Category Archives: Blog

Your blog category

ಮಹಿಳಾ ಅಧಿಕಾರಿಗೆ ಬೆದರಿಕೆ ಕೇಸ್​: ಕೈಗೆ ಸಿಗದ ರಾಜೀವ್​​ ಗೌಡನನ್ನು ಖಾಕಿ ಖೆಡ್ಡಾಕ್ಕೆ ಕೆಡವಿದ್ದೇಗೆ? ಇಲ್ಲಿದೆ ಇಂಟರೆಸ್ಟಿಂಗ್​​ ಮಾಹಿತಿ – Kannada News | Threat to Woman Officer: Inside Story Behind Police Arrest of Absconding Rajeev Gowda

ಬೆದರಿಕೆ ಕೇಸ್​​ನಲ್ಲಿ ರಾಜೀವ್​​ ಗೌಡ ಬಂಧನ

ಮಂಗಳೂರು, ಜನವರಿ 27: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದಿಸಿ ಧಮ್ಕಿ ಹಾಕಿದ್ದ ಪ್ರಕರಣ ಸಂಬಂಧ ಆರೋಪಿ ರಾಜೀವ್​​ ಗೌಡ ಕೊನೆಗೂ ಲಾಕ್​​ ಆಗಿದ್ದಾನೆ. ಪ್ರಕರಣ ದಾಖಲಾಗುತ್ತಿದ್ದಂತೆ ತಲೆ ಮರೆಸಿಕೊಂಡು ಊರೂರು ಅಲೆಯತ್ತಿದ್ದ ಆರೋಪಿಯನ್ನು ಕೇರಳ ಗಡಿಯಲ್ಲಿ ಪೊಲೀಸರು ಖೆಡ್ಡಾಗೆ ಕೆಡವಿದ್ದಾರೆ. ಅಷ್ಟಕ್ಕೂ ರಾಜೀವ್​​ ಗೌಡ ಎಲ್ಲಿದ್ದಾನೆ ಎಂಬ ಬಗ್ಗೆ ಖಾಕಿ ಮಾಹಿತಿ ಕಲೆ ಹಾಕಿರೋದೇ ಬಹಳ ಇಂಟರೆಸ್ಟಿಂಗ್​​ ಆಗಿದೆ.

ಆರೋಪಿ ರಾಜೀವ್​​ ಗೌಡ ತನ್ನ ಸಹೋದರಿಗೆ ಕರೆ ಮಾಡಿದ್ದ ಎಂಬ ವಿಚಾರ ಪೊಲೀಸರಿಗೆ ಸಿಕ್ಕಿದ್ದು, ಈ ಬಗ್ಗೆ ಆಕೆಯನ್ನು ವಿಚಾರಣೆ ನಡೆಸಲಾಗಿತ್ತು. ಮಂಗಳೂರಲ್ಲಿ ಇದ್ದ ರಾಜೀವ್​​ ಗೌಡ ಬೇರೆ ರಾಜ್ಯಕ್ಕೆ ಎಸ್ಕೇಪ್​​ ಆಗಿದ್ದಾನೆ ಎಂಬ ಬಗ್ಗೆ ಮಾಹಿತಿ ಆಧಾರದಲ್ಲಿ ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದರು. ಆ ವೇಳೆ ಮಂಗಳೂರಿನ ಉದ್ಯಮಿ ಮೈಕಲ್ ಜೋಸೆಫ್ ರೇಗೋ ಜೊತೆ ಆರೋಪಿ ಇರೋದು ಕನ್ಫರ್ಮ್​​ ಆಗಿದೆ. ಆದರೆ ಮೈಕಲ್ ಜೋಸೇಫ್ ರೇಗೊ ಫೋನ್ ನಂಬರ್ ಪೊಲೀಸರ ಬಳಿ ಇರಲಿಲ್ಲ. ಎಷ್ಟು ಹುಡುಕಾಡಿದ್ರು ಫೋನ್ ನಂಬರ್ ಸಿಗದ ಕಾರಣ ಸಿಬ್ಬಂದಿ ಪರದಾಟ ನಡೆಸಿದ್ದಾರೆ. ಅಂತಿಮವಾಗಿ ಪೊಲೀಸರು ಮಾಡಿದ್ದ ಮಾಸ್ಟರ್​​ ಪ್ಲ್ಯಾನ್​​ ಸಕ್ಸಸ್​​ ಆಗಿದೆ.

ಇದನ್ನೂ ಓದಿ: ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಕೇಸ್; ಆರೋಪಿ ರಾಜೀವ್ ಗೌಡ ಕೊನೆಗೂ ಅರೆಸ್ಟ್!

ರಾಜೀವ್​​ಗೆ ಆಶ್ರಯ ಕೊಟ್ಟ ಉದ್ಯಮಿಯೂ ಅರೆಸ್ಟ್​​


ಮೈಕಲ್​​ ನಂಬರ್​​ ಸಿಗದ ಕಾರಣ ಉದ್ಯಮಿಯ ಹಿನ್ನೆಲೆಯನ್ನು ಪೊಲೀಸರು ಕೆದಕಿದ್ದಾರೆ. ಮೈಕಲ್ ಮಗ ಬಹಳ ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ಈ ಬಗ್ಗೆ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 2018ರಲ್ಲಿ USAನಿಂದ ಬೆಂಗಳೂರು ಏರ್ಪೋರ್ಟ್​​ಗೆ ಬಂದಿದ್ದ ಮೈಕಲ್ ಮಗ, ಚಿಕ್ಕಜಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಹೀಗಾಗಿ ಮಂಗಳೂರಿನ ಪಬ್ ಒಂದರ ಮಾಲಕರಾಗಿರುವ ಮೈಕಲ್ ಸೋದರ ಸಂಬಂಧಿಯೊಬ್ಬರಿಗೆ ತಾವು ಚಿಕ್ಕಜಾಲ ಪೊಲೀಸರು ಅಂತಾ ದೂರವಾಣಿ ಕರೆ ಮಾಡಲಾಗಿದೆ. ಮೈಕಲ್ ಮಗನ ಸಾವಿನ ವಿಚಾರದಲ್ಲಿ ಅವರ ಜೊತೆ ಮಾತನಾಡಬೇಕು ಎಂದು ಹೇಳಿ ಪೊಲೀಸರು ನಂಬರ್​​ ಪಡೆದಿದ್ದಾರೆ. ಬಳಿಕ ಆ ನಂಬರ್​ ಟ್ರೇಸ್​​ ಮಾಡಿ ಮೈಕಲ್ ಹಾಗೂ ಜೊತೆ ಇದ್ದ ರಾಜೀವ್ ಗೌಡನನ್ನು ಪೊಲೀಸರು ಬಂಧಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತ-ಯೂರೋಪಿಯನ್ ಯೂನಿಯನ್ ಒಪ್ಪಂದದಿಂದ ಯಾರಿಗೆ ಲಾಭ? – Kannada News | India European Union trade deal, which sectors will benefit from this FTA

ಯುಇ ಕಮಿಷನ್ ಅಧ್ಯಕ್ಷೆ ಉರ್ಸುಲಾ ಜೊತೆ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜನವರಿ 27: ಭಾರತ ಮತ್ತು ಐರೋಪ್ಯ ಒಕ್ಕೂಟ ಮಧ್ಯೆ ಏರ್ಪಟ್ಟಿರುವ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದದಿಂದ (India-EU trade pact) ಎರಡೂ ಪಕ್ಷಗಳಿಗೆ ಲಾಭವಾಗಲಿದೆ. ಈ ಒಪ್ಪಂದವನ್ನು ಮದರ್ ಆಫ್ ಆಲ್ ಡೀಲ್ಸ್ (Mother of all deals) ಎಂದು ಬಣ್ಣಿಸಲಾಗುತ್ತಿದೆ. ಯೂರೋಪ್​ನ ಮುಂದುವರಿದ 27 ದೇಶಗಳ ಗುಂಪಾಗಿರುವ ಐರೋಪ್ಯ ಒಕ್ಕೂಟ ಹಾಗೂ ವಿಶ್ವದ 5ನೇ ಅತಿದೊಡ್ಡ ಆರ್ಥಿಕತೆಯ ದೇಶವಾದ ಭಾರತದ ನಡುವಿನ ವ್ಯಾಪಾರದ ಗಾತ್ರ ಬಹಳ ದೊಡ್ಡದು.

ಯೂರೋಪಿಯನ್ ದೇಶಗಳು ವಾಹನ ಕ್ಷೇತ್ರದಲ್ಲಿ ಬಹಳ ಪರಿಣಿತಿ ಹೊಂದಿವೆ. ವಿಶ್ವದ ಶ್ರೇಷ್ಠ ಆಟೊಮೊಬೈಲ್ ಕಂಪನಿಗಳು ಬಹುತೇಕ ಈ ಭಾಗದ್ದೇ ಆಗಿವೆ. ವೈನ್, ವಿಸ್ಕಿ ಇತ್ಯಾದಿ ಆಲ್ಕೋಹಾಲ್ ಪಾನೀಯಗಳಿಗೆ ಇಯು ಬಹಳ ಖ್ಯಾತಿ ಪಡೆದಿದೆ.

ಇದನ್ನೂ ಓದಿ: CUSMA ನಿಯಮಗಳಿಗೆ ಬದ್ಧ; ಚೀನಾದೊಂದಿಗೆ ವ್ಯಾಪಾರ ಒಪ್ಪಂದ ಇಲ್ಲ: ಕೆನಡಾ ಹೇಳಿಕೆ

ಇಯು ಜೊತೆಗಿನ ಒಪ್ಪಂದದಿಂದ ಭಾರತಕ್ಕೇನು ಲಾಭ?

  • ಭಾರತದ ಫಾರ್ಮಾ, ಜವಳಿ, ಐಟಿ ಸರ್ವಿಸ್, ರಾಸಾಯನಿಕ ಮತ್ತು ಎಂಜಿನಿಯರಿಂಗ್ ಸರಕುಗಳಿಗೆ ಹೆಚ್ಚಿನ ಮಾರುಕಟ್ಟೆ ಪ್ರವೇಶ ಸಿಗುತ್ತದೆ.
  • ಉತ್ಪಾದನೆ, ಇನ್​ಫ್ರಾಸ್ಟ್ರಕ್ಚರ್, ಸ್ವಚ್ಛ ಇಂಧನ ಮತ್ತು ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಯೂರೋಪಿಯನ್ ಯೂನಿಯನ್​ನಿಂದ ಭಾರತದಲ್ಲಿ ಹೂಡಿಕೆಗಳು ಹೆಚ್ಚಾಗುವ ನಿರೀಕ್ಷೆ ಇದೆ.
  • ಜಾಗತಿಕ ಮ್ಯಾನುಫ್ಯಾಕ್ಚರಿಂಗ್​ನ ಸಪ್ಲೈ ಚೈನ್ ಅಥವಾ ಸರಬರಾಜು ವ್ಯವಸ್ಥೆಯಲ್ಲಿ ಭಾರತದ ಪಾತ್ರ ಹೆಚ್ಚಲಿದೆ. ಹೆಚ್ಚು ಮೌಲ್ಯದ ಉತ್ಪಾದನೆಗೆ ಪುಷ್ಟಿ ಸಿಗಲಿದೆ.
  • ಯೂರೋಪ್ ಜೊತೆ ವ್ಯಾಪಾರ ಹೆಚ್ಚಾದಂತೆ ಭಾರತಕ್ಕೆ ಅಮೆರಿಕದ ಮೇಲಿನ ಅವಲಂಬನೆ ಮತ್ತಷ್ಟು ಕಡಿಮೆ ಆಗಬಹುದು.

ಯಾವ್ಯಾವ ಸೆಕ್ಟರ್​ಗಳಿಗೆ ಲಾಭ?

  • ಐಟಿ ಮತ್ತು ಡಿಜಿಟಲ್ ಸರ್ವಿಸ್
  • ಫಾರ್ಮಾ ಮತ್ತು ಹೆಲ್ತ್​ಕೇರ್
  • ಜವಳಿ
  • ಆಟೊಮೊಬೈಲ್, ಇವಿ
  • ನವೀಕರಣ ಇಂಧನ ಮತ್ತು ಹಸಿರು ತಂತ್ರಜ್ಞಾನ
  • ಮ್ಯಾನುಫ್ಯಾಕ್ಚರಿಂಗ್ ಮತ್ತು ಎಂಜಿನಿಯರಿಂಗ್ ಸರಕುಗಳು

ಇದನ್ನೂ ಓದಿ: ಯೂರೋಪ್​ನ ಕಾರುಗಳ ಮೇಲಿನ ಟ್ಯಾರಿಫ್ ಶೇ. 110ರಿಂದ ಶೇ. 40ಕ್ಕೆ ಇಳಿಸಲಿದೆಯಾ ಭಾರತ?

ಯೂರೋಪಿಯನ್ ಯೂನಿಯನ್​ಗೆ ಏನು ಲಾಭ?

ಭಾರತದ 140 ಕೋಟಿ ಜನಸಂಖ್ಯೆಯ ಬೃಹತ್ ಮಾರುಕಟ್ಟೆಯಲ್ಲಿ ಇಯುಗೆ ಹೆಚ್ಚು ಮುಕ್ತ ಪ್ರವೇಶ ಸಿಗುತ್ತದೆ. ಭಾರತವು ಅತಿವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿರುವುದರಿಂದ ಮತ್ತು ಮಾರುಕಟ್ಟೆ ನಿರ್ದೇಶಿತ ಆರ್ಥಿಕತೆಯಾದ್ದರಿಂದ ಇಯು ಸರಕುಗಳಿಗೆ ಹೆಚ್ಚಿನ ಅವಕಾಶ ಸಿಗುತ್ತದೆ.

ಯೂರೋಪ್​ನ ಪ್ರಮುಖ ಶಕ್ತಿ ಎನಿಸಿರುವ ವಾಹನ ತಯಾರಿಕೆ, ಐಷಾರಾಮಿ ಸರಕುಗಳು, ಮದ್ಯ, ಯಂತ್ರೋಪಕರಣಗಳಿಗೆ ಭಾರತ ಉತ್ತಮ ಮಾರುಕಟ್ಟೆ ಎನಿಸಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 12:56 pm, Tue, 27 January 26

Source link

‘ಅನಿಮಲ್ ಪಾರ್ಕ್’ ಚಿತ್ರೀಕರಣ ಯಾವಾಗ: ಬಾಯ್ಬಿಟ್ಟ ರಣ್​​ಬೀರ್ ಕಪೂರ್ – Kannada News | Ranbir Kapoor talks about Animal Park movie shooting

ರಣ್​​ಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾ 2023 ರಲ್ಲಿ ಬಿಡುಗಡೆ ಆಗಿ ಬಾಕ್ಸ್ ಆಫೀಸ್​​ನಲ್ಲಿ ಭಾರಿ ದೊಡ್ಡ ಹಿಟ್ ಆಗಿತ್ತು. ಸಿನಿಮಾ ಯಶಸ್ವಿ ಆದ ಜೊತೆಗೆ ಪರ ವಿರೋಧ ಚರ್ಚೆಯನ್ನೂ ಸಹ ಹುಟ್ಟುಹಾಕಿತ್ತು. ‘ಅನಿಮಲ್’ ಸಿನಿಮಾವನ್ನು ‘ಹಿಂಸಾತ್ಮಕ’, ‘ಪುರುಷ ಅಹಂಕಾರ’ ತುಂಬಿದ ಸಿನಿಮಾ, ‘ಮಹಿಳಾ ಪೀಡಕ’ತನದ ವೈಭವೀಕರಣ ಎಂದೆಲ್ಲ ವಿಮರ್ಶಕರು ಟೀಕೆ ಮಾಡಿದ್ದರು. ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳಲಿಲ್ಲ, ಜೊತೆಗೆ ‘ಅನಿಮಲ್’ ಸಿನಿಮಾದ ಸೀಕ್ವೆಲ್ ಮಾಡುವುದಾಗಿ ಘೋಷಣೆ ಮಾಡಿದರು. ಇದೀಗ ರಣ್​​ಬೀರ್ ಕಪೂರ್ ‘ಅನಿಮಲ್’ ಸೀಕ್ವೆಲ್​​ನ ಚಿತ್ರೀಕರಣದ ಬಗ್ಗೆ ಮಾತನಾಡಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ನಟ ರಣ್​​ಬೀರ್ ಕಪೂರ್, ‘ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ ಪ್ರಸ್ತುತ ಬೇರೊಂದು ಸಿನಿಮಾನಲ್ಲಿ ತೊಡಗಿಸಿಕೊಂಡಿದ್ದು ಆ ಸಿನಿಮಾ ಮುಗಿದ ಬಳಿಕ ‘ಅನಿಮಲ್ ಪಾರ್ಕ್’ ಸಿನಿಮಾ ಪ್ರಾರಂಭ ಆಗಲಿದೆ. ಸಿನಿಮಾದ ಚಿತ್ರೀಕರಣ ಬಹುಷಃ 2027ರಲ್ಲಿ ಪ್ರಾರಂಭ ಆಗಬಹುದು’ ಎಂದಿದ್ದಾರೆ.

ಸಂದೀಪ್ ರೆಡ್ಡಿ ವಂಗಾ ಪ್ರಸ್ತುತ ಪ್ರಭಾಸ್ ನಟನೆಯ ‘ಸ್ಪಿರಿಟ್’ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಆ ಸಿನಿಮಾದ ಬಳಿಕ ರಣ್​ಬೀರ್ ಕಪೂರ್ ಜೊತೆಗೆ ‘ಅನಿಮಲ್ ಪಾರ್ಕ್’ ಸಿನಿಮಾ ಪ್ರಾರಂಭ ಮಾಡಲಿದ್ದಾರೆ. ‘ಅನಿಮಲ್’ ಸಿನಿಮಾದ ಅಂತ್ಯದಲ್ಲಿಯೇ ‘ಅನಿಮಲ್ ಪಾರ್ಕ್’ ಸಿನಿಮಾದ ಸುಳಿವು ನೀಡಿರುವ ಸಂದೀಪ್ ರೆಡ್ಡಿ ವಂಗಾ, ‘ಅನಿಮಲ್’ ಸಿನಿಮಾಕ್ಕಿಂತಲೂ ‘ಅನಿಮಲ್ ಪಾರ್ಕ್’ ಹೆಚ್ಚು ವೈಯಲೆಂಟ್ ಆಗಿರಲಿದೆ ಎಂದು ಈಗಾಗಲೇ ಹೇಳಿದ್ದಾರೆ.

ಇದನ್ನೂ ಓದಿ:ಆಮಿರ್ ಖಾನ್ ಮನೆಯಲ್ಲಿ ‘ಸಿತಾರೆ’ಗಳು, ರಣ್​ಬೀರ್ ಕಪೂರ್ ಸಹ

ರಣ್​​ಬೀರ್ ಕಪೂರ್ ಪ್ರಸ್ತುತ ‘ರಾಮಾಯಣ’ ಸಿನಿಮಾನಲ್ಲಿ ತೊಡಗಿಸಿಕೊಂಡಿದ್ದಾರೆ. ಅದರ ಜೊತೆಗೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನ ಮಾಡುತ್ತಿರುವ ‘ಲವ್ ಆಂಡ್ ವಾರ್’ ಸಿನಿಮಾನಲ್ಲಿಯೂ ನಟಿಸುತ್ತಿದ್ದಾರೆ. ‘ರಾಮಾಯಣ’ ಸಿನಿಮಾದ ಮೊದಲ ಭಾಗ ನವೆಂಬರ್ 06ಕ್ಕೆ ಬಿಡುಗಡೆ ಆಗಲಿದೆ. ಅದಾದ ಬಳಿಕ 2027ರ ಫೆಬ್ರವರಿ ತಿಂಗಳಲ್ಲಿ ‘ಲವ್ ಆಂಡ್ ವಾರ್’ ಸಿನಿಮಾ ಬಿಡುಗಡೆ ಆಗಲಿದೆ. 2027ರಲ್ಲಿ ರಣ್​​ಬೀರ್ ಕಪೂರ್, ‘ಬ್ರಹ್ಮಾಸ್ತ್ರ 2’ ಮತ್ತು ‘ಅನಿಮಲ್ ಪಾರ್ಕ್’ ಸಿನಿಮಾಗಳಲ್ಲಿ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

400 ಕೋಟಿ ರೂ. ದರೋಡೆ ಪ್ರಕರಣ: ಹಣ ಸಾಗಿಸುತ್ತಿದ್ದ ಕಂಟೇನರ್ ಚಾಲಕರು ಕೊನೆಗೂ ಸಿಕ್ಕಿಬಿದ್ರಾ? – Kannada News | 400 Cr Robbery: Karnataka Goa Border Container Drivers Arrested, New Twist

400ಕೋಟಿ ದರೋಡೆ ಪ್ರಕರಣ:ಹಣ ಸಾಗಿಸುತ್ತಿದ್ದ ಕಂಟೇನರ್ ಚಾಲಕರು ಕೊನೆಗೂ ಸಿಕ್ಕಿಬಿದ್ರಾ?

ಬೆಳಗಾವಿ, ಜನವರಿ 27: ಕರ್ನಾಟಕ–ಗೋವಾ ಗಡಿಯಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣ  (Rs 400 Crore Robbery Case) ಮತ್ತೊಂದು ತಿರುವು ಪಡೆದಿದೆ. ಹಣ ಸಾಗಿಸಿದ್ದ ಎರಡು ಕಂಟೇನರ್ ವಾಹನಗಳ ಚಾಲಕರನ್ನು ಎಸ್ಐಟಿ ತಂಡ ಬಂಧಿಸಿದ್ದು, ಅಜ್ಞಾತ ಸ್ಥಳದಲ್ಲಿ ಅವರಿಬ್ಬರ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.

ಇಂದು ಸಂಜೆ ಬಂಧನದ ಅಧಿಕೃತ ಘೋಷಣೆ?

ಗೋವಾದಿಂದ ಮಹಾರಾಷ್ಟ್ರಕ್ಕೆ 400 ಕೋಟಿ ರೂ ಹಣ ಸಾಗಿಸುತ್ತಿದ್ದ 2 ಕಂಟೇನರ್​​ಗಳನ್ನು ಹೈಜಾಕ್​​ ಮಾಡಲಾಗಿತ್ತು. ಹಣ ಸಾಗಿಸುತ್ತಿದ್ದ 2 ಕಂಟೇನರ್​​ಗಳನ್ನು ಬೆಳಗಾವಿ-ಗೋವಾ ಗಡಿ ಚೋರ್ಲಾ ಘಾಟ್​​ದಿಂದ ನಾಪತ್ತೆ ಆಗಿತ್ತು. ಇದೀಗ ಅದೇ ಕಂಟೇನರ್ ಚಾಲಕರಿಬ್ಬರನ್ನು ಮಹಾರಾಷ್ಟ್ರದ ಎಸ್ಐಟಿ ಅಧಿಕಾರಿಗಳ ತಂಡ ಬಂಧಿಸಿದೆ ಎಂದು ನಾಸಿಕ್ ಪೊಲೀಸರಿಂದ ಮಾಹಿತಿ ದೊರಕಿದೆ.ಚಾಲಕರ ಬಂಧನದ ಬಳಿಕ ದರೋಡೆ ಪ್ರಕರಣಕ್ಕೆ ಹೊಸ ತಿರುವು ಸಿಗುವ ಸಾಧ್ಯತೆಯಿದ್ದು, ಇಂದು ಸಂಜೆ ವರೆಗೆ ಇಬ್ಬರ ಬಂಧನದ ಅಧಿಕೃತ ಘೋಷಣೆಯ ನಿರೀಕ್ಷಣೆಯಿದೆ.

ಇದನ್ನೂ ಓದಿ 400 ಕೋಟಿ ಮಾಲೀಕ ಗುಜರಾತ್ ರಾಜಕಾರಣಿಯಾ? ದೇಶದ ಅತಿದೊಡ್ಡ ದರೋಡೆ ಪ್ರಕರಣಕ್ಕೆ ರೋಚಕ ಟ್ವಿಸ್ಟ್!

ನಡೆದಿದ್ದೇನು?

2 ಸಾವಿರ ರೂ. ಮುಖಬೆಲೆಯ ನೂರಾರು ಕೋಟಿ ದರೋಡೆ ಪ್ರಕರಣವನ್ನು ಮಹಾರಾಷ್ಟ್ರದ ಸಂದೀಪ್ ಪಾಟೀಲ್ ಎಂಬಾತ ಬಯಲು ಮಾಡಿದ್ದ. ಹಣ ಕಿಶೋರ್ ಸೇಠ್ ಎನ್ನುವವರಿಗೆ ಸೇರಿದ್ದು, ಇದರಲ್ಲಿ ವಿರಾಟ್ ಗಾಂಧಿ ಎನ್ನುವರ ಕೈವಾಡವೂ ಇದೆ ಎಂದಿದ್ದ.ಅಕ್ಟೋಬರ್ 22ರಂದು ಸಂದೀಪ್​ನನ್ನು ಉದ್ಯಮಿ ಕಿಶೋರ್ ಸೇಠ್ ಮತ್ತವನ ಕಡೆಯವರು ಅಪಹರಿಸಿದ್ದರು. ಹೀಗೆ ಹೊತ್ತೊಯ್ದವನಿಗೆ ಚಿತ್ರಹಿಂಸೆ ಕೊಟ್ಟು ದರೋಡೆ ಬಗ್ಗೆ ಪ್ರಶ್ನೆ ಕೇಳಿದ್ದರು. ಈ ದರೋಡೆಯಲ್ಲಿ ನೀನೂ ಶಾಮೀಲಾಗಿದ್ದೀಯಾ, ಹಣ ಎಲ್ಲಿದೆ ಎಂದು ಕೇಳಿದ್ದರು.

ಈ ನಡುವೆ ಉದ್ಯಮಿ ಕಿಶೋರ್ ಹಾಗೂ ಮತ್ತಿವನ ಸ್ನೇಹಿತ ಜಯೇಶ್ ನಡುವಿನ ಸಂಭಾಷಣೆಯೊಂದು ವೈರಲ್ ಆಗಿತ್ತು. ಅದರ ಪ್ರಕರಾರ ಹಣ ಗುಜರಾತಿನ ರಾಜಕಾರಣಿಯೊಬ್ಬರಿಗೆ ಸೇರಿದ್ದೆಂಬ ಸ್ಫೋಟಕ ಮಾಹಿತಿ ತಿಳಿದು ಬಂದಿತ್ತು. ಈ ಬೆನ್ನಲ್ಲೇ ಪ್ರಕರಣಕ್ಕೀಗ ಹೊಸ ತಿರುವು ಸಿಕ್ಕಿದ್ದು, ಹಣ ಸಾಗಿಸಲು ಬಳಸಿದ ಕಂಟೇನರ್ ಚಾಲಕರು ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 12:40 pm, Tue, 27 January 26

Source link

Bengaluru 1 day Tour: 720 ರೂ.ಗೆ ಒಂದೇ ದಿನದಲ್ಲಿ ಬೆಂಗಳೂರಿನ 6 ಸ್ಥಳಗಳನ್ನು ಸುತ್ತಾಡಬಹುದು – Kannada News | Bengaluru’s Best: History, Nature and Modern Attractions – Your Ultimate Travel Guide

ಬೆಂಗಳೂರು, ಜ.27: ಬೆಂಗಳೂರು (Bengaluru Tourist Attractions) ಕೇವಲ ತಂತ್ರಜ್ಞಾನದ ಹಬ್ ಮಾತ್ರವಲ್ಲದೆ, ತನ್ನ ಅದ್ಭುತ ಉದ್ಯಾನವನಗಳು, ಐತಿಹಾಸಿಕ ಕಟ್ಟಡಗಳು ಮತ್ತು ವರ್ಣರಂಜಿತ ನೈಟ್‌ಲೈಫ್‌ಗೆ ಹೆಸರುವಾಸಿಯಾಗಿದೆ. ಕಬ್ಬನ್ ಪಾರ್ಕ್, ವಿಧಾನಸೌಧದಂತಹ ಸ್ಥಳಗಳು ನವ-ದ್ರಾವಿಡ ಶಾಸಕಾಂಗ ಕಟ್ಟಡವಾಗಿದೆ. ಹಿಂದಿನ ರಾಜಮನೆತನದ ನಿವಾಸಗಳಲ್ಲಿ ಇಂಗ್ಲೆಂಡ್‌ನ ವಿಂಡ್ಸರ್ ಕೋಟೆಯ ಮಾದರಿಯಲ್ಲಿ ನಿರ್ಮಿಸಲಾದ 19 ನೇ ಶತಮಾನದ ಬೆಂಗಳೂರು ಅರಮನೆ ಮತ್ತು 18 ನೇ ಶತಮಾನದ ತೇಗದ ರಚನೆಯಾದ ಟಿಪ್ಪು ಸುಲ್ತಾನನ ಬೇಸಿಗೆ ಅರಮನೆ ಸೇರಿವೆ.

ಸಾರಿಗೆ : ಡಿಲಕ್ಸ್ ಕೋಚ್ ಮೂಲಕ

ಭೇಟಿ ನೀಡುವ ಸ್ಥಳಗಳು : ಇಸ್ಕಾನ್, ರಾಜರಾಜೇಶ್ವರಿ ದೇವಸ್ಥಾನ, ಬನ್ನೇರುಘಟ್ಟ ಪ್ರಾಣಿಶಾಸ್ತ್ರೀಯ ಉದ್ಯಾನವನ, ವಿಜ್ಞಾನ ವಸ್ತು ಸಂಗ್ರಹಾಲಯ ಮತ್ತು ತಾರಾಲಯ.

ಕಬ್ಬನ್ ಪಾರ್ಕ್ : ನಗರದ ಹಸಿರು ಶ್ವಾಸಕೋಶ ಬೆಂಗಳೂರಿನ ಹೃದಯಭಾಗದಲ್ಲಿರುವ ಇದು ಕೇವಲ ಉದ್ಯಾನವನವಲ್ಲ, ಒಂದು ಜೀವವೈವಿಧ್ಯದ ಕೇಂದ್ರ. ಇಲ್ಲಿನ ಬಿದಿರಿನ ಮೆದೆಗಳು, ಬೃಹತ್ ಮರಗಳು ಮತ್ತು ಪ್ರತಿಮೆಯು ನಗರದ ಗದ್ದಲದಿಂದ ಮುಕ್ತಿ ನೀಡುತ್ತವೆ. ಇಲ್ಲಿ ವಾಹನ ಸಂಚಾರದ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ವಾರಾಂತ್ಯದಲ್ಲಿ ಸಂಪೂರ್ಣ ‘ನೋ ಟ್ರಾಫಿಕ್’ ವಲಯವಾಗಿ ಪ್ರವಾಸಿಗರಿಗೆ ಮುಕ್ತವಾಗಿದೆ.

ವಿಧಾನಸೌಧ: ದಕ್ಷಿಣ ಭಾರತದ ತಾಜ್‌ಮಹಲ್ ಎಂದು ಕರೆಯುತ್ತಾರೆ. ಗ್ರಾನೈಟ್‌ನಿಂದ ನಿರ್ಮಿತವಾದ ಈ ಕಟ್ಟಡವು ದ್ರಾವಿಡ ಮತ್ತು ಇಂಡೋ-ಸಾರ್ಸೆನಿಕ್ ಶೈಲಿಗಳ ಸುಂದರ ಮಿಶ್ರಣವಾಗಿದೆ. ಭಾನುವಾರ ಮತ್ತು ಸಾರ್ವಜನಿಕ ರಜಾದಿನಗಳಲ್ಲಿ ಸಂಜೆ ಹೊತ್ತು ಈ ಕಟ್ಟಡವನ್ನು ದೀಪಗಳಿಂದ ಅಲಂಕರಿಸಲಾಗುತ್ತದೆ. 2026ರಲ್ಲಿ ಬಿಡುಗಡೆಯಾದ ಹೊಸ ‘ಡಬಲ್ ಡೆಕ್ಕರ್ ಅಂಬಾರಿ’ ಬಸ್ ಮೂಲಕ ಪ್ರವಾಸಿಗರು ಇದರ ಸೌಂದರ್ಯವನ್ನು ಸವಿಯಬಹುದು.

ಬೆಂಗಳೂರು ಅರಮನೆ: 19ನೇ ಶತಮಾನದ ಈ ಅರಮನೆಯು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್ ಮಾದರಿಯಲ್ಲಿದೆ. ಅರಮನೆಯ ಒಳಗಿರುವ ಸುಂದರವಾದ ಕೆತ್ತನೆಗಳು, ಸುರುಳಿಯಾಕಾರದ ಮೆಟ್ಟಿಲುಗಳು ಮತ್ತು ಹಳೆಯ ಕಾಲದ ಫೋಟೋಗಳು ನಿಮ್ಮನ್ನು ರಾಜಮನೆತನದ ಕಾಲಕ್ಕೆ ಕರೆದೊಯ್ಯುತ್ತವೆ.

ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ: ಇದು 18ನೇ ಶತಮಾನದ ಈ ಕಟ್ಟಡವು ಸಂಪೂರ್ಣವಾಗಿ ತೇಗದ ಮರದಿಂದ ನಿರ್ಮಿತವಾಗಿದೆ.ಇಂಡೋ-ಇಸ್ಲಾಮಿಕ್ ವಾಸ್ತುಶಿಲ್ಪದ ಈ ಅರಮನೆಯನ್ನು ‘ಸುಖದ ನಿವಾಸ’ ಎಂದು ಕರೆಯಲಾಗುತ್ತಿತ್ತು.ಇಲ್ಲಿನ ಕೆತ್ತಿದ ಕಮಾನುಗಳು ಮತ್ತು ಕಂಬಗಳು ಇಂದಿಗೂ ಸುಸ್ಥಿತಿಯಲ್ಲಿವೆ.

ನೈಟ್‌ಲೈಫ್ : ಇದು ಭಾರತದ ಪಬ್ ಕ್ಯಾಪಿಟಲ್, ಬೆಂಗಳೂರಿನ ನೈಟ್‌ಲೈಫ್ ಈಗಲೂ ದೇಶದಲ್ಲಿಯೇ ನಂಬರ್ 1 ಸ್ಥಾನದಲ್ಲಿದೆ.ಎಂ.ಜಿ. ರಸ್ತೆ, ಇಂದಿರಾನಗರ ಮತ್ತು ಕೋರಮಂಗಲದಲ್ಲಿ ವಿಶ್ವದರ್ಜೆಯ ಮೈಕ್ರೋಬ್ರೆವರಿಗಳು ಇವೆ.

2026ರಲ್ಲಿ ಸೈಬರ್-ಪಂಕ್ ಶೈಲಿಯ ಪಬ್‌ಗಳು ಮತ್ತು ಲೈವ್ ಮ್ಯೂಸಿಕ್ ಬ್ಯಾಂಡ್‌ಗಳ ಪ್ರದರ್ಶನಗಳು ನಗರದ ರಾತ್ರಿಯನ್ನು ಮತ್ತಷ್ಟು ರಂಗೇರಿಸಿವೆ.

ಇದನ್ನೂ ಓದಿ: ಈ ಗಣರಾಜ್ಯೋತ್ಸವಕ್ಕೆ 830 ರೂ.ನಲ್ಲಿ 7 ಕಡೆ ಟ್ರಿಪ್​​​ ಹೋಗಬಹುದು!: KSTDC ವಿಶೇಷ ಪ್ಯಾಕೇಜ್

ಪ್ರಯಾಣದ ವಿವರ:

ಬೆಳಿಗ್ಗೆ 07.30 ಕ್ಕೆ ಇಲಾಖೆ ಕೆಎಸ್‌ಟಿಡಿಸಿ ಪ್ರಧಾನ ಕಚೇರಿ, ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರ

ಬೆಳಿಗ್ಗೆ 07.45 ಕ್ಕೆ ಇಸ್ಕಾನ್ ದೇವಾಲಯ

ಬೆಳಿಗ್ಗೆ 07.45 ರಿಂದ 08.45 ರವರೆಗೆ ಇಸ್ಕಾನ್ ಭಗವಾನ್ ಶ್ರೀ ಕೃಷ್ಣ ದೇವಾಲಯಕ್ಕೆ ಭೇಟಿ ನೀಡಿ

ಬೆಳಿಗ್ಗೆ 08.45 ರಿಂದ 9.15 ರವರೆಗೆ ರಾಜರಾಜೇಶ್ವರಿ ದೇವಸ್ಥಾನ

ಬೆಳಿಗ್ಗೆ 9.15 ಇಲಾಖೆ ರಾಜರಾಜೇಶ್ವರಿ ದೇವಸ್ಥಾನ

ಬೆಳಿಗ್ಗೆ 10.30 ಕ್ಕೆ ಬನ್ನೇರುಘಟ್ಟ

ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.00 ರವರೆಗೆ ಸಫಾರಿ ಮತ್ತು ಉದ್ಯಾನವನಕ್ಕೆ ಭೇಟಿ ನೀಡಿ

ಮಧ್ಯಾಹ್ನ 1.00 ರಿಂದ 1.30 ರವರೆಗೆ ಬನ್ನೇರುಘಟ್ಟದ ​​ಹೋಟೆಲ್ ಮಯೂರ ವನಶ್ರೀಯಲ್ಲಿ ಊಟ

ಮಧ್ಯಾಹ್ನ 1.30 ಕ್ಕೆ ಇಲಾಖೆ ಬನ್ನೇರುಘಟ್ಟ

ಸಂಜೆ 4.30 ರಿಂದ 5.15 ರವರೆಗೆ ತಾರಾಲಯ

ಸಂಜೆ 6.30 ಪ್ರವಾಸವು ಕೆಎಸ್‌ಟಿಡಿಸಿ ಪ್ರಧಾನ ಕಚೇರಿ ಬಿಎಂಟಿಸಿ ಬಸ್ ನಿಲ್ದಾಣ ಯಶವಂತಪುರದಲ್ಲಿ ಕೊನೆಗೊಳ್ಳುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸಿಎಂ ಹೆಸರು ಹೇಳ್ಕೊಂಡು ದಂಪತಿಗೆ ಕಾಂಗ್ರೆಸ್ ಮುಖಂಡನ ಧಮ್ಕಿ, ಹಲ್ಲೆ: ಪ್ರಧಾನಿ ಮೋದಿ, ರಾಷ್ಟ್ರಪತಿಗೆ ದೂರು – Kannada News | Another Congress Leader’s High Handedness After Rajeev Gowda Row: Threats and Assault in CM Siddaramaiah’s Name

ಹಲ್ಲೆಗೊಳಗಾದ ದಂಪತಿ (ಎಡಚಿತ್ರ) ಮತ್ತು ಧಮ್ಕಿ ಹಾಕಿದ ಕಾಂಗ್ರೆಸ್ ಮುಖಂಡ ರಾಜು ಸಿಎಂ ಪುತರ ಯತೀಂದ್ರ ಜತೆ

ಮೈಸೂರು, ಜನವರಿ 27: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರ ವರುಣಾದಲ್ಲಿ (Varuna) ನಡೆದ ಕಾಂಗ್ರೆಸ್ (Congress) ಮುಖಂಡನ ಗಲಾಟೆ ಪ್ರಕರಣ ಇದೀಗ ರಾಷ್ಟ್ರ ರಾಜಧಾನಿ ತಲುಪಿದೆ. ತಮ್ಮ ಮೇಲೆ ನಡೆದ ಹಲ್ಲೆ ಹಾಗೂ ನಿರಂತರ ಬೆದರಿಕೆಗಳ ವಿರುದ್ಧ ನ್ಯಾಯ ಕೋರಿ ಅಮಿತಾಬ್ ಹಾಗೂ ಅವರ ಪತ್ನಿ ಸುಷ್ಮಾ ದಂಪತಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಲಿಖಿತ ದೂರು ನೀಡಲು ಮುಂದಾಗಿದ್ದಾರೆ. ಆರೋಪಿ ರಾಜು ಎಂಬಾತ ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ವರುಣಾ ಕ್ಷೇತ್ರದ ಕಾಂಗ್ರೆಸ್ ಮುಖಂಡ. ಕೆಲ ದಿನಗಳ ಹಿಂದೆ ಹೆಬ್ಯಾ ಗ್ರಾಮದಲ್ಲಿ ಅಮಿತಾಬ್ ಹಾಗೂ ಅವರ ಪತ್ನಿ ಸುಷ್ಮಾ ಮೇಲೆ ರಾಜು ಹಾಗೂ ಅವರ ಬೆಂಬಲಿಗರು ಹಲ್ಲೆ ನಡೆಸಿದ್ದರು ಎಂಬ ಆರೋಪ ಕೇಳಿಬಂದಿದೆ.

ಅಮಿತಾಬ್ ಜಾಗವನ್ನು ತಮ್ಮ ಹೆಸರಿಗೆ ಬರೆಯುವಂತೆ ರಾಜು ಒತ್ತಡ ಹಾಕುತ್ತಿದ್ದ ಎಂಬ ಆರೋಪವಿದೆ. ಇದಕ್ಕೆ ಅಮಿತಾಬ್ ಒಪ್ಪದ ಹಿನ್ನೆಲೆಯಲ್ಲಿ, ರಾಜು ಹಾಗೂ ಆತನ ಬೆಂಬಲಿಗರು ಮನೆಗೆ ನುಗ್ಗಿ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಕಲ್ಲುಗಳಿಂದ ತಲೆಗೆ ಹೊಡೆದು ಅಟ್ಟಹಾಸ ಮೆರೆದಿದ್ದಾರೆ ಎನ್ನಲಾಗಿದೆ. ಈ ವೇಳೆ ‘‘ನನಗೆ ಸಿದ್ದರಾಮಯ್ಯ ಗೊತ್ತು, ಯತೀಂದ್ರ ಗೊತ್ತು’’ ಎಂದು ರಾಜು ಬೆದರಿಕೆ ಹಾಕಿದ್ದಾನೆ ಎಂಬ ಆರೋಪವೂ ಇದ್ದು, ಆ ಬಗ್ಗೆ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪೊಲೀಸರಿಗೆ ದೂರು ನೀಡಿದರೂ ನಿಂತಿಲ್ಲ ಬೆದರಿಕೆ, ಧಮ್ಕಿ

ಈ ಸಂಬಂಧ ಅಮಿತಾಬ್ ಅವರ ಪತ್ನಿ ಸುಷ್ಮಾ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿ ಎಫ್‌ಐಆರ್ ಆಗಿದೆ. ಆದರೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳಿಂದ ನಿರಂತರ ಬೆದರಿಕೆಗಳು ಮುಂದುವರಿದಿವೆ ಎಂದು ದಂಪತಿ ಆರೋಪಿಸಿದ್ದಾರೆ.

ಮೋದಿ, ಮುರ್ಮುಗೆ ಸಂತ್ರಸ್ತ ದಂಪತಿ ಪತ್ರ

ಸ್ಥಳೀಯ ಮಟ್ಟದಲ್ಲಿ ನ್ಯಾಯ ಸಿಗದ ಕಾರಣ, ದಂಪತಿ ರಾಷ್ಟ್ರ ರಾಜಧಾನಿ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಖುದ್ದಾಗಿ ಭೇಟಿ ಮಾಡಿ ತಮ್ಮ ಅಳಲು ತೋಡಿಕೊಳ್ಳಲು ನಿರ್ಧರಿಸಿದ್ದಾರೆ. ಲಿಖಿತ ದೂರು ಸಲ್ಲಿಸುವ ಮೂಲಕ ನ್ಯಾಯಕ್ಕಾಗಿ ಅಂತಿಮವಾಗಿ ರಾಷ್ಟ್ರಪತಿ ಮತ್ತು ಪ್ರಧಾನಿಯ ಅಂಗಳ ತಲುಪಿದ್ದಾರೆ.

ಇದನ್ನೂ ಓದಿ: ಮಂಗಳೂರಿನ ಬಹುಕೋಟಿ ಒಡೆಯನ ಆಶ್ರಯದಲ್ಲಿದ್ದ ರಾಜೀವ್ ಗೌಡ ಸಿಕ್ಕಿಬಿದ್ದಿದ್ದು ಹೇಗೆ?

ಇತ್ತೀಚೆಗೆ ಶಿಡ್ಲಘಟ್ಟದಲ್ಲಿ ಪೌರಾಯುಕ್ತೆಗೆ ಅವಾಚ್ಯವಾಗಿ ನಿಂದಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ಮುಖಂಡ ರಾಜು ಗೌಡ ಬಂಧನಕ್ಕೊಳಗಾಗಿರುವ ಹಿನ್ನೆಲೆಯಲ್ಲಿ, ವರುಣಾ ಕ್ಷೇತ್ರದಲ್ಲಿ ದಂಪತಿಯ ಮೇಲೆ ಹಲ್ಲೆ ನಡೆಸಿದ ಕಾಂಗ್ರೆಸ್ ಮುಖಂಡ ರಾಜು ವಿರುದ್ಧ ಪೊಲೀಸರು ಯಾವಾಗ ಕ್ರಮ ಕೈಗೊಳ್ಳುತ್ತಾರೆ ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:15 pm, Tue, 27 January 26

Source link

ಮದುವೆಯಾದ 45 ದಿನಕ್ಕೆ ಲವರ್​​ ಜೊತೆ ಯುವತಿ ಎಸ್ಕೇಪ್​​: ಪತಿ, ಸೋದರ ಮಾವ ಸೂಸೈಡ್​​ – Kannada News | Young Woman Elopes With Lover Just 45 Days After Marriage; Husband and Uncle Die by Suicide

ದಾವಣಗೆರೆ, ಜನವರಿ 27: ಮದುವೆಯಾದ 45 ದಿನಕ್ಕೆ ನವವಿವಾಹಿತ ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ದಾವಣಗೆರೆ ತಾಲೂಕಿನ ಗುಮ್ಮನೂರಿನಲ್ಲಿ ನಡೆದಿದೆ. ಹರೀಶ್(30) ಮೃತ ದುರ್ದೈವಿಯಾಗಿದ್ದು, ನನ್ನ ಸಾವಿಗೆ ಪತ್ನಿಯ ವರ್ತನೆಯ ಕಾರಣ ಎಂದು 2 ಪುಟಗಳ ಡೆತ್​ನೋಟ್​ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ದುರ್ದೈವ ಅಂದರೆ ಹರೀಶ್​ ಸಾವಿನ ಬೆನ್ನಲ್ಲೇ ಮುಂದೆ ನಿಂತು ಮದುವೆ ಮಾಡಿಸಿದ ತಪ್ಪಿಗೆ ಯುವತಿಯ ಸೋದರ ಮಾವ ರುದ್ರೇಶ್ ಸಹ ಅತ್ಮಹತ್ಯೆಗೆ ಶರಣಾಗಿದ್ದಾರೆ.

ಹರೀಶ್​​ ಡೆತ್​​ನೋಟ್​​ನಲ್ಲಿ ಏನಿದೆ?

ಪತ್ನಿ ಅನಗತ್ಯ ಕಿರುಕುಳ ನೀಡುತ್ತಿದ್ದಾಳೆ. ಬೇರೆ ಯುವಕನೊಂದಿಗೆ  ಓಡಿ ಹೋಗಿ ನಾನು ಹಿಂಸೆ ನೀಡುತ್ತಿರುವೆ ಎಂದು ಆರೋಪಿಸಿದ್ದಾಳೆ. ಪತ್ನಿ ಹಾಗೂ ಸಂಬಂಧಿಕರಿಂದ ತನಗೆ ಜೀವ ಬೆದರಿಕೆ ಇತ್ತು. ಇದೇ ಕಾರಣಕ್ಕೆ ಬೇಸತ್ತು ಆತ್ಮಹತ್ಯೆ ಶರಣಾಗುತ್ತಿದ್ದೇನೆ ಎಂದು ಡೆತ್ ನೋಟ್​​ನಲ್ಲಿ ಹರೀಶ್​​ ಉಲ್ಲೇಖಿಸಿದ್ದಾರೆ. ಪತ್ನಿ ಹಾಗೂ ಆಕೆ ತಂದೆ, ತಾಯಿ, ಚಿಕ್ಕಪ್ಪನಿಗೆ ಜೀವಾವಧಿ ಶಿಕ್ಷೆ ಆಗಬೇಕು. ಆಸ್ತಿಗಿಂತ ಮಾನ ಮುಖ್ಯವಾಗಿರುವ ಕಾರಣ ಈ ನಿರ್ಧಾರ ಕೈಗೊಳ್ಳುತ್ತಿದ್ದೇನೆ. ತನ್ನನ್ನು ಕ್ಷಮಿಸಿ ಎಂದು ಕುಟುಂಬ ಸದಸ್ಯರಿಗೆ ಹರೀಶ್​​ ಕ್ಷಮೆಯನ್ನೂ ಕೇಳಿದ್ದು, ಪತ್ನಿಯ ಕಡೆಯವರು ನೀಡಿದ ಹಿಂಸೆಗೆ ತನ್ನ ತಂದೆ ತಾಯಿ ಮನೆ ಬಿಡುವ ಯೋಚನೆ ಕೂಡ ಮಾಡಿದ್ದರು ಎಂದು ಆರೋಪಿಸಿದ್ದಾರೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಸಿಎಂ ಹೆಸರು ಹೇಳ್ಕೊಂಡು ದಂಪತಿಗೆ ಕಾಂಗ್ರೆಸ್ ಮುಖಂಡನ ಧಮ್ಕಿ, ಹಲ್ಲೆ; ಪ್ರಧಾನಿ ಮೋದಿ, ರಾಷ್ಟ್ರಪತಿಗೆ ದೂರು

ಇನ್ನು ಇತ್ತ ಹರೀಶ್​​ ಆತ್ಮಹತ್ಯೆಗೆ ಶರಣಾದ ವಿಚಾರ ತಿಳಿಯುತ್ತಿದ್ದಂತೆ ಮುಂದೆ ನಿಂತು ಇವರ ಮದುವೆ ಮಾಡಿಸಿದ್ದ ಯುವತಿಯ ಸಹೋದರ ಮಾವ ರುದ್ರೇಶ್ ಕೂಡ ನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ರುದ್ರೇಶ್​​ ದಾವಣಗೆರೆಯ ಅನೆಕೊಂಡದ ನಿವಾಸಿಯಾಗಿದ್ದು, 4 ದಿನದ ಹಿಂದೆ ಕುಮಾರ್​ ಎಂಬಾತನ ಜತೆ ಹರೀಶ್ ಪತ್ನಿ ಓಡಿಹೋಗಿದ್ದಳು. ಇದರಿಂದ ಅವಮಾನ ತಾಳಲಾರದೆ ರುದ್ರೇಶ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಒಟ್ಟಿನಲ್ಲಿ ಯುವತಿಯ ಹುಚ್ಚಾಟಕ್ಕೆ ಇಬ್ಬರ ಪ್ರಾಣ ಹೋಗಿದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬಿಗ್ ಬಾಸ್​ನಿಂದ ಹೊರಬಂದ ಬಳಿಕ ಧ್ರುವಂತ್ ನನ್ನ ಸಂಪರ್ಕಿಸಿಯೇ ಇಲ್ಲ; ಮಲ್ಲಮ್ಮ ಬೇಸರ – Kannada News | Mallamma Says Dhruvanth Not Contact her After Bigg Boss Finale

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ ಧ್ರುವಂತ್ ಹಾಗೂ ಮಲ್ಲಮ್ಮ ಇದ್ದರು. ಮಲ್ಲಮ್ಮ ಅವರನ್ನು ಧ್ರುವಂತ್ ತಾಯಿ ಎಂದೇ ಕರೆಯುತ್ತಿದ್ದರು. ಮಲ್ಲಮ್ಮ ಎಲಿಮಿನೇಟ್ ಆಗಿ ನಂತರ ಅತಿಥಿಯಾಗಿ ಒಳಬಂದಾಗ ಧ್ರುವಂತ್​​ಗೆ ಮೊದಲಿನ ಆಪ್ತತತೆ ಕಾಣಿಸಲೇ ಇಲ್ಲ. ಬಿಗ್ ಬಾಸ್​​ ಪೂರ್ಣಗೊಂಡು ಇಷ್ಟ ದಿನ ಆದರೂ ಮಲ್ಲಮ್ಮ ಅವರನ್ನು ಧ್ರುವಂತ್ ಸಂಪರ್ಕಿಸಿಲ್ಲವಂತೆ. ಈ ಬಗ್ಗೆ ಅವರು ಬೇಸರ ಹೊರಹಾಕಿದ್ದಾರೆ.  ಆ ವಿಡಿಯೋ ಮೇಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟಿ20 ವಿಶ್ವಕಪ್​ಗೆ ಟೀಮ್ ಇಂಡಿಯಾದ ಓರ್ವ ಆಟಗಾರ ಡೌಟ್: ಇಬ್ಬರ ನಡುವೆ ಪೈಪೋಟಿ – Kannada News | Team India’s Washington Sundar Could Miss T20 World Cup 2026

ಟಿ20 ವಿಶ್ವಕಪ್​ಗೆ ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್ (ಅನುಮಾನ).

Source link

ಕೆಫೆಯಲ್ಲಿ ಹೆಚ್ಚು ಸಮಯ ಕಳೆಯುವಂತಿಲ್ಲ: ಪ್ರತಿ ಹೆಚ್ಚುವರಿ ಗಂಟೆಗೆ 1,000 ರೂ. ದಂಡ – Kannada News | Viral Bangalore Cafe Rule: 1000 Fee for Laptop Use and Long Meetings Sparks Debate

ಬೆಂಗಳೂರು, ಜ.27: ಬೆಂಗಳೂರಿನ ಪ್ರಸಿದ್ಧ ಕೆಫೆಯೊಂದರಲ್ಲಿ ಹೆಚ್ಚು ಕಾಲ ಕಳೆಯುವವರಿಗೆ ಶಾಕ್ ನೀಡಿದೆ. ಇದೀಗ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗಿದೆ. ತನ್ನ ಕೆಫೆಯ ಮುಂದೆ ಅಂಟಿಸಿರುವ ನೋಟಿಸ್​​ ನೋಡಿ ಎಲ್ಲರಿಗೂ ಅಚ್ಚರಿಯನ್ನು ತಂದಿದೆ. ಬೆಂಗಳೂರಿನ ಪ್ರಸಿದ್ಧ ಈಟರಿಯೊಂದು (Eatery/Cafe) ತನ್ನ ಆವರಣದಲ್ಲಿ “ದೀರ್ಘಾವಧಿಯ ಸಭೆಗಳನ್ನು” (Long Meetings) ನಿಷೇಧಿಸಿ ಅಧಿಕೃತ ನೋಟಿಸ್ ಅಂಟಿಸಿದೆ. ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚು ಕಾಲ ಸಭೆ ಅಥವಾ ಲ್ಯಾಪ್‌ಟಾಪ್ ಕೆಲಸವನ್ನು ಮುಂದುವರಿಸಿದರೆ, ಪ್ರತಿ ಹೆಚ್ಚುವರಿ ಗಂಟೆಗೆ ₹1,000 ದಂಡ ಅಥವಾ ‘ಸೇವಾ ಶುಲ್ಕ’ ಪಾವತಿಸಬೇಕಾಗುತ್ತದೆ ಎಂದು ನೋಟಿಸ್​ ಹಾಕಿದೆ. ಸಣ್ಣ ಕೆಫೆಗಳಲ್ಲಿ ಜನರು ಕೇವಲ ಒಂದು ಕಪ್ ಕಾಫಿ ಆರ್ಡರ್ ಮಾಡಿ ಗಂಟೆಗಟ್ಟಲೆ ಲ್ಯಾಪ್‌ಟಾಪ್ ಹಿಡಿದು ಕುಳಿತುಕೊಳ್ಳುವುದರಿಂದ, ಹೊಸದಾಗಿ ಬರುವ ಗ್ರಾಹಕರಿಗೆ ಸೀಟು ಸಿಗುತ್ತಿಲ್ಲ. ಇದರಿಂದ ವ್ಯಾಪಾರಕ್ಕೆ ನಷ್ಟವಾಗುತ್ತಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ.

ಕೆಫೆಗಳು ವ್ಯಾಪಾರ ಮಾಡಲು ಇರುವ ಜಾಗವೇ ಹೊರತು ಉಚಿತ ಕೋ-ವರ್ಕಿಂಗ್ ಸ್ಪೇಸ್ (Co-working space) ಅಲ್ಲ. ಮಾಲೀಕರ ನಿರ್ಧಾರ ಸರಿ ಇದೆ ಅನೇಕರ ಕಮೆಂಟ್​ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮನೆಗಳು ಚಿಕ್ಕದಾಗಿರುತ್ತವೆ ಮತ್ತು ಆಫೀಸ್ ದೂರವಿರುತ್ತದೆ, ಹೀಗಾಗಿ ಕೆಫೆಗಳೇ ನಮಗೆ ಆಸರೆ. ಇಷ್ಟು ದುಬಾರಿ ಶುಲ್ಕ ವಿಧಿಸುವುದು ಸರಿಯಲ್ಲ ಇನ್ನು ಕೆಲವರು ಕಮೆಂಟ್​​ ಮಾಡಿದ್ದಾರೆ. ಬೆಂಗಳೂರನ್ನು ‘ಸ್ಟಾರ್ಟ್‌ಅಪ್ ಕ್ಯಾಪಿಟಲ್’ ಎಂದು ಕರೆಯಲಾಗುತ್ತದೆ. ಇಲ್ಲಿನ ಅನೇಕ ಐಡಿಯಾಗಳು ಕೆಫೆಗಳಲ್ಲಿ ಹುಟ್ಟಿಕೊಂಡಿವೆ. ಆದರೆ, ಇತ್ತೀಚೆಗೆ ಹೆಚ್ಚುತ್ತಿರುವ ಬಾಡಿಗೆ ಮತ್ತು ನಿರ್ವಹಣಾ ವೆಚ್ಚದಿಂದಾಗಿ ಮಾಲೀಕರು ಅನಿವಾರ್ಯವಾಗಿ ಇಂತಹ ಕಠಿಣ ಕ್ರಮಗಳಿಗೆ ಮುಂದಾಗುತ್ತಿದ್ದಾರೆ.

ಇದನ್ನೂ ಓದಿ: ನಗರದ 9 ಮೆಟ್ರೋ ನಿಲ್ದಾಣಗಳಲ್ಲಿ ಉಚಿತ ಸೈಕಲ್ ಪಾರ್ಕಿಂಗ್ ಸೌಲಭ್ಯ!

ವೈರಲ್​​ ಪೋಸ್ಟ್​​  ಇಲ್ಲಿದೆ ನೋಡಿ

ಪೋಸ್ಟ್​​ನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಆನ್‌ಲೈನ್‌ನಲ್ಲಿ ಸಾವಿರಾರು ಜನರನ್ನು ಆಕರ್ಷಿಸಿತು. ಈ ಪೋಸ್ಟ್ ಅಲ್ಪಾವಧಿಯಲ್ಲಿಯೇ 30,000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ವ್ಯಾಪಕ ಪ್ರತಿಕ್ರಿಯೆಗಳನ್ನು ಗಳಿಸಿದೆ.ಒಂದು ಹೋಟೆಲ್ ಅಥವಾ ಕೆಫೆ ‘ಖಾಸಗಿ ಆಸ್ತಿ’ಯಾಗಿರುತ್ತದೆ. ಅಲ್ಲಿಗೆ ಪ್ರವೇಶ ನೀಡುವ ಅಥವಾ ಅಲ್ಲಿನ ನಿಯಮಗಳನ್ನು ರೂಪಿಸುವ ಹಕ್ಕು ಮಾಲೀಕರಿಗೆ ಇರುತ್ತದೆ. ಹಾಗಾಗಿ ಅವರು ಹೇಳಿದಂತೆ ಕೇಳಬೇಕಾಗುತ್ತದೆ. ಮಾಲೀಕರು ತಮ್ಮ ಆವರಣದಲ್ಲಿ ಗ್ರಾಹಕರು ಎಷ್ಟು ಸಮಯ ಇರಬೇಕು ಎಂಬ ನಿಯಮವನ್ನು ರೂಪಿಸಬಹುದು. ಎಂಬು ಕಾನೂನು ಕೂಡ ಇದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link