Category Archives: Blog

Your blog category

ವೋಟ್ ಹಾಕಿದ ಪೊಲೀಸರಿಗೂ ಧನ್ಯವಾದ ಹೇಳಿದೆ ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ – Kannada News | Bigg Boss Kannada Season 12 Winner Gilli Nata thanks police personnel for support

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಟ್ರೋಫಿ ಗೆದ್ದ ಗಿಲ್ಲಿ ನಟ ಅವರು ಅನೇಕ ಕಾರ್ಯಕ್ರಮಗಳಿಗೆ ಅತಿಥಿಯಾಗಿ ತೆರಳುತ್ತಿದ್ದಾರೆ. ಅವರನ್ನು ಇಷ್ಟಪಡುವ ದೊಡ್ಡ ಅಭಿಮಾನಿ ಬಳಗ ಇದೆ. ಕನಕಪುರದಲ್ಲಿ ನಡೆದ ಕನಕೋತ್ಸವ ಕಾರ್ಯಕ್ರಮದಲ್ಲಿ ಗಿಲ್ಲಿ ನಟ ಭಾಗಿ ಆಗಿದ್ದಾರೆ. ಈ ವೇಳೆ ಅವರು ಭಾವುಕವಾಗಿ ಮಾತನಾಡಿದರು. ತಮಗೆ ಬೆಂಬಲ ನೀಡಿದ ಪೊಲೀಸರಿಗೂ ಅವರು ಧನ್ಯವಾದ ತಿಳಿಸಿದರು. ‘ಇಷ್ಟೊಂದು ಪ್ರೀತಿ ಸಂಪಾದನೆ ಮಾಡುತ್ತೇನೆ ಅಂತ ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಸತ್ಯವಾಗಲೂ ಅಂದುಕೊಂಡಿರಲಿಲ್ಲ. ನನ್ನ ಹೆಣ ಬೀಳುವವರೆಗೂ ನಿಮ್ಮ ಋಣ ಮರೆಯಲ್ಲ. ಪೊಲೀಸರ ಕೆಲಸ ಎಷ್ಟು ಕಷ್ಟ ಅಂತ ನನಗೆ ಗೊತ್ತು. 24 ಗಂಟೆ ಅವರು ಕೆಲಸ ಮಾಡುತ್ತಾರೆ. ಅಂಥವರು ನನ್ನ ಶೋ ನೋಡಿ, ಮನೆಯವರಿಂದ ವೋಟ್ ಹಾಕಿಸಿದ್ದಾರೆ. ಆ ವಿಷಯ ಕೇಳಿ ಸಿಕ್ಕಾಪಟ್ಟೆ ಖುಷಿ ಆಗಿದೆ’ ಎಂದು ಗಿಲ್ಲಿ ನಟ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ವಿವಾಹಿತರ ಅನೈತಿಕ ಸಂಬಂಧ ಸಾವಿನಲ್ಲಿ ಅಂತ್ಯ: ಮಹಿಳೆ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ – Kannada News | Illicit Affair Tragedy: Man Murders Woman, Then Commits Suicide in Chikkaballapur

ಚಿಕ್ಕಬಳ್ಳಾಪುರ, ಜನವರಿ 26: ವಿವಾಹವಾಗಿ ತಲಾ ಇಬ್ಬರು ಮಕ್ಕಳಿದ್ದರೂ ಅಕ್ರಮ ಸಂಬಂಧ ಹೊಂದಿದ್ದ ಜೋಡಿಯೊಂದು ದುರಂತ ಅಂತ್ಯ ಕಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ. ಸಲ್ಮಾಳನ್ನು ಚಾಕುವಿನಿಂದ ಇರಿದು ಕೊಂದು ಆಕೆಯ ಪ್ರಿಯತಮ ಬಾಬಾಜಾನ್ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಬಾಬಾಜಾನ್ ಯಾಕಾಗಿ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾನೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲವಾದರೂ, ಇವರಿಬ್ಬರ ಅನೈತಿಕ ಸಂಬಂಧ ವಿಚಾರದಲ್ಲಿ ಎರಡು ಕುಟುಂಬಗಳ ಮಧ್ಯೆ ಈ ಹಿಂದೆ ಗಲಾಟೆ ಆಗಿತ್ತು ಎನ್ನಲಾಗಿದೆ.

ಸಲ್ಮಾ ಚಿಕ್ಕಬಳ್ಳಾಪುರ ಜಿಲ್ಲೆ ಚೇಳೂರು ತಾಲೂಕಿನ ಗರಿಗಿರೆಡ್ಡಿಪಾಳ್ಯಾ ನಿವಾಸಿಯಾಗಿದ್ದು, ಈಕೆಯ ಗಂಡ ಕೂಲಿ ಕೆಲಸ ಮಾಡಿಕೊಂಡಿದ್ದ. ಈಕೆಯೂ ಅದೇ ಕೆಲಸ ಮಾಡುತ್ತಿದ್ದಳು. ದಂಪತಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಮತ್ತೊಂದೆಡೆ ಮೂಲತಃ ಆಂಧ್ರದ ನಿವಾಸಿಯಾಗಿರುವ ಬಾಬಾಜಾನ್ ಕುಟುಂಬ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ನಗರದಲ್ಲಿ ವಾಸವಿತ್ತು. ಈತ ಚೆಳೂರು ಪಟ್ಟಣದಲ್ಲಿ ರೂಮ್​​ ಮಾಡಿಕೊಂಡು ವಾಸವಿದ್ದ. ಇಬ್ಬರಿಗೂ ಪ್ರತ್ಯೇಕ ವಿವಾಹವಾಗಿ ಮಕ್ಕಳು ಇದ್ದರೂ ಪ್ರೀತಿ ಪ್ರೇಮದ ಹೆಸರಲ್ಲಿ ಅನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಈ ನಡುವೆ ಅದೇನಾಗಿತ್ತೋ ಗೊತ್ತಿಲ್ಲ. ಸಲ್ಮಾ ಮನೆಗೆ ಬಂದಿದ್ದ ಬಾಬಾಜಾನ್ ಆಕೆಯ ತ್ತು ಕೊಯ್ದು ಕೊಲೆ ಮಾಡಿದ್ದಾನೆ.

ಇದನ್ನೂ ಓದಿ: ಮಾಜಿ ಪ್ರಿಯಕರನ ಪತ್ನಿಗೆ ಎಚ್‌ಐವಿ ಸೋಂಕಿತ ಇಂಜೆಕ್ಷನ್ ಚುಚ್ಚಿದ ಮಹಿಳೆ, ಕಾರಣ ಕೇಳಿದ್ರೆ ಶಾಕ್​​ ಆಗ್ತೀರಾ!

