‘ತುಂಬಾ ಚೆನ್ನಾಗಿ ಮಾಡಿದಿರಾ’ ಟ್ವೀಟ್ನಲ್ಲಿ ಕನ್ನಡ ಬಳಸಿದ ಅಲ್ಲು ಅರ್ಜುನ್, ಕಾರಣ? – Kannada News | Allu Arjun usess Kannada words in his recent tweet why
ಅಲ್ಲು ಅರ್ಜುನ್ (Allu Arjun), ಪ್ಯಾನ್ ಇಂಡಿಯಾ ಸ್ಟಾರ್ ನಟ. ಇದೀಗ ಅವರು ಅಟ್ಲಿ ನಿರ್ದೇಶನದ ಹಾಲಿವುಡ್ ಲೆವೆಲ್ನ ಸಿನಿಮಾ ಒಂದರಲ್ಲಿ ನಟಿಸುತ್ತಿದ್ದಾರೆ. ಅಲ್ಲು ಅರ್ಜುನ್ಗೂ ಕರ್ನಾಟಕಕ್ಕೂ ಬಹಳ ಆಪ್ತ ಬಂಧವೇನಿಲ್ಲ. ಪುನೀತ್ ರಾಜ್ಕುಮಾರ್ ಅವರೊಟ್ಟಿಗೆ ಒಳ್ಳೆಯ ಗೆಳೆತನ ಹೊಂದಿದ್ದ ಅಲ್ಲು ಅರ್ಜುನ್ ಕರ್ನಾಟಕಕ್ಕೆ ಬರುವುದು ತೀರ ಅಪರೂಪಕ್ಕೆ. ಇದೀಗ ಅಲ್ಲು ಅರ್ಜುನ್ ಅವರ ಅಚಾನಕ್ಕಾಗಿ ತಮ್ಮ ಟ್ವೀಟ್ನಲ್ಲಿ ಕನ್ನಡ ಭಾಷೆ ಬಳಸಿದ್ದಾರೆ. ಅಲ್ಲು ಅರ್ಜುನ್ ಟ್ವೀಟ್ನಲ್ಲಿ ಕನ್ನಡ ಬಳಸಲು ವಿಶೇಷ ಕಾರಣವೂ ಇದೆ. ಅಲ್ಲು ಅರ್ಜುನ್…