Category Archives: Blog

Your blog category

ಗಂಗಾ ನದಿಯಲ್ಲಿ ಸ್ನಾನ ಮಾಡುವಾಗ ಮುಳುಗಿದ ಪ್ರವಾಸಿಗನ ಪಾಲಿಗೆ ದೇವರಾದ ರಾಫ್ಟಿಂಗ್ ಗೈಡ್ – Kannada News | Tourist Saved by Rafting Guides in Rishikesh Ganga River Viral Video

ರಿಷಿಕೇಶ, ಜನವರಿ 27: ರಿಷಿಕೇಶದಲ್ಲಿ ಗಂಗಾ ನದಿಯಲ್ಲಿ (Ganga River) ಸ್ನಾನ ಮಾಡುವಾಗ ಮುಳುಗುತ್ತಿದ್ದ ಗುರುಗ್ರಾಮದ ಪ್ರವಾಸಿ ಅವಿನಾಶ್ ಎಂಬುವವರನ್ನು ರಾಫ್ಟಿಂಗ್ ಗೈಡ್ ಒಬ್ಬರು ಪವಾಡಸದೃಶವಾಗಿ ರಕ್ಷಿಸಿದ್ದಾರೆ. ಯೂಸುಫ್ ಬೀಚ್‌ನಲ್ಲಿ ನಡೆದ ಈ ಘಟನೆ ರಾಫ್ಟಿಂಗ್ ಗೈಡ್‌ನ ಹೆಲ್ಮೆಟ್‌ನಲ್ಲಿ ಅಳವಡಿಸಲಾದ ಗೋಪ್ರೊ ಕ್ಯಾಮೆರಾದಲ್ಲಿ ದಾಖಲಾಗಿದೆ. ಆ ಗೈಡ್ ಅವಿನಾಶ್​ನನ್ನು ಕಾಪಾಡಿ, ತಕ್ಷಣ ಸಿಪಿಆರ್ ನೀಡುವ ಮೂಲಕ ಅವರ ಜೀವವನ್ನು ಉಳಿಸಿದ್ದಾರೆ. ಪ್ರಥಮ ಚಿಕಿತ್ಸೆಯ ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದರಿಂದಾಗಿ ಆ ಪ್ರವಾಸಿಗನ ಜೀವ ಉಳಿಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರೇಯಸಿಯನ್ನು ಕೊಂದು ಆಕೆಯ ತಲೆ ಕತ್ತರಿಸಿ ಕಾಲುವೆಗೆ ಎಸೆದ ಪ್ರೇಮಿ! – Kannada News | Agra Man murders his lover and threw her head in Canal

ಆಗ್ರಾ, ಜನವರಿ 27: ಉತ್ತರ ಪ್ರದೇಶದ ಆಗ್ರಾದಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ರಿಯತಮೆಯನ್ನು ಕೊಂದು, ಆಕೆಯ ದೇಹವನ್ನು ತುಂಡರಿಸಿ, ಆಕೆಯ ತಲೆಯನ್ನು ಪ್ಯಾಕೆಟ್‌ನಲ್ಲಿ ಹಾಕಿ ಕಾಲುವೆಗೆ ಎಸೆದಿದ್ದಾನೆ. ಈ ಘಟನೆ ದೇಶವನ್ನು ಬೆಚ್ಚಿ ಬೀಳಿಸಿದೆ. ಈಗಾಗಲೇ ಕೊಲೆಗಾರನನ್ನು (Killer) ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತ ಮಹಿಳೆಯನ್ನು ಮಿಂಕಿ ಶರ್ಮಾ ಎಂದು ಗುರುತಿಸಲಾಗಿದೆ. ಅವರು ಆಗ್ರಾದಲ್ಲಿರುವ ಖಾಸಗಿ ಕಂಪನಿಯೊಂದರ ಕಚೇರಿಯಲ್ಲಿ ಹೆಚ್​ಆರ್​ ಆಗಿ ಕೆಲಸ ಮಾಡುತ್ತಿದ್ದರು. ಅದೇ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದ ವಿನಯ್ ಜೊತೆ ಸಂಬಂಧ ಹೊಂದಿದ್ದರು. ಅವರಿಬ್ಬರ ನಡುವೆ ಮದುವೆಯ ವಿಷಯಕ್ಕೆ ಜಗಳ ನಡೆಯುತ್ತಿತ್ತು. ವಿನಯ್ ಮಿಂಕಿಯನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆ ಅದಕ್ಕೆ ನಿರಾಕರಿಸಿದ್ದರಿಂದ ಅವರ ನಡುವೆ ಜಗಳ ಉಂಟಾಗಿದೆ. ಇದೇ ಕೋಪದಿಂದ ಆತ ಆಕೆಯನ್ನು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಇಬ್ಬರೂ ಸಾಯೋಣ ಎಂದು ಯುವತಿಯನ್ನು ನಂಬಿಸಿ ಕೊಂದ ಹಂತಕ!

ಜಗಳದ ನಂತರ ತೆಂಗಿನಕಾಯಿ ಕತ್ತರಿಸಲು ಬಳಸುವ ಚಾಕುವಿನಿಂದ ವಿನಯ್ ಪದೇ ಪದೇ ಆಕೆಯ ಮೇಲೆ ಹಲ್ಲೆ ಮಾಡಿ, ಆಕೆಯ ಕುತ್ತಿಗೆಯನ್ನು ಕತ್ತರಿಸಿದ್ದಾನೆ. ನಂತರ ಅವನು ಆಕೆಯ ದೇಹವನ್ನು ತುಂಡು ಮಾಡಿ, ಪ್ಲಾಸ್ಟಿಕ್ ಚೀಲದಲ್ಲಿ ಪ್ಯಾಕ್ ಮಾಡಿ ಪಾರ್ಸೆಲ್ ಟೇಪ್‌ನಿಂದ ಮುಚ್ಚಿದ್ದಾನೆ. ಆಕೆಯ ತಲೆಯನ್ನು ಬೇರೆ ಚೀಲದಲ್ಲಿ ಹಾಕಿ ಎಸೆದಿದ್ದಾನೆ. ಆ ತಲೆ ಇನ್ನೂ ಪೊಲೀಸರಿಗೆ ಸಿಕ್ಕಿಲ್ಲ. ಅದಕ್ಕಾಗಿ ಹುಡುಕಾಟ ನಡೆಯುತ್ತಿದೆ.