ಇನ್ನು ಸಲ್ಮಾ ಕೊಲೆ ಬಳಿಕ ಚೆಳೂರು ಪಟ್ಟಣದಲ್ಲಿ ಮಾಡಿಕೊಂಡಿದ್ದ ಬಾಡಿಗೆ ರೂಮ್​​ಗೆ ತೆರಳಿರುವ ಬಾಬಾಜಾನ್​​, ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಚೇಳೂರು ಠಾಣೆ ಪೊಲೀಸರು ಎರಡು ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಲ್ಮಾ ಹತ್ಯೆ ಪ್ರಕರಣದ ಜೊತೆಗೆ ಆತ್ಮಹತ್ಯೆ ಕೇಸ್​​ ದಾಖಲು ಮಾಡಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅನೈತಿಕ ಸಂಬಂಧದ ವಿಚಾರವಾಗಿ ಕುಟುಂಬಸ್ಥರ ಗಲಾಟೆ ಬಳಿಕವೂ ಇವರು ಬೇರೆ ಬೇರೆ ಆಗಿರಲಿಲ್ಲ ಎಂಬ ಮಾಹಿತಿ ತನಿಖೆ ವೇಳೆ ಬಯಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಕೇಸ್; ಆರೋಪಿ ರಾಜೀವ್ ಗೌಡ ಕೊನೆಗೂ ಅರೆಸ್ಟ್! – Kannada News | Shidlaghatta Commissioner Threat Case: Congress Leader Rajeev Gowda Arrested In Kerala Border

ಶಿಡ್ಲಘಟ್ಟ ಪೌರಾಯುಕ್ತೆಗೆ ಬೆದರಿಕೆ ಕೇಸ್

ಬೆಂಗಳೂರು, ಜನವರಿ 23: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆ ಅಮೃತಾಗೌಡರಿಗೆ ನಿಂದನೆ ಹಾಗೂ ಧಮ್ಕಿ ನೀಡಿದ ಆರೋಪದ ಹಿನ್ನೆಲೆ ಕೊನೆಗೂ ಕಾಂಗ್ರೆಸ್ ಮುಖಂಡ ರಾಜೀವ್ ಗೌಡನನ್ನು (Rajeev Gowda Arrest) ಬಂಧಿಸಲಾಗಿದೆ. ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇಂದು (ಜನವರಿ 26) ಕೇರಳ ಗಡಿಯಲ್ಲಿ ಬಂಧಿಸುವಲ್ಲಿ  ಚಿಕ್ಕಬಳ್ಳಾಪುರ ಪೊಲೀಸರು ಯಶಸ್ವಿಯಾಗಿದ್ದಾರೆ. ಬ್ಯಾನರ್ ವಿಚಾರಕ್ಕೆ ಜನವರಿ 12ರಂದು ಪೌರಾಯುಕ್ತೆ ಅಮೃತಾಗೌಡಗೆ ಕರೆ ಮಾಡಿ ಧಮ್ಕಿ ಹಾಕಿದ್ದು, ಈ ಬಗ್ಗೆ ಜನವರಿ 14ರಂದು ದೂರು ದಾಖಲಾಗುತ್ತಿದ್ದಂತೆಯೇ ತಲೆಮರೆಸಿಕೊಂಡಿದ್ದ. ಇಂದು ಬೆಳಗ್ಗೆ ಅಷ್ಟೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿದ್ದಾನೆ ಎನ್ನುವ ಸುಳಿವು ಸಿಕ್ಕ ಬೆನ್ನಲ್ಲೇ ಪೊಲೀಸರು ಸಹ ಅಲರ್ಟ್​ ಆಗಿದ್ದರು. ಆದ್ರೆ, ಪೊಲೀಸರು ಬಂಧನಕ್ಕೆ ಬರುತ್ತಿರುವ ವಿಚಾರ ತಿಳಿಯುತ್ತಿದ್ದಂತೆಯೇ ರಾಜೀವ್ ಗೌಡ ಮಂಗಳೂರಿನಿಂದ ಎಸ್ಕೇಪ್ ಆಗಿದ್ದ.

FIR ರದ್ದತಿಗೆ ಹೈ ಕೋರ್ಟ್​ ಮೊರೆ ಹೋಗಿದ್ದ ಮುಖಂಡ

ಶಿಡ್ಲಘಟ್ಟ ಪೊಲೀಸ್ ಠಾಣೆಯಲ್ಲಿ ಪೌರಾಯುಕ್ತೆ ಅಮೃತಾಗೌಡ ನೀಡಿದ ದೂರಿನನ್ವಯ ಈ ಪ್ರಕರಣ ದಾಖಲಾಗಿತ್ತು. ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಪ್ರಕರಣ ವಿಚಾರವಾಗಿ ರಾಜೀವ್​​ ಗೌಡನನ್ನು ಪೊಲೀಸರು ಇನ್ನೂ ಬಂಧಿಸದ ಬಗ್ಗೆ ಸ್ವಪಕ್ಷ ಕಾಂಗ್ರೆಸ್​​ನಲ್ಲಿಯೇ ಆಕ್ರೋಶ ಭುಗಿಲೆದ್ದಿತ್ತು. ರಾಜೀವ್ ಗೌಡ FIR ರದ್ದತಿಗೆ ಹೈಕೋರ್ಟ್ ಮೊರೆ ಹೋದಾಗ ವಿಚಾರಣೆ ಮಾಡಿದ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ, ರಾಜೀವ್ ಗೌಡರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು.

ಇದನ್ನೂ ಓದಿ: ಶಿಡ್ಲಘಟ್ಟ ಮಹಿಳಾಧಿಕಾರಿಗೆ ಬೆದರಿಕೆ: ರಾಜೀವ್ ಗೌಡ ಜಾಮೀನು ಅರ್ಜಿ ವಜಾ

ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ರಾಜೀವ್ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಯಾವುದೇ ಷರತ್ತುಗಳಿಲ್ಲದೆ ವಜಾಗೊಳಿಸಿ, ವಿಚಾರಣೆಯನ್ನು ಜನವರಿ 24ಕ್ಕೆ ಮುಂದೂಡಿತ್ತು. ಹೈಕೋರ್ಟ್‌ನಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಕೂಡ ತಿರಸ್ಕೃತಗೊಂಡ ಹಿನ್ನೆಲೆಯಲ್ಲಿ, ಶತಾಯಗತಾಯ ರಾಜೀವ್ ಗೌಡನ ಬಂಧನಕ್ಕೆ ಪೊಲೀಸರು ಸಿದ್ಧತೆ ನಡೆಸಿ, ಕೊನೆಗೂ ಬಂಧಿಸಿದ್ದಾರೆ.

ನಡೆದಿದ್ದೇನು?

ಶಿಡ್ಲಘಟ್ಟ ನಗರದಲ್ಲಿ ಅಕ್ರಮವಾಗಿ ಅಳವಡಿಸಲಾಗಿದ್ದ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದಕ್ಕಾಗಿ ಪೌರಾಯುಕ್ತೆ ಅಮೃತಾ ಅವರಿಗೆ ದೂರವಾಣಿ ಕರೆ ಮಾಡಿದ್ದ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು. ಕಚೇರಿಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.  ಇದು ರಾಜ್ಯ ರಾಜಕಾರಣದಲ್ಲಿ ಬಾರೀ ಸಂಚಲನ ಮೂಡಿಸಿತ್ತು. ಇನ್ನು ಈ ಪ್ರಕರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಉಂಟು ಮಾಡಿತ್ತು. ಇದರ ಬೆನ್ನಲ್ಲೇ ರಾಜೀವ್​ ಗೌಡನನ್ನು  ಪಕ್ಷದಿಂದ ಅಮಾನತುಗೊಳಿಸಿ ಶಿಸ್ತು ಸಮಿತಿಗೆ ಆದೇಶ ಹೊರಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:08 pm, Mon, 26 January 26

Source link

ಬಜೆಟ್​ನಲ್ಲಿ ಜಿಎಸ್​ಟಿ ದರ ಇಳಿಕೆಗೆ ಕ್ರಮ: ಎಂಎಸ್​ಎಂಇಗಳಿಂದ ನಿರೀಕ್ಷೆ – Kannada News | Small business owners expecting GST rate cut on essential commodities in upcoming budget

ನವದೆಹಲಿ, ಜನವರಿ 26: ದಿನನಿತ್ಯ ಬಳಕೆಯ ಸರಕುಗಳ ಮೇಲೆ ಜಿಎಸ್​ಟಿ ದರಗಳನ್ನು ಮುಂಬರುವ ಬಜೆಟ್​ನಲ್ಲಿ (Union Budget) ಕಡಿಮೆ ಮಾಡಬೇಕು ಎಂದು ಸಣ್ಣ ಉದ್ದಿಮೆದಾರರು ನಿರೀಕ್ಷಿಸುತ್ತಿದ್ದಾರೆ. ಅಧಿಕ ತೆರಿಗೆಗಳು ಹಾಗೂ ಅಧಿಕ ಖರೀದಿ ವೆಚ್ಚದಿಂದಾಗಿ ತಮ್ಮ ಬ್ಯುಸಿನೆಸ್​ಗಳು ತುಸು ತೊಡಕು ಎದುರಿಸುತ್ತಿವೆ ಎಂಬುದು ಇವರ ಕೂಗು. ದಿನ ನಿತ್ಯದ ವಸ್ತುಗಳ ಮೇಲೆ ತೆರಿಗೆ ಹೆಚ್ಚು ಇರುವುದರಿಂದ ಬ್ಯುಸಿನೆಸ್ ನಡೆಸುವುದು ಕಷ್ಟವಾಗಿರುವುದು ಮಾತ್ರವಲ್ಲ, ಗ್ರಾಹಕರಿಗೂ ಹೊರೆಯಾಗುತ್ತಿದೆ ಎಂದು ಹೈದರಾಬಾದ್​ನಲ್ಲಿರುವ ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.

