Category Archives: Blog

Your blog category

Horoscope Today 24 January: ಇಂದು ಈ ರಾಶಿಯವರಿಗೆ ಹಣದ ಸಮಸ್ಯೆ! – Kannada News | Daily Horoscope for January 24th 2025: Dr. Basavaraj Gurujis Predictions for Zodiac Signs

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 24 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಶನಿವಾರ, ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶುಕ್ಲ ಪಕ್ಷದ ಷಷ್ಠಿ, ಉತ್ತರಾಭಾದ್ರ ನಕ್ಷತ್ರದಿಂದ ಕೂಡಿದೆ. ಅಂದು ಕುಮಾರ ಷಷ್ಠಿಯ ಮಹತ್ವಪೂರ್ಣ ದಿನವೂ ಆಗಿರುತ್ತದೆ.

ಕುಮಾರ ಷಷ್ಠಿಯು ಸುಬ್ರಹ್ಮಣ್ಯ ಸ್ವಾಮಿಯ ಜನ್ಮದಿನವಾಗಿದ್ದು, ತಾರಕಾಸುರನ ಸಂಹಾರದೊಂದಿಗೆ ಸಂಬಂಧ ಹೊಂದಿದೆ. ಚಿತ್ರಾವತಿ, ಮೂಡಿಗೆರೆ, ಗೋಣಿಬೀಡುಗಳಲ್ಲಿ ರಥೋತ್ಸವಗಳು ನಡೆಯಲಿವೆ. ಗ್ರಹಗಳ ಸ್ಥಾನವನ್ನು ಗಮನಿಸಿದರೆ, ರವಿ ಮಕರ ರಾಶಿಯಲ್ಲಿ ಮತ್ತು ಚಂದ್ರ ಮೀನ ರಾಶಿಯಲ್ಲಿ ಸಂಚರಿಸುತ್ತಾನೆ.

ಮೇಷ ರಾಶಿಯವರಿಗೆ ಇಂದು ಐದು ಗ್ರಹಗಳ ಶುಭ ಫಲವಿರುತ್ತದೆ. ಆದಾಯದಲ್ಲಿ ಏರಿಕೆ, ವ್ಯಾಪಾರದಲ್ಲಿ ಲಾಭ, ಅದೃಷ್ಟ ಪ್ರಾಪ್ತಿ, ಹೊಸ ವಾಹನ ಯೋಗ ಮತ್ತು ಹಣದ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಮನಸ್ಸಿಗೆ ಶಾಂತಿ ಮತ್ತು ತೃಪ್ತಿ ದೊರೆಯಲಿದೆ. ಆರೋಗ್ಯ ಉತ್ತಮವಾಗಿರುತ್ತದೆ ಮತ್ತು ಮಕ್ಕಳಿಂದ ಶುಭವಾಗುತ್ತದೆ. ರೈತರು, ವ್ಯಾಪಾರಸ್ಥರು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದ್ದು, ಒತ್ತಡ ಕಡಿಮೆಯಾಗಲಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

 

Source link

ಬಳ್ಳಾರಿಯಲ್ಲಿ ಭುಗಿಲೆದ್ದ ಆಕ್ರೋಶ: ಎಲ್ಲೆಲ್ಲೂ ಖಾಕಿ ಸರ್ಪಗಾವಲು

ಬಳ್ಳಾರಿ, ಜನವರಿ 24: ಬಳ್ಳಾರಿಯಲ್ಲಿ ಬ್ಯಾನರ್‌ ವಿಚಾರಕ್ಕೆ ಶುರುವಾದ ಗಲಾಟೆ ಇನ್ನೂ ಸಂಪೂರ್ಣವಾಗಿ ತಣ್ಣಗಾಗಿಲ್ಲ. ಗನ್‌ಮ್ಯಾನ್‌ಗಳಿಗೆ ಇನ್ನೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಅಷ್ಟರಲ್ಲೇ ರೆಡ್ಡಿಗಳ ಮಧ್ಯೆ ಈಗ ಬೆಂಕಿ ರಾಜಕೀಯ ಶುರುವಾಗಿದೆ. ಶಾಸಕ ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲುಗೆ ಸೇರಿದ ಮಾಡೆಲ್‌ ಹೌಸ್‌ಗೆ ಬೆಂಕಿ ಬಿದ್ದಿದೆ. ಬಳ್ಳಾರಿಯ ಜಿ ಸ್ಕ್ವೇರ್‌ನಲ್ಲಿರುವ ಲೇಔಟ್‌ನಲ್ಲಿರುವ ಮಾಡೆಲ್‌ ಹೌಸ್‌ ಹೊತ್ತಿ ಉರಿದಿದೆ. ಇದು ಶಾಸಕ ಭರತ್‌ ರೆಡ್ಡಿ ಅವರದ್ದೇ ಕೃತ್ಯ ಎಂದು ರೆಡ್ಡಿ ಸಹೋದರರು ಆರೋಪಿಸಿದ್ದಾರೆ. ಘಟನೆ ಖಂಡಿಸಿ ಬಿಜೆಪಿ ತೀವ್ರ ಪ್ರತಿಭಟನೆ ನಡೆಸಿದೆ. ಸದ್ಯ ಬಳ್ಳಾರಿ ಉದ್ವಿಗ್ನಗೊಂಡಿದ್ದು, ಎಲ್ಲೆಡೆ ಪೊಲೀಸ್ ಬಿಗಿ ಭದ್ರತೆ ಕಲ್ಪಿಸಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 24ರ ದಿನಭವಿಷ್ಯ – Kannada News | Numerology Horoscope Jan 24: What’s in store for Janmasankhya 7, 8, 9 individuals?

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 24ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಏಕಾಗ್ರತೆ ಮುಖ್ಯವಾಗುತ್ತದೆ. ಒಂದು ಕೆಲಸ ಮಾಡುವಾಗ ಇತರ ಸಂಗತಿಗಳ ಬಗ್ಗೆಯೂ ಯೋಚನೆ ಮಾಡುತ್ತಾ ಮುಂದುವರಿಸಲ್ಲಿ ಏನಾದರೂ ಸಮಸ್ಯೆ ಆಗುತ್ತದೆ. ಇನ್ನು ಇದೇ ವೇಳೆ ಮನೆಯಲ್ಲಿನ ಎಲೆಕ್ಟ್ರಿಕಲ್ ಹಾಗೂ ಎಲೆಕ್ಟ್ರಾನಿಕ್ ವಸ್ತುಗಳ ಬಗ್ಗೆ ಜಾಗ್ರತೆಯಿಂದ ಇರಬೇಕು. ಮುಖ್ಯವಾಗಿ ಮೊಬೈಲ್ ಫೋನ್ ಚಾರ್ಜಿಂಗ್, ಲ್ಯಾಪ್ ಟಾಪ್ ಚಾರ್ಜಿಂಗ್ ಅಥವಾ ಟ್ಯಾಬ್ ಚಾರ್ಜಿಂಗ್ ಹಾಕುತ್ತಿದ್ದೀರಿ ಎಂದಾದಲ್ಲಿ ತುಂಬ ಹೊತ್ತು ಹಾಗೇ ಹಾಕಿಡದಿರುವುದು ಮತ್ತು ಚಾರ್ಜ್ ಗೆ ಹಾಕಿರುವಾಗಲೇ ಬಳಸುವುದನ್ನು ಮಾಡಬೇಡಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ವಿದೇಶ ಪ್ರಯಾಣಕ್ಕೋ ಅಥವಾ ನೀವಿರುವ ಸ್ಥಳದಿಂದ ದೂರ ಪ್ರದೇಶಕ್ಕೆ ತೆರಳುತ್ತಿದ್ದೀರಿ ಅಂತಾದಲ್ಲಿ ಪ್ರಯಾಣದ ಮೂಲಕ ಶುಭ ಸುದ್ದಿ ಕೇಳುವಂಥ ಯೋಗ ಇದೆ. ಬ್ಯಾಂಕ್ ನಲ್ಲಿ ಎಫ್ ಡಿ ಎಂದಿಟ್ಟಿದ್ದಲ್ಲಿ ಅದನ್ನು ಮುರಿಸುವ ಬಗ್ಗೆ ಆಲೋಚನೆ ಮಾಡಲಿದ್ದೀರಿ. ಅದೇ ಸಮಯದಲ್ಲಿ ಹಣವನ್ನು ಉತ್ತಮ ರಿಟರ್ನ್ ಬರುವ ಕಡೆಗೆ ಹೂಡಿಕೆ ಸಹ ಮಾಡುವ ಕಡೆಗೆ ಚಿಂತಿಸಲಿದ್ದೀರಿ. ತೀರಾ ಆಕ್ರಮಣಕಾರಿಯಾಗಿ ಹಣ ಕೂಡಿಡುವ ಬಗ್ಗೆ ಲೆಕ್ಕಾಚಾರ ಹಾಕಿಕೊಳ್ಳಲಿದ್ದೀರಿ.

