Headlines

‘ಬಿಲ್ಲಾ ರಂಗ ಭಾಷಾ’ ಶೂಟಿಂಗ್ ಶುರು ಯಾವಾಗ? ಉತ್ತರ ಕೊಟ್ಟ ನಿರ್ದೇಶಕ – Kannada News | Sudeep starrer Billa Ranga Baasha movie shooting will start from June 26

ಸುದೀಪ್ (Sudeep) ನಟನೆಯ ಸಿನಿಮಾ ಬಿಡುಗಡೆ ಆಗಿ ಅರ್ಧ ವರ್ಷವಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ‘ಮಾರ್ಕ್’ ಸಿನಿಮಾ ರಿಲೀಸ್ ಆಗಿ ಹಿಟ್ ಎನಿಸಿಕೊಂಡಿತ್ತು. ಅದಾದ ಮೇಲೆ ಸುದೀಪ್ ನಟಿಸುತ್ತಿರುವ ಸಿನಿಮಾ ಬಗ್ಗೆ ಯಾವ ಅಪ್​ಡೇಟ್ ಸಹ ಹೊರಬಿದ್ದಿರಲಿಲ್ಲ. ಅನೂಪ್ ಭಂಡಾರಿ ಜೊತೆಗೆ ‘ಬಿಲ್ಲಾ ರಂಗ ಭಾಷಾ’ ಸಿನಿಮಾನಲ್ಲಿ ನಟಿಸಲಿದ್ದಾರೆ ಎನ್ನಲಾಗಿತ್ತು, ಆದರೆ ಸಿನಿಮಾದ ಶೂಟಿಂಗ್ ಬಗ್ಗೆ ಯಾವುದೇ ಅಪ್​​ಡೇಟ್ ಹೊರಬಿದ್ದಿರಲಿಲ್ಲ. ಇದೀಗ ಖುದ್ದು ಅನೂಪ್ ಭಂಡಾರಿ ಅವರು ಸಿನಿಮಾದ ಶೂಟಿಂಗ್ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಟ್ವೀಟ್ ಮಾಡಿರುವ ಅನೂಪ್ ಭಂಡಾರಿ, ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ನಾಳೆ (ಜೂನ್ 26) ಇಂದ ಶುರು ಆಗಲಿದೆ ಎಂದಿದ್ದಾರೆ. ‘ನಿಮ್ಮ ಪ್ರೀತಿ ಕಡಿಮೆಯಾಗಲಿಲ್ಲ, ನಮ್ಮ ನಂಬಿಕೆ ಕುಗ್ಗಲಿಲ್ಲ. ಧನ್ಯವಾದಗಳು’ ಎಂದಿದ್ದಾರೆ ಅನೂಪ್ ಭಂಡಾರಿ. ಸಿನಿಮಾವನ್ನು ಚೈತನ್ಯ ರೆಡ್ಡಿ, ನಿರಂಜನ ರೆಡ್ಡಿ ಅವರುಗಳು ನಿರ್ಮಾಣ ಮಾಡುತ್ತಿದ್ದಾರೆ. ಅನೂಪ್ ಭಂಡಾರಿ ಟ್ವೀಟ್​​ನಲ್ಲಿ ಸುದೀಪ್ ಅವರ ಪೋಸ್ಟರ್ ಒಂದನ್ನು ಹಂಚಿಕೊಂಡಿದ್ದು, ಸುದೀಪ ಅವರು ರಿವಾಲ್ವಾರ್ ಹಿಡಿದಿರುವ ಚಿತ್ರವನ್ನು ಪೋಸ್ಟರ್ ಒಳಗೊಂಡಿದೆ.

ಇದನ್ನೂ ಓದಿ:ಪ್ರಭಾಸ್ ಜೊತೆ ನಟಿಸಲಿರುವ ಕಿಚ್ಚ ಸುದೀಪ್? ಸಿನಿಮಾ ಯಾವುದು?

‘ಬಿಆರ್​​ಬಿ’ ಸಿನಿಮಾನಲ್ಲಿ ಸುದೀಪ್ ಅವರು ವಾರಿಯರ್ ರೀತಿ ಕಾಣಿಸಿಕೊಂಡಿದ್ದಾರೆ. ಅವರ ಉಡುಪು, ಆಯುಧಗಳು ಭಿನ್ನವಾಗಿದ್ದು, ಹಾಲಿವುಡ್​ನ ಹಳೆಯ ಸಿನಿಮಾಗಳ ಮಾದರಿಯಲ್ಲಿದೆ. ಕತೆಗಾಗಿ ಅನೂಪ್ ಭಂಡಾರಿ ಸಾಕಷ್ಟು ಸಮಯ ವ್ಯಯಿಸಿದ್ದು, ಇದೀಗ ಒಂದು ಕತೆ, ಚಿತ್ರಕತೆಯನ್ನು ಸಂಪೂರ್ಣ ಮಾಡಿಕೊಂಡು ಚಿತ್ರೀಕರಣಕ್ಕೆ ಸಜ್ಜಾಗಿದ್ದಾರೆ. ಜೂನ್ 26ರಿಂದ ಸಿನಿಮಾದ ಚಿತ್ರೀಕರಣ ಆರಂಭಿಸಲಿದ್ದಾರೆ ಅನೂಪ್ ಭಂಡಾರಿ ಮತ್ತು ಸುದೀಪ್.

ಕೆಲ ದಿನಗಳ ಹಿಂದೆ ಸುದೀಪ್ ಅವರು ಸಹ ‘ಬಿಲ್ಲಾ ರಂಗ ಭಾಷಾ’ ಸಿನಿಮಾದ ಚಿತ್ರೀಕರಣ ಶುರುವಾಗುತ್ತಿರುವ ಕುರಿತಾಗಿ ಟ್ವೀಟ್ ಮಾಡಿದ್ದರು. ಸಿನಿಮಾದ ಚಿತ್ರೀಕರಣ ಜೂನ್ 26ಕ್ಕೆ ಪ್ರಾರಂಭ ಆಗಲಿದೆ ಎಂದಿದ್ದರು. ಮಾತ್ರವಲ್ಲದೆ, ಕೈಯಲ್ಲಿ ನಾಲ್ಕು ಚಿತ್ರಕತೆಗಳು ಇದ್ದು, ಒಂದರ ಹಿಂದೆ ಒಂದರಂತೆ ಸಿನಿಮಾಗಳು ಪ್ರಾರಂಭ ಆಗಲಿವೆ ಎಂದಿದ್ದರು. ಈ ಹಿಂದೆ ಅನೂಪ್ ಭಂಡಾರಿ ನಿರ್ದೇಶನದ ‘ವಿಕ್ರಾಂತ್ ರೋಣ’ ಸಿನಿಮಾನಲ್ಲಿ ಸುದೀಪ್ ನಟಿಸಿದ್ದರು. ಈಗ ‘ಬಿಲ್ಲಾ ರಂಘ ಭಾಷಾ’ ಸಿನಿಮಾನಲ್ಲಿ ನಟಿಸುತ್ತಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 9:59 pm, Thu, 25 June 26

Source link

Leave a Reply

Your email address will not be published. Required fields are marked *