ಅವಶ್ಯಕ ಸರಕುಗಳ ಬೆಲೆ ಬಾರಿ ಬಾರಿ ಹೆಚ್ಚಳ ಆಗುತ್ತಿರುವುದರಿಂದ, ಆ ಸರಕುಗಳನ್ನು ಖರೀದಿಸಿ ಸಂಗ್ರಹಿಸುವುದು ಕಷ್ಟವಾಗಿದೆ. ಇದರಿಂದಾಗಿ ಲಾಭದ ಮಾರ್ಜಿನ್ ಕಡಿಮೆ ಆಗುತ್ತಿದೆ. ನಿತ್ಯದ ವಹಿವಾಟುಗಳೂ ಕಡಿಮೆಗೊಂಡಿವೆ ಎಂದು ವ್ಯಾಪಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಸಾಮಾನ್ಯ ಹೂಡಿಕೆದಾರರು ಈ ಬಾರಿಯ ಬಜೆಟ್​ನಲ್ಲಿ ಗಮನಿಸಬೇಕಾದ ಸಂಗತಿಗಳಿವು

ಹಾಲು, ಸಕ್ಕರೆ ಇತ್ಯಾದಿ ಮೂಲಭೂತವಾದ ಆಹಾರ ಮತ್ತು ಡೈರಿ ಉತ್ಪನ್ನಗಳು ಹಾಗೂ ಇತರ ನಿತ್ಯ ಬಳಕೆಯ ವಸ್ತುಗಳ ಮೇಲೆ ಜಿಎಸ್​ಟಿಯನ್ನು ತೆಗೆದುಹಾಕಬೇಕು ಇಲ್ಲವೇ ಕಡಿಮೆ ಮಾಡಬೇಕು. ಇದರಿಂದ ರೀಟೇಲ್ ವ್ಯಾಪಾರಿಗಳು ಮತ್ತು ಗ್ರಾಹಕರು ಇಬ್ಬರಿಗೂ ರಿಲೀಫ್ ಸಿಕ್ಕಂತಾಗುತ್ತದೆ ಎಂಬುದು ಇವರ ಅನಿಸಿಕೆ.

ಅಗತ್ಯ ವಸ್ತುಗಳ ಮೇಲಿನ ತೆರಿಗೆ ಪ್ರಮಾಣವು ತಳಮಟ್ಟದಲ್ಲಿ ಸಮಸ್ಯೆ ಸೃಷ್ಟಿಸುತ್ತಿದೆ. ಜನಸಾಮಾನ್ಯರ ಖರೀದಿ ಶಕ್ತಿಯನ್ನು ಕಡಿಮೆ ಮಾಡುತ್ತಿದೆ. ಒಟ್ಟಾರೆ ಮಾರುಕಟ್ಟೆ ಭಾವನೆಗೂ ಹಿನ್ನಡೆ ತರುತ್ತಿದೆ ಎನ್ನುವ ಅಭಿಪ್ರಾಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪಿಎಂ ಕಿಸಾನ್ ಹಣ ಎರಡು ಪಟ್ಟು ಹೆಚ್ಚಾಗುತ್ತಾ? ರೈತರ ನಿರೀಕ್ಷೆ ಈ ಬಜೆಟ್​ನಲ್ಲಿ ಈಡೇರುತ್ತಾ?

ಇತ್ತೀಚೆಗಷ್ಟೇ ಸರ್ಕಾರವು ಜಿಎಸ್​ಟಿ ಸಿಸ್ಟಂ ಅನ್ನು ಸರಳೀಕೃತಗೊಳಿಸಿತ್ತು. ನಾಲ್ಕು ವಿಧ ಇದ್ದ ಜಿಎಸ್​ಟಿ ದರಗಳನ್ನು ಎರಡಕ್ಕೆ ಇಳಿಸಲಾಯಿತು. ಶೇ. 5 ಮತ್ತು ಶೇ. 18ರ ದರಗಳು ಮಾತ್ರವೇ ಇದೆ. ಶೇ. 12 ಮತ್ತು ಶೇ. 28ರ ದರಗಳನ್ನು ಕೈಬಿಡಲಾಗಿದೆ. ಹೆಚ್ಚಿನ ಸರಕುಗಳ ಮೇಲಿನ ಟ್ಯಾಕ್ಸ್ ಕಡಿಮೆ ಆಗಿದೆ. ಅದೇ ವೇಳೆ ಜಿಎಸ್​ಟಿ ಇನ್ನಷ್ಟು ಇಳಿಯಬೇಕು ಎಂಬ ಆಗ್ರಹ ಮುಂದುವರಿದಿದೆ. ಇನ್ನೂ ಕೆಲವರು ಎಲ್ಲಾ ಸರಕುಗಳ ಮೇಲೆ ಸಮಾನವಾಗಿ ಕನಿಷ್ಠ ಜಿಎಸ್​ಟಿ ಮಾತ್ರ ಹಾಕಿ ಎಂದು ವಾದಿಸುತ್ತಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಬೇರೆಯವರ ಆಟವನ್ನು ಕಾಪಿ ಮಾಡಬೇಡಿ’; ಸಂಜುನ ಸ್ಯಾಮ್ಸನ್​ಗೆ ರಹಾನೆ ಸಲಹೆ

Source link

ಅಧಿವೇಶನ ಭಾಷಣ, ಗದ್ದಲ ಬಗ್ಗೆ ರಾಷ್ಟ್ರಪತಿಗೆ ರಾಜ್ಯಪಾಲ ವರದಿ: ಏನೆಲ್ಲಾ ಅಂಶಗಳಿವೆ? – Kannada News | Karnataka governor thawar chand gehlot report to president murmu about Clash During assembly Session

ಬೆಂಗಳೂರು, (ಜನವರಿ 26): ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ (Karnataka Assembly Session)  ಉದ್ದೇಶಿಸಿ ಭಾಷಣ ಮಾಡಿದ ಸಂದರ್ಭದಲ್ಲಿ ನಡೆದಿದ್ದ ಘಟನೆಗಳಿಗೆ ಸಂಬಂಧಿಸಿದಂತೆ ವಾಸ್ತವ ಅಂಶಗಳ ಪ್ರತ್ಯೇಕ ವರದಿಯೊಂದನ್ನು ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ (governor thawar chand gehlot) ಅವರು ರಾಷ್ಟ್ರತಪಿ ದ್ರೌಪದಿ ಮುರ್ಮು ಅವರಿಗೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಜಂಟಿ ಅಧಿವೇಶನದಲ್ಲಿ ಭಾಷಣ ಮುಗಿಸಿದ ನಂತರ ಆಡಳಿತ ಪಕ್ಷ ಕಾಂಗ್ರೆಸ್‌ ಸದಸ್ಯರು ತಮ್ಮ ವಿರುದ್ಧ ಘೋಷಣೆಗಳನ್ನು ಕೂಗುವ ಮೂಲಕ ತೋರಿದ ದುರ್ವರ್ತನೆ, ವಿಧಾನಸಭೆಯಿಂದ ತಮಗೆ ಘೇರಾವ್‌ ಹಾಕುವ ಪ್ರಯತ್ನ, ಇದರಿಂದ ತಮ್ಮ ಮೇಲೆ ಉಂಟಾದ ಒತ್ತಡಗಳ ಬಗ್ಗೆ ತಮ್ಮ ವರದಿಯಲ್ಲಿ ವಿವರವಾಗಿ ಉಲ್ಲೇಖಿಸಿದ್ದಾರೆ ಎಂದು ಲೋಕಭವನ ಮೂಲಗಳು ತಿಳಿಸಿವೆ.