ಜನವರಿ 24ರ ರಾತ್ರಿ ಕೊಲೆಯ ನಂತರ, ಅವನು ದೇಹವನ್ನು ಚೀಲದಲ್ಲಿ ಹಾಕಿ ಯಮುನಾ ನದಿಗೆ ಎಸೆಯಲು ಹೊರಟಿದ್ದನು. ಆದರೆ ಅದನ್ನು ಸೇತುವೆಯ ಮೇಲೆ ಬಿಟ್ಟು ಪರಾರಿಯಾಗಿದ್ದನು. ತುಂಡರಿಸಿದ ತಲೆಯನ್ನು ಕಪ್ಪು ಪ್ಯಾಕೆಟ್‌ನಲ್ಲಿ ಇರಿಸಲಾಗಿತ್ತು. ಅದನ್ನು ಕಾಲುವೆಯಲ್ಲಿ ಎಸೆದಿದ್ದ. ಅದನ್ನು ಪತ್ತೆಹಚ್ಚಲು ಡೈವರ್‌ಗಳಿಗೆ ಸೂಚಿಸಲಾಗಿದೆ. ಅಪರಾಧಕ್ಕೆ ಬಳಸಲಾಗಿದೆ ಎನ್ನಲಾದ ಚಾಕು, ಸ್ಕೂಟರ್ ಮತ್ತು ಬಟ್ಟೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:56 pm, Tue, 27 January 26

Source link

ನಿವೃತ್ತಿ ಘೋಷಿಸಿದ ಗಾಯಕ ಅರಿಜಿತ್ ಸಿಂಗ್: ಕೋಟ್ಯಂತರ ಅಭಿಮಾನಿಗಳಿಗೆ ಶಾಕ್ – Kannada News | Singer Arijit Singh announces retirement from playback singing

ನೂರಾರು ಸೂಪರ್ ಹಿಟ್ ಗೀತೆಗಳನ್ನು ಹಾಡಿರುವ ಗಾಯಕ ಅರಿಜಿತ್ ಸಿಂಗ್ ಅವರು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. ಏಕಾಏಕಿ ಅವರು ನಿವೃತ್ತಿ (Arijit Singh Retirement) ಘೋಷಿಸಿದ್ದಾರೆ. ಅವರು ಈ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಬೇಡಿಕೆಯ ಉತ್ತುಂಗದಲ್ಲಿ ಇರುವಾಗಲೇ ಅರಿಜಿತ್ ಸಿಂಗ್ ಅವರು ನಿವೃತ್ತಿ ಘೋಷಿಸಿರುವುದು ಅಚ್ಚರಿ ಮೂಡಿಸಿದೆ. ಹಲವಾರು ಲವ್ ಸಾಂಗ್​ಗಳನ್ನು ಹಾಡುವ ಮೂಲಕ ಅರಿಜಿತ್ ಸಿಂಗ್ (Arijit Singh) ಅವರು ಚಿತ್ರರಂಗದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಅವರ ಧ್ವನಿಯಲ್ಲಿ ಹೊಸ ಹೊಸ ಹಾಡುಗಳನ್ನು ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಈಗ ಶಾಕ್ ಆಗಿದೆ.

ಅರಿಜಿತ್ ಸಿಂಗ್ ಅವರು ಸೋಶಿಯಲ್ ಮೀಡಿಯಾ ಮೂಲಕ ಈ ನಿರ್ಧಾರ ತಿಳಿಸಿದ್ದಾರೆ. ‘ಇದನ್ನು ನಿಲ್ಲಿಸುತ್ತಿದ್ದೇನೆ. ನಮಸ್ಕಾರ, ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಕೇಳುಗರಾಗಿ ಇಷ್ಟು ವರ್ಷಗಳ ಕಾಲ ನನಗೆ ಇಷ್ಟೊಂದು ಪ್ರೀತಿ ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇನ್ನು ಮುಂದೆ ನಾನು ಹಿನ್ನೆಲೆ ಗಾಯಕನಾಗಿ ಯಾವುದೇ ಹೊಸ ಕೆಲಸಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಘೋಷಿಸಲು ನನಗೆ ಸಂತೋಷವಾಗಿದೆ. ಈ ಪ್ರಯಾಣ ಅದ್ಭುತವಾಗಿತ್ತು’ ಎಂದು ಅರಿಜಿತ್ ಸಿಂಗ್ ಅವರು ಪೋಸ್ಟ್ ಮಾಡಿದ್ದಾರೆ.

‘ದೇವರು ನನಗೆ ಕರುಣಾಮಯನಾಗಿದ್ದ. ನಾನು ಒಳ್ಳೆಯ ಸಂಗೀತದ ಅಭಿಮಾನಿ. ಮುಂದಿನ ದಿನಗಳಲ್ಲಿ ಹೆಚ್ಚು ಕಲಿಯುತ್ತೇನೆ. ಚಿಕ್ಕ ಕಲಾವಿದನಾಗಿ ಇನ್ನಷ್ಟು ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ಈಗಾಗಲೇ ಒಪ್ಪಿಕೊಂಡ ಕೆಲಸಗಳನ್ನು ನಾನು ಮುಗಿಸಬೇಕಿದೆ. ಅವುಗಳನ್ನು ಪೂರ್ಣಗೊಳಿಸುತ್ತೇನೆ. ಹಾಗಾಗಿ ಈ ವರ್ಷ ನಿಮಗೆ ಕೆಲವು ಹೊಸ ಹಾಡುಗಳು ಸಿಗುತ್ತವೆ. ಆದರೆ ಒಂದು ಸ್ಪಷ್ಟನೆ, ಸಂಗೀತದ ಕೆಲಸವನ್ನು ನಾನು ನಿಲ್ಲಿಸುವುದಿಲ್ಲ’ ಎಂದು ಅರಿಜಿತ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಮದುವೆಯಲ್ಲಿ ಹಾಡೋಕೆ ಅರಿಜಿತ್ ಸಿಂಗ್ ಪಡೆಯೋ ಹಣ ಎಷ್ಟು?