ಇದನ್ನೂ ಓದಿ: ಜ. 25ರಂದು ಕೇತು ಸಂಚಾರ; ಈ ಮೂರು ರಾಶಿಯವರು ಜಾಗರೂಕರಾಗಿರಿ

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ನೀವೇನಾದರೂ ಒಡವೆ, ಸೈಟು ಅಥವಾ ಮನೆ- ವಾಹನವೂ ಸೇರಿದಂತೆ ವಸ್ತುಗಳನ್ನು ಅಡಮಾನ ಮಾಡಿದ್ದೀರಿ ಅಂತಾದಲ್ಲಿ ಅದು ಹರಾಜಿಗೆ ಬರುವಂಥ ಸಾಧ್ಯತೆಗಳಿವೆ. ವಿಪರೀತ ಕೆಲಸದ ಒತ್ತಡ ಬೀಳಲಿದೆ. ಕೆಲವು ನೀವಾಗಿಯೇ ಮೈ ಮೇಲೆ ಹಾಕಿಕೊಳ್ಳಲಿದ್ದೀರಿ. ಇನ್ನು ಕೆಲವು ಅನಿರೀಕ್ಷಿತವಾಗಿ ತಾವಾಗಿಯೇ ಹುಡುಕಿಕೊಂಡು ಬರಲಿವೆ. ಇತರರಿಗೆ ನೀವು ನೀಡಿದಂಥ ಸಲುಗೆ ಬಗ್ಗೆ ನಿಮಗೆ ಬೇಸರ ಆಗಲಿದೆ. ಇತರರ ಸಾಲಕ್ಕೆ ನೀವು ಶ್ಯೂರಿಟಿಯಾಗಿ ನಿಂತಲ್ಲಿ ಅಥವಾ ಜಾಮೀನಾಗಿ ನಿಂತಲ್ಲಿ ಭವಿಷ್ಯದಲ್ಲಿ ಪರಿತಪಿಸಬೇಕಾಗುತ್ತದೆ.

ಲೇಖನ- ಸ್ವಾತಿ ಎನ್.ಕೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 24ರ ದಿನಭವಿಷ್ಯ – Kannada News | Numerology Prediction Jan 24: Birth Numbers 4, 5, 6 Daily Fate

ಜನ್ಮಸಂಖ್ಯೆ 4, 5, 6ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 24ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಎಲ್ಲರನ್ನೂ ನೀವು ಸಮಾನವಾಗಿ ಕಾಣುತ್ತಿಲ್ಲ ಎಂಬ ಆರೋಪವನ್ನು ಹೊತ್ತಿಕೊಳ್ಳಬೇಕಾಗುತ್ತದೆ. ನೀವು ನೀಡುವ ಯಾವ ಸಮಜಾಯಿಷಿಯನ್ನೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇತರರು ಇರುವುದಿಲ್ಲ. ಈ ಹಿಂದೆ ಯಾವಾಗಲೋ ನೀವಾಡಿದ ಮಾತು, ನಡೆದುಕೊಂಡ ರೀತಿಯನ್ನು ಉದಾಹರಿಸಿ, ನಿಮ್ಮನ್ನು ನಿಂದಿಸುತ್ತಾರೆ. ನೀವು ಯಾರನ್ನು ನೆರವಿಗೆ ಬರಬಹುದು ಎಂದು ಭಾವಿಸಿರುತ್ತೀರೋ ಅವರು ಸಹ ನಿಮ್ಮ ಸಹಾಯಕ್ಕೆ ಬರುವುದಕ್ಕೆ ಆಗಲ್ಲ. ಸಂಬಂಧಿಕರು ನಿಮ್ಮ ಆರ್ಥಿಕ ಪರಿಸ್ಥಿತಿ ಬಗ್ಗೆ ಹೀಗಳೆದರೆ ಅದನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಉತ್ತಮ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ತಂದೆ- ತಾಯಿಯ ಆಶೀರ್ವಾದ ನಿಮ್ಮ ಮೇಲೆ ಅತ್ಯುತ್ತಮವಾಗಿ ಇರಲಿದೆ. ಬಾಹ್ಯದಿಂದ ನಿಮ್ಮ ಮೇಲೆ ಒತ್ತಡ ಬಂದರೂ ಅದನ್ನು ಯಶಸ್ವಿಯಾಗಿ ನಿರ್ವಹಿಸಲಿದ್ದೀರಿ. ಸ್ತ್ರೀಶಕ್ತಿ ಸಂಘಗಳಲ್ಲಿ ಇರುವಂಥವರಿಗೆ ನಾಯಕತ್ವ ವಹಿಸುವಂಥ ಅವಕಾಶಗಳಿವೆ. ಮನೆಗೆ ಅಲಂಕಾರಿಕ ವಸ್ತುಗಳನ್ನು ಖರೀದಿಸುವಂಥ ಯೋಗ ನಿಮ್ಮ ಪಾಲಿಗೆ ಇದೆ. ಕರ್ಟನ್ ಮೊದಲಾದ ವಸ್ತುಗಳಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಲಿದ್ದೀರಿ. ಹೊಸ ಜವಾಬ್ದಾರಿಗಳನ್ನು ಧೈರ್ಯವಾಗಿ ವಹಿಸಿಕೊಳ್ಳಿ. ದೀರ್ಘಾವಧಿಯಲ್ಲಿ ಅನುಕೂಲ ಆಗಲಿದೆ.

ಇದನ್ನೂ ಓದಿ: ಜನವರಿ 25 ರಂದು ಕೇತು ಸಂಚಾರ; ಈ ಮೂರು ರಾಶಿಗೆ ಅದೃಷ್ಟವೋ ಅದೃಷ್ಟ

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಬ್ಯಾಂಕ್ ವ್ಯವಹಾರಗಳನ್ನು ಮಾಡುವಾಗ ಅತಿಯಾದ ನಿರೀಕ್ಷೆ ಇಟ್ಟುಕೊಂಡು ಮುಂದುವರಿದಲ್ಲಿ ಅಂದುಕೊಂಡಂತೆ ಕೆಲಸ ಆಗದೆ ಬೇಸರಕ್ಕೆ ಕಾರಣ ಆಗಲಿದೆ. ಈಗಾಗಲೇ ಮನೆ ನಿರ್ಮಾಣ ಮಾಡುತ್ತಿದ್ದೀರಿ, ಅದಕ್ಕೆ ಹಣಕಾಸಿನ ಸಮಸ್ಯೆ ಆಗಿದೆ ಎಂದಾದಲ್ಲಿ ಅದು ಉಲ್ಬಣ ಆಗಲಿದೆ. ಸ್ನೇಹಿತರು ಅಥವಾ ಸಂಬಂಧಿಕರು ಅಥವಾ ನೀವು ಬಹಳ ಗೌರವಿಸುವಂಥ ವ್ಯಕ್ತಿಗಳು ಒತ್ತಡ ತಂದರು ಎಂಬ ಕಾರಣಕ್ಕಾಗಿ ಯಾವುದೇ ಕೆಲಸವನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ. ನಿಮಗೇ ಸರಿ ಎಂದು ಅನಿಸುವ ತನಕ ಯಾವ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳದಿರಿ.