ಸಾಮಾನ್ಯವಾಗಿ ಪ್ರತಿ ವಾರ, ತಿಂಗಳಿಗೊಮ್ಮೆ ಲೋಕಭವನದಿಂದ ರಾಷ್ಟ್ರಪತಿಗೆ ವರದಿ ಹೋಗುತ್ತದೆ. ರಾಜಕೀಯ, ಸಾಮಾಜಿಕ, ಅಭಿವೃದ್ಧಿ ಚಟುವಟಿಕೆಗಳ ಸೇರಿದಂತೆ ರಾಜ್ಯದ ಆಗುಹೋಗುಗಳ ಪ್ರಸಕ್ತ ವಿದ್ಯಮಾನ ಬೆಳವಣಿಗೆ ಬಗ್ಗೆ ವಾರ, ತಿಂಗಳಿಗೊಮ್ಮೆ ರಾಜ್ಯಪಾಲರು ರಾಷ್ಟ್ರಪತಿಗೆ ವರದಿ ನೀಡುತ್ತಾರೆ. ಆದ್ರೆ, ಈ ವರದಿ ಅಲ್ಲದೇ ಪ್ರತ್ಯೇಕವಾಗಿ ಅಧಿವೇಶನವನ್ನು ಉದ್ದೇಶಿಸಿ ತಾವು ಭಾಷಣ ಮಾಡುವ ಮೊದಲು ಹಾಗೂ ನಂತರ ನಡೆದ ಎಲ್ಲಾ ಬೆಳವಣಿಗೆ, ಘಟನೆಗಳ ಕುರಿತು ಸವಿವರವಾದ ವರದಿಯನ್ನು ರಾಷ್ಟ್ರಪತಿಯವರಿಗೆ ರವಾನಿಸಿದ್ದು, ಸಂಚಲನಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಸರ್ಕಾರ ಕೊಟ್ಟ ಭಾಷಣ ಓದದ ಗವರ್ನರ್​​: ಸದನದಲ್ಲೇ ಸಿಡಿದೆದ್ದ ಕಾಂಗ್ರೆಸ್​​ ನಾಯಕರು

ರಾಜ್ಯಪಾಲರು ಸಲ್ಲಿಸಿದ ವರದಿಯಲ್ಲೇನಿದೆ?

ಜಂಟಿ ಅಧಿವೇಶನ ಹಿಂದಿನ ದಿನ ಅಂದರೆ ಜನವರಿ 21 ಮತ್ತು ಮರುದಿನ (ಜನವರಿ 22) ನಡೆದ ವಿದ್ಯಮಾನಗಳನ್ನು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ರಾಜ್ಯ ಸರ್ಕಾರ ಕಳುಹಿಸಿದ್ದ ಭಾಷಣವನ್ನು ಯಥಾವತ್ತಾಗಿ ಓದಲು ರಾಜ್ಯಪಾಲರು ನಿರಾಕರಿಸಿದ್ದರು. ವಿಬಿ ಜಿ ರಾಮ್ ಜಿ ಕಾಯ್ದೆಯೂ ಸೇರಿದಂತೆ ಕೇಂದ್ರ ಸರ್ಕಾರವನ್ನು ಟೀಕಿಸಲಾಗಿತ್ತು. ಈ ಭಾಗವನ್ನು ಪರಿಷ್ಕರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಗಿತ್ತು. ಬಳಿಕ ವಿಧಾನಸಭೆ ಸ್ಪೀಕರ್ ಯುಟಿ ಖಾದರ್ ಹಾಗೂ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್​​ಕೆ ಪಾಟೀಲ್, ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ಜತೆ ನಡೆಸಿದ ಮಾತುಕತೆ ಬಗ್ಗೆಯೂ ಥಾವರ್ ಚೆಂದ್ ಗೆಹ್ಲೋಟ್ ವರದಿಯಲ್ಲಿ ತಿಳಿಸಿದ್ದಾರೆ. ಜಂಟಿ ಅಧಿವೇಶವನ್ನು ಉದ್ದೇಶಿಸಿ ಭಾಷಣ ಮಾಡಬೇಕಾದ ಸಂವಿಧಾನಬದ್ಧ ಕರ್ತವ್ಯ ನಿಭಾಯಿಸಿದ್ದೇನೆ ಎಂದೂ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಭಾಷಣ ಮುಗಿಸಿ ವಿಧಾನಸಭೆಯಿಂದ ಹೊರ ಹೋಗುವ ಸಂದರ್ಭದಲ್ಲಿ ರಾಜ್ಯಪಾಲರ ವಿರುದ್ಧ ಘೋಷಣೆ ಕೂಗಿ ಒತ್ತಡ ಹೇಲು ಪ್ರಯತ್ನಸಿದ ಕಾಂಗ್ರೆಸ್ ಸದಸ್ಯರ ವರ್ತನೆ ಬಗ್ಗೆಯೂ ವರದಿಯಲ್ಲಿ ಉಲ್ಲೇಖವಿದೆ. ಘಟನೆ ನಂತರ ಸದನದಲ್ಲಿ ಆಡಳಿತ ಪಕ್ಷದ ಸದಸ್ಯರು ಹಾಗೂ ವಿಪಕ್ಷ ಸದಸ್ಯರ ಜಟಾಪಟಿ, ಅಭಿಪ್ರಾತಗಳನ್ನೂ ಸಹ ವರದಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಒಟ್ಟಿನಲ್ಲಿ ಏನೇನು ನಡೆಯಿತು. ತಾವು ಏನೆಲ್ಲಾ ಮುಜುಗರ ಅನುಭವಿಸಿದರು ಎನ್ನುವ ಎಲ್ಲಾ ಅಂಶಗಳನ್ನು ಸಹ ಸವಿವರಾಗಿ ವರದಿ ಮೂಲಕ ರಾಷ್ಟ್ರಪತಿಗೆ ಮುಟ್ಟಿಸಿದ್ದು, ಈ ವರದಿ ಆಧಾರದ ಮೇಲೆ ರಾಷ್ಟ್ರಪತಿ ಏನಾದರೂ ಕ್ರಮ ಕೈಗೊಳ್ಳುತ್ತಾರಾ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 5:37 pm, Mon, 26 January 26

Source link

ಕ್ರಿಕೆಟ್​​ ವಿಚಾರಕ್ಕೆ ಶುರುವಾದ ಗಲಾಟೆ ಸಾವಲ್ಲಿ ಅಂತ್ಯ: ನಡೆದಿದ್ದು ಅಪಘಾತವೋ? ಕೊಲೆಯೋ? – Kannada News | Anekal Youth Dies After Cricket Dispute Car Crash, Mother Alleges Murder