ಕನ್ನಡದಲ್ಲಿ ‘ನಿನ್ನಿಂದಲೇ’ ಸಿನಿಮಾದ ‘ಮೌನ ತಾಳಿತೆ..’ ಹಾಡು ಅರಿಜಿತ್ ಸಿಂಗ್ ಅವರ ಕಂಠದಲ್ಲಿ ಮೂಡಿಬಂದಿತ್ತು. ಹಿಂದಿ ಮಾತ್ರವಲ್ಲದೇ ಬೆಂಗಾಲಿ, ತಮಿಳು, ತೆಲುಗು ಹಾಡುಗಳಿಗೂ ಕೂಡ ಅರಿಜಿತ್ ಸಿಂಗ್ ಅವರು ಧ್ವನಿ ನೀಡಿದ್ದಾರೆ. ಆದರೆ ಅವರು ಈಗ ನಿವೃತ್ತಿ ಘೋಷಿಸಿರುವುದಕ್ಕೆ ಕಾರಣ ಏನು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರೀ ಹಿಮಪಾತದಿಂದ ಜಮ್ಮು-ಶ್ರೀನಗರ ಹೈವೇ ಬಂದ್; ಪ್ರವಾಸಿಗರಿಗಾಗಿ ವಿಶೇಷ ರೈಲು ಸಂಚಾರ – Kannada News | Special train operated for tourists as heavy snowfall blocks the Jammu Srinagar National Highway

ಶ್ರೀನಗರ, ಜನವರಿ 27: ಇಂದು ಕಾಶ್ಮೀರದಾದ್ಯಂತ ಭಾರೀ ಹಿಮಪಾತವಾಗಿದೆ. ಹೀಗಾಗಿ, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿತ್ತು. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಯಿತು. ಇದರಿಂದಾಗಿ ನೂರಾರು ಪ್ರವಾಸಿಗರು ಜಮ್ಮು-ಕಾಶ್ಮೀರದಲ್ಲಿ ಸಿಲುಕಿಕೊಂಡರು. ಹೀಗಾಗಿ, ಪ್ರವಾಸಿಗರಿಗಾಗಿ ವಿಶೇಷ ರೈಲು ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಆ ರೈಲು ಹಿಮದಿಂದ (Snowfall) ಆವೃತವಾದ ರೈಲ್ವೆ ಹಳಿಯನ್ನು ಭೇದಿಸುತ್ತಾ ಸಾಗುತ್ತಿರುವ ದೃಶ್ಯ ಇಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಡುಪಿಯಲ್ಲಿ ಪ್ರವಾಸಿ ಬೋಟ್ ದುರಂತ: ಮತ್ತೋರ್ವ ಯುವತಿ ಸಾವು; ಮೃತರ ಸಂಖ್ಯೆ ಮೂರಕ್ಕೇರಿಕೆ – Kannada News | Udupi Tourist Boat Capsize Tragedy: Another Young Girl Dies, Death Toll Rises to Three

ಉಡುಪಿ, ಜನವರಿ 27: ಪ್ರವಾಸಿ ಬೋಟ್ ದುರಂತ ಪ್ರಕರಣಕ್ಕೆ (Boat Tragedy) ಸಂಬಂಧಿಸಿದಂತೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಮತ್ತೋರ್ವ ಯುವತಿ ಸಾವನ್ನಪ್ಪಿದ್ದಾರೆ (death). ಮೈಸೂರಿನ ದಿಶಾ(23) ಮೃತ ಯುವತಿ. ನಿನ್ನೆ ಸಿಂಧು ಮತ್ತು ಶಂಕರಪ್ಪ ಎಂಬುವವರು ಮೃತಪಟ್ಟಿದ್ದರು. ಸದ್ಯ ಧರ್ಮರಾಜ್ ಎಂಬ ಯುವಕ‌ನಿಗೆ ಚಿಕಿತ್ಸೆ ಮುಂದುವರೆದಿದೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆ ಹಿನ್ನೆಲೆ

ಉಡುಪಿಯ ಮಲ್ಪೆ ವ್ಯಾಪ್ತಿಗೆ ಬರುವ ಕೋಡಿಬೆಂಗ್ರೆಯಲ್ಲಿರುವ ಡೆಲ್ಟಾ ಬೀಚ್ ವಿಶ್ವಪ್ರಸಿದ್ಧ. ಯೂಟ್ಯೂಬ್ ನಲ್ಲಿ ಈ ಬಿಚ್​​ ವಿಡಿಯೋ ನೋಡಿದರೆ ಭೂಲೋಕದ ಸ್ವರ್ಗದಂತೆ ಕಾಣಿಸುತ್ತೆ. ಇಲ್ಲಿ ಮೋಜು ಮಾಡಬೇಕೆಂದು ಬಂದ ಮೈಸೂರಿನ ಬಿಪಿಒ ಕಾಲ್ ಸೆಂಟರ್​ವೊಂದರ 28 ಮಂದಿ ಪ್ರವಾಸಿಗರ ತಂಡ, ಇದೀಗ ಕಣ್ಣೀರಿಡುತ್ತಾ ವಾಪಸಾಗುವಂತಾಗಿದೆ.

