ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗೆ ಗಾಯದಿಂದ ಚೇತರಿಸಿಕೊಳ್ಳದ ಸಾಯಿ ಸುದರ್ಶನ್ ಬದಲಿಗೆ ಸರ್ಫರಾಜ್ ಖಾನ್ ಅವರನ್ನು ಟೀಂ ಇಂಡಿಯಾಕ್ಕೆ ಆಯ್ಕೆ ಮಾಡಲಾಗಿದೆ. ಈ ಮೂಲಕ ಎರಡು ವರ್ಷಗಳ ನಂತರ ಸರ್ಫರಾಜ್ ಖಾನ್ ಟೆಸ್ಟ್ ತಂಡಕ್ಕೆ ಮರಳಿದ್ದಾರೆ. ಆದರೆ ತಂಡಕ್ಕೆ ಮರಳಲು ಸರ್ಫರಾಜ್ ಪಟ್ಟ ಕಷ್ಟ ಅಷ್ಟಿಷ್ಟಲ್ಲ(PC-PTI).
2024 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸರ್ಫರಾಜ್ ಖಾನ್ ಅವರನ್ನು ಭಾರತ ತಂಡದಿಂದ ಕೈಬಿಡಲಾಯಿತು. ನಂತರ ಸರ್ಫರಾಜ್ ಖಾನ್ ಭಾರತ ಎ ತಂಡದೊಂದಿಗೆ ಇಂಗ್ಲೆಂಡ್ ಪ್ರವಾಸ ಮಾಡಿ, ಅಲ್ಲಿ ಇಂಗ್ಲೆಂಡ್ ಲಯನ್ಸ್ ವಿರುದ್ಧ 92 ರನ್ಗಳ ಇನ್ನಿಂಗ್ಸ್ ಆಡಿದರು. ಆ ಬಳಿಕ ಭಾರತ ಮತ್ತು ಭಾರತ ಎ ನಡುವಿನ ಇಂಟ್ರಾ-ಸ್ಕ್ವಾಡ್ ಪಂದ್ಯದಲ್ಲಿಯೂ ಶತಕ ಬಾರಿಸಿದ್ದರು. ಇದರ ಹೊರತಾಗಿಯೂ, ಸರ್ಫರಾಜ್ಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಸಿಗಲಿಲ್ಲ(PC-PTI).
ಹೀಗಾಗಿ ಐಪಿಎಲ್ನಲ್ಲಿ ಅದೃಷ್ಟ ಪರೀಕ್ಷೆಗಿಳಿದಿದ್ದ ಸರ್ಫರಾಜ್ಗೆ ಸಿಎಸ್ಕೆ ತಂಡದಲ್ಲಿ ಅವಕಾಶ ಸಿಕ್ಕಿತ್ತಾದರೂ ಅದರಲ್ಲೂ ಸರ್ಫರಾಜ್ ಅವರ ಪ್ರದರ್ಶನ ಮಿಶ್ರವಾಗಿತ್ತು. ಹೀಗಾಗಿ ಸರ್ಫರಾಜ್ರನ್ನು ಪ್ಲೇಯಿಂಗ್ 11 ನಿಂದ ಕೈಬಿಡಲಾಯಿತು. ಐಪಿಎಲ್ ನಂತರ ಮುಂಬೈ ಟಿ20 ಲೀಗ್ನಲ್ಲಿ ಭಾಗವಹಿಸಿದ್ದ ಸರ್ಫರಾಜ್ ಉತ್ತಮ ಪ್ರದರ್ಶನ ನೀಡಿದರು(PC-PTI).
ಆದಾಗ್ಯೂ, ಲೀಗ್ ಮುಗಿದ ನಂತರ, ಮುಂಬೈನಲ್ಲಿ ಮಳೆ ಪ್ರಾರಂಭವಾಯಿತು. ಇದರಿಂದಾಗಿ ಸರ್ಫರಾಜ್ ತಮ್ಮ ಅಭ್ಯಾಸಕ್ಕಾಗಿ ಕಾಶ್ಮೀರಕ್ಕೆ ತೆರಳಿದರು. ಜಮ್ಮು ಮತ್ತು ಕಾಶ್ಮೀರದ ಶೇರ್-ಎ-ಕಾಶ್ಮೀರ ಕ್ರೀಡಾಂಗಣದಲ್ಲಿ ಸರ್ಫರಾಜ್ ತಮ್ಮ ಬ್ಯಾಟಿಂಗ್ ಕೌಶಲ್ಯದ ಮೇಲೆ ಕೆಲಸ ಮಾಡಿದರು. ಇದರ ಜೊತೆಗೆ ಸರ್ಫರಾಜ್ ಒಂದೂವರೆ ವರ್ಷದಲ್ಲಿ ಬರೋಬ್ಬರಿ 17 ಕೆಜಿ ತೂಕ ಕೂಡ ಇಳಿಸಿಕೊಂಡರು(PC-PTI).
ಇಷ್ಟೆಲ್ಲ ಪ್ರಯತ್ನಗಳ ನಡುವೆಯೂ ಸರ್ಫರಾಜ್ಗೆ ತಂಡದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಆದರೆ ಸಾಯಿ ಸುದರ್ಶನ್ ಗಾಯದಿಂದಾಗಿ ಸರ್ಫರಾಜ್ಗೆ ಟೀಂ ಇಂಡಿಯಾದ ಬಾಗಿಲು ತೆಗೆದಿದೆ. ಸ್ಪಿನ್ನರ್ಗಳ ವಿರುದ್ಧ ಅತ್ಯುತ್ತಮವಾಗಿ ಬ್ಯಾಟ್ ಬೀಸುವ ಸರ್ಫರಾಜ್ಗೆ ಪ್ಲೇಯಿಂಗ್ 11ನಲ್ಲಿ ಅವಕಾಶ ಸಿಗುವ ಸಾಧ್ಯತೆ ಇದೆ. ಏಕೆಂದರೆ ಲಂಕಾ ಪಿಚ್ಗಳು ಸ್ಪಿನ್ನರ್ಗಳಿಗೆ ಹೆಚ್ಚು ನೆರವು ನೀಡುತ್ತವೆ. ಹೀಗಾಗಿ ಸ್ಪಿನ್ನರ್ಗಳನ್ನು ದಿಟ್ಟವಾಗಿ ಎದುರಿಸುವ ಸರ್ಫರಾಜ್ ತಂಡದಲ್ಲಿ ಇದ್ದರೆ ಒಳಿತು(PC-PTI).