ಆನೇಕಲ್​​, ಜನವರಿ 26: ಕ್ರಿಕೆಟ್​​ ವಿಚಾರಕ್ಕೆ ಶುರುವಾದ ಗಲಾಟೆ ಯುವಕನೋರ್ವನ ಸಾವಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಕಮ್ಮಸಂದ್ರದಲ್ಲಿ ನಡೆದಿದೆ. ಹೆಬ್ಬಗೋಡಿ ನಿವಾಸಿ ಪ್ರಶಾಂತ್(28) ಮೃತ ದುರ್ದೈವಿಯಾಗಿದ್ದಾನೆ. ಮದ್ಯದ ನಶೆಯಲ್ಲಿ ಇಬ್ಬರು ಯುವಕರ ನಡುವೆ ಕಿರಿಕ್​​ ಆಗಿದೆ ಎನ್ನಲಾಗಿದ್ದು, ಪ್ರಶಾಂತ್​​ ಮತ್ತು ರೋಷನ್​​ ಹೆಗ್ಡೆ ಎಂಬವರು ಪರಸ್ಪರ ಕಿತ್ತಾಡಿಕೊಂಡಿದ್ದಾರೆ. ಈ ವೇಳೆ ರೋಷನ್​​ ಕಾರು ಹತ್ತಿ ಹೊರಟರೂ ಪ್ರಶಾಂತ್​​ ಆತನ ಕಾರಿನ ಫೂಟ್​​ ಬೋರ್ಡ್​​ ಮೇಲೆ ಹತ್ತಿ ಕಿರಿಕ್​​ ಮುಂದುವರಿಸಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಇದರಿಂದ ರೊಚ್ಚಿಗೆದ್ದ ರೋಷನ್​ ಅಡ್ಡಾದಿಟ್ಟಿ ಕಾರು ಚಾಲನೆ ಮಾಡಿದ್ದು, ನಿಯಂತ್ರಣ ತಪ್ಪಿದ ಕಾರು ಗೋಡೆಗೆ ಉಜ್ಜಿ ಬಳಿಕ ಮರಕ್ಕೆ ಡಿಕ್ಕಿಯಾಗಿದೆ. ಈ ವೇಳೆ ಪ್ರಶಾಂತ್​​​​ ಮೃತಪಟ್ಟಿದ್ದರೆ, ರೋಷನ್​​ಗೆ ಗಾಯಗಳಾಗಿವೆ.

ಇನ್ನು ಅಪಘಾತದ ವೇಳೆ ಗಂಭೀರ ಗಾಯಗೊಂಡಿದ್ದ ಪ್ರಶಾಂತ್​​ ಸ್ಥಳದಲ್ಲೇ ಮೃತಪಟ್ಟಿದ್ದರೆ, ರೋಷನ್​​ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅಪಘಾತದ ಕೊನೆಯ ಕ್ಷಣಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕಾರು ನಿಲ್ಲಿಸುವಂತೆ ಪ್ರಶಾಂತ್​​ ಹೇಳಿದ್ದರೂ ರೋಷನ್​​ ವೇಗವಾಗಿ ಕಾರು ಚಾಲನೆ ಮಾಡಿದ್ದಾನೆ. ಅಪಘಾತ ನಡೆಯುವ ವೇಳೆ ಪ್ರಶಾಂತ್​​ ಕಾರಿನ ಎಡಭಾಗದ ಕಿಡಕಿ ಹಿಡಿದು ನೇತಾಡುತ್ತಿದ್ದ. ಹೀಗಾಗಿ ಮರ ಮತ್ತು ಕಾಂಪೌಂಡ್​ ಗೋಡೆಯ ನಡುವೆ ಸಿಲುಕಿದ್ದ ಪ್ರಶಾಂತ್​​ ತಲೆಗೆ ಗಂಭೀರ ಗಾಯವಾಗಿತ್ತು ಎನ್ನಲಾಗಿದೆ. ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಪತಿಯ ಹಣದಾಹಕ್ಕೆ ಪತ್ನಿ ಕಳೆದುಕೊಂಡಳಾ ಜೀವ? ಯುವತಿ ಕುಟುಂಬಸ್ಥರಿಂದ ಗಂಭೀರ ಆರೋಪ

ಮಗ ಪ್ರಶಾಂತ್​​ ಸಾವಿನಿಂದಾಗಿ ತಾಯಿ ಕಂಗಾಲಾಗಿದ್ದು, ಇದು ಅಪಘಾತದ ಅಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ಕ್ರಿಕೆಟ್ ಬಗ್ಗೆ ಮಗ ಪ್ರಶಾಂತ್ ಹುಚ್ಚು ಪ್ರೀತಿ ಹೊಂದಿದ್ದ. ಕಮ್ಮಸಂದ್ರದಲ್ಲಿ ನಡೆದ ಕ್ರಿಕೆಟ್ ಟೂರ್ನಮೆಂಟ್​​ನಲ್ಲಿ ಪ್ರಶಾಂತ್ ಆಟವಾಡಿದ್ದ ಕ್ರಿಕೆಟ್ ತಂಡ ಸೋತಿತ್ತು. ಈ ವೇಳೆ ಅಲ್ಲಿದ್ದ ರೋಷನ್ ಮತ್ತು ಪ್ರಶಾಂತ್ ನಡುವೆ ಕಿರಿಕ್ ಆಗಿತ್ತು. ಆದಾದ ಬಳಿಕ ಮನೆಗೆ ಬಂದಿದ್ದ ಪ್ರಶಾಂತ್, ಕ್ರಿಕೆಟ್ ಟೂರ್ನಮೆಂಟ್ ಸೋತಿರೋದಾಗಿ ಬೇಸರದಿಂದ ಹೇಳಿಕೊಂಡಿದ್ದ. ನಿನ್ನೆ ಕಮ್ಮಸಂದ್ರದ ಮೈದಾನಕ್ಕೆ ಹೋಗಿದ್ದ ವೇಳೆ ಮತ್ತೆ ಪ್ರಶಾಂತ್ ಮತ್ತು ರೋಷನ್ ನಡುವೆ ಗಲಾಟೆ ಆಗಿದೆ. ಗಲಾಟೆ ಬಳಿಕ ಕಾರಿನಲ್ಲಿ ತಪ್ಪಿಸಿಕೊಂಡು ಹೋಗಲು ರೋಷನ್ ಯತ್ನಿಸಿದ್ದು, ಕಾರು ನಿಲ್ಲಿಸಿದ್ದರೆ ಪ್ರಶಾಂತ್ ಬದುಕುಳಿಯುತ್ತಿದ್ದ. ಹೀಗಾಗಿ ಕೊಲ್ಲುವ ಉದ್ದೇಶದಿಂದಲೇ ಅಪಘಾತ ಮಾಡಿದ್ದಾರೆ ಎಂದು ಕುಟುಂಬಸ್ಥರು ದೂರಿದ್ದಿದಾರೆ. ಮೃತ ಪ್ರಶಾಂತ್ ತಾಯಿ ನೀಡಿರುವ ದೂರಿನ ಅನ್ವಯ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಭಾರತ-ಅಮೆರಿಕದ್ದು ಐತಿಹಾಸಿಕ ಬಂಧ; 77ನೇ ಗಣರಾಜ್ಯೋತ್ಸವಕ್ಕೆ ಶುಭಾಶಯ ಕೋರಿದ ಟ್ರಂಪ್ – Kannada News | Donald Trump extends greetings on 77th Republic day says US and India Share Historic Bond

ನವದೆಹಲಿ, ಜನವರಿ 26: ಭಾರತದ 77ನೇ ಗಣರಾಜ್ಯೋತ್ಸವಕ್ಕೆ (Republic Day) ಇಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಶುಭಾಶಯಗಳನ್ನು ತಿಳಿಸಿದ್ದಾರೆ. ಭಾರತದಾದ್ಯಂತ ಗಣರಾಜ್ಯೋತ್ಸವದ ಆಚರಣೆಗಳು ನಡೆಯುತ್ತಿದ್ದಂತೆ ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿ ಈ ಸಂದೇಶವನ್ನು ಹಂಚಿಕೊಂಡಿದೆ. ಎರಡೂ ದೇಶಗಳ ನಡುವಿನ ಸಾಮಾನ್ಯ ನೆಲೆಯನ್ನು ಎತ್ತಿ ತೋರಿಸುತ್ತಾ, ಭಾರತ ಮತ್ತು ಅಮೆರಿಕ ತಮ್ಮ ಪ್ರಜಾಪ್ರಭುತ್ವ ಸಂಪ್ರದಾಯಗಳಿಂದ ಒಂದಾಗಿವೆ ಮತ್ತು ಹಲವು ದಶಕಗಳಿಂದ ಬಂಧವನ್ನು ಹೊಂದಿವೆ ಎಂದು ಟ್ರಂಪ್ ಒತ್ತಿ ಹೇಳಿದ್ದಾರೆ.

