಳ್ಳುತ್ತಿದ್ದಾರೆ . ಸರ್ಕಾರ ನಮಗೆ ಏನು ಕೊಡುತ್ತೆ ಅನ್ನೋದಕ್ಕಿಂತ, ನಮ್ಮಿಂದ ಏನು ತಗೊಳ್ಳಲ್ಲ ಅನ್ನೋದೇ ದೊಡ್ಡ ಬಜೆಟ್” ಎಂಬ ಸಾಲುಗಳು ಸಿಕ್ಕಾಪಟ್ಟೆ…

Read More

ಬಜೆಟ್ 2026 ಪ್ರಕಟಣೆ; ಬಾಂಗ್ಲಾದೇಶದಿಂದ ಹಿಡಿದು ಮಾರಿಷಸ್​ವರೆಗೆ ವಿವಿಧ ದೇಶಗಳಿಗೆ ಭಾರತ ಮಾಡುವ ಧನಸಹಾಯವೆಷ್ಟು? – Kannada News | Budget 2026 27 estimation of Rs 8,792 crore of grants and loan to various countries and international bodies

ನವದೆಹಲಿ, ಫೆಬ್ರುವರಿ 1: ಭಾರತ ತನ್ನ ನೆರೆ ರಾಷ್ಟ್ರಗಳು ಸೇರಿದಂತೆ ವಿವಿಧ ದೇಶಗಳಿಗೆ ಬೇರೆ ಬೇರೆ ಕಾರಣಕ್ಕೆ ಸಾಲ ಹಾಗೂ ದೇಣಿಗೆಗಳನ್ನು ನೀಡುತ್ತದೆ. ಈ ಬಾರಿಯ ಬಜೆಟ್​ನಲ್ಲಿ (Union Budget 2026) ಮಾಡಲಾಗಿರುವ ಅಂದಾಜು ಪ್ರಕಾರ ಭಾರತದಿಂದ 2026-27ರ ವರ್ಷದಲ್ಲಿ 8,792.32 ಕೋಟಿ ರೂ ಹಣದ ನೆರವನ್ನು ಕೊಡುವ ಯೋಜನೆ ಇದೆ. ಇದರಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಡಿಯಲ್ಲೇ 6,997 ಕೋಟಿ ರೂ ಅನುದಾನಗಳು ವಿವಿಧ ದೇಶಗಳಿಗೆ ಸಂದಾಯವಾಗಲಿವೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಮುಂದಿನ ವರ್ಷ ನೀಡಲಾಗುವ…

Read More

ತೆಲುಗು ಚಿತ್ರರಂಗದ ಗಣ್ಯರ ಭೇಟಿಯಾದ ಆರ್​​​ಎಸ್​​ಎಸ್ ಮುಖ್ಯಸ್ಥ ಮೋಹನ್ ಭಾಗವತ್: ಕಾರಣ? – Kannada News | RSS Chief Mohan Bhagavat met Tollywood celebrities in Hyderabad

ಸಿನಿಮಾ (Cinema) ಹಾಗೂ ರಾಜಕಾರಣ ಎರಡಕ್ಕೂ ಬಹಳ ಹತ್ತಿರದ ಸಂಬಂಧ. ಅದರಲ್ಲೂ ರಾಜಕಾರಣಿಗಳು ಪಕ್ಷದ ಅಥವಾ ವೈಯಕ್ತಿಕ ಲಾಭಕ್ಕಾಗಿ ದಶಕಗಳಿಂದಲೂ ಸಿನಿಮಾಗಳನ್ನು ಬಳಸಿಕೊಂಡೇ ಬರುತ್ತಿದ್ದಾರೆ. ಸಾಮಾನ್ಯರ ಮೇಲೆ ಅಪಾರ ಪ್ರಭಾವ ಬೀರಬಲ್ಲ ಸಿನಿಮಾದ ಶಕ್ತಿಯನ್ನು ಅರಿತಿರುವ ರಾಜಕಾರಣಿಗಳು ಸಿನಿಮಾದವರೊಟ್ಟಿಗೆ ಉತ್ತಮ ಬಾಂಧವ್ಯವನ್ನೇ ಇರಿಸಿಕೊಂಡಿದ್ದಾರೆ. ರಾಜಕೀಯ ಪಕ್ಷ ಅಲ್ಲದೇ ಇದ್ದರೂ ಸಹ ಆರ್​​ಎಸ್​​ಎಸ್ ದೇಶದ ರಾಜಕೀಯದ ಮೇಲೆ ಪ್ರತ್ಯಕ್ಷ, ಪರೋಕ್ಷ ಪ್ರಭಾವ ಬೀರುತ್ತಲೇ ಬರುತ್ತಿದೆ. ಇದೀಗ ಸಂಘದ ರಾಷ್ಟ್ರ ಪ್ರಮುಖ್ ಆಗಿರುವ ಮೋಹನ್ ಭಾಗವತ್ ಅವರು ತೆಲುಗು ಚಿತ್ರರಂಗದ…

Read More

ವಿರುದ್ಧ ದಿಕ್ಕಿನಲ್ಲಿ ಸಂಚರಿಸುವ ಕೇತುವಿನಿಂದ ಯಾರಿಗೆ ಯಾವ ಫಲ? – Kannada News | Ketu in Purva Phalguni 2026: Zodiac Predictions, Auspicious and Inauspicious Results

2026ರ ಆರಂಭದಲ್ಲಿ ಕೇತುವು ಕನ್ಯಾ ರಾಶಿಯಲ್ಲಿರುತ್ತಾನೆ. ಆದರೆ ಕೇತುವಿನ ಹಿಮ್ಮುಖ ಚಲನೆಯ ಆಧಾರದ ಮೇಲೆ, ಅವನು ಪೂರ್ವಾಫಲ್ಗುಣಿ ನಕ್ಷತ್ರಕ್ಕೆ ಸಿಂಹ ರಾಶಿ ಪ್ರವೇಶಿಸಿದಾಗ ಉಂಟಾಗುವ ಶುಭಾಶುಭ ಫಲಗಳ ವಿವರ ಇಲ್ಲಿದೆ. ಕೇತುವು ಶುಕ್ರನ ನಕ್ಷತ್ರವಾದ ಪೂರ್ವಾಫಲ್ಗುಣಿಯಲ್ಲಿ ಸಂಚರಿಸುವಾಗ ಭೋಗ ಮತ್ತು ವೈರಾಗ್ಯಗಳ ನಡುವೆ ಸಂಘರ್ಷ ಉಂಟಾಗುತ್ತದೆ. ​ಇದರಿಂದ ವಿವಿಧ ರಾಶಿಗಳ ಮೇಲಾಗುವ ಪ್ರಭಾವ ಹೀಗಿದೆ. ​ಶುಭ ಫಲ ಪಡೆಯುವ ರಾಶಿಗಳು ​ಮೇಷ ರಾಶಿ: ಪಂಚಮ ಭಾವದಲ್ಲಿ ಕೇತು ಬರುವುದರಿಂದ ಸೃಜನಾತ್ಮಕ ಶಕ್ತಿ ಹೆಚ್ಚಲಿದೆ. ಹಳೆಯ ಹೂಡಿಕೆಗಳಿಂದ ಲಾಭವಾಗಲಿದೆ….

Read More