Category Archives: Blog

Your blog category

Weekly Career Predictions: ಈ ರಾಶಿಯ ನಿರುದ್ಯೋಗಿಗಳಿಗೆ ಈ ವಾರ ಉದ್ಯೋಗ ದೊರೆಯುವ ಸಾಧ್ಯತೆಯಿದೆ – Kannada News | Career Predictions Jan 25 31, 2026: Navigating Job Challenges and New Opportunities

25-01-2026ರಿಂದ 31  ರವರೆಗೆ ವೃತ್ತಿಯು ಅಧಿಕಾರಿಗಳ ಆಳ್ವಿಕೆಯಲ್ಲಿ ಇರಲಿದೆ. ಕೆಲವರಿಗೆ ಮುಂದಿನ ದಾರಿ ಕತ್ತಲೆನಿಸುವ ಸ್ಥಿತಿ. ಶ್ರಮ ಅಧಿಕವಾಗಲಿದೆ. ಸ್ವಂತ ಉದ್ಯಮಿಗಳಿಗೆ ನಷ್ಟವನ್ನು ತುಂಬಿಕೊಳ್ಳುವ ಯೋಚನೆ ಬರಲಿದ್ದು ಅಡ್ಡ ದಾರಿಗಳು ಗಮನ ಸೆಳೆಯಬಹುದು‌. ಸರಿಯಾದ ಮಾರ್ಗವಿದ್ದರೆ ಭಯದ ಅವಶ್ಯಕತೆ ಇಲ್ಲ. ದೈವ ನಿಮ್ಮನ್ನು ಕಾಪಾಡುತ್ತದೆ.

ಮೇಷ ರಾಶಿ:

ಈ ವಾರ ವೃತ್ತಿಜೀವನ ಹೊಸ ಎತ್ತರಕ್ಕೆ ಏರಲಿದೆ. ಸರ್ಕಾರಿ ಉದ್ಯೋಗಾಕಾಂಕ್ಷಿಗಳಿಗೆ ಮತ್ತು ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಶುಭ ಸುದ್ದಿ ಸಿಗಲಿದೆ.

ವೃಷಭ ರಾಶಿ:

ನಿಮಗೆ ಕೆಲಸದ ಸ್ಥಳದಲ್ಲಿ ಈ ವಾರ ಸ್ಥಿರತೆ ಇರುತ್ತದೆ. ನಿರುದ್ಯೋಗಿಗಳಿಗೆ ಹೊಸ ಉದ್ಯೋಗ ದೊರೆಯುವ ಬಲವಾದ ಲಕ್ಷಣಗಳಿವೆ. ಹಿರಿಯ ಅಧಿಕಾರಿಗಳೊಂದಿಗೆ ವಾದ ಮಾಡಬೇಡಿ.

ಮಿಥುನ ರಾಶಿ:

ಮೂರನೇ ರಾಶಿಗೆ ಈ ವಾರ ಒಂದಕ್ಕಿಂತ ಹೆಚ್ಚು ಉದ್ಯೋಗಾವಕಾಶಗಳು ಎದುರಾಗಬಹುದು. ಐಟಿ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚಿನ ಪ್ರಗತಿ ಕಂಡುಬರಲಿದೆ.

ಕರ್ಕಾಟಕ ರಾಶಿ:

ನಿಮ್ಮ ಕೆಲಸದ ಒತ್ತಡ ಹೆಚ್ಚಾಗಬಹುದು, ಆದರೆ ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಗೌರವ ಸಿಗಲಿದೆ. ಸಹೋದ್ಯೋಗಿಗಳ ಬೆಂಬಲ ದೊರೆಯುತ್ತದೆ.

ಸಿಂಹ ರಾಶಿ:

ಈ ವಾರ ನಿಮ್ಮ ಕೆಲಸದ ಬಗ್ಗೆ ಇತರರಿಂದ ಮೆಚ್ಚುಗೆ ಪಡೆಯುವಿರಿ. ಆದರೆ ಕಚೇರಿ ರಾಜಕೀಯದಿಂದ ದೂರವಿರುವುದು ಉತ್ತಮ.

ಕನ್ಯಾ ರಾಶಿ:

ಆರನೇ ರಾಶಿಗೆ ವೃತ್ತಿಯಲ್ಲಿ ಪ್ರಾಯೋಗಿಕ ನಿರ್ಧಾರಗಳು ಮುಖ್ಯ. ಕೆಲಸದ ಹೊರೆ ಹೆಚ್ಚಾದರೂ ಅದನ್ನು ನಿಭಾಯಿಸುವ ಶಕ್ತಿ ನಿಮ್ಮಲ್ಲಿರುತ್ತದೆ.

ತುಲಾ ರಾಶಿ:

ನೀವು ಹೊಸ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಸರಿಯಾಗಿ ಯೋಚಿಸಿ. ವ್ಯಾಪಾರಸ್ಥರಿಗೆ ಈ ವಾರ ಸಾಧಾರಣ ಲಾಭ ಇರಲಿದೆ.

ವೃಶ್ಚಿಕ ರಾಶಿ:

ಈ ವಾರ ರಹಸ್ಯ ಮೂಲಗಳಿಂದ ಬಂದ ಅವಕಾಶಗಳು ನಿಮ್ಮ ವೃತ್ತಿಯ ದಿಕ್ಕನ್ನೇ ಬದಲಿಸಬಹುದು. ಸಂಶೋಧನೆ ಮತ್ತು ಭದ್ರತಾ ಕ್ಷೇತ್ರದಲ್ಲಿ ಇರುವವರಿಗೆ ಯಶಸ್ಸು ಸಿಗಲಿದೆ.

ಧನು ರಾಶಿ:

ನಿಮಗೆ ಆದಾಯದಲ್ಲಿ ಏರಿಕೆ ಕಂಡುಬರುತ್ತದೆ. ರಾಜಕೀಯ ಅಥವಾ ಸಾರ್ವಜನಿಕ ಕ್ಷೇತ್ರದಲ್ಲಿ ಇರುವವರಿಗೆ ಹೆಚ್ಚಿನ ಪ್ರಾಮುಖ್ಯತೆ ಸಿಗಲಿದೆ.

ಮಕರ:

ಹತ್ತನೇ ರಾಶಿಯವರಿಗೆ ನಿಮ್ಮ ಕಾರ್ಯಕ್ಷಮತೆಗೆ ಹಿರಿಯರ ಆಶೀರ್ವಾದ ಸಿಗಲಿದೆ. ದೂರ ಪ್ರಯಾಣದ ಕೆಲಸಗಳಲ್ಲಿ ಲಾಭದಾಯಕ ಫಲಿತಾಂಶಗಳನ್ನು ನಿರೀಕ್ಷಿಸಬಹುದು.

