ತನ್ನ ಒಪ್ಪಿಗೆ ಇಲ್ಲದೆ ಪತ್ನಿ ಡಿಶ್ವಾಶರ್ ತಂದಿದ್ದಕ್ಕೆ ಪತಿ ಮಾಡಿದ್ದೇನು ಗೊತ್ತಾ? ನೀವು ವಿಚ್ಛೇದನ ಕೊಟ್ಟೇಬಿಡಿ ಎಂದ ನೆಟ್ಟಿಗರು – Kannada News | China: Husband Destroys Home Over Wife’s Dishwasher, Netizens Advise Divorce
ಚೀನಾ, ಜನವರಿ 22: ಪತ್ನಿ ತನ್ನ ಒಪ್ಪಿಗೆ ಇಲ್ಲದೆ ಪಾತ್ರೆ ತೊಳೆಯುವ ಸಾಧನ ಡಿಶ್ವಾಶರ್ ತಂದಿದ್ದಕ್ಕೆ ಕೋಪಗೊಂಡ ಪತಿ(Husband) ಇಡೀ ಮನೆಯಲ್ಲಿರುವ ಪೀಠೋಪಕರಣ, ವಸ್ತುಗಳನ್ನು ಒಡೆದುಹಾಕಿರುವ ಘಟನೆ ಚೀನಾದಲ್ಲಿ ನಡೆದಿದೆ. ಗುವಾಂಗ್‌ಡಾಂಗ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ಪತ್ನಿ ತನಗೆ ಗೊತ್ತಿಲ್ಲದೆ 25 ಸಾವಿರ ರೂ. ಮೌಲ್ಯದ ಡಿಶ್ವಾಶರ್ ಖರೀದಿಸಿದ್ದಕ್ಕೆ ಕೋಪಗೊಂಡು ಆತ ಕೆಟ್ಟದಾಗಿ ನಡೆದುಕೊಂಡಿದ್ದಾನೆ. ಮನೆಯಲ್ಲಿ ಯಾವ ಕೆಲಸಕ್ಕೂ ಪತಿ ಸಹಾಯ ಮಾಡುತ್ತಿರಲಿಲ್ಲ, ಹೀಗಾಗಿ ತನಗೇನು ಮಾಡಬೇಕೆಂದು ತೋಚದೆ, ಸ್ವಲ್ಪ ಕೆಲಸ ಕಡಿಮೆಯಾಗಲಿ ಎಂದು ಈ…