ಇದನ್ನೂ ಓದಿ: ಉಡುಪಿ ಮಲ್ಪೆ ಬೀಚ್​ನಲ್ಲಿ ಮಗುಚಿ ಬಿದ್ದ ಟೂರಿಸ್ಟ್ ಬೋಟ್! ಇಬ್ಬರು ಸಾವು

ಇಲ್ಲಿನ ಡೆಲ್ಟಾ ಬೀಚ್ ಸಮೀಪ, ಎರಡು ಪ್ರವಾಸಿ ಬೋಟುಗಳಲ್ಲಿ 28 ಮಂದಿ ಕಡಲಿಗೆ ಇಳಿದಿದ್ದರು. ಎಲ್ಲ ಪ್ರವಾಸಿಗರಿಗೂ ಭದ್ರತೆಯ ದೃಷ್ಟಿಯಿಂದ ಲೈಫ್ ಜಾಕೆಟ್ ನೀಡಲಾಗಿತ್ತು. ಈ ಪೈಕಿ ಹಲವರು ಜಾಕೆಟ್ ಧರಿಸಿದರೆ ಇನ್ನು ಕೆಲವರು ನೆಗ್ಲೆಟ್ ಮಾಡಿ ಹಾಗೇನೆ ಬೋಟ್ ಹತ್ತಿದ್ದರು ಎನ್ನಲಾಗಿದೆ. ಕಡಲಿನಲ್ಲಿ ಬೋಟ್ ಸಾಗುತ್ತಿದ್ದಂತೆ ಕೆಲ ಪ್ರವಾಸಿಗರ ಹುಚ್ಚಾಟ ಜೋರಾಗಿತ್ತು. ಕುಣಿಯಲು ಪ್ರಾರಂಭಿಸಿದ್ದರು. ಇದರಿಂದ ನಿಯಂತ್ರಣ ತಪ್ಪಿದ ಬೋಟು ಮಗಚಿ ಬಿದ್ದಿದೆ.

ಇದನ್ನೂ ಓದಿ: ಹೀಗೆ ಕಲುಷಿತಗೊಂಡರೆ ಸೌಪರ್ಣಿಕಾ ನದಿ ಉಳಿಯುತ್ತಾ? ಸಮಗ್ರ ವರದಿ ಸಲ್ಲಿಸುವಂತೆ ಹಸಿರು ನ್ಯಾಯಮಂಡಳಿ ಆದೇಶ

ತಕ್ಷಣ ಅಲರ್ಟ್ ಆದ ಸ್ಥಳೀಯ ಮೀನುಗಾರರಾದ ನಾಗರಾಜ, ವಿಶ್ವನಾಥ್ ಶ್ರೀಯಾನ್, ದಿನೇಶ್ ಕರ್ಕೆರ ಇನ್ನೊಂದು ಬೋಟಿನ ಮೂಲಕ ಸ್ಥಳಕ್ಕೆ ತೆರಳಿ ನೀರಿನಲ್ಲಿ ಮುಳುಗಿದವರನ್ನು ಮೇಲಕ್ಕೆತ್ತಿದ್ದಾರೆ. ಹಲವರು ಲೈಫ್ ಜಾಕೆಟ್ ಧರಿಸಿದ್ದರಿಂದ ಸುಲಭವಾಗಿ ಮತ್ತೊಂದು ಬೋಟ್​ಗೆ ಶಿಫ್ಟ್ ಮಾಡಲಾಯಿತು. ನೀರಿಗೆ ಬಿದ್ದ 14 ಮಂದಿಯ ಪೈಕಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಶಂಕರಪ್ಪ(22) ಹಾಗೂ ಸಿಂಧು (23) ಆಸ್ಪತ್ರೆಗೆ ಸಾಗುವ ಮಾರ್ಗದಲ್ಲೇ ಕೊನೆಯುಸಿರೆಳೆದಿದ್ದಾರೆ. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ದಿಶಾ ಕೂಡ ಸಾವನ್ನಪ್ಪಿದ್ದು, ಧರ್ಮರಾಜ್​ಗೆ ಚಿಕಿತ್ಸೆ ಮುಂದುವರೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

1 ಲಕ್ಷ ಸಾಲಕ್ಕೆ 40 ಲಕ್ಷದ ಚೆಕ್ ಕೇಸ್: ಸೆಲ್ಫಿ ವೀಡಿಯೋ ಮಾಡಿ ವ್ಯಕ್ತಿ ಆತ್ಮಹತ್ಯೆ – Kannada News | A Bengaluru Man Commits Suicide In Hassan for Loan torture

ಹಾಸನ, (ಜನವರಿ 27): ಸಾಲಗಾರರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೋರ್ವ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆಗೆ (Suicide) ಶರಣಾಗಿರುವ ಘಟನೆ ಹಾಸನದಲ್ಲಿ (Hassan) ನಡೆದಿದೆ. ಬೆಂಗಳೂರಿನ (Bengaluru) ನೆಲಮಂಗಲದ ಕೃಷ್ಣಪ್ಪ(47) ಮೃತ ವ್ಯಕ್ತಿ. ಹಾಸನ ಹೊರವಲಯದ ದೊಡ್ಡಪುರ ಬಳಿ ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ಕೃಷ್ಣಪ್ಪನನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ಇನ್ನು ಸಾಯುವ ಮುನ್ನ ಕೃಷ್ಣಪ್ಪ ಸೆಲ್ಫಿ ವಿಡಿಯೋ ಮಾಡುತ್ತಲೇ ವಿಷ ಸೇವಿಸಿದ್ದಾನೆ.

ಸೆಲ್ಫಿ ವಿಡಿಯೋವನ್ನು ಪತ್ನಿ ಕಾಂಚನಗೆ ಕಳುಹಿಸಿದ್ದು, ಕಾಂಚನ ನನ್ನ ಕ್ಷಮಿಸಿಬಿಡು. ರಮೇಶ್ ಹಾಗೂ ಮಂಜು ನೀಡುತ್ತಿರುವ ಕಿರುಕುಳ ತಡೆಯಲು ಆಗುತ್ತಿಲ್ಲ. ನಾನು ಸಾಲ ಪಡೆದಿದ್ದು 1 ಲಕ್ಷ ಸಾಲ ರೂಪಾಯಿ. ಆದರೆ ಅವರು 40 ಲಕ್ಷ ರೂಪಾಯಿ ಚೆಕ್ ಕೇಸ್ ಹಾಕಿದಾರೆ. ನನ್ನ ಸಾವಿಗೆ ನೇರ ಕಾರಣ ಈ ಅಣ್ಣ ತಮ್ಮಂದಿರು (ರಮೇಶ್ , ಮಂಜು) ಎಂದು ವಿಡಿಯೋನಲ್ಲಿ ಹೇಳಿ ವಿಷ ಸೇವಿಸಿ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: ಮದುವೆಯಾದ 45 ದಿನಕ್ಕೆ ಲವರ್​​ ಜೊತೆ ಯುವತಿ ಎಸ್ಕೇಪ್​​: ಪತಿ, ಸೋದರ ಮಾವ ಸೂಸೈಡ್​​

ಸೆಲ್ಫಿ ವಿಡಿಯೋನಲ್ಲಿ ಹೇಳಿದ್ದೇನು?