ಕುಂಭ ರಾಶಿ:

ಶನಿಯ ಆಧಿಪತ್ಯದ ಈ ರಾಶಿಗೆ ಶಿಕ್ಷಕ ವೃತ್ತಿ ಅಥವಾ ಬಟ್ಟೆ ವ್ಯಾಪಾರದಲ್ಲಿ ಇರುವವರಿಗೆ ಈ ವಾರ ಅತ್ಯಂತ ಅನುಕೂಲಕರವಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ದೊರೆಯಲಿದೆ.

ಮೀನ ರಾಶಿ:

ಈ ವಾರ ಸರ್ಕಾರಿ ಕೆಲಸಗಳಿಗೆ ಸಂಬಂಧಿಸಿದ ಕಾರ್ಯಗಳು ಸುಗಮವಾಗಿ ನಡೆಯಲಿವೆ. ಸಹೋದ್ಯೋಗಿಗಳ ಜೊತೆ ಕಿರಿಕಿರಿ ಉಂಟಾಗದಂತೆ ಎಚ್ಚರವಹಿಸಿ.

– ಲೋಹಿತ ಹೆಬ್ಬಾರ್ – 8762924271 (what’s app only)

Source link

ಕೋಮುದ್ವೇಷದ ಭಾಷಣ: ಕಲ್ಲಡ್ಕ ಪ್ರಭಾಕರ್​​​ ಭಟ್ ಮೇಲೆ ಮತ್ತೆ ಎಫ್​​ಐಆರ್ ದಾಖಲು – Kannada News | RSS Leader Kalladka Bhat Booked Over Provocative Speech; BNS Charges in Puttur

ಮಂಗಳೂರು, ಜ.22: ಆರ್​​​​ಎಸ್​​ಎಸ್​​ ಮುಖಂಡ ಕಲ್ಲಡ್ಕ ಪ್ರಭಾಕರ್​​​ ಭಟ್​​ (Kalladka Prabhakar Bhat) ವಿರುದ್ಧ ಪತ್ತೆ ಎಫ್​​ಐಆರ್​​ ದಾಖಲಾಗಿದೆ. ಪ್ರಚೋದನಾಕಾರಿ ಭಾಷಣ ಆರೋಪದಡಿ ಪುತ್ತೂರಿನಲ್ಲಿ ಕೇಸ್ ದಾಖಲು ಮಾಡಲಾಗಿದೆ. ಪುತ್ತೂರಿನ ಖಾಸಗಿ ಕಾಲೇಜು ಕಾರ್ಯಕ್ರಮದಲ್ಲಿ ಕೋಮುದ್ವೇಷದ ಭಾಷಣ ಮಾಡಿದ್ದಾರೆ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಅವರ ಮೇಲೆ ದೂರು ದಾಖಲಿಸಲಾಗಿದೆ. ಸಾಮಾಜಿಕ ಸಾಮರಸ್ಯಕ್ಕೆ ಧಕ್ಕೆ ಹಾಗೂ ಹಿಂಸೆಗೆ ಪ್ರಚೋದನೆ ನೀಡಿದ ಆರೋಪದಡಿ ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಿದೆ ಎಂದು ಹೇಳಲಾಗಿದೆ. ಪುತ್ತೂರು ನಿವಾಸಿ ರಾಮಚಂದ್ರ ಕೆ. ಎಂಬುವವರು ಕಲ್ಲಡ್ಕ ಪ್ರಭಾಕರ್​​​ ಭಟ್​​ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಆಧಾರದ ಮೇಲೆ ಕ್ರಮ ತೆಗೆದುಕೊಳ್ಳಲಾಗಿದೆ.

ಇನ್ನು ಇದರ ಜತೆಗೆ ಕಲ್ಲಡ್ಕ ಪ್ರಭಾಕರ್​​ ಭಟ್​​ ಅವರ ಈ ಭಾಷಣವನ್ನು ಪ್ರಸಾರ ಮಾಡಿದ ‘ವಿಕಸನ ಟಿವಿ’ ಯೂಟ್ಯೂಬ್ ಚಾನಲ್ ಹಾಗೂ ಆಯೋಜಕರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಜನವರಿ 12ರಂದು ಖಾಸಗಿ ಕಾಲೇಜು ಕಾರ್ಯಕ್ರಮದಲ್ಲಿ ಮಾಡಿದ ಭಾಷಣದಲ್ಲಿ ಕೋಮುದ್ವೇಷದ ವಿಚಾರಗಳು ಇತ್ತು ಎಂದು ಹೇಳಲಾಗಿದೆ. ಅವರು ವಿದ್ಯಾರ್ಥಿಗಳು ಹಾಗೂ ಪೋಷಕರ ಎದುರು ವಿವಾದಾತ್ಮಕ ಮಾತುಗಳನ್ನು ಆಡಿದ್ದಾರೆ ಎಂದು ಹೇಳಲಾಗಿದೆ. ಭಾರತೀಯ ನ್ಯಾಯ ಸಂಹಿತೆ (BNS) ಅಡಿಯಲ್ಲಿ ವಿವಿಧ ಗಂಭೀರ ಸೆಕ್ಷನ್‌ಗಳ ಮೂಲಕ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ದೇವಾಲಯದಲ್ಲಿ ಕೇಸರಿ ಧ್ವಜ ಹಾರಿಸಬೇಡಿ ಎಂದ ಕಾಂಗ್ರೆಸ್​​ನ ಮಾಜಿ ಸಚಿವ

ಮಾನವ ಬಂಧುತ್ವ ವೇದಿಕೆಯಿಂದ ದೂರು:

ಇನ್ನು ಕೋಮುದ್ವೇಷದ ಭಾಷಣ ಮಾಡಿದ್ದಾರೆ ಎಂದು ಮಾನವ ಬಂಧುತ್ವ ವೇದಿಕೆಯ ತಾಲೂಕು ಸಮಿತಿ ಅಧ್ಯಕ್ಷರಾದ ರಾಮಚಂದ್ರ ಕೆ. ಅವರು ಪೋಲಿಸರಿಗೆ ದೂರು ನೀಡಿದ್ದಾರೆ. ಸಮಾಜದಲ್ಲಿ ದ್ವೇಷ ಬಿತ್ತುವ ಕೆಲಸವನ್ನು ಪ್ರಭಾಕರ್​​ ಭಟ್​ ಮಾಡುತ್ತಿದ್ದಾರೆ. ಈ ಹಿಂದೆ ನ್ಯಾಯಾಲಯವು ದ್ವೇಷ ಭಾಷಣ ಮಾಡದಂತೆ ಅವರಿಗೆ ಷರತ್ತು ವಿಧಿಸಿದ್ದರೂ, ಅದರ ಉಲ್ಲಂಘನೆ ಮಾಡಿ ಮತ್ತೆ ಇಂತಹ ಭಾಷಣವನ್ನು ಮಾಡಿದ್ದಾರೆ. ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಬಿಎನ್ ಎಸ್ (BNS) ಸೆಕ್ಷನ್ 196, 299, 302, 353(2) ಮತ್ತು 3(5) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಹಿಂದಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಇನ್ಮುಂದೆ ಯಾವ ಕಾರಣಕ್ಕೂ ದ್ವೇಷದ ಭಾಷಣ ಮಾಡುವುದಿಲ್ಲ ಎಂದು ಹೇಳಿದರೂ. ಇದೀಗ ಅದರ ಉಲ್ಲಂಘನೆ ಆಗಿದೆ. ಇದೀಗ ಅವರಿಗೆ ಅವರಿಗೆ ಕಾನೂನುಬದ್ಧವಾಗಿ ದೊಡ್ಡ ಸಂಕಷ್ಟ ತಂದೊಡ್ಡುವ ಸಾಧ್ಯತೆ ಇದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:46 am, Thu, 22 January 26