ಲೇಖನ- ಸ್ವಾತಿ ಎನ್.ಕೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 24ರ ದಿನಭವಿಷ್ಯ – Kannada News | Jan 24 Numerology: Daily Horoscope for Birth Numbers 1, 2, 3 Explained

ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 24ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ನಿಮ್ಮ ನಿರ್ಧಾರಗಳ ಬಗ್ಗೆ ನಂಬಿಕೆ ಇರುವುದು ತಪ್ಪಲ್ಲ. ಆದರೆ ಯಾವುದಾದರೂ ಅವಕಾಶ ಸಿಕ್ಕಿದೆ ಎಂಬ ಕಾರಣಕ್ಕೆ ವಿನಾಕಾರಣದ ಉದ್ವೇಗ ಯಾವುದೇ ರೀತಿಯಲ್ಲೂ ಸರಿಯಲ್ಲ. ಆದ್ದರಿಂದ ಸಾವಧಾನದಿಂದ ಆಲೋಚನೆ ಮಾಡಿದ ಮೇಲಷ್ಟೇ ಅಭಿಪ್ರಾಯವನ್ನಾಗಲೀ ಹಣಕಾಸಿನ ವಿಚಾರಗಳ ಬಗ್ಗೆ ಆಗಲೀ ಮಾತನ್ನು ಶುರು ಮಾಡಿ. ಸಹೋದ್ಯೋಗಿಗಳನ್ನು ತಮಾಷೆಗಾದರೂ ಸರಿ, ಹೀಗಳೆಯುವುದೋ ಅಥವಾ ಮೂದಲಿಸುವುದೋ ಮಾಡಬೇಡಿ. ಈಗಿರುವ ಉದ್ಯೋಗ ಬದಲಾವಣೆ ಮಾಡಲೇಬೆಕು ಎಂಬ ಸನ್ನಿವೇಶ ಉದ್ಭವಿಸಲಿದೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ನಿಮಗೆ ಸರಿ ಎಂದು ತಿಳಿದಿದ್ದರೂ ಒಂದಕ್ಕೆ ನಾಲ್ಕು ಬಾರಿ ಎಂಬಂತೆ ನಿರ್ಧಾರವನ್ನು ಅಳೆದು- ತೂಗಿ ನೋಡುವುದು ಉತ್ತಮ. ಅದರಲ್ಲೂ ನೀವೇ ಸರಿ ಎಂಬ ಧೋರಣೆಯಿಂದ ನಿಷ್ಠುರವಾದಿಗಳಂತೆ ನೇರಾನೇರ ಮಾತನಾಡುವುದಕ್ಕೆ ಹೋಗದಿರಿ. ನೀವು ತರ್ಕಬದ್ಧವಾಗಿಯೇ ಮಾತನಾಡಬಹುದು ಹಾಗೂ ನಿರ್ದಿಷ್ಟ ವ್ಯಕ್ತಿಯದೇ ತಪ್ಪು ಸಹ ಇರಬಹುದು. ಆದರೆ ಆ ಕಾರಣಕ್ಕಾಗಿ ಆತ್ಮವಿಶ್ವಾಸವನ್ನು ಕುಗ್ಗಿಸುವ ರೀತಿಯಲ್ಲಿ ಮಾತನಾಡಬೇಡಿ. ಸಾಮಾಜಿಕವಾಗಿ ಹೆಚ್ಚು ತೊಡಗಿಕೊಳ್ಳುತ್ತೀರಿ ಅಂತಾದಲ್ಲಿ ನಿಮ್ಮ ವರ್ಚಸ್ಸಿಗೆ ತಕ್ಕಂತೆ ನಡೆದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಜನವರಿ 25 ರಂದು ಕೇತು ಸಂಚಾರ; ಈ ಮೂರು ರಾಶಿಗೆ ಅದೃಷ್ಟವೋ ಅದೃಷ್ಟ

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ನಿಮಗೆ ಕೀರ್ತಿ- ಪ್ರತಿಷ್ಠೆಗಳು ಹೆಚ್ಚಾಗುವ ಸಮಯ ಇದು. ನೀವು ಸಮಯಸ್ಫೂರ್ತಿಯಿಂದ ತೆಗೆದುಕೊಂಡ ರಿಸ್ಕ್ ಪರಿಣಾಮವಾಗಿ ಇತರರು ಅಚ್ಚರಿಯಿಂದ ನಿಮ್ಮನ್ನು ನೋಡುವಂತೆ ಆಗುತ್ತದೆ. ಆರ್.ಡಿ., ಎಫ್.ಡಿ., ಇಂಥದ್ದನ್ನು ಮಾಡಿಸುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ರಾಜಕಾರಣದಲ್ಲಿ ಇರುವಂಥವರು ಸಮಯಕ್ಕೆ ತೆಗೆದುಕೊಳ್ಳಬೇಕಾದ ನಾಯಕತ್ವವನ್ನು ತುಂಬ ಧೈರ್ಯವಾಗಿ ವಹಿಸಿಕೊಳ್ಳಲಿದ್ದೀರಿ. ತುಂಬ ಕಠಿಣ ಎಂದು ಇತರರು ನಿರ್ಧಾರ ಮಾಡಿಯೇ ಬಿಟ್ಟಿದ್ದ ಸಂಗತಿಗಳನ್ನು ಬಹಳ ಸರಳವಾಗಿ ವಿವರಿಸುವುದಕ್ಕೆ ನೀವು ಯಶಸ್ವಿಯಾಗಲಿದ್ದೀರಿ.

ಲೇಖನ- ಸ್ವಾತಿ ಎನ್.ಕೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 24 January: ಇಂದು ಈ ರಾಶಿಯವರ ಸೋಲು ದ್ವೇಷವಾಗಲಿದೆ – Kannada News | Horoscope Today 24 January: Saturday Forecasts and Auspicious Times

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಷಷ್ಠೀ ತಿಥಿ ಶನಿವಾರ ಓಲಿಕೆ, ಆಪಾದನೆ, ಮನೆಕೆಲಸ, ಸ್ಪರ್ಧೆ, ನಿರವಲಂಬನೆ, ಆಚರಣೆ, ಆದಾಯ ಹೆಚ್ಚು ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಉತ್ತರಾಷಾಢ, ವಾರ : ಶನಿ, ಪಕ್ಷ : ಶುಕ್ಲ, ತಿಥಿ : ಷಷ್ಠೀ, ನಿತ್ಯನಕ್ಷತ್ರ : ರೇವತೀ, ಯೋಗ : ಶಿವ, ಕರಣ : ತೈತಿಲ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 18 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 09:45 – 11-11 ಯಮಗಂಡ ಕಾಲ 14:02 – 15:28 ಗುಳಿಕ ಕಾಲ 06:54 – 08:20

ಮೇಷ ರಾಶಿ :