ಬೆಂಗಳೂರಿನ ನೆಲಮಂಗಲದ ಕೃಷ್ಣಪ್ಪ ಕಳೆದ ಮೂರು ವರ್ಷದಿಂದ ಪತ್ನಿ ಮಕ್ಕಳ ಜೊತೆ ಹಾಸನ ನಗರದಲ್ಲಿ ನೆಲೆಸಿದ್ದು, ಇಂದುಈಜನವರಿ 27) ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ನಾನು ಪಡೆದಿದ್ದು 1 ಲಕ್ಷ ರೂ. ಸಾಲ. ಆದರೆ ಅವರು 40 ಲಕ್ಷದ ಚೆಕ್ ಕೇಸ್ ಹಾಕಿದಾರೆ. ಜಾಮೀನು ಪಡೆಯಲು ಕೂಡ ಹಣ ಹೊಂದಿಸಲು ನನ್ನಿಂದ ಸಾಧ್ಯವಿಲ್ಲ. ಹಾಗಾಗಿ ನಾನು ಸಾಯುತ್ತಿದ್ದೇನೆ. ನನ್ನ ಸಾವಿಗೆ ನೇರ ಕಾರಣ ರಮೇಶ್ ಹಾಗು ಮಂಜು ಅಣ್ಣ ತಮ್ಮಂದಿರು. ನನ್ನ ಸಾವಿಗೆ ನ್ಯಾಯ ಸಿಗಬೇಕಾದರೆ ಅವರಿಗೆ ತಕ್ಕ ಶಿಕ್ಷೆಯಾಗಲಿ ಎಂದು ವಿಡಿಯೋ ಮಾಡುತ್ತಲೇ ಹಾಸನ ಹೊರವಲಯದ ದೊಡ್ಡಪುರ ಬಳಿ ವಿಷ ಸೇವಿಸಿದ್ದಾನೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ನನ್ನ ಪರ್ಸ್​​ನಿಂದ ಹಾಲಿನ ದುಡ್ಡು ಕೊಡಿ; ನೋಟ್ ಬರೆದಿಟ್ಟು ಶಿಕ್ಷಕಿ ಸಾವು – Kannada News | Take money From My Purse for Milk leaving death note Bihar Teacher Dies By Suicide

ನವದೆಹಲಿ, ಜನವರಿ 27: ಬಿಹಾರದ ಹಾಜಿಪುರದಲ್ಲಿ ಬಿಪಿಎಸ್‌ಸಿ ಶಿಕ್ಷಕಿಯೊಬ್ಬರ ಮೃತದೇಹ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಆ ಪ್ರದೇಶದಲ್ಲಿ ವ್ಯಾಪಕ ಭೀತಿ ಮೂಡಿಸಿದೆ. ಆ ಶಿಕ್ಷಕಿಯ ರೂಂನಲ್ಲಿ ಸೂಸೈಡ್ ನೋಟ್ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಖಾಜೆಚಂದ್ ಛಪ್ರಾ ಮಿಡಲ್ ಸ್ಕೂಲ್‌ನ ಶಿಕ್ಷಕಿ ಪ್ರಿಯಾ ಭಾರತಿ ಎಂದು ಗುರುತಿಸಲಾಗಿದೆ. ಆಟೋ ಚಾಲಕ ಆ ಮನೆಯ ಕಿಟಕಿಯಿಂದ ಒಳಗೆ ನೋಡಿದಾಗ ಆ ಶಿಕ್ಷಕಿ ತನ್ನ ರೂಂನಲ್ಲಿ ನೇತಾಡುತ್ತಿರುವುದು ಕಂಡುಬಂದಿದೆ. ತಕ್ಷಣ ಅವನು ಪೊಲೀಸರಿಗೆ ವಿಷಯ ತಿಳಿಸಿದ್ದಾನೆ.

ಪ್ರಿಯಾ ಭಾರತಿ ಸೆಹಾನ್ ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಪ್ರತಿದಿನ ಆಟೋದಲ್ಲಿ ಶಾಲೆಗೆ ಹೋಗುತ್ತಿದ್ದರು. ಸೋಮವಾರ ಬೆಳಿಗ್ಗೆ ಆಟೋ ಚಾಲಕ ಎಂದಿನಂತೆ ಅವರನ್ನು ಶಾಲೆಗೆ ಕರೆದೊಯ್ಯಲು ಬಂದನು. ಆದರೆ ಬಹಳ ಸಮಯ ಕಾದರೂ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ, ಅವನು ಮನೆಯ ಬಳಿ ಹೋಗಿ ಕಿಟಕಿಯಿಂದ ಒಳಗೆ ನೋಡಿದ್ದಾನೆ. ಆಗ ಪ್ರಿಯಾ ನೇಣು ಬಿಗಿದುಕೊಂಡಿರುವುದನ್ನು ನೋಡಿ ಗಾಬರಿಯಾಗಿ ಅಕ್ಕಪಕ್ಕದವರಿಗೆ ವಿಷಯ ತಿಳಿಸಿದನು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಇದನ್ನೂ ಓದಿ: ಟೆಕ್ಕಿ ಶರ್ಮಿಳಾ ಕೊಲೆ ರಹಸ್ಯ ಬಯಲು! ರೇಪ್ ಮಾಡಲು ಯತ್ನಿಸಿದ್ದಾಗಿ ಒಪ್ಪಿಕೊಂಡ ಆರೋಪಿ