“ಯುನೈಟೆಡ್ ಸ್ಟೇಟ್ಸ್ ಜನರ ಪರವಾಗಿ ಭಾರತದ 77ನೇ ಗಣರಾಜ್ಯೋತ್ಸವಕ್ಕೆ ನಾನು ಭಾರತ ಸರ್ಕಾರ ಮತ್ತು ಜನರಿಗೆ ನನ್ನ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ವಿಶ್ವದ ಅತ್ಯಂತ ಹಳೆಯ ಮತ್ತು ದೊಡ್ಡ ಪ್ರಜಾಪ್ರಭುತ್ವಗಳಾಗಿ ಅಮೆರಿಕ ಮತ್ತು ಭಾರತ ಐತಿಹಾಸಿಕ ಬಂಧವನ್ನು ಹಂಚಿಕೊಂಡಿವೆ” ಎಂದು ಟ್ರಂಪ್ ಹೇಳಿದ್ದಾರೆ.

ಇದನ್ನೂ ಓದಿ: ನಮ್ಮ ಸೈನಿಕರ ದೊಡ್ಡ ಪಡೆ ಸಾಗುತ್ತಿದೆ, ಇರಾನ್​ಗೆ ಹೊಸ ಎಚ್ಚರಿಕೆ ಕೊಟ್ಟ ಡೊನಾಲ್ಡ್​ ಟ್ರಂಪ್

ಭಾರತದ ಯುಎಸ್ ರಾಯಭಾರಿ ಸೆರ್ಗಿಯೊ ಗೋರ್ ಅವರು ಕರ್ತವ್ಯ ಮಾರ್ಗದಲ್ಲಿ ನಡೆದ ಗಣರಾಜ್ಯೋತ್ಸವ ಆಚರಣೆಯಲ್ಲಿ ಭಾಗವಹಿಸಿದರು. ಈ ಅನುಭವವನ್ನು ದ್ವಿಪಕ್ಷೀಯ ಸಂಬಂಧಗಳ ಸಂಕೇತವೆಂದು ಬಣ್ಣಿಸಿದರು. ಭಾರತದ ಗಣರಾಜ್ಯೋತ್ಸವದ ಶುಭಾಶಯಗಳು! ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮನೋಭಾವದ ಆಚರಣೆಯಾದ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಮೊದಲ ಬಾರಿಗೆ ಭಾಗವಹಿಸುವ ಗೌರವ ಇಂದು ದಕ್ಕಿತು ಎಂದು ಗೋರ್ ಹೇಳಿದ್ದಾರೆ.

ಇದನ್ನೂ ಓದಿ: ತಾನೊಬ್ಬ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

“ಭಾರತದ ಆಕಾಶದಲ್ಲಿ ಅಮೆರಿಕ ನಿರ್ಮಿತ ವಿಮಾನ ಹಾರಾಡುವುದನ್ನು ನೋಡಿ ರೋಮಾಂಚನವಾಯಿತು. ಇದು ಅಮೆರಿಕ-ಭಾರತ ಕಾರ್ಯತಂತ್ರದ ಪಾಲುದಾರಿಕೆಯ ಬಲದ ಪ್ರಬಲ ಸಂಕೇತವಾಗಿದೆ” ಎಂದು ಅವರು ಹೇಳಿದ್ದಾರೆ. ಗಣರಾಜ್ಯೋತ್ಸವದ ಪರೇಡ್ ಸಮಯದಲ್ಲಿ ವೈಮಾನಿಕ ಪ್ರದರ್ಶನದಲ್ಲಿ ಅಮೆರಿಕ ಮೂಲದ ಸಾರಿಗೆ ವಿಮಾನ C-130J ಮತ್ತು ಅಪಾಚೆ ಹೆಲಿಕಾಪ್ಟರ್‌ಗಳು ಕಾಣಿಸಿಕೊಂಡವು.

ಟ್ರಂಪ್ ಸರ್ಕಾರವು ಭಾರತದ ಸರಕುಗಳ ಮೇಲೆ ಶೇ. 50ರಷ್ಟು ಸುಂಕವನ್ನು ವಿಧಿಸಿದ ನಂತರ ಎರಡೂ ದೇಶಗಳ ಸಂಬಂಧಗಳಲ್ಲಿ ಬಿರುಕು ಉಂಟಾಗಿತ್ತು. ಅದರ ಬೆನ್ನಲ್ಲೇ ಅಮೆರಿಕದಿಂದ ಭಾರತಕ್ಕೆ ಶುಭಾಶಯದ ಸಂದೇಶ ಬಂದಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರಿನಲ್ಲಿ ಹುಡುಗಿಯರನ್ನ ಡೇಟಿಂಗ್​​ಗೆ​​​​​ ಕರೆದುಕೊಂಡು ಹೋಗುವ ಮುನ್ನ ಎಚ್ಚರ, ಮೂರು ಪಂಗನಾಮ ಹಾಕಿಯೇ ಕಳಿಸೋದು – Kannada News | Beware of Dating App Bill Scam: 50,000 Bills in Bengaluru and Mumbai Cafes.

ಬೆಂಗಳೂರು, ಜ.26: ಬೆಂಗಳೂರು ಮತ್ತು ಮುಂಬೈನಂತಹ ಮಹಾ ನಗರಗಳಲ್ಲಿ ಇತ್ತೀಚೆಗೆ ‘ರೆಸ್ಟೋರೆಂಟ್ ಡೇಟಿಂಗ್ ಸ್ಕ್ಯಾಮ್’ (Restaurant Dating Scam) ಎಂಬ ವಂಚನೆ ಜಾಲ ಭಾರಿ ಸದ್ದು ಮಾಡುತ್ತಿದೆ. ಒಂದು ಸಾಮಾನ್ಯ ಡೇಟ್‌ನಲ್ಲಿ ನೀವು ಕೇವಲ 2,000 ರೂ. ಖರ್ಚು ಮಾಡಬೇಕಾದ ಜಾಗದಲ್ಲಿ 20,000 ರೂ. ರಿಂದ 50,000 ರೂ. ವರೆಗೆ ಬಿಲ್ ಪಾವತಿಸಬೇಕಾದ ಪರಿಸ್ಥಿತಿ ಬರಬಹುದು. ಈ ವಂಚನೆ ಹೇಗೆ ನಡೆಯುತ್ತದೆ ಎಂಬುದರ ಬಗ್ಗೆ ತಿಳಿದುಕೊಂಡರೆ ಖಂಡಿತ ಅಚ್ಚರಿಪಡುವುದು ನಿಜ. ವಂಚಕರು (ಸಾಮಾನ್ಯವಾಗಿ ಯುವತಿಯರು) ಟಿಂಡರ್, ಬಂಬಲ್ ಅಥವಾ ಹಿಂಜ್ ನಂತಹ ಆಪ್‌ಗಳಲ್ಲಿ ಆಕರ್ಷಕ ಪ್ರೊಫೈಲ್ ಸೃಷ್ಟಿಸಿ ಪುರುಷರನ್ನು ಸಂಪರ್ಕಿಸುತ್ತಾರೆ. ಮಾತುಕತೆ ಶುರುವಾದ ಸ್ವಲ್ಪ ಸಮಯದಲ್ಲೇ ಅವರು ಭೇಟಿಯಾಗಲು ಒತ್ತಾಯಿಸುತ್ತಾರೆ. ವಿಶೇಷವೆಂದರೆ, ಅವರು ತಮಗೆ ಮೊದಲೇ ಪರಿಚಯವಿರುವ ಅಥವಾ ನಗರದ ಯಾವುದೋ ಒಂದು ಮೂಲೆಯಲ್ಲಿರುವ ನಿರ್ದಿಷ್ಟ ಕೆಫೆ ಅಥವಾ ಬಾರ್‌ಗೆ ಬರುವಂತೆ ನಿಮ್ಮನ್ನು ಒಪ್ಪಿಸುತ್ತಾರೆ.