ನೀರಿನ ಸ್ಥಳದಲ್ಲಿ ಎಚ್ಚರಿಕೆಯಿಂದ ಇರಿ. ಸರ್ಕಾರದಿಂದ ಬರುವ ಗೌರವವನ್ನು ಅಲ್ಲಗಳೆಯುವುದು. ಹೂಡಿಕೆಯ ವಿಚಾರದಲ್ಲಿ ಯಾರಾದರೂ ದಾರಿಯನ್ನು ತಪ್ಪಿಸಿಯಾರು. ಉದ್ಯಮಿಗಳ ಭೇಟಿ ಮಾಡುವಿರಿ. ಭೂಮಿಯ ಖರೀದಿಗೆ ಸೂಕ್ತ ಸಮಯವಿದ್ದು ಇಷ್ಟಪಟ್ಟ ಭೂಮಿಯು ಸಿಗುವುದು. ಮನಸ್ಸಿನ ಚಾಂಚಲ್ಯವನ್ನು ನಿವಾರಿಸಲು ಯೋಗವೇ ಮದ್ದಾಗಲಿದೆ. ನಿಮ್ಮನ್ನು ಯಾರಾದರೂ ಮಾತಿನಿಂದ ಕಟ್ಟಿಹಾಕಬಹುದು.

ವೃಷಭ ರಾಶಿ :

ಆಸ್ತಿ ಗಳಿಕೆಯ ಬಗ್ಗೆ ದೂರಾಲೋಚನೆ ಮಾಡುವಿರಿ. ಗೊತ್ತಿಲ್ಲದ ವಿಚಾರಗಳನ್ನು ಹಂಚಿಕೊಳ್ಳುವುದು ಬೇಡ.‌ ಆದುದರ ಬಗ್ಗೆ ನಿಮಗೆ ಯಾವುದೇ ಬೇಸರವನ್ನು ಮಾಡಿಕೊಳ್ಳುವುದಿಲ್ಲ. ಬೇರೆಯವರನ್ನು ಗೊಂದಲಕ್ಕೆ ಸಿಕ್ಕಿ ಹಾಕಿಸುವುದು ಬೇಡ. ನಿಮ್ಮ ಕಾರ್ಯದಲ್ಲಿನ ಶಿಸ್ತು ಉಳಿದವರಿಗೆ ಕಷ್ಟವಾದೀತು. ಮನೆಯ ಆಗಮಿಸಿದ ಅತಿಥಿಗಳಿಗೆ ಸಂತೋಷವನ್ನು ಉಣ್ಣಲು ಹಾಕುವಿರಿ. ನೀವು ಹೋದಕಡೆ ನಿಮಗೆ ಬೇಕಾದ ಹಾಗೆ ವಾತಾವರಣವನ್ನು ಸೃಷ್ಟಿಸಿಕೊಳ್ಳುವಿರಿ.

ಮಿಥುನ ರಾಶಿ :

ಕಟ್ಟಡ ನಿರ್ಮಾಣದವರಿಗೆ ಹೆಚ್ಚು ಲಾಭವಾಗಲಿದೆ. ಯತ್ನಿತ ಕಾರ್ಯಕ್ಕೆ ದೈವಬಲ ಇಲ್ಲವಾಗಬಹುದು, ದೈವಕ್ಕೆ ಶರಣಾಗಿ. ಹೊಸ ಯೋಜನೆಗಳೂ ಅವರಿಗೆ ಸಿಗಲಿದೆ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮ ಪ್ರಗತಿ ಇರಲಿದೆ. ಹೂಡಿಕೆಯಿಂದ ನಿಮಗೆ ನಿರೀಕ್ಷಿತ ಲಾಭ ಕಾಣಿಸದೇ ಹೋಗುವುದು. ಕಲಾವಿದರು ಹೆಚ್ಚಿನ ಪ್ರಶಂಸೆಗೆ ಪಾತ್ರರಾಗಲಿದ್ದಾರೆ. ಯಾರೋ‌ ಮಾಡಬೇಕಾದ ಕೆಲಸಕ್ಕೆ ನೀವು ಹೋಗಬೇಕಾದೀತು. ಹಣವಿದ್ದರೂ ಸಮಯಕ್ಕೆ ಸರಿಯಾಗಿ ಸಿಗದ ಕಾರಣ ತುರ್ತಾಗಿ ಸಾಲವನ್ನು ಮಾಡಬೇಕಾಗುವುದು.

ಕರ್ಕಾಟಕ ರಾಶಿ :

ಸ್ಪರ್ಧೆಗಾಗಿ ನಡೆಸಿದ ನಿಮ್ಮ ಶ್ರಮವು ವ್ಯರ್ಥವಾದೀತು. ನಿಮ್ಮ‌ ಮೇಲಿರುವ ಭಾವನೆಯು ದೂರಾಗಬಹುದು. ಅಮೂಲ್ಯ ಸಮಯವನ್ನು ಆಲಸ್ಯದಿಂದ ಕಳೆಯುವಿರಿ. ಆಸ್ತಿಯ ವಿಚಾರಕ್ಕೆ ನೆರಮನೆಯವರ ಜೊತೆ ಕಲಹವಾಗಲಿದೆ. ಸಂಗಾತಿಯಿಂದ ಆರ್ಥಿಕ ಸಹಾಯವನ್ನು ಬಯಸಬಹುದು. ಸಕಾರಾತ್ಮಕ ಚಿಂತನೆಯನ್ನು ದೂರ ಮಾಡಿಕೊಳ್ಳುವಿರಿ.‌ ಸದಾ ಯಾರ ಮೇಲಾದರೂ ಅನುಮಾನದಿಂದಲೇ ಇರುವಿರಿ.‌ ರತ್ನಗಳನ್ನು ಪರೀಕ್ಷಿಸಿ ಖರೀದಿಸಿ‌ ಮತ್ತು ಧರಿಸಿ.

ಸಿಂಹ ರಾಶಿ :

ಎಲ್ಲವೂ ಆಗಿಹೋದಂತೆ ನಿಮಗೆ ಅನ್ನಿಸಬಹುದು. ನಿಮ್ಮ ಬಗ್ಗೆಯೇ ಉತ್ತರ ಸಿಗದ ಅನೇಕ ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ವಸತಿಯಲ್ಲಿ ತೊಂದರೆ ಬಂದ ಕಾರಣ ಬದಲಾಯಿಸುವ ಸಂದರ್ಭವೂ ಬರಬಹುದು. ನಿಮ್ಮವರೆಂದುಕೊಂಡವರು ನಿಮ್ಮವರಾಗದೇ ಇರಬಹುದು. ಹಿತಶತ್ರುಗಳಿಂದ ಅಪಕೀರ್ತಿ ಬರುವ ಸಾಧ್ಯತೆ. ನಿಮ್ಮ ಬಯಕೆಗಳನ್ನು ಯಾರ ಬಳಿಯೂ ಪ್ರಕಟಪಡಿಸುವುದಿಲ್ಲ. ಮನಸ್ಸಿನಲ್ಲಿಯೇ ಮಂಡಿಗೆ ತಿನ್ನುವಿರಿ. ಸಣ್ಣ ವಿಚಾರಕ್ಕೂ ಇಂದು ದ್ವೇಷ ಹುಟ್ಟಿಕೊಳ್ಳಬಹುದು.