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ, ಶವವನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ರೂಂನಲ್ಲಿ ಒಂದು ಸೂಸೈಡ್ ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ “ಅಮ್ಮ ಮತ್ತು ಅಪ್ಪ, ಕ್ಷಮಿಸಿ. ನನಗೆ ಯಾರೊಂದಿಗೂ ಯಾವುದೇ ಜಗಳವಿಲ್ಲ. ನಾನು ನನ್ನ ಸ್ವಂತ ಇಚ್ಛೆಯಿಂದ ಈ ಲೋಕವನ್ನು ತೊರೆಯುತ್ತಿದ್ದೇನೆ. ನನ್ನ ಶವವನ್ನು ರಸೂಲ್‌ಪುರಕ್ಕೆ ಕೊಂಡೊಯ್ಯಬಾರದು. ನನ್ನ ಅಂತ್ಯಕ್ರಿಯೆಗಳನ್ನು ಹಾಜಿಪುರದಲ್ಲಿ ನಡೆಸಬೇಕು. ಯಾವುದೇ ಕಾರಣಕ್ಕೂ ನನ್ನ ಗಂಡ ನನ್ನ ಅಂತ್ಯಕ್ರಿಯೆ ಮಾಡಬಾರದು. ನನ್ನ 3 ತಿಂಗಳ ಹೆಣ್ಣು ಮಗುವೇ ಅಂತ್ಯಕ್ರಿಯೆ ಮಾಡಬೇಕು. ನನ್ನ ಮೊಬೈಲ್ ಫೋನ್ ನನ್ನ ಗಂಡನಿಗೆ ಹಸ್ತಾಂತರಿಸಬೇಕು. ನನ್ನ ಮೊಬೈಲ್​ನಲ್ಲಿ ಸಂದೇಶಗಳು, ಆಡಿಯೋ ಮತ್ತು ವಿಡಿಯೋ ಸಂದೇಶಗಳಿವೆ. ಅದರ ಪಾಸ್‌ವರ್ಡ್‌ಗಳು ನನ್ನ ಗಂಡನಿಗೆ ತಿಳಿದಿವೆ. ನಾನು ನೋಯಿಸಿದ ಪ್ರತಿಯೊಬ್ಬರಲ್ಲೂ ನಾನು ಕ್ಷಮೆ ಯಾಚಿಸುತ್ತೇನೆ. ಮರಣೋತ್ತರ ಪರೀಕ್ಷೆ ನಡೆಸದಂತೆ ನಾನು ಪೊಲೀಸ್ ಆಡಳಿತವನ್ನು ವಿನಂತಿಸುತ್ತೇನೆ. ನನ್ನ ಪತಿ ಅಥವಾ ಕುಟುಂಬದ ವಿರುದ್ಧ ಯಾವುದೇ ಪ್ರಕರಣ ದಾಖಲಿಸಬಾರದು. ಅಮ್ಮ, ಅಪ್ಪ ನಿಮ್ಮ ಮಗಳು ಸೋತಿದ್ದಾಳೆ. ಕ್ಷಮಿಸಿ ಅಮ್ಮ.” ಎಂದು ಬರೆಯಲಾಗಿದೆ.

ಇದನ್ನೂ ಓದಿ: ಇಬ್ಬರೂ ಸಾಯೋಣ ಎಂದು ಯುವತಿಯನ್ನು ನಂಬಿಸಿ ಕೊಂದ ಹಂತಕ!

ನನ್ನ ಸಾವಿಗೆ ಯಾರೂ ಕಾರಣರಲ್ಲ. 5.5 ಲೀಟರ್ ಹಾಲಿಗೆ ನಾನು ಹಣ ನೀಡಬೇಕಾಗಿದೆ. ಆ ಹಣ ನನ್ನ ಪರ್ಸ್​​ನಲ್ಲಿದೆ. ಅದನ್ನು ಅವರಿಗೆ ಕೊಟ್ಟುಬಿಡಿ ಎಂದು ಆ ಮಹಿಳೆ ಸೂಸೈಡ್ ನೋಟ್​​ನಲ್ಲಿ ಬರೆದಿದ್ದಾರೆ.

ಪ್ರಿಯಾ ಭಾರತಿ ಎರಡು ವರ್ಷಗಳ ಹಿಂದೆ ಜಂದಹಾ ಪೊಲೀಸ್ ಠಾಣೆ ಪ್ರದೇಶದ ರಸೂಲ್‌ಪುರ ಗ್ರಾಮದ ನಿವಾಸಿ ದೀಪಕ್ ರಾಜ್ ಅವರನ್ನು ವಿವಾಹವಾಗಿದ್ದರು. ದಂಪತಿಗಳ ನಡುವೆ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಪೊಲೀಸರು ಪತಿಯನ್ನು ವಿಚಾರಣೆ ನಡೆಸುತ್ತಿದ್ದು, ಎಲ್ಲಾ ಕೋನಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾತ್ರಿ ಮಲಗುವ ಮುನ್ನ ನೀರು ಕುಡಿಯುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಮಿಸ್ ಮಾಡ್ದೆ ಸ್ಟೋರಿ ಓದಿ – Kannada News | Water Before Bed: Good or Bad for Your Sleep?

ನಮ್ಮ ದೇಹಕ್ಕೆ ನೀರು (Water) ಎಷ್ಟು ಮುಖ್ಯ ಎಂಬುದು ತಿಳಿದಿರುವ ವಿಷಯ. ದೇಹದ ಶೇಕಡಾ 60 ರಿಂದ 70 ರಷ್ಟು ಭಾಗ ನೀರಿನಿಂದ ಕೂಡಿದೆ. ಅದಕ್ಕಾಗಿಯೇ ವೈದ್ಯರು ಪ್ರತಿದಿನ ಕನಿಷ್ಠ 8 ಗ್ಲಾಸ್ ನೀರು ಕುಡಿಯಲು ಶಿಫಾರಸು ಮಾಡುತ್ತಾರೆ. ಆದರೆ ಮಲಗುವ ಮುನ್ನ ನೀರು ಕುಡಿಯುವ ವಿಷಯಕ್ಕೆ ಬಂದರೆ ಇದೆ ಅಭಿಪ್ರಾಯಗಳು ಭಿನ್ನವಾಗಿರುತ್ತವೆ. ಹೌದು, ಈ ಅಭ್ಯಾಸ ಬಹಳ ಪ್ರಯೋಜನಗಳನ್ನು ಹೊಂದಿದ್ದರೂ ಕೂಡ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದಿದ್ದರೆ ನಿದ್ರೆಗೆ ಅಡ್ಡಿಯಾಗಬಹುದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ. ಹಾಗಾದರೆ ಮಲಗುವ ಮುನ್ನ ನೀರು ಕುಡಿಯುವುದರಿಂದ ಯಾವ ರೀತಿಯ ಪ್ರಯೋಜನ ಸಿಗುತ್ತದೆ, ಅತಿಯಾಗಿ ನೀರು ಕುಡಿದರೆ ಯಾವ ರೀತಿಯ ಸಮಸ್ಯೆಗಳಾಗುತ್ತದೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಲಗುವ ಮುನ್ನ ನೀರು ಕುಡಿಯುವುದರಿಂದಾಗುವ ಪ್ರಯೋಜನಗಳು:

ಮಲಗುವ ಮುನ್ನ ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದು ರಕ್ತ ಪರಿಚಲನೆ ಸುಧಾರಿಸುತ್ತದೆ. ಕುಡಿಯುವ ನೀರು ದೇಹವನ್ನು ತಂಪಾಗಿಸುತ್ತದೆ ಮತ್ತು ನಿದ್ರೆ ಚೆನ್ನಾಗಿ ಬರಲು ಸಹಾಯ ಮಾಡುತ್ತದೆ. ಇನ್ನು, ಬೆಚ್ಚಗಿನ ನೀರು ಕುಡಿಯುವುದರಿಂದ ಸ್ನಾಯು ನೋವು ಕಡಿಮೆಯಾಗುವುದಲ್ಲದೆ ಜೀರ್ಣಕ್ರಿಯೆಯೂ ಸುಧಾರಿಸುತ್ತದೆ. ನಿಂಬೆ ರಸದೊಂದಿಗೆ ಬೆರೆಸಿದ ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಮತ್ತು ಚರ್ಮ ಕಾಂತಿಯುತವಾಗುತ್ತದೆ.

ಅತಿಯಾಗಿ ನೀರು ಕುಡಿಯುವುದರಿಂದಾಗುವ ಸಮಸ್ಯೆಗಳು:

ಮಲಗುವ ಮುನ್ನ ಹೆಚ್ಚು ನೀರು ಕುಡಿದರೆ, ನೋಕ್ಟೋರಿಯಾ ಎಂಬ ಸಮಸ್ಯೆ ಬರುವ ಸಾಧ್ಯತೆ ಇರುತ್ತದೆ. ಹೆಚ್ಚು ನೀರು ಕುಡಿಯುವುದರಿಂದ ರಾತ್ರಿಯಲ್ಲಿ ಪದೇ ಪದೇ ಮೂತ್ರ ವಿಸರ್ಜನೆಗೆ ಹೋಗಬೇಕಾಗಿ ಬರಬಹುದು. ಇದು ನಿದ್ರೆಗೆ ಭಂಗ ತರಬಹುದು. ಸರಿಯಾಗಿ ನಿದ್ರೆ ಆಗದಿದ್ದರೆ ಮರುದಿನ ಆಯಾಸ, ತಲೆನೋವು ಮತ್ತು ಏಕಾಗ್ರತೆಯ ಕೊರತೆ ಉಂಟಾಗಬಹುದು. ದೀರ್ಘಾವಧಿಯಲ್ಲಿ, ಇದು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ: ಕಣ್ಣುಗಳಿಂದ ಆಗಾಗ ನೀರು ಬರುವುದು ಕೆಲವು ರೋಗದ ಮುನ್ಸೂಚನೆಯಾಗಿರಬಹುದು ಎಚ್ಚರ!

ವೈದ್ಯರ ಈ ಸಲಹೆಯನ್ನು ತಪ್ಪದೆ ಪಾಲಿಸಿ:

  • ನೀರು ಕುಡಿದ ತಕ್ಷಣ ಮಲಗುವುದು ಒಳ್ಳೆಯದಲ್ಲ.
  • ನಿದ್ರೆಗೆ ಹೋಗುವ ಕನಿಷ್ಠ 2 ಗಂಟೆಗಳ ಮೊದಲು ನೀರು ಕುಡಿಯುವುದು ಒಳ್ಳೆಯದು.
  • ರಾತ್ರಿ ಊಟದ ಒಂದು ಗಂಟೆಯ ನಂತರ ನೀರು ಕುಡಿಯುವುದು ಸರಾಗ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
  • ಮಲಗುವ ಮೊದಲು ಬಾಯಾರಿಕೆಯಾದಲ್ಲಿ, ಗ್ಲಾಸ್‌ ತುಂಬಾ ನೀರು ಕುಡಿಯುವುದಕ್ಕಿಂತ ಕೆಲವು ಸಿಪ್ಸ್ ನೀರು ಕುಡಿಯುವುದು ಒಳ್ಳೆಯದು.

ನೀರು ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದು, ಆದರೆ ಅದು ನಿಮ್ಮ ನಿದ್ರೆಗೆ ತೊಂದರೆಯಾಗಬಾರದು. ಆದ್ದರಿಂದ, ಮಲಗುವ ಮೊದಲು ಸಮಯಕ್ಕೆ ಅನುಗುಣವಾಗಿ ನೀರು ಕುಡಿಯಿರಿ ಮತ್ತು ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

೩೦೮ ಸ್ಟ್ರೈಕ್ ರೇಟ್​ನಲ್ಲಿ ಸ್ಫೋಟಕ ಅರ್ಧಶತಕ ಸಿಡಿಸಿದ ವೈಭವ್ ಸೂರ್ಯವಂಶಿ – Kannada News | Vaibhav suryavanshi Smashed Fifty In U19 World Cup 2026

ಆರೋನ್ ಜಾರ್ಜ್​ 16 ಎಸೆತಗಳಲ್ಲಿ 23 ರನ್​ ಬಾರಿಸಿ ಔಟಾದರೆ, ವೈಭವ್ ಸೂರ್ಯವಂಶಿ ಭರ್ಜರಿ ಬ್ಯಾಟಿಂಗ್ ಮುಂದುವರೆಸಿದರು. ಅದರಲ್ಲೂ ಝಿಂಬಾಬ್ವೆ ಬೌಲರ್​ಗಳ ಮನಸೋ ಇಚ್ಛೆ ದಂಡಿಸಿದ ಯುವ ದಾಂಡಿಗ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅದು ಕೂಡ 208ರ ಸ್ಟ್ರೈಕ್ ರೇಟ್​ನಲ್ಲಿ ಎಂಬುದು ವಿಶೇಷ.