Source link

ಗ್ರೀನ್​ಲ್ಯಾಂಡ್​ ವಶಕ್ಕೆ ಪಡೆಯಲು ಅಮೆರಿಕ ಬಲ ಪ್ರಯೋಗ ಮಾಡುವುದಿಲ್ಲ: ಡೊನಾಲ್ಡ್​ ಟ್ರಂಪ್ – Kannada News | Greenland Acquisition: Trump Drops Force, Prioritizes Talks for US Security

ವಾಷಿಂಗ್ಟನ್, ಜನವರಿ 22: ಗ್ರೀನ್​ಲ್ಯಾಂಡ್​ ಅನ್ನು ಅಮೆರಿಕವು ಬಲವಂತವಾಗಿ ವಶಪಡಿಸಿಕೊಳ್ಳುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್(Donald Trump) ದಾವೋಸ್​ನಲ್ಲಿ ಮಾಡಿರುವ ಭಾಷಣದಲ್ಲಿ ಹೇಳಿದ್ದಾರೆ. ಭಾಷಣದ ಸಮಯದಲ್ಲಿ ಡ್ಯಾನಿಶ್ ಪ್ರದೇಶದ ಮೇಲೆ ನಿಯಂತ್ರಣ ಸಾಧಿಸಬೇಕೆಂಬ ತಮ್ಮ ಬೇಡಿಕೆಗೆ ದೃಢವಾಗಿ ಅಂಟಿಕೊಂಡಿದ್ದಾರೆ. ಅಮೆರಿಕ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರವು ಗ್ರೀನ್‌ಲ್ಯಾಂಡ್ ಅನ್ನು ಸುರಕ್ಷಿತವಾಗಿಡಲು ಸಾಧ್ಯವಿಲ್ಲ ಮತ್ತು ಆದ್ದರಿಂದ ಯುರೋಪಿಯನ್ ನಾಯಕರು ಸ್ವ-ಆಡಳಿತ ದ್ವೀಪವನ್ನು ಅಮೆರಿಕದ ನಿಯಂತ್ರಣಕ್ಕೆ ವರ್ಗಾಯಿಸುವುದು ಅತ್ಯಗತ್ಯ ಎಂದು ಟ್ರಂಪ್ ಪ್ರತಿಪಾದಿಸಿದರು.

ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳುವ ಬಗ್ಗೆ ಚರ್ಚಿಸಲು ಮತ್ತೊಮ್ಮೆ ತಕ್ಷಣದ ಮಾತುಕತೆಗಳನ್ನು ನಾನು ಬಯಸುತ್ತಿದ್ದೇನೆ ಎಂದು ಟ್ರಂಪ್ ಹೇಳಿದರು. ತಮ್ಮ ಮಹತ್ವಾಕಾಂಕ್ಷೆಗಳು ವಿಫಲವಾದರೆ ಪರಿಣಾಮಗಳ ಬಗ್ಗೆಯೂ ಅವರು ಸುಳಿವು ನೀಡಿದ್ದಾರೆ.

ನಾನು ಬಲಪ್ರಯೋಗ ಮಾಡುತ್ತೇನೆಂದು ಜನರು ಭಾವಿಸಿದ್ದರು, ಆದರೆ ನಾನು ಬಲಪ್ರಯೋಗ ಮಾಡಬೇಕಾಗಿಲ್ಲ ಎಂದು ಟ್ರಂಪ್ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ಹೇಳಿದರು.

ಇತ್ತೀಚಿನ ವಾರಗಳಲ್ಲಿ ಅವರ ಬಲವಾದ ಹೇಳಿಕೆಗಳು NATO ಮಿತ್ರರಾಷ್ಟ್ರಗಳನ್ನು ಕೆರಳಿಸಿದ್ದವು. ಆದರೆ ಈಗ ಟ್ರಂಪ್ ಅವರು ಮಿಲಿಟರಿ ಕ್ರಮ ಕೈಗೊಳ್ಳುವುದಿಲ್ಲ ಅಥವಾ ಒತ್ತಡ ಹೇರಲು ಸುಂಕಗಳನ್ನು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದು ಎಲ್ಲರೂ ಸಂತೋಷಪಡುವ ಒಪ್ಪಂದವಾಗಿದೆ. ಇದು ದೀರ್ಘಾವಧಿಯ ಒಪ್ಪಂದವಾಗಿದೆ. ಟ್ರಂಪ್ ಇದನ್ನು ಶಾಶ್ವತ ಒಪ್ಪಂದ ಎಂದು ಕರೆದಿದ್ದಾರೆ.

ಡೆನ್ಮಾರ್ಕ್, ಗ್ರೀನ್‌ಲ್ಯಾಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಮಾತುಕತೆಗಳು ಮುಂದುವರೆಯುತ್ತವೆ, ಇದರಿಂದಾಗಿ ರಷ್ಯಾ ಮತ್ತು ಚೀನಾ ಗ್ರೀನ್‌ಲ್ಯಾಂಡ್ ಮೇಲೆ ಎಂದಿಗೂ ಆರ್ಥಿಕ ಅಥವಾ ಮಿಲಿಟರಿ ನಿಯಂತ್ರಣವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಮತ್ತಷ್ಟು ಓದಿ: ತಾನೊಬ್ಬ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

ವಿಧಿಸಲಾಗಿದ್ದ ಸುಂಕಗಳನ್ನು ಈಗ ತಡೆಹಿಡಿಯಲಾಗಿದೆ ಎಂದು ಅವರು ಘೋಷಿಸಿದರು. ಈ ವಿಷಯದ ಬಗ್ಗೆ ಟ್ರಂಪ್ ಮುಖಾಮುಖಿಯಾಗುವ ಬದಲು ರಾಜಿ ಮಾರ್ಗವನ್ನು ಅನುಸರಿಸಲು ಬಯಸುತ್ತಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಟ್ರಂಪ್ ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳಲು ಒಪ್ಪಂದ ಮಾಡಿಕೊಳ್ಳುವವರೆಗೆ ಡೆನ್ಮಾರ್ಕ್ ಮತ್ತು ಇತರ ಏಳು ಯುರೋಪಿಯನ್ ರಾಷ್ಟ್ರಗಳ ಮೇಲೆ ಶೇ.10 ಸುಂಕವನ್ನು ವಿಧಿಸುವುದಾಗಿ ಹೇಳಿದ್ದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರೆ ಅವರಿಗೆ ವೈಯಕ್ತಿಕವಾಗಿ ಕಳುಹಿಸಿದ ಪತ್ರದಲ್ಲಿ ನೊಬೆಲ್ ಪ್ರಶಸ್ತಿ ಸಿಗದಿರುವುದು ಎಷ್ಟು ನಿರಾಶೆಗೊಂಡಿದೆ ಎಂಬುದನ್ನು ಬಹಿರಂಗಪಡಿಸಿದ್ದರು. ಪತ್ರದ ವಿಷಯಗಳ ಬಗ್ಗೆ ಆಘಾತಕಾರಿ ಮಾಹಿತಿ ಸೋರಿಕೆಯಾಗಿದ್ದು, ಅದರಲ್ಲಿ ವಿಶ್ವ ಶಾಂತಿಯನ್ನು ಖಚಿತಪಡಿಸುವುದು ತಮ್ಮ ಜವಾಬ್ದಾರಿಯಲ್ಲ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಟ್ರಂಪ್ ಅವರು ನೊಬೆಲ್ ಪ್ರಶಸ್ತಿ ನಿರಾಕರಿಸಲ್ಪಟ್ಟಾಗಿನಿಂದ ಜಾಗತಿಕ ವ್ಯವಹಾರಗಳ ಬಗ್ಗೆ ತಮ್ಮ ದೃಷ್ಟಿಕೋನ ಬದಲಾಗಿದೆ ಎಂಬುದನ್ನು ಸ್ಪಷ್ಟಪಡಿಸಿದ್ದರು.

ಎಂಟಕ್ಕೂ ಹೆಚ್ಚು ಯುದ್ಧಗಳನ್ನು ನಿಲ್ಲಿಸಿದ್ದರೂ, ನನಗೆ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡದ ಕಾರಣ, ಶಾಂತಿಯ ಬಗ್ಗೆ ಮಾತ್ರ ಯೋಚಿಸಲು ಸಾಧ್ಯವಿಲ್ಲ. ಶಾಂತಿಗಾಗಿ ಉತ್ತಮ ಕೆಲಸ ಮಾಡಿದರೂ ನೊಬೆಲ್ ಪ್ರಶಸ್ತಿ ಸಿಗಲಿಲ್ಲ, ಆದ್ದರಿಂದ ಈಗ ಅವರು ಗ್ರೀನ್‌ಲ್ಯಾಂಡ್‌ನ ಅಮೆರಿಕದ ಆಕ್ರಮಣದ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂದು ಟ್ರಂಪ್ ಪತ್ರದಲ್ಲಿ ತಿಳಿಸಿದ್ದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ನಾವು ಮದುವೆ ಆಗಿದ್ದೇವೆ, ಆದರೆ..’; ದೊಡ್ಡ ಹೇಳಿಕೆ ನೀಡಿದ ಆಮಿರ್ ಖಾನ್ – Kannada News | We Are Married By From Soul Says Aamir Khan About wedding plans with Gauri spratt

ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್, ನಟ ಆಮಿರ್ ಖಾನ್ (Aamir Khan) ತಮ್ಮ ಖಾಸಗಿ ಜೀವನದ ಬಗ್ಗೆ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ತಮ್ಮ 60ನೇ ಹುಟ್ಟುಹಬ್ಬದಂದು, ಅವರು ತಮ್ಮ ಗೆಳತಿ ಗೌರಿ ಸ್ಪ್ರಾಟ್ ಮೇಲಿನ ಪ್ರೀತಿಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡರು ಮತ್ತು ಅವರನ್ನು ಮುನ್ನೆಲೆಗೆ ತಂದರು. ಅದಾದ ನಂತರ, ಇಬ್ಬರೂ ವಿವಿಧ ಕಾರ್ಯಕ್ರಮಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈಗ, ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ತಮ್ಮ ಸಂಬಂಧ ಮತ್ತು ಮದುವೆಯ ಬಗ್ಗೆ ಮಾತನಾಡಿದ್ದಾರೆ.

ಆಮಿರ್ ಮತ್ತು ಅವರ ಗೆಳತಿ ಗೌರಿ ಸ್ಪ್ರಾಟ್ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಾರೆ. ಎರಡೂ ಕುಟುಂಬಗಳಿಗೂ ಇದು ತಿಳಿದಿದೆ. ಇಬ್ಬರೂ ಕಳೆದ 25 ವರ್ಷಗಳಿಂದ ಪರಸ್ಪರ ಪರಿಚಿತರು ಮತ್ತು ಕಳೆದ ಎರಡೂವರೆ ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ. ಗೌರಿ ಬೆಂಗಳೂರಿನವರು ಮತ್ತು ಅಲ್ಲಿ ತಮ್ಮದೇ ಆದ ಸಲೂನ್ ಹೊಂದಿದ್ದಾರೆ.

‘ಬಾಲಿವುಡ್ ಹಂಗಾಮಾ’ಕ್ಕೆ ನೀಡಿದ ಸಂದರ್ಶನದಲ್ಲಿ ಆಮಿರ್ ಖಾನ್ , ‘ಗೌರಿ ಮತ್ತು ನಾನು ಈ ಸಂಬಂಧದ ಬಗ್ಗೆ ತುಂಬಾ ಗಂಭೀರವಾಗಿದ್ದೇವೆ. ನಾವು ಪರಸ್ಪರ ಬದ್ಧರಾಗಿದ್ದೇವೆ. ಒಳ್ಳೆಯ ಮತ್ತು ಕೆಟ್ಟ ಸಮಯಗಳಲ್ಲಿ ನಾವು ಪರಸ್ಪರ ಒಟ್ಟಿಗೆ ಇದ್ದೇವೆ’ ಎಂದಿದ್ದಾರೆ ಆಮಿರ್.

‘ನಾನು ಗೌರಿಯನ್ನು ನನ್ನ ಹೃದಯದಲ್ಲಿ ಮದುವೆಯಾಗಿದ್ದೇನೆ. ನಾವು ಕಾನೂನುಬದ್ಧವಾಗಿ ಮದುವೆಯಾಗುತ್ತೇವೆಯೋ ಇಲ್ಲವೋ ಗೊತ್ತಿಲ್ಲ, ಆದರೆ ಇದು ಸತ್ಯ. ಭವಿಷ್ಯದಲ್ಲಿ ನಾನು ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂದಿದ್ದಾರೆ ಆಮಿರ್. ಅವರು ಮತ್ತು ಗೌರಿ ತಮ್ಮ ಸಂಬಂಧದ ಬಗ್ಗೆ ತುಂಬಾ ಗಂಭೀರವಾಗಿದ್ದಾರೆ ಮತ್ತು ಮದುವೆಯ ಬಗ್ಗೆಯೂ ಯೋಚಿಸುತ್ತಿದ್ದಾರೆ ಎಂಬುದು ಸ್ಪಷ್ಟವಾಗಿದೆ.
‘ನಾವು ಅನಿರೀಕ್ಷಿತವಾಗಿ ಭೇಟಿಯಾದೆವು. ಅದರ ನಂತರ, ನಾವು ಪರಸ್ಪರ ಸಂಪರ್ಕದಲ್ಲಿದ್ದೆವು ಮತ್ತು ಈಗ ಅದಾಗಿಯೇ ಎಲ್ಲವೂ ನಡೆಯತ್ತಿದೆ’ ಎಂದಿದ್ದಾರೆ ಆಮಿರ್. ಗೌರಿಗೆ ಈಗ ಆರು ವರ್ಷದ ಮಗನೂ ಇದ್ದಾನೆ.

ಇದನ್ನೂ ಓದಿ: ಸಾಯಿ ಪಲ್ಲವಿ ಮೊದಲ ಹಿಂದಿ ಸಿನಿಮಾಕ್ಕೆ ಆಮಿರ್ ಖಾನ್ ಅಡ್ಡಗಾಲು?

ಆಮಿರ್ ಮೊದಲು ರೀನಾ ದತ್ತಾ ಅವರನ್ನು 1986 ರಲ್ಲಿ ವಿವಾಹವಾದರು. ಈ ದಂಪತಿಗೆ ಜುನೈದ್ ಮತ್ತು ಇರಾ ಎಂಬ ಇಬ್ಬರು ಮಕ್ಕಳಿದ್ದಾರೆ. ರೀನಾ ಮತ್ತು ಆಮಿರ್ 2002 ರಲ್ಲಿ ವಿಚ್ಛೇದನ ಪಡೆದರು. ನಂತರ ಅವರು 2005 ರಲ್ಲಿ ಕಿರಣ್ ರಾವ್ ಅವರನ್ನು ವಿವಾಹವಾದರು. ಕಿರಣ್ ಮತ್ತು ಆಮಿರ್ ಎಂಬ ಮಗ ಆಜಾದ್ ಇದ್ದಾರೆ. 2021ರಲ್ಲಿ, ದಂಪತಿಗಳು ತಮ್ಮ ವಿಚ್ಛೇದನ ಘೋಷಿಸಿದರು. ವಿಚ್ಛೇದನದ ನಂತರವೂ, ಆಮಿರ್ ತಮ್ಮ ಮಾಜಿ ಪತ್ನಿಯರೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿದ್ದಾರೆ. ಆಮಿರ್ ರೀನಾ ಮತ್ತು ಕಿರಣ್ ಇಬ್ಬರೊಂದಿಗೂ ಸ್ನೇಹ ಸಂಬಂಧವನ್ನು ಉಳಿಸಿಕೊಂಡಿದ್ದಾರೆ.

ಗೌರಿ ಸ್ಪ್ರಾಟ್ ಯಾರು?

ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನಲ್ಲಿರುವ ಮಾಹಿತಿಯ ಪ್ರಕಾರ, ಗೌರಿ ಬ್ಲೂ ಮೌಂಟೇನ್ ಶಾಲೆಯಲ್ಲಿ ಅಧ್ಯಯನ ಮಾಡಿದರು. ನಂತರ, ಅವರು ಲಂಡನ್‌ನಲ್ಲಿ FDA ಸ್ಟೈಲಿಂಗ್ ಮತ್ತು ಛಾಯಾಗ್ರಹಣ ಫ್ಯಾಷನ್‌ನಲ್ಲಿ ಕೋರ್ಸ್ ಮಾಡಿದರು. ಅವರು ಮುಂಬೈನಲ್ಲಿ ‘ಬಿ ಬ್ಲಂಟ್’ ಎಂಬ ಸಲೂನ್ ಅನ್ನು ಸಹ ಹೊಂದಿದ್ದಾರೆ. ಗೌರಿಗೆ ಆರು ವರ್ಷದ ಮಗನೂ ಇದ್ದಾನೆ. ಆಮಿರ್ ಮತ್ತು ಗೌರಿ ನಡುವೆ ದೊಡ್ಡ ವಯಸ್ಸಿನ ಅಂತರವಿದೆ. ಆಮಿರ್ 60 ವರ್ಷ ಮತ್ತು ಗೌರಿ ಪ್ರಸ್ತುತ 46 ವರ್ಷ. ಅಂದರೆ, ಇಬ್ಬರ ನಡುವೆ ಸುಮಾರು 14 ವರ್ಷಗಳ ಅಂತರ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Karnataka Governor: ಒಂದೇ ವಾಕ್ಯದಲ್ಲಿ ಮಾತು ಮುಗಿಸಿದ ರಾಜ್ಯಪಾಲರು, ಸರ್ಕಾರದ ಭಾಷಣ ಓದಲು ನಕಾರ: ವಿಧಾನಸಭೆಯಲ್ಲಿ ಹೈಡ್ರಾಮಾ – Kannada News | Karnataka Governor vs Government: Karnataka Assembly Drama as Governor Skips Government Speech, Ends Address in One Line

ಬೆಂಗಳೂರು, ಜನವರಿ 22: ನರೇಗಾ ಯೋಜನೆ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿರುವುದರ ವಿರುದ್ಧ ಕರ್ನಾಟಕ ಸರ್ಕಾರ ಕರೆದಿರುವ ವಿಶೇಷ ಅಧಿವೇಶನ ಕೂಡ ರಾಜ್ಯಪಾಲರು ಮತ್ತು ಸರ್ಕಾರದ ವಿರುದ್ಧದ ಸಂಘರ್ಷಕ್ಕೆ ಕಾರಣವಾಗಿದೆ. ಅಧಿವೇಶನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲ ಥಾವರ್​ಚಂದ್ ಗೆಹ್ಲೋಟ್ ವಿಧಾನಸಭೆಗೆ ಬರುತ್ತಾರೆಯೇ ಎಂಬ ಅನುಮಾನವಿತ್ತು. ಆದರೆ, ಇದನ್ನು ಹುಸಿ ಮಾಡಿದ ರಾಜ್ಯಪಾಲರು, ಕೇವಲ ಒಂದೆರಡು ವಾಕ್ಯಗಳಲ್ಲಿ ಮಾತನಾಡಿ ಶುಭಾಶಯ ತಿಳಿಸಿ ಸರ್ಕಾರ ಕೊಟ್ಟ ಭಾಷಣದ ಪ್ರತಿ ಓದದೆ ತೆರಳಿದರು. ಇದಕ್ಕೆ ಆಡಳಿತ ಪಕ್ಷದ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ವಿಧಾನಸಭೆ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.

(ಮಾಹಿತಿ ಅಪ್​ಡೇಟ್ ಆಗುತ್ತಿದೆ)

Source link

ಕೊನೆಯ ಓವರ್​ನಲ್ಲಿ 3 ಸಿಕ್ಸ್​ ಸಿಡಿಸಿ 3 ರನ್​ಗಳಿಂದ ಗೆದ್ದ ಹೋಬಾರ್ಟ್​ ಪಡೆ – Kannada News | Beau Webster’s explosive knock powers Hobart Hurricanes to Challenger Match

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಬಿಗ್ ಬ್ಯಾಷ್ ಲೀಗ್​ನ ನಾಕೌಟ್ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಮಳೆಬಾಧಿತ ಈ ಪಂದ್ಯದಲ್ಲಿ ಟಾಸ್ ಗೆದ್ದ ಮೆಲ್ಬೋರ್ನ್​ ಸ್ಟಾರ್ಸ್​ ತಂಡದ ನಾಯಕ ಮಾರ್ಕಸ್ ಸ್ಟೊಯಿನಿಸ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಹೋಬಾರ್ಟ್ ಹರಿಕೇನ್ಸ್ ತಂಡವು 9 ಓವರ್​ಗಳಲ್ಲಿ ಕಲೆಹಾಕಿದ್ದು 93 ರನ್​ಗಳು ಮಾತ್ರ. ಆದರೆ ಟಾಮ್ ಕರನ್ ಎಸೆದ 10ನೇ ಓವರ್​ನಲ್ಲಿ ಬ್ಯೂ ವೆಬ್​ಸ್ಟರ್ 3 ಭರ್ಜರಿ ಸಿಕ್ಸ್ ಚಚ್ಚುವ ಮೂಲಕ ಒಟ್ಟು 21 ರನ್ ಕಲೆಹಾಕಿತು. ಈ ಮೂಲಕ ನಿಗದಿತ 10 ಓವರ್​ಗಳಲ್ಲಿ ಹೋಬಾರ್ಟ್ ಹರಿಕೇನ್ಸ್ ತಂಡವು 114 ರನ್​ ಗಳಿಸಿತು.

ಈ ಗುರಿಯನ್ನು ಬೆನ್ನತ್ತಿದ ಮೆಲ್ಬೋರ್ನ್​ ಸ್ಟಾರ್ಸ್ ತಂಡಕ್ಕೆ ಡಕ್​ವರ್ತ್ ಲೂಯಿಸ್ ನಿಯಮದ ಪ್ರಕಾರ 7 ಓವರ್​ಗಳಲ್ಲಿ 85 ರನ್​ಗಳ ಗುರಿ ನೀಡಲಾಯಿತು.

ಪ್ರತಿ ಓವರ್​ಗೆ 12 ರನ್​ಗಳ ಗುರಿ ಪಡೆದ ಮೆಲ್ಬೋರ್ನ್ ಸ್ಟಾರ್ಸ್ ತಂಡವು 6 ಓವರ್​ಗಳಲ್ಲಿ ಕಲೆಹಾಕಿದ್ದು ಕೇವಲ 59 ರನ್​ಗಳು ಮಾತ್ರ. ಅದರಂತೆ ಅಂತಿಮ ಓವರ್​ನಲ್ಲಿ 26 ರನ್​ಗಳ ಗುರಿ ಪಡೆದಿದ್ದ ಮೆಲ್ಬೋರ್ನ್​ ಸ್ಟಾರ್ಸ್ 22 ರನ್​ಗಳಿಸಿ ಕೇವಲ 3 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಇತ್ತ ಬ್ಯೂ ವೆಬ್​ಸ್ಟರ್ ಕೊನೆಯ ಓವರ್​ನಲ್ಲಿ ಬಾರಿಸಿದ 3 ಸಿಕ್ಸರ್​ಗಳು ಹೋಬಾರ್ಟ್ ಹರಿಕೇನ್ಸ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಹೀಗಾಗಿ ವೆಬ್​ಸ್ಟರ್​ಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ಹು ಸಹ ನೀಡಲಾಯಿತು.

 

Source link

ರೋಡ್​​ಶೋ ವೇಳೆ ಮೀನು  ಹಿಡಿದು ಕುಣಿದ ಪಟಾಕಿ ರಕ್ಷಿತಾ – Kannada News | Rakshitha Shetty Dance with Fish in Udupi Road Show

ರಕ್ಷಿತಾ ಶೆಟ್ಟಿ ಅವರು ‘ಬಿಗ್ ಬಾಸ್’ ರನ್ನರ್ ಅಪ್ ಆದ ಬಳಿಕ ಉಡುಪಿಯಲ್ಲಿ ರೋಡ್ ಶೋ ಮಾಡಿದ್ದಾರೆ. ಈ ವೇಳೆ ಅಭಿಮಾನಿಯೋರ್ವ ಮೀನು ನೀಡಿದ್ದಾನೆ. ಇದನ್ನು ಹಿಡಿದುಕೊಂಡು ರಕ್ಷಿತಾ ಶೆಟ್ಟಿ ಡ್ಯಾನ್ಸ್ ಮಾಡಿದ್ದಾರೆ. ರಕ್ಷಿತಾ ಶೆಟ್ಟಿ ಸೋಶಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಅವರ ಅಭಿಮಾನಿ ಬಳಗ ಈಗ ಹಿರಿದಾಗಿದೆ. ರಕ್ಷಿತಾ ಶೆಟ್ಟಿ ಅವರು ಪಟಾಕಿ ರಕ್ಷಿತಾ ಎಂಬ ಪಟ್ಟ ಕೂಡ ಪಡೆದುಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Gold Rate Today Bangalore: ಚಿನ್ನ, ಬೆಳ್ಳಿ ಬೆಲೆಯಲ್ಲಿ ಇಳಿಕೆ – Kannada News | Gold Price Today on 22nd January 2026, Gold And Silver Rates In Bengaluru, Delhi, Mumbai | Latest News in Kannada

ಬೆಂಗಳೂರು, ಜನವರಿ 22: ನಿನ್ನೆ ಭರ್ಜರಿ ಹೆಚ್ಚಳ ಕಂಡಿದ್ದ ಚಿನ್ನದ ಬೆಲೆ ಇವತ್ತು ಸ್ವಲ್ಪ ಇಳಿದಿದೆ. ಗ್ರಾಮ್​ಗೆ 45 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ಬೆಲೆಯೂ ಐದು ರೂ ಕಡಿಮೆ ಆಗಿದೆ. ಭಾರತದಲ್ಲಿ ಚಿನ್ನದ ಬೆಲೆ (Gold Rates) ತಗ್ಗಿರುವ ಹೊತ್ತಲ್ಲೇ ವಿದೇಶಗಳಲ್ಲಿ ಹೆಚ್ಚಿನ ಕಡೆ ಅದರ ಬೆಲೆಯಲ್ಲಿ ಏರಿಕೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,41,450 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,54,310 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 32,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,41,450 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 32,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 34,000 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಜನವರಿ 22ಕ್ಕೆ)

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,431 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,145 ರೂ
  • 18 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 11,573 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 24 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 15,431 ರೂ
  • 22 ಕ್ಯಾರಟ್​ನ 1 ಗ್ರಾಂ ಚಿನ್ನದ ಬೆಲೆ: 14,145 ರೂ
  • ಬೆಳ್ಳಿ ಬೆಲೆ 1 ಗ್ರಾಂಗೆ: 325 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 14,145 ರೂ
  • ಚೆನ್ನೈ: 14,200 ರೂ
  • ಮುಂಬೈ: 14,145 ರೂ
  • ದೆಹಲಿ: 14,160 ರೂ
  • ಕೋಲ್ಕತಾ: 14,145 ರೂ
  • ಕೇರಳ: 14,145 ರೂ
  • ಅಹ್ಮದಾಬಾದ್: 14,150 ರೂ
  • ಜೈಪುರ್: 14,160 ರೂ
  • ಲಕ್ನೋ: 14,160 ರೂ
  • ಭುವನೇಶ್ವರ್: 14,145 ರೂ

ಇದನ್ನೂ ಓದಿ: ಗ್ರಾಚ್ಯುಟಿ ಎಂದರೇನು? ಕೆಲಸ ಬಿಟ್ಟರೆ ಎಷ್ಟು ಹಣ ಸಿಗಬಹುದು? ಇಲ್ಲಿದೆ ಲೆಕ್ಕಾಚಾರ

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್​ಗೆ)

  • ಮಲೇಷ್ಯಾ: 600 ರಿಂಗಿಟ್ (13,576 ರುಪಾಯಿ)
  • ದುಬೈ: 537.50 ಡಿರಾಮ್ (13,397 ರುಪಾಯಿ)
  • ಅಮೆರಿಕ: 151 ಡಾಲರ್ (13,826 ರುಪಾಯಿ)
  • ಸಿಂಗಾಪುರ: 191.50 ಸಿಂಗಾಪುರ್ ಡಾಲರ್ (13,655 ರುಪಾಯಿ)
  • ಕತಾರ್: 538 ಕತಾರಿ ರಿಯಾಲ್ (13,513 ರೂ)
  • ಸೌದಿ ಅರೇಬಿಯಾ: 550 ಸೌದಿ ರಿಯಾಲ್ (13,427 ರುಪಾಯಿ)
  • ಓಮನ್: 57.55 ಒಮಾನಿ ರಿಯಾಲ್ (13,684 ರುಪಾಯಿ)
  • ಕುವೇತ್: 43.88 ಕುವೇತಿ ದಿನಾರ್ (13,147 ರುಪಾಯಿ)

ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್​ಗೆ)

  • ಬೆಂಗಳೂರು: 325 ರೂ
  • ಚೆನ್ನೈ: 340 ರೂ
  • ಮುಂಬೈ: 325 ರೂ
  • ದೆಹಲಿ: 325 ರೂ
  • ಕೋಲ್ಕತಾ: 325 ರೂ
  • ಕೇರಳ: 340 ರೂ
  • ಅಹ್ಮದಾಬಾದ್: 325 ರೂ
  • ಜೈಪುರ್: 325 ರೂ
  • ಲಕ್ನೋ: 325 ರೂ
  • ಭುವನೇಶ್ವರ್: 340 ರೂ
  • ಪುಣೆ: 325

(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್​ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ತಾನೊಬ್ಬ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ – Kannada News | Provocation on a Global Stage, Trump’s Dictator Remark Steals Davos Spotlight

ಡೊನಾಲ್ಡ್​ ಟ್ರಂಪ್ Image Credit source: Hindustan Times

ವಾಷಿಂಗ್ಟನ್, ಜನವರಿ 22: ಡೊನಾಲ್ಡ್​ ಟ್ರಂಪ್(Donald Trump) ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಹಲವು ಸಂದರ್ಭಗಳಲ್ಲಿ ಸರ್ವಾಧಿಕಾರಿಯಂತೆ ವರ್ತಿಸಿದ್ದಾರೆ. ಈಗ ಟ್ರಂಪ್ ಸ್ವತಃ ತಮ್ಮನ್ನು ಸರ್ವಾಧಿಕಾರಿ ಎಂದು ಕರೆದುಕೊಂಡಿದ್ದಾರೆ. ದಾವೋಸ್​ನಲ್ಲಿ ಜಾಗತಿಕ ಆರ್ಥಿಕ ವೇದಿಕೆ ಉದ್ದೇಶಿಸಿ ಮಾತನಾಡುವಾಗ ಟ್ರಂಪ್ ಹೇಳಿಕೆ ಎಲ್ಲರ ಗಮನ ಸೆಳೆಯಿತು. ಟ್ರಂಪ್ ತಮ್ಮನ್ನು ಸರ್ವಾಧಿಕಾರಿಯಂದು ಕರೆದುಕೊಂಡಿದ್ದಷ್ಟೇ ಅಲ್ಲದೆ, ಯಾವಾಗಲೂ ಅಲ್ಲದಿದ್ದರೂ ಕೆಲವೊಮ್ಮೆ ಸರ್ವಾಧಿಕಾರಿಯಾಗುವುದು ಅವಶ್ಯಕ ಎಂದು ಹೇಳಿದ್ದಾರೆ.

ಟ್ರಂಪ್ ತಮ್ಮ ಭಾಷಣಕ್ಕೆ ಬಂದ ಪ್ರತಿಕ್ರಿಯೆಯ ಬಗ್ಗೆ ಚರ್ಚಿಸುತ್ತಿದ್ದರು, ತಮ್ಮ ಭಾಷಣಕ್ಕೆ ಬಂದ ಸಕಾರಾತ್ಮಕ ಪ್ರತಿಕ್ರಿಯೆಯಿಂದ ತಮಗೆ ಆಶ್ಚರ್ಯವಾಯಿತು ಎಂದರು. ನಮಗೆ ಉತ್ತಮ ವಿಮರ್ಶೆಗಳು ಬಂದವು. ನನಗೆ ನಂಬಲು ಸಾಧ್ಯವಾಗುತ್ತಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.

ತಮ್ಮ ಆಡಳಿತ ವಿಧಾನ ವಿವರಿಸಲು ಪ್ರಯತ್ನಿಸಿದ ಟ್ರಂಪ್

ನಂತರ ಅವರು ತಮ್ಮ ಆಡಳಿತ ವಿಧಾನವನ್ನು ವಿವರಿಸಲು ಪ್ರಯತ್ನಿಸಿದರು. ಟ್ರಂಪ್ ತಮ್ಮ ನಿರ್ಧಾರಗಳು ಯಾವುದೇ ಸಿದ್ಧಾಂತದಿಂದಲ್ಲ, ಬದಲಾಗಿ ಸಾಮಾನ್ಯ ಜ್ಞಾನದಿಂದ ಬಂದಿವೆ . ಇದು ಸಂಪ್ರದಾಯವಾದಿಯೂ ಅಲ್ಲ ಅಥವಾ ಉದಾರವಾದಿಯೂ ಅಲ್ಲ. ಇದು ಸುಮಾರು 95 ಪ್ರತಿಶತ ಸಾಮಾನ್ಯ ಜ್ಞಾನವನ್ನು ಆಧರಿಸಿದೆ.

ಟ್ರಂಪ್ ಈ ಹಿಂದೆ ತಮ್ಮ ಭಾಷೆ ಕೆಲವೊಮ್ಮೆ ಉದ್ವಿಗ್ನತೆಯನ್ನು ಉಂಟುಮಾಡುತ್ತದೆ ಎಂದು ಒಪ್ಪಿಕೊಂಡಿದ್ದರು, ಆದರೆ ಅವರ ಉದ್ದೇಶಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.

ಮತ್ತಷ್ಟು ಓದಿ: ಟ್ರಂಪ್​ಗೆ ಒಂದಲ್ಲಾ ಎಂಟು ನೊಬೆಲ್ ಪುರಸ್ಕಾರಗಳು ಬೇಕಿತ್ತಂತೆ, ಅಮೆರಿಕ ಅಧ್ಯಕ್ಷ ಹೇಳಿದ್ದೇನು?

ಗ್ರೀನ್‌ಲ್ಯಾಂಡ್ ಬಗ್ಗೆ ಟ್ರಂಪ್ ಹೇಳಿದ್ದೇನು?
ದಾವೋಸ್‌ನಲ್ಲಿ, ಟ್ರಂಪ್ ಗ್ರೀನ್‌ಲ್ಯಾಂಡ್‌ಗೆ ಸಂಬಂಧಿಸಿದಂತೆ ಮಹತ್ವದ ಸೂಚನೆಯನ್ನು ನೀಡಿದರು. ಇತ್ತೀಚಿನ ವಾರಗಳಲ್ಲಿ ಅವರ ಬಲವಾದ ಹೇಳಿಕೆಗಳು NATO ಮಿತ್ರರಾಷ್ಟ್ರಗಳನ್ನು ಕೆರಳಿಸಿದ್ದವು. ಆದರೆ ಈಗ ಟ್ರಂಪ್ ಅವರು ಮಿಲಿಟರಿ ಕ್ರಮ ಕೈಗೊಳ್ಳುವುದಿಲ್ಲ ಅಥವಾ ಒತ್ತಡ ಹೇರಲು ಸುಂಕಗಳನ್ನು ವಿಧಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಟ್ರಂಪ್ ವಿಡಿಯೋ

ಇದು ಎಲ್ಲರೂ ಸಂತೋಷಪಡುವ ಒಪ್ಪಂದವಾಗಿದೆ. ಇದು ದೀರ್ಘಾವಧಿಯ ಒಪ್ಪಂದವಾಗಿದೆ. ಟ್ರಂಪ್ ಇದನ್ನು ಶಾಶ್ವತ ಒಪ್ಪಂದ ಎಂದು ಕರೆದಿದ್ದಾರೆ. ಡೆನ್ಮಾರ್ಕ್, ಗ್ರೀನ್‌ಲ್ಯಾಂಡ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಮಾತುಕತೆಗಳು ಮುಂದುವರೆಯುತ್ತವೆ, ಇದರಿಂದಾಗಿ ರಷ್ಯಾ ಮತ್ತು ಚೀನಾ ಗ್ರೀನ್‌ಲ್ಯಾಂಡ್ ಮೇಲೆ ಎಂದಿಗೂ ಆರ್ಥಿಕ ಅಥವಾ ಮಿಲಿಟರಿ ನಿಯಂತ್ರಣವನ್ನು ಪಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ವಿಧಿಸಲಾಗಿದ್ದ ಸುಂಕಗಳನ್ನು ಈಗ ತಡೆಹಿಡಿಯಲಾಗಿದೆ ಎಂದು ಅವರು ಘೋಷಿಸಿದರು. ಈ ವಿಷಯದ ಬಗ್ಗೆ ಟ್ರಂಪ್ ಮುಖಾಮುಖಿಯಾಗುವ ಬದಲು ರಾಜಿ ಮಾರ್ಗವನ್ನು ಅನುಸರಿಸಲು ಬಯಸುತ್ತಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Special Assembly Session Live: ನರೇಗಾ ಹೆಸರು ಬದಲಾವಣೆ ಚರ್ಚೆ, ರಾಜ್ಯಪಾಲರ ಭಾಷಣ – Kannada News | Special Assembly Session Live: NREGA Name Change Row, Governor Addresses Vidhan Soudha

ಬೆಂಗಳೂರು, ಜ.22: ಇಂದಿನ ಜ.31ರವರೆಗೆ ವಿಧಾನಮಂಡಲ ವಿಶೇಷ ಅಧಿವೇಶನ ನಡೆಯಲಿದೆ. ನರೇಗಾ ಹೆಸರು ಬದಲಾವಣೆಗೆ ಆಕ್ಷೇಪಿಸಿ ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ಕರೆದಿದೆ. ಈ ಅಧಿವೇಶನಕ್ಕೆ ರಾಜ್ಯಪಾಲರು ಬರಲು ನಿರಾಕರಿಸಿದ್ದರು, ಇದೀಗ ಸದನಕ್ಕೆ ಬಂದು ಭಾಷಣ ಮಾಡಿದ್ದಾರೆ. ಸರ್ಕಾರಕ್ಕೆ ಟಕ್ಕರ್​​ ನೀಡಲು ವಿರೋಧ ಪಕ್ಷಗಳು ಕೂಡ ಸಿದ್ಧವಾಗಿದೆ. ವಿಧಾನಸಭೆಯ ವಿಶೇಷ ಅಧಿವೇಶನದ ಲೈವ್​​​ ವಿಡಿಯೋ ಇಲ್ಲಿದೆ ನೋಡಿ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link