ಕನ್ಯಾ ರಾಶಿ :

ವೃತ್ತಿಯಲ್ಲಿ ಒಂದೇ ಕೆಲಸವನ್ನು ಮತ್ತೆ ಮತ್ತೆ ಮಾಡಬೇಕಾಗಬಹುದು. ದಿನದ ಕೆಲಸವನ್ನು ಮಾಡುವಷ್ಟರಲ್ಲಿ ನಿಮ್ಮ ಸಮಯವು ಕಳೆದುಹೋಗುವುದು. ಆರ್ಥಿಕ ವ್ಯವಹಾರದಲ್ಲಿ ನ್ಯಾಯ ಸಿಗಲು ಕಾನೂನಿಗೆ ಶರಣಾಗಬೇಕಾಗುವುದು. ಸಾಲದಿಂದ ಬಿಡುಗಡೆ ಸಿಕ್ಕ ಕಾರಣ ಕುಟುಂಬದಲ್ಲಿ ಸೌಖ್ಯವಿರುವುದು. ಎಲ್ಲ ಕೆಲಸಗಳೂ ಅಪೂರ್ಣವಾಗಿದ್ದು ನಿಮಗೆ ಅಸಮಾಧನ ಇರುವುದು. ಸಾಮಾಜಿಕ ಕಾರ್ಯವನ್ನೂ ಪರಿಚಿತರ ಜೊತೆ ಭಾಗವಹಿಸಿ ಮಾಡುವಿರಿ. ಕುಟುಂಬವು ನಿಮಿತ್ತ ತಿರುಗಾಟ ಮಾಡಬೇಕಾಗುವುದು.

ತುಲಾ ರಾಶಿ :

ಸಮಯಸ್ಫೂರ್ತಿಯಿಂದ ಕೆಲಸವನ್ನು ಮಾಡುವಿರಿ. ಪಾಲುದಾರಿಕೆಯ ಭೂ ಸಂಬಂಧದ ಕಾರ್ಯದಿಂದ ಲಾಭವಾಗಲಿದೆ. ಬಹಳ ದಿನಗಳಿಂದ ಇರಿಸಿಕೊಂಡಿದ್ದ ಧಾರ್ಮಿಕ ಕಾರ್ಯಗಳನ್ನು ಮಾಡಿಸುವಿರಿ. ದಾಂಪತ್ಯವು ಪರಸ್ಪರ ಸೌಹಾರ್ದದ ಮಾತುಗಳಿಂದ ನೆಮ್ಮದಿ ಸಿಗುವುದು.‌ ಮಕ್ಕಳ‌ ವಿಚಾರವಾಗಿ ಅನವಶ್ಯಕ ಖರ್ಚು ಮಾಡುವುದು ಬೇಡ. ನೀವು ಮೌನದಿಂದ ಇದ್ದರೆ ಆಗುವ ಎಲ್ಲದಕ್ಕೂ ಸಮ್ಮತವುದೆ ಎಂದಾಗುವುದು. ಸಮಯಕ್ಕೆ ಬೆಲೆ ಕೊಟ್ಟು ಎಲ್ಲವನ್ನೂ ಸಕಾಲಕ್ಕೆ ಮುಗಿಸುವುದು ಉತ್ತಮ.

ವೃಶ್ಚಿಕ ರಾಶಿ :

ಇಷ್ಟದ ಕಾರ್ಯವು ಸಿದ್ಧಿಯಾಗಿ ನಿಮಗೆ ಉತ್ಸಾಹವು ಹೆಚ್ಚಾಗುವುದು. ನಿಮ್ಮ ಕೆಲವು ವರ್ತನೆಯನ್ನು ಮಿತ್ರರು ವಿರೋಧಿಸುವರು. ಹಲವು ಮೂಲಗಳಿಂದ ನಿಮಗೆ ಒಂದೇ ರೀತಿಯ ಅಭಿಪ್ರಾಯ ಬರಲಿದೆ. ನಿಮ್ಮ ಬಂಧುಗಳ ಸಹಾಯದಿಂದ ವಿವಾಹದ ಮಾತುಕತೆಯು ಘಟಿಸುವುದು. ಪರಿಶ್ರಮಕ್ಕೆ ತಕ್ಕ ಫಲವನ್ನೂ ನೀವು ಅಪೇಕ್ಷಿಸಿ ಪಡೆದುಕೊಳ್ಳುವಿರಿ. ಮಾಡುವ ವೃತ್ತಿಯಲ್ಲಿ ಗೊಂದಲವಿದ್ದರೆ ಅನುಭವಗಳನ್ನು ಕೇಳಿ ಮಂದುವರೆಯಿರಿ. ನಿಮ್ಮ ಕಾರ್ಯಕ್ಕೆ ಸಂಗಾತಿಯಿಂದ ಪ್ರೋತ್ಸಾಹ ಸಿಗಲಿದೆ.

ಧನು ರಾಶಿ :

ಯಾರಿಗೂ ಸುಲಭಕ್ಕೆ ಸಿಗದೇ ಏನಾದರೂ ನೆಪವನ್ನು ಹೇಳಿ ತಪ್ಪಿಸಿಕೊಳ್ಳುವಿರಿ. ಸಮಾರಂಭದಲ್ಲಿ ಹಳೆಯ ಸ್ನೇಹಿತರ ಭೇಟಿಯಾಗುವುದು. ಆಕಸ್ಮಿಕ ಧನಪ್ರಾಪ್ತಿಯಿಂದ ಹರ್ಷಗೊಳ್ಳುವಿರಿ. ವ್ಯವಹಾರಾದಲ್ಲಿ ಆಕರ್ಷಕ ಮಾತುಗಳನ್ನಾಡಿ ಲಾಭ ಮಾಡಿಕೊಳ್ಳುವ ಸಂದರ್ಭ ಬರುವುದು. ನಿಮ್ಮ ಮನಸ್ಸಿಗೆ ಪೂರ್ಣವಾಗಿ ಒಪ್ಪಿಗೆ ಆದರೆ ಮಾತ್ರ ಯಾವ ಕೆಲಸಕ್ಕಾದರೂ ಮುಂದುವರಿಯಿರಿ. ನಿಮಗೆ ಇಷ್ಟವಾದ ವಿಚಾರವನ್ನು ತಕ್ಷಣ ಪಡೆಯುವಿರಿ. ಉದ್ಯೋಗವಿಲ್ಲವೆಂಬುದು ನಿಮಗೆ ಅವಮಾನದ ಸಂಗತಿಯಾಗಲಿದೆ.

ಮಕರ ರಾಶಿ :

ಇಂದು ಸ್ತ್ರೀಯರಿಗೆ ಸಂಗಾರಿಯಿಂದ ಅಥವಾ ಮೇಲಧಿಕಾರಿಗಳಿಂದ ಮಾನಸಿಕವಾದ ಕಿರಿಕಿರಿ ಇರಲಿದ್ದು ಕೆಲಸ ಮಾಡಲು ಕಷ್ಟವಾಗಬಹುದು. ಅನಾರೋಗ್ಯದ ಭೀತಿಯೇ ನಿಮ್ಮನ್ನು ಇನ್ನಷ್ಟು ಕುಗ್ಗಿಸುವುದು. ನಿಮ್ಮ‌ ವಸ್ತುಗಳ ಮೇಲೆ ಅತಿಯಾದ ಮೋಹವು ಇರುವುದು. ಮಿತ್ರರ ಸಹಾಯದಿಂದ ನಿಮಗೆ ಧನ ಸಹಾಯವು ಸಿಗಬಹುದು. ಸಾರ್ವಜನಿಕವಾಗಿ ಅವಮಾನವಾಗುವ ಸಾಧ್ಯತೆ ಇದೆ. ಜಲಚರ ಪ್ರಾಣಿಗಳಿಂದ ಭಯ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಆದೀತು. ಸಂಗಾತಿಯ ಭಾವನೆಗಳಿಗೆ ಸ್ಪಂದಿಸದೇ ಇರುವುದರಿಂದ ನಿಮ್ಮ ಮೇಲೆ ಕೋಪಗೊಳ್ಳುವರು.

