ಇಂದಿನಿಂದ ಫಿಫಾ ವಿಶ್ವಕಪ್ ಟೂರ್ನಿ ಆರಂಭ! – Kannada News
ವಿಶ್ವದ ಅತ್ಯಂತ ದೊಡ್ಡ ಫುಟ್‌ಬಾಲ್ ಟೂರ್ನಮೆಂಟ್ ಫಿಫಾ ವಿಶ್ವಕಪ್ 2026 ಆರಂಭಕ್ಕೆ ದಿನಗಣನೆ ಮುಗಿದಿದೆ. ಅದರಂತೆ ಅಮೆರಿಕ, ಕೆನಡಾ ಹಾಗೂ ಮೆಕ್ಸಿಕೋ ಜಂಟಿಯಾಗಿ ಆಯೋಜಿಸಲಿರುವ ಫಿಫಾ ವಿಶ್ವಕಪ್ಗೆ ಇಂದು ಚಾಲನೆ ದೊರೆಯಲಿದೆ. ಆದರೆ ಕ್ರೀಡಾಭಿಮಾನಿಗಳಲ್ಲಿ ಈ ಬಾರಿಯ ವಿಶ್ವಕಪ್ ಜೂನ್ 11 ಕ್ಕೆ ಶುರುವಾಗುತ್ತದೆಯೇ ಅಥವಾ ಜೂನ್ 12 ಕ್ಕೆ ಎಂಬ ಸಣ್ಣ ಗೊಂದಲವಿದೆ. ಇದಕ್ಕೆ ಮುಖ್ಯ ಕಾರಣ ಉತ್ತರ ಅಮೆರಿಕ ಮತ್ತು ಭಾರತದ ನಡುವಿನ ಭೌಗೋಳಿಕ ಸಮಯದ ವ್ಯತ್ಯಾಸ. ಆತಿಥೇಯ ದೇಶವಾದ ಮೆಕ್ಸಿಕೋದಲ್ಲಿ ಪಂದ್ಯಾವಳಿಯು ಗುರುವಾರ,…