ರಾಜ್ಯಪಾಲರು ಕರ್ನಾಟಕದಲ್ಲಿ ರಾಷ್ಟ್ರಪತಿ ಆಡಳಿತ ಹೇರುತ್ತಾರೆ: ಹೊಸ ಬಾಂಬ್ ಸಿಡಿಸಿದ ಬಿಜೆಪಿ ಶಾಸಕ – Kannada News | Governor will impose President rule in Karnataka: BJP MLA Suresh Gowda Warns To Congress
ತುಮಕೂರು, (ಜನವರಿ 24): ತಮಿಳುನಾಡು ಕೇರಳದಂತೆ ಕರ್ನಾಟಕದಲ್ಲೂ (Karnataka) ರಾಜ್ಯಪಾಲ (governor) ವರ್ಸಸ್ ಸರ್ಕಾರದ ನಡುವಿನ ಸಂಘರ್ಷಕ್ಕೆ ನಾಂದಿ ಹಾಡಿದೆ. ಮೊನ್ನೆ ಕರ್ನಾಟಕದ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ (Karnataka Assembly Session), ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್, ಸರ್ಕಾರ ಸಿದ್ಧಪಡಿಸಿದ್ದ ಭಾಷಣ ಓದದೇ ತಮ್ಮ ಆದ ಎರಡು ಲೈನ್ ಓದಿ ಹೋಗಿದ್ದಾರೆ. ಫೂರ್ತಿ ಭಾಷಣ ಮಾಡದ ರಾಜ್ಯಪಾಲರ ನಡೆ ಬಿಜೆಪಿ ಕಾಂಗ್ರೆಸ್ ಮಧ್ಯೆ ಕದನಕ್ಕೆ ವೇದಿಕೆಯಾಗಿದೆ. ರಾಜ್ಯಪಾಲರು ಸಾಂವಿಧಾನಿಕ ಕರ್ತವ್ಯ ಉಲ್ಲಂಘಿಸಿದ್ದಾರೆ. ಇದು ಕೇಂದ್ರದ ಕುಮ್ಮಕ್ಕು ಎಂದು…