ಇದನ್ನೂ ಓದಿ: ಜ. 25ರಂದು ಕೇತು ಸಂಚಾರ; ಈ ಮೂರು ರಾಶಿಯವರು ಜಾಗರೂಕರಾಗಿರಿ

ಕುಂಭ ರಾಶಿ :

ಉನ್ನತ ಸ್ಥಾನವನ್ನು ಪಡೆಯಲು ನಿಮಗೆ ಬಂದ ಅಪವಾದವನ್ನು ನಿವಾರಿಸಿಕೊಳ್ಳಬೇಕಾಗುತ್ತದೆ. ನಿಮ್ಮ ಅಮೂಲ್ಯ ವಿಚಾರಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವ ಅಗತ್ಯವಿಲ್ಲ. ಆದಾಯಕ್ಕೆ ನಾನಾ ಮೂಲವನ್ನು ಆಯ್ಕೆ ಮಾಡಿಕೊಳ್ಳುವಿರಿ. ವಿದೇಶದ ವ್ಯವಹಾರದಲ್ಲಿ ಪಾಲುದಾರಿಕೆ ಇರಲಿದೆ. ವೃತ್ತಿಯನ್ನು ಹೊರತುಪಡಿಸಿದ ಅವಕಾಶಗಳು ನಿಮ್ಮನ್ನು ಹುಡುಕಿ ಬರಬಹುದು. ಉತ್ತಮ ಸಮಯದ ನಿರೀಕ್ಷೆಯಲ್ಲಿ ಸಮಾಧಾನ ಇರುವುದು. ನಿಮ್ಮಲ್ಲಿ ಇರುವ ವಸ್ತುಗಳನ್ನು ನೀವು ಯಾರಿಗಾದರೂ ಕೊಡುವುದು ಬೇಡ.

ಮೀನ ರಾಶಿ :

ಇಂದು ಹಿರಿಯರನ್ನು ಭೇಟಿಯಾಗಿ ಭೂಮಿಗೆ ಸಂಬಂಧಿಸಿದ ವಿಚಾರಗಳನ್ನು ಇತ್ಯರ್ಥ ಮಾಡಿಕೊಳ್ಳುವುದು ಉಚಿತ. ಅಪರೂಪದ ವ್ಯಕ್ತಿಗಳ ಜೊತೆ ಸಮಾಗಮವಾಗಲಿದೆ. ಉನ್ನತ ವಿದ್ಯಾಭ್ಯಾಸದ ಪ್ರಯುಕ್ತ ಹೊರಗಡೆ ಇರಲಿರುವಿರಿ. ನಿಮ್ಮ ಕಾರ್ಯವು ಆಗಬೇಕಾದರೆ ಓಡಾಟ ಅನಿವಾರ್ಯವಾಗಲಿದೆ. ಶತ್ರುಗಳ ಮುಖಾಮುಖಿ ಭೇಟಿಯ ಸಂದರ್ಭವು ಬರುವುದು. ನೀವು ಇಂದು ಯಾವ ವಿಚಾರವನ್ನು ಮಾತನಾಡುವುದಿದ್ದರೂ ಎಚ್ಚರವಿರಲಿ. ಒತ್ತಾಯದ ಕಾರಣ ಸಮಾರಂಭಗಳಿಗೆ ಹೋಗುವಿರಿ.

-ಲೋಹಿತ ಹೆಬ್ಬಾರ್ – 8762924271 (what’s app only)

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IND vs NZ: 37 ಎಸೆತಗಳಲ್ಲಿ 82 ರನ್..! 468 ದಿನಗಳ ಬಳಿಕ ಸೂರ್ಯ ಸ್ಫೋಟ – Kannada News | Suryakumar Yadav’s Explosive Comeback: 82 Runs vs NZ After 14 Months Drought

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ ಸುಲಭವಾಗಿ ಗೆದ್ದಿರುವ ಖುಷಿ ಒಂದೆಡೆಯಾದರೆ, ಕಳೆದೊಂದು ವರ್ಷದಿಂದ ಕಳಪೆ ಫಾರ್ಮ್​ಗೆ ಸಿಲುಕಿ ಒಂದೇ ಒಂದು ಅರ್ಧಶತಕ ಬಾರಿಸಲಾಗದೆ ಬಸವಳಿದಿದ್ದ ಟೀಂ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಕೊನೆಗೂ ಅಬ್ಬರಿಸಿದ್ದಾರೆ. ಬರೋಬ್ಬರಿ 14 ತಿಂಗಳ ನಂತರ ಅಂದರೆ 468 ದಿನಗಳ ನಂತರ ಸೂರ್ಯಕುಮಾರ್ ಅರ್ಧಶತಕದ ಇನ್ನಿಂಗ್ಸ್ ಆಡಿದ್ದಾರೆ.

ಸೂರ್ಯ ಈ ಪಂದ್ಯದಲ್ಲಿ ಕೇವಲ 23 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 6 ಬೌಂಡರಿಗಳೊಂದಿಗೆ ಅರ್ಧಶತಕ ಪೂರೈಸಿದರು. ಇದು ಸೂರ್ಯ ಅವರ ಅಂತರರಾಷ್ಟ್ರೀಯ ವೃತ್ತಿಜೀವನದಲ್ಲಿ 22 ನೇ ಅರ್ಧಶತಕವಾಗಿತ್ತು. ಎಲ್ಲಕ್ಕಿಂತ ಮುಖ್ಯವಾಗಿ, ಸೂರ್ಯ 14 ತಿಂಗಳು ಮತ್ತು 23 ಇನ್ನಿಂಗ್ಸ್‌ಗಳ ನಂತರ ತಮ್ಮ ಮೊದಲ ಅರ್ಧಶತಕ ಬಾರಿಸಿದರು.

ಕಳೆದ ಒಂದು ವರ್ಷದಿಂದ ಸೂರ್ಯ ರನ್‌ ಬರ ಎದುರಿಸುತ್ತಿದ್ದರು. ಇದರಿಂದಾಗಿ, ಐಸಿಸಿ ಟಿ20 ವಿಶ್ವಕಪ್ ಹಿನ್ನೆಲೆಯಲ್ಲಿ ಸೂರ್ಯ ಅವರ ಪ್ರದರ್ಶನದ ಬಗ್ಗೆ ಕಳವಳ ವ್ಯಕ್ತವಾಗಿತ್ತು. ಆದಾಗ್ಯೂ, ನಿರ್ಣಾಯಕ ಕ್ಷಣದಲ್ಲಿ ಸೂರ್ಯ ಮತ್ತೆ ಫಾರ್ಮ್​ಗೆ ಮರಳಿರುವುದು ಆಡಳಿತ ಮಂಡಳಿಗೆ ಸಂತಸ ತಂದಿದೆ. ಇನ್ನು ಈ ಪಂದ್ಯದಲ್ಲಿ ಅಜೇಯರಾಗಿ ಉಳಿದ ಸೂರ್ಯ 37 ಎಸೆತಗಳಲ್ಲಿ 82 ರನ್ ಗಳಿಸಿದರು. ಅವರ ಈ ಇನ್ನಿಂಗ್ಸ್‌ನಲ್ಲಿ 9 ಬೌಂಡರಿಗಳು ಮತ್ತು 4 ಸಿಕ್ಸರ್‌ಗಳು ಸೇರಿದ್ದವು.