Source link

ರವಿತೇಜ ನಟನೆಯ 77ನೇ ಸಿನಿಮಾಗೆ ‘ಇರುಮುಡಿ’ ಶೀರ್ಷಿಕೆ: ಫಸ್ಟ್ ಲುಕ್ ರಿಲೀಸ್ – Kannada News | Ravi Teja and Priya Bhavani Shankar new movie titled Irumudi

ಟಾಲಿವುಡ್ ನಟ ರವಿತೇಜ (Ravi Teja) ಅವರು ಜನವರಿ 26ರಂದು 58ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡರು. ಅವರ ಬರ್ತ್​ಡೇ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್ ಮಾಡಲಾಗಿದೆ. ಇದು ರವಿತೇಜ ನಟನೆಯ 77ನೇ ಸಿನಿಮಾ. ಈ ಚಿತ್ರಕ್ಕೆ ‘ಇರುಮುಡಿ’ ಎಂದು ಶೀರ್ಷಿಕೆ ಇಡಲಾಗಿದೆ. ಈ ಸಿನಿಮಾ ಮೂಲಕ ರವಿತೇಜ ಅವರು ಭಕ್ತಪ್ರಧಾನ ಕಥೆಯನ್ನು ಜನರಿಗೆ ಹೇಳಲಿದ್ದಾರೆ. ‘ಇರುಮುಡಿ’ (Irumudi) ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

ನಿರ್ದೇಶಕ ಶಿವ ನಿರ್ವಾಣ ಅವರು ‘ಇರುಮುಡಿ’ ಸಿನಿಮಾಗೆ ಆ್ಯಕ್ಷನ್-ಕಟ್ ಹೇಳಲಿದ್ದಾರೆ. ಭಕ್ತಿಯ ಜೊತೆಗೆ ಭಾವನಾತ್ಮಕ ಅಂಶಗಳು ಇರುವ ಕಥೆಯನ್ನು ಅವರು ಈ ಬಾರಿ ಆಯ್ಕೆ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ತಂದೆ ಮತ್ತು ಮಗಳ ಬಾಂಧವ್ಯ ಕೂಡ ಹೈಲೆಟ್ ಆಗಿರಲಿದೆ. ರವಿತೇಜ ಅವರು ಹಿಂದೆಂದೂ ಕಾಣದ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಶಬರಿಮಲೆ ಅಯ್ಯಪ್ಪ ದೀಕ್ಷಾಧಾರಿಗಳು ಯಾತ್ರೆಯ ಸಮಯದಲ್ಲಿ ತಲೆಯ ಮೇಲೆ ಹೊತ್ತುಕೊಂಡು ಸಾಗುವುದನ್ನು ಇರುಮುಡಿ ಎನ್ನುತ್ತಾರೆ. ಅದನ್ನೇ ಶೀರ್ಷಿಕೆಯಾಗಿ ಇಡಲಾಗಿದೆ. ಈಗಾಗಲೇ ಅಯ್ಯಪ್ಪ ಸ್ಟಾಮಿ ಬಗ್ಗೆ ಹಲವು ಸಿನಿಮಾಗಳು ಬಂದಿವೆ. ರವಿತೇಜ ಅವರ ‘ಇರುಮುಡಿ’ ಸಿನಿಮಾ ಯಾವ ರೀತಿ ಭಿನ್ನವಾಗಿರಲಿದೆ ಎಂಬುದನ್ನು ತಿಳಿಯಲು ಫ್ಯಾನ್ಸ್ ಕಾದಿದ್ದಾರೆ.

‘ಇರುಮುಡಿ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡುವುದರ ಜೊತೆಗೆ ಪಾತ್ರವರ್ಗದ ಬಗ್ಗೆಯೂ ಮಾಹಿತಿ ಹಂಚಿಕೊಳ್ಳಲಾಗಿದೆ. ಪ್ರಿಯಾ ಭವಾನಿ ಶಂಕರ್ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಬೇಬಿ ನಕ್ಷತ್ರಾ ಅವರು ರವಿತೇಜ ಅವರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಯಿ ಕುಮಾರ್, ಅಜಯ್ ಘೋಷ್, ರಮೇಶ್ ಇಂದಿರಾ, ಸ್ವಸಿಕಾ ಕೂಡ ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ.

ಇದನ್ನೂ ಓದಿ: ಚಿತ್ರರಂಗಕ್ಕೆ ಎಂಟ್ರಿ ಕೊಡೋಕೆ ರೆಡಿ ಆದ ರವಿತೇಜ ಮಗಳು ಮೋಕ್ಷಧಾ

ನಿರ್ದೇಶಕ ಶಿವ ನಿರ್ವಾಣ ಅವರೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಈಗಾಗಲೇ ‘ಇರುಮುಡಿ’ ಸಿನಿಮಾದ ಚಿತ್ರೀಕರಣ ಶುರುವಾಗಿದೆ. ‘ಮೈತ್ರಿ ಮೂವೀ ಮೇಕರ್ಸ್’ ಸಂಸ್ಥೆಯ ಮೂಲಕ ನವೀನ್ ಯರ್ನೇನಿ ಮತ್ತು ರವಿಶಂಕರ್ ಅವರು ಈ ಸಿನಿಮಾ ನಿರ್ಮಿಸುತ್ತಿದ್ದಾರೆ. ಜಿವಿ ಪ್ರಕಾಶ್ ಅವರು ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ವಿಷ್ಣು ಶರ್ಮ ಅವರ ಛಾಯಾಗ್ರಹಣ, ಪ್ರವೀಣ್ ಪುಡಿ ಅವರ ಸಂಕಲನದಲ್ಲಿ ‘ಇರುಮುಡಿ’ ಸಿನಿಮಾ ಮೂಡಿಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link