ನೀವು ಅಲ್ಲಿಗೆ ಬಂದ ಕೂಡಲೇ, ಅವರು ಮೆನುವಿನಲ್ಲಿರುವ ಅತ್ಯಂತ ದುಬಾರಿ ವೈನ್, ಹುಕ್ಕಾ ಅಥವಾ ಆಹಾರ ಪದಾರ್ಥಗಳನ್ನು ಸಾರಾಸಗಟಾಗಿ ಆರ್ಡರ್ ಮಾಡುತ್ತಾರೆ. ಕೆಲವೊಮ್ಮೆ ಮೆನುವಿನಲ್ಲಿ ಬೆಲೆಗಳೇ ಇರುವುದಿಲ್ಲ. ಆಹಾರ ಸೇವಿಸಿದ ತಕ್ಷಣ ಅಥವಾ ಬಿಲ್ ಬರುವ ಮುನ್ನವೇ ಅವರಿಗೆ “ತುರ್ತು ಕರೆ ಬಂದಿದೆ” ಅಥವಾ “ಮನೆಯಲ್ಲಿ ಏನೋ ಸಮಸ್ಯೆಯಾಗಿದೆ” ಎಂದು ಹೇಳಿ ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ನಂತರ ನಿಮ್ಮ ಕೈ ಸೇರುವ ಬಿಲ್ ನೋಡಿ ನೀವು ಬೆಚ್ಚಿಬೀಳುತ್ತೀರಿ. ಸಾಮಾನ್ಯ ಕೆಫೆಯಲ್ಲಿ 20,000 ರೂ. ಬಿಲ್ ಬಂದಿರುತ್ತದೆ. ಒಂದು ವೇಳೆ ಇದನ್ನು ನೀವು ಇದನ್ನು ಪ್ರಶ್ನಿಸಿದರೆ, ರೆಸ್ಟೋರೆಂಟ್‌ನ ಬೌನ್ಸರ್‌ಗಳು ಅಥವಾ ಮ್ಯಾನೇಜರ್ ನಿಮ್ಮನ್ನು ಸುತ್ತುವರಿದು ಹಣ ಪಾವತಿಸುವಂತೆ ಬೆದರಿಕೆ ಹಾಕುತ್ತಾರೆ.

ಇದನ್ನೂ ಓದಿ: “ಮದರ್ ಆಫ್ ಆಲ್ ಟ್ರೇಡ್ ಡೀಲ್ಸ್”: ಈ ಒಪ್ಪಂದದಿಂದ ಅಗ್ಗವಾಗಲಿದೆ ಈ ವಸ್ತುಗಳ ಬೆಲೆ

ಎಂ.ಜಿ. ರಸ್ತೆ ಮತ್ತು ಕೋರಮಂಗಲದ ಕೆಲವು ಕೆಫೆಗಳಲ್ಲಿ ಇಂತಹ ಪ್ರಕರಣಗಳು ವರದಿಯಾಗಿವೆ. ಒಬ್ಬ ವ್ಯಕ್ತಿಗೆ ಕೇವಲ ಒಂದು ಗಂಟೆಯ ಡೇಟ್‌ನಲ್ಲಿ 40,000 ರೂ. ಬಿಲ್ ನೀಡಲಾಗಿತ್ತು. ಅಂಧೇರಿ ಮತ್ತು ಬಾಂದ್ರಾ ಭಾಗದ ಕೆಲವು ಸಣ್ಣ ಕ್ಲಬ್‌ಗಳಲ್ಲಿ ಈ ದಂಧೆ ಹೆಚ್ಚಾಗಿದೆ. ಇನ್ನು ಈ ದಂಧೆಗಾಗಿ ರೆಸ್ಟೋರೆಂಟ್ ಮಾಲೀಕರು ಮತ್ತು ವಂಚಕ ಯುವತಿಯರು ಮೊದಲೇ ಒಪ್ಪಂದ ಮಾಡಿಕೊಂಡಿರುತ್ತಾರೆ. ಚರ್ಚ್ ಸ್ಟ್ರೀಟ್, ಇಂದಿರಾನಗರ, ಕೋರಮಂಗಲ, ಎಂ.ಜಿ. ರೋಡ್​​ನಲ್ಲಿ ಇಂತಹ ದಂಧೆ ಹೆಚ್ಚಾಗಿದೆ. ಬೆಂಗಳೂರು ಪೊಲೀಸರು ಇತ್ತೀಚೆಗೆ ಇಂತಹ ಹತ್ತಾರು ಜಾಲಗಳನ್ನು ಪತ್ತೆಹಚ್ಚಿ ರೆಸ್ಟೋರೆಂಟ್ ಮ್ಯಾನೇಜರ್‌ಗಳನ್ನು ಬಂಧಿಸಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪದೇ ಪದೇ ಸಿಹಿತಿಂಡಿ ತಿನ್ನಬೇಕು ಅನಿಸುತ್ತಾ? ಹಾಗಿದ್ರೆ ಈ ವಿಷಯಗಳನ್ನು ನೀವು ತಿಳಿಯಲೇಬೇಕು! – Kannada News | Why We Crave Sweets: Science Behind Sugar Addiction