Source link

ರಾಜ್ಯ ಕಡಲೆ ಬೆಳೆಗಾರರ ಬೆನ್ನಿಗೆ ನಿಂತ ಕೇಂದ್ರ ಸರ್ಕಾರ, ಬೆಂಬಲ ಬೆಲೆ ಎಷ್ಟು? – Kannada News | Centre permits Karnataka to procure 1.01 lakh tonnes of Bengal gram

ನವದೆಹಲಿ, (ಜನವರಿ 23): ಸಂಕಷ್ಟಿತ ಸಮಯದಲ್ಲಿ ಸದಾ ಕರ್ನಾಟಕದ (Karnataka) ರೈತರ ಬೆನ್ನಿಗೆ ನಿಲ್ಲುತ್ತಿರುವ ಕೇಂದ್ರ ಸರ್ಕಾರ, ಇದೀಗ ರಾಜ್ಯದ ಕಡಲೆ (Bengal gram) ಬೆಳೆಗಾರರ ಬೆಂಬಲಕ್ಕೂ ಬಂದಿದೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ (Pralhad Joshi) ಅವರ ಮನವಿ ಮೇರೆಗೆ ರಾಜ್ಯದಿಂದ ಬೆಂಬಲ ಬೆಲೆಯಲ್ಲಿ 1 ಲಕ್ಷ ಮೆಟ್ರಿಕ್ ಟನ್ ಕಡಲೆ ಖರೀದಿಗೆ ಅಸ್ತು ಎಂದಿದೆ.

ಬೆಂಬಲ ಬೆಲೆ ಯೋಜನೆಯಡಿ ಕನಿಷ್ಠ ಬೆಂಬಲ ಬೆಲೆ  5875 ರೂ. ದರದಲ್ಲಿ ಒಟ್ಟು 101340 MT ಹಿಂಗಾರು ಹಂಗಾಮಿನ ಕಡಲೆ ಕಾಳು ಖರೀದಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ಬಗ್ಗೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರು ಸಚಿವ ಪ್ರಲ್ಹಾದ ಜೋಶಿ ಅವರಿಗೆ ಪತ್ರ ಬರೆದು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಸ್ಲಂ ಬೋರ್ಡ್ ಮನೆ ಹಂಚಿಕೆಗೆ ಮುಹೂರ್ತ ಫಿಕ್ಸ್; ಜನವರಿ 24ಕ್ಕೆ ಭರ್ಜರಿ ಕಾರ್ಯಕ್ರಮ

ಗಮನ ಸೆಳೆದಿದ್ದ ಪ್ರಲ್ಹಾದ ಜೋಶಿ

ಕರ್ನಾಟಕದ ಪ್ರಮುಖ ದ್ವಿದಳ ಧಾನ್ಯಗಳಲ್ಲಿ ಕಡ್ಲೆಯೂ ಒಂದಾಗಿದ್ದು, ಸುಮಾರು 9.24 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಉತ್ಪಾದನೆ ಹೊಂದಿದೆ. ಆದರೆ, ಪ್ರಸ್ತುತ ಮಾರುಕಟ್ಟೆ ಬೆಲೆಗಿಂತ ತೀರಾ ಕಡಿಮೆ ಬೆಲೆಯಿಂದಾಗಿ ಕಡಲೆ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಹಾಗಾಗಿ ಬೆಂಬಲ ಬೆಲೆಯಲ್ಲಿ ಖರೀದಿಗೆ ಕ್ರಮ ಕೈಗೊಳ್ಳುವಂತೆ ಕೃಷಿ ಸಚಿವ ಶಿವರಾಜ್ ಸಿಂಗ್ ಚೌವ್ಹಾಣ್ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು.

ಕಡಲೆಗೆ ಪ್ರಸ್ತುತ ಮಾರುಕಟ್ಟೆ ಬೆಲೆ RMS 2026-27ಕ್ಕೆ ಘೋಷಿಸಲಾದ ಪ್ರತಿ ಕ್ವಿಂಟಲ್‌ಗೆ ₹ 5,875ರ MSP ಗಿಂತ ತುಂಬಾ ಕಡಿಮೆಯಾಗಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಕಡಲೆ ಬೆಲೆ ಮತ್ತಷ್ಟು ಕುಸಿಯುವ ಆತಂಕವಿದೆ. ಆದ್ದರಿಂದ, ಕರ್ನಾಟಕದಲ್ಲಿ ಕಡಲೆ(ಚಾನಾ)ಗೆ ಬೆಂಬಲ ಬೆಲೆ ಯೋಜನೆ (PSS) ಅನ್ನು ಆದ್ಯತೆ ಮೇರೆಗೆ ಜಾರಿಗೆ ತರುವ ಅವಶ್ಯಕತೆಯಿದೆ ಎಂದು ಪ್ರಲ್ಹಾದ ಜೋಶಿ ಕೃಷಿ ಸಚಿವರಿಗೆ ಮನದಟ್ಟು ಮಾಡಿಕೊಟ್ಟಿದ್ದರು.

ಸಚಿವ ಪ್ರಲ್ಹಾದ ಜೋಶಿ ಅವರ ಮನವಿಗೆ ತಕ್ಷಣವೇ ಸ್ಪಂದಿಸಿದ ಕೃಷಿ ಸಚಿವರು ರಾಜ್ಯದ ರೈತರ ಹಿತದೃಷ್ಟಿಯಿಂದ 1 ಲಕ್ಷ ಮೆಟ್ರಿಕ್ ಟನ್ ಗೂ ಹೆಚ್ಚು ಕಡಲೆಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ರಾಜ್ಯ ಸರ್ಕಾರಕ್ಕೆ ಅನುಮೋದನೆ ನೀಡಿದ್ದಾರೆ.

ಕೂಡಲೇ ಖರೀದಿ ಕೇಂದ್ರ ತೆರೆಯಲು ಒತ್ತಾಯ: ರಾಜ್ಯ ಸರ್ಕಾರ ಈ ಕೂಡಲೇ ಜಿಲ್ಲಾವಾರು ಖರೀದಿ ಕೇಂದ್ರಗಳನ್ನು ಸ್ಥಾಪಿಸಿ ರೈತರಿಂದ ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸಚಿವ ಜೋಶಿ ಒತ್ತಾಯಿಸಿದ್ದಾರೆ.

ಪ್ರಧಾನಿ-ಕೃಷಿ ಸಚಿವರಿಗೆ ಧನ್ಯವಾದ

ಬೆಂಬಲ ಬೆಲೆಯಲ್ಲಿ ಕಡಲೆ ಖರೀದಿಗೆ ಅನುಮತಿ ನೀಡುವ ಮೂಲಕ ರಾಜ್ಯದ ರೈತರ ನೆರವಿಗೆ ಬಂದಿರುವ ಪ್ರಧಾನಿ ನರೇಂದ್ರ ಮತ್ತು ಕೃಷಿ ಸಚಿವ ಶಿವರಾಜಸಿಂಗ್ ಚವ್ಹಾಣ ಅವರಿಗೆ ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಪ್ರಲ್ಹಾದ ಜೋಶಿ ಧನ್ಯವಾದ ಅರ್ಪಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IND vs NZ: 21 ಎಸೆತಗಳಲ್ಲಿ ಸಿಡಿಲಬ್ಬರದ ಅರ್ಧಶತಕ ಸಿಡಿಸಿದ ಇಶಾನ್ ಕಿಶನ್ – Kannada News | IND vs NZ ishan kishan smashes half century just 21 balls watch video

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯದಲ್ಲಿ ಇಶಾನ್ ಕಿಶನ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಅರ್ಧಶತಕ ಸಿಡಿಸುವ ಮೂಲಕ ತಂಡದ ಗೆಲುವನ್ನು ಖಚಿತಪಡಿಸಿದರು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 208 ರನ್ ಗಳಿಸಿತು. ಟೀಂ ಇಂಡಿಯಾ 15.2 ಓವರ್​ಗಳಲ್ಲಿ ಗುರಿ ಮುಟ್ಟಿತು. ತಂಡದ ಪರ ಇಶಾನ್ ಕಿಶನ್ ಅಬ್ಬರದ ಇನ್ನಿಂಗ್ಸ್ ಆಡಿ ಕೇವಲ 32 ಎಸೆತಗಳಲ್ಲಿ 11 ಬೌಂಡರಿ ಮತ್ತು ನಾಲ್ಕು ಸಿಕ್ಸರ್‌ಗಳ ಸಹಿತ 237.50 ರ ಸ್ಟ್ರೈಕ್ ರೇಟ್​ನಲ್ಲಿ 76 ರನ್ ಗಳಿಸಿದರು.

ಈ ಇನ್ನಿಂಗ್ಸ್‌ನಲ್ಲಿ ಇಶಾನ್ ಕಿಶನ್ ಅವರ ಅತ್ಯಂತ ಗಮನಾರ್ಹ ಸಾಧನೆಯೆಂದರೆ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು. ಇದು ನ್ಯೂಜಿಲೆಂಡ್ ವಿರುದ್ಧ ಭಾರತೀಯ ಬ್ಯಾಟ್ಸ್‌ಮನ್ ಗಳಿಸಿದ ಅತ್ಯಂತ ವೇಗದ ಟಿ20 ಅಂತರರಾಷ್ಟ್ರೀಯ ಅರ್ಧಶತಕವಾಗಿದೆ. ಇದಕ್ಕೂ ಮೊದಲು, ಅಭಿಷೇಕ್ ಶರ್ಮಾ ಸರಣಿಯ ಮೊದಲ ಪಂದ್ಯದಲ್ಲಿ 22 ಎಸೆತಗಳಲ್ಲಿ ಅರ್ಧಶತಕ ಗಳಿಸುವ ಮೂಲಕ ಈ ದಾಖಲೆಯನ್ನು ನಿರ್ಮಿಸಿದ್ದರು, ಆದರೆ ಇಶಾನ್ ಕೇವಲ 48 ಗಂಟೆಗಳಲ್ಲಿ ಅದನ್ನು ಮುರಿದರು. ಎರಡು ವರ್ಷಗಳ ನಂತರ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಅರ್ಧಶತಕ ಗಳಿಸಿದ್ದರಿಂದ ಈ ಪ್ರದರ್ಶನ ಇಶಾನ್‌ಗೆ ಇನ್ನಷ್ಟು ವಿಶೇಷವಾಗಿದೆ.

ತಂಡವು ಆರಂಭಿಕ ಆಟಗಾರರಿಬ್ಬರನ್ನೂ ಬೇಗನೆ ಕಳೆದುಕೊಂಡಿದ್ದರಿಂದ ಇಶಾನ್ ಕಿಶನ್ ಅವರ ಇನ್ನಿಂಗ್ಸ್ ಕೂಡ ವಿಶೇಷವಾಗಿತ್ತು. ಸಂಜು ಸ್ಯಾಮ್ಸನ್ 6 ರನ್ ಗಳಿಸಿ ಔಟಾದರೆ, ಅಭಿಷೇಕ್ ಶರ್ಮಾ ರನ್ ಗಳಿಸದೆ ಔಟಾದರು. ಬಂದ ಕೂಡಲೇ ಕಿಶನ್ ವೇಗವಾಗಿ ರನ್ ಗಳಿಸಿದರು. ಇಶಾನ್ ಕಿಶನ್ ಔಟಾದಾಗ, ತಂಡದ ಸ್ಕೋರ್ 9.1 ಓವರ್‌ಗಳಲ್ಲಿ 128 ರನ್ ಆಗಿತ್ತು.

Source link

IND vs NZ: ವೇಗದ ರನ್ ಚೇಸ್; ವಿಶ್ವ ದಾಖಲೆ ನಿರ್ಮಿಸಿದ ಟೀಂ ಇಂಡಿಯಾ – Kannada News | India Shatters T20 World Record: Fastest 200+ Chase Against NZ in Raipur!

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯವನ್ನು ಸಹ ಆತಿಥೇಯ ಭಾರತ ಏಕಪಕ್ಷೀಯವಾಗಿ ಗೆದ್ದುಕೊಂಡಿದೆ. ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಎರಡನೇ ಟಿ20 ಪಂದ್ಯವನ್ನು ಟೀಂ ಇಂಡಿಯಾ 7 ವಿಕೆಟ್​ಗಳಿಂದ ಗೆದ್ದುಕೊಳ್ಳುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 208 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 16ನೇ ಓವರ್​ನಲ್ಲೇ ಅಂದರೆ ಕೇವಲ 92 ಎಸೆತಗಳಲ್ಲಿ 209 ರನ್ ಕಲೆಹಾಕಿ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್​ನಲ್ಲಿ ಅತಿ ಕಡಿಮೆ ಎಸೆತಗಳಲ್ಲಿ ಇಷ್ಟು ಬೃಹತ್ ಮೊತ್ತವನ್ನು ಬೆನ್ನಟ್ಟಿದ ದಾಖಲೆಯನ್ನು ನಿರ್ಮಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ನ್ಯೂಜಿಲೆಂಡ್ ಉತ್ತಮ ಆರಂಭವನ್ನು ಪಡೆಯಿತು. ಡೆವೊನ್ ಕಾನ್ವೇ ಮತ್ತು ಟಿಮ್ ಸೀಫರ್ಟ್ ಪವರ್‌ಪ್ಲೇನಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿದರು. ನಂತರ ರಚಿನ್ ರವೀಂದ್ರ 26 ಎಸೆತಗಳಲ್ಲಿ 44 ರನ್‌ಗಳ ಅದ್ಭುತ ಇನ್ನಿಂಗ್ಸ್ ಆಡಿದರು. ನಾಯಕ ಮಿಚೆಲ್ ಸ್ಯಾಂಟ್ನರ್ ಕೂಡ 27 ಎಸೆತಗಳಲ್ಲಿ ಅಜೇಯ 47 ರನ್ ಗಳಿಸಿದರು. ಗ್ಲೆನ್ ಫಿಲಿಪ್ಸ್ 19 ರನ್ ಮತ್ತು ಡ್ಯಾರಿಲ್ ಮಿಚೆಲ್ 18 ರನ್​ಗಳ ಕಾಣಿಕೆ ನೀಡಿದರು. ಪರಿಣಾಮವಾಗಿ, ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 208 ರನ್ ಗಳಿಸುವಲ್ಲಿ ಯಶಸ್ವಿಯಾಯಿತು.

ಮತ್ತೊಂದೆಡೆ, ಭಾರತದ ಪರ ಬೌಲಿಂಗ್​ನಲ್ಲಿ ಮಿಂಚಿದ ಕುಲ್ದೀಪ್ ಯಾದವ್ ಎರಡು ವಿಕೆಟ್‌ಗಳನ್ನು ಪಡೆದರೆ, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಮತ್ತು ಶಿವಂ ದುಬೆ ತಲಾ ಒಂದು ವಿಕೆಟ್ ಪಡೆದರು. ಆದಾಗ್ಯೂ, ಅರ್ಷದೀಪ್ ಸಿಂಗ್ ತಮ್ಮ ನಾಲ್ಕು ಓವರ್‌ಗಳಲ್ಲಿ 53 ರನ್‌ಗಳನ್ನು ಬಿಟ್ಟುಕೊಟ್ಟು ವಿಕೆಟ್ ಪಡೆಯದೆ ದುಬಾರಿ ಎನಿಸಿಕೊಂಡರು.

Published On – 10:32 pm, Fri, 23 January 26

Source link