ಕೆಲವರಿಗೆ ಸಿಹಿತಿನಿಸುಗಳನ್ನು (Sweets) ಸೇವನೆ ಮಾಡುವುದು ಎಂದರೆ ತುಂಬಾ ಇಷ್ಟ. ಪ್ರತಿದಿನ ಊಟ, ತಿಂಡಿ ಮಾಡುವುದಕ್ಕಿಂತಲೂ ಮುಖ್ಯವಾಗಿ ಸಿಹಿಯಾದ ಆಹಾರಗಳ ಸೇವನೆ ಮಾಡಲು ಹಂಬಲಿಸುತ್ತಾರೆ. ಈ ರೀತಿ ಸಿಹಿ ತಿನ್ನುವ ಬಯಕೆ (Sugar Cravings) ಕ್ರಮೇಣ ದೈನಂದಿನ ಅವಶ್ಯಕತೆಯಂತೆ ಆಗಿಬಿಡುತ್ತದೆ. ಕೆಲವೊಮ್ಮೆ, ಊಟದ ನಂತರ ಅಥವಾ ತಿಂಡಿ ತಿನ್ನುವ ಮೊದಲು ಹೀಗೆ, ಸಮಯದ ಪರಿವಿಲ್ಲದೆ ಸ್ವೀಟ್ ತಿನ್ನಬೇಕು ಎಂದು ಅನಿಸುತ್ತದೆ. ಆರಂಭದಲ್ಲಿ, ಇದು ಸಾಮಾನ್ಯವೆಂದು ತೋರುತ್ತದೆಯಾದರೂ, ಪದೇ ಪದೇ ಈ ರೀತಿ ಆಸೆಯಾಗಲು ಪ್ರಾರಂಭಿಸಿದಾಗ, ಅದು ಕಳವಳಕಾರಿ ವಿಷಯವಾಗುತ್ತದೆ. ಹೌದು, ಸಿಹಿತಿಂಡಿಗಳನ್ನು ತಿನ್ನುವುದು ದೇಹಕ್ಕೆ ತಾತ್ಕಾಲಿಕವಾಗಿ ಮನಸ್ಸಿಗೆ ಶಾಂತಿ ಮತ್ತು ಶಕ್ತಿಯನ್ನು ನೀಡುತ್ತದೆ, ಅದಕ್ಕಾಗಿಯೇ ಕೆಲವರು ಹೆಚ್ಚು ದಣಿವಾದಾಗ ಅಥವಾ ಒತ್ತಡದಲ್ಲಿದ್ದಾಗ ಸಿಹಿಯನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಅತಿಯಾದ ಸೇವನೆ ದೇಹದ ಮೇಲೆ ಪರಿಣಾಮ ಬೀರುತ್ತದೆ ಎಂಬುದನ್ನು ಮರೆಯಬಾರದು. ಹಾಗಾದರೆ ಈ ರೀತಿಯ ಅಭ್ಯಾಸದಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ, ಈ ರೀತಿಯ ಬಯಕೆಯನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೆಚ್ಚೆಚ್ಚು ಸಿಹಿತಿಂಡಿ ತಿನ್ನಬೇಕೆಂಬ ಬಯಕೆಯಾಗುವುದಕ್ಕೆ ಕಾರಣವೇನು?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಡಾ. ಎಲ್.ಎಚ್. ​​ಘೋಟೇಕರ್ ಅವರು ಹೇಳುವ ಪ್ರಕಾರ, ಒಬ್ಬ ವ್ಯಕ್ತಿಗೆ ಪದೇ ಪದೇ ಸಿಹಿತಿಂಡಿ ತಿನ್ನಲು ಬಯಕೆಯಾಗುವುದು ಕೇವಲ ರುಚಿಗೆ ಮಾತ್ರವಲ್ಲ. ಹಲವರಿಗೆ, ಈ ಅಭ್ಯಾಸವು ಅವರ ದೈನಂದಿನ ದಿನಚರಿ ಮತ್ತು ಜೀವನಶೈಲಿಗೆ ಸಂಬಂಧಿಸಿರುತ್ತದೆ. ಅನಿಯಮಿತ ಆಹಾರ ಪದ್ಧತಿ, ದೀರ್ಘಕಾಲದವರೆಗೆ ಹಸಿವಿನಿಂದ ಇರುವುದು ಅಥವಾ ಹೆಚ್ಚು ಜಂಕ್ ಫುಡ್ ಸೇವಿಸುವುದು ಸಹ ಇದಕ್ಕೆ ಕಾರಣಗಳಾಗಿರಬಹುದು. ಅಷ್ಟೇ ಅಲ್ಲ, ಒತ್ತಡ, ನಿದ್ರೆಯ ಕೊರತೆ ಮತ್ತು ಮಾನಸಿಕ ಆಯಾಸ ಕೂಡ ಸಿಹಿ ತಿನ್ನಬೇಕೆಂಬ ಹಂಬಲವನ್ನು ಹೆಚ್ಚಿಸುತ್ತದೆ. ಕೆಲವರು, ದಣಿವಾದಾಗ ಕೂಡ ಸಿಹಿತಿಂಡಿಗಳ ಸೇವನೆ ಮಾಡುತ್ತಾರೆ. ಕಾಲಾನಂತರದಲ್ಲಿ, ಇದು ಅಭ್ಯಾಸವಾಗುತ್ತದೆ ಮತ್ತು ಸಿಹಿತಿಂಡಿಗಳಿಲ್ಲದೆ, ಆಗುವುದೇ ಎಲ್ಲ ಎಂಬ ಹಂತಕ್ಕೆ ಬರುತ್ತಾರೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಸಿಹಿತಿಂಡಿ ತಿನ್ನುವ ಅಭ್ಯಾಸ ನಿಮಗಿದ್ಯಾ? ಹಾಗಿದ್ರೆ ಈ ಸ್ಟೋರಿ ತಪ್ಪದೆ ಓದಿ

ಪದೇ ಪದೇ ಸಿಹಿತಿಂಡಿ ಸೇವನೆ ಮಾಡುವುದರಿಂದ ಯಾವ ರೀತಿಯ ಸಮಸ್ಯೆಗಳಾಗುತ್ತದೆ?

ಸಿಹಿತಿಂಡಿಗಳನ್ನು ಪದೇ ಪದೇ ತಿನ್ನುವುದರಿಂದ ದೇಹದಲ್ಲಿ ಹಲವಾರು ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಇದು ತ್ವರಿತ ತೂಕ ಹೆಚ್ಚಾಗಲು ಮತ್ತು ಬೊಜ್ಜುತನಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲ, ಹೆಚ್ಚು ಸಕ್ಕರೆ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಅಸಮತೋಲನಗೊಳ್ಳುತ್ತದೆ, ಮಧುಮೇಹದ ಅಪಾಯ ಹೆಚ್ಚಾಗುತ್ತದೆ. ಇದಲ್ಲದೆ, ಹಲ್ಲಿನಲ್ಲಿ ಹುಳುಕು, ದೌರ್ಬಲ್ಯ ಮತ್ತು ಆಯಾಸದಂತಹ ಸಮಸ್ಯೆಗಳು ಸಹ ಕಂಡುಬರಬಹುದು. ಕೆಲವರಲ್ಲಿ, ಇದು ಜೀರ್ಣಕಾರಿ ಸಮಸ್ಯೆ ಮತ್ತು ಚರ್ಮದ ಸಮಸ್ಯೆಗಳನ್ನು ಹೆಚ್ಚಿಸಬಹುದು. ಈ ಅಭ್ಯಾಸವು ದೀರ್ಘಕಾಲದವರೆಗೆ ಮುಂದುವರಿದರೆ, ಅದು ಹೃದಯದ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ತಡೆಯುವುದು ಹೇಗೆ?

ಸಿಹಿತಿಂಡಿಗಳ ಆಗಾಗ ಸೇವನೆ ಮಾಡುವುದನ್ನು ತಡೆಯಲು ಅಥವಾ ಆ ಹಂಬಲವನ್ನು ತಪ್ಪಿಸಲು ಸಮತೋಲಿತ ಆಹಾರವನ್ನು ಸೇವನೆ ಮಾಡಿ. ಸಮಯಕ್ಕೆ ಸರಿಯಾಗಿ ಊಟ, ತಿಂಡಿ ಮಾಡಿ ತಿನ್ನಿರಿ, ಹೆಚ್ಚು ಹೊತ್ತು ಹಸಿವಿನಿಂದ ಇರಬೇಡಿ. ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ ಮತ್ತು ಒಳ್ಳೆಯ ನಿದ್ರೆ ಮಾಡಿ. ಒತ್ತಡ ಕಡಿಮೆ ಮಾಡಲು, ಯೋಗ ಅಥವಾ ಲಘು ವ್ಯಾಯಾಮವನ್ನು ಅಭ್ಯಾಸ ಮಾಡಿ. ಸಿಹಿತಿಂಡಿಗಳ ಬದಲಿಗೆ ಹಣ್ಣು, ಒಣ ಹಣ್ಣು ಅಥವಾ ಆರೋಗ್ಯಕರ ತಿಂಡಿಗಳನ್ನು ಆಯ್ಕೆ ಮಾಡಿಕೊಳ್ಳಿ. ಇದೆಲ್ಲದರ ಜೊತೆಗೆ ಸಿಹಿತಿಂಡಿಗಳ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡುವುದರಿಂದ ಈ ಅಭ್ಯಾಸವನ್ನು ನಿಯಂತ